Kannada essays

Vibrant Regional Parties in India Essay 2023 ಭಾರತದ ರಾಜಕೀಯದಲ್ಲಿ ಪ್ರಾದೇಶಿಕ ಪಕ್ಷಗಳ ಪಾತ್ರ | Celebrating Diversity And Unity

Table of Contents

ಭಾರತದ ರಾಜಕೀಯದಲ್ಲಿ ಪ್ರಾದೇಶಿಕ ಪಕ್ಷಗಳ ಪಾತ್ರ [Role of Regional Parties]

Regional Parties: ಸಾಮಾನ್ಯಾಗಿ ಒಂದು ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ತನ್ನ ಕಾರ ಚಟುವಟಿಕೆಗಳನ್ನು ಸೀಮಿತಗೊಳಿಸುವ ಪಕ್ಷವನ್ನು ಪ್ರಾದೇಶಿಕ ಪಕ್ಷ ಎಂದು ಕರೆಯಬಹುದಾಗಿದೆ. ಪ್ರಾದೇಶಿಕ ಪಕ್ಷಗಳು ಪ್ರಾದೇಶಿಕ ಹಿತಾಸಕ್ತಿ ರಕ್ಷಣೆಯ ಉದ್ದೇಶದಿಂದ ಸ್ಥಾಪಿಸಲ್ಪಟ್ಟಿರುತ್ತವೆ. ಅಂದರೆ ಒಂದು ನಿರ್ದಿಷ್ಟರಾಜ್ಯದ ಭಾಷೆ, ಜನಾಂಗ, ಧರ್ಮ ಹಾಗೂ ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳಾದ ನೆಲ, ಜಲ, ಅರಣ್ಯ ಸಂಪತ್ತು ಮುಂತಾದವುಗಳ ರಕ್ಷಣೆಗಾಗಿ ಸ್ಥಾಪಿಸಲ್ಪಟ್ಟಿರುತ್ತವೆ. ಈ ಬಗೆಯ ಪಕ್ಷಗಳು ರಾಷ್ಟ್ರೀಯ ಹಿತಾಸಕ್ತಿಗಿಂತ ಪ್ರಾದೇಶಿಕ ಹಿತಾಸಕ್ತಿಗೆ ಪ್ರಾಧಾನ್ಯತೆ ನೀಡುತ್ತವೆ.

”ದೇಶದ ವಿವಿಧ ಭಾಗಗಳಲ್ಲಿ ಉಂಟಾಗಿರುವ ಆರ್ಥಿಕ ಮತ್ತು ಸಾಮಾಜಿಕ ಅಸಮತೋಲನ, ಹಿಂದುಳಿದ ಪ್ರದೇಶಗಳ ಜನರಲ್ಲಿ ಮೂಡಿರುವ ಅರಿವು, ರಾಜಕಾರಣಿಗಳ ಸ್ವಾರ್ಥ ಮನೋಭಾವನೆ ಹಾಗೂ ಭಾಷಾವಾರು ರಾಜ್ಯಗಳ ರಚನೆ ಇವುಗಳು ಪ್ರಾದೇಶಿಕ ಪಕ್ಷಗಳ ಉಗಮಕ್ಕೆ ಕಾರಣಗಳೆಂದು ಹೇಳಬಹುದಾಗಿದೆ.

Reasons for creating Regional Parties/ಪ್ರಾದೇಶಿಕ ಪಕ್ಷಗಳ ರಚನೆಗೆ ಕಾರಣಗಳು

1. ಪ್ರಾದೇಶಿಕ ಭಾವನೆ :

ಒಂದು ಪ್ರದೇಶದ ಅಥವಾ ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರಸರ್ಕಾರ ವಿಫಲವಾದಾಗ ಪ್ರಾದೇಶಿಕ ಪಕ್ಷ ರಚನೆಯಾಗಬಹುದು. ಪ್ರತ್ಯೇಕ ರಾಜ್ಯ ರಚನೆಗೆ ಪ್ರಾದೇಶಿಕ ಪಕ್ಷಗಳು ರಚಿಸಲ್ಪಡಬಹುದು. ಪ್ರಾದೇಶಿಕ ಸ್ವಾಯತ್ತತೆಯನ್ನು ಪ್ರತಿಪಾದಿಸುವ ಉದ್ದೇಶದಿಂದಲೂ ಕೆಲವು ಪ್ರಾದೇಶಿಕ ಪಕ್ಷಗಳು ಉದಯಿಸಬಹುದು. ಧರ್ಮ ಮತ್ತು ಸಂಸ್ಕೃತಿಗಳ ರಕ್ಷಣೆಗಾಗಿಯೂ ಪ್ರಾದೇಶಿಕ ಪಕ್ಷಗಳು ತಲೆಯೆತ್ತಬಹುದು.

2. ಪ್ರಜಾಸತ್ತಾತ್ಮಕ ಸರ್ಕಾರ ಪದ್ಧತಿ :

ಭಾರತದಂತಹ ಪ್ರಜಾಸತ್ತಾತ್ಮಕ ರಾಷ್ಟ್ರವು ಚುನಾವಣೆಯಲ್ಲಿ ಸ್ಪರ್ಧಿಸುವ ಸ್ವಾತಂತ್ರ್ಯ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ, ಸಂಘ ಸಂಸ್ಥೆಗಳನ್ನು ರಚಿಸುವ ಸ್ವಾತಂತ್ರ್ಯ ಮುಂತಾದ ಮೂಲಭೂತ ಹಾಗೂ 6 ರಾಜಕೀಯ ಹಕ್ಕುಗಳನ್ನು ನೀಡಿದೆ. ಇದು ರಾಜಕೀಯ ಪ್ರಜ್ಞೆಯುಳ್ಳ ಜನರಲ್ಲಿ ವಿವಿಧ ಪ್ರದೇಶದ ಹಿತಾಸಕ್ತಿಗಳನ್ನು ರಕ್ಷಿಸಲು ಪ್ರಾದೇಶಿಕ ಪಕ್ಷಗಳನ್ನು ರೂಪಿಸುವಂತೆ ಪ್ರೇರೇಪಿಸುತ್ತದೆ.

3. ಜನರ ಹಿತಾಸಕ್ತಿ ರಕ್ಷಿಸುವುದು :

ಸ್ವಾತಂತ್ರ್ಯ ವಾದ ನಂತರ ದೀರ್ಘಕಾಲದವರೆಗೆ ರಾಜಕೀಯ ಅಧಿಕಾರವನ್ನು ತನ್ನಲ್ಲೇ ಕೇಂದ್ರೀಕರಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷವು ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಶೋಷಣೆಯಿಂದ ಮುಕ್ತಿಗೊಳಿಸುವಲ್ಲಿ ವಿಫಲವಾಯಿತು.

ಆದ್ದರಿಂದ 1960ರ ದಶಕದಲ್ಲಿ ಮಧ್ಯಮ ಹಾಗೂ ಸಣ್ಣ ರೈತರು ತಮ್ಮ ಹಿತಾಸಕ್ತಿಗಳ ರಕ್ಷಣೆಗಾಗಿ ಹೋರಾಡಲು ಸಂಘಟಿತರಾದರು. ಸಾಮಾನ್ಯ ರೈತರ ಪರವಾಗಿ ಹೋರಾಡಲು ಕೆಲವು ನಾಯಕರು ಪ್ರಾದೇಶಿಕ ಪಕ್ಷಗಳನ್ನು ಕಟ್ಟಿದರು. ಕರ್ನಾಟಕ ರಾಜ್ಯ ರೈತ ಸಂಘ, ಮಹಾರಾಷ್ಟ್ರದ ರೈತ ಮತ್ತು ಕಾರ್ಮಿಕ ಪಕ್ಷ ಬಿಹಾರದ ಜನಕ್ರಾಂತಿಗಳನ್ನು ಉದಾಹರಿಸಬಹುದು.

4. ಕಾಂಗ್ರೆಸ್‌ನ ಪ್ರಾಬಲ್ಯ :

1967ರ ವರೆಗೆ ಕೇಂದ್ರದಲ್ಲಿ ಹಾಗೂ ಎಲ್ಲ ರಾಜ್ಯಗಳಲ್ಲಿ ಅಧಿ ಕಾರದಲ್ಲಿರುವುದರ ಮೂಲಕ ಕಾಂಗ್ರೆಸ್ ಪಕ್ಷವು ಅತ್ಯಂತ ದೀರ್ಘಕಾಲದವರೆಗೆ ಏಕ ಪಕ್ಷ ಪ್ರಾಬಲ್ಯವನ್ನು ಸ್ಥಾಪಿಸಿತ್ತು. ಆದರೆ ಕಾಂಗ್ರೆಸ್ ಪಕ್ಷವು ರಾಜ್ಯಗಳ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಒದಗಿಸಲಿಲ್ಲ. ರಾಜ್ಯಗಳ ಅಗತ್ಯಗಳಿಗೆ ಸಮರ್ಪಕವಾಗಿ ಸ್ಪಂದಿಸಲಿಲ್ಲ.

ಅಲ್ಲದೆ ಕಾಂಗ್ರೆಸ್ ಪಕ್ಷವು ಸರ್ವಾಧಿಕಾರಿಯಂತೆ ವರ್ತಿಸತೊಡಗಿತು. ಇದಕ್ಕೆ ಪ್ರತಿಕ್ರಿಯೆಯಾಗಿ 1967ರ ನಂತರ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ತಲೆಯೆತ್ತಲಾರಂಭಿಸಿದವು. ಅಲ್ಲದೆ ಭಾರತದ ಸಂವಿಧಾನವು ಕೇಂದ್ರಕ್ಕೆ ಹೆಚ್ಚು ಅಧಿ ಕಾರಗಳನ್ನು ನೀಡುವುದರ ಮುಖಾಂತರ ರಾಜ್ಯದ ಸ್ವಾಯತ್ತತೆಗೆ ಪಟ್ಟು ನೀಡಿದವು. ಹಾಗಾಗಿ ಕೆಲವು ಪ್ರಾದೇಶಿಕ ಪಕ್ಷಗಳು ರಚನೆಯಾದವು.

Regional Parties/ಪ್ರಾದೇಶಿಕ ಪಕ್ಷದ ಲಕ್ಷಣಗಳು

1. ವ್ಯಾಪ್ತಿ ಅತ್ಯಂತ ಸೀಮಿತವಾದುದು :

ಪ್ರಾದೇಶಿಕ ಪಕ್ಷಗಳ ರಾಜಕೀಯ ಚಟುವಟಿಕೆಗಳು ಒಂದು ರಾಜ್ಯಕ್ಕೆ ಅಥವಾ ಒಂದು ಪ್ರದೇಶಕ್ಕೆ ಸೀಮಿತವಾಗಿರುತ್ತವೆ. ಕರ್ನಾಟಕ ರಾಜ್ಯ ರೈತ ಸಂಘ, ಸರ್ವೋದಯ ಪಕ್ಷಗಳ ಚಟುವಟಿಕೆಗಳು ನಮ್ಮರಾಜ್ಯಕ್ಕೆ ಮಾತ್ರ ಸೀಮಿತವಾಗಿವೆ. ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ಈ ಪ್ರಾದೇಶಿಕ ಪಕ್ಷಗಳು ರಾಜ್ಯದ ಗಡಿಯನ್ನು ಮೀರಿ ಬೆಳೆಯುತ್ತಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.

2. ಕೇಂದ್ರಸರ್ಕಾರದ ರಚನೆಯಲ್ಲಿ ಪಾಲುದಾರಿಕೆ :

ಪ್ರಾದೇಶಿಕ ಪಕ್ಷಗಳು ತಮ್ಮ ಸಂತ ಬಲದ ಮೇಲೆ ಕೇಂದ್ರದಲ್ಲಿ ಸರ್ಕಾರವನ್ನು ರಚಿಸುವ ಪ್ರಾಬಲ್ಯ ಹೊಂದಿಲ್ಲ. ಆದರೆ ರಾಷ್ಟ್ರೀಯ ಪಕ್ಷಗಳ ಜೊತೆ ಚುನಾವಣಾ ಮೈತ್ರಿಯನ್ನು ಏರ್ಪಡಿಸಿಕೊಂಡು ಕೇಂದ್ರಸರ್ಕಾರದ ರಚನೆಯಲ್ಲಿ ಬಾಗಿಯಾಗುತ್ತವೆ. ಯುಪಿಎ ಮತ್ತು ಎನ್‌ಡಿಎಗಳು ಇದೇ ಆದಾರದ ಮೇಲೆ ಸರ್ಕಾರ ರಚಿಸುತ್ತವೆ. ಅದರಲ್ಲಿ ಕಾಂಗ್ರೆಸ್‌ಗೆ ಟಿಎಂಸಿ, ಎಡಪಕ್ಷಗಳು, ಡಿಎಂಕೆ ಸಹಕಾರ ನೀಡಿದರೆ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಶಿವಸೇನಾ, ಅಕಾಲಿದಳ ಅದರಲ್ಲೂ ಟಿಡಿಪಿ ಸ್ಪಂದಿಸುತ್ತಿವೆ.

3. ಜಾತಿ ಮತ್ತು ರಾಜ್ಯ ರಾಜಕರಾಣ :

ಈಶಾನ್ಯ ರಾಜ್ಯಗಳಲ್ಲಿರುವ ಕೆಲವು ಅಸ್ತಿತ್ವದ ಪಕ್ಷಗಳು ನಿರ್ದಿಷ್ಟ ಜನಸಮುದಾಯವನ್ನು ಪ್ರತಿನಿಧಿಸುತ್ತವೆ. ಉದಾಹರಣೆ ಮಿಝೇ ನ್ಯಾಷನಲ್ ಫ್ರೆಂಟ್ ಮೀರೋ ಜನಾಂಗವನ್ನು ಹಾಗೂ ನಾಗಾ ಸಮುದಾಯವನ್ನು ಕೆಲವೊಂದು ಪ್ರತಿನಿಧಿಯ ಮೂಲಕ ಪ್ರಾದೇಶಿಕ ಪಕ್ಷದ ಜಾತಿ ರಾಜಕಾರಣವನ್ನು ಎತ್ತಿ ಹಿಡಿಯುತ್ತದೆ. ಆದರೆ ಇತ್ತೀಚಿನ ಕೆಲವು ರಾಷ್ಟ್ರಪಕ್ಷಗಳು ಸಹ ಜಾತಿ ರಾಜಕಾರಣ ಮಾಡುತ್ತಿರುವುದು ಈ ದೇಶದ ಅನಭಿವೃದ್ಧಿಗೆ ಸಾಕ್ಷಿಯಾಗಿದೆ.

4. ಪ್ರಾದೇಶಿಕತೆಗೆ ಹೋರಾಟ :

ಎಲ್ಲಾ ಪ್ರಾದೇಶಿಕ ಪಕ್ಷಗಳು ರಾಜ್ಯದ ಸ್ವಾಯತ್ತತೆಗಾಗಿ ಹೋರಾಟ ನಡೆಸುತ್ತವೆ. ಅದರಲ್ಲೂ ಟಿಡಿಪಿ, ಡಿಎಂಕೆ, ಅಸ್ಸಾಂ ಗಣ ಪರಿಷತ್ ರಾಜ್ಯಗಳಲ್ಲಂತೂ ಈ ಪಕ್ಷಗಳು ಅಪ್ರತಿಮ ಪ್ರಬಲವಾಗಿ ಪ್ರತಿನಿಧಿಸುತ್ತವೆ. ಅಕಾಲಿದಳವು 1972ರಲ್ಲಿ ಆನಂದಪುರ್ ಸಾಹಿಬ್ ನಿರ್ಣಯವನ್ನು ಅಂಗೀಕರಿಸುವುದರ ಮೂಲಕ ರಾಜ್ಯಗಳ ಸ್ವಾಯತ್ತತೆಗಾಗಿ ಒತ್ತಾಯಿಸಿದ್ದ ಘಟನೆಯನ್ನು ನಾವು ನೆನೆಯಬಹುದು.
ಪ್ರಾದೇಶಿಕ ಪಕ್ಷಗಳು ಪ್ರತಿಪಾದಿಸುವ ಅಝಂಡಾವೇ ಆ ರಾಜ್ಯದ ಪ್ರಾದೇಶಿಕ ನೆಲ, ಜಲ, ಭಾಷೆ ಹಾಗೂ ಗಡಿ.

5. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಾತ್ರ :

ಕೆಲವು ಪ್ರಾದೇಶಿಕ ಪಕ್ಷ ಸಂಸತ್ತಿನ ಚುನಾವಣೆಯಲ್ಲಿ ಭಾಗವಹಿಸುವುದಲ್ಲದೆ, ಯಾವುದೇ ಪಕ್ಷವು ಬಹುಮತ ಪಡೆಯುವಲ್ಲಿ ವಿಫಲವಾದಾಗ, ಸರಕಾರದ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಉದಾ: 2004ರ ಲೋಕಸಭಾ ಚುನಾವಣೆಯಲ್ಲಿ ತೆಲುಗು ದೇಶಂ, ಡಿಎಂಕೆ, ಎಐಎಡಿಎಂಕೆ, ಟಿಆರ್ ಎಸ್, ಆರ್ ಜೆಡಿ ಮುಂತಾದ ಪ್ರಾದೇಶಿಕ ಪಕ್ಷಗಳು ಸರ್ಧಿಸಿದವು. ಕೆಲವು ಮಸೂದೆಗಳು ಪಾಸ್ ಆಗಲು ಅರ್ಧಕ್ಕಿಂತ ಹೆಚ್ಚು ರಾಜ್ಯಗಳ ಅನುಮತಿ ಅಗತ್ಯ. ಆದ್ದರಿಂದ ಪ್ರಾದೇಶಿಕ ಪಕ್ಷಗಳ ಪ್ರಭಾವ ಹೆಚ್ಚಾಗಿರುವುದನ್ನು ಗುರ್ತಿಸಬಹುದು.

6. ಪಕ್ಷಾಂತರ ನಿಷೇಧ ಕಾನೂನು ಮತ್ತು ಪಿಡುಗು :

ಪ್ರಾದೇಶಿಕ ಪಕ್ಷಗಳು ಕೂಡ ಗುಂಪುಗಾರಿಕೆ ಮತ್ತು ಪಕ್ಷಾಂತರ ಚಟುವಟಿಕೆಗಳಿಂದ ಮುಕ್ತವಾಗಿಲ್ಲ. ಇದು ರಾಜ್ಯ ರಾಜಕಾರಣದಲ್ಲಿ ಒಮ್ಮೊಮ್ಮೆ ರಾಜಕೀಯ ಅಸ್ಥಿರತೆಯನ್ನು ಮೂಡಿಸುತ್ತದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೆಲವು ಪಕ್ಷದ ವ್ಯಕ್ತಿಗಳು ಪಕ್ಷಾಂತರಗೊಂಡು ರಾಜಕೀಯ ಅರಾಜಕತೆ ಉಂಟಾಗಲು ಕಾರಣವಾದದ್ದನ್ನು ಕಾಣಬಹುದು. ಉದಾ: ರಾಜ್ಯದ ಬಾಬಾಗೌಡ ಪಾಟೀಲ ಮತ್ತು ಮಹಾರಾಷ್ಟ್ರದ ನಾರಾಯಣ ರಾಣೆ.

ಭಾರತದ ಪ್ರಮುಖ ಪ್ರಾದೇಶಿಕ ಪಕ್ಷಗಳು/ Regional Parties

1. ಶಿರೋಮಣಿ ಕಾಲಿದಳ ಪಂಜಾಬ್ Regional Parties:

ಸಿಖ್ ಗುರುದ್ವಾರಗಳ ಸುಧಾರಣೆಗಾಗಿ ಧಾರ್ಮಿಕ ಸಂಘಟನೆಯಾಗಿ ಅಸ್ತಿತ್ವಕ್ಕೆ ಬಂದ ಅಕಾಲಿದವಳವು ಚಳವಳಿ ಹಾಗೂ ಚುನಾವಣಾ ತಂತ್ರಗಳ ಮೂಲಕ ಒಂದು ಪ್ರಬಲವಾದ ರಾಜಕೀಯ ಪಕ್ಷವಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಯಿತು. 1977ರಲ್ಲಿ ಅಕಾಲಿದಳವು ಜನತಾಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ರಚಿಸಿತು. ಅಕಾಲಿದಳವು 1985ರಲ್ಲಿ ಸುರ್ಜಿತ್ ಸಿಂಗ್ ಬರ್ನಾಲ್ ನೇತೃತ್ವದಲ್ಲಿ ಸರ್ಕಾರವನ್ನು ರಚಿಸಿತು. ಆನಂದಪುರ ಸಾಹೇಬ್ ನಿರ್ಣಯವನ್ನು ಅಂಗೀಕರಿಸುವುದರ ಮೂಲಕ ರಾಜ್ಯಗಳ ಸ್ವಾಯತ್ತತೆಗೆ ಒತ್ತಾಯಿಸಿದ್ದನ್ನು ಸರಿಸಬಹುದು.

2. ದ್ರಾವಿಡ ಮುನ್ನೇತ್ರ ಕಜಗಂ Regional Parties :

ಇ.ವಿ. ರಾಮಸ್ವಾಮಿ ನಾಯ್ಕರ್ ರ ನೇತೃತ್ವದಲ್ಲಿ ಮದ್ರಾಸಿನಲ್ಲಿ ಉದಯವಾದ ಪಕ್ಷ ಇದಾಗಿದ್ದು ಇದು ಪ್ರತ್ಯೇಕ ದ್ರಾವಿಡ ರಾಜ್ಯದ ಬೇಡಿಕೆಯನ್ನು ಕೇಂದ್ರಸರ್ಕಾರದ ಮುಂದಿಟ್ಟಿತು. ರಾಮಸ್ವಾಮಿ ನಾಯ್ಕ‌ ಮತ್ತು ಸಿ.ಎನ್. ಅಣ್ಣಾದೊರೈ ನಡುವಣ ಒಡಕಿನಿಂದಾಗಿ 1948ರಲ್ಲಿದ್ರಾವಿಡ ಕಜಗಂ ಪಕ್ಷವು ಒಡೆದು ದ್ರಾವಿಡ ಮುನ್ನೇತ್ರ ಕಜಗಂ ಅಸಿತಕ್ಕೆ ಬಂದಿತು.

ಅಣ್ಣಾದೊರೈ ನೇತೃತ್ವದಲ್ಲಿ 1967ರಲ್ಲಿ 139 ಸ್ಥಾನಗಳನ್ನು ಗಳಿಸಿ ಮೊದಲ ಬಾರಿಗೆ ಮದ್ರಾಸ್‌ನಲ್ಲಿ ಅಧಿಕಾರಕ್ಕೆ ಬಂತು. ನತರ ಡಿಎಂಕೆಯು ಎಂ. ಕರುಣಾನಿಧಿಯವರಿಗೆ ಹಸ್ತಾಂತರವಾಗಿ 197 ಹಾಗೂ 1989ರಲ್ಲಿ ಸರ್ಕಾರವನ್ನು ರಚಿಸಿತು. ತಮಿಳರ ಹಿತಾಸಕ್ತಿ ರಕ್ಷಣೆ, ಹಿಂದಿ ಭಾಷೆ ಕಡ್ಡಾಯ ವಿರೋಧ ಇವು ಇದರ ಮೂಲ ತತ್ವಗಳಾಗಿವೆ.

3. ಶಿವಸೇನೆ Regional Parties:

1966ರಲ್ಲಿ ಬಾಳಾ ಠಾಕ್ರೆ ನೇತೃತ್ವದಲ್ಲಿ ಈ ಪಕ್ಷವು ಅಸ್ತಿತ್ವಕ್ಕೆ ಬಂದಿತು. ಈ ಪಕ್ಷದ ತತ್ವ ಸಿದ್ಧಾಂತಗಳು ನಾಯಕ ಶಿವಾಜಿ ಛತ್ರಪತಿಯ ವ್ಯಕ್ತಿತ್ವದಿಂದ ಪ್ರಭಾವಿತವಾಗಿದೆ. ಉತ್ತರ ಭಾರತೀಯರು ಮುಂಬೈ ನಗರಕ್ಕೆ ವಲಸೆ ಬರುವುದನ್ನು ವಿರೋಧಿಸುತ್ತದೆ.

ಹಿಂದುತ್ವ ರಕ್ಷಣೆಗಾಗಿ ಹೋರಾಡುತ್ತಿರುವುದಾಗಿ ಘೋಷಿಸಿಕೊಲಳುತ್ತ ಮರಾಠಿಗರಿಗೆ ಶೇ. 80 ಉದ್ಯೋಗಗಳು ಬೇಕೆಂದು ಆಗ್ರಹಿಸುತ್ತದೆ. ಇದು ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದೊಂದಿಗೆ ಅಧಿಕಾರ ಹಂಚಿಕೆ ಮಾಡಿಕೊಳ್ಳುತ್ತದೆ. 1996, 1998, 1999 ಮತ್ತು 2004 ರ ಸರಳ ಚುನಾವಣೆಗಳಲ್ಲಿ, ಈ ಪಕ್ಷವು ಬಿಜೆಪಿಯೊಂದಿಗೆ ಚುನಾವಣಾ ಮೈತ್ರಿಯನ್ನು ಏರ್ಪಡಿಸಿಕೊಂಡಿದೆ

4. ತೆಲುಗು ದೇಶಂ Regional Parties:

1982ರಲ್ಲಿ ಖ್ಯಾತ ನಟ ಎನ್.ಟಿ. ರಾಮರಾವ್‌ ರವರು ಆಂಧ್ರಪ್ರದೇಶದಲ್ಲಿ ಈ ಪಕ್ಷವನ್ನು ಸ್ಥಾಪಿಸಿದರು. ಕಾಂಗ್ರೆಸ್ ಪಕ್ಷದ ದಬ್ಬಾಳಿಕೆ, ರಾಜ್ಯ ರಾಜಕಾರಣದಲ್ಲಿ ಮಧ್ಯಪ್ರವೇಶ ಮುಂತಾದ ಪ್ರವೃತ್ತಿಗಳಿಗೆ ಪ್ರತಿಕ್ರಿಯೆಯಾಗಿ ಅಸ್ತಿತಕ್ಕೆ ಬಂದಿತು. ಪಕ್ಷಸ್ಥಾಪನೆಯಾದ ಆರು ತಿಂಗಳಲ್ಲಿ ಅಧಿಕಾರಕ್ಕೆ ಬಂದ ಪಕ್ಷ ಇದಾಗಿದ್ದು ಬಡವರ ಪರವಾಗಿ ಅನೇಕ ಕಾರಕ್ರಮಗಳನ್ನು ಜಾರಿಗೆ ತಂದಿತು. 1983, 1985ರಲ್ಲಿ ಸರ್ಕಾರ ರಚಿಸಿದ ಈ ಪಕ್ಷವು 1989ರಲ್ಲಿ ಸೋಲು ಕಂಡಿತ್ತು. ತದನಂತರ 1994ರಲ್ಲಿ ಅಧಿಕಾರ ರಚಿಸಿತು. ವಿ.ಪಿ. ಸಿಂಗ್ ನೇತೃತ್ವದಲ್ಲಿ ಎನ್.ಟಿ. ಆರ್ ರಾಷ್ಟ್ರೀಯ ರಂಗದ ಅಧ್ಯಕ್ಷರಾಗಿದ್ದರು. ದೇವೇಗೌಡ ಮತ್ತು ಐ.ಕೆ. ಗುಜ್ರಾಲ್ ಸರ್ಕಾರದಲ್ಲಿ ಚಂದ್ರಬಾಬು ನಾಯ್ಡು ಕಿಂಗ್‌ಮೇಕರ್ ಆಗಿದ್ದರು.

5. ಟಿ.ಆರ್.ಎಸ್ ತೆಲಂಗಾಣ Regional Parties:

ರಾಜ್ಯ ವಿಭಜನೆಯ ವಿಷಯ ಹಾಗೂ ಪ್ರಾದೇಶಿಕ ಅಸಮತೋಲನ ವಿಷಯಗಳನ್ನು ಮುಂದಿಟ್ಟುಕೊಂಡು ಟಿ.ಆರಂ.ಎಸ್ ಪಕ್ಷವು ರಾಜ್ಯದಲ್ಲಿ ಕೋಲಾಹಲವೆಬ್ಬಿಸಿತು. ಹೈದರಾಬಾದ್ ಮತ್ತು ತೆಲಂಗಾಣ ಸಮೀಪದ ಕೆಲವು ಭಾಗಗಳನ್ನು ಒಳಗೊಂಡಂತೆ ರಾಜ್ಯದ ಅನೇಕ ಪ್ರದೇಶಗಳು ಉಳಿದ ಆಂಧ್ರಪ್ರದೇಶದ ಭಾಗಕ್ಕಿಂತ ಹೆಚ್ಚು ಹಿಂದುಳಿದಿವೆ ಎನ್ನುವ ವಿಷಯದ ಆಧಾರದ ಮೇಲೆ ಪ್ರತಿಭಟನೆ ಮಾಡಿತು.

ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ಅಖಂಡ ಆಂಧ್ರಪ್ರದೇಶವು ಶ್ರೀ ಕೃಷ್ಣಾರವರ ನೇತೃತ್ವದ ಸಮಿತಿಯ ವರದಿಯ ಆಧಾರದ ಮೇಲೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಎಂದು ಎರಡು ರಾಜ್ಯಗಳಾಗಿ ಇಬ್ಬಾಗವಾಯಿತು. ಅಂದಿನ ಟಿ.ಆರ್.ಎಸ್‌ನ ಚಂದ್ರಶೇಖರ್‌ರ ನೇತೃತ್ವ ಟಿ.ಆರ್.ಎಸ್. ಪಕ್ಷ ಗೆದ್ದು ಅಧಿಕಾರ ರಚಿಸಿರುವುದನ್ನು ಕಾಣಬಹುದಾಗಿದೆ.

6. ಕರ್ನಾಟಕ ರಾಜ್ಯ ರೈತ ಸಂಘ Regional Parties:

ಕಾಶ್ಮೀರ ಸ್ವಾತಂತ್ರ್ಯ ಹೋರಾಟಗಾರರಾದ ಶೇಖ್‌ ಮಹಮದ್‌ ಅಬ್ದುಲ್ಲಾರವರು ಈ ಪಕ್ಷದ ಸ್ಥಾಪಕರು. ನ್ಯಾಷನಲ್ ಕಾನ್ಸರೆನ್ಸ್‌ ಶೇಖ್‌ ಅಬ್ದುಲ್ಲಾರವರ ನೇತೃತ್ವದಲ್ಲಿ ‘ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. 1982ರಲ್ಲಿ ಅವರ ಪುತ್ರ ಡಾ. ಫರೂಕ್ ಅಬ್ದುಲ್ಲಾ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿತು.

ಈ ಪಕ್ಷವು 2004ರಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರದ ಪಾಲುದಾರ ರಾಜ್ಯವಾಗಿತ್ತು. ಈ ಪಕ್ಷವು ಕಾಶ್ಮೀರ ಕಣಿವೆಯಲ್ಲಿ ಮುಸ್ಲಿಂ ಹಿತಾಸಕ್ತಿ ರಕ್ಷಣೆ ಹಾಗೂ ರಾಜ್ಯಗಳ ಸ್ವಾಯತ್ತತೆಯನ್ನು ಪ್ರತಿಪಾದಿಸುತ್ತದೆ.

ಇದೊಂದು ಅತ್ಯಂತ ಪ್ರಭಾವಶಾಲಿಯಾದ ಪ್ರಾದೇಶಿಕ ಪಕ್ಷವಾಗಿದ್ದು ಕಾಶ್ಮೀರದ ಜನತೆಯ ಆಶೋತ್ತರಗಳನ್ನು ಎತ್ತಿಹಿಡಿಯುತ್ತದೆ.

ಕೇಂದ್ರದಲ್ಲಿ ಪ್ರಾದೇಶಿಕ ಪಕ್ಷಗಳು/Regional Parties

ಮತ್ತು ಸರ್ಕಾರದಲ್ಲಿ ಅವುಗಳ ಪ್ರಭಾವ
1. ಜಿ.ಎಸ್.ಟಿ ಮತ್ತು ಪ್ರಾದೇಶಿಕ ಪಕ್ಷ ರಾಜಕೀಯ :

ವಾಜಪೇಯಿಯವರ ಕಾಲದಿಂದಲೂ ಸರಕು ಮತ್ತು ಸೇವಾ ತೆರಿಗೆಗಳನ್ನು ಜಾರಿಗೆ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲಗೊಂಡಿದ್ದವು. ಇದಕ್ಕೆ ಮುಖ್ಯ ಕಾರಣ ಪ್ರಾದೇಶಿಕ ಪಕ್ಷಗಳ ಪ್ರಭಾವ ಮುಖ್ಯವಾಗಿ ತಮಿಳುನಾಡು, ಆಂಧ್ರಪ್ರದೇಶ, ಉತ್ತರಪ್ರದೇಶ ಹಾಗೂ ಒಡಿಶಾ, ಬಿಹಾರಗಳಲ್ಲಿ, ಕರ್ನಾಟಕದಲ್ಲಿ, ಪಶ್ಚಿಮ ಬಂಗಾಳದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಭಾವ ಅತ್ಯಂತ ಹೆಚ್ಚಾಗಿದ್ದು ಈ ಮಸೂದೆಗೆ ಒಪ್ಪಿಗೆ ಸಿಕ್ಕಿರಲಿಲ್ಲ.

ಇದು ಅತ್ಯಂತ ಪ್ರಮುಖವಾಗಿರುವುದನ್ನು ನಾವು ಇಲ್ಲಿ ಕಾಣಬಹುದಾಗಿದೆ. 2016ರಲ್ಲಿ ಈ ಮಸೂದೆಗೆ ರಾಜ್ಯಸಭೆಗೆ ಅಂಕಿತ ದೊರಕಿದ್ದರು ಅಂದು ತಮಿಳುನಾಡಿನ ಎಐಡಿಎಂಕೆ ಪಕ್ಷದವರು ಸಭಾತ್ಯಾಗ ಮಾಡಿದ್ದನ್ನು ಸ್ಮರಿಸಬಹುದಾಗಿದೆ.

ರಾಜ್ಯಗಳು ಒಪ್ಪದಿರಲು ಮುಖ್ಯ ಕಾರಣಗಳು

1. ರಾಜ್ಯಗಳ ತೆರಿಗೆಯ ವ್ಯಾಪ್ತಿ ಚಿಕ್ಕದಾಗುತ್ತದೆ

2. ಕೇಂದ್ರಕ್ಕೆ ಹೆಚ್ಚುಲಾಭ ತಂದುಕೊಡುತ್ತದೆ

3. ತೆರಿಗೆ ಅಧಿಕಾರ ಕೇಂದ್ರೀಕರಣವಾಗುವ ಸಾಧ್ಯತೆ ಇರುತ್ತದೆ.

4.ರಾಜ್ಯಗಳಿಗೆ ಆರ್ಥಿಕವಾಗಿ ನಷ್ಟವಾಗುವ ಸಂಭವವಿದೆ

2.ಎಫ್ ಡಿಐ ಚಿಲ್ಲರೆಯಲ್ಲಿ ಪ್ರಾದೇಶಿಕ ಪಕ್ಷರಾಜಕೀಯRegional Parties :

ಮಲ್ಟಿಬ್ರಾಂಡ್‌ ರಿಟೇಲ್‌ನಲ್ಲಿ ಸುಮಾರು ವರ್ಷಗಳ ಚರ್ಚೆ ನಡೆದು ಅಂತಿಮವಾಗಿ ಯುಪಿಎ-2 ಸರ್ಕಾರವು ಒಪ್ಪಿಗೆ ನೀಡಿತ್ತು, ಆದರೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಆಮ್ ಅಡ್ಡಿ ಸೇರಿದಂತೆ, ತಮಿಳುನಾಡು, ಬಿಹಾರದ ಬಿಜೆಪಿ ಹಾಗೂ ಇನ್ನೂ ಇತರ ಪಾರಿಕ ಪಕ್ಷಗಳು ಮಲ್ಟಿಬ್ರಾಂಡ್ ರಿಟೇಲ್ ಎಫ್‌ ಡಿಐನ್ನು ತಿರಸ್ಕರಿಸಿದವು. ಅದಕ್ಕೆ ಅವುಗಳು ಕೊಡುವ ಕಾರಣಗಳು

1. ರಾಜ್ಯಗಳ ವ್ಯಾಪಾರಿಗಳು ತೊಂದರೆಗೊಳಗಾಗುತ್ತಾರೆ

2. ಬಹುರಾಷ್ಟ್ರೀಯ ಕಂಪನಿಗಳು ಪ್ರಾಬಲ್ಯ ಸಾಧಿಸಿ ಅಪಾರ ಲಾಭಗಳಿಸುವುದು ಸಾಧ್ಯವಾಗುತ್ತದೆ

3. ಬೀದಿ ಬದಿಯ ವ್ಯಾಪಾರಿಗಳಿಗೆ ತುಂಬಾ ಆರ್ಥಿಕ ನಷ್ಟವಾಗುತ್ತದೆ

4. ಆರ್ಥಿಕವಾಗಿ ರಾಜ್ಯಗಳಿಗೆ ನಷ್ಟವಾಗಿ ವಿದೇಶಿ ಲಾಭ ಹೆಚ್ಚಾಗುತ್ತದೆ

3. ನದಿ ಜಲವಿವಾದ ಇತ್ಯರ್ಥ ಪ್ರಾದೇಶಿಕ ಪಕ್ಷ/ Regional Parties
ರಾಜಕೀಯ :

ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ಗೋವಾ ಸೇರಿದಂತೆ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವಿರುವ ಕಡೆಯಲ್ಲಿ ಈ ಜಲವಿವಾದಗಳು ತಳುಕು ಹಾಕಿಕೊಂಡಿವೆ. ಕೃಷ್ಣ ಜಲವಿವಾದ, ಮಹದಾಯಿ ಜಲವಿವಾದ, ಕಾವೇರಿ ಜಲವಿವಾದಗಳು ಇಲ್ಲಿ ಉದಾಹರಿಸಬಹುದು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯಾವುದಾದರೊಂದು ಪಕ್ಷದ ಜಾತಿಗೆ ಕೈ ಜೋಡಿಸುವ ಪ್ರಾದೇಶಿಕ ಪಕ್ಷಗಳು ಜಲವಿವಾದವನ್ನು ತಮ್ಮ ಇಚ್ಚೆಗೆ ತಕ್ಕಂತೆ ಮಾಡಿಕೊಳ್ಳುತ್ತಾರೆ. ಅದರಂತೆ ಡಿ.ಎಂ.ಕೆ. ಮತ್ತು ಎಐಡಿಎಂಕೆಗಳು ಕಾವೇರಿ ವಿವಾದದಲ್ಲಿ ಕೇಂದ್ರದ ಯುಪಿಎ ಮತ್ತು ಎಪಿಎ ಜೊತೆ ಹೇಗಿವೆ ಎಂಬುದನ್ನು ನೋಡಬಹುದು.

ಭೂಸ್ವಾಧೀನ ಮಸೂದೆ ಮತ್ತು ಪ್ರಾದೇಶಿಕ ಪಕ್ಷಗಳು :

ಬ್ರಿಟೀಷರ ಕಾಲದಿಂದಲೂ ಇಂದಿನ ತನಕ ಜಾರಿಯಲ್ಲಿರುವ ವಿಶೇಷ ಬೂಸ್ವಾಧೀನ ಮಸೂದೆಯನ್ನು ತಿದ್ದುಪಡಿ ಮಾಡಲು ಹೊರಟು ಕೇಂದ್ರ ಸರ್ಕಾರದ ಎನ್‌ಡಿಎ -2 ಸರ್ಕಾರದ ನಡೆಯನ್ನು ಪ್ರಶ್ನಿಸಿ ಯಾವ ರೀತಿ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಹೋರಾಟ ಮಾಡಿವೆ ಎಂಬುದನ್ನು ನಾವು ಇಲ್ಲಿ ಕಾಣಬಹುದಾಗಿದೆ. ಆದ್ದರಿಂದ ಪ್ರಾದೇಶಿಕ ಪಕ್ಷಗಳಿಲ್ಲದೆ ಕೇಂದ್ರದ ಸರ್ಕಾರ ರಚನೆಯೂ ಕಷ್ಟವಾಗುತ್ತದೆ. ಅಂತಹುದರಲ್ಲಿ ಮೊನ್ನೆ ಅನಿರೀಕ್ಷಿತವಾಗಿ ‘ನರೇಂದ್ರ ಮೋದಿ’ಯವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು.

ಆದರೂ ಪ್ರಾದೇಶಿಕ ಪಕ್ಷಗಳಾದ Regional Parties ಟಿಡಿಪಿ, ಶಿವಸೇನಾ, ಅಕಾಲಿಕದಳ, ಎಐಡಿಎಂಕೆ ಮುಂತಾದವುಗಳು ತೆಗೆದುಕೊಂಡೆ ಸರ್ಕಾರ ರಚಿಸಿದರೆ ಹೊರತು ಅವರನ್ನು ಕೈಬಿಡಲಿಲ್ಲ. ಆದ್ದರಿಂದ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಎಷ್ಟಿದೆ ಎಂಬುದು ಗೊತ್ತಾಗುತ್ತದೆ.

ಸಮಿಶ್ರ ಸರ್ಕಾರಗಳು ಮತ್ತು ಬಹುಮತದ ಕೊರತೆ

ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡಲು ಅಳವಡಿಸಿಕೊಂಡಿರುವ ನಿಯಮವು ಬ್ರಿಟನ್ ಸಂವಿಧಾನವನ್ನು ತಿದ್ದುಪಡಿ ಮಾಡಲು ಅನುಸರಿಸುವ ನಿಯಮದಷ್ಟು ಸರಳವೂ ಅಲ್ಲ, ಅತ್ಯಂತ ಕಠಿಣವೂ ಅಲ್ಲ. ಆದರೆ ಭಾರತದ ಸಂಯುಕ್ತ ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳನ್ನು ತಿದ್ದುಪಡಿ ಮಾಡಲು ಅಂದರೆ ಉದಾಹರಣೆಗೆ ರಾಷ್ಟ್ರಾಧ್ಯಕ್ಷರ ಚುನಾವಣೆ, ಕೇಂದ್ರ ಹಾಗೂ ರಾಜ್ಯ ಕಾವ್ಯಾಂಗಗಳ ಅಧಿಕಾರ ವ್ಯಾಪ್ತಿ, ಕೇಂದ್ರ ಮತ್ತು ರಾಜ್ಯಗಳ ನಡುವಣ ಅಧಿಕಾರ ವಿಭಜನೆ ಮುಂತಾದವುಗಳನ್ನು ತಿದ್ದುಪಡಿ ಮಾಡಲು ಲೋಕಸಭೆ ಮತ್ತು ರಾಜ್ಯಸಭೆಯ ವಿಶೇಷ ಬಹುಮತದ ಜೊತೆಗೆ ಅರ್ಧಕ್ಕಿಂತ ಹೆಚ್ಚು ರಾಜ್ಯಗಳ ಸಮ್ಮತಿಯೂ ಅತ್ಯಗತ್ಯವಾಗಿದೆ.Regional Parties

ಸಂವಿಧಾನಿಕವಾಗಿ ಈ ನಿಯಮದನ್ವಯ ತಿದ್ದುಪಡಿ ಮಾಡುವ ವಿಚಾರ ಬಂದಾಗ ಕೇಂದ್ರದಲ್ಲಿ ಬಹುತೇಕ ರಾಷ್ಟ್ರೀಯ ಪಕ್ಷಗಳು ಅಧಿಕಾರದಲ್ಲಿದ್ದರೆ, ಕೆಳಗೆ ಎಲ್ಲಾ ರಾಜ್ಯಗಳಲ್ಲಿ ಅಂದರೆ ಅರ್ಧಕ್ಕಿಂತ ಹೆಚ್ಚುರಾಜ್ಯಗಳು ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುತ್ತವೆ. ಇಂತಹ ಸಂದರ್ಭಗಳಲ್ಲಿ ಸಂವಿಧಾನಿಕ ಬಿಕ್ಕಟ್ಟು ಉದ್ಭವಿಸುತ್ತದೆ. ರಾಷ್ಟ್ರೀಯ ಪಕ್ಷಗಳಿಗೂ ಪ್ರಾದೇಶಿಕ ಪಕ್ಷಗಳಿಗೂ ಒಂದು ದೊಡ್ಡ ವಿವಾದವೇ ಏರ್ಪಟ್ಟುಬಿಡುತ್ತದೆ.

ಕೆಲವೊಮ್ಮೆ ಪ್ರಾದೇಶಿಕ ಪಕ್ಷಗಳ ಬೆಂಬಲ ಸಿಗದೆ ಇರುವುದರಿಂದ ಕೆಲವು ಮಸೂದೆಗಳು ಕಾನೂನು ಕಾಯಿದೆಗಳಾಗುವುದೇ ಇಲ್ಲ. ಚಿಲ್ಲರೆ ವಹಿವಾಟಿನಲ್ಲಿ ಎಫ್‌ಡಿಐ ಹೂಡಿಕೆ ವಿಚಾರವಾಗಿ ಕಗ್ಗಂಟಾಗಿದ್ದ ಮಸೂದೆಗೆ ಕೇಂದ್ರಸರ್ಕಾರ ಯುಪಿಎ-2 ಒಪ್ಪಿಗೆ ನೀಡಿದರೂ ಪ್ರಾದೇಶಿಕ ಪಕ್ಷಗಳಾದ ಆಮ್‌ ಆಡ್ಡಿ, ಜೆಡಿಯು, ಟಿಎಮ್ ಸಿ, ಎಐಡಿಎಂಕೆ ಮುಂತಾದವುಗಳು ತಿರಸ್ಕರಿಸಿದ್ದರಿಂದ ಮಸೂದೆಯೇ ಬಿದ್ದು ಹೋಗಿದ್ದನ್ನು ಸ್ಮರಿಸಬಹುದು.

್ರಸ್ತುತವಾಗಿ ಭಾರತದ ರಾಜಕೀಯವನ್ನು ಪ್ರಾದೇಶಿಕ ಪಕ್ಷರಹಿತವಾಗಿ Regional Parties ಊಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಅತೀ ಹೆಚ್ಚು ಪ್ರಾಬಲ್ಯವನ್ನು ಹೊಂದಿವೆ. ಆದ್ದರಿಂದಾಗಿ ಎರಡು ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಯಾವ ಪಕ್ಷವಾದರೂ ಪ್ರಾದೇಶಿಕ ಪಕ್ಷವನ್ನು ಕಡೆಗಣಿಸುವಂತಿಲ್ಲ. ದೇಶದ ಅರ್ಧಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ Regional Parties ಪ್ರಾಬಲ್ಯವಿರುವಾಗ ರಾಷ್ಟ್ರೀಯ ಪಕ್ಷಗಳು ಇವುಗಳ ಬೆಂಬಲವಿಲ್ಲದೆ ಏನನ್ನೂ ಮಾಡುವಂತಿಲ್ಲ. ಆದ್ದರಿಂದ ಪ್ರಾದೇಶಿಕ ಪಕ್ಷಗಳು ದೇಶದ ರಾಜಕೀಯದಲ್ಲಿ ಸಕ್ರಿಯವಾಗಿರುತ್ತವೆ.
ಭಾರತದ ರಾಜಕೀಯದಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗುತ್ತಿರುವುದು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಸೂಕ್ತವೇ? ಚರ್ಚಿಸಿ

ಭಾರತವು ಬೃಹತ್ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿದ್ದು, ಇಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳು Regional Parties ಪ್ರಜಾಸತ್ತಾತ್ಮಕ ವ್ಯವಸ್ಥೆಯ ಜೀವನಾಡಿಯಾಗಿವೆ. ರಾಜಕೀಯ ಪಕ್ಷಗಳು ಮತ್ತು ಪ್ರಜಾಪ್ರಭುತ್ವ ಪರಸ್ಪರ ಅವಲಂಬಿಗಳಾಗಿದ್ದು ಜೊತೆ ಜೊತೆಯಲ್ಲಿಯೇ ಸಾಗುತ್ತವೆ. ಪ್ರಜಾಸತ್ತಾತ್ಮಕ ಸರ್ಕಾರವು ಯಶಸ್ವಿಯಾಗಿ ಕಾರ್ಯ ನಿರ್ವಹಿಸುವಲ್ಲಿ ರಾಜಕೀಯ ಪಕ್ಷಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಆಧುನಿಕ ಪ್ರಜಾಸತ್ತಾತ್ಮಕ ಸರ್ಕಾರಗಳು ರಾಜಕೀಯ ಪಕ್ಷಗಳಿಲ್ಲದೇ ಕಾರ್ಯ ನಿರ್ವಹಿಸುವುದು ಅಸಾಧ್ಯ. ಮೂಲತಃ ರಾಜಕೀಯ ಪಕ್ಷಗಳೆಂದರೆ ಸಾಮಾನ್ಯ ಸಿದ್ಧಾಂತದ ಆಧಾರದ ಮೇಲೆ ರಾಜಕೀಯ ಅಧಿ ಕಾರವನ್ನು ಪಡೆಯುವ ಉದ್ದೇಶದಿಂದ ಸಂಘಟಿತವಾಗಿರುವ ಜನಸಮೂಹವಾಗಿದೆ. ಚುನಾವಣೆಗಳಲ್ಲಿ ಬಹುಮತ ಪಡೆದ ಪಕ್ಷವು ಸರ್ಕಾರವನ್ನು ರಚಿಸಿದರೆ ಇತರ ಪಕ್ಷಗಳು ವಿರೋಧ ಪಕ್ಷಗಳಾಗಿ ಕಾರ್ಯ ನಿರ್ವಹಿಸುತ್ತವೆ.

ಅಮೇರಿಕ ಮತ್ತು ಇಂಗ್ಲೆಂಡ್‌ನಂತಹ ಮುಂದುವರೆದ ದೇಶಗಳಲ್ಲಿ ದ್ವಿಪಕ್ಷ ಪದ್ದತಿ ಜಾರಿಯಲ್ಲಿದೆ. ಅಂದರೆ ಒಂದು ಬಹುಮತ ಗಳಿಸಿ ಆಡಳಿತ ವಹಿಸಿಕೊಂಡ ಪಕ್ಷ, ಮತ್ತೊಂದು ಪಕ್ಷವು ವಿರೋಧ ಪಕ್ಷವಾಗಿ ಸರ್ಕಾರ ಅಧಿಕಾರ ದುರುಪಯೋಗ ಮಾಡದಂತೆ ನೋಡಿಕೊಳ್ಳುವುದು. ಆದರೆ ಭಾರತವು ಬಹು ಪಕ್ಷಪದ್ಧತಿಯನ್ನು ಅಳವಡಿಸಿಕೊಂಡು ಪ್ರಸ್ತುತ ಅಂದಾಜಿನ ಪ್ರಕಾರ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳನ್ನೊಳಗೊಂಡಂತೆ ಸುಮಾರು 200 ಪಕ್ಷಗಳನ್ನು ಹೊಂದಿದೆ. ಭಾರತ ವಿಭಿನ್ನ ಧರ್ಮ, ಜನಾಂಗ, ಪ್ರದೇಶ ಭಾಷೆ, ಸಂಸ್ಕೃತಿ ಆಚಾರ ವಿಚಾರಗಳು ಕೂಡಿರುವುದರಿಂದ ಜನರ ದೃಷ್ಟಿಕೋನಗಳು ವಿಭಿನ್ನವಾಗಿವೆ. ಈ ವಿಭಿನ್ನತೆಯು ವೈಶಿಷ್ಟ್ಯ ಪೂರ್ಣವಾದ ರಾಜಕೀಯ ಪರಂಪರೆಗೆ ನಾಂದಿ ಹಾಕಿದೆ.

ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳುRegional Parties ಎಂಬ ಎರಡು ರೀತಿಯ ಪಕ್ಷಗಳಿವೆ. ಇವುಗಳನ್ನು ಕೆಲವು ರಾಷ್ಟ್ರೀಯ ಹಿತಾಸಕ್ತಿ ಇಟ್ಟುಕೊಂಡು ಅಸ್ತಿತಕ್ಕೆ ಬಂದಿದ್ದರೆ, ಕೆಲವು ಪ್ರಾಂತೀಯ ಹಿತಾಸಕ್ತಿಗಳಾದ ನೆಲ, ಜಲ, ಭಾಷೆ ಇವುಗಳ ರಕ್ಷಣೆಗಾಗಿ ಉಗಮಿಸಿವೆ. ಕೆಲವು ಪಕ್ಷಗಳು ಮಣ್ಣಿನ ಮಕ್ಕಳು ಸಿದ್ಧಾಂತದಿಂದ ಉಗಮಿಸಿದ್ದರೆ ಕೆಲವು ಜಾತಿ, ಧರ್ಮ, ಬುಡಕಟ್ಟು ಜನಾಂಗ ಇವುಗಳ ಹಿತಾಸಕ್ತಿ ರಕ್ಷಣೆಗಾಗಿ ಅಸ್ತಿತ್ವಕ್ಕೆ ಬಂದಿವೆ.

ಭಾರತದಲ್ಲಿ ಇರುವಷ್ಟು ರಾಜಕೀಯ ಪಕ್ಷಗಳು ಇಡೀ ವಿಶ್ವದಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ.
ಭಾರತ ಸ್ವತಂತ್ರಗೊಂಡ ಪ್ರಾರಂಭದ 20 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಾಬಲ್ಯವನ್ನು ಮೆರೆಯಿತು. ಆದರೆ ನಂತರದ ಬೆಳವಣಿಗೆಗಳಲ್ಲಿ ರಾಜ್ಯದ ನೆಲ, ಜಲ, ಭಾಷೆ ಮತ್ತು ಪ್ರಾಂತೀಯ ಹಿತಾಸಕ್ತಿಗಳ ರಕ್ಷಣೆಗಾಗಿ ಅಸ್ತಿತ್ವಕ್ಕೆ ಬಂದ ಪ್ರಾದೇಶಿಕ ಪಕ್ಷಗಳು ಬಹಳ ಪ್ರಭಾವಶಾಲಿಯಾಗಿ ಬೆಳೆದವು.

ರಾಷ್ಟ್ರೀಯ ಪಕ್ಷಗಳು ಕೇಂದ್ರದಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ ಬಹುಮತವನ್ನು ಪಡೆಯದೇ ಇದ್ದಾಗ ಪ್ರಾದೇಶಿಕ ಪಕ್ಷಗಳು ತಮ್ಮ ಬೆಂಬಲ ನೀಡುವ ಮೂಲಕ ಅತೀ ಪ್ರಮುಖ ಪಾತ್ರ ವಹಿಸಿದವು. ಅಷ್ಟೇ ಅಲ್ಲದೆ ಕೆಲವು ರಾಜ್ಯಗಳ ಸಂಪೂರ್ಣ ಅಧಿಕಾರದ ಚುಕ್ಕಾಣಿ ಹಿಡಿದು ಆಡಳಿತ ನಡೆಸತೊಡಗಿದವು. ಆ ಮೂಲಕ ದಕ್ಷಿಣ ಭಾರತದಲ್ಲಿ 1957ರಲ್ಲಿ ಕೇರಳದಲ್ಲಿ ‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ’ವು ಮೊದಲ ಕಾಂಗ್ರೆಸ್ಸೇತರ ಪಕ್ಷವು ಅಧಿಕಾರ ವಹಿಸಿಕೊಂಡಂತಾಯಿತು.

ನಂತರದ ದಿನಗಳಲ್ಲಿ 1967ರಲ್ಲಿ ತಮಿಳುನಾಡಿನಲ್ಲಿಯೂ ಸಹ ಕಾಂಗ್ರೆಸ್ ಅಧಿಪತ್ಯ ಕೊನೆಯಾಗಿ ‘ಡಿಎಂಕೆ’ ಪಕ್ಷವು ಅಧಿಕಾರಕ್ಕೆ ಬಂದಿತು. ನಂತರದ ಬೆಳವಣಿಗೆಗಳಲ್ಲಿ ಬಿಹಾರಿನಲ್ಲಿ ಆರ್ ಜೆಡಿ, ಜೆಡಿಯು, ಒರಿಸ್ಸಾದಲ್ಲಿ ಬಿಜು ಜನತಾದಳ, ಉತ್ತರಪ್ರದೇಶದಲ್ಲಿ ಎಸ್‌.ಪಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನರನ್ಸ್ ಮುಂತಾದವು ರಾಷ್ಟ್ರರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದವು.

ಪ್ರಸ್ತುತ ಭಾರತದಲ್ಲಿ ಅರ್ಧಕ್ಕೂ ಹೆಚ್ಚು ರಾಜ್ಯಗಳು ಸಂಪೂರ್ಣವಾಗಿ ಅಥವಾ ಭಾಗಶಃ ಪ್ರಾದೇಶಿಕ ಪಕ್ಷಗಳ ಹಿಡಿತದಲ್ಲಿವೆ. ಇದು ಒಂದು ಉತ್ತಮ ಬೆಳವಣಿಗೆಯೂ ಹೌದು. ಏಕೆಂದರೆ ಪ್ರಾದೇಶಿಕ ರಾಜಕೀಯ ಪಕ್ಷಗಳು ಹುಟ್ಟಿಕೊಂಡಿದ್ದು ಮತ್ತು ಅಧಿಕಾರಕ್ಕೆ ಬಂದಿದ್ದು ಸ್ಥಳೀಯ ಸಮಸ್ಯೆಗಳನ್ನರಿತು, ಅವುಗಳಿಗೆ ಪರಿಹಾರ ಮತ್ತು ಪಕ್ಷದ ಉದ್ದೇಶಗಳ ಈಡೇರಿಕೆಯ ಜೊತೆಗೆ ಅಭಿವೃದ್ಧಿ ತರುವುದಾಗಿದೆ.Regional Parties

ಆದರೆ ಇದೇ ಒಂದು ರಾಜ್ಯದ ಆಡಳಿತ ಒಂದು ರಾಷ್ಟ್ರೀಯ ಪಕ್ಷ ವಹಿಸಿಕೊಂಡರೆ ಸ್ಥಳೀಯ ಸಮಸ್ಯೆಗಳೇ ಗೊತ್ತಿರದ ಹೈಕಮಾಂಡ್‌ನ ಬಳಿ ಪ್ರತಿಯೊಂದು ಯೋಜನೆ ರೂಪು ರೇಷೆಗಳ ಬಗ್ಗೆ ಅಪಣೆ ಪಡೆಯಬೇಕಾಗಿರುತ್ತದೆ. ಆದರೆ ಸ್ವತಂತ್ರ ಪಕ್ಷಗಳಾಗಿ ಅಧಿಕಾರಕ್ಕೆ ಬಂದ ಪ್ರಾದೇಶಿಕ ಪಕ್ಷಗಳು ಸ್ವಂತ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ. Regional Parties

ಇದನ್ನೇ ಇನ್ನೊಂದು ರೀತಿಯಲ್ಲಿ ಯೋಚಿಸಿದರೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಎರಡೂ ಕಡೆ ಒಂದೇ ಪಕ್ಷದ ಆಡಳಿತವಿದ್ದರೆ, ಅದು ಪರಸರ ಸಮನ್ವಯತೆ ಮತ್ತು ಸಹಕಾರಯುತ ಅಭಿವೃದ್ಧಿ ಯೋಜನೆಗಳನ್ನು ಸಹಾಯವಾಗುತ್ತದೆ. ಕೇಂದ್ರದ ಹೆಚ್ಚಿನ ಅನುದಾನಗಳು ಆ ರಾಜ್ಯಕ್ಕೆ ದೊರೆತು ಅಭಿವೃದ್ಧಿ ಸಾಧಸಲು ಸಹಾಯಕವಾಗುತ್ತದೆ. ಒಂದು ವೇಳೆ ಕೇಂದ್ರದಲ್ಲಿ ಒಂದು ರಾಷ್ಟ್ರೀಯ ಪಕ್ಷ, ರಾಜ್ಯದಲ್ಲಿ ಬೇರೊಂದು ಪ್ರಾದೇಶಿಕ ಪಕ್ಷವಿದ್ದರೆ Regional Parties ಅಲ್ಲಿ ಪರಸ್ಪರ ಸಹಕಾರ ಮತ್ತು ಸಮನ್ವಯತೆಯ ಕೊರತೆ ಉಂಟಾಗಿ ಅಭಿವೃದ್ಧಿಯಲ್ಲಿ ಹಿನ್ನಡೆಯಾಗುತ್ತದೆ.

ಇನ್ನು ರಾಜ್ಯಗಳೇ ಪ್ರತಿನಿಧಿಸುವ ರಾಜ್ಯಸಭೆಯಲ್ಲಿ ಕೇಂದ್ರಸರ್ಕಾರದ ಅಭಿವೃದ್ಧಿಪರ ಯೋಜನೆಗಳಿಗೆ ರಾಜ್ಯಸಭೆಯಲ್ಲೂ ಅಂಗೀಕರಿಸಬೇಕಿರುವುದರಿಂದ ಕೇಂದ್ರ ಮತ್ತು ರಾಜ್ಯ ಪ್ರಾದೇಶಿಕ ಸರ್ಕಾರಗಳು Regional Parties ವಿಭಿನ್ನ ಚಿಂತನೆಗಳನ್ನು ಹೊಂದಿರುವುದರಿಂದ ಯೋಜನೆಗಳು ಜಾರಿಯಾಗುವಲ್ಲಿ ವಿಳಂಬವಾಗುತ್ತಿವೆ.

ಇದು ದೇಶದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ. ರಾಜ್ಯಗಳು ಈ ರೀತಿ ತೊಡಕುಗಳನ್ನುಂಟು ಮಾಡಿದರೆ, ಕೇಂದ್ರಸರ್ಕಾರವೇ ಹೆಚ್ಚಿನ ಅಧಿಕಾರ ಹೊಂದಿರುವುದರಿಂದ ತನ್ನ ಪಕ್ಷವಲ್ಲದ ರಾಜ್ಯ ಸರ್ಕಾರಗಳ ಮೇಲೆ ತನ್ನ ಅಧಿಕಾರದ ದರ್ಪವನ್ನು ತೋರಿಸುತ್ತದೆ. ಇದರಿಂದ ಪರಸ್ಪರ ಸಹಕಾರಯುತ ಅಭಿವೃದ್ಧಿಗೆ ಮಾರಕವಾಗಿದೆ. ಇದು ದೇಶದ ಅಭಿವೃದ್ಧಿಗೆ ಎಲ್ಲ ರೀತಿಯಿಂದಲೂ ಕಂಟಕವಾಗಿದೆ.

ಒಕ್ಕೂಟ ದೇಶವಾದ ಭಾರತಕ್ಕೆ ಇಂದು ಒಂದು ಹಳ್ಳಿ ಅಥವಾ ಒಂದು ರಾಜ್ಯ ಅಭಿವೃದ್ಧಿಯೇ ಆ ದೇಶದ ಅಭಿವೃದ್ಧಿಯಾಗಬೇಕು ಯಾವುದೇ ಪಕ್ಷವಿರಲಿ, ಯಾವುದೇ ರಾಜ್ಯವಿರಲಿ ರಾಜಕೀಯ ಮಾಡುವುದು ಬರೀ ಚುನಾವಣೆಗಳಿಗೆ ಮಾತ್ರ ಸೀಮಿತವಾಗಬೇಕು, ಅಭಿವೃದ್ಧಿ ವಿಷಯಕ್ಕೆ ಬಂದರೆ ಕೇಂದ್ರ ಮತ್ತು ರಾಜ್ಯಗಳು ಸಹಕಾರಯುತ ಅಧಿಕಾರ ನಡೆಸುವಂತಾಗಬೇಕು ಅಂದಾಗ ಮಾತ್ರ ಒಂದು ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ.

ಭಾರತದಲ್ಲಿ ಅಸ್ತಿತ್ವದಲ್ಲಿರುವ ಪ್ರಾದೇಶಿಕ ಪಕ್ಷಗಳು/ Regional Parties

ಅಸ್ಸಾಂ ಗಣ ಪರಿಷತ್‌, ಎಜಿಪಿ ಕನ್ನಡ ಚಳುವಳಿ ವಾಟಾಳ್ ಪಕ್ಷ

ಆಮ್ ಆದ್ಮ ಪಕ್ಷ ಎಎಪಿ

ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಇಎಸ್

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....