Kannada essays

ಮಹಿಳಾ ಸಬಲೀಕರಣ | Women Empowerment Essay Unleashing the Limitless Potential Of Empowered Women 2023

Table of Contents

ಮಹಿಳಾ ಸಬಲೀಕರಣ [Women Empowerment]

ಪೀಠಿಕೆ:

Women Empowerment: ಸಾವತ್ರಿಕ ಗಾದೆ ಮಾತಾದ ತೊಟ್ಟಿಲನ್ನು ತೂಗುವ ಕೈಯೊಂದು ಜಗತ್ತನ್ನು ತೂಗಬಲ್ಲದು ಅಥವಾ ಆಳಬಲ್ಲದು’ ಅಂದರೆ ಮಹಿಳೆಯರು ಮುಖ್ಯವಾಹನಿಗೆ ಬಂದು ತಮ್ಮ ಸಾಮರ್ಥ್ಯ ಬಳಸಿದರೆ ಈ ಜಗತ್ತನ್ನೇ ಆಳಬಲ್ಲರು ಎಂಬುದಾಗಿದೆ. ಹೌದು ಮಹಿಳೆಯರೆಂದರೆ ಕೇವಲ ಭೋಗದ ವಸ್ತುವೆಂದು ತಿಳಿದಿರುವ ಸಾಕಷ್ಟು ಜನರಿಗೆ ಮಹಿಳಾ ಸಬಲೀಕರಣದ/Women Empowerment ಬೆಲೆಯಾದರೂ ಹೇಗೆ ತಿಳಿದೀತು..?

ಮಹಿಳೆಯರು ಪ್ರಾಚೀನ ಕಾಲದಿಂದಲು ತಮ್ಮದೇಯಾದ ಛಾಪನ್ನು ಹೊಂದಿದ್ದು ವೇದಗಳ ಕಾಲದಲ್ಲಿದ್ದ ಮಹಿಳಾ ವಿದ್ವಾಂಸೆಯರಾದ ಮೈತ್ರೇಯಿ, ಗಾರ್ಗಿ, ಅಪಲಾ, ಮುದ್ರಾ ಮುಂತಾದವರು ಪುರುಷರಿಗೆ ಸರಿ ಸಮರಾಗಿ ಕುಳಿತು ವೇದ ರಚನೆ ಮಾಡುತ್ತಿದ್ದರು.Women Empowerment

ಆದರೆ ಆಧುನಿಕತೆಯ ಪರದೆ ತೆರೆ ಎಳೆಯುವ ಹಂತ ಬಂದಾಗ ಮಹಿಳೆಯ ಸ್ಥಾನವಂತೂ ಕೇವಲ ನಾಲ್ಕು ಗೋಡೆಯ ಮದ್ಯಕ್ಕೆ ಸೀಮಿತಗೊಳಿಸಿದರು. ಕಾರಣ ಮಹಿಳೆಯರ ಹಸ್ತಕ್ಷೇಪದಿಂದ ಎಲ್ಲಿ ತಮ್ಮ ಅಸ್ತಿತ್ವದ ಅಲುಗಾಟವಾಗುವುದೋ ಎಂಬ ಭಯವಿದ್ದಿರಬಹುದು.

ಆದರೆ ‘ಮಾಣಿಕ್ಯವನ್ನು ಮನೆಯಲ್ಲಿ ಮುಚ್ಚಿಟ್ಟರೂ ಅದು ಹೊಳೆಯುವ ಗುಣ ಬಿಡಬಲ್ಲುದೇ..? ಇಲ್ಲ ತಾನೇ? ಆಧುನಿಕ ಯುಗದಲ್ಲಿ ಪುರುಷರಿಗೆ ಸಮವಾಗಿ ಎಲ್ಲ ವಿಭಾಗಗಳಲ್ಲಿ ಮಹಿಳೆಯರು ಸಾಧನೆಗೈಯುತ್ತಿದ್ದಾರೆ.

ಅರ್ಥ ಮತ್ತು ವ್ಯಾಖ್ಯೆಗಳು/Meaning and definitions for Women Empowerment

* ಮಹಿಳೆಯರಲ್ಲಿ ಬೌದ್ಧಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ಬಲವನ್ನು ಹೆಚ್ಚಿಸುವುದಕ್ಕೆ ಮಹಿಳಾ ಸಬಲೀಕರಣ/Women Empowerment ಎಂದು ಕರೆಯುತ್ತಾರೆ. ಸಬಲೀಕರಣ / ಸಶಕ್ತತೆ ಎಂದರೆ ಸಾಮಾನ್ಯವಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸ ವೃದ್ಧಿಸುವುದು ಹಾಗೂ ಅವರ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ. ಮಹಿಳೆಯರಲ್ಲಿ ನಾವು ಕೀಳರಿಮೆಯ ಮನೋಭಾವ ಕಡಿಮೆ ಮಾಡುವುದು ಅವಶ್ಯಕವಾದುದಾಗಿದೆ.

* ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ವೃದ್ಧಿಸುವುದು. * ಸ್ವಯಂ ಮತ್ತು ಗುಂಪು ಪ್ರಾಬಲ್ಯವನ್ನು ಹೆಚ್ಚಿಸುವುದು.

ವ್ಯಾಖ್ಯೆಗಳು

* ”ಮಹಿಳೆಯರ ಸ್ಥಿತಿ – ಗತಿ ಸುಧಾರಿಸುವವರೆಗೂ ವಿಶ್ವದ ಕಲ್ಯಾಣಕ್ಕೆ ಅವಕಾಶವೇ ಇಲ್ಲ. ಯಾವ ಹಕ್ಕಿಗೂ ಒಂದೇ ರೆಕ್ಕೆಯಲ್ಲಿ ಹಾರಾಡಲು ಸಾಧ್ಯವಿಲ್ಲ” – ಸ್ವಾಮಿ ವಿವೇಕಾನಂದ

”ಮಹಿಳೆ ದೇಶದ ಭವಿಷ್ಯವನ್ನು ಕಟ್ಟುವ ಮತ್ತು ರೂಪಿಸುವ ಶಕ್ತಿ ಮಹಿಳೆ ಕಮಲದಷ್ಟೇ ನಯ ಹಾಗೂ ಸೂಕ್ಷ್ಮ ವಾದರೂ ಅವರಿಗೆ ಪುರುಷರಿಗಿಂತ ಪ್ರಬಲವಾದ ಮತ್ತು ಕಠಿಣ ಹೃದಯವಿದೆ, ಪುರುಷರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ”, – ರವೀಂದ್ರನಾಥ ಠಾಗೋರ್

”ಯಾವ ಸ್ಥಳದಲ್ಲಿ ಸ್ತ್ರೀಯರು ಪೂಜಿಸಲ್ಪಡುವರೋ ಅಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ’ – ವೇದ ಗ್ರಂಥ

ಮಹಿಳಾ ಸಬಲೀಕರಣದ ಅಗತ್ಯತೆ/The need for Women empowerment

ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ, ಜಾಗತಿಕ ಮಟ್ಟದಲ್ಲಿ ಮಹಿಳೆಯರಿಗೆ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಭಾರತದ ನಡೆ ಮಾದರಿಯಾಗಬಲ್ಲದು. ಏಕೆ೦ದರೆ ವೇದ ಕಾಲ ಪೂರ್ವದ ನಾಗರಿಕತೆ ಕಾಲದಿಂದಲೂ ಭಾರತದಲ್ಲಿ ಪುರುಷರಿಗೆ ಸರಿಸಮಾನವಾದ ಹಕ್ಕುಗಳನ್ನು ಹೊಂದಿದವರಾಗಿದ್ದರು.

ಪುರುಷರ ಸಮಾನರಾಗಿ ಆಸೀನರಾಗಿ ವೇದ ಪುರಾಣ ರಚನೆಯಲ್ಲಿ ತಮ್ಮ ಪಾತ್ರ ನಿಭಾಯಿಸುತ್ತಿದ್ದರು. ಆದರೆ ಋಗ್ವದ ಕಾಲದ ಪರದೆ ಸರಿದು ಉತ್ತರ ವೇದ ಕಾಲಕ್ಕೆ ಪ್ರವೇಶಿಸಿದಾಗ ಮಹಿಳೆಯರು ತೆರೆಮರೆಗೆ ಸರಿಸಲ್ಪಟ್ಟರು. ಮಹಿಳೆಯರೆಂದರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಬಂಧಿಸಲ್ಪಟ್ಟವಳು.

ಅಬಲೆ, ಅವಳಿಂದ ಯಾವ ಕೆಲಸವೂ ಆಗುವುದಿಲ್ಲವೆಂಬ ಸ್ವಘೋಷಿತ ತಾರ್ಕಿಕವಲ್ಲದ ತೀರ್ಮಾನಕ್ಕೆ ಪುರುಷ ಬಂದುಬಿಟ್ಟ. ಕಾರಣ ಪ್ರತಿ ಕ್ಷೇತ್ರದಲ್ಲೂ ಮಹಿಳೆ ಛಾಪು ಮೂಡಿಸಲು ಹೊರಟಾಗ ಸಹಜವಾಗಿ ಪುರುಷ ಪ್ರಧಾನವಾದ ಸಮಾಜದ ಪರಿಯನ್ನು ಇಷ್ಟಪಡುತ್ತಿದ್ದ ಪುರುಷ ಸಮಾಜಕ್ಕೆ ತನ್ನ ಅಸ್ತಿತ್ವದ ಅಲುಗಾಟ ಪ್ರಾರಂಭವಾಗಿದೆಯೆಂಬುದನ್ನರಿತು ಮಹಿಳೆಯರನ್ನು ಮೂಲೆಗೆ ತಳ್ಳಿದ.

Women Empowerment

‘ತೊಟ್ಟಿಲಲ್ಲಿ ಅಳುವ ಕಂದನ ಆಕ್ರಂದನದ ಹಾಗೆ ಮಹಿಳೆಯರ ಸ್ವಾತಂತ್ರ್ಯರಹಿತ ದಾಸ್ಯದ ಬದುಕು ಕ್ಷಿಪ್ರ ಗತಿಯಲ್ಲಿ ಪಾತಾಳಕ್ಕಿಳಿಯಿತು. ಅವಳ ಆರ್ತನಾದವನ್ನು ಆಲಿಸಿ ಅಲ್ಲೊಂದು – ಇಲ್ಲೊಂದು ಹೋರಾಟಗಳು ಹಕ್ಕಿಗಾಗಿ ನಡೆದರೂ ವ್ಯವಸ್ಥಿತವಾಗಿ ನಡೆಯಲಿಲ್ಲವಾದುದರಿಂದ ಅವು ಯಶಸ್ವಿಯಾಗಲಿಲ್ಲ, ಯಾವಾಗ ಶಿಕ್ಷಣವೆಂಬ ಅಸ್ತ್ರ ಮಹಿಳೆಯರ ಕೈಗೆ ಬ್ರಹ್ಮಾಸದಂತೆ ದೊರೆಯಿತೋ ಆವಾಗ ಮಹಿಳಾ ಸಬಲೀಕರಣದ ಕೂಗು ಬಲವಾಯಿತು.

ಆ ಮಹಿಳಾ ಹೋರಾಟದ ಕೂಗಿಗೆ ಧ್ವನಿಯಾಗಿ ಹಲವಾರು ಪ್ರಗತಿಪರ ಹೋರಾಟಗಾರರು ಚಳುವಳಿ ಆರಂಭಿಸಿದರು. ಜಾಗತಿಕ ಮಟ್ಟದಲ್ಲಿ ಹಲವಾರು ಮಹಿಳಾ ರತ್ನಗಳು ಮಿನುಗಿ ಮಿಂಚುತ್ತಿದ್ದಾರೆ. ಉದಾ: ಜಗತ್ತಿನ ದೇಶವೊಂದರ ಮೊದಲ ಮಹಿಳಾ ಪ್ರಧಾನಿ ಶ್ರೀಲಂಕಾದ ಸಿರಿಮಾವೋ ಬಂಡಾರನಾಯಕಿ, ಇಂಡೋನೇಷಿಯಾದ ಸುಕರ್ಣೋ, ಬ್ರೆಜಿಲ್‌ನ ಎಲ್ಲರೂಸೆಫ್, ಜರ್ಮನಿಯ ಏಂಜೆಲಾ ಮರ್ಕೆಲಾ ಮುಂತಾದವರು.

ಪುರುಷರಂತೆ ಮಹಿಳೆಯರು ರಕ್ತ ಮಾಂಸದಿಂದ ತುಂಬಿದ ದೇಹ ಹೊಂದಿದವರೇ ತಾನೇ..? ಹಾಗಾದರೆ ಅವರೇಕೆ ಪುರುಷರಿಗಿಂತ ಭಿನ್ನರೂ? ಅಲ್ಲವೇ, ಡಾರ್ವಿನ್ ಸಿದ್ಧಾಂತ ‘ಅನುಪಯುಕ್ತ ಅಂಗಗಳ ನಶಿಸುವಿಕೆ’ ಸಿದ್ಧಾಂತದ ವಾದದಂತೆ ಮಹಿಳೆಯರಿಗೆ ಅವರ ಸಾಮರ್ಥ್ಯ ಬಳಕೆಗೆ ಅವಕಾಶ ಮಾಡಿಕೊಟ್ಟರೆ ಅವರು ಪುರುಷರಂತೆ ಪ್ರಬಲವಾದಂತೆಯೇ ಸರಿ, ಆದುದರಿಂದ ಮಹಿಳೆಯರ ಸಬಲೀಕರಣದ ಅವಶ್ಯಕತೆಯಿದೆ.

* ಬೌದ್ಧಿಕ ಸಂಪನ್ನೆಯರಾದ ಮಹಿಳೆಯರು ಸ್ವಯಂ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸಲು ಅಗತ್ಯ .

* ಬದಲಾವಣೆ ಹೊಂದುವುದರಲ್ಲಿ ಧನಾತ್ಮಕ ಮನೋಭಾವ ಹೊಂದುವರು

* ಗುಂಪು ಪ್ರಕ್ರಿಯೆಗಳಲ್ಲಿ ನಿರ್ಣಯ ತೆಗೆದುಕೊಳ್ಳುವುದರಲ್ಲಿ ವಿಶ್ವಾಸ ದೃಢಪಡಿಸುವ ಸಾಮರ್ಥ್ಯ ಬೆಳೆಸಲು ಸಬಲೀಕರಣ ಅಗತ್ಯ.

* ಪ್ರಜಾಪ್ರಭುತ್ವ ಮಾರ್ಗದಲ್ಲಿ ಇತರರ ಗ್ರಹಿಕಾ ಶಕ್ತಿಯನ್ನು ಬದಲಾಯಿಸಲು ಅಗತ್ಯ.

* ಆತ್ಮಾಭಿಮಾನ ಹೆಚ್ಚು ಮಾಡುವುದರಲ್ಲಿ ಹಾಗೂ ಕಳಂಕದಿಂದ ಪಾರಾಗುವುದರಲ್ಲಿ ತೊಡಗುವುದಕ್ಕೆ ಅಗತ್ಯ .

* ಸ್ವಯಂ ಪ್ರೇರಿತರಾಗಿ ನಿರಂತರ ಬದಲಾವಣೆಯ ಬೆಳವಣಿಗೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಲು ಅಗತ್ಯ.

ಭಾರತದಲ್ಲಿ ಮಹಿಳೆಯರ ಸ್ಥಾನಮಾನ/Status of women in India

ಭಾರತದಲ್ಲಿ ಮಹಿಳೆಯರ ಸ್ಥಾನಮಾನದ ಗ್ರಾಫ್ ಪುರುಆತನ ಕಾಲದಲ್ಲಿ ಮೇಲ್ಮಟ್ಟದಲ್ಲಿದ್ದರೆ, ಉತ್ತರ ವೇದ ಕಾಲದಿಂದೀಚೆಗೆ ದಯನೀಯವಾಗಿತ್ತು . ಆದರೆ ಇಂದು ಮತ್ತೆ ಏರುಗತಿಯಲ್ಲಿ ಸಾಗುತ್ತಿದೆ. ಮಹಿಳೆಯರು ಇಂದು ನಾಲ್ಕು ಗೋಡೆಯ ಪರದೆ ಸರಿಸಿ ನಾಲ್ಕು ದಿಗಂತಗಳ ನಡುವೆ ಮಹಿಳೆ ತನ್ನ ಕಾರ್ಯಕ್ಷೇತ್ರ ವ್ಯಾಪಿಸಿದ್ದಾರೆ.

”ಸ್ತ್ರೀ ನಃಸ್ವಾತಂತ್ರ್ಯ ಅರ್ಹತಾ‘ ಎಂಬ ಮನುವಿನ ವ್ಯಾಖ್ಯಾನವನ್ನು ತಿರಸ್ಕರಿಸಿ ಮುಂದುವರೆದಿದ್ದಾಳೆ.

ಪೂರಕವಾಗಿ ಭಾರತ ಸಂವಿಧಾನ ಅನುಚ್ಛೇದ -14 ಮಹಿಳೆಯರೆಲ್ಲರಿಗೂ ಪುರುಷರಂತೆ ಸಮಾನತೆ ಹಕ್ಕು

ವಿಧಿ – 39 : ರಾಜ್ಯದಿಂದ ತಾರತಮ್ಯವಿರಕೂಡದು

ವಿಧಿ 39 ಡಿ : ಸಮಾನ ಕೆಲಸಕ್ಕೆ ಸಮಾನ ವೇತನ

ವಿಧಿ 15 (3) : ಮಹಿಳೆಯರಿಗೆ ಸೂಕ್ತವಾದ ಮತ್ತು ಮಾನವೀಯತೆಯಿಂದ ಕೂಡಿದ ಕೆಲಸದ ವಾತಾವರಣ ಮತ್ತು ಮಾತೃತ್ವದ ಸವಲತ್ತುಗಲನ್ನು ಭದ್ರತೆ ನೀಡುವಂತಹ ಅವಕಾಶ ಕಲ್ಪಿಸಿದೆ.

ಭಾರತದಲ್ಲಿ 1970ನೇ ಇಸವಿಯಿಂದ ಸ್ತ್ರೀವಾದ ಶೀಘ್ರಗತಿಯನ್ನು ಪಡೆಯಿತು. ರಾಷ್ಟ್ರಮಟ್ಟದಲ್ಲಿ ಮಹಿಳಾ ಸಂಘಟನೆಗಳು ಕೈಗೆತ್ತಿಕೊಂಡ ವಿಷಯವೆಂದರೆ ‘ಮಧುರೆಯಲ್ಲಿ ಅಪ್ರಾಪ್ತ ವಯಸ್ಸಿನ ಹೆಂಡತಿಯನ್ನು ಗಂಡನೋರ್ವ ಬಲಾತ್ಕಾರ ಮಾಡಿ ಅವನನ್ನು ನಿರಪರಾಧಿ ಎಂದು ನ್ಯಾಯಾಲಯ ಘೋಷಿಸಿದ್ದು, ಮಹಿಳೆಯರ ಕುರಿತು ಇರುವ ವಿವಾದಗಳಾದ ಹೆಣ್ಣು ಭ್ರೂಣಹತ್ಯೆ, ಲಿಂಗಭೇದ, ಮಹಿಳೆಯರ ಆರೋಗ್ಯ ಮತ್ತು ಸುರಕ್ಷತೆ ಹಾಗೂ ಸಾಕ್ಷರತೆ ಹಾಗೂ ಆರ್ಥಿಕ ಸಬಲೀಕರಣದ ಅಗತ್ಯತೆ ಕುರಿತು.

ಭಾರತದಲ್ಲಿ ‘ಕುಡಿತವು’ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮೂಲವಾಗಿರುವುದರಿಂದ ಮಹಿಳಾ ಗುಂಪುಗಳು ಕುಡಿತದ ವಿರುದ್ಧದ ಹಾಗೂ ಸಾರಾಯಿ ನಿಷೇಧದ ಹೋರಾಟ ಆರಂಭಿಸಿ ಜಯ ಪಡೆದರು.

ಸ್ವಸಹಾಯ ಸಂಘಗಳು, ಸ್ವಯಂ ಉದ್ಯೋಗಿಗಳ ಸಂಘ (ಸೇವಾ) ದಂತಹ ಸರ್ಕಾರೇತರ ಸಂಘಗಳು ಮಹಿಳೆಯರ ಹಕ್ಕುಗಳ ಬಗ್ಗೆ ಪ್ರಮುಖವಾದ ಪಾತ್ರ ವಹಿಸಿದೆ. ಬಹುಪಾಲು ಮಹಿಳೆಯರು ಸ್ಥಳೀಯ ಸಮಸ್ಯೆಗಳ ವಿರುದ್ಧದ ಚಳುವಳಿಗಳಿಂದ ನಾಯಕಿಯರಾಗಿ ಹೊರಬಂದಿದ್ದಾರೆ. ಉದಾ: ನರ್ಮದಾ ಬಚಾವೋ ಆಂದೋಲನದ ಮೂಲಕ ಮೇಧಾ ಪಾಟ್ಕರ್ ಮುಂಚೂಣಿಗೆ ಬಂದಿದ್ದಾರೆ.

Women Empowerment

* ಭಾರತ ಸರಕಾರವು 2001ನೇ ವರ್ಷವನ್ನು ‘ಮಹಿಳಾ ಸಬಲೀಕರಣ ವರ್ಷ‘/Year of Women Empowerment ಎಂದು ಘೋಷಿಸಿತ್ತು. ಅದಲ್ಲದೇ ರಾಷ್ಟ್ರೀಯ ಮಹಿಳಾ ಸಬಲೀಕರಣ ರಾಜ್ಯ ನೀತಿಯು 2001ರಲ್ಲಿ ಜಾರಿಗೆ ಬಂದಿತು.

* 2000ನೇ ಇಸವಿಯನ್ನು ಯುಎನ್‌ಓ ‘ಜಾಗತಿಕ ಮಹಿಳಾ ಸಬಲೀಕರಣ ವರ್ಷ‘ /Women Empowerment ವೆಂದು ಆಚರಿಸಿತ್ತು.

ಮಹಿಳಾ ಸಬಲೀಕರಣ/Women Empowerment ಮಾಡುವ ನಿಟ್ಟಿನಲ್ಲಿ ಸರಕಾರದ ಕಾರ್ಯ ಜವಾಬ್ದಾರಿ ಎಷ್ಟಿರುವುದೋ ಅಷ್ಟೇ ಜವಾಬ್ದಾರಿ ಸಮಾಜದ ಪುರುಷರ ಮೇಲೂ ಇದೆ. ಕುಟುಂಬವೇ ಪುಟ್ಟ ಸಮಾಜವಾಗಿರುವುದರಿಂದ ಪ್ರತಿಯೊಬ್ಬರು ತಮ್ಮ ಮನೆಯ ಸ್ತ್ರೀಯರ ಏಳಿಗೆಗಾಗಿ ಜಾಗೃತಿ ಹೊಂದಿ ಅವರಿಗೆ ಧೈರ್ಯ ತುಂಬಿ ಪ್ರೋತ್ಸಾಹಿಸಬೇಕು.

ಅಂದಾಗ ಮಾತ್ರ ಸಬಲೀಕರಣದ ಹಾದಿ ಸರಳವಾಗುವುದು. ಜಾಗತಿಕ ಮಹಿಳಾ ಸಮಸ್ಯೆಗಳಾದ ಬಲಾತ್ಕಾರ, ಬಾಲ್ಯವಿವಾಹ, ಅನಕ್ಷರತೆ, ಹೆಣ್ಣು ಭ್ರೂಣಹತ್ಯೆ ಮುಂತಾದವನ್ನು ತಡೆಯಲು ಎಲ್ಲರೂ ಒಂದಾಗಿ ಪ್ರಯತ್ನಿಸಬೇಕು. ಪ್ರತಿಯೊಂದನ್ನು ಸರಕಾರವೇ ಮಾಡಲಿ ಎಂದು ಕೂಡುವ ಬದಲು ನಾವು ಸ್ವಯಂಪ್ರೇರಿತರಾಗಿ ಕಾರ್ಯಪ್ರವೃತ್ತರಾಗಬೇಕು.

ಮಹಿಳೆಯರ ಮೇಲೆ ಬಲಾತ್ಕಾರದಂತ ಹೀನ ಕೃತ್ಯಗಳು ನಡೆಯುತ್ತಲೇ ಇವೆ. ಉದಾ- 2012ರಲ್ಲಿ ದೆಹಲಿ ಹೊರ ವಲಯದಲ್ಲಿ ನಡೆದ ‘ನಿರ್ಭಯಾ ಪ್ರಕರಣ’ವಂತೂ ಇಡೀ ದೇಶವೇ ಬೆಚ್ಚಿ ಬೀಳುವಂತದ್ದಾಗಿದೆ. ಈ ಪ್ರಕರಣ ದೇಶದ ಕಾನೂನನ್ನೇ ಬದಲಾಯಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿತ್ತು. ಇಂತಹ ಸಕಾರಾತ್ಮಕ ಬೆಳವಣಿಗೆ ಅವಶ್ಯಕ. ಬಾಲಾಪರಾಧ ಕಾನೂನಿಗೆ ತಿದ್ದುಪಡಿ ತರುವಂತಾಯಿತು. ಆದರೆ ಅತ್ಯಾಚಾರವೆಂಬ ಪೆಡಂಭೂತ ಬೆಳೆಯದಂತೆ ಗಮನವಹಿಸಬೇಕು.

ಭಾರತದಲ್ಲಿ ಕಲ್ಪನಾ ಚಾವ್ಹಾ, ಸುನಿತಾ ವಿಲಿಯಮ್ಸ್‌ ರಂತಹ ಗಗನಯಾನಿಗಳು, ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲೂ ರಾಣಿ ಲಕ್ಷ್ಮೀಬಾಯಿಯವರಂತಹ, ಕಿತ್ತೂರು ರಾಣಿ ಚೆನ್ನಮ್ಮರಂತಹ ಮಹಿಳಾ ಸೇನಾನಿಗಳು ಹೋರಾಡಿದರು.

ಭಾರತದ ಪ್ರಥಮ ಮಹಿಳಾ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಯವರಂತೂ ದೇಶವನ್ನು ಮುನ್ನಡೆಸಿದ ಕಾರ್ಯವೈಖರಿ ನೋಡಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಮಾಜಿ ಪ್ರಧಾನಿಗಳಾದ ಇವರು ಇಂದಿರಾಜಿಯವರನ್ನು ‘ದುರ್ಗಾ ಮಾತೆ’ ಎಂದು ಸಂಬೋಧಿಸಿದ್ದರು. ವೈದ್ಯಕೀಯ, ಶಿಕ್ಷಣ, ಕಲೆ ಮುಂತಾದ ಕ್ಷೇತ್ರಗಳಲ್ಲಿ ಸಾಕಷ್ಟು ಮಹಿಳೆಯರು ತಮ್ಮ ಪ್ರಭಾವ ಬೀರಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿ 2016ರ ಒಲಂಪಿಕ್ಸ್‌ನಲ್ಲಿ ಪಿ.ವಿ. ಸಿಂಧು ಬ್ಯಾಡ್ಮಿಂಟನ್‌ ನಲ್ಲಿ ಬೆಳ್ಳಿ, ಸಾಕ್ಷಿ ಮಲಿಕ್‌ ರವರು ಕುಸ್ತಿಯಲ್ಲಿ ಕಂಚಿನ ಪದಕ ಪಡೆದು ಭಾರತದ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಈಗಿನ ದಿನಮಾನದಲ್ಲಿ ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಮುನ್ನುಗ್ಗಿ ಕೆಲಸ ಮಾಡಿ ತೋರಿಸಬಲ್ಲರೆಂಬುದನ್ನು ಸಾಬೀತುಪಡಿಸಿದ್ದಾರೆ.

‘ಭೋರ್ಗರು: ಮಾತಾ, ಶಯನೇಷುಃ ರಂಭಾ

ಕ್ಷಮಯಾಧರಿತ್ರಿ’ ಎಂಬ ಸಂಸ್ಕೃತ ಗಾತೆ ಮಾತಿನಂತೆ ಸ್ತ್ರೀಯ ಹಲವಾರು ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.

ಮಾಧ್ಯಮಗಳಲ್ಲಿ ಸ್ತ್ರೀಯರ ಬಗ್ಗೆ ಪ್ರೋತ್ಸಾಹದಾಯಕವಾದ ವರದಿ ಬಂದರೆ

ಸಹಜವಾಗಿ ಪಾಲಕರು ಹೆಣ್ಣು ಮಗುವಿನ ಬಗೆಗಿನ ಧೋರಣೆ ಬದಲಾಯಿಸುತ್ತಾರೆ.

ಉದಾ: ಚಲನ ಚಿತ್ರಗಳಲ್ಲಿ ಮಹಿಳೆಯರನ್ನು ಕೇವಲ ಸೌಂದರ್ಯದ ಸರಕನ್ನಾಗಿ ಬಳಸಿ ಅಶ್ಲೀಲವಾಗಿ ಚಿತ್ರಿಸುವುದರಿಂದ ಪಾಲಕರು ಕೂಡಾ ಸಹಜವಾಗಿ ತಮ್ಮ ಮಕ್ಕಳನ್ನು ಆ ಕ್ಷೇತ್ರದ ಕಡೆಗೆ ಕಳಿಸಲು ಹಿಂದೇಟು ಹಾಕುತ್ತಾರೆ.

ಪುರುಷರು, ಬಿಕಿನಿಯಲ್ಲಿ ಕಾಣಿಸಿದಾಗ ಮಹಿಳೆಯರನ್ನು ನೋಡುವ ಪರಿಗೂ, ಈಜುಗಾರ್ತಿ ಈಜುಡುಗೆಯಲ್ಲಿ ಬಂದಾಗ ನೋಡುವ ಪರಿಗೂ ವ್ಯತ್ಯಾಸವಿದೆ. ಈ ರೀತಿಯ ಸೂಕ್ಷ್ಮ ವಿಚಾರಗಳಿಗೆ ಒತ್ತು ಕೊಡುವುದು ಅಗತ್ಯ.

ಭಾರತ ದೇಶದಲ್ಲಿ ಈವರೆಗೂ ಸಾಕಷ್ಟು ಮಹಿಳೆಯರು ವಿವಿಧ ದೇಶದಲ್ಲಿ ಜವಾಬ್ದಾರಿಯುತವಾದ ಸ್ಥಾನಗಳಲ್ಲಿ ಮುಂದುವರಿಯುತ್ತಿದ್ದಾರೆ. ಕಾರಣ ಸದ್ಯದ ಪರಿಸ್ಥಿತಿ ಮಹಿಳಾ ಸಬಲೀಕರಣಕ್ಕೆ/Women Empowerment ಪೂರಕವಾಗಿದೆ.

ಮಹಿಳಾ ಸಬಲೀಕರಣದಲ್ಲಿ ಸರಕಾರಿ ಯೋಜನೆ / ಸೌಲಭ್ಯಗಳ ಪಾತ್ರ/ Role of Government Schemes/Facilities in Women Empowerment

ಪ್ರಸ್ತುತ ದಿನಮಾನಗಳಲ್ಲಿ ಮಹಿಳಾ ಸಬಲೀಕರಣಕ್ಕಾಗಿ/Women Empowerment ಸರಕಾರ ಸಾಕಷ್ಟು ಮಹಿಳಾಪರ ಯೋಜನೆಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಮುಂದಿದೆಯಾದರೆ ತಳಮಟ್ಟಕ್ಕೆ ತಲುಪಿಸುವಂತಹ ಐ.ಇ.ಸಿ. ಅಂದರೆ ಇನ್‌ಫರ್ಮೇಷನ್, ಎಜುಕೇಷನ್‌ ಮತ್ತು ಕಮ್ಯುನಿಕೇಷನ್‌ ಅಂದರೆ ಮಾಹಿತಿ ನೀಡುವುದು, ತಿಳಿವಳಿಕೆ ನೀಡುವುದು ಮತ್ತು ಸಂಪರ್ಕಿಸುವ ವ್ಯವಸ್ಥೆಯಿದೆ. ಆದರೆ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ತೋರಿಸುತ್ತಿರುವ ಆಸಕ್ತಿ, ಬದ್ಧತೆ ಹಾಗೂ ನೈಪುಣ್ಯತೆಯ ಕೊರತೆಯು ಕಾರಣವಾಗಿದೆ.

ಮಹಿಳೆಯರು ಮತ್ತು ಮಕ್ಕಳ ಕಲ್ಯಾಣದ ವಿಸ್ತರಣೆಗಾಗಿ ಸರ್ಕಾರದ ಯೋಜನೆಗಳನ್ನು ಮೂಲಕ ಜಾರಿಗೊಳಿಸಲಾಗುತ್ತಿದೆ.

1. ಭಾಗ್ಯಲಕ್ಷ್ಮಿ ಯೋಜನೆ – 2007

ಶಾಶ್ವತ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿರುವ ಬಿಪಿಎಲ್ ಕುಟುಂಬದ ಮೂರು ಮಕ್ಕಳಿರುವ ಕುಟುಂಬದ ಮೊದಲೆರಡು ಮಕ್ಕಳಿಗೆ ಈ ಯೋಜನೆ ಅನ್ವಯ.

ಮೊದಲ ಮಗುವಿಗೆ 19,300 ರೂ. ಪ್ರಾರಂಭಿಕ ಠೇವಣಿ ಕೊನೆಗೆ 18 ವರ್ಷವಾದ ಮೇಲೆ 1,00,097 ರೂ. ಮೊತ್ತ. ಎರಡನೆ ಮಗುವಿಗೆ ಪ್ರಾರಂಭಿಕ ಠೇವಣಿ 18,350 ರೂ ಇಟ್ಟು 1,00,057 ರೂ. ಹಣ ಪಡೆಯುವ ಯೋಜನೆಯಾಗಿದೆ.

ಇದರಿಂದ ಬಡ ಕುಟುಂಬಗಳಿಗೆ ತುಂಬಾ ಅನುಕೂಲವಾಗಿದೆ. ಹೆಣ್ಣು ಭ್ರೂಣಹತ್ಯೆಗೆ ತಡೆಗೆ ತುಂಬಾ ಸಹಾಯವಾಗಿದೆ.

2. ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ (ICDS) Integreted Child Development Scheme

ಈ ಯೋಜನೆಯು ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಆರೋಗ್ಯ, ಶಿಶುಗಳ ಆರೋಗ್ಯ ಮತ್ತು ಆರೈಕೆ ಮತ್ತು ಹದಿ ಹರೆಯದ ಮಕ್ಕಳ ಆರೋಗ್ಯಕ್ಕೆ ಪೂರಕವಾದಂತಹ ಯೋಜನೆ ಕರ್ನಾಟಕ ಸರ್ಕಾರ 1975ರಲ್ಲಿ ಜಾರಿಗೊಳಿಸಿತು.

3. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ತರಗತಿ ಹಾಜರಾತಿಗೆ ಸ್ಕಾಲರ್‌ಶಿಪ್
ಪಾವತಿ

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಓದುವ ಹೆಣ್ಣು ಮಕ್ಕಳ ಹಾಜರಾತಿ ಹೆಚ್ಚಳವಾಗಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ರೂ. 25ರಂತೆ ಹತ್ತು ತಿಂಗಳು 1 ರಿಂದ 7ನೇ ವರ್ಗದ ವಿದ್ಯಾರ್ಥಿನಿಯರಿಗೆ ನೀಡುತ್ತಿದೆ. 8 ರಿಂದ 10ನೇ ವರ್ಗದವರಿಗೆ ತಿಂಗಳಿಗೆ ರೂ. 75 ನೀಡುತ್ತಿದೆ.

4. ಕೆಲಸ ಮಾಡುವ ಮಕ್ಕಳ ಪಾಲನೆಗೆ ಶಿಶುಧಾಮ

ಗ್ರಾಮೀಣ ಭಾಗದಲ್ಲಿ ಕೃಷಿ ಹಾಗೂ ಇತರೆ ಕೆಲಸಗಳಿಗೆ ತೆರಳುವ ಮಹಿಳೆಯರ 3 ವರ್ಷದೊಳಗಿನ ಮಕ್ಕಳ ರಕ್ಷಣೆ, ಪೋಷಣೆ ಮಾಡುವುದು.

5. ಬಾಲ್ಯ ವಿವಾಹ ತಡೆ ಕಾಯಿದೆ – 2006ರ ಅನುಷ್ಠಾನ

1986ರಲ್ಲಿ ಜಾರಿಗೆ ಬಂದ ಬಾಲ್ಯವಿವಾಹ ತಡೆ ಕಾಯಿದೆಯನ್ನು 2006ರಲ್ಲಿ ಮರು ತಿದ್ದುಪಡಿ ಮಾಡಿ ಬಾಲ್ಯವಿವಾಹ ತಡೆಯುತ್ತಿದೆ.

6. ಉಜ್ವಲ ಯೋಜನೆ

ಲೈಂಗಿಕ ಶೋಷಣೆಗೊಳಗಾದ ಮಕ್ಕಳು ಹಾಗೂ ಮಹಿಳೆಯರ ರಕ್ಷಣೆ ಹಾಗೂ ಆರೈಕೆ,

ಕುಟು೦ಬದೊಂದಿಗೆ ಸೇರಿಸುವ ಯೋಜನೆಯಾಗಿದೆ.

7. ಹೆಣ್ಣು ಮಕ್ಕಳ ದಿನಾಚರಣೆ

“ಜನವರಿ 24ರಂದು ಹೆಣ್ಣು ಮಗುವಿನ ದಿನ’ ಎಂದು ಭಾರತ ಸರಕಾರ ಘೋಷಿಸಿದೆ. ಹೆಣ್ಣು ಮಗುವಿನ ಘನತೆ ಹೆಚ್ಚಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

8. ಜನನಿ ಸುರಕ್ಷಾ ಯೋಜನೆ

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ – ಗ್ರಾಮೀಣ ಭಾಗದ ಮಹಿಳೆಯರ ಸುರಕ್ಷಿತ ಹೆರಿಗೆ ಮತ್ತು ಆರೈಕೆಗಾಗಿ ಜಾರಿಯಾಗಿದೆ. ASHA (Acredited Social Health Acitvist) ಕಾರ್ಯಕರ್ತೆಯರು ಈ ಯೋಜನೆ ಅನುಷ್ಠಾನಕ್ಕೆ ಸಹಕರಿಸುವರು.

9. ಮನಸ್ವಿನಿ ಯೋಜನೆ

40 ವಯೋಮಿತಿ ಮೀರಿರುವ ವಿಧವೆಯರು | ಲೈಂಗಿಕ ಶೋಷಿತರಿಗೆ ಮಾಸಿಕ ಸಹಾಯಧನ ನೀಡುವ ಯೋಜನೆ.

10. ಶಿಕ್ಷಣ ಇಲಾಖೆಯ ಸೈಕಲ್ ವಿತರಣೆ,

ಉಚಿತ ಯೂನಿಫಾರಂ, ಶೂ, ಪಠ್ಯಪುಸ್ತಕ ವಿತರಣೆ, ಕ್ಷೀರಭಾಗ್ಯ ಯೋಜನೆ, ವಾರದಲ್ಲಿ 3 ದಿನ ಎಲ್ಲ 1 ರಿಂದ 10ನೇ ತರಗತಿ

ಮಕ್ಕಳಿಗೆ ಹಾಲು ನೀಡುವ ಯೋಜನೆ.

11. ಬಿಸಿ ಊಟ ಯೋಜನೆ

ಕೇಂದ್ರ ಮತ್ತು ರಾಜ್ಯ ಸರಕಾರದ ಪ್ರಾಯೋಜಕತ್ವದಲ್ಲಿ ಎಲ್ಲ ಮಕ್ಕಳಿಗೂ ದೇಶಾದ್ಯಂತ ಬಿಸಿಯೂಟ ವಿತರಣೆ ಮಾಡಲಾಗುತ್ತಿದೆ. ಇವುಗಳಲ್ಲದೇ ಸಾಕಷ್ಟು ಯೋಜನೆಗಳು ಜಾರಿಯಲ್ಲಿವೆ.

ಉಪ ಸಂಹಾರ /Conclusion for Women Empowerment

ಮಹಿಳೆಯರ ಸಬಲೀಕರಣಕ್ಕಾಗಿ/Women Empowerment ಸರಕಾರದಿಂದ ಹಲವಾರು ಯೋಜನೆಗಳಿದ್ದಾಗ್ಯೂ ಕೂಡಾ ಸಾಧನೆಯಾಗದಿರುವ ಬಗ್ಗೆ ನನ್ನಲ್ಲಿ ಜಿಜ್ಞಾಸೆ ಮೂಡಿರುವುದು ಉಂಟು, ಆದರೆ ನಾನು ಈ ಹಿಂದೆ ಹೇಳಿರುವಂತೆ ಐ.ಇ.ಸಿ. ಹಂತಾನುಸಾರವಾಗಿ ನಡೆಯಬೇಕು. ನಾವೆಷ್ಟೇ ಯೋಜನೆಯ ಬಗ್ಗೆ ಹೇಳಿದರೂ ಮಹಿಳಾ ಸಬಲತೆಯು ಪುರುಷರ ಮನೋಭಾವನೆಯಿಂದಲೇ ಪ್ರಾರಂಭವಾಗಬೇಕಾಗಿದೆ.

ಮಹಿಳೆ ಅಬಲೆಯಲ್ಲ, ಸಬಲೆ. ನಾವೆಷ್ಟೇ ಆಧುನಿಕತೆಯಿಂದ ಮುಂದುವರಿದರೂ ಹೆಣ್ಣಿನ ಪವಿತ್ರವಾದ ಸ್ಥಾನ ಮಾತ್ರ ತುಂಬಲಾರೆವು. ‘ಹೆಣ್ಣೆಂದು ಕಲಿತರೆ ದೇಶದ ಅಭಿವೃದ್ಧಿಯ ಹೆಬ್ಬಾಗಿಲು ತೆರೆದಂತೆ’ ಎಂಬುದು ನನ್ನ ಅಭಿಮತ. ಮಹಿಳೆಯರ ಹಿತ ಕಾಯುವ ಸಮಯ ಬಂದಾಗ ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು.

ಹೆಣ್ಣು ಎಂಬುದು ಪ್ರಾಮಾಣಿಕತೆಯ ಇನ್ನೊಂದು ಮುಖ. ಅಂತಲೇ ಅವರ ಕೆಲಸಕ್ಕೆ ಬೆಲೆ ಕೊಡುವಂತೆ ಪಂಚಾಯತ್ ರಾಜ್ ಕಾಯಿದೆ -1993ಕ್ಕೆ 13 ಮತ್ತು 14 ತಿದ್ದುಪಡಿಯನ್ವಯ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 50ರಷ್ಟು ಪ್ರಾತಿನಿಧ್ಯವನ್ನು ಭಾರತ ಸರಕಾರ ನೀಡಿದೆ.

ಕೊನೆಯದಾಗಿ ನನ್ನ ಅಭಿಪ್ರಾಯ ಹೇಳುವುದಾದರೆ ಮಹಿಳೆಯು ‘ಎಲ್ಲಿ ಸಬಲಳಾಗುತ್ತಾಳೋ ಆ ದೇಶ ಉದ್ಧಾರವಾಗುತ್ತದೆ’ ಹಾಗಾಗಿ ಪುರುಷರೆಲ್ಲರೂ ಮಹಿಳೆಯರ ಸಬಲೀಕರಣಕ್ಕೆ ತೊಡಕಾಗಿದ್ದಾರೆಂಬ ಮಾತು ಹಣೆಪಟ್ಟಿ ಅಳಿಸಿಹಾಕಿ ಮಹಿಳೆಯರ ಅಭ್ಯುದಯಕ್ಕೆ ನಮ್ಮ ಕೈ ಜೋಡಿಸಬೇಕೆಂಬುದಾಗಿದೆ.

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....