Kannada essays

Tourism Essay 2023 | ಪ್ರವಾಸೋದ್ಯಮ ಪ್ರಬಂಧ Embracing the Beauty of Travel

ಪ್ರವಾಸೋದ್ಯಮ [Tourism]

Tourism: ಭಾರತೀಯ ಪ್ರವಾಸೋದ್ಯಮ/Tourism ಕ್ಷೇತ್ರ ಇಂದು ಉತ್ಕರ್ಷದಲ್ಲಿದೆ. ವಿದೇಶಿ ಯಾತ್ರಿಕರ ಸಂಖ್ಯೆ 2002ರಲ್ಲಿ 2.38 ದಶಲಕ್ಷವಿದ್ದು 2016ರಲ್ಲಿ 7.38 ದಶಲಕ್ಷಕ್ಕೇರಿದೆ. ಅದೇ ರೀತಿ ವಿದೇಶಿ ವಿನಿಮಯ ಮೊತ್ತ 2002ರಲ್ಲಿ 3.1 ಬಿಲಿಯನ್ ಅಮೆರಿಕನ್ ಡಾಲರ್ ಇದ್ದದ್ದು 2008ರಲ್ಲಿ 11.7 ಬಿಲಿಯನ್ ಡಾಲ‌ಗಳಿಗೆ ಹೆಚ್ಚಿದೆ. ‘ಇನ್‌ಕ್ರೆಡಿಬಲ್ ಇಂಡಿಯಾ’ ಹೆಸರಿನಲ್ಲಿ ಭಾರತೀಯ ಪ್ರವಾಸೋದ್ಯಮದ ಪ್ರಚಾರ ಪ್ರಾರಂಭವಾಗಿದೆ.

ವಿದೇಶಿ ಪ್ರವಾಸಿಗಳ ಸಂಖ್ಯೆ ಹೆಚ್ಚಾದಂತೆ ಇಲ್ಲಿನ ಪ್ರವಾಸಿ ಮಾರುಕಟ್ಟೆಯು ವಿಸ್ತರಣೆಯಾಗಿದೆ. ಸರ್ಕಾರದ ‘ಅತಿಥಿ ದೇವೋಭವ’ ಪ್ರಚಾರ ಆಂದೋಲನದ ಮೂಲಕ ದೇಶದ ಸಾಂಸ್ಕೃತಿಕ, ಪಾರ೦ಪರಿಕ ತಾಣಗಳನ್ನು, ಐತಿಹಾಸಿಕ ಸ್ಥಳಗಳನ್ನು ವಿಶ್ವದ ಪ್ರವಾಸಿಗರಿಗೆ ತೋರ್ಪಡಿಸಲಾಗುತ್ತಿದೆ. ಭಾರತೀಯ ಪ್ರವಾಸೋದ್ಯಮದ/Tourism ಜಾಗತಿಕ 2010ರ ಅಂದಾಜಿನ ಪ್ರಾಕರ, ಒಟ್ಟು ಉದ್ಯೋಗ ಸೃಷ್ಟಿಯಲ್ಲಿ ಈ ವಲಯದ ಕೊಡುಗೆ ಶೇ. 8. 235 ದಶಲಕ್ಷ ಉದ್ಯೋಗಗಳು ಅಥವಾ ಪ್ರತಿ 12.3 ಉದ್ಯೋಗಗಳಲ್ಲಿ ಒಂದು, ಮುಂದೆ 2020ರ ವೇಳೆಗೆ ಈ ವಲಯದ ಕೊಡುಗೆ ಒಟ್ಟು ಉದ್ಯೋಗಗಳ ಶೇ.9.2. 303 ದಶಲಕ್ಷ ಉದ್ಯೋಗಗಳನ್ನು ಅಂದರೆ ಪ್ರತಿ 10.9 ಉದ್ಯೋಗಗಳಲ್ಲಿ ಒಂದು ಉದ್ಯೋಗದ ಅನುಪಾತಕ್ಕೆ ಏರಲಿದೆ.

Tourism

ವಿಶ್ವ ಪ್ರವಾಸೋದ್ಯಮ/Tourism ಮಂಡಳಿ ಮತ್ತು ವಿಶ್ವ ಪ್ರವಾಸದ 2010ರ ಅಂದಾಜಿನ ಪ್ರಕಾರ, ಭಾರತ 2020ರ ವೇಳೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ಉದ್ಯೋಗ ಸೃಷ್ಟಿಸುವ 2ನೇ ರಾಷ್ಟ್ರವಾಗಲಿದೆ. ಈ ಅವಧಿಯಲ್ಲಿ 58 ದಶಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿದೆ. ವಿಶ್ವದಲ್ಲಿ ಚೀನಾ ನಂತರ ಭಾರತ 2ನೇ ಸ್ಥಾನ ಪಡೆಯಲಿದೆ.

ಪ್ರವಾಸೋದ್ಯಮ/Tourism, ಬಡತನ ನಿವಾರಣೆ, ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ ಸಾಮರಸ್ಯದ ಪ್ರೇರಕ ಶಕ್ತಿ ಎಂಬುದು 2003ರ ಸೆಪ್ಟೆಂಬರ್ 27ರಂದು ವಿಶ್ವದಾದ್ಯಂತ ಆಚರಿಸಲಾದ ವಿಶ್ವ ಪ್ರವಾಸೋದ್ಯಮ ದಿನದ ಘೋಷ ವಾಕ್ಯವಾಗಿತ್ತು.

1963ರಲ್ಲಿ ಅಂತರರಾಷ್ಟ್ರೀಯ ಪಯಣ ಹಾಗೂ ಪ್ರವಾಸ ಕುರಿತ ವಿಶ್ವಸಂಸ್ಥೆಯ ಸಮಾವೇಶದಲ್ಲಿ ಹೊಮ್ಮಿದ ವ್ಯಾಖ್ಯೆ ಅತ್ಯಂತ ಸರಳವಾಗಿದ್ದು, ಯಾವುದೇ ವ್ಯಕ್ತಿ ತನ್ನ ಮನೋಲ್ಲಾಸ, ರಜಾ ದಿನ ಕಳೆಯಲು, ಆರೋಗ್ಯ ಸುಧಾರಣೆಗೆ, ತೀರ್ಥಯಾತ್ರೆಗೆ, ಕ್ರೀಡೆ ಹಾಗೂ ಆಟೋಟ ಕಾರಣಗಳಿಗೆ, ವ್ಯಾಪಾರ, ಕುಟುಂಬ ಸಮೇತ ಪ್ರವಾಸ, ಒಂದು ಅಭಿಯಾನಕ್ಕಾಗಿ ಅಥವಾ ಸಭೆ ಸಮಾವೇಶಗಳ ಕಾರಣಕ್ಕಾಗಿ ಕನಿಷ್ಠ 24 ಗಂಟೆ ಕಾಲ ತಾನು ಭೇಟಿ ನೀಡಿದ ದೇಶದಲ್ಲಿ ಉಳಿಯುವವ ಪ್ರವಾಸಿ ಎಂಬುದಾಗಿದೆ. ಆದರೆ ಇತ್ತೀಚೆಗೆ ಜಾಗತಿಕ ಆರ್ಥಿಕ ಹಿಂಜರಿತೆ, ಭಯೋತ್ಪಾದನೆ, ಎಚ್1ಎನ್1 (ಹಂದಿಜ್ವರ), ಜಿಕಾ, ಎಬೋಲಾ, ಮೂಲಭೂತವಾದ, ಜನಾಂಗೀಯ ದೌರ್ಜನ್ಯಗಳು ಅಂತರರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯಲ್ಲಿ ಶೇ. 6ರಷ್ಟು ಇಳಿಮುಖವಾಗಲು ಕಾರಣವಾಗಿದೆ.

1980ರ ವರ್ಷದಿಂದ ವಿಶ್ವಸಂಸ್ಥೆಯ ಜಾಗತಿಕ ಪ್ರವಾಸೋದ್ಯಮ/Tourism ಸಂಸ್ಥೆUNWTO ಸೆಪ್ಟೆಂಬರ್ 27ರ ದಿನಾಂಕವನ್ನು ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಆಚರಿಸುತ್ತಿದೆ. ಅಂತರರಾಷ್ಟ್ರೀಯ ಸಮುದಾಯದಲ್ಲಿ ಪ್ರವಾಸೋದ್ಯಮ ಪಾತ್ರ ಹಾಗೂ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಆರ್ಥಿಕ ಮೌಲ್ಯಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. 2008ರಲ್ಲಿ ಭಾರತವು ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅತಿಥೇಯ ದೇಶವಾಗಿ ”ಹವಾಮಾನ ಬದಲಾವಣೆಗೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಸವಾಲಿಗೆ ಪ್ರವಾಸೋದ್ಯಮದ/Tourism ಉತ್ತರ’ ಎಂಬುದು ಧೈಯ ವಾಕ್ಯವಾಗಿತ್ತು.

ಭಾರತದ ವೈವಿಧ್ಯಮಯ ಪ್ರವಾಸೋದ್ಯಮ : ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮ

1. ಕಲೆ ಮತ್ತು ವಾಸ್ತುಶಿಲ್ಪ

ಭಾರತದಲ್ಲಿ ವಿಶ್ವಕ್ಕೆ ಅಚ್ಚರಿ ಮೂಡಿಸುವ ಕಲೆ ಮತ್ತು ವಾಸ್ತು ಶಿಲ್ಪವಿದೆ. ಆಜಂತೆ, ಎಲ್ಲೋರ, ಎಲಿಫೆಂಟಾ, ಬೇಲೂರು, ಹಳೇಬೀಡು, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಸೋಮನಾಥಪುರ, ಹಂಪಿ, ವಿಜಯನಗರದಲ್ಲಿ ಕಂಡುಬರುವ ಐತಿಹಾಸಿಕ, ಸಾಂಸ್ಕೃತಿಕ,ವಿವಿಧ ಬಗೆಯ ಕಟ್ಟಡಗಳು, ಕಲೆ, ಕುಸರಿಯ ಕೆತ್ತನೆ, ವಿಹಂಗಮ ನೋಟ, ಬಣ್ಣದ, ಬಸದಿಯ ವೈವಿಧ್ಯಮಯ ಚಿತ್ತಾರ, ಸಂಗೀತ ಕಂಬಗಳು, ಏಕಕೂಟ, ದ್ವಿಕೂಟ, ತ್ರಿಕೂಟಾಚಲಗಳು, ವಿವಿಧ ಕಲ್ಲಿನ ಮೇಲಿನ ಸೂಕ್ಷ್ಮ ಕೆತ್ತನೆಗಳು ವಿಶ್ವದ ಕಲಾರಸಿಕರ ಮನಸೂರೆಗೊಳ್ಳುತ್ತಿವೆ.

ಖಜುರಾಹೊ ದೇವಾಲಯ, ಕೋನಾರ್ಕ್ ದೇವಾಲಯ ಹಾಗೂ ವಿವಿಧ ಐತಿಹಾಸಿಕ ಕಟ್ಟಡಗಳು ತಮ್ಮ ಕೆತ್ತನೆಯ ಭವ್ಯತೆಗೆ ಹೆಸರಾಗಿವೆ. ವಿಜಯ ವಿಠಲ ದೇವಾಲಯ, ಸಾಸುವೆಕಾಳು ಗಣಪತಿ, ಹಜಾರ ರಾಮಸ್ವಾಮಿಯ ದೇವಾಲಯ, ಕಮಲ ಮಹಲ್, ಹೊಯ್ಸಳೇಶ್ವರ ಸ್ವಾಮಿ ದೇವಾಲಯ, ಚನ್ನಕೇಶವ ದೇವಾಲಯಗಳ ರಾಯಗೋಪುರ ಅತ್ಯಂತ ಪ್ರಮುಖವಾಗಿವೆ.

2. ಜೈವಿಕ ಪ್ರವಾಸೋದ್ಯಮ/Tourism

ಅಭಯಾರಣ್ಯಗಳು ಮತ್ತು ವನ್ಯಧಾಮಗಳು (Botonical Gardens & Zoological Parks)

Tourism

1. ಬಂಡೀಪುರ ರಾಷ್ಟ್ರೀಯ ವನ್ಯಧಾಮ

ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ವನ್ಯಧಾಮ ಇದಾಗಿದ್ದು 874 ಚ.ಕಿ.ಮೀ. ವ್ಯಾಪ್ತಿ ಹೊಂದಿದೆ. ವಿವಿಧ ಬಗೆಯ ಮರಗಳು, ವನ್ಯ ಸಂಪತ್ತು, ಪ್ರಾಣಿ ಸಂಪತ್ತಿನಿಂದ ಕೂಡಿದ್ದು ಪಶ್ಚಿಮ ಬೆಟ್ಟ ಶ್ರೇಣಿ ಹಾಗೂ ನೀಲಗಿರಿಯ ಬೆಟ್ಟಗಳ ನಡುವೆ ತಮಿಳುನಾಡಿನ ಮಧುಮಲೈ ವನ್ಯದಾಮಕ್ಕೆ ಸೇರಿದಂತೆ ಇರುವುದು. 1974ರಲ್ಲಿ ಇದನ್ನು ಸ್ಥಾಪಿಸಿದ್ದು, ಸಮುದ್ರ ಮಟ್ಟಕ್ಕಿಂತಲೂ 680 ರಿಂದ 1454 ಮೀ. ಎತ್ತರದಲ್ಲಿದೆ.

2. ಬನ್ನೇರುಘಟ್ಟ ರಾಷ್ಟ್ರೀಯ ವನ್ಯಧಾಮ

1971ರಲ್ಲಿ 104 ಚ.ಕಿ.ಮೀ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಇದು ಬೆಂಗಳೂರಿನ ಜಿಲ್ಲೆಗೆ ಸೇರಿದ ವನ್ಯಧಾಮ. ಸುವರ್ಣಮುಖಿ ನದಿ ಹರಿದು ಇದರ ಸೌಂದರವನ್ನು ಹೆಚ್ಚಿಸುತ್ತದೆ. ಇದರಲ್ಲಿ ಆನೆ, ಕಿರುಬ, ಕಾಡುಹಂದಿ, ಮುಳ್ಳುಹಂದಿ, ಜಿಂಕೆಗಳು, ಕರಡಿ ಮತ್ತು ವಿವಿಧ ಜಾತಿಯ ಪ್ರಾಣಿಗಳನ್ನು, ಪಕ್ಷಿಗಳನ್ನು, ಚಿಟ್ಟೆಗಳನ್ನು ಕಾಣಬಹುದಾಗಿದೆ.

3. ಕುದುರೆಮುಖ ಮತ್ತು ರಾಜೀವ್‌ ಗಾಂಧಿ ರಾಷ್ಟ್ರೀಯ ವನ್ಯಧಾಮ

600 ಚ.ಕಿ.ಮಿ. ವ್ಯಾಪ್ತಿಯಲ್ಲಿ ಬರುವ ಕುದುರೆಮುಖ ಉದ್ಯಾನವನ್ನು 1987ರಲ್ಲಿ ಚಿಕ್ಕಮಗಳೂರಿನಲ್ಲಿ ಸ್ಥಾಪಿಸಲಾಯಿತು. ರಾಜೀವ್‌ ಗಾಂಧಿ ವನ್ಯಧಾಮ ಕೊಡಗು ಮತ್ತು ಮೈಸೂರು ಜಿಲ್ಲೆಯಲ್ಲಿ ಇರುವ ವನ್ಯಧಾಮ ಇದಾಗಿದ್ದು 1975ರಲ್ಲಿ ಇದನ್ನು ಸ್ಥಾಪಿಸಲಾಗಿದೆ. ಇದರ ವ್ಯಾಪ್ತಿ 643 ಚ.ಕಿ.ಮೀ. ಆಗಿದೆ. ರಾಜೀವ್‌ಗಾಂಧಿ ರಾಷ್ಟ್ರೀಯ ವನ್ಯಧಾಮ: ವಿವಿಧ ಬಗೆಯ ಪ್ರಾಣಿ, ಪಕ್ಷಿ, ಸಸ್ಯ ಸಂಪತ್ತನ್ನು ಇಲ್ಲಿ ಕಾಣಬಹುದಾಗಿದೆ. ಇವುಗಳಲ್ಲದೆ ನಾಗರಹೊಳೆ ಅರಣ್ಯ ಪ್ರದೇಶ, ಅರಭಿಘಟ್ಟವನ್ಯಧಾಮ, ಭದ್ರಾ ವನ್ಯಧಾಮ, ಬಿಳಿಗಿರಿ ರಂಗಸ್ವಾಮಿ ದೇವಸ್ಥಾನ, ಬ್ರಹ್ಮಗಿರಿ ವನ್ಯಧಾಮ, ದಾಂಡೇಲಿ ವನ್ಯಧಾಮ, ಧಾರೋಜಿ ಕರಡಿ ವನ್ಯಧಾಮ, ರಾಣಿಬೆನ್ನೂರು ಬ್ಲಾಕ್‌ ಬರ್ಡ್ ವನ್ಯಧಾಮ, ತಲಕಾವೇರಿ. ವನ್ಯಧಾಮ ಮುಂತಾದವುಗಳು ತುಂಬಾ ಪ್ರಮುಖವಾಗಿವೆ.

4. ಪಕ್ಷಿಧಾಮಗಳು

ಆದಿಚುಂಚನಗಿರಿ ನವಿಲುಧಾಮವು ಬೆಟ್ಟ ಗುಡ್ಡಗಳ ವಿಸ್ತಾರ ಅರಣ್ಯ ಪ್ರದೇಶದಲ್ಲಿ ಕಂಡುರುತ್ತಿದ್ದು ಇದು ಮಂಡ್ಯ ಜಿಲ್ಲೆಯಲ್ಲಿದ್ದು, ನವಿಲುಧಾಮವಾಗಿದೆ.

ಬಂಕಾಪುರ ನವಿಲುಧಾಮವು ಹಾವೇರಿ ಸಮೀಪದ ಶಿಗ್ಗಾವಿ ಬಳಿ ಬಂಕಾಪುರ ಗ್ರಾಮದಲ್ಲಿದೆ. 139 ಎಕರೆ ವಿಸ್ತೀರ್ಣ ಹೊಂದಿದ್ದು ನಮ್ಮ ದೇಶದ ಮೀಸಲು ನವಿಲು ಧಾಮದಲ್ಲಿ ಎರಡನೆಯದು.

ಗುಡವಿ ಪಕ್ಷಿಧಾಮವು ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಸಮೀಪದಲ್ಲಿದ್ದು 0.74 ಚ.ಕಿ.ಮಿ. ಹೊಂದಿದ್ದು 191 ವಿವಿಧ ಬಗೆಯ ಜಾತಿಯ ಪಕ್ಷಿಗಳನ್ನು ಕಾಣಬಹುದಾಗಿದೆ.

ರಂಗನತಿಟ್ಟು ಪಕ್ಷಿಧಾಮವು ಮಂಡ್ಯ ಜಿಲ್ಲೆಯಲ್ಲಿದ್ದು ಅರ್ಜುನ, ಬೊಂಬು ಮತ್ತು ಪ್ಯಡೊನಾನ್ ಮರಗಳಲ್ಲಿ ಪಕ್ಷಿಗಳು ಬಂದು ವಲಸೆ ಹೋಗುತ್ತವೆ. ಇದನ್ನು 1940ರಲ್ಲಿ ಸ್ಥಾಪಿಸಲಾಯಿತು. ಹೀಗೆಯೇ ಕೊಕ್ಕರೆ ಬೆಳ್ಳೂರು ಪಕ್ಷಿಧಾಮ, ಶರಾವತಿ ಪಕ್ಷಿಧಾಮ, ರಾಣಿಬೆನ್ನೂರು ಬ್ಲಾಕ್ ಬಕ್‌ ವನ್ಯಧಾಮಗಳು ಅತ್ಯಂತ ಪ್ರಸಿದ್ಧವಾಗಿವೆ.

ದೇಶದಲೇ ಜೈವಿಕ ವೈವಿಧ್ಯತೆಯ ಪ್ರವಾಸಿ ತಾಣಗಳಲ್ಲಿ ಅತ್ಯಂತ ಪ್ರಸಿದ್ಧವಾಗಿರುವುವುಗಳೆಂದರೆ ಕಾಜೀರಂಗ, ಕಾರ್ಬೆಟ್, ಸಾರಿಸ್ಕ್, ಗುಜರಾತ್‌ನ ವನ್ಯಧಾಮಗಳು. ಇಲ್ಲಿ ಘಂಡಾಮೃಗ, ಹೇಸರಗತ್ತೆ ಹಾಗೂ ಅಳಿವಿನಂಚಿನಲ್ಲಿರುವ ಕೆಂಪು ದತ್ತಾಂಶ (ರೆಡ್ ಡಾಟಾ ಬುಕ್ ) ಪುಸ್ತಕದಲ್ಲಿ ಕಂಡುಬರುವ ಕೆಲವು ವಿಭಿನ್ನ ಬಗೆಯ ಜಾತಿಯ ಪ್ರಾಣಿ, ಪಕ್ಷಿಗಳನ್ನು ಇಲ್ಲಿ ಕಾಣಬಹುದಾಗಿದೆ.

3.Tourism: ಧಾರ್ಮಿಕ ಪ್ರವಾಸೋದ್ಯ ಮತ್ತು ಯಾತ್ರಾ ಸ್ಥಳಗಳು
(Religious & Spiritual Tourism)

ಭಾರತದಕ್ಕೂ ಆಧ್ಯಾತ್ಮಕ್ಕೂ ತುಂಬಾ ನಂಟಿದೆ. ವಿಶ್ವದ ಅನೇಕ ರಾಷ್ಟ್ರಗಳಿಂದ ಭಾರತದ ಧಾರ್ಮಿಕ ಕೇಂದ್ರಗಳಿಗೆ ಬೇರೆಲ್ಲೆಡೆಗಿಂತಲೂ ಹೆಚ್ಚು ಪ್ರಾತಿನಿಧ್ಯ ನೀಡಿ ಭೇಟಿ ನೀಡುವುದು ಪ್ರಮುಖವಾಗಿ ಕಾಶಿ, ಕೇದಾರನಾಥ, ಬದರೀನಾಥ, ಅಮರನಾಥ, ನೈನಾ ದೇವಿ ದೇವಲಾಯ, ವೈಷ್ಟೋದೇವಿ ದೇವಾಲಯ, ಕುಂಭಮೇಳ 12 ವರ್ಷಕ್ಕೊಮ್ಮೆ ಅಲಹಾಬಾದ್‌ನಲ್ಲಿ ನಡೆಯುವ ತೀರ್ಥಯಾತ್ರೆ, ಕರ್ನಾಟಕದಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾ ಪರಮೇಶ್ವರಿ, ಗೋಕರ್ಣ, ಬೆಂಗಳೂರಿನ ಇಸ್ಕಾನ್, ಕೊಲ್ಲೂರು ಮೂಕಾಂಬಿಕೆ, ಕೂಡಲಸಂಗಮ, ತಿರುಪತಿ ತಿರುಮಲ ದೇವಸ್ಥಾನ ಹಾಗೂ ಶಿರಡಿ ಸಾಯಿಬಾಬಾ ಮತ್ತು ಕೇರಳದ ಅನಂತ ಪದ್ಮನಾಭ ದೇವಾಲಯಗಳು ಅತ್ಯಂತ ಪ್ರಸಿದ್ಧವಾಗಿವೆ. ವಿವಿಧ ಧರ್ಮಗಳಿಗೆ ಸಂಬಂಧಿಸಿದ ಯಾತ್ರಾ ಸ್ಥಳಗಳು ಈ ದೇಶದಲ್ಲಿದ್ದು ಅಜ್ಜ‌ ದರ್ಗಾ, ಅಮೃತ್‌ಸರ, ಬುದ್ಧನ ಜನ್ಮಸ್ಥಳ ಹಾಗೂ ಮಹಾವೀರನ ನಿರ್ವಾಣ ಸ್ಥಳಗಳು ಪ್ರಸಿದ್ಧ ಧಾರ್ಮಿಕ ಯಾತ್ರಾ ಕೇಂದ್ರಗಳಾಗಿವೆ.

4. ಸಾಹಸ / ಚಾರಣ ಪ್ರವಾಸೋದ್ಯಮ (Adventures Tourism)

ಮುಂದುವರಿದ ಕೆಲ ರಾಷ್ಟ್ರಗಳ ಚಾರಣ ಮತ್ತು ಸಾಹಸ ಪ್ರವಾಸೋದ್ಯಮಕ್ಕೆ ಹೋಲಿಸಿದರೆ ಇಲ್ಲಿರುವ ಅಡ್ಡೆಂಚರಸ್ ಪ್ರವಾಸೋದ್ಯಮ ತುಸು ಕಡಿಮೆಯೇ. ಆದರೆ ಸೆಂಟ್ ಮೇರಿ ದ್ವೀಪಗಳು, ಕೆಮ್ಮಣ್ಣುಗುಂಡಿ, ಕೊಡಚಾದ್ರಿ, ಕಬಿನಿ ನದಿ, ಆಗುಂಬೆ. ಯಾಣಗಳು ಈ ಸಾಹಸ ಚಾರಣ ಪ್ರವಾಸೋದ್ಯಕ್ಕೆ ಅತ್ಯಂತ ಹೆಸರುವಾಸಿಯಾಗಿದೆ. ದುಬಾರೆ ಆನೆ ಶಿಬಿರ, ಗುಡವಿ ಪಕ್ಷಿಧಾಮ, ಕಾವೇರಿ ನಿಸರ್ಗ ಧಾಮಗಳು ತುಂಬ ಪ್ರಸಿದ್ಧವಾಗಿವೆ. ಅಬ್ಬೆ ಜಲಪಾತ, ಶಿವನಸಮುದ್ರ, ಚುಂಚನಕಟ್ಟೆ ಹಾಗೂ ಹಿನ್ನೀರಿನ ಬೀಚ್ ರೆಸಾರ್ಚ್‌ಗಳು, ಗಾಲ್ಫ್ ಕೇಂದ್ರಗಳು, ಏರೋ ಸ್ಪೋರ್ಟ್ಸ್, ಮನರಂಜನಾ ಪಾರ್ಕುಗಳು, ಪುನಶ್ಚತನ ಕೇಂದ್ರಗಳು, ಸ್ವಾಗಳು ಪ್ರವಾಸಿಗರನ್ನು ಯಶಸ್ವಿಯಾಗಿ ಆಕರ್ಷಿಸುತ್ತಿವೆ.Tourism

ಹೀಗೆ ದೇಶದಲ್ಲಿ ಪ್ರವಾಸೋದ್ಯಮವು ವಿಭಿನ್ನ ಆಯಾಮಗಳಲ್ಲಿ ಅಭಿವೃದ್ಧಿ ಹೊಂದುತ್ತಿದ್ದರೂ ಇತ್ತೀಚೆಗೆ ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ತುಸು ಕಡಿಮೆಯಾಗಿದೆ. ಆದ್ದರಿಂದ ಕೆಲ ದೇಶಗಳಾದ ಥಾಯ್ಲೆಂಡ್, ಸ್ವಿಟ್ಟರ್ ಲ್ಯಾಂಡ್, ನ್ಯೂಜಿಲ್ಯಾಂಡ್ ಮುಂತಾದವುಗಳಿಗೆ ಹೋಲಿಸಿದರೆ ಭಾರತದ ಪ್ರವಾಸೋದ್ಯಮ ಅಭಿವೃದ್ಧಿ ತುಸು ಕಡಿಮೆಯೇ. ಕೆಲವು ರಾಷ್ಟ್ರಗಳಂತೂ ತಮ್ಮ ದೇಶದ ಒಟ್ಟು ಬಜೆಟ್‌ನಲ್ಲಿ ಅರ್ಧಕ್ಕಿಂತ ಹೆಚ್ಚು ಆದಾಯ ತಂದುಕೊಡುತ್ತಿವೆ. ಅಂತಹುದರಲ್ಲಿ ನಮ್ಮ ದೇಶದಲ್ಲಿ ಕಲೆ, ವಾಸ್ತುಶಿಲ್ಪ, ಸಾಂಸ್ಕೃತಿಕ ಭವ್ಯತೆ, ಧಾರ್ಮಿಕತೆ, ಮನರಂಜನೆ ಮತ್ತು ಯಾತ್ರಾ ಸ್ಥಳಗಳು ಬೇರೆಲ್ಲ ಕಡೆಗಳಿಗಿಂತಲೂ ಹೆಚ್ಚಿದ್ದರೂ ವಿಶ್ವದ ಮುಂಚೂಣಿ ರಾಷ್ಟ್ರಗಳ ಪ್ರವಾಸೋದ್ಯಮದ ಪಟ್ಟಿ ಸೇರಲು ಸಾಧ್ಯವಾಗುತ್ತಿಲ್ಲ ಅದಕ್ಕೆ ವಿಭಿನ್ನ ಕಾರಣಗಳಿವೆ.

Tourism: ಭಾರತದ ಪ್ರವಾಸೋದ್ಯಮ ತೊಂದರೆಗಳು / ಅಡಚಣೆಗಳು

1. ಭಾರತದ ಪ್ರವಾಸೋದ್ಯಮ/Tourism ಇಲಾಖೆಯು ‘ಡಿಜಿಟಲ್ ಅಡ್ವರ್‌ ಟೇಜ್‌ಮೆಂಟ್’ ಮಾಡುವಲ್ಲಿ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಪೂರ್ಣ ವಿಫಲವಾಗಿದೆ.

2. ದೇಶದಲ್ಲಿ ಸಶಕ್ತ ಮಾಹಿತಿ ವ್ಯವಸ್ಥೆ ಹಾಗೂ ವಿದೇಶಿ ಪ್ರವಾಸಿಗರಿಗೆ ನೆರವು ಅಲ್ಲದೆ ಸಾರಿಗೆ, ತಂಗುದಾಣಗಳು ಮುಂತಾದವುಗಳ ಕೊರತೆ ಇದೆ.

3. ವಿದೇಶಗಳಿಗೆ ಹೋಲಿಸಿದರೆ ರಕ್ಷಣಾ ಕೊರತೆಯು ಬಹುಮುಖ್ಯವಾಗಿದ್ದು ಅತ್ಯಾಚಾರ, ಕೈಂಗಳು ವಿಪರೀತವಾಗಿ ನಡೆದಿರುವುದು ಪ್ರವಾಸಿಗರಿಗೆ ಆತಂಕ ಮೂಡಿಸುತ್ತದೆ.

4. ಭ್ರಷ್ಟಾಚಾರವು ಬಹುಮುಖ್ಯ ಕಾರಣವಾಗಿದ್ದು ವಿದೇಶಿ ಪ್ರವಾಸಿಗರಿಗೆ ‘ಚೀಟಿಂಗ್’ ಮಾಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತವೆ.

5. ಜನಾಂಗೀಯ ದೌರ್ಜನ್ಯಗಳು, ಕಲಹಗಳು, ವಿದೇಶಿ ಪ್ರವಾಸಿಗರ ಹತ್ಯೆಗಳು, ಆಹಾರದ ವಿಷಯದಲ್ಲಿ ಮೂಲಭೂತವಾದ ಪ್ರದರ್ಶನಗಳು ಎಲ್ಲೆಡೆ ನಡೆಯುತ್ತಿರುವುದು ಪ್ರವಾಸೋದ್ಯಮದ ಸಮಸ್ಯೆಯಾಗಿದೆ.

6. ಸ್ವಚ್ಛತೆ, ಶಿಸ್ತು, ನಿಯಂತ್ರಣ ವಿಷಯದಲ್ಲಿ ಭಾರತದ ಪ್ರವಾಸೋದ್ಯಮ ವಿಫಲವಾಗಿದೆ. ಐತಿಹಾಸಿಕ ಪಾರಂಪರಿಕ ತಾಣಗಳು ಕಲುಷಿತಗೊಂಡಿದ್ದು ಇಲಾಕೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ.

7, ಭಯೋತ್ಪಾದನೆ, ನಕ್ಸಲಿಸಂ, ಕಮ್ಯುನಾಲಿಸಂ ಎಲ್ಲಾ ದೇಶಗಳಲ್ಲಿ ಇದ್ದಂತೆ ನಮ್ಮ ದೇಶವು ಇವುಗಳಿಂದ ಹೊರತಲ್ಲ. ಆದ್ದರಿಂದ ಪ್ರವಾಸೋದ್ಯಮ ಇಳಿಮುಖವಾಗಿದೆ.

8. ಸಾಂಕ್ರಾಮಿಕ ಕಾಯಿಲೆಗಳು, ಹರಡುವ ವಿನೂತನ ವೈರಸ್ ಕಾಯಿಲೆಗಳು ಪ್ರವಾಸಿಗರಿಗೆ ಆತಂಕ ಮೂಡಿಸಿದೆ.

9. ಭಾರತ ಸರ್ಕಾರದ ಪರಿಸರ ಸಚಿವಾಲಯ ಹಾಗೂ ಪ್ರವಾಸೋದ್ಯಮ/Tourism ಸಚಿವಾಲಯಗಳು ವಿದೇಶದಲ್ಲಿ ಯಾವುದೇ ಗುರುತರ ಹೂಡಿಕೆ ಪ್ರಭಾವವನ್ನು ಬೀರುತ್ತಿಲ್ಲ.

10. ಡಿಜಿಲ್ಯಾಂಡ್, ಲಾಸ್ ವೇಗಾಸ್, ಹಾಂಕಾಂಗ್ ತರಹದ ಮನರಂಜನಾ ತಾಣಗಳನ್ನು ದೇಶದಲ್ಲಿ ಅಭಿವೃದ್ಧಿಪಡಿಸುವಲ್ಲಿ ವಿಫಲರಾಗಿರುವುದು ಪ್ರವಾಸೋದ್ಯಮ ಇಳಿಮುಖಕ್ಕೆ ಕಾರಣವಾಗಿದೆ.

ಭಾರತ ಸರ್ಕಾರ ಹಾಗೂ ಎಲ್ಲಾ ರಾಜ್ಯಸರ್ಕಾರಗಳು ತಮ್ಮ ದೇಶದ ಭವ್ಯ ಪ್ರವಾಸೋದ್ಯಮವನ್ನು/Tourism ವಿಶ್ವದಲ್ಲಿ ಮಾರುಕಟ್ಟೆಯ ವಸ್ತುವನ್ನಾಗಿ ಮಾರಾಟ ಮಾಡಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಜಾಗತಿಕವಾಗಿ ಭಾರತವನ್ನು ಪ್ರವಾಸೋದ್ಯಮ/Tourism ಕೇಂದ್ರವನ್ನಾಗಿಸಿ ಅಭಿವೃದ್ಧಿಪಡಿಸುವುದು ಇವುಗಳ ಗುರುತರ ಜವಾಬ್ದಾರಿಯಾಗಿದೆ. ಆದ್ದರಿಂದ ಪ್ರತಿ ವರ್ಷ ತಮ್ಮ ಆಯ – ವ್ಯಯ ಮುಂಗಡ ಪತ್ರದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಹಣವನ್ನು ಮೀಸಲಾಗಿರಿಸುವ ಮುಖಾಂತರ ಪ್ರವಾಸೋದ್ಯಮ/Tourism ಇಲಾಖೆಯು ವಿನೂತನ ಕಾಠ್ಯಕ್ರಮಗಳನ್ನು ಜಾರಿಗೆ ತಂದಿದೆ.

Tourism :ಭಾರತದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾಠ್ಯಕ್ರಮಗಳು / ಯೋಜನೆಗಳು

1. ‘ಇನ್‌ಕ್ರೆಡಿಬಲ್ ಇಂಡಿಯಾ‘ ಘೋಷ ವಾಕ್ಯದ ಅಡಿಯಲ್ಲಿ ದೇಶದ ಸಾಂಸ್ಕೃತಿಕ, ಐತಿಹಾಸಿಕ, ಧಾರ್ಮಿಕ, ವನ್ಯಪ್ರಾಣಿ, ಪರಿಸರ ಮುಂತಾದವುಗಳ ವರ್ಧನೆಗಾಗಿ ಪ್ರಚಾರಾಂದೋಲನ ಆರಂಭಿಸುವುದು.

2. ಕ್ಯಾರವಾನ್ ಮತ್ತು ಹೆಲಿಪ್ಯಾಡ್‌ ಪ್ರವಾಸೋದ್ಯಮವನ್ನು/Tourism ಸರ್ಕಾರ ಹಾಗೂ ಖಾಸಗಿ ಕ್ಷೇತ್ರ ಪಾಲುದಾರಿಕೆಯಿಂದ ಅಭಿವೃದ್ಧಿಪಡಿಸಲಾಗಿದೆ.

3. ‘ಅತಿಥಿ ದೇವೋಭವ‘ ಘೋಷವಾಕೈಯ ಅಡಿಯಲ್ಲಿ ಶುದ್ಧ, ಸ್ವಚ್ಛ ಪ್ರವಾಸಿ ತಾಣವನ್ನಾಗಿಸು ಹಾಗೂ ಸ್ಮಾರಕಗಳನ್ನು ಹಾಳು ಮಾಡದಂತೆ, ಕಸ ವಿಲೇವಾರಿಯ ಸೂಕ್ತ ನಿರ್ವಹಣೆಯ ಬಗ್ಗೆ ಗಮನ ಹರಿಸಲಾಗಿದೆ.

4. ದೇಶೀಯ ಪ್ರವಾಸೋದ್ಯಮಕ್ಕೆ ಇಂಬು ನೀಡಲು ಸರ್ಕಾರ ವಿವಿಧ ಭಾಗಗಳಲ್ಲಿ ದೇಶೀಯ ರಸ್ತೆ ಬದಿ ಪ್ರದರ್ಶನಗಳನ್ನು ಏರ್ಪಡಿಸಿದೆ.

5.ಸಿಂಗಪುರ, ಜಪಾನ್, ನ್ಯೂಜಿಲ್ಯಾಂಡ್, ಲಕ್ಸಂಬರ್ಗ್ ಮತ್ತು ಫಿನ್ನೆಂಡ್‌ಗಳಿಂದ ಆಗಮಿಸುವ ಪ್ರವಾಸಿಗರಿಗೆ ಸ್ಥಳದಲ್ಲೇ ವೀಸಾ ನೀಡುವ ಕ್ರಮ ಜಾರಿ ಮಾಡಲಾಗಿದೆ.

6. ಪ್ರವಾಸೋದ್ಯಮ, ಮಾರುಕಟ್ಟೆ ಅಂತರರಾಷ್ಟ್ರೀಯ ಮತ್ತು ದೇಶೀಯ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುತ್ತದೆ.

7. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಳಸಿಕೊಂಡು ಆನ್‌ಲೈನ್‌ ವಹಿವಾಟಿಗೆ ಆದ್ಯತೆ ಕೊಡುವ ಮುಖಾಂತರ ಅಭಿವೃದ್ಧಿಪಡಿಸಲಾಗಿದೆ.

8. ‘ಗಾಲಿಗಳ ಮೇಲೆ ಅರಮನೆ’ ಪರಿಕಲ್ಪನೆಯನ್ನು ಅಭಿವೃದ್ಧಿ ಪಡಿಸಿ ‘ದಕ್ಷಿಣ ವೈಭವ’ ಹೆಸರಿನ ಹೊಸ ರೈಲು ಮತ್ತು ಬಸ್ಸಿನ ಸೇವೆ ಆರಂಭಿಸಲಾಗಿದೆ.

9. ‘ಗೋಲ್ಡನ್ ಚಾರಿಯೇಟ್‘ ಮತ್ತು ‘ಡೆಕ್ಕನ್‌ ಓಡಿಸ್ಸಿ‘ ಎಂಬ ಪ್ರಮುಖ ಪ್ರವಾಸೋದ್ಯಮದ ಸೇವೆಗಳನ್ನು ಭಾರತೀಯ ಪ್ರವಾಸೋದ್ಯಮ ಮತ್ತು ರೈಲ್ವೆ ಇಲಾಖೆ ಜಾರಿಗೆ ತಂದಿದೆ.

10. ‘ಹೋಮ್ ಸೈ‘ ಪರಿಕಲ್ಪನೆಯು ಇತ್ತೀಚೆಗೆ ರಾಜ್ಯದ ಪ್ರವಾಸೋದ್ಯಮದಲ್ಲಿ ಅತ್ಯಂತ ಪ್ರಮುಖವಾಗಿದ್ದು ಪ್ರವಾಸೋದ್ಯಮ ಇಲಾಖೆಯ ಪ್ರಮುಖ ಅಭಿವೃದ್ಧಿಕಾರಕ್ರಮ ಇದಾಗಿದೆ.

11. ಪ್ರವಾಸಿ ತಾಣಗಳ ಗೈಡ್‌ ಗಳಿಗೆ ತರಬೇತಿ ನೀಡಿ ಅವರನ್ನು ಸ್ಥಳಗಳಿಗೆ ನೇಮಿಸುವುದು. ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಾಹವನ್ನು ಜೀವನಾಶ್ರಯಕ್ಕಾಗಿ ನೀಡುವುದು ಕರ್ನಾಟಕ ರಾಜ್ಯಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದಿದೆ.

ಪ್ರವಾಸೋದ್ಯಮ 2005ರಲ್ಲಿ ವರದಿಯಾದಂತೆ ಜಗತ್ತಿನ ಒಟ್ಟು ಆದಾಯದ ಶೇ. 10 ಕೊಡುಗೆಯಾಗಿ ನೀಡುತ್ತಿದೆ. ಇದು ಸರಾಸರಿ ವರ್ಷಕ್ಕೆ ಸುಮಾರು 680 ಬಿಲಿಯನ್ ಯುಎಸ್ ಡಾಲ‌ರಗಳು ಎನ್ನಬಹುದಾಗಿದೆ. ಜಗತ್ತಿನಲ್ಲಿ 125 ದೇಶಗಳು ಪ್ರವಾಸೋದ್ಯಮವನ್ನೇ ಅವಲಂಬಿಸಿವೆ. ಜಗತ್ತಿನಾದ್ಯಂತ ಪ್ರವಾಸಿಗರ ಸಂಖ್ಯೆ ಶೇ. 6.56 ದರದಲ್ಲಿ ಹೆಚ್ಚಿದೆ. ಕರ್ನಾಟಕ ಪ್ರವಾಸೋದ್ಯಮದಲ್ಲಿ ಭಾರತದ ಎಂಟನೇ ಅತಿ ದೊಡ್ಡ ರಾಜ್ಯವಾಗಿದೆ. ಪ್ರಖ್ಯಾತಿಯಲ್ಲಿ ಇದು ನಾಲ್ಕನೇ ಸ್ಥಾನದಲ್ಲಿದೆ. ಕರ್ನಾಟಕದ ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದ ಖ್ಯಾತಿಗೆ ಪಾತ್ರವಾಗಿದೆ.

ಜಗತ್ತಿನೆಲ್ಲೆಡೆ ಪ್ರವಾಸೋದ್ಯಮವು ಸ್ಥಳೀಯ ಪರಂಪರೆ ಮತ್ತು ಸಾಂಸ್ಕೃತಿಕ ಸಂಪತ್ತನ್ನು ಬಹಳವಾಗಿ ನೆಚ್ಚಿಕೊಂಡಿರುತ್ತದೆ. ಭಾರತದ ಸಾಂಸ್ಕೃತಿಕ ಸಿರಿತನ ಅದರ ಬೃಹತ್ ಸ್ಮಾರಕಗಳು ಮತ್ತು ಪ್ರವಾಸಿ ತಾಣಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದರ ಪ್ರಾಕೃತಿಕ ಭೂದೃಶ್ಯಗಳು, ಪುರಾತನ ಗೃಹಗಳು, ರಸ್ತೆಗಳು, ಮಾರುಕಟ್ಟೆಗಳು, ಹಬ್ಬಗಳು ಮತ್ತು ಪದ್ಧತಿಗಳು, ಕರಕುಶಲ ವಸ್ತುಗಳು, ನೃತ್ಯಗಳು, ಸಾಂಪ್ರದಾಯಿಕ ಅಡಿಗೆ, ಸಂಗೀತ ಎಲ್ಲವೂ ಸೇರಿರುತ್ತದೆ.

ಯಾವುದೇ ದೇಶದಲ್ಲಿ ಪ್ರವಾಸೋದ್ಯಮ ಹೆಚ್ಚಿನ ಯಶಸ್ಸು ಕಾಣಬೇಕಾದರೆ ಅಲ್ಲಿ ರಾಜಕೀಯ ಸ್ಥಿರತೆ, ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ, ಸ್ವಚ್ಛತೆ, ನಾಗರಿಕ ನಡವಳಿಕೆ ಇರಬೇಕಾಗುತ್ತದೆ. ಸಾಮಾಜಿಕ ಸ್ಥಳಗಳು ಕೊಳಕಾಗಿರುವುದು, ನೀರು, ವಿದ್ಯುತ್‌ನಂತಹ ಮೂಲಭೂತ ಸೌಕಯ್ಯಗಳ ಅಸಮರ್ಪಣೆ ಪೂರೈಕೆ, ಅಶಿಸ್ತು, ಭಿಕ್ಷಾಟನೆ ಇವು ಪ್ರವಾಸೋದ್ಯಮ ಬೆಳೆಯುವುದಕ್ಕೆ ದೊಡ್ಡ ಅಡ್ಡಿಯಾಗುತ್ತವೆ. ಹಾಗಾಗಿ ದೇಶದ ಸರ್ಕಾರ ಹಾಗೂ ಎಲ್ಲರೂ ಸೇರಿ ದೇಶವನ್ನು ಸುಂದರವಾಗಿ, ಸ್ವಚ್ಛವಾಗಿಟ್ಟುಕೊಂಡರೆ, ಸಂರಕ್ಷಣೆ ಮಾಡಿದರೆ ವಿಶ್ವದಲ್ಲಿಯೇ ಪ್ರಸಿದ್ಧವಾಗುವುದರಲ್ಲಿ ಯಾವುದೇ ಮಾತಿಲ್ಲ.

5. Tourism: ವೈದ್ಯಕೀಯ ಪ್ರವಾಸೋದ್ಯಮ
(Medical Tourism)

ಭಾರತಕ್ಕೆ ಪ್ರತಿ ವರ್ಷ 1,50,000 ಮಂದಿ ವೈದ್ಯಕೀಯ ಚಿಕಿತ್ಸಾರ್ಥಿಗಳು ಬರುತ್ತಾರೆ. ಭಾರತದಲ್ಲಿ ವೈದ್ಯಕೀಯ ಪ್ರವಾಸೋದ್ಯಮ ವರ್ಷಕ್ಕೆ ಶೇ. 30ರಷ್ಟು ಬೆಳವಣಿಗೆಯನ್ನು ಹೊಂದಿದೆ. ಅಭಿವೃದ್ಧಿ ಶೀಲ ರಾಷ್ಟ್ರವಾದ ಭಾರತದಲ್ಲಿ ಆಯುಷ್‌ ಸೇವೆ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಇವೇ ಮೊದಲಾದ ದೇಶೀ ವೈದ್ಯ ಪದ್ಧತಿಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ.

ಆರೋಗ್ಯ ಪ್ರವಾಸೋದ್ಯಮದಲ್ಲಿ ಆಯುರ್‌ವೇದಕ್ಕೆ ಉತ್ತೇಜನ ನೀಡುವ ಕಾರ 1994ರಲ್ಲಿ ಆರಂಭವಾಯಿತು. ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಈ ಅವಧಿ ಯಲ್ಲಿ ಹೋಟೆಲ್, ಆಲೀವ್ ರೀಫಂ ಕೇಂದ್ರಗಳು, ಗ್ರೀನ್ ರೀಲ್ ಕೇಂದ್ರಗಳು ತೆರೆಯಲ್ಪಟ್ಟಿವೆ.

ಕೇರಳ ಪ್ರವಾಸೋದ್ಯಮ ಇಲಾಖೆ ಅಂಕಿ – ಅಂಶಗಳ ಪ್ರಕಾರ ಪ್ರತಿ ವರ್ಷ ಸುಮಾರು 5 ಲಕ್ಷ ವಿದೇಶಿ ಪ್ರವಾಸಿಗರು ಆಯುರ್ವೇದ ಚಿಕಿತ್ಸೆಗಾಗಿ ಕೇರಳಕ್ಕೆ ಭೇಟಿ ನೀಡುತ್ತಿದ್ದಾರೆ.

ಆಯುರ್ವೇದ ಉದ್ಯಮದ ಮೌಲ್ಯ 2012ರ ಅಂತ್ಯದ ಹೊತ್ತಿಗೆ 1.3 ಶತಕೋಟಿ ಅಮೇರಿಕನ್ ಡಾಲರ್ ಮಟ್ಟವನ್ನು ತಲುಪಿದೆ. ಯೋಗಕ್ಕೂ ಈಗ ಜಾಗತಿಕ ಬೇಡಿಕೆ ನಿರ್ಮಾಣವಾಗಿದ್ದು ಸಹಸ್ರಾರು ಯೋಗ ಕೇಂದ್ರಗಳು ತೆರೆಯಲ್ಪಟ್ಟಿವೆ.

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....