Kannada essays

Incredible Role of Police Essay | ಶಾಂತಿಯುತ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ 2023

Table of Contents

ಶಾಂತಿಯುತ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ/Role of Police in building a peaceful society

Police: ಪ್ರಸ್ತುತ ಸಮಾಜ ಹೆಚ್ಚು ಕಲುಷಿತಗೊಂಡಿದೆ. ಎಲ್ಲಿ ನೋಡಿದರೂ ಅಪರಾಧಗಳ ಹೆಚ್ಚಳ, ಕೊಲೆ, ಸುಲಿಗೆ, ದರೋಡೆ ಮುಂತಾದ ಪ್ರಕರಣಗಳು ಹೆಚ್ಚುತ್ತಿದ್ದು ಸಮಾಜದಲ್ಲಿ ಹೆಚ್ಚು ಅಶಾಂತಿ ನೆಲೆಸಿದೆ. ಹಳ್ಳಿಯಿಂದ ಹಿಡಿದು ನಗರಗಳ ತನ, ಭಾರತದಿಂದ ಹಿಡಿದು ಅಮೇರಿಕಾದ ತನಕ ಕೈಂಗಳು ನಿರಂತರವಾಗಿ ಏರುತ್ತಿವೆಯೇ ಹೊರತು, ಮಾನವೀಯ ಮೌಲ್ಯಗಳುಳ್ಳ ಸಮಾಜ ಮಾತ್ರ ನಿರ್ಮಾಣವಾಗುತ್ತಿಲ್ಲ. ಎಲ್ಲಿಯವರೆಗೆ ಸಮ ಸಮಾಜದ ನಿರ್ಮಾಣ ಸಾಧ್ಯವಾಗುವುದಿಲ್ಲವೋ ಅಲ್ಲಿಯತನಕ ಅಪರಾಧಿಗಳು, ಅಪರಾಧಗಳು ಏರಿಕೆಯಾಗುತ್ತಲೇ ಇರುತ್ತಾರೆ. ಇಂತಹ ಸಂದರ್ಭ, ಸನ್ನಿವೇಶದಲ್ಲಿ ನಾಗರಿಕ ಸಮಾಜವನ್ನು ಇಂದರಿಂದ ರಕ್ಷಣೆ ಮಾಡುವ ಜವಾಬ್ದಾರಿ ಹೊತ್ತ ಪೊಲೀಸರ ಪಾತ್ರ ಅತ್ಯಂತ ಹೆಚ್ಚಿದೆ.

ಪೊಲೀಸ್/Police ಎಂಬ ಪದವು ಗ್ರೀಕ್ ಭಾಷೆಯ ‘Polis’ ಎಂಬುದರಿಂದ ಬಂದಿದೆ ಈ ಮೊದಲು ಗ್ರೀಕ್‌ನ ಸಣ್ಣಪುಟ್ಟ ರಾಷ್ಟ್ರಗಳಿಗೆ ಮಾತ್ರ ಸೀಮಿತಗೊಂಡಿದ್ದ ಈ ಪೊಲೀಸ್‌ ಪದವು ಇಂದು ವಿಶ್ವವ್ಯಾಪಿಯಾಗಿ ಹಬ್ಬಿದೆ. ಇದರ ಅರ್ಥ Public Order, Administration, Government and Civil Policy ಎಂಬುದಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಇದಕ್ಕೆ ಒಂದು ಸ್ಪಷ್ಟವಾದ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಕೊಡಲಾಗಿದ್ದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ.

police

ಭಾಗಶಃ ಇಂದು ಸಮಾಜವು ಶಾಂತ ರೀತಿಯಲ್ಲಿ ಇರಲು ಅತೀ ಮುಖ್ಯ ಕಾರಣ ನಮ್ಮ ಪೊಲೀಸ್ ಇಲಾಖೆ. ಈ ಇಲಾಖೆ ಒಂದು ಇರದಿದ್ದರೆ ನಮ್ಮ ಸಮಾಜವು ದಿಕ್ಕೆಟ್ಟು ಹೋಗುತ್ತಿತ್ತು. ಕಳ್ಳತನ, ಕೊಲೆ, ದರೋಡೆ, ಅತ್ಯಾಚಾರ, ಅಕ್ರಮ, ದೌರ್ಜನ್ಯ ಮುಂತಾದ ಅನಾಗರಿಕ ಸಮಾಜದ ವಿಲಕ್ಷಣಗಳು ಹೆಚ್ಚು ಹೆಚ್ಚು ನಡೆಯುತ್ತಿದ್ದವು. ಅಂತಹುದರಲ್ಲಿ ಅಪಾರ ಜನಸಂಖ್ಯೆ ಇರುವ ನಮ್ಮ ದೇಶದಲ್ಲಂತು ಇದು ಹೇಳಲಸಾಧ್ಯವಾಗುತ್ತಿತ್ತು. ಪೊಲೀಸ್ ಭದ್ರತೆ ಇದ್ದರೂ ಪ್ರತಿ 10 ನಿಮಿಷಕ್ಕೊಂದು ಕೊಲೆ, ಅತ್ಯಾಚಾರ, ಕಳ್ಳತನ ಪ್ರಕರಣಗಳು ದಾಖಲಾಗುತ್ತಿರುವ ನಮ್ಮ ದೇಶದಲ್ಲಿ NCRB ಹೇಳುವಂತೆ ವರ್ಷಕ್ಕೆ, ತಿಂಗಳಿಗೆ, ದಿನಕ್ಕೆ, ಲಕ್ಷಾಂತರ, ಕೋಟ್ಯಾಂತರ ಪ್ರಕರಣಗಳು ದಾಖಲಾಗುತ್ತಿದ್ದು ನ್ಯಾಯಾಂಗದಲ್ಲಿ ಪ್ರತಿ ವರ್ಷ ಒಂದು ಕೋಟಿ ಕಡತಗಳು ಇತ್ಯರ್ಥವಾಗದೆ ಕೊಳೆಯುತ್ತಿವೆ.

ಪೊಲೀಸ್‌ ವಿಭಾಗದ ಪ್ರಮುಖ ಭಾಗಗಳು/ Important parts of the Police department

ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆಯು ತನಿಖೆಗೆ ಪೂರಕವಾಗಿ ವಿಜ್ಞಾನ ಪ್ರಯೋಗಾಲಯವಿದದು. ಇದು 4 ಭಾಗಗಳನ್ನು ಒಳಗೊಂಡಿದೆ. ಅವುಗಳೆಂದರೆ ಛಾಯಾಚಿತ್ರ ವಿಭಾಗ, ಬಂದೂಕು ಪರೀಕ್ಷಾ ವಿಭಾಗ, ರಸಾಯನಿಕ ಪರೀಕ್ಷಾ ವಿಭಾಗ, ವಿವಾದಗಸ್ತ ದಾಖಲೆಗಳ ಪರೀಕ್ಷಾ ವಿಭಾಗಗಳು, ಇಷ್ಟೇ ಅಲ್ಲದೆ ವಿಶೇಷ ಘಟಕಗಳಾದ ಕನ್ನ, ಕಳವು, ಕೊಲೆ ಪ್ರಕರಣಗಳ ಶೋಧನಾದಳ, ಮೋಸ ಪ್ರಕರಣಗಳ ಪತ್ತೆದಳ, ಖೋಟಾ ನೋಟು ಮತ್ತು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಪ್ರಕರಣಗಳು, ವಿಶೇಷ ವಿಚಾರಣಾ ದಳ ಹಾಗೂ ವೈರ್‌ಸ್, ಶ್ವಾನದಳ ಹಾಗೂ ನಕ್ಸಲಿಸಂ ತಡೆ ಪಡೆಯು ಇದರಲ್ಲಿ ಸೇರಿದೆ.

ಪೊಲೀಸ್ ಇಲಾಕೆಯು ನಿರ್ವಹಿಸಬೇಕಾದ ಕರ್ತವ್ಯಗಳು ಮತ್ತು ಇಲಾಖೆಯ ಮಹತ್ವ/Duties to be performed by the Police Department and the importance of the Department

1. ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು

2. ಕೈಂ ಮತ್ತು ಅಪರಾಧಗಳನ್ನು ಸಮಾಜದಲ್ಲಿ ಹೆಚ್ಚು ನಿಯಂತ್ರಣ ಮಾಡುವುದು

3. ಸಂಚಾರ ನಿಯಂತ್ರಣ ಮತ್ತು ವಾಹನ ತಪಾಸಣೆಗಳನ್ನು ಮಾಡಿ ಸಂಚಾರವನ್ನು ನಿಯಂತ್ರಿಸುವುದು

4. ಐಪಿಸಿ ಮತ್ತು ಸಿಆರ್‌ಪಿಸಿ, ಕರ್ನಾಟಕ ಪೊಲೀಸ್/Police ಕಾಯಿದೆಗಳಲ್ಲಿ ಇರುವ ಕಾನೂನುಗಳ ಅನ್ವಯ ಕರ್ತವ್ಯವನ್ನು ನಿಯಂತ್ರಿಸುವುದು

5. ಶಾಸಕಾಂಗ, ಕಾರಾಂಗ, ನ್ಯಾಯಾಂಗ ಮುಂತಾದ ಎಲ್ಲಾ ಇಲಾಖೆಯವರಿಗೆ ಸೂಕ್ತ ಭದ್ರತೆಯನ್ನು ಒದಗಿಸಿ ಸಂವಿಧಾನವನ್ನು ರಕ್ಷಿಸುವುದು

6. ಖೋಟಾನೋಟು, ಅಕ್ರಮ ಲಾಟರಿ, ಶಸ್ತಾಸ್ತ್ರಗಳಿಗೆ ಸಂಬಂಧಿಸಿದಂತೆ ಶೋಧನೆಯನ್ನು ಕೈಗೊಂಡು ಅಪರಾಧಿಗಳನ್ನು ಪತ್ತೆಹಚ್ಚುವುದು

7. ಸಾಮಾಜಿಕ ಮಾದ್ಯಮಗಳು, ಸೈಬರ್‌ಕ್ಕೆ, ಜಾಲತಾಮಗಳಲ್ಲಿ ನಡೆಯುವ ಅಪರಾಧದ ಕುಕೃತ್ಯಗಳನ್ನು ಪತ್ತೆ ಹಚ್ಚಿ ಸಮಾಜವನ್ನು ರಕ್ಷಿಸುವುದು

8. ನಕ್ಸಲಿಸಂ, ಟೆರರಿಸಂ, ಮೂಲಭೂತವಾದ ಮುಂತಾದ ಸಮಾಜ ವಿದ್ರೋಹಿ ಸಂಘಟನೆಗಳ ಕಾರಚಟುವಟಿಕೆಯನ್ನು ಖಂಡಿಸಿ ಅಪರಾಧಿಗಳನ್ನು ಶಿಕ್ಷಿಸುವುದು

9. ಲೈಂಗಿಕ ಅಪರಾಧಗಳು, ವೇಶ್ಯಾವಾಟಿಕೆ, ಅನೈತಿಕ ಸಂಬಂಧ ಮುಂತಾದ ಅನೇಕ ವಿಷಯಗಳಲ್ಲಿ ಸಮಾಜದ ಸ್ವಾಸ್ಥ್ಯ ಕೆಡುವ ಪ್ರಸಂಗಗಳನ್ನು ನಿರ್ಮೂಲನೆ ಮಾಡುವುದು

10. ದುಷ್ಟರನ್ನು ಶಿಕ್ಷೆಯ ಮೂಲಕ ಶಿಕ್ಷಿಸುವುದು, ಶಿಷ್ಟರನ್ನು ರಕ್ಷಣೆ ಮಾಡುವುದು ಪೊಲೀಸ್/Police ಇಲಾಖೆಯ ಕರ್ತವ್ಯ ಗಳಾಗಿವೆ.

police

ಮೇಲೆ ತಿಳಿದ ಹಾಗೆ ಸಮಾಜದ ಶಾಂತಿಗೆ ಪೊಲೀಸ್‌ ಇಲಾಖೆಯು ಹಗಲಿರುಳೆನ್ನದೆ ಶ್ರಮಿಸುತ್ತಿದೆ. ಅಂತಹುದರಲ್ಲಿ ಪೊಲೀಸ್/Police ಇಲಾಖೆಯಲ್ಲಿ ಅನೇಕ ಸಮಸ್ಯೆಗಳಿವೆ. ಈ ಇಲಾಖೆಯ ನೂರಾರು ಸಮಸ್ಯೆಗಳು ರೋಗಗಳ ಗೂಡಾಗಿದೆ. ಇತ್ತೀಚೆಗೆ ಕೆಲ ದಕ್ಷ ಪೊಲೀಸ್/Police ಅಧಿಕಾರಿಗಳು ಸೇರಿದಂತೆ ಅನೇಕರು ಆತ್ಮಹತ್ಯೆ ಮಾಡಿಕೊಂಡಿರುವುದು ಈ ಇಲಾಖೆಯಲ್ಲಿನ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿದೆ. ಅಂತಹುದರಲ್ಲಿ ಇಂದು ನಮ್ಮನ್ನು ರಕ್ಷಿಸುವ ಪೊಲೀಸ್ ಇಲಾಖೆಯು ಅನುಭವಿಸುತ್ತಿರುವ ಸಮಸ್ಯೆಗಳನ್ನು ಈ ರೀತಿಯಲ್ಲಿ ಕಾಣಬಹುದಾಗಿದೆ.

ಪೊಲೀಸ್‌ ಇಲಾಖೆಯ ಸಮಸ್ಯೆಗಳು/Problems of the Police Department

1. ಪೊಲೀಸ್ ಇಲಾಖೆಯ ಮೇಲೆ ಶಾಸಕಾಂಗದ ಹಸ್ತಕ್ಷೇಪ ಹೆಚ್ಚಾಗಿದ್ದು, ಕೆಲವು ರಾಜಕಾರಣಿಗಳು ಪ್ರಭಾವಿತವಾಗಿ ಇಲಾಖೆಯ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ.

2. ನಮ್ಮ ದೇಶದಲ್ಲಿ ಜನಸಂಖ್ಯೆಗೆ ತಕ್ಕಂತೆ ಪೊಲೀಸರ ನೇಮಕವಾಗಿಲ್ಲ, ಯು.ಎನ್ ಮತ್ತು ಇಂಗ್ಲೆಂಡ್‌ನಲ್ಲಿ ಇದ್ದಂತೆ ಕಡಿಮೆ ಜನರಿಗೆ ಒಂದೇ ಪೊಲೀಸ್ ನಮ್ಮಲ್ಲಿ ಇರುವುದಿಲ್ಲ.

3. ಪೊಲೀಸ್/Police ಇಲಾಖೆಯಲ್ಲಿ ಇಂದು ಬಳಸುತ್ತಿರುವ ಅನೇಕ ಉಪಕರಣಗಳು ಶಿಥಿಲಾವಸ್ಥೆಯಲ್ಲಿದ್ದು ನೂತನ ಉಪಕರಣಗಳ ಕೊರತೆಯನ್ನು ಕಾಣುತ್ತಿದ್ದೇವೆ.

4. ಪೊಲೀಸ್/Police ಇಲಾಖೆಗೆ ಆಧುನಿಕ ತಂತ್ರಜ್ಞಾನದ ಸರಿ ಸ್ಪರ್ಶವು ಆಗಿಲ್ಲ. ಸ್ಕಾಟ್‌ಲ್ಯಾಂಟ್ ಪೊಲೀಸರಂತೆ ನಮ್ಮ ಭಾರತೀಯ ಪೊಲೀಸ್ ಸೇವೆ ವಿಶ್ವದ ಗಮನ ಸೆಳೆದಿಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮ ದೇಶದ ಪೊಲೀಸ್ ಇಲಾಖೆಯಲ್ಲಿನ ತಂತ್ರಜ್ಞಾನದ ಕೊರತೆ.

5. ಡಿ.ಎನ್.ಎ, ಆರ್.ಎನ್.ಎ ಬ್ಲಡ್‌ ಗ್ರೂಪ್‌, ಒನ್‌ ಐಡೆಂಟಿಟಿ, ಆನ್ ಲೈನ್ ಕಂಪ್ಲೆಂಟ್ ದಾಖಲಾತಿ ಮುಂತಾದ ಸೌಲಭ್ಯಗಳು ಇಲ್ಲದಿರುವುದು ಆರೋಪಿಗಳನ್ನು ಪತ್ತೆಹಚ್ಚಲು ದೀರ್ಘ ಅವಧಿಯನ್ನು ತೆಗೆದುಕೊಲ್ಲುತ್ತದೆ.

6. ಮಲ್ಲಿ ಸಮಾಜವನ್ನು ಕಾಯುವ ಪೊಲೀಸರಿಗಿಂತ ಪೊಲೀಸರನ್ನು ಕಾಯುವ ಅಧಿ ಕಾರಿಗಳೇ ಹೆಚ್ಚಾಗಿದ್ದಾರೆ. ಮೇಲಾಧಿಕಾರಿಗಳ ಕಿರುಕುಳ ಇಲಾಖೆಯನ್ನು ಹೆಚ್ಚು ಕಾಡುತ್ತಿವೆ.

7. ಪೊಲೀಸ್/Police ಇಲಾಖೆಯಲ್ಲಿ ರಜೆ ಸೌಲಭ್ಯದ್ದು ಒಂದು ದೊಡ್ಡ ಸಮಸ್ಯೆಯಾಗಿದೆ. ಕೆಳ ಅಧಿಕಾರಿಗಳಿಗೆ ಎಂತಹ ಸಂದರ್ಭ ಬಂದರೂ ರಜೆ ಕೊಡದೆ ಅವರನ್ನು ಕಾಡಿಸುತ್ತಿದ್ದು ಕೆಲ ಪೊಲೀಸ್ ಪೇದೆಗಳು ಅಧಿಕಾರಿಗಳಿಗೆ ಶೂಟ್ ಮಾಡಿದ್ದಾರೆ.

8. ಪೊಲೀಸ್/Police ಇಲಾಖೆಯನ್ನು ಹೆಚ್ಚು ಕಾಡುತ್ತಿರುವುದು ಲಂಚಕೋರ ಪ್ರಭಾವ, ಬಹುಪಾಲು ಪೊಲೀಸರು ಭ್ರಷ್ಟರು ಆಗಿದ್ದು, ಸಮಾಜವು ಇನ್ನು ಅವರಿಗಿಂತ ಹೆಚ್ಚು ಭ್ರಷ್ಟಗೊಂಡಿದೆ.

9. ಪೊಲೀಸ್/Police ಇಲಾಖೆಯವರಿಗೆ ಪ್ರವಾಸದ ಸೌಲಭ್ಯ, ಆಟೋಟಗಳಲ್ಲಿ ಪಾಲುಗೊಳ್ಳುವುದು ಮನಂರಜನಾ ಕಾಠ್ಯಕ್ರಮಗಳಲ್ಲಿ ಪಾಲುಗೊಂಡು ಖುಷಿ ಪಡಲು ಅವಕಾಶಗಳು ಕಡಿಮೆಯಾಗಿದೆ.

10. ಪೊಲೀಸ್/Police ಇಲಾಖೆಯಲ್ಲಿ ವೇತನ ತಾರತಮ್ಯವಿದ್ದು, ಒಂದು ಉತ್ತಮ ವೈಯಕ್ತಿಕ ಜೀವನವೆಂಬುದು ಈ ಇಲಾಖೆಯ ಸಿಬ್ಬಂದಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

police

ಪೊಲೀಸ್‌ ಇಲಾಖೆಯ ಸಮಸ್ಯೆ ಪರಿಹಾರ ಕ್ರಮಗಳು/Problem solving measures of the police department.

1. ಪೊಲೀಸ್ ಇಲಾಖೆಯನ್ನು ಭ್ರಷ್ಟಾಚಾರ ಮುಕ್ತ ಮತ್ತು ಲಂಚ ಮುಕ್ತವನ್ನಾಗಿಸುವುದು ಮೊದಲ ಕ್ರಮವಾಗಿದೆ

2. ಅಧಿಕಾರಗಳಲ್ಲಿರುವ ಮೇಲು – ಕೀಳು ಎಂಬ ಭಾವನೆಯನ್ನು ತೊಡೆದು ಹಾಕುವುದು.

3. ಪೊಲೀಸ್/Police ಇಲಾಖೆಗೂ ಸಂವಿಧಾನದ 19, 1, ಎ ಕಲಂನಡಿಯಲ್ಲಿ ಬರುವ ಅಭಿವ್ಯಕ್ತಿ ఎ ಸ್ವಾತಂತ್ರ್ಯನ್ನು ನೀಡುವುದು

4. ಪೊಲೀಸ್/Police ಇಲಾಖೆಯನ್ನು ಆಧುನೀಕರಣಗೊಳಿಸುವುದು ಮತ್ತು ತಾಂತ್ರಿಕ ಸ್ಪರ್ಶವನ್ನು ನೀಡುವುದು.

5. ಮು೦ದುವರಿದ ದೇಶಗಳಂತೆ ಪೊಲೀಸ್ ಇಲಾಖೆಯನ್ನು ಖಾಸಗೀಕರಣಗೊಳಿಸುವುದು

6. ಪೊಲೀಸ್/Police ಇಲಾಖೆಯ ಮೇಲಿರುವ ಸೇವೆಯ ಹೊರೆಯನ್ನು, ಭಾರವನ್ನು ತಗ್ಗಿಸುವುದು

7. ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡದಿರುವ ಹಾಗೆ ಪೊಲೀಸರಿಗೆ ಸಲಹೆ ನೀಡುವುದು

8. ಮಾನವೀಯ ಮೌಲ್ಯಗಳನ್ನು ಪೊಲೀಸ್‌ ಇಲಾಖೆಯಲ್ಲಿ ಹೆಚ್ಚು ಹೆಚ್ಚು ಬೆಳೆಸುವುದು

9. ಪೊಲೀಸ್‌/Police ಇಲಾಖೆಯವರಿಗೆ ಬೇರೆಲ್ಲ ಇಲಾಖೆಗಿಂತ ಸ್ವಲ್ಪ ಹೆಚ್ಚು ವೇತನ ನೀಡಿದರೂ ತಪ್ಪೇನಿಲ್ಲ

10. ಉತ್ತಮ ವಸತಿ ಗೃಹ, ಕ್ರೀಡಾಂಗಣ, ವಿಮೆ, ಆಹಾರ, ವಸ್ತ್ರ ಮುಂತಾದ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸುವ ಮುಖಾಂತರ ಪೊಲೀಸ್ ಇಲಾಖೆಯ ದಕ್ಷತೆಯನ್ನು ಹೆಚ್ಚಿಸುವುದು.

11, ಶಾಸಕಾಂಗ ಹಾಗೂ ಕಾರಾಂಗಗಳ ಅತಿಯಾದ ಹಸ್ತಕ್ಷೇಪವನ್ನು ತಡೆಗಟ್ಟಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು

12. ವರ್ಷದಲ್ಲಿ ಕೆಲವು ದಿನಗಳನ್ನು ಕಡ್ಡಾಯ ರಜೆಗಳನ್ನಾಗಿ ನೀಡುವುದು. ಪೈವಸಿಗೆ ಅವಕಾಶ ಮಾಡಿಕೊಡುವುದು, ವೈಯಕ್ತಿಕ ಜೀವನಕ್ಕೆ ವೃತ್ತಿ ಅಡ್ಡಿಯಾಗದಂತೆ ಕಾಪಾಡುವುದು

ಪೊಲೀಸರ ಸಮಸ್ಯೆಗಳು ಮತ್ತು ಅವುಗಳ ವಿವರಣಾ ಕ್ರಮಗಳು/The problems of the Police and their descriptive actions

1. ಶ್ರೇಣೀಕೃತ ಇಲಾಖೆ

ಬೇರೆ ಯಾವ ಇಲಾಖೆಯಲ್ಲೂ ಇಲ್ಲದಷ್ಟು ಶ್ರೇಣೀಕೃತ ವ್ಯವಸ್ಥೆ ಪೊಲೀಸ್‌/Police ಇಲಾಖೆಯಲ್ಲಿದೆ. ಲಂಚಕೋನ ಮಾದರಿಯ ಈ ವ್ಯವಸ್ಥೆಯಲ್ಲಿ ಮೇಲಧಿಕಾರಿಗಳ ಮಾತನ್ನು ಕೆಳಹಂತದಸಿಬ್ಬಂದಿ ಪಾಲಿಸಬೇಕಾದ ಅನಿವಾರ್ಯ ಇದೆ. ಈ ಶ್ರೇಣಿಯನ್ನು ಮುರಿದು ಸಮಾನಾಂತರ ವ್ಯವಸ್ಥೆ ಕಟ್ಟಬೇಕಾದ ಅಗತ್ಯವಿದೆ ಎನ್ನುವುದು ಠಾಣೆಯಲ್ಲಿ ಕೇಳಿಬರುತ್ತಿರುವ ಮತ್ತು ಡಿವೈಎಸ್ ಪಿ ಹುದ್ದೆಗಳ ಮೂಲಕವಷ್ಟೆ ಪ್ರವೇಶ ಸಿಗುವಂತಹ ದ್ವಿಗವಾಕ್ಷಿ ವ್ಯವಸ್ಥೆ ಜಾರಿಗೆ ಬರಬೇಕು.

2. ಕಾಡುವ ಖಿನ್ನತೆ

ವಾರಕ್ಕೆ ಮೂರು ದಿನಗಳ ರಾತ್ರಿ ಪಾಳಿಯಲ್ಲಿ ಕೆಲಸ, ವಿವಿಧ ಮೂಲಗಳಿಂದ ನಿರಂತರವಾಗಿ ಬೀಳುವ ಒತ್ತಡ, ಸಿಗದ ರಜೆ ಮತ್ತು ಇತರ ಕಾರಣಗಳಿಂದ ಕೆಳಹಂತದ ಸಿಬ್ಬಂದಿಯಿಂದ ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಿದ್ದಾರೆ. ಹಿಂದೆ ಮನಃಶಾಸ್ತ್ರಜ್ಞರಿಂದ ಅವರಿಗೆ ಮಾರ್ಗದರ್ಶನ ಮಾಡಿಸುವ ಕೆಲಸ ಆಗುತ್ತಿತ್ತು. ಈಗ ಅದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಕಾನ್‌ಸ್ಟೇಬಲ್‌ಗಳು ಕುಂದು ಕೊರತೆ ಹೇಳಿಕೊಳ್ಳಲು ಒಂದು ವೇದಿಕೆಯೂ ಇಲ್ಲವಾಗಿದೆ.

3. ವೇತನ ತಾರತಮ್ಯ

ಮೇಲಧಿಕಾರಿಗಳಿಗೆ ಹೋಲಿಸಿದರೆ ಕೆಳಹಂತದ ಪೊಲೀಸರಿಗೆ ನೀಡುವ ವೇತನ ಸೌಲಭ್ಯ ಅಜಗಜಾಂತರವಾಗಿದೆ. ಇದನ್ನು ವ್ಯವಸ್ಥೆ ಭಾರತದಲ್ಲಿದೆ. ಇದನ್ನು ನಾವು ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಈ ಹಿಂದೆ ಸಾಮೂಹಿಕ ರಜೆ ಘೋಷಿಸಿದ ಪೊಲೀಸರು ಹೇಳಿದೇನೆಂದರೆ ಎಲ್ಲಾ ವಸ್ತುಗಳ ಬೆಲೆಯೂ ಹೆಚ್ಚಾಗುತ್ತಿವೆ. ನಮ್ಮ ಸಂಬಳ ಮಾತ್ರ ಇಷ್ಟೇ ಇದೆ. ಇದರಿಂದ ನಾವು ಮಕ್ಕಳು ಮೂರು ಹೊತ್ತು ಊಟ ಮಾಡಬಹುದು ಹೊರತು ಈ ಆಧುನಿಕ ಪ್ರಪಂಚದಲ್ಲಿ ಸರಿದೂಗಿಸುವ ಸಂಸಾರ ನಡೆಸುವುದು ಹೇಗೆ?

4. ಆಧುನಿಕ ಶಸ್ತ್ರಾಸ್ತ್ರಗಳ ಕೊರತೆ

ಇದು ಅನೇಕ ಉಗ್ರಗಾಮಿ ಪಡೆಗಳು ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು ಅನೇಕ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿವೆ. ಆದರೆ ಇವರಿಗೆ ಅವೇ ಹಳೆಯ ಎಸ್‌ಎಲ್‌ಆರ್, ಇನ್ಸಾಟ್‌ಗಳು ಇದ್ದು, ತಂತ್ರಜ್ಞಾನದ ಮಾಹಿತಿಯಲ್ಲೂ ಯಾವುದೇ ಪ್ರಕರಣಗಳನ್ನು ಕೈಗೆತ್ತಿಕೊಂಡರೆ ಅದನ್ನು ಸಂಪೂರ್ಣಗೊಳಿಸಲು ಅನೇಕರ ಹಸ್ತಕ್ಷೇಪ.

5. ವರ್ಗಾವಣೆ

ಯಾವುದೇ ಪೊಲೀಸ್ ಥಾನೆಯಲ್ಲಿ “ಮಿನಿಟ್” ಎಂಬ ಪದ ಕೇಳಿದರೆ ಸಾಕು, ಅದು ಒಂದು ರೋಮಾಂಚಕಾರಿ ಹಾಗು ಗೊಂದಲಕಾರಿ ಅನುಭವವನ್ನು ತಂದುಕೊಳ್ಳಬಹುದು. ಹೌದು, ಮತ್ತೆ ಆಯ್ಕೆಯ ಸ್ಥಳಕ್ಕೆ ವರ್ಗವಾಗಿ ಆನಂದವನ್ನು ಕಟ್ಟುವುದು ಸಾಧ್ಯವಾಗಬಹುದು. ಆದರೆ ಈ “ಮಿನಿಟ್” ಸಂಪಾದಿಸಲು ನಾನು ಎಷ್ಟು ಖರ್ಚು ಮಾಡಿದ್ದೇನೆ ಎಂದು ಹೇಗೆ ಹೇಳಲು ಸಾಧ್ಯವಿಲ್ಲ!

ಈ ವರ್ಗಾವಣೆಯಿಂದಾಗಿ ಮಕ್ಕಳ ವಿದ್ಯಾಭ್ಯಾಸ, ಮಾನಸಿಕ ನೆಮ್ಮದಿ ಹಾಗೂ ಪರಸ್ಪರರ ಬಾಂಧವ್ಯ ಹೊಸ ಊರು ಹೀಗೆಲ್ಲಾ ಅನೇಕ ಸಮಸ್ಯೆ ತಲೆದೋರುತ್ತದೆ

6. ಸಿಬ್ಬಂದಿಗಳ ಕೊರತೆ

ಸಿಬ್ಬಂದಿಗೆ ಕೊರತೆಯಿಂದಾಗಿ ಹೆಚ್ಚುವರಿಯಾಗಿ ಇದೆ ಪೊಲೀಸಿನವರನ್ನು ಹೆಚ್ಚು ಹೆಚ್ಚಾಗಿ ಕಾರ್ಯ ನಿರ್ವಹಿಸುವಂತೆ ಆದೇಶಿಸುತ್ತಾರೆ. ವಿದೇಶಗಳಲ್ಲಿ 12 ಜನರಿಗೆ ಒಬ್ಬ ಪೊಲೀಸ್ ಕಂಡುಬಂದರೆ ಭಾರತದಲ್ಲಿ 1800 ಜನರಿಗೂ ಒಬ್ಬರಿಲ್ಲ. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅವರು ಇತ್ತೀಚೆಗೆ ಹೈಕೋರ್ಟ್‌ಗೆ ಸಲ್ಲಿಸಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ 1,07,053 ಪೊಲೀಸರು ಇರಬೇಕಿತ್ತು. ಪ್ರಸ್ತುತ 73,746 ಸಿಬ್ಬಂದಿ ಇದ್ದಾರೆ. ಇದರಲ್ಲಿ ಲಭ್ಯ ಇದ್ದವರು 71,246 ಜನ ಮಾತ್ರ, 6,11,30,704 ಜನರನ್ನು ಹೊಂದಿದ ರಾಜ್ಯರಿಗೆ ಈ ಅಂಕಿ ಸಂಖ್ಯೆ ಹೇಗೆ ಸರಿದೂಗುತ್ತದೆ.

ಟ್ರಾಫಿಕ್

ಈ ಜನಸಂಖ್ಯೆಯಯ ಸ್ಫೋಟ 125 ಕೋಟಿ ಜನ ಭಾರತದಲ್ಲಿ ಪ್ರತಿ 4 ನಿಮಿಷಕ್ಕೊಮ್ಮೆ ಒಬ್ಬರು, ದಿನವೊಂದಕ್ಕೆ 250, ವರ್ಷಕ್ಕೆ 1,50,000 ಜನ ಅಸುನೀಗುತ್ತಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ

ದೇಶದಲ್ಲಿ ಪೊಲೀಸ್‌ ವ್ಯವಸ್ಥೆ ನ್ಯಾಯನಿಷ್ಠತೆಯಿಂದ ಕೆಲಸ ಮಾಡದಿರಲು ಹಾಗೂ ಅವರನ್ನು ಬಂಧಿಸುವಂತೆ ಮಾಡಿರುವುದೇ ಈ ಹಸ್ತಕ್ಷೇಪ.

ಬಂದೋಬಸ್ತ್

ಸರ್ಕಾರ ನಮಗೆ ಅನ್ನ ನೀಡುತ್ತದೆ, ಅದಕ್ಕಾಗಿ ನಾವು ಪ್ರತಿ ದಿನವೂ ಕೆಲಸಕ್ಕೆ ಸಿದ್ಧರಿದ್ದೇವೆ, ಆದರೆ ನಾವು ಮನುಷ್ಯರೇ, ನಮ್‌ಮೂ ಮೂಲಸೌಕರ್ಯ ಬೇಕು. 20 ದಿನ ಹೊರಗಡೆ ಬಂದೋಬಸ್ತ್ಗೆ ಹೋಗುತ್ತೇವೆ. ಈ ವೇಳೆ ಹೆಂಡತಿ ಮಕ್ಕಳ ಮುಖ ನೋಡಲು ಆಗುವುದಿಲ್ಲ, ಬಂದೋಬಸ್ತ್ ವೇಳೆ ಮಲಗಲು ಜಾಗವಿರುವುದಿಲ್ಲ, ನೀರು, ಶೌಚಾಲಯದ ಸಮಸ್ಯೆಗಳು,

ಹಿರಿಯ ಅಧಿಕಾರಿಗಳ ಸೇವೆ

ಹಿರಿಯ ವಯಸ್ಸಿನವರು ಅಧಿಕಾರಿಗಳ ಸೇವೆ ಮಾಡಬೇಕು ಇಲ್ಲವಾದರೆ ಅಮಾನತು ಅವರ ವೈಯಕ್ತಿಕ ಕೆಲಸ ಮಾಡುವುದು ಒಂದು ದೊಡ್ಡ ಸಮಸ್ಯೆ. ಅಖಿಲ ಭಾರತ ಕರ್ನಾಟಕ ಪೊಲೀಸ್‌ ಮಹಾಸಂಘ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

* ಹೆಂಡತಿ, ಮಕ್ಕಳು, ಸಂಬಂಧಿಕರ ಜತೆ ಯಾವುದೇ ಹಬ್ಬ, ಹರಿದಿನ ಆಚರಿಸಲು ಸಾಧ್ಯವಿಲ್ಲ.

* ಕುಟುಂಬದವರನ್ನು ವಾರಕ್ಕೆ ಒಮ್ಮೆಯಾದರೂ ಹೊರಗಡೆ ಕರೆದುಕೊಂಡು ಹೋಗಲು ಆಗುವುದಿಲ್ಲ.

* ಮಕ್ಕಳ ಶಿಕ್ಷಣಕ್ಕೆ ಯಾವುದೇ ಸ್ಕಾಲರ್‌ಶಿಪ್ ಇಲ್ಲ, ಎಲ್ಲ ಕಡೆಯೂ ದುಡ್ಡು ಕೇಳುತ್ತಾರೆ. ಅದನ್ನು ನೀಡದಿದ್ದರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ

* 18 ಗಂಟೆಗಳ ಕಾಲ ಕೆಲಸ, ಡ್ಯೂಟಿಗೆ ಸೇರಿದ ಮೇಲಿಂದ ನಿದ್ದೆಯಿಲ್ಲಾ ಅನೇಕ ರೋಗಗಳು ಬಂದಿವೆ

* 15 – 20 ವರ್ಷ ಸೇವೆ ಸಲ್ಲಿಸಿದರೂ ಬಡ್ತಿ ಸಿಕ್ಕಿಲ್ಲ, ಸಿಗುತ್ತಿಲ್ಲ

ಪೊಲೀಸ್‌ ಸಮಸ್ಯೆಗಳ ಅಧ್ಯಯನಕ್ಕೆ ಸಮಿತಿಗಳು

1. ಧರ್ಮವೀರ ಸಮಿತಿ

ಕರ್ನಾಟಕ ರಾಜ್ಯಪಾಲರಾಗಿದ್ದ ಧರ್ಮವೀರರವರು ಇಲಾಖೆಯ ಸುಧಾರಣೆಗೆ ಆಯೋಗದ ಮೂಲಕ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ಪೊಲೀಸರ ಕೆಲಸದ ಅವಧಿ, ನೇಮಕಾತಿ ತರಬೇತಿಗೆ ಸಂಬಂಧಿಸಿದಂತೆ ಅನೇಕ ಶಿಫಾರಸುಗಳನ್ನು ಜಾರಿಗೆ ತಂದಿತು ಹಾಗೂ ಅದರಲ್ಲಿ ಆಡಳಿತ ವ್ಯವಸ್ಥೆಗೆ ಒಂದು ಆದಾಯ ಮೀಸಲಿತ್ತು.

2. ರಾಘವೇಂದ್ರ ಔರಾದ್‌ಕರ್ ಸಮಿತಿ

ಪೊಲೀಸ್ ಸಿಬ್ಬಂದಿಗಳ ಸಮಸ್ಯೆಯನ್ನು ಕುರಿತು ಅಧ್ಯಯನ ನಡೆಸಲು ತರಬೇತಿ ಮತ್ತು ನೇಮಕಾತಿ ವಿಭಾಗದ ಎಡಿಜಿಪಿ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿದೆ.

ಈ ಸಮಿತಿಯ ಶಿಫಾರಸ್ಸುಗಳು
ಎ. ಎಲ್ಲಾ ಪೊಲೀಸರಿಗೂ ಉತ್ಕೃಷ್ಟ ವಸತಿ ಗೃಹಗಳು ನೀಡುವುದು

ಬಿ. ಸಮಸ್ಯೆಗಳ ಕುರಿತು ಸಚಿವರೊಂದಿಗೆ ಚರ್ಚಿಸಲು ಅವಕಾಶ ಮಾಡಿಕೊಡುವುದು

c. ಯೋಗ ಧ್ಯಾನದ ಕೇಂದ್ರ ತೆರೆಯಲು ಚಿಂತನೆ ನಡೆಸಿದೆ

d. ಸಂಬಳ ಹೆಚ್ಚಳ ಮಾಡುವುದು, ವೇತನ ತಾರತಮ್ಯ ಹೋಗಲಾಡಿಸುವುದು

ಇ. ವಾರದಲ್ಲಿ ಒಂದು ದಿನ ರಜೆಯನ್ನು ಕಡ್ಡಾಯವಾಗಿ ನೀಡುವುದು

ಎಫ್. ಸಮಸ್ಯೆಗಳಿಗೆ ಶಿಷ್ಟ ಪರಿಹಾರವನ್ನು ಕಂಡುಕೊಳ್ಳುವುದು

3. ಪದ್ಮನಾಭಯ್ಯ ಸಮಿತಿ

ಪೊಲೀಸ್‌ ಸುಧಾರಣಾ ಸಮಿತಿ ಪದ್ಮನಾಭಯ್ಯನವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದ್ದು ಪೊಲೀಸರ ಗುಣಮಟ್ಟವನ್ನು ಹೆಚ್ಚಿಸಲು ಇದು ಕ್ರಮ ಕೈಗೊಳ್ಳುವಂತೆ ಸಲಹೆಗಳನ್ನು ನೀಡಿದೆ.

ಪೊಲೀಸರ ಸುಧಾರಣೆ ವ್ಯವಸ್ಥೆಗೆ – ಸಮಸ್ಯೆಗಳ ಬಗೆಹರಿಯುವಿಕೆಗೆ ಸುಪ್ರೀಂಕೋರ್ಟ್ ನಿರ್ದೇಶನ

1. ಪೊಲೀಸರ ಮೇಲೆ ಅನಗತ್ಯ ಒತ್ತಡ ಅಥವಾ ಪ್ರಭಾವ ಬೀರದಿರುವುದನ್ನು ಖಾತರಪಡಿಸಲು ಪೊಲೀಸರ ಕಾರ್ಯನಿರ್ವಹಣೆಯು ಮೌಲ್ಯಮಾಪನ ಮಾಡಬೇಕು ಮತ್ತು ನೀತಿ ನಿರೂಪಗಳಿಗೆ ಅಗತ್ಯವಿರುವ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವುದಕ್ಕಾಗಿ ರಾಜ್ಯ ಭದ್ರತಾ ಆಯೋಗ ರಚಿಸಬೇಕು.

2. ಪೊಲೀಸ್‌ ಮಹಾ ನಿರ್ದೆಶಕರನ್ನು, ಅರ್ಹತೆಯ ಆಧಾರವಾಗಿಟ್ಟುಕೊಂಡು ಪಾರದರ್ಶಕ ಪ್ರಕ್ರಿಯೆಯಲ್ಲಿ ಆಯ್ಕೆ ಮಾಡಬೇಕು. ಕನಿಷ್ಟ ಎರಡು ವರ್ಷಗಳ ಸೇವಾವಧಿಯನ್ನು ಖಾತರಿಪಡಿಸಬೇಕು.

3. ಪೊಲೀಸ್ ಸಿಬ್ಬಂದಿ ಮಂಡಳಿಯನ್ನು ಸ್ಥಾಪಿಸಬೇಕು, ಇದು ಎಲ್ಲಾ ಡಿವೈಎಸ್‌ ಪಿ ಕೆಳಹಂತದ ನಾಯಕರ ನಿಯುಕ್ತಿ, ವರ್ಗಾವಣೆ, ಬಡ್ತಿ ಮುಂತಾದವುಗಲನ್ನು ನಿರ್ಧರಿಸಬೇಕು

4. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸ್ವತಂತ್ರ ಪೊಲೀಸ್ ದೂರು ಪ್ರಾಧಿಕಾರವನ್ನು ಸ್ಥಾಪಿಸಬೇಕು. ಇದು ಪೊಲೀಸರ ದುರ್ವತ್ರನೆ, ಅಧಿಕಾರ ದುರುಪಯೋಗ, ಲಾಕಪ್ ಸಾವು ಇತ್ಯಾದಿಗಳ ಕುರಿತು ಸಾರ್ವಜನಿಕರ ದೂರುಗಳನ್ನು ಪರಿಶೀಲಿಸಬೇಕು.

ಪೊಲೀಸ್‌ ವ್ಯವಸ್ಥೆ ಸಾಗಿ ಬಂದ ಹಾದಿ

1. 1855 ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಮೂವರ ಸದಸ್ಯರ ತನಿಖಾ ಆಯೋಗ

2. 1860 ದೇಶದ ಮೊದಲ ಪೊಲೀಸ್‌ ಆಯೋಗ ರಚನೆ

3. 1902 ಎರಡನೇ ಪೊಲೀಸ್ ಆಯೋಗ

4. 1971 ಪೊಲೀಸರ ತರಬೇತಿಯ ವ್ಯವಸ್ಥೆಯ ಸುಧಾರಣೆ

5. 1998 ರಾಷ್ಟ್ರೀಯ ಪೊಲೀಸ್ ಆಯೋಗ

6. 2006 ಹೊಸ ಪೊಲೀಸ್ ಕಾಯ್ದೆಯನ್ನು ರೂಪಿಸಿತು

ರಾಜ್ಯದಲ್ಲಿ ಪೊಲೀಸ್ ಆತ್ಮಹತ್ಯಾ ಪ್ರಕರಣಗಳು

2004 – 2013ರ ತನಕ 122 ವರದಿಗಳು

2012 – 13ರಲ್ಲಿ 214 ಜನ

2013 – 14ರಲ್ಲಿ 235 ಜನ

2014 – 15ರಲ್ಲಿ 165 ಜನ

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....