Kannada essays

Embracing the Marvels of Science & Technology in India Essay | ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ 2023

ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ Science & Technology in INDIA

ವೈಜ್ಞಾನಿಕ ಬೆಳವಣಿಗೆ ದೇಶದ ಅಭಿವೃದ್ಧಿಯ ಮಾನದಂಡವೆನಿಸಿದೆ. ವಿಜ್ಞಾನ ತಂತ್ರಜ್ಞಾನಗಳ ನೆರವಿಲ್ಲದೆ, ಯಾವ ಕ್ಷೇತ್ರದಲ್ಲಿಯೂ ಇಂದು ಪ್ರಗತಿಯನ್ನು ಸಾಧಿಸುವುದು ಸಾಧ್ಯವಿಲ್ಲದ ಮಾತು. ವಿಶ್ವದ ಅತಿ ಪ್ರಾಚೀನ ನಾಗರಿಕತೆಗಳಲ್ಲೊಂದಾಗಿದ್ದ ಭಾರತೀಯ ಪರಂಪರೆ ಸುದೀರ್ಘ, ಸಾಂಸ್ಕೃತಿಕ ವೈಶಿಷ್ಟ್ಯತೆಗಳಿಂದ ಕೂಡಿತ್ತು, ಗಣಿತ, ಖಗೋಲ ವಿಜ್ಞಾನಗಳಂತಹ ವೈಜ್ಞಾನಿಕ ವಿಷಯಗಳಲ್ಲೂ ಸಾಕಷ್ಟು ಪ್ರಾವೀಣ್ಯತೆಯನ್ನು ಹೊಂದಿತ್ತು. ಆರ್ಯಭಟ್ಟ ಭಾಸ್ಕರಾಚಾರ್ಯ, ವರಾಹಮಿಹಿರ, ಲೀಲಾವತಿ ಮುಂತಾದವರು ಮಾಡಿದ ಸಾಧನೆ ಜಾಗತಿಕ ದಾಖಲೆ ಎನಿಸಿತ್ತು. ತಕ್ಷಶಿಲಾ, ನಳಂದಾ, ಉಜ್ಜಯಿನಿಯಂತಹ ಪಟ್ಟಣಗಳಲ್ಲಿನ ಶಿಕ್ಷಣ ಕೇಂದ್ರಗಳು ಪ್ರಾಚೀನ ಕಾಲದಲ್ಲೂ ಸಾವಿರಾರು ವಿದ್ಯಾರ್ಥಿಗಳನ್ನು ದೇಶ ವಿದೇಶಗಳಿಂದ ಆಕರ್ಷಿಸುತ್ತಿದ್ದವು.

ಕಾಲಾಂತರದಲ್ಲಿ ವಿವಿಧ ಕಾರಣಗಳಿಂದಾಗಿ ಇಂತಹ ಚಟುವಟಿಕೆ ಕ್ಷೀಣಿಸತೊಡಗಿತ್ತು. ವಿದೇಶೀಯರ ಆಡಳಿತದಲ್ಲಿ ಇದು ಸ್ಪಷ್ಟವಾಗಿತ್ತು. ಇದರ ಪರಿಣಾಮವೂ ಅಸಹನೀಯವಾಗಿತ್ತು.

ಸುಧಾರಣೆಗೆ ಚಾಲನೆ:

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಪರಿಸ್ಥಿತಿ ಬದಲಾಯಿತು. ಪ್ರಜಾಪ್ರಭುತ್ವ, ಜನಜೀವನದಲ್ಲಿ ಮಹತ್ತರ ಬದಲಾವಣೆಗೆ ಭಾಷ್ಯ ಬರೆಯಿತು. ದೇಶದ ಮೊದಲ ಪ್ರಧಾನಿ ಜವಹಾರ್‌ಲಾಲ್‌ ನೆಹರೂ, ಸುಧಾರಣೆಯ ಹರಿಕಾರರೆನಿಸಿದರು. ದೇಶದಲ್ಲಿ ಕೈಗಾರಿಕೋದ್ಯಮ ಮತ್ತು ಕೃಷಿ ಸೇರಿದಂತೆ ಅಗತ್ಯ ವಲಯಗಳಲ್ಲಿ ನಿರೀಕ್ಷಿತ ಪ್ರಗತಿಯ ಗುರಿ ಸಾಧಿಸಲು ಪಂಚವಾರ್ಷಿಕ ಯೋಜನೆಗಳನ್ನು ಪ್ರಾರಂಭಿಸಲಾಯಿತು.

ಇದಕ್ಕೆ ವಿಜ್ಞಾನ-ತಂತ್ರಜ್ಞಾನ/Technology ಬೆಂಬಲ ಪಡೆಯಲಾಯಿತು. ಹಸಿರುಕ್ರಾಂತಿ, ಶ್ವೇತ (ಕ್ಷೀರ) ಕ್ರಾಂತಿ ಮತ್ತು ನೀಲಿ ಕ್ರಾಂತಿಯಂತಹ ಸಾಧನೆಗಳು ಕೃಷಿ, ಹೈನುಗಾರಿಕೆ ಮತ್ತು ಮೀನುಗಾರಿಕೆಯಂತಹ ಕ್ಷೇತ್ರಗಳಲ್ಲಿ ಐತಿಹಾಸಿಕ ದಾಖಲೆಯೆನಿಸದವು. ಯುವ ಪ್ರಧಾನಿಯಾಗಿದ್ದ ರಾಜೀವ್‌ಗಾಂಧಿಯವರು ಮಾಹಿತಿ ತಂತ್ರಜ್ಞಾನಕ್ಕೆ/Technology ನೀಡಿದ ಒತ್ತು ದೇಶದ ಚಿತ್ರಣವನ್ನೇ ಬದಲಿಸಿತು.

ವಿಜ್ಞಾನ – ತಂತ್ರಜ್ಞಾನ/Science and Technology ಬೆಳವಣಿಗೆ ನಿರ್ದಿಷ್ಟ ಸ್ವರೂಪ:

ಸ್ವಾತಂತ್ರ್ಯಾ ನಂತರದ ಅವಧಿಯಲ್ಲಿ ವಿಜ್ಞಾನ ತಂತ್ರಜ್ಞಾನಗಳ/Technology ಬೆಳವಣಿಗೆಗೆ ನಿರ್ದಿಷ್ಟ ಸ್ವರೂಪ ನೀಡಲಾಯಿತು. ಇಂತಹ ಚಟುವಟಿಕೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಮೂಲಕ, ಉನ್ನತ ಶಿಕ್ಷಣ ಸಂಸ್ಥೆಗಳು, ಖಾಸತಿ ಮತ್ತು ಸಾರ್ವಜನಿಕ ವಲಯ ಉದ್ಯಮಗಳು ಮತ್ತು ಇತರ ಸೇವಾ ವಲಯದ ಸರ್ಕಾರೇತರ ಸಂಘ ಸಂಸ್ಥೆಗಳ ಮೂಲಕ ನಡೆಯುತ್ತಿವೆ.

ವೈಜ್ಞಾನಿಕ ಚಟುವಟಿಕೆಗಳಿಗೆ ಅಗತ್ಯವಾದ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಮಹತ್ವ ನೀಡಲಾಗಿದೆ. ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿಸುವ ಪ್ರಯೋಗಾಲಯಗಳು ಮತ್ತು ತಾಂತ್ರಿಕ ಸಂಶೋಧನಾ ಕೇಂದ್ರಗಳು ವಿವಿಧ ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿ.ಎಸ್.ಐಆರ್) ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐ.ಸಿ.ಎ.ಆರ್) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐ.ಸಿ.ಎಂ.ಆರ್) ಇವುಗಳಲ್ಲಿ ಪ್ರಮುಖವಾದವು. ಇವುಗಳ ಸುಪರ್ದಿಯಲ್ಲಿ ಅನೇಕ ಪ್ರಯೋಗಾಲಯಗಳು ಕಾರ್ಯನಿರತವಾಗಿವೆ.

1971ರಲ್ಲಿ ಕೇಂದ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯನ್ನು ಪ್ರಾರಂಭಿಸಲಾಯಿತು. ವಿಜ್ಞಾನ ತಂತ್ರಜ್ಞಾನಗಳ/Technology ಯೋಜಿತ ಬೆಳವಣಿಗೆಗೆ ಸೂಕ್ತ ನೀತಿ ನಿರೂಪಿಸುವುದು, ಕಾರ್ಯತಂತ್ರ ರೂಪಿಸುವುದು, ವಿವಿಧ ಸಂಘಟನೆಗಳು ಮತ್ತು ಪ್ರಯೋಗಾಲಯಗಳ ನಡುವೆ ಸಂಪರ್ಕ ಕಲ್ಪಿಸುವುದು, ವೈಜ್ಞಾನಿಕ ಚಟುವಟಿಕೆಗಳಿಗೆ ಎದುರಾಗುವ ಆತಂಕಗಳ ನಿವಾರಣೆ ಮತ್ತು ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಡುವೆ ಇದಕ್ಕೆ ಪೂರಕವಾಗುವಂತೆ ಪರಸ್ಪರ ಸಹಕಾರ ವರ್ಧನೆಗೆ ನೆರವಾಗುವುದು ಈ ಇಲಾಖೆಯ ಪ್ರಮುಖ ಕಾರ್ಯಗಳೆನಿಸಿದವು.

ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ನೆರವಾಗಲು ವಿಜ್ಞಾನ ಮತ್ತು ಇಂಜಿನಿಯರಿಂಗ್ ಸಂಶೋಧನಾ ಮಂಡಳಿ (ಎಸ್.ಇ.ಆರ್.ಸಿ) ಸ್ಥಾಪಿಸಲಾಯಿತು. ವಿವಿಧ ಸಂಘಟನೆಗಳಿಗೆ, ಅನೇಕ ಅಭಿವೃದ್ಧಿ ಚಟುವಟಿಕೆಗಳಿಗೆ ಅಗತ್ಯವಾದ ಸಲಹೆ ಸೂಚನೆಗಳ ವ್ಯವಸ್ಥೆಯನ್ನೂ ಇದು ಕಲ್ಪಿಸುತ್ತದೆ.

ವಿವಿಧ ಹಂತಗಳಲ್ಲಿ ಸಲಹಾ ಮಂಡಳಿಗಳನ್ನೂ ಇದು ರೂಪಿಸುತ್ತದೆ. ಪ್ರತಿವರ್ಷವೂ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅಭಿವೃದ್ಧಿ ಯೋಜನೆಗಳು ಇದರ ಮುಂದೆ ಪ್ರಸ್ತಾಪಕ್ಕೆ ಬರುತ್ತವೆ. ಇವುಗಳ ಸಾಧ್ಯಾಸಾಧ್ಯತೆಯ ಬಗ್ಗೆ ಮಂಡಳಿ ಪರಿಶೀಲನೆ ನಡೆಸುತ್ತದೆ. ಈ ಚಟುವಟಿಕೆಗಳಿಗೆ ಹೆಚ್ಚು ಬಲ ನೀಡಲು 2003ರಲ್ಲಿ ಹೊಸ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿಯನ್ನು ಅಂಗೀಕರಿಸಲಾಯಿತು.

Technology

1996ರಲ್ಲಿ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ ಸ್ಥಾಪನೆಯಾದ ನಂತರ ಅನೇಕ ಮಹತ್ವದ ಸಂಶೋಧನಾ ಕಾರ್ಯಗಳು ಇದರ ವ್ಯಾಪ್ತಿಯಲ್ಲಿ ಬಂದವು. ದೇಶೀಯ ತಂತ್ರಜ್ಞಾನದ/Technology ಅಭಿವೃದ್ಧಿ ಮತ್ತು ಅದನ್ನು ವಾಣಿಜ್ಯದ ಉದ್ದೇಶಗಳಿಗೆ ಬಳಸಲು ಪ್ರೋತ್ಸಾಹಿಸುವುದು, ಆಮದು ಮಾಡಿಕೊಂಡ ತಂತ್ರಜ್ಞಾನದಲ್ಲಿ ಅಗತ್ಯಕ್ಕೆ ತಕ್ಕಂತೆ ಮಾರ್ಪಾಟಿಗೆ ಅನುವು ಕಲ್ಪಿಸುವುದು ಇವುಗಳಲ್ಲಿ ಮುಖ್ಯವಾದುವು. ಇದನ್ನು ಪ್ರೋತ್ಸಾಹಿಸಲು ಪ್ರತಿವರ್ಷ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.

ತಾಂತ್ರಿಕ ದಿನಾಚರಣೆ (ಮೇ 11) ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ವಿತರಿಸಲಾಗುತ್ತದೆ. ಸೂಕ್ತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಸಂಸ್ಥೆ ಮತ್ತು ಅದನ್ನು ಬಳಸುವ ಕೈಗಾರಿಕೆಗಳಿಗೆ ತಲಾ 2 ಲಕ್ಷ ರೂ.ಗಳ ನಗದು ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಿಸಲಾಗುವುದು. ಇದಲ್ಲದೆ ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ವಿಜ್ಞಾನಿ ಡಾ.ಸಿ.ವಿ. ರಾಮನ್ ಅವರ ಸ್ಮರಣಾರ್ಥವಾಗಿ ಪ್ರತಿವರ್ಷವೂ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ.

ವೈಜ್ಞಾನಿಕ ಮನೋಭಾವ ಬೆಳೆಸಲು ಸಾರ್ವಜನಿಕರಿಗಾಗಿ ಈ ಸಂದರ್ಭದಲ್ಲಿ ಸೂಕ್ತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.

ಉದ್ಯಮಗಳಲ್ಲಿ ತಂತ್ರಜ್ಞಾನ/Technology :

ಉದ್ಯಮಗಳಲ್ಲಿ ತಂತ್ರಜ್ಞಾನದ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 1953ರಲ್ಲಿ ರಾಷ್ಟ್ರೀಯ ಸಂಶೋಧನೆ ಮತ್ತು ಮಂಡಳಿ (ಎನ್.ಆರ್.ಡಿ.ಸಿ) ಅಸ್ತಿತ್ವದಲ್ಲಿ ಬ೦ದಿತು. ಉದ್ಯಮ ಶೀಲತೆಯ ಅಭಿವೃದ್ಧಿಗೆ ಮತ್ತು ಉದ್ಯೋಗಾವಕಾಶ ವಿಸ್ತರಣೆಗೆ ಇದರಿಂದ ಹೆಚ್ಚಿನ ಅನುಕೂಲವಾಯಿತು. ಉದ್ಯಮಶೀಲತಾ ತರಬೇತಿಗೆ ವಿಶೇಷ ಪ್ರಾಶಸ್ಯ ನೀಡಲಾಗಿದ್ದು ಇದಕ್ಕಾಗಿ ಅಲ್ಲಲ್ಲಿ ಪ್ರತ್ಯೇಕ ಸಮುಚ್ಛಯಗಳನ್ನೂ ನಿರ್ಮಿಸಲಾಗಿದೆ.

ದೇಶಾದ್ಯಂತ 200ಕ್ಕೂ ಹೆಚ್ಚು ಸಂಶೋಧನಾ ಸಂಘಟನೆಗಳೊಂದಿಗೆ ಎನ್.ಆರ್.ಡಿ.ಸಿ. ಸತತ ಸಂಪರ್ಕ ಹೊಂದಿದೆ. 2000ಕ್ಕೂ ಹೆಚ್ಚು ದೇಶೀಯ ತಂತ್ರಜ್ಞಾನಗಳಿಗೆ ಲೈಸೆನ್ಸ್‌ (ಅನುಮೋದನೆ) ನೀಡಲಾಗಿದ್ದು ಈ ಪೈಕಿ 1000ಕ್ಕೂ ಹೆಚ್ಚು ತಂತ್ರಜ್ಞಾನಗಳನ್ನು/Technology ವಿವಿಧ ಕೈಗಾರಿಕೆಗಳು ವಾಣಿಜ್ಯದ ಉದ್ದೇಶಕ್ಕಾಗಿ ಈಗಾಗಲೇ ಬಳಸಲಾಗಿದೆ. ಮೂಲ ವಿಜ್ಞಾನ ಕ್ಷೇತ್ರದಲ್ಲಿ ಅಧ್ಯಯನ ನಿರತವಾಗಿರುವ ಸ್ವಾಯತ್ತ ಸಂಶೋಧನಾ ಪ್ರಯೋಗಾಲಯಗಳು ಒಂದು ವರ್ಗಕ್ಕೆ ಸೇರಿವೆ.Technology

ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ 18 ವೈಜ್ಞಾನಿಕ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ನೆರವು ನೀಡುತ್ತಿದೆ. ಬೆಂಗಳೂರಿನ ಭಾರತೀಯ ಭೌತಶಾಸ್ತ್ರ ಸಂಸ್ಥೆ, ರಾಮನ್ ಸಂಶೋಧನಾ ಸಂಸ್ಥೆ, ಜವಹಾರ್‌ಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರಗಳು, ಕೊಲ್ಕತ್ತಾದ ಬೋಸ್ ಸಂಸ್ಥೆಗಳು ಇವುಗಳಲ್ಲಿ ಸೇರಿವೆ. ಇವೆಲ್ಲಾ ಮೂಲ ವಿಜ್ಞಾನ ಕ್ಷೇತ್ರದಒ ಅಧ್ಯಯನ ಮತ್ತು ಸಂಶೋಧನೆಗೆ ಮೀಸಲಾದುವು. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಭೂವಿಜ್ಞಾನ, ಅಂತರಿಕ್ಷ ವಿಜ್ಞಾನ, ವೈಮಾಂತರಿಕ್ಷ ವಿಜ್ಞಾನ, ಪವಮಾನ (ಹವಾಮಾನ) ಮುಂತಾದ ವಿವಿಧ ಕ್ಷೇತ್ರಗಳಿಗೆ ಇವುಗಳ ಕಾರ್ಯ ಮೀಸಲಾಗಿದೆ.

ಪರಮಾಣು ವಿಜ್ಞಾನ, ತಂತ್ರಜ್ಞಾನ/Atomic Science Technology:

ಪರಮಾಣು ವಿಜ್ಞಾನ ಕ್ಷೇತ್ರ ಇತ್ತೀಚೆಗೆ ಹೆಚ್ಚಿನ ಮಹತ್ವ ಪಡೆಯುತ್ತಿದೆ. ಭಾರತ ಈ ನಿಟ್ಟಿನಲ್ಲೂ ಹಿಂದುಳಿದಿಲ್ಲ. ಪರಮಾಣು ತಂತ್ರಜ್ಞಾನ ಬಳಕೆಯಲ್ಲಿ ವಿಶ್ವದಲ್ಲಿ ಪರಿಣತಿ ಪಡೆದಿರುವ ಬೆರಳೆಣಿಕೆಗೆ ರಾಷ್ಟ್ರಗಳ ಪೈಕಿ ಭಾರತವೂ ಒಂದು. ದೇಶದಲ್ಲಿ ಇಂತಹ ಕಾರ್ಯಕ್ರಮಗಳ ನಿರ್ವಹಣೆಗೆಂದೇ 1954ರಲ್ಲಿ ಅಣುಶಕ್ತಿ ಇಲಾಖೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿತು. ಯುರೇನಿಯಂ ಇಂಧನ ಮೂಲವಾಗಿ, ಭಾರ ಜಲವನ್ನು ಮಧ್ಯವರ್ತಿಯಾಗಿ ಬಳಸುವ ರಿಯಾಕ್ಷರ್‌ಗಳ ಸ್ಥಾಪನೆ, ಅಣುವಿದ್ಯುತ್ ಉತ್ಪಾದನಾ ಚಟುವಟಿಕೆಯ ಮೊದಲ ಹಂತವಾಗಿ ಕೈಗೊಳ್ಳಲಾಯಿತು. ಪ್ಲುಟೋನಿಯಂ ಉತ್ಪಾದನೆ ಮತ್ತು ಬಳಕೆ ಕುರಿತ ಫಾಸ್ಟ್ ಬೀಡರ್ ರಿಯಾಕ್ಟರ್‌ಗಳ ಸ್ಥಾಪನೆಯನ್ನು ನಂತರ ಕೈಗೆತ್ತಿಕೊಳ್ಳಲಾಯಿತು.

ಥೋರಿಯಂ ಅನ್ನು ಬಳಸಿಕೊಳ್ಳುವ ಮೂರನೆಯ ಹಂತದ ತಂತ್ರಜ್ಞಾನ/Technology ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಪರಮಾಣು ವಿದ್ಯುತ್ ನಿಗಮ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದ್ದು, ಒಟ್ಟು 17 ರಿಯಾಕ್ಟರ್‌ಗಳನ್ನು ಹೊಮದಿದೆ. ಇವುಗಳ ಉತ್ಪಾದನೆ 42109 ಮೆ.ವ್ಯಾ.ದಷ್ಟಿದ್ದು, ಸದ್ಯದಲ್ಲೇ ಇದು 6780 ಮೆ.ವ್ಯಾ.ಗೆ ತಲುಪುವ ನಿರೀಕ್ಷೆಯಿದೆ. ಅಣುವಿದ್ಯುತ್ ಉತ್ಪಾದನೆಯಿಂದ ಪರಿಸರ ಮಾಲಿನ್ಯದ ಅಪಾಯವಿಲ್ಲ ಅಥವಾ ಜಲವಿದ್ಯುತ್‌ ಯೋಜನೆಯಂತೆ ಅಣೆಕಟ್ಟು ನಿರ್ಮಾಣ, ಮುಳುಗಡೆ, ಸಂತ್ರಸ್ತರ ಪರಿಹಾರ ಕಾರ್ಯಗಳಂತಹ ಜಂಜಾಟವಿಲ್ಲ ಮತ್ತು ಮಳೆ ಅಥವಾ ನೀರಿನ ಲಭ್ಯತೆಯನ್ನೂ ಅವಲಂಬಿಸಿಲ್ಲ.

ಅಗತ್ಯಬಿದ್ದಲ್ಲಿ ಈ ತಂತ್ರಜ್ಞಾನವನ್ನು/Technology ‘ರಕ್ಷಣಾ ಚಟುವಟಿಕೆ’ಗಳಲ್ಲೂ ಬಳಸಬಹುದಾಗಿದೆ. ಇದರಿಂದಾಗಿಯೇ ಈ ತಂತ್ರಜ್ಞಾನಕ್ಕೆ ಎಲ್ಲಿಲ್ಲದ ಮಹತ್ವ ಬಂದೊದಗಿದ್ದು, ಭಾರತವನ್ನು ಸಮರ್ಥ ರೀತಿಯಲ್ಲಿ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಮುಂದಾಗಿದೆ.

ಪರಮಾಣು ತಂತ್ರಜ್ಞಾನದ /Technology ಬಳಕೆ ಕೃಷಿ, ಕೈಗಾರಿಕೆಗಳಿಗೂ ಅನ್ವಯವಾಗಬಲ್ಲದು. ಅಧಿಕ ಉತ್ಪಾದನಾ ಸಾಮರ್ಥ್ಯದ ಬೀಜಗಳ ಉತ್ಪಾದನೆಗೆ ಈ ವಣಕಿರಣ ತಂತ್ರಜ್ಞಾನ ಸಹಾಯಕ. ನೆಲಗಡಲೆ, ಸಾಸುವೆ, ಬೇಳೆಕಾಳು, ಸೋಯಾಬೀನ್, ಭತ್ತ ಸೇರಿದಂತೆ 29 ಹೊಸ ಬಗೆಯ ಬೀಜಗಳನ್ನು ಕೃಷಿ ಸಚಿವಾಲಯ, ಈ ತಂತ್ರಜ್ಞಾನ ಬಳಸಿ ಉತ್ಪಾದಿಸಿದೆ. ಅವುಗಳನ್ನು ಬೆಳೆಯಲು ರೈತರಿಗೆ ಬಿಡುಗಡೆ ಸಹ ಮಾಡಲಾಗಿದೆ. ಇದಲ್ಲದೆ ಕಬ್ಬು, ಅನಾನಸ್, ಬಾಳೆ ಮುಂತಾದ ಬೆಳೆಗಳಿಗೂ ಈ ತಂತ್ರಜ್ಞಾನವನ್ನು ವಿಸ್ತರಿಸಲಾಗಿದೆ.

ವಿಕಿರಣ ತಂತ್ರಜ್ಞಾನವನ್ನು/Technology ಗೊಬ್ಬರ ಕೀಟನಾಶಕಗಳ ಸಾಮರ್ಥ್ಯ ಹೆಚ್ಚಿಸಲೂ ಬಳಸಬಹುದಾಗಿದೆ. ಆಹಾರ ಕೆಡದಂತೆ ಕಾದಿಡುವ ಸಂಸ್ಕರಣ ಕಾರ್ಯಕ್ಕೂ ಇದನ್ನು ಬಳಸಿಕೊಳ್ಳಲಾಗುತ್ತದೆ. ವನಸ್ಪತಿ, ಸಾಂಬಾರು ದಿನಸುಗಳ ಸಂಸ್ಕರಣೆಗೆ ಕೋಬಾಲ್ಟ್ ತಂತ್ರಜ್ಞಾನ ಬಳಕೆ ಒಂದು ಉದಾಹರಣೆ. ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲೂ ಇಂತಹ ತಂತ್ರಜ್ಞಾನದ ವ್ಯಾಪಕವಾಗತೊಡಗಿದೆ. ಕೆಲ ಬಗೆಯ ರೋಗಗಳ ಪರೀಕ್ಷೆಗೆ ಇದು ಸಹಾಯಕ.

Technology ಔಷಧಗಳ ತಯಾರಿಕೆಯಲ್ಲಂತೂ ಇದು ಸಾಕಷ್ಟು ಪರಿಣಾಮಕಾರಿಯೆನಿಸಿದ್ದು ಬಿ.ಎ.ಆರ್.ಸಿ. (ಬಾಬಾ ಪರಂಆಣು ಸಂಶೋಧನಾ ಕೇಂದ್ರ)ದಲ್ಲಿ ಇದಕ್ಕಾಗಿಯೇ ರೇಡಿಯೇಶನ್ ಮೆಡಿಸಿನ್ ಸೆಂಟರ್ ಎಂಬ ಪ್ರತ್ಯೇಕ ವಿಭಾಗವನ್ನೇ ಸ್ಥಾಪಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆ ಇದಕ್ಕೆ ಲಭಿಸಿದೆ. ರೇಡಿಯೋ ಸಮಸ್ಥಾನಿ (ಐಸೋಟೋಪ್)ಗಳನ್ನು ಭೂ ಅಂತರ್ಜಲ ಸಮೀಕ್ಷೆಗೆ, ಅಣೆಕಟ್ಟುಗಳಲ್ಲಿನ ಸೋರಿಕೆಯನ್ನು ಕಂಡುಹಿಡಿಯುವ ಕಾರ್ಯಗಳಿಗೆ ಬಳಸಲಾಗುತ್ತಿದೆ. ತೈಲ ಸಂಸ್ಕರಣಾ ಸ್ಥಾವರಗಳಲ್ಲಿ, ತೈಲ ನಿಕ್ಷೇಪಗಳ ನಿರ್ವಹಣೆಯಲ್ಲಿ ಈ ತಂತ್ರಜ್ಞಾನ ಈಗಾಗಲೇ ಬಳಕೆಯಲ್ಲಿದೆ.

ಅಂತರಿಕ್ಷ ವಿಜ್ಞಾನ/Space science Technology:

ವೈಜ್ಞಾನಿಕ ಉದ್ದೇಶಗಳಿಗಾಗಿ ಅಂತರಿಕ್ಷವನ್ನು ಬಳಸಿಕೊಳ್ಳುವ ಕಾರ್ಯ ಇತ್ತೀಚಿನ ದಿನಗಳಲ್ಲಿ ತ್ವರಿತಗತಿಯಲ್ಲಿ ಮುಂದುವರಿದಿದೆ. ಭಾರತವು ಈ ವಿಷಯವನ್ನು ಅರಿತು 60ರ ದಶಕದಲ್ಲೇ ಈ ನಿಟ್ಟಿನಲ್ಲಿ ವ್ಯವಸ್ಥಿತ ರೀತಿಯಲ್ಲಿ ಕೆಲಸ ಪ್ರಾರಂಭಿಸಿತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 1969ರಲ್ಲಿ ರೂಪಗೊಂಡಿತು. 1972ರಲ್ಲಿ ಕೇಂದ್ರದಲ್ಲಿ ಬಾಹ್ಯಾಕಾಶ ಇಲಾಖೆಯನ್ನು ಪ್ರಾರಂಭಿಸಲಾಯಿತು. ಬಾಹ್ಯಾಕಾಶ ಆಯೋಗವನ್ನು ರಚಿಸಲಾಯಿತು.Technology

704 ದಶಕದಲ್ಲಿ ಆರ್ಯಭಟ, ಭಾಸ್ಕರ, ರೋಹಿಣಿ, ಆಪಲ್ ಮುಂತಾದ ಉಪಗ್ರಹಗಳ ಉಡಾವಣೆಯನ್ನು ಪ್ರಾಯೋಗಿಕವಾಗಿ ಕೈಗೊಳ್ಳಲಾಯಿತು. 80ರ ದಶಕದಲ್ಲಿ ಅಗತ್ಯದ ಕಾರ್ಯನಿರ್ವಹಿಸಬಲ್ಲ ಐ.ಆರ್.ಎಸ್ (ದೂರ ಸಂಪರ್ಕ ಉಪಗ್ರಹ), ಇನ್ಸಾಟ್ (ಭಾರತೀಯ ರಾಷ್ಟ್ರೀಯ ಉಪಗ್ರಹ)ಗಳಂತಹ ಸಾಧನಗಳನ್ನು ಅಂತರಿಕ್ಷದಲ್ಲಿ ನೆಲೆಗೊಳಿಸುವಂತಹ ಕಾರ್ಯಗಳು ಮುಂದುವರಿದವು, ನಂತರದ ಅವಧಿಯಲ್ಲಿ ವಿವಿಧ ಕಾರ್ಯಗಳನ್ನು ನಿರ್ವಹಿಸಬಲ್ಲ ಅತ್ಯಾಧುನಿಕ ಉಪಗ್ರಹಗಳ ನಿರ್ಮಾಣ ಮತ್ತು ಬಳಕೆಯ ಕೆಲಸ ಮುಂದುವರಿಯಿತು. ಈ ನಿಟ್ಟಿನಲ್ಲಿ ಕಳೆದ ವರ್ಷ (2008ರಲ್ಲಿ) ನಿರ್ವಹಿಸಲಾದ ಚಂದ್ರಯಾನ-1 ಕಾರ್ಯಕ್ರಮ ಜಾಗತಿಕ ಮಟ್ಟದಲ್ಲಿ ಭಾರತದ ಸಾಧನೆಯನ್ನು ಅಗ್ರಗಣ್ಯ ಸ್ಥಾನಕ್ಕೆ ಎತ್ತರಿಸಿತು. ಮೊಟ್ಟಮೊದಲ ಬಾರಿಗೆ ಬೃಹತ್ ಪ್ರಮಾಣದಲ್ಲಿ ಚಂದ್ರನಲ್ಲಿ ನೀರು ಬ೦ಡೆಗಳ ರೂಪದಲ್ಲಿದೆಯೆನ್ನುವುದನ್ನು ಖಚಿತಪಡಿಸಿತು.

ಇಡೀ ವಿಶ್ವವೇ ಭಾರತದೆಡೆ ಬೆರಗುಗಣ್ಣಿನಿಂದ ನೋಡುವಂತಾಯಿತು. ಚಂದ್ರಯಾನ-2 ಯೋಜನೆಯನ್ನು ಸಹ ಕೈಗೆತ್ತಿಕೊಳ್ಳಲು ಇಸ್ರೋ ನಿರ್ಧರಿಸಿದೆ. ಇದರೊಂದಿಗೇ ಕುಜಗ್ರಹ ಯಾನ ಯೋಜನೆ, ಮಾನವ ರಹಿತ ಉಪಗ್ರಹಗಳ ನಿರ್ಮಾಣ ಮತ್ತು ಅಂತರಿಕ್ಷ ಪ್ರವಾಸೋದ್ಯಮ ಸಾಧ್ಯತೆಯಂತಹ ಮಹತದ್ವಾಕಾಂಕ್ಷಿ ಯೋಜನೆಗಳನ್ನು ಇಸ್ರೋ ಕೈಗೊಳ್ಳಲಿದೆ. ಇದಕ್ಕೆ ಪೂರಕವಾಗಿ ದೇಶೀಯ ತಂತ್ರಜ್ಞಾನದ ಅಭಿವೃದ್ಧಿ, ಕ್ರಯೋಜೆನಿಕ್ ಇಂಧನ ಕುರಿತ ತಾಂತ್ರಿಕ ಪರಿಣತಿ, ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ಯಂತಹ ವಿವಿಧ ಬಗೆಯ ಉಡಾವಣಾ ವಾಹಕಗಳ ಅಭಿವೃದ್ಧಿ, ವೋಮ ನಿಲ್ದಾಣ ಮುಂತಾದ ಇತರ ಕಾರ್ಯಗಳಿಗೂ ಇಸ್ರೋ ಗಮನಹರಿಸಿದೆ. ಭಾರತದ ತಾಂತ್ರಿಕತೆ ಮತ್ತು ಪರಿಣತಿಗಳನ್ನು ಪರಿಗಣಿಸಿ, ವಿಶ್ವದ ಅನೇಕ ದೇಶಗಳು ತಮ್ಮ ಉಪಗ್ರಹ ಉಡಾವಣಾ ಕಾರ್ಯವನ್ನು ಇಸ್ರೋ ಮೂಲಕ ನಿರ್ವಹಿಸುತ್ತಿವೆ. ಶ್ರೀಹರಿ ಕೋಟಾದಲ್ಲಿರುವ ಸತೀರ್ಶ ಧವನ್ ಉಡಾವಣಾ ಕೇಂದ್ರ ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಕಾರ್ಯನಿರ್ವಹಣಾ ಕೇಂದ್ರಗಳಲ್ಲೊಂದಾಗಿದೆ.

ದೂರ ಸಂಪರ್ಕ:

ದೂರ ಸಂಪರ್ಕ ಕಾರ್ಯದಲ್ಲಿ ಅಂತರಿಕ್ಷ ವಿಜ್ಞಾನವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಅಭೂತಪೂರ್ವ ಎನಿಸಿವೆ. ಕಾರ್ಯಕ್ಕಾಗಿಯೇ ಸ್ಪೇಸ್ ಅಪ್ಲಿಕೇಶನ್ ಸೆಂಟರ್ ಎಂಬ ಸಂಸ್ಥೆಯನ್ನು ಹೈದರಾಬಾದ್‌ನಲ್ಲಿ ಇಸ್ರೋದ ಅಂಗಸಂಸ್ಥೆಯಾಗಿ ಸ್ಥಾಪಿಸಲಾಗಿದೆ. ಭೂ ಸ್ಥಿರ ಕಕ್ಷೆಗಳಲ್ಲಿ ನೆಲೆಗೊಳಿಸಲಾಗಿರುವ ದೂರ ಸಂಪರ್ಕ ಉಪಗ್ರಹಗಳಿಂದ ಅತ್ಯುತ್ತಮ ಸಂಪರ್ಕ ಸಾಧನಗಳ ನಿರ್ವಹಣೆ ಪ್ರಗತಿಯಲ್ಲಿದೆ. ದೂರವಾಣಿ, ರೇಡಿಯೋ, ಟೆಲಿವಿಷನ್‌ನಂತಹ ಸಮೂಹ ಸಂಪರ್ಕ ಸಾಧನಗಳು ದೇಶದಲ್ಲಿ ಹೊಸ ಕ್ರಾಂತಿಯನ್ನೇ ಉಂಟುಮಾಡಿವೆ.

ಭಾರತ್‌ ಸಂಚಾರ್ ನಿಗಂ ಲಿಮಿಟೆಡ್, ಮಹಾನಗರ ಟೆಲಿಫೋನ್ ನಿಗಂ ಲಿಮಿಟೆಡ್, ಜಾಗತಿಕ ಮಟ್ಟದಲ್ಲೇ ಬೃಹತ್ ಸಂಸ್ಥೆಗಳಾಗಿ ಬೆಳೆದು, ಇತರ ದೇಶಗಳಿಗೆ ಮಾದರಿಯೆನಿಸಿವೆ. ಅಂಚೆ ಕಚೇರಿಗಳಲ್ಲೂ ಇ-ಮೇಲ್, ವಾಯ್ಸ ಮೇಲ್, ಎಲೆಕ್ಟ್ರಾನಿಕ್ ಮನಿಯಾರ್ಡ‌್ರನಂತಹ ಸುಧಾರಿತ ವಿಧಾನಗಳನ್ನು ಅಳವಡಿಸಲಾಗುತ್ತಿದೆ. ರೇಡಿಯೋ, ದೂರದರ್ಶನ ಪ್ರಸಾರ (ಪ್ರಸಾರ ಭಾರತಿ) ಕಾರ್ಯ ದಿನದಿನಕ್ಕೂ ವಿಸ್ತರಣೆ ಹೊಂದುತ್ತಿದೆ. ಅತ್ಯಾಧುನಿಕ ಸಂಪರ್ಕ ತಂತ್ರಗಳನ್ನು ಇವು ಅಳವಡಿಸಿಕೊಳ್ಳುತ್ತಿವೆ.

ದೂರಸಂಪರ್ಕ ತಂತ್ರಜ್ಞಾನದ ಬಳಕೆ ಇಂದು ಸರ್ವವ್ಯಾಪಿಯೆನಿಸಿದೆ. ಭೂವೀಕ್ಷಣೆ, ಹವಾಮಾನ ವೀಕ್ಷಣೆಗೆ, ಬೆಳೆಗಳ ಅಂದಾಜು ನಿರ್ವಹಣೆಗೆ, ಅಂತರ್ಜಲ, ಅದಿರು ನಿಕ್ಷೇಪಗಳ ಪತ್ತೆ ಕಾರ್ಯಕ್ಕೆ ಇದು ಅತ್ಯುಪಯುಕ್ತ. ನಗರಗಳಲ್ಲಿ ಸಂಚಾರ ನಿರ್ವಹಣೆಗೆ ಜಿಬಿಎಸ್‌ ವ್ಯವಸ್ಥೆ, ಆರೋಗ್ಯ ರಕ್ಷಣೆಗಾಗಿ ಟೆಲಿ ಮೆಡಿಸಿನ್ ಪದ್ಧತಿ ಜನಪ್ರಿಯವಾಗತೊಡಗಿದೆ. ಬೇಹುಗಾರಿಕೆ ಕಾರ್ಯದಲ್ಲಿ ಉಪಗ್ರಹಗಳ ‘ಬಳಕೆ ಈಗ ತೀರ ಸಾಮಾನ್ಯವೆನಿಸಿದೆ. ಆಡಳಿತದಲ್ಲಿ ವಿದ್ಯುನ್ಮಾನ ಪದ್ಧತಿಯ ಅಳವಡಿಕೆಯಿಂದ ಕೆಲಸವೂ ತ್ವರಿತವಾಗಿ ಪೂರೈಸಬಹುದಾಗಿದೆಯಲ್ಲದೆ ಹೆಚ್ಚಿನ ಪಾರದರ್ಶಕತೆಗೂ ಒಳಪಡಿಸಬಹುದಾಗಿದೆ.

ಗುಣಮಟ್ಟ ನಿರ್ವಹಣೆಗೂ ಇದು ಉಪಯುಕ್ತ. ಹಳ್ಳಿ ಹಳ್ಳಿಗೂ ದೂರ ಸಂಪರ್ಕ ಮತ್ತು ವಿದ್ಯುನ್ಮಾನ ಆಡಳಿತ ವ್ಯವಸ್ಥೆ ವಿಸ್ತರಿಸಲು ಅನೇಕ ಯೋಜನೆಗಳನ್ನು ಕೈಗೊಳ್ಳಲಾಗಿದೆ. ವಿಡಿಯೋ ಸಮ್ಮೇಳನದಂತಹ ಕಾರ್ಯಕ್ರಮಗಳು ಹೆಚ್ಚು ವಿಸ್ತ್ರತವಾಗುತ್ತಿವೆ. ಅನೇಕ ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಪ್ರಸಾರಕ್ಕಾಗಿ ವಿದ್ಯುನ್ಮಾನ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಿವೆ. ಈ ವ್ಯವಸ್ಥೆಯನ್ನೇ ಆಧರಿಸಿದ ಮುಕ್ತ ವಿಶ್ವವಿದ್ಯಾನಿಲಯಗಳೂ ಇವೆ. ಅಂತರಿಕ್ಷ ತಂತ್ರಜ್ಞಾನದ ಪ್ರಯೋಜನವನ್ನು ಆಸ್ಪತ್ರೆಗಳಲ್ಲಿ, ಕೈಗಾರಿಕೆ, ಕ್ರೀಡೆ ಮತ್ತಿತರ ಕ್ಷೇತ್ರಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ.

ನ್ಯಾನೊ ತಂತ್ರಜ್ಞಾನ/Nano Technology:

ನ್ಯಾನೊ ತಂತ್ರಜ್ಞಾನ ತೀರ ಇತ್ತೀಚಿನದಾಗಿದ್ದು ದೇಶದಲ್ಲಿ 2004ರಲ್ಲೇ ಇದರ ಅಭಿವೃದ್ಧಿಗೆ ವ್ಯವಸ್ಥಿತ ಕಾರ್ಯ ಪ್ರಾರಂಭಿಸಲಾಗಿದೆ. ಮಾಹಿತಿ ತಂತ್ರಜ್ಞಾನ/Technology ಇಲಾಖೆಯಡಿ ನ್ಯಾನೊ ಟೆಕ್ನಾಲಜಿ ಡೆವಲಪ್‌ಮೆಂಟ್ ಪ್ರೋಗ್ರಾಂ (ನ್ಯಾನೊ ತಂತ್ರಜ್ಞಾನ/Technology ಅಭಿವೃದ್ಧಿ ಕಾರ್ಯಕ್ರಮ) ಪ್ರಾರಂಭಿಸಲಾಯಿತು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಇದಕ್ಕಾಗಿಯೇ ಪ್ರತ್ಯೇಕ ಕೇಂದ್ರವನ್ನು ಹೊಂದಿದ್ದು, ಕೇಂದ್ರದ ನೆರವಿನ ಅನೇಕ ಸಂಶೋಧನಾ ಯೋಜನೆಗಳನ್ನು ನಿರ್ವಹಿಸುತ್ತಿದೆ. ಮುಂಬೈನ ಐಐಟಿ ಯಲ್ಲೂ ಇಂತಹ ಕೇಂದ್ರವನ್ನು ಸ್ಥಾಪಿಸಲಾಗಿದೆ. ನ್ಯಾನೊ ಎಲೆಕ್ಟ್ರಾನಿಕ್ಸ್, ನ್ಯಾನೊ ಮೆಟ್ರಾಲಜಿ (ತೀರ ಸೂಕ್ಷ್ಮ ಮಾಪನ ಶಾಸ್ತ್ರ)ಯಂತಹ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯ ತೀವ್ರ ಚುರುಕಿನಿಂದ ಪ್ರಗತಿಯಲ್ಲಿದೆ.

ಸಾಗರಿಕ ವಿಜ್ಞಾನ:

ಸಾಗರ ತಂತ್ರಜ್ಞಾನ ಅಭಿವೃದ್ಧಿಗಾಗಿ 1981ರಲ್ಲಿ ಪ್ರತ್ಯೇಕ ಇಲಾಖೆಯನ್ನೇ ಪ್ರಾರಂಭಿಸಲಾಗಿದೆ. ಸಾಗರ ಸಂಪನ್ಮೂಲ ಅಭಿವೃದ್ಧಿ ಮತ್ತು ಬಳಕೆ ಇದರ ಪ್ರಮುಖ ಉದ್ದೇಶ. ಅಂಟಾರ್ಕ್ಟಿಕಾ ಯಾತ್ರೆಯಂತಹ ಸಂಶೋಧನಾ ಕಾರ್ಯಗಳನ್ನೂ ಕೈಗೊಳ್ಳಲಾಗಿದೆ. ಹವಾಮಾನ ಮುನ್ಸೂಚನೆಯನ್ನು ಇನ್ನಷ್ಟು ವೈಜ್ಞಾನಿಕ ವಿಧಾನಗಳಿಗೆ ಒಳಪಡಿಸಲಾಗುತ್ತಿದೆ. ಬಿರುಗಾಳಿ, ಚಂಡಮಾರುತ, ಸುನಾಮಿ ಮುನ್ಸೂಚನೆಯಂತಹ ಕಾರ್ಯಗಳು ಹೆಚ್ಚು ನಿಖರಗೊಳ್ಳುತ್ತಿವೆ.

ಜೈವಿಕ ತಂತ್ರಜ್ಞಾನ/Technology :

ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲಜಿ) ದೇಶದಲ್ಲಿಂದು ಮುಂಚೂಣಿಯಲ್ಲಿರುವ ಕ್ಷೇತ್ರಗಳಲ್ಲೊಂದಾಗಿದೆ. ಕಳೆದ ಒಂದು ದಶಕದ ಅವಧಿಯಲ್ಲಿ ದೇಶದಲ್ಲಿ ಇದರ ಬೆಳವಣಿಗೆ ಶೇಕಡಾ 40ರಷ್ಟಾಗಿದ್ದು 2005-06ರ ಸಾಲಿನಲ್ಲೇ ಈ ವಲಯದಲ್ಲಿನ ವಹಿವಾಟು 1.5 ಶತಕೋಟಿ ಡಾಲರ್ ಮೀರಿತ್ತು. ದೇಶದಲ್ಲಿ 2010ರಲ್ಲಿ ಈ ಪ್ರಮಾಣ 10 ಶತಕೋಟಿ ಡಾಲರ್ ಮೀರುವ ನಿರೀಕ್ಷೆಯಿದೆ. ದೇಶಾದ್ಯಂತ 200ಕ್ಕೂ ಜೈವಿಕ ತಂತ್ರಜ್ಞಾನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಮಾಹಿತಿ ತಂತ್ರಜ್ಞಾನ/Information Technology :

ಮಾಹಿತಿ ತಂತ್ರಜ್ಞಾನ/Information Technology (ಐಟಿ)ಕ್ಷೇತ್ರದಲ್ಲಿ ಭಾರತದ ಸಾಧನೆ ಜಾಗತಿಕ ಮಟ್ಟದಲ್ಲಿ ಒಂದು ದಾಖಲೆಯೆನಿಸಿದೆ. ಹೊರಗುತ್ತಿಗೆ (ಬಿಪಿಓ) ಪ್ರಮಾಣದ ತ್ವರಿತಗತಿಯಲ್ಲಿ ಏರುತ್ತಿದೆ. ದೇಶದ ಒಟ್ಟು ರಫ್ತನಲ್ಲಿ ಈ ವಲಯದ ಪ್ರಮಾಣ, 2007ರಲ್ಲೇ ಶೇಕಡಾ 32.6ರಷ್ಟಿತ್ತು. ರಫ್ತು ಮೌಲ್ಯ 31.3 ಶತಕೋಟಿ ಡಾಲರ್‌ಗೆ ತಲುಪಿತ್ತು. ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಹೂಡುತ್ತಿರುವ ಬಂಡವಾಳದ ಮೊತ್ತ ಸತತವಾಗಿ ಏರುತ್ತಲೇ ಇದೆ. 2007ರಲ್ಲೇ 45 ಸಾವಿರ ಕೋಟಿ ರೂ.ನಷ್ಟು ನೇರ ವಿದೇಶಿ ಬಂಡವಾಳ ಹೂಡಿಕೆ (ಎಫ್‌ಡಿಐ) ಈ ವಲಯದಲ್ಲಿ ದಾಖಲಾಗಿದೆ.

2008-09ರಲ್ಲಿ ಸಾಫ್ಟ್‌ವೇರ್ ಸೇವೆಯ ರತ್ತಿನ ಪ್ರಮಾಣ 47 ಶತಕೋಟಿ ಡಾಲ‌ ಮಿಕ್ಕಿತ್ತು. ಫೋರ್ಚುನ್ 500 ಮತ್ತು ಗ್ಲೋಬಲ್ 2000 ಶ್ರೇಣಿಯ ಕಂಪನಿಗಳು ಭಾರತದ ಉದ್ಯಮಗಳೊಂದಿಗೆ ಸಹಯೋಗ ಹೊಂದಿವೆ. ವಿಶ್ವದ 27 ಬೃಹತ್ ಸೆಮಿ ಕಂಡಕ್ಟರ್’ ಕಂಪನಿಗಳ ಪೈಕಿ 17 ಕಂಪನಿಗಳು ಭಾರತದಲ್ಲಿ ಭದ್ರವಾದ ನೆಲೆ ಹೊಂದಿವೆ. ಸಂಶೋಧನೆ ಮತ್ತು ಅಭಿವೃದ್ಧಿ ವಲಯದಲ್ಲೂ ಭಾರತದ ನೆಲೆ ವಿಸ್ತರಿಸುತ್ತಿದೆ.

ಈ ವಲಯದಲ್ಲಿನ ಉದ್ಯೋಗಾವಕಾಶದಲ್ಲೂ ಇಂತಹುದೇ ಏರಿಕೆ ಕಂಡುಬಂದಿದೆ. 2006-07ರಲ್ಲೇ 16.21 ಲಕ್ಷ ಜನ ನೇರವಾಗಿ ಈ ಉದ್ಯೋಗದಲ್ಲಿ ತೊಡಗಿದ್ದರೆ 60 ಲಕ್ಷಕ್ಕೂ ಹೆಚ್ಚು ಜನ ಪರ್ಯಾಯ ಉದ್ಯೋಗಗಳಲ್ಲಿದ್ದರೆಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.

ವಿಶಿಷ್ಟ ಗುರುತಿನ ಚೀಟಿ ಯೋಜನೆ ಮಾಹಿತಿ ತಂತ್ರಜ್ಞಾನದ ಒಂದು ವಿಶಿಷ್ಟ ಕೊಡುಗೆ ಎನ್ನಬಹುದು. ಇದು ವಿಶ್ವದಲ್ಲಿಯೇ ಅತಿ ಬೃಹತ್‌ ಯೋಜನೆಗಳಲ್ಲೊಂದಾಗಿದ್ದು 2009ರ ಫೆಬ್ರವರಿ ತಿಂಗಳಲ್ಲೇ ಖ್ಯಾತ ಉದ್ಯಮಿ, ಕರ್ನಾಟಕದ ಶ್ರೀ ನಂದನ್‌ ನಿಲೇಕಣಿಯವರ ನೇತೃತ್ವದಲ್ಲಿ ಪ್ರಾಧಿಕಾರವನ್ನು ರಚಿಸಲಾಗಿದೆ. 2011ರ ಸುಮಾರಿಗೆ ದೇಶದ ಪ್ರತಿಯೊಬ್ಬ ಪ್ರಜೆಗೂ ವಿಶಿಷ್ಟ ಗುರುತಿನ ಚೀಟಿ ದೊರೆಯುವ ನಿರೀಕ್ಷೆಯಿದೆ.

ಕರ್ನಾಟಕದಲ್ಲಿ:

ದೇಶದ ವೈಜ್ಞಾನಿಕ ಪ್ರಗತಿ ಕಾರ್ಯದಲ್ಲಿ ಕರ್ನಾಟಕದ ಕೊಡುಗೆಗೆ ಸಿಂಹಪಾಲು. ಅದರಲ್ಲೂ, ಭಾರತದ ವಿಜ್ಞಾನ ನಗರ ಎನಿಸಿರುವ ಬೆಂಗಳೂರು ಮುಂಚೂಣಿಯಲ್ಲಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯ ವಿಜ್ಞಾನಿ ಡಾ.ಸಿ.ವಿ. ರಾಮನ್ ಅವರ ಕಾರ್ಯಕ್ಷೇತ್ರ ಬೆಂಗಳೂರು, ಅವರ ಹೆಸರಿನ ರಾಮನ್ ಸಂಶೋಧನಾ ಸಂಸ್ಥೆ, ಭೌತವಿಜ್ಞಾನದಲ್ಲಿ ಸಂಶೋಧನಾ ಕಾರ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿ ವಿಜ್ಞಾನ ತಂತ್ರಜ್ಞಾನ ಚಟುವಟಿಕೆ ಸಾಕಷ್ಟು ವಿಸ್ತ್ರತ ಮತ್ತು ವೈವಿಧ್ಯಮಯ. ಇವುಗಳನ್ನು ಈ ಕೆಳಗಿನಂತೆ ಸ್ಕೂಲವಾಗಿ ವರ್ಗೀಕರಿಸಬಹುದು.

ಅ) ಮೂಲವಿಜ್ಞಾನ ಕ್ಷೇತ್ರ:

ಮೂಲ ವಿಜ್ಞಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳು ಮತ್ತು ಸಂಶೋಧನಾಲಯಗಳ ದೊಡ್ಡ ಪಟ್ಟಿಯೇ ಕರ್ನಾಟಕದಲ್ಲಿದೆ. ಭಾರತದ ಖ್ಯಾತ ಉದ್ಯಮಿ ಚೆಮಶೇಟಜೀ ಟಾಟಾ ಅವರು ಸ್ಥಾಪಿಸಿದ ಭಾರತೀಯ ವಿಜ್ಞಾನ ಸಂಸ್ಥೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಇವುಗಳಲ್ಲಿ ಅತ್ಯಂತ ಪ್ರಮುಖವಾದದ್ದು. 1912ರಲ್ಲೇ ಸ್ಥಾಪಿತಗೊಂಡಿರುವ ಈ ಸಂಸ್ಥೆ, ಒಂದು ಪರಿಗಣಿತ ವಿಶ್ವವಿದ್ಯಾಲಯವಾಗಿದ್ದು ಜಾಗತಿಕ ಮಟ್ಟದಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. 40ಕ್ಕೂ ಹೆಚ್ಚು ವಿಭಾಗಗಳಲ್ಲಿ 150ಕ್ಕೂ ಹೆಚ್ಚು ಪರಿಣತರು ಇಲ್ಲಿ ಕಾರ್ಯನಿರತರಾಗಿದ್ದು ಭೌತಶಾಸ್ತ್ರ, ರಸಾಯನ ಶಾಸ್ತ್ರಗಳಂತಹ ಮೂಲ ವಿಜ್ಞಾನ ಕ್ಷೇತ್ರದಿಂದ ಹಿಡಿದು ನ್ಯಾನೊ ತಂತ್ರಜ್ಞಾನ, ಪರಿಸರ ವಿಜ್ಞಾನ, ಜೈವಿಕ ತಂತ್ರಜ್ಞಾನಗಳಂತಹ ಆಧುನಿಕ ಅನ್ವಯಿಕ ತಂತ್ರಜ್ಞಾನ ಕ್ಷೇತ್ರದವರೆಗೂ ಇದರ ಕಾರ್ಯಕ್ಷೇತ್ರ ವಿಸ್ತರಿಸಿದೆ. ವಿಧೇಶೀಯರೂ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳಿಗೆ ಮತ್ತು ಅಧ್ಯಯನಶೀಲರಿಗೆ ಇದು ಹೆಮ್ಮರದಂತೆ ವಿಶಾಲವಾದ ಆಶ್ರಯತಾಣವಾಗಿ ಬೆಳೆದಿದೆ.

ಖಗೋಳ ವಿಜ್ಞಾನ ಮತ್ತು ಅದಕ್ಕೆ ಸಂಬಂಧಿಸಿದ ಭೌತಶಾಸ್ತ್ರ ವಲಯದ ಅಧ್ಯಯನಕ್ಕಾಗಿರುವ ಭಾರತೀಯ ಭೌತವಿಜ್ಞಾನ ಸಂಸ್ಥೆ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಆಸ್ಟೋಫಿಜಿಕ್ಸ್ ದೇಶದಲ್ಲಿಯೇ ಇಂತಹ ಕಾರ್ಯದಲ್ಲಿ ತೊಡಗಿರುವ ಏಕೈಕ ಕೇಂದ್ರ, ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲೇ ಪ್ರಾರಂಭವಾದ ಜವಹಾರ್‌ ಲಾಲ್ ಉನ್ನತೆ ವಿಜ್ಞಾನ ಸಂಶೋಧನಾ ಸಂಸ್ಥೆ ಬೆಂಗಳೂರಿನಲ್ಲಿರುವ ಇನ್ನೊಂದು ಪ್ರಮುಖ ಅಧ್ಯಯನ ಕೇಂದ್ರವಾಗಿದ್ದು ಪ್ರಮುಖವಾಗಿ ರಸಾಯನ ಶಾಸ್ತ್ರ ಮತ್ತಿತರ ವಿಷಯಗಳನ್ನು ಕುರಿತದ್ದಾಗಿದೆ.

ಕೃಷಿ, ತೋಟಗಾರಿಕೆ, ಹೈನುಗಾರಿಕೆಗಳಂತಹ ಕ್ಷೇತ್ರಗಳಲ್ಲೂ ರಾಷ್ಟ್ರಮಟ್ಟದ ಸಂಶೋಧನಾ ಸಂಸ್ಥೆಗಳು ಕರ್ನಾಟಕದಲ್ಲಿವೆ. ಪ್ರಮುಖವಾದವುಗಳೆಂದರೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಇಂಡಿಯನ್ ಕೌನ್ಸಿಲ್ ಫಾರ್ ಎಗಿಕಲ್ಬರಲ್ ರಿಸರ್ಚ್), ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಇಂಡಿಯನ್ ಕೌನ್ಸಿಲ್ ಫಾರ್ ಹಾರ್ಟಿಕಲ್ಬರಲ್ ರಿಸರ್ಚ್), ಕೃಷಿ ತಂತ್ರಜ್ಞರ ಮಂಡಳಿ (ಇಂಡಿಯನ್ ಕೌನ್ಸಿಲ್‌ ಆಫ್ ಎಗ್ರಕಲ್ಬರಲ್ ಸಾಯಿಂಟಿಸ್ಟ್), ರಾಷ್ಟ್ರೀಯ ಹೈನುಗಾರಿಕಾ ಸಂಶೋಧನಾ ಸಂಸ್ಥೆ (ನ್ಯಾಷನಲ್ ಡೇರಿ ರಿಸರ್ಚ್ ಇನ್ಸ್‌ಟಿಟ್ಯೂಟ್), ಅಂತಾರಾಷ್ಟ್ರೀಯ ಜೈವಿಕ ನಿಯಂತ್ರಣ ಸಂಸ್ಥೆ (ಇಂಟರ್‌ ನ್ಯಾಶನಲ್ ಇನ್ಸ್‌ಟಿಟ್ಯೂಟ್ ಫಾರ್ ಬಯಲಾಜಿಕಲ್ ಕಂಟ್ರೋಲ್), ಭಾರತೀಯ ರೇಷ್ಮೆ ಸಂಶೋಧನಾ ಮಂಡಳಿ (ಇಂಡಿಯನ್ ಸಿಲ್ಕ್ ರಿಸರ್ಚ್ ಇನ್ಸ್‌ಟಿಟ್ಯೂಟ್), ಬೆಂಗಳೂರಿನಲ್ಲಿರುವ ಮರ ಸಂಶೋಧನಾ ಸಂಸ್ಥೆ (ವುಡ್ ರಿಸರ್ಚ್ ಇನ್ಸ್‌ಟಿಟ್ಯೂಟ್).

ಮೈಸೂರಿನಲ್ಲಿರುವ ಕೇಂದ್ರ ಆಹಾರ ಸಂಶೋಧನಾ ಸಂಸ್ಥೆ (ಸಿ.ಎಫ್.ಟಿ.ಆರ್.ಐ) ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿರುವ ದೇಶದ ಏಕೈಕ ಸಂಸ್ಥೆ, ವಿವಿಧ ಆಹಾರ ವಸ್ತುಗಳ ತಯಾರಿಕೆ ಮತ್ತು ಅವುಗಳನ್ನು ಕಾದಿರಿಸಲು ಬಳಸುವ ಸಂಸ್ಕರಣಾ ವಿಧಾನಗಳ ಕುರಿತಂತೆ ಅದು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ ಇಮದು ಅನೇಕ ಕೈಗಾರಿಕೆಗಳಲ್ಲಿ ಬಳಕೆಯಾಗುತ್ತಿದೆ. ಎಳನೀರಿನ ಪ್ಯಾಕೆಟ್‌ ಇದಕ್ಕೆ ಉದಾಹರಣೆ.

ಮೈಸೂರಿನಲ್ಲೇ ಇರುವ ರಕ್ಷಣಾ ಆಹಾರ ಸಂಶೋಧನಾ ಸಂಸ್ಥೆ ಸೈನಿಕರು ಮತ್ತು ಭದ್ರತಾ ಪಡೆಯ ಯೋಧರಿಗೆ ಉನ್ನತ ಪರ್ವತ ಪ್ರದೇಶ, ಹಿಮಾಲಯ ಪರ್ವತ ಪಂಕ್ತಿಯಂತಹ ಚಳಿ ಅಥವಾ ರಾಜಸ್ತಾನಿಯಂತಹ ಮರಳುಗಾಡಿನ ಸೆಕೆ ಅಥವಾ ಕಡಲಾಣದಂತಹ ಸಾಗರ ಪ್ರದೇಶಗಳಲ್ಲಿ ಬಳಸಲು ಅನುವಾಗುವ ಆಹಾರ ವಸ್ತುಗಳನ್ನು ಸಿದ್ಧಪಡಿಸುತ್ತದೆ. ಇವು ಹೆಚ್ಚಾಗಿ ತಕ್ಷಣ ಬಳಸಬಹುದಾದ ದಿಢೀರ್ ಆಹಾರದ ಪೊಟ್ಟಣಗಳಾಗಿರುತ್ತವೆ.

ಇದಲ್ಲದೆ ಬೆಳೆಹೊನ್ನೂರಿನಲಿರುವ ಕಾಫಿ ಸಂಶೋಧನಾ ಕೇಂದ್ರ, ಕೊಡಗಿನ ಕಿತ್ತಳೆ ಹಣ್ಣಿನ ಸಂಶೋಧನಾ ಕೇಂದ್ರಗಳಂತಹ ವಿವಿಧ ಬೆಳೆಗಳಿಗೆ ಸಂಬಂಧಿಸಿದ ಸಂಶೋಧನಾ ಕೇಂದ್ರಗಳು ರಾಜ್ಯದಲ್ಲಿವೆ.

ಆ) ಅನ್ವಯಿಕ ವಿಜ್ಞಾನ:

ಈ ಪೈಕಿ ಗೌರಿಬಿದನೂರು ಸಮೀಪ ಹೊಸೂರಿನಲ್ಲಿರುವ ಭೂಕಂಪ ಮಾಪನ ಕೇಂದ್ರ ಪ್ರಮುಖವಾದದ್ದು. ಭೂಕಂಪನ ಅಲೆಗಳ ಮಾಹವಕ್ಕಷ್ಟೇ ಅಲ್ಲದೆ ಅವುಗಳ ಮುನ್ಸೂಚನೆಗೂ ಇದು ನೆರವಾಗಬಲ್ಲುದಾಗಿದೆ. ”ಸುನಾಮಿ ಅಲೆಗಳ ಕುರಿತಂತೆಯೂ ಇದು ಮಹತ್ವದ ಮಾಹಿತಿ ನೀಡಬಲ್ಲುದಾಗಿದೆ.

ರಕ್ಷಣಾ ವಲಯದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಫೆನ್ಸ್ ರಿಸರ್ಚ್ ಡೆವಲಪ್‌ಮೆಂಟ್ ಆರ್ಗನೈಸೇಷನ್) ಬೆಂಗಳೂರಿನಲ್ಲಿ ಅನೇಕ ಮಹತ್ವದ ಕಾರ್ಯಗಳಲ್ಲಿ ನಿರತವಾಗಿದೆ. ಯುದ್ಧ ವಿಮಾನ, ಹಗುರ ಯುದ್ಧ ವಿಮಾನ, ಹೆಲಿಕಾಪ್ಟರ್, ರಾಡಾರ್‌ನಂತಹ ಯುದ್ಧೋಪಕರಣಗಳನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯ (ನ್ಯಾಶನಲ್ ಏರೋನ್ಯಾಟಿಕಲ್ ಲ್ಯಾಬೊರೇಟರಿ) ಹಿಂದೂಸ್ತಾನ್ ಏರೋನ್ಯಾಟಿಕ್ಸ್‌ ಲಿಮಿಟೆಡ್, ಏರೋನಾಟಿಕಲ್ ಡೆವಲಪ್ ಎಸ್ಟಾಬ್ಲಿಶ್ ಮಿಂಟ್ (ಎ.ಡಿ.ಇ), ಏರೋ ನ್ಯಾಟಿಕಲ್ ಡೆವೆಲಪ್‌ಮೆಂಟ್‌ ಏಜೆನ್ಸಿ (ಎ.ಡಿ.ಎ), ಕೃತಕ ಬುದ್ದಿಶಕ್ತಿ ಮತ್ತು ಯಂತ್ರಮಾನವ ಅಭಿವೃದ್ಧಿ ಕೇಂದ್ರ (ಸೆಂಟರ್ ಫಾರ್ ಆರ್ಟಿಫಿಶಿಯರ್ ಇಂಟಲಿಜೆನ್ಸ್ ಅಂಡ್ ರೊಬಾಟಿಕ್ಸ್) ಸಂಸ್ಥೆಗಳು ಈ ಕಾರ್ಯದಲ್ಲಿ ತೊಡಗಿವೆ.

ಇ) ವಿಜ್ಞಾನ ಶಿಕ್ಷಣ ಮತ್ತು ಸಂವಹನ:

ವಿದ್ಯಾರ್ಥಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಚಿಂತನೆಗಳನ್ನು ಬೆಳೆಸುವ ಕಾರ್ಯದಲ್ಲಿ ಅನೇಕ ಪ್ರಮುಖ ಸಂಸ್ಥೆಗಳು ಕರ್ನಾಟಕದಲ್ಲಿ ನೆಲೆಸಿವೆ. ವಿಶ್ವೇಶ್ವರಯ್ಯ ಇಂಡಸ್ಟ್ರೀಯಲ್ ಅಂಡ್ ಟೆಕ್ನಾಲಾಜಿಕಲ್, ಮ್ಯೂಸಿಯಂ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಂತ್ರಜ್ಞಾನ ವಸ್ತು ಸಂಗ್ರಹಾಲಯ ರಾಷ್ಟ್ರಮಟ್ಟದಲ್ಲಿ ಈ ನಿಟ್ಟಿನಲ್ಲಿ ಪ್ರಖ್ಯಾತವಾಗಿರುವ ಒಂದು ಕೇಂದ್ರವಾಗಿದೆ. ಇದೊಂದು ಪ್ರವಾಸಿ ಕೇಂದ್ರವೂ ಆಗಿದ್ದು, ಪ್ರತಿದಿನ ಸಾವಿರಾರು ವೀಕ್ಷಕರು ಇಲ್ಲಿಗೆ ಭೇಟಿ ನೀಡುತ್ತಾರೆ.

ಶಾಲಾಮಟ್ಟದಿಂದ ರಾಜ್ಯಮಟ್ಟದವರೆಗೂ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರದರ್ಶನಗಳನ್ನು ಇದು ಏರ್ಪಡಿಸುತ್ತದೆ. ವಿಜ್ಞಾನ ವಿಷಯ ಕುರಿತಂತೆ ಪ್ರಾತ್ಯಕ್ಷಿಕೆ, ಚರ್ಚೆ, ಉಪನ್ಯಾಸ, ವೀಕ್ಷಣೆಗಳಂತಹ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ.

ಬೆಂಗಳೂರನಲ್ಲಿರುವ ನೆಹರೂ ತಾರಾಲಯ ಇನ್ನೊಂದು ಇಂತಹ ಸಂಸ್ಥೆ, ಖಗೋಳಕಾಯಗಳ ಅದ್ಭುತ ಜಗತ್ತನ್ನು ಪರಿಚಯಿಸುವುದರೊಂದಿಗೆ, ವಿದ್ಯಾರ್ಥಿಗಳಿಗೆ ವಿಜ್ಞಾನದ ಇತರ ವಿಷಯಗಳ ಬಗೆಗೂ ಇದು ತಿಳಿವಳಿಕೆ ಮೂಡಿಸುವ ಕಾರ್ಯಗಳನ್ನು ಆಯೋಜಿಸುತ್ತದೆ.

ಇದಲ್ಲದೆ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರಾಜ್ಯಾದ್ಯಂತ ವಿಜ್ಞಾನ ಶಿಕ್ಷಣ ಕುರಿತಂತೆ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿಯೋಜಿಸುತ್ತ ಬಂದಿದೆ. ವಿಜ್ಞಾನ ಪುಸ್ತಕಗಳ ಪ್ರಕಟಣೆ,ಪತ್ರಿಕೆಗಳ ಪ್ರಕಾಶನ, ತರಬೇತಿ ಶಿಬಿರ, ಕಮ್ಮಟ, ವಿಶೇಷ ಉಪನ್ಯಾಸಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಡಾ.ಎಚ್. ನರಸಿಂಹಯ್ಯ ಅವರು ಪ್ರಾರಂಭಿಸಿದ ಬೆಂಗಳೂರು ವಿಜ್ಞಾನ ಕೇಂದ್ರ, ವಿಜ್ಞಾನ ವಿಷಯ ಕುರಿತಂತೆ ತಜ್ಞರ ಉಪನ್ಯಾಸಗಳನ್ನು ಏರ್ಪಡಿಸುತ್ತದೆ. ಪ್ರತಿವರ್ಷ ಜುಲೈ ತಿಂಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸುತ್ತದೆ.

ಈ ಮೊದಲು ದೇಶದ ವೈಜ್ಞಾನಿಕ ಚಟುವಟಿಕೆಗಳ ಕೇಂದ್ರವಾಗಿದ್ದ ಬೆಂಗಳೂರು ಈಗ ಮಾಹಿತಿ ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳ ದಿಢೀ‌ ಬೆಳವಣಿಗೆಯಿಂದಾಗಿ, ಭಾರತ ಸಿಲಿಕಾನ್ ಕಣಿವೆ ಎಂಬ ಪ್ರಖ್ಯಾತಿಯನ್ನೂ ಗಳಿಸಿದೆ. ಬಹು ರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಲ್ಲೀಗ ಭದ್ರವಾಗಿ ನೆಲೆಯೂರಿವೆ. ಜೈವಿಕ ತಂತ್ರಜ್ಞಾನ ಆಧಾರಿತ ಅನೇಕ ಕಂಪನಿಗಳು ಇಲ್ಲಿ ನೆಲೆಸಿವೆ. ಔಷಧ, ರಾಸಾಯನಿಕ ವಸ್ತು, ಸಿದ್ದ ಉಡುಪು ಮುಂತಾದ ಅನೇಕ ಉದ್ಯಮಗಳು ಇಲ್ಲಿ ನೆಲೆಸಿವೆ. ಇಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣದ ಬಹು ದೊಡ್ಡ ಕೇಂದ್ರವಾಗಿ ಬೆಂಗಳೂರು ಬೆಳೆದಿದೆ. ಮುಂಬೈ, ಭಾರತದ ವಾಣಿಜ್ಯ ನಗರ ಎನಿಸಿದಂತೆ ಬೆಂಗಳೂರು ಭಾರತದ ವಿಜ್ಞಾನ ತಂತ್ರಜ್ಞಾನ ನಗರಿ ಎನಿಸಿದೆ.

ಭವಿಷ್ಯದ ಚಿಂತನೆ:

ಜನಜೀವನದ ಪ್ರತಿಯೊಂದು ಕ್ಷೇತ್ರದ ಮೇಲೂ ಪರಿಣಾಮ ಉಂಟುಮಾಡುತ್ತಿರುವ ವೈಜ್ಞಾನಿಕ ಬೆಳವಣಿಗೆಯ ಗುರಿ, ಸದೃಢ ಸಮಾಜ ರಚನೆಯೇ ಆಗಿದೆ ಎನ್ನುವುದು ನಿರ್ವಿವಾದ. ಇದಕ್ಕೆ ಮೂಲ ಅಗತ್ಯವಾದ ಆರ್ಥಿಕಾಭಿವೃದ್ಧಿಗೆ, ವಿಜ್ಞಾನ ತಂತ್ರಜ್ಞಾನದ ಕೊಡುಗೆ ಪ್ರಶಂಸನೀಯ. 1951-56ರ ಕಾಲ ಮೊದಲ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ದೇಶದಲ್ಲಿ ಆರ್ಥಿಕ ಬೆಳವಣಿಗೆಯ ದರ ಕೇವಲ ಶೇ.2.1ರಷ್ಟಿತ್ತು. ಹತ್ತನೇ ಯೋಜನೆಯ ಅವಧಿಯಲ್ಲಿ ಇದು (2002-07) ಶೇ.8ರಷ್ಟಿತ್ತು.

ಈ ಪ್ರಮಾಣವನ್ನು ಶೇ.8.5ರಿಂದ ಶೇ.9.5ಕ್ಕೆ ಏರಿಸಲು ಉದ್ದೇಶಿಸಲಾಗಿದೆ. ಜಾಗತಿಕ ಆರ್ಥಿಕ ಹಿಂಜರಿಕೆಯ ನಡುವೆಯೂ ಭಾರತದ ಈ ಸಾಧನೆ, ಎಲ್ಲರ ಗಮನ ಸೆಳೆದಿದೆ. ಅಮೆರಿಕೆಯಂತಹ ಅಗಗಣ್ಯ ದೇಶಗಳೂ ಭಾರತದ ಈ ಸಾಧನೆಯನ್ನು ಬೆರಗುಗಣ್ಣಿನಿಂದ ನೋಡುತ್ತಿವೆ. ಎಲ್ಲ ವಲಯಗಳಲ್ಲೂ ವೈಜ್ಞಾನಿಕ ವಿಧಾನಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡರೆ, ಈ ಸಾಧನೆ ಉತ್ತುಂಗಕ್ಕೇರುವುದರಲ್ಲಿ ಅನುಮಾನವಿಲ್ಲ.

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....