Kannada essays

ಅವಿಭಕ್ತ ಕುಟುಂಬ ಪ್ರಬಂಧ 2024 | Joint Family: Embracing the Beauty of a Joint Family Essay

Table of Contents

ಭಾರತದಲ್ಲಿ ಕೌಟುಂಬಿಕ ವ್ಯವಸ್ಥೆ /  Joint Family System

ಅವಿಭಕ್ತ ಕುಟುಂಬ ಎಂದರೇನು/ ಅರ್ಥ ಮತ್ತು ವ್ಯಾಖ್ಯಾನ (Meaning & Definition of Joint Family):

ಅವಿಭಕ್ತ ಕುಟುಂಬ, ಜಾತಿ ವ್ಯವಸ್ಥೆ ಮತ್ತು ಗ್ರಾಮ ಸಮುದಾಯಗಳು – ಭಾರತದ ಸಮಾಜದ ಆಧಾರ ಸ್ತಂಭವೆಂದು ಪರಿಗಣಿಸಲಾಗಿದೆ.

“ಅವಿಭಕ್ತ ಕುಟುಂಬವು ಕೆಲವು ತಲೆಮಾರಿನ ರಕ್ತ ಸಂಬಂಧಗಳ ಸಮೂಹವಾಗಿದ್ದು, ಸಾಮಾನ್ಯ ವಾಸಸ್ಥಳ, ಅಡಿಗೆಮನೆ ಹಾಗೂ ಸಾಮೂಹಿಕ ಆಸ್ತಿಯ ಒಡೆತನ ಮತ್ತು ಮುಖ್ಯಸ್ಥನ ಆಳ್ವಿಕೆ ಒಳಪಟ್ಟ ಕುಟುಂಬವನ್ನು ಅವಿಭಕ್ತ ಕುಟುಂಬ” ಎಂದು ಕರೆಯುತ್ತೇವೆ.

ವ್ಯಾಖ್ಯೆಗಳು:

* ಐರಾವತಿ ಕಾರ್ವೆ ತಮ್ಮ ಗ್ರಂಥವಾದ “Kinship Organization in India” ದಲ್ಲಿ ಸಮರ್ಪಕವಾದ ವ್ಯಾಖ್ಯಾನ ನೀಡಿದ್ದಾರೆ. ಅವರ ಪ್ರಕಾರ “ರಕ್ತಸಂಬಂಧಿಗಳ ಸಮೂಹವೊಂದು ಒಂದೇ ಮನೆಯಲ್ಲಿ ವಾಸಿಸುತ್ತಾ ಒಂದೇ ಅಡುಗೆಮನೆಯಲ್ಲಿ ತಯಾರಾದ ಆಹಾರ ಸೇವಿಸುತ್ತಾ ಆಸ್ತಿಯ ಮೇಲೆ ಸಮಾನ ಒಡೆತನ ಮತ್ತು ಕುಟುಂಬದ ಪೂಜಾಕಾರ್ಯಗಳಲ್ಲಿ ಸಾಮೂಹಿಕವಾಗಿ ಪಾಲ್ಗೊಳ್ಳುವ ಕುಟುಂಬವನ್ನು ಅವಿಭಕ್ತ ಕುಟುಂಬ” ಎನ್ನುವರು.

* ಕೆ.ಎಂ.ಕಪಾಡಿಯ: (Marriage and family in India), ಅವಿಭಕ್ತ ಕುಟುಂಬವು ಪೋಷಕರು ಮತ್ತು ಮಕ್ಕಳು, ತಂದೆ ಅಥವಾ ತಾಯಿಯ ಸಂಬಂಧಿಕರಿಂದ ಕೂಡಿದ ಸಮೂಹವು ಪಿತೃವಂಶೀಯ ಅಥವಾ ಮಾತೃವಂಶೀಯ ಕುಟುಂಬವನ್ನು ಅವಿಭಕ್ತ ಕುಟುಂಬ ಎಂದು ವ್ಯಾಖ್ಯಾನಿಸಿದ್ದಾರೆ.

* ಐ.ಪಿ. ದೇಸಾಯಿ: (Some aspects of Family in Mahuva) ಆಸ್ತಿ, ಆದಾಯ ಮತ್ತು ಹಕ್ಕು ಬಾಧ್ಯತೆಗಳ ಮೂಲಕ ಪರಸ್ಪರ ಸಂಬಂಧಿತರಾದ ಮೂರು – ನಾಲ್ಕು ತಲೆಮಾರುಗಳಿಗೆ ಸೇರಿದ ಜನಸಮುದಾಯವು ಅವಿಭಕ್ತ ಕುಟುಂಬ ಎನಿಸುತ್ತದೆ.

18ನೇ G20 ಶೃಂಗಸಭೆಯ ಪ್ರಬಂಧ | Essay on 18th G20 Summit in Kannada

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

ಅವಿಭಕ್ತ ಕುಟುಂಬದ ಬಗ್ಗೆ ಪ್ರಬಂಧ

ಅವಿಭಕ್ತ ಕುಟುಂಬದ ಗುಣಲಕ್ಷಣಗಳು (Characteristics of Joint Family):

1) ಪೀಳಿಗೆಗಳ ಸಮಾವೇಶ (Depth of Generation):

ಅವಿಭಕ್ತ ಕುಟುಂಬದಲ್ಲಿ ಕನಿಷ್ಟ ಮೂರು ಅಥವಾ ಹೆಚ್ಚು ಪೀಳಿಗೆಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ ತಂದೆ-ತಾಯಿ, ಮಕ್ಕಳು ಮತ್ತು ಮೊಮ್ಮಕ್ಕಳು. ಹಾಗೂ ಕೆಲವೊಮ್ಮೆ ಚಿಕ್ಕಪ್ಪ-ಚಿಕ್ಕಮ್ಮ ಮತ್ತು ಅವರ ಸಂತತಿ, ದಾಯಾದಿಗಳು ಮುಂತಾದವರನ್ನು ಹೊಂದಿರುವ ರಕ್ತ ಸಂಬಂಧಿಗಳ ಸಮೂಹವಾಗಿರುತ್ತದೆ.

2) ಸಾಮಾನ್ಯ ಮನೆ ಅಥವಾ ವಾಸ ಸ್ಥಳ (Common Roof):

ಸಾಮಾನ್ಯ ವಾಸಸ್ಥಾನ ಅವಿಭಕ್ತ ಕುಟುಂಬದ/Joint Family ಪ್ರಮುಖವಾದ ಲಕ್ಷಣವಾಗಿದೆ. ಹಾಗೆಯೇ ವಂಶಪರಂಪರೆಯ ಗೌರವ-ಘನತೆಗಳನ್ನು ಎತ್ತಿ ಹಿಡಿಯುವ ಅಂಶವಾಗಿದೆ. ಕುಟುಂಬದ ಸದಸ್ಯರೆಲ್ಲರೂ ಒಂದೇ ಸಾಮಾನ್ಯ ಮನೆಯಲ್ಲಿ ಜೀವಿಸುತ್ತಾರೆ. ಇಂತಹ ಸಾಮಾನ್ಯ ಮನೆ ಆರ್ಥಿಕ, ಧಾರ್ಮಿಕ, ಮನರಂಜನೆ, ವೈವಾಹಿಕ, ಜೀವನದ ಕೇಂದ್ರಬಿಂದುವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಹೆನ್ರಿ ಮೇನ್ “ಅವಿಭಕ್ತದ ಸಾಮಾನ್ಯ ಮನೆಯನ್ನು “ಮಹಾಮನೆ” ಅಥವಾ “ಬೃಹತ್ ಮನೆ” ಎಂದು ಕರೆದಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಉದ್ಯೋಗಾವಕಾಶ ಕಾರಣದಿಂದ ಸದಸ್ಯರು ಮೂಲ ಮನೆಯಿಂದ ದೂರವಾಗಿದ್ದರೂ ಅವಿಭಕ್ತ ಕುಟುಂಬದೊಂದಿಗೆ ಭಾವನಾತ್ಮಕ ಮತ್ತು ಆರ್ಥಿಕ ಸಂಪರ್ಕ ಹೊಂದಿರುತ್ತಾರೆ.

3) ಸಾಮಾನ್ಯ ಅಡಿಗೆಮನೆ ಅಥವಾ ಒಲೆ (Common Kitchen):

ಒಂದು ಸಾಮಾನ್ಯ ವಾಸಸ್ಥಳದ ಸದಸ್ಯರೆಲ್ಲರೂ ಒಂದೇ ಅಡಿಗೆ ಮನೆಯಲ್ಲಿ ತಯಾರಿಸಿದ ಆಹಾರ ಸೇವೆನ ಅವಿಭಕ್ತ ಕುಟುಂಬದ ವಿಶಿಷ್ಟವಾದ ಗುಣಲಕ್ಷಣವಾಗಿದೆ. ಸಾಮಾನ್ಯವಾಗಿ – ಅವಿಭಕ್ತ ಕುಟುಂಬದ/Joint Family ಹಿರಿಯ ಸದಸ್ಯೆ (ಕರ್ತನ ಪತ್ನಿ) ಅಡಿಗೆಮನೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಹೊಣೆಗಾರಿಕೆ ಹೊಂದಿರುತ್ತಾರೆ. ಇನ್ನಿತರ ಸ್ತ್ರೀ ಸದಸ್ಯರು ಸಹಾಯಕ ಪಾತ್ರ ವಹಿಸುತ್ತಾ ವಿವಿಧ ಕ್ರಿಯಾಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.

4) ಸಾಮಾನ್ಯ ಧಾರ್ಮಿಕ ಕ್ರಿಯಾವಿಧಿ (Common Worship):

ಹಿಂದೂ ಅವಿಭಕ್ತ ಕುಟುಂಬ ಮತ್ತು ಧರ್ಮ ಪರಸ್ಪರ ಪೂರಕವಾಗಿದೆ. ಅವಿಭಕ್ತ ಕುಟುಂಬಗಳು/Joint Family ವಿವಿಧ ಧಾರ್ಮಿಕ ಕ್ರಿಯಾವಿಧಿಗಳ ಆಚರಣೆಯ ಕೇಂದ್ರ ಪ್ರತಿಯೊಂದು ಅವಿಭಕ್ತ ಕುಟುಂಬಗಳು ತಮ್ಮದೇ ಆದ “ಕುಲದೇವತೆ”ಯನ್ನು ಆರಾಧಿಸುತ್ತಾರೆ. ಅದರ ಸುತ್ತ ಧಾರ್ಮಿಕ ಶ್ರದ್ಧೆ ಮತ್ತು ನಂಬಿಕೆಗಳ ಬೆಳವಣಿಗೆಯಾಗಿವೆ. ಕುಟುಂಬದ ಸದಸ್ಯರೆಲ್ಲರೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ವಾರ್ಷಿಕ ಧಾರ್ಮಿಕ ಸಮಾರಂಭ, ಹಬ್ಬ ಹರಿ-ದಿನಗಳು ವಿವಾಹದ ಆಚರಣೆಗಳು ಮತ್ತು ಪಿತೃಪೂಜೆಗಳಲ್ಲಿ ಎಲ್ಲಾ ಸದಸ್ಯರು ಭಾಗವಹಿಸುವುದು ಸಾಮಾನ್ಯ ಸಂಗತಿಯಾಗಿದೆ.

5) ಸಾಮಾನ್ಯ ಆಸ್ತಿಯ ಹಕ್ಕು ಬಾಧ್ಯತೆಗಳು (Common Property):

ಸಂಪೂರ್ಣ ವಿಭಾಗವಾಗಿ ಹಂಚಿಕೊಳ್ಳದ ಕುಟುಂಬದ ಸದಸ್ಯರಿಗೆ ಆಸ್ತಿಯ ಮೇಲೆ ಸಮಾನ ಹಕ್ಕುಬಾಧ್ಯತೆಯನ್ನು ಹೊಂದಿದ್ದಾರೆ.. ಓ ಮಾಲೆ (O Malley) ತಿಳಿಸುವಂತೆ “ಅವಿಭಕ್ತ ಕುಟುಂಬಗಳು/Joint Family ಕೂಡು ಬಂಡವಾಳ” ಮತ್ತು ಸಹಕಾರಿ ಸಂಘವಾಗಿ ಕಾರ್ಯ ನಿರ್ವಹಿಸುತ್ತದೆ.” ಕುಟುಂಬದಿಂದ ಶೇಖರಣೆಯಾದ ಎಲ್ಲಾ ಆದಾಯವನ್ನು ಒಂದುಗೂಡಿಸಿ ಮತ್ತು ಸದಸ್ಯರೆಲ್ಲರ ಮೂಲಭೂತ ಅಗತ್ಯಗಳನ್ನು ಈಡೇರಿಸಿಕೊಂಡು ವಿನಿಯೋಗಿಸುತ್ತಾರೆ.

6) ಕರ್ತನ ಅಧಿಕಾರ (Exercise of Authority):

ಹಿಂದೂ ಅವಿಭಕ್ತ ಕುಟುಂಬದ ಹಿರಿಯ ಸದಸ್ಯನನ್ನು “ಕರ್ತ” ಎಂದು ಕರೆಯುತ್ತಾರೆ. ಈತನು ಕೌಟುಂಬಿಕ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾನೆ. ಎಲ್ಲಾ ಸದಸ್ಯರ ವರ್ತನೆಗಳ ಮೇಲೆ ನಿಯಂತ್ರಣ ಸಾಧಿಸುತ್ತಾನೆ. ಕರ್ತನು ಪರಮಾಧಿಕಾರ ಮತ್ತು ಇನ್ನಿತರ ಸದಸ್ಯರ ವಿಧೇಯ ಭಾವನೆಗಳು ಅವಿಭಕ್ತ ಕುಟುಂಬ/Joint Family ಸಂಬಂಧಗಳ ಆಧಾರ ಸ್ತಂಭವಾಗಿದೆ. ಕರ್ತನ ಆಜ್ಞೆಯನ್ನು ಹೆಚ್ಚು- ಕಮ್ಮಿ ಸದಸ್ಯರೆಲ್ಲರೂ ಪಾಲಿಸುತ್ತಾರೆ. ಕರ್ತನು ಪ್ರತಿಯೊಬ್ಬ ಸದಸ್ಯರಿಂದ ಪ್ರೀತಿ ಮತ್ತು ವಿಶ್ವಾಸ ಪಡೆದುಕೊಳ್ಳುವ ಅರ್ಹತೆ ಹೊಂದಿದ್ದಾನೆ. ಅದೇ ರೀತಿ ಮಾತೃ ಪ್ರಧಾನ ಅಥವಾ ಮಾತೃವಂಶೀಯ ಕುಟುಂಬದಲ್ಲಿ ಹಿರಿಯ ಸ್ತ್ರೀ ಕರ್ತ ಪಾತ್ರವನ್ನು ನಿಭಾಯಿಸುತ್ತಾರೆ.

7) ಪೂರ್ವಯೋಜಿತ ವಿವಾಹಗಳು (Arranged Marriages):

ಕುಟುಂಬದ ಹಿರಿಯ ಸದಸ್ಯರು ತಮ್ಮ ಮಕ್ಕಳಿಗೆ ವೈವಾಹಿಕ ಸಂಬಂಧಗಳನ್ನು ಏರ್ಪಡಿಸುವ ಕಾರ್ಯದಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸುತ್ತಿದ್ದರು.. ಕುಟುಂಬದ ವಯೋಮಿತಿಯವರು ಹೇಗೆ ನಿಶ್ಚಯಿಸಿದರೋ ಅಂತಹ ವೈವಾಹಿಕ ಸಂಬಂಧಗಳಿಗೆ ಹೆಚ್ಚು ಮಹತ್ವ ನೀಡಿ ವ್ಯಕ್ತಿ ಆಯ್ಕೆ ಮೇಲೆ ನಿರ್ಬಂಧಗಳಿದ್ದವು.. ಜೀವನ ಸಂಗಾತಿಯ ಆಯ್ಕೆಯು ವೈಯಕ್ತಿಕವಾಗಿರದೆ ಕೌಟುಂಬಿಕ ಪರಂಪರೆಯ ಗೌರವ-ಘನತೆ ಕಾಪಾಡಿಕೊಳ್ಳುವ ಉದ್ದೇಶವಾಗಿತ್ತು. ಹಿರಿಯರ ತೀರ್ಮಾನ ಮತ್ತು ಪೂರ್ವಯೋಜಿತ ವಿವಾಹಕ್ಕೆ ಯುವಕ-ಯುವತಿಯರು ನಿರಾಕರಿಸಲು ಸಾಧ್ಯವಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ, ಜೀವನ ಸಂಗಾತಿಯ ಆಯ್ಕೆ ಪರಸ್ಪರ ಸಮ್ಮತದ ಮೂಲಕ ನಡೆಯುತ್ತದೆ.

8) ಕುಟುಂಬದೊಂದಿಗೆ ಸದಸ್ಯರ ಪರಸ್ಪರ ಹಕ್ಕುಗಳು ಮತ್ತು ಕರ್ತವ್ಯಗಳ ಅರಿವು (Mutual Rights and Obligations):

ಪ್ರತಿಯೊಬ್ಬ ಸದಸ್ಯರು ತಮ್ಮ ಕುಟುಂಬದ ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸುತ್ತಾನೆ. ಈ ರೀತಿಯ ವರ್ತನೆಗಳು ಕುಟುಂಬದ ಸಹಕಾರತ್ವವನ್ನು ಮತ್ತು ಪರಸ್ಪರ ನಿರ್ಭೀತ ನೆರವಿನನ್ನು ಸಾಧಿಸುತ್ತವೆ. ಎಲ್ಲ ಸದಸ್ಯರಿಗೂ ಒಂದೇ ಸಮಾನ ಕಾಯಕದ ಆತ್ಮೀಯ ರಕ್ಷಣೆಯನ್ನು ನೀಡುತ್ತವೆ.. ಕುಟುಂಬದ ಹಿರಿಯರು ಹೊಸಪೀಳಿಗೆಗಳಿಗೆ ಮಾರ್ಗದರ್ಶಕರಾಗಿ ಪಾತ್ರ ನಿರ್ವಹಿಸುತ್ತಾರೆ.

9) ಸ್ವಯಂ ಪರಿಪೂರ್ಣತೆ (Self Sufficiency):

ಅವಿಭಕ್ತ ಕುಟುಂಬ/Joint Family ಸಾಪೇಕ್ಷವಾಗಿ ಸ್ವಯಂ ಪರಿಪೂರ್ಣವಾಗಿರುತ್ತದೆ. “ಸದಸ್ಯರಿಗೆ ಈಡೇರಿಸಬೇಕಾಗಿದ್ದ ತೀರ್ಥಾಟನೆಯ ಆರ್ಥಿಕ, ವೈದ್ಯಕೀಯ, ಶೈಕ್ಷಣಿಕ, ಧಾರ್ಮಿಕ, ಮನೋರಂಜನೆ ಮತ್ತು ಇತರ ಕೆಲಸಕ್ಕೆ ಬೇಕಾಗಿದ್ದ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬದ ಸ್ವಾವಲಂಬನೆ ಕ್ಷೀಣಿಸಿದೆ.

ಅವಿಭಕ್ತ ಕುಟುಂಬದ ಪ್ರಕಾರಗಳು (Types of Joint Family):

ಅವಿಭಕ್ತ ಕುಟುಂಬವನ್ನು ಪಿತೃಪ್ರಧಾನ ಮತ್ತು ಮಾತೃಪ್ರಧಾನ ಅವಿಭಕ್ತ ಕುಟುಂಬಗಳೆಂದು ವರ್ಗೀಕರಿಸಬಹುದು.

1. ಪಿತೃಪ್ರಧಾನ ಅವಿಭಕ್ತ ಕುಟುಂಬ-ಇಲ್ಲಂ (Patriarchal Joint Family):

ಪಿತೃಪ್ರಧಾನ, ಅವಿಭಕ್ತ ಕುಟುಂಬ ಪುರುಷ ಪ್ರಧಾನವಾಗಿದ್ದು, ತಂದೆ ಅಥವಾ ಹಿರಿಯ ಮಗ ಕುಟುಂಬದ ಎಲ್ಲಾ ಹೊಣೆಗಾರಿಕೆಯನ್ನು ನಿಭಾಯಿಸುತ್ತಾನೆ. ಉದಾ: ಕೇರಳದ ನಂಬೂದರಿ ಛೋಟನಾಗಪುರದ ಮುಂಡಾ, ಅಸ್ಸಾಂನ ಅಂಗಾಮಿ ನಾಗಗಳು ಮುಂತಾದವರು.

ನಂಬೂದರಿ ಅವಿಭಕ್ತ ಕುಟುಂಬವನ್ನು “ಇಲ್ಲಂ” ಎಂದು ಕರೆಯುತ್ತಾರೆ. ನಂಬೂದರಿ ಪಿತೃವಂಶೀಯ ಕುಟುಂಬ ‘ಇಲ್ಲಂ’ನ ಸದಸ್ಯರು ತಂದೆಯ ವಂಶಾವಳಿಯಿಂದ ಗುರುತಿಸಿಕೊಳ್ಳುತ್ತಾರೆ. ಆಸ್ತಿಯನ್ನು ವಿಭಜನೆಯಾಗದಂತೆ ನಿರ್ಬಂಧವಿತ್ತು. ನಂಬೂದರಿ ಅವಿಭಕ್ತ ಕುಟುಂಬವನ್ನು/Joint Family ತಾಣವನ್ನು “ಇಲ್ಲಂ” ಎಂದು ಕರೆಯುತ್ತಾರೆ. ಇಂತಹ ಇಲ್ಲಂಗಳಲ್ಲಿ ಪುರುಷ, ಆತನ ಪತ್ನಿ ಅಥವಾ ಪತ್ನಿಯರು ಹಾಗೂ ಮಕ್ಕಳು, ಕಿರಿಯ ಸಹೋದರರು ಅವಿವಾಹಿತ ಸಹೋದರಿಯರು ವಾಸಿಸುತ್ತಿದ್ದರು. ಕೆಲವೊಮ್ಮೆ ಪುರುಷನ ವೃದ್ಧ ತಂದೆ-ತಾಯಿಗಳೂ ಮತ್ತು ಹಿರಿಯ ಮಗನ ಮಕ್ಕಳನ್ನು ಒಳಗೊಂಡಿತ್ತು.

ನಂಬೂದರಿಗಳು ಈ ಮೂಲಕ ಭೂಮಿಯ ಒಡೆತನ ತಮ್ಮಲ್ಲಿಯೇ ಸಂರಕ್ಷಿಸಿಕೊಳ್ಳುವ ಪದ್ಧತಿಯನ್ನು ಅನುಸರಿಸುತ್ತಿದ್ದರು. ಅಂತಹ ಆಚರಣೆ ಪ್ರಕಾರ ನಂಬೂದರಿಯೆ ಹಿರಿಯ ಮಗ ಮಾತ್ರ ತನ್ನ ಜಾತಿಯಲ್ಲಿ ವಿವಾಹವಾಗುತ್ತಿದ್ದನು. ಇನ್ನಿತರ ಸಹೋದರರು ತಾತ್ವಿಕವಾಗಿ ವಿವಾಹವಾಗಲು ನಿರ್ಬಂಧಗಳಿದ್ದವು. ಕೆಲವೊಮ್ಮೆ ನಂಬೂದರಿಯ ಹಿರಿಯ ಸೋದರನಿಗೆ ಸಂತಾನ ಪ್ರಾಪ್ತಿಯಾದಿದ್ದರೆ ಕಿರಿಯ ತಮ್ಮ ನಂಬೂದಾರಿ ಕನೈಯನ್ನು ವಿವಾಹವಾಗಲು ಅವಕಾಶವಿತ್ತು.

ಕಿರಿಯ ಸದಸ್ಯರು ಆಸ್ತಿಯ ಹಕ್ಕುಗಳಿಗೆ ಮಾತ್ರ ಸೀಮಿತವಾಗಿದ್ದರು. ಕುಟುಂಬದ ಹಿರಿಯ ಸದಸ್ಯ ಇಲ್ಲಂನ ಸಮಗ್ರ ಆಸ್ತಿಯ ಮೇಲೆ ನಿಯಂತ್ರಣ ಹೊಂದಿದ್ದನು. ಆದರೆ ಅಂತಹ ಆಸ್ತಿಯನ್ನು ಮಾರಾಟ, ದಾನ ಮತ್ತು ಇನ್ನಿತರಿಗೆ ಪರಭಾರೆ ಮಾಡುವ ಅಧಿಕಾರವಿರಲಿಲ್ಲ. ಈ ರೀತಿಯಲ್ಲಿ ವಹಿವಾಟು ನಡೆಸುವಾಗ ಕುಟುಂಬದ ಎಲ್ಲಾ ಸದಸ್ಯರ ಒಪ್ಪಿಗೆ ಪಡೆಯಬೇಕಾಗಿತ್ತು.. ಹಾಗೆಯೇ ಸ್ತ್ರೀ ಸದಸ್ಯರ ಅನುಮತಿ ಪಡೆಯಲೇಬೇಕೆಂಬ ಕಡ್ಡಾಯ ನಿಯಮವಿತ್ತು.

ಮಾತೃಪ್ರಧಾನ ಅವಿಭಕ್ತ ಕುಟುಂಬ-ತರವಾಡ (Matriarchal Joint Family):

ಮಾತೃಪ್ರಧಾನ ಅವಿಭಕ್ತ ಕುಟುಂಬವನ್ನು/Joint Family ಮಾತೃ ಕೇಂದ್ರಿಕ ಕುಟುಂಬವಾಗಿರುತ್ತದೆ. ಕುಟುಂಬದ ಆಸ್ತಿ ಮತ್ತು ಉತ್ತರಾಧಿಕಾರಿ ಹೊಣೆಗಾರಿಕೆಗಳು ತಾಯಿಯಾದ ಹೆಣ್ಣು ಮಕ್ಕಳಿಗೆ ವರ್ಗಾವಣೆಯಾಗುತ್ತವೆ. ಕೇರಳದ ನಾಯ‌ ಜಾತಿಯ ಮಾತೃಪ್ರಧಾನ ಅವಿಭಕ್ತ ಕುಟುಂಬವನ್ನು

ತರವಾಡು ಎಂದು ಕರೆಯುತ್ತಾರೆ. ತರವಾಡಗಳು ಮಾತೃಪ್ರಧಾನ ಕುಟುಂಬವಾಗಿದೆ. ಕುಟುಂಬದ ಹಿರಿಯ ಸ್ತ್ರೀ ಸದಸ್ಯ ಅಥವಾ ತಾಯಿ ಕುಟುಂಬದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾರೆ. ಪುರುಷ ಸದಸ್ಯರು ಸಹಾಯಕ ಪಾತ್ರವನ್ನು ನಿರ್ವಹಿಸುತ್ತಾರೆ. ತಂದೆಯ ಪಾತ್ರಕ್ಕೆ ಯಾವುದೇ ಮಹತ್ವವಿರಲಿಲ್ಲ.

ಕುಟುಂಬದ ನಿರ್ವಹಣೆಯನ್ನು ತರವಾಡನ ಅವಿಭಾಜಿತ ಆಸ್ತಿಯ ಆದಾಯದಿಂದ ನಿಭಾಯಿಸುತ್ತಾರೆ. ತಾಯಿ, ಚಿಕ್ಕಮ್ಮ ಅಥವಾ ವೃದ್ದೆಯು (ಅಜ್ಜಿಯು) ತರವಾಡಿನ ಆಂತರಿಕ ಕಾರ್ಯ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ಆದರೂ ಪುರುಷರ ಸಹಾಯ ಅಗತ್ಯವಾದ ಕಾರಣದಿಂದ ತಾಯಿಯ ಸಹೋದರ ಸಹಾಯಕನಾಗಿ ಪಾತ್ರ ನಿರ್ವಹಿಸುತ್ತಾನೆ.

“ಕರ್ಣವನ್‌” (Karnavan) ಎಂದು ಕರೆಯುತ್ತಾರೆ. “ಕರ್ಣವನ್” ತರವಾಡಿನ ಮಾತೃಪ್ರಧಾನ ಹೊಣೆಗಾರಿಕೆಯನ್ನು ನಿಭಾಯಿಸುತ್ತಾನೆ. ಕರ್ಣವನ್ನ ಮರಣ ಹೊಂದಿದ ನಂತರ ಈ ಅಧಿಕಾರ ಮುಂದಿನ ತಾಯಿಯ ಸೋದರನಿಗೆ ಹಸ್ತಾಂತರವಾಗುತ್ತದೆ. ಈತನ ತನ್ನ ಹೆಸರಿನಲ್ಲಿ ಹಣದ ಖಾತೆ ಹೊಂದಿರಬಹುದು, ಆಸ್ತಿಯನ್ನು ಪರಭಾರೆ ಮಾಡಬಹುದು. ಹಣವನ್ನು ಸಾಲವಾಗಿ ನೀಡಬಹುದು, ಭೂಮಿಯನ್ನು ದಾನವಾಗಿ ನೀಡಬಹುದು, ತರವಾಡು ಕಾಲಕ್ರಮೇಣ ಜನಸಂಖ್ಯೆ ಗಾತ್ರದಲ್ಲಿ ದೊಡ್ಡದಾದಾಗ, ತವಳಿಗಳಾಗಿ (Tavazhis) ವಿಭಜನೆಗೊಳ್ಳುತ್ತದೆ.

ತವಳಿ (Tavazhis) ಎಂದರೆ ತರವಾಡುವಿನ ವಿಭಜನೆಗೊಂಡ ಭಾಗವಾಗಿದ್ದು ಇದರಲ್ಲಿ ಒಬ್ಬ ಸ್ತ್ರೀ ಸದಸ್ಯೆ, ಆಕೆಯ ಮಕ್ಕಳು ಹಾಗೂ ಇನ್ನಿತರ ಮಾತೃಪ್ರಧಾನ ಮೂಲದ ಸದಸ್ಯರನ್ನು ಒಳಗೊಂಡಿರುವ ರಕ್ತ ಸಂಬಂಧಗಳ ಸಮೂಹವಾಗಿದೆ.

ತರವಾಡುನಲ್ಲಿನ ಪರಿವರ್ತನೆಗಳು (Changes in Tarawad):

ತರವಾಡುನ ಪರಿವರ್ತನೆಗಳನ್ನು ಕೆಳಕಂಡಂತೆ ಗುರುತಿಸಲಾಗಿದೆ.

1) ತರವಾಡಿನ ಆಸ್ತಿಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಸಮಪಾಲು ಪಡೆಯುತ್ತಾರೆ.

2) ಕರ್ಣವನ್‌ ಅಧಿಕಾರ ಸೀಮಿತವಾಗಿದೆ.

3) ತರವಾಡಿನ ಸದಸ್ಯರು ಕುಟುಂಬದ ಹೊರಗೆ ಜೀವಿಸುತ್ತಿದ್ದರೂ ಜೀವನೋಪಾಯಕ್ಕೆ ಧನ ಸಹಾಯ ಪಡೆಯಲು ಅರ್ಹತೆ ಹೊಂದಿದ್ದಾರೆ.

4) ನಾಯರ್ ವಿವಾಹ ಹೆಚ್ಚು ಶಾಶ್ವತ ಸ್ವರೂಪ ಪಡೆದುಕೊಂಡಿದೆ.

5) ಶಾಸನದ ಪ್ರಭಾವದಿಂದ ವಿಧವೆಯರಿಗೆ ಮತ್ತು ಮಕ್ಕಳಿಗೆ ಆಸ್ತಿಯಲ್ಲಿ ಭಾಗ ಪಡೆಯಲು ಹಕ್ಕು ಇದೆ.

ಪಿತೃಪ್ರಧಾನ ಅವಿಭಕ್ತ ಕುಟುಂಬಕ್ಕೆ ಒಂದು ಉದಾಹರಣೆಯಾಗಿ ನರಸಿಂಗನವ‌ ಕುಟುಂಬ (Nrasinganavara Family-A patriarchal Joint Family):
ನರಸಿಂಗನವರ ಕುಟುಂಬವು ಪಿತೃಪ್ರಧಾನ ಕುಟುಂಬವಾಗಿದ್ದು, ಸುಮಾರು 20) ಸದಸ್ಯರನ್ನು ಒಳಗೊಂಡಿದೆ. ಈ ಅವಿಭಕ್ತ ಕುಟುಂಬವೂ/Joint Family ಕರ್ನಾಟಕದ ಧಾರವಾಡ ಜಿಲ್ಲೆಯ ಲೋಕೂರು ಗ್ರಾಮದಲ್ಲಿ ನೆಲೆಸಿದ್ದಾರೆ. ನರಸಿಂಗನವರ್ ಕುಟುಂಬವು ಅತ್ಯಂತ ವಿಕೃತವಾದ ಅವಿಭಕ್ತ ಕುಟುಂಬವಾಗಿದೆ. ಈ ಕುಟುಂಬದಲ್ಲಿ ಐದು ಪೀಳಿಗೆಯ ಜನರಿದ್ದಾರೆ. ಭೀಮಣ್ಣ ಜೀನಪ್ಪ ನರಸಿಂಗನವ‌ ಕುಟುಂಬ ಮುಖ್ಯಸ್ಥರು 206 ಸದಸ್ಯರಿರುವ ಅತ್ಯಂತ ಬೃಹತ್ ಗಾತ್ರದ ಅವಿಭಕ್ತ ಕುಟುಂಬದ ನಿರ್ವಹಣೆಯನ್ನು ಮಾಡುತ್ತಾರೆ.

ನರಸಿಂಗನವರ (72) ಕುಟುಂಬದ ಹಿರಿಯ ಸುಮಾರು 30 ವರ್ಷದಿಂದ ಗಜಗಾತ್ರದ (Jumbo) ಕುಟುಂಬದ ಖರ್ಚು-ವೆಚ್ಚವನ್ನು ನಿರ್ವಹಿಸುತ್ತಿದ್ದಾರೆ. ಅವರ ಮಾತುಗಾರನಂತೆ, “ಕುಟುಂಬದ ಆರ್ಥಿಕ ಹೊರೆಯನ್ನು ನಿಭಾಯಿಸುವುದು ಹೆಚ್ಚು ಜವಾಬ್ದಾರಿ ಹುಟ್ಟಿಸಿದೆ.

ಹಿರಿಯರು ತಮ್ಮ ಜ್ಞಾನ (ಬುದ್ದಿವಂತಿಕೆ) ಮತ್ತು ವಿಶ್ವಾಸದಿಂದ ಇಂತಹ ಕಾರ್ಯವನ್ನು ನನಗೆ ಅರ್ಪಿಸಿದ್ದಾರೆ. ಆದಾಗ್ಯೂ, ನಾನು ಕುಟುಂಬದ ಹಿತಾಸಕ್ತಿಗಾಗಿ ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇನೆ” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕೃಷಿ ಈ ಕುಟುಂಬದ ಪ್ರಮುಖ ವೃತ್ತಿಯಾಗಿದೆ. ಈ ಕುಟುಂಬಕ್ಕೆ ಸುಮಾರು 270 ಎಕರೆ ಭೂಮಿ ಇದೆ. ಈ ಸಂಪನ್ಮೂಲದಿಂದ ವಾರ್ಷಿಕವಾಗಿ 6 ರಿಂದ 12 ಲಕ್ಷದವರಿಗೂ ಆದಾಯ ಗಳಿಸುತ್ತಾರೆ. ಅದರಲ್ಲಿ 10 ಲಕ್ಷ ರೂ.ಗಳನ್ನು ಕೂಲಿಕಾರರು ಮತ್ತು ಕೃಷಿ ಸಲಕರಣೆಯನ್ನು ಕೊಳ್ಳಲು ವಿನಿಯೋಗಿಸುತ್ತಾರೆ.

ಕುಟುಂಬಕ್ಕೆ ಬೇಕಾದ ಆಹಾರ, ಹಣ್ಣು ತರಕಾರಿ ಮತ್ತು ಹಾಲು ತಮ್ಮ ಸ್ವಂತ ದುಡಿಮೆಯಿಂದ ಸಂಪಾದಿಸುತ್ತಾರೆ, ಹಾಗೆಯೇ ಇನ್ನಿತರ ದಿನಬಳಕೆ ವಸ್ತುಗಳು, ಬಟ್ಟೆ, ಔಷಧಿ, ಸೋಪು ಮತ್ತು ಟೀ ಸೊಪ್ಪಿಗಾಗಿ ಖರ್ಚನ್ನು ಮಾಡುತ್ತಾರೆ. ಕೆಲವೊಮ್ಮೆ ಸಂಕಷ್ಟ ಅಥವಾ ಹಣಕಾಸಿನ ತೊಂದರೆ ಉಂಟಾದಾಗ ಕುಟುಂಬ ಇತರ ಸದಸ್ಯರು ಪರಸ್ಪರ ನೆರವು ನೀಡುತ್ತಾರೆ. ಹಾಗೆಯೇ ನರಸಿಂಗನವರು ಪ್ರತಿಯೊಂದು ಹಣಕಾಸಿನ ದಾಖಲೆಯನ್ನು ಕಾಪಾಡಿಕೊಂಡಿರುತ್ತಾರೆ.

ಕುಟುಂಬದಲ್ಲಿ ಪ್ರತಿ 8 ಅಥವಾ 10 ವರ್ಷಗಳಲ್ಲಿ ಕೆಲವರ ವಿವಾಹ ಸಮಾರಂಭವನ್ನು ಒಟ್ಟಿಗೆ ಏರ್ಪಡಿಸುತ್ತಾರೆ. ಕುಟುಂಬದ ಏಕೈಕ ಮನೋರಂಜನೆಯ ಮೂಲವೆಂದರೆ ದೂರದರ್ಶನ (ಟಿವಿ).

ಅವಿಭಕ್ತ ಕಟುಂಬದ ಅನುಕೂಲಗಳು (Advantages of Joint Family):

1) ಆರ್ಥಿಕ ಅನುಕೂಲ (Economic Advantage):

ಅವಿಭಕ್ತ ಕುಟುಂಬ/Joint Family ಆಸ್ತಿಯನ್ನು ಸಣ್ಣ ಸಣ್ಣ ಹಿಡುವಳಿಗಳಾಗುವುದನ್ನು ತಪ್ಪಿಸುತ್ತದೆ. ಪ್ರತಿಯೊಬ್ಬ ಸದಸ್ಯರ ದುಡಿಮೆ ಮತ್ತು ಸಹಕಾರದಿಂದ ಆರ್ಥಿಕ ಚಟುವಟಿಕೆಗಳು ವೃದ್ಧಿಸಿ ವ್ಯಕ್ತಿಯ ಸರ್ವಾಂಗೀಯ ಬೆಳವಣಿಗೆಗೆ ಅನುಕೂಲವಾಗುತ್ತದೆ.

2) ಸದಸ್ಯರ ರಕ್ಷಣೆ (Protection to Members):

ಅವಿಭಕ್ತ ಕುಟುಂಬವು/Joint Family ತನ್ನ ಸದಸ್ಯರನ್ನು ಪ್ರತಿ ಹಂತದಲ್ಲೂ ರಕ್ಷಿಸುತ್ತದೆ.ಜನನ, ಬಾಲ್ಯ, ಯೌನ, ಪ್ರೌಢಾವಸ್ಥೆ ಮತ್ತು ವೃದ್ಧಾಪ್ಯ ಹಾಗೂ ರೋಗ-ರುಜಿನ, ಸಾವು ಮತ್ತು ಇನ್ನಿತರ ಸಂಕಷ್ಟದಲ್ಲಿ ನೆರವನ್ನು ನೀಡುತ್ತದೆ.

3) ಮನರಂಜನೆ (Provides Recreation):

ಅವಿಭಕ್ತ ಕುಟುಂಬವು/Joint Family ತನ್ನ ಸದಸ್ಯರಿಗೆ ಮನರಂಜನೆ ದೊರೆಯುತ್ತದೆ. ಇಲ್ಲಿ ಎಲ್ಲರೂ ಒಟ್ಟಿಗೆ ಆಟ-ಓಟದಲ್ಲಿ ಭಾಗವಹಿಸುತ್ತಾರೆ. ಇದರಿಂದ ಎಲ್ಲರಲ್ಲಿ ಐಕ್ಯತೆ ಬೆಳೆಯುತ್ತದೆ.

4) ವ್ಯಕ್ತಿತ್ವ ವಿಕಾಸ (Development of Personality):

ಅವಿಭಕ್ತ ಕುಟುಂಬವು/Joint Family ತನ್ನ ಸದಸ್ಯರು ಕುಟುಂಬದ ಸಾಂಸ್ಕೃತಿಕ ಚೌಕಟ್ಟಿನಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತದೆ.. ಈ ನಿಟ್ಟಿನಲ್ಲಿ ವ್ಯಕ್ತಿಯು ತಾಳ್ಮೆ-ಸಹನೆ (Generosity), ಸಹಕಾರ ಸೇವಾ-ಮನೋಭಾವನೆ, ಮತ್ತು ವಿಧೇಯತೆಯನ್ನು ಕಲಿಯುತ್ತಾರೆ. ವ್ಯಕ್ತಿಯ ಸ್ವಾರ್ಥದ ಬದಲು, ಅವಿಭಕ್ತ ಕುಟುಂಬದ ಪ್ರಭಾವದಿಂದ ತ್ಯಾಗ ಮತ್ತು ಶಿಸ್ತು ಸಂಯಮವನ್ನು ಅವನ್ನು ಬೆಳೆಸಿಕೊಳ್ಳುತ್ತಾರೆ.

5) ಸಮಾಜವಾದದ ಪರಿಕಲ್ಪನೆ (Socialism in Nature):

ಅವಿಭಕ್ತ ಕುಟುಂಬವು//Joint Family ಸಹಕಾರೀ-ಸಂಘದಂತೆ ಕಾರ್ಯನಿರ್ವಹಿಸುತ್ತದೆ. ಈ ಕುಟುಂಬದಲ್ಲಿ ಪ್ರತಿಯೊಬ್ಬ ವ್ಯಕ್ತಿ ತನ್ನ ವಯಸ್ಸು, ಶಕ್ತಿ, ಲಿಂಗ ಮತ್ತು ಇನ್ನಿತರ ಸಾಮರ್ಥ್ಯಗಳ ಅನುಗುಣವಾಗಿ ಕಾರ್ಯನಿರ್ವಹಿಸುತ್ತಾರೆ. ಕುಟುಂಬದ ಉದ್ಯೋಗದಲ್ಲಿ ಪ್ರತಿಯೊಬ್ಬ ವ್ಯಕ್ತಿಗಳು ಶ್ರಮವಹಿಸುವ ಮೂಲಕ ಸಂಪತ್ತು ಕೋಢೀಕರಿಸುತ್ತಾರೆ.

ಇವೆಲ್ಲಾ ಪ್ರವೃತ್ತಿ ಸಮಾಜವಾದ ತತ್ವವನ್ನು ಪರೋಕ್ಷವಾಗಿ ಎತ್ತಿ ಹಿಡಿಯುತ್ತದೆ. ಸಾಮಾನ್ಯವಾದ ಅಡುಗೆಮನೆ ಅಥವಾ ಒಲೆಯಿಂದ ತಯಾರಿಸಿದ ಆಹಾರ ಸೇವನೆಯು ಸಹಜವಾಗಿ ಪರಸ್ಪರ ಹೊಂದಾಣಿಕೆ ತತ್ವದ ಆಧಾರದ ಮೇಲೆ ಸಿದ್ದವಾಗುತ್ತದೆ.

ಸ್ವಾಭಾವಿಕವಾಗಿ ಕುಟುಂಬದ ಆಂತರಿಕ ಸಂಬಂಧಗಳು ಮತ್ತು ಇನ್ನಿತರ ವ್ಯಕ್ತಿಗಳ ಧಾರಾಳತನ ಮತ್ತು ವಾತ್ಸಲ್ಯ ಪಡೆದ ವ್ಯಕ್ತಿಗಳು ಇದೇ ರೀತಿಯ ಪ್ರವೃತ್ತಿಯನ್ನು ವ್ಯಕ್ತಪಡಿಸುತ್ತಾರೆ.

ಅವಿಭಕ್ತ ಕುಟುಂಬದ ಅನಾನುಕೂಲಗಳು (Disadvantages of Joint Families):

ಅವಿಭಕ್ತ ಕುಟುಂಬಗಳು/Joint Family ಅನಾನುಕೂಲಗಳನ್ನು ಒಳಗೊಂಡಿದೆ. ಅವುಗಳೆಂದರೆ,

1) ಸೋಮಾರಿತನವನ್ನು ಪ್ರೋತ್ಸಾಹಿಸುತ್ತದೆ (Promotes Idleness):

ಅವಿಭಕ್ತ ಕುಟುಂಬಗಳು/Joint Family ಸೋಮಾರಿತನವನ್ನು ಪ್ರೋತ್ಸಾಹಿಸುತ್ತದೆ. ಈ ಅವಿಭಕ್ತ ಕುಟುಂಬದಲ್ಲಿ ದುಡಿಯುವವರು ಸದಾ ದುಡಿಯುತ್ತಿರುತ್ತಾರೆ. ಹಾಗೆಯೇ ಕೆಲವು ವ್ಯಕ್ತಿಗಳು ಸೋಮಾರಿಗಳಾಗಿ ಜೀವನವನ್ನು ನಡೆಸುತ್ತಾರೆ.

2) ವ್ಯಕ್ತಿತ್ವದ ಬೆಳವಣಿಗೆಗೆ ಅಡಚಣೆ (Hindrance to the Development of Personality):

ಅವಿಭಕ್ತ ಕುಟುಂಬದಲ್ಲಿ ವ್ಯಕ್ತಿತ್ವದ ಬೆಳವಣಿಗೆ ಮತ್ತು ಸ್ವಾವಲಂಬನೆಗೆ ತುಂಬಾ ಅವಕಾಶವಿಲ್ಲ. ವ್ಯಕ್ತಿ ಯಾವಾಗಲೂ ಹಿರಿಯರ ಬೆಂಬಲ ಮತ್ತು ನೆರವಿನಲ್ಲಿ ಬೆಳೆಯುತ್ತಾರೆ. ಬಾಹ್ಯ ಪ್ರಪಂಚದಲ್ಲಿ ಒಬ್ಬಂಟಿಯಾಗಿ ಜೀವನ ಎದುರಿಸುವ ಸಾಮರ್ಥ್ಯ ಇರುವುದಿಲ್ಲ.

3) ಸ್ವಜನ ಪಕ್ಷಪಾತ, ಆಂತರಿಕ ಘರ್ಷಣೆ ಮತ್ತು ದಾವೆಗಳಿಗೆ ಪ್ರೋತ್ಸಾಹ Det (Encourages Litigation and Nepotism):

ಅವಿಭಕ್ತ ಕುಟುಂಬದಲ್ಲಿ//Joint Family ಭಿನ್ನಾಭಿಪ್ರಾಯಗಳು ಹೆಚ್ಚಾದಂತೆ ಆಂತರಿಕ ಘರ್ಷಣೆ ಮತ್ತು ದಾವೆಗಳು ಹೆಚ್ಚಾಗುತ್ತವೆ. ಅವಿಭಕ್ತ ಕುಟುಂಬದ ಶಾಂತಿ-ಸುವ್ಯವಸ್ಥೆಗೆ ಆಸ್ತಿಯ ಹಕ್ಕುಗಳು, ಸದಸ್ಯರ ಭಿನ್ನಾಭಿಪ್ರಾಯ ಮತ್ತು ದಾವೆಯ ಮೂಲಕ ವಿಘಟನೆಗೊಳ್ಳುತ್ತದೆ. ಕೆಲವು ತಜ್ಞರ ಅಭಿಪ್ರಾಯಕ್ಕೆ ಅನುಸಾರವಾಗಿ, ಅವಿಭಕ್ತ ಕುಟುಂಬಗಳು ಸ್ವಜನಪಕ್ಷಪಾತ ಮತ್ತು ಕರ್ತನ ದೌರ್ಜನ್ಯಗಳನ್ನು ಹಾಗೂ ಸಂತೋಷಿಸುವ ವ್ಯವಸ್ಥೆಯಾಗಿದೆ.

4) ಉಳಿತಾಯ ಮತ್ತು ಆರ್ಥಿಕ ಹೂಡಿಕೆಗೆ ಕಷ್ಟವಾಗುತ್ತದೆ (Unfavourable for Savings and Investments):

ಅವಿಭಕ್ತ ಕುಟುಂಬವು ಬಂಡವಾಳ ಶೇಖರಣೆಗೆ ಕಷ್ಟವಾಗುತ್ತದೆ. ಸದಸ್ಯರ ಮೂಲಭೂತ ಅಗತ್ಯಗಳನ್ನು ಈಡೇರಿಸಲು ವಾರ್ಷಿಕ ಆದಾಯದ ಮೊತ್ತವನ್ನೆಲ್ಲಾ ಎನಿಯೋಗಿಸಬೇಕು. ದುಂದುವೆಚ್ಚ, ಭವಿಷ್ಯದ ಬಗ್ಗೆ ಅಸಡ್ಡೆ, ಧಾರ್ಮಿಕ ಆಚರಣೆಗಳಲ್ಲಿ ಹಣದ ಖರ್ಚು ಇತ್ಯಾದಿಗಳಿಂದ ಉಳಿತಾಯ ಮಾಡಲು ಕಷ್ಟಸಾಧ್ಯವಾಗಿದೆ.

5) ಸಾಮಾಜಿಕ ಚಲನೆಗೆ ಹಾನಿಕಾರಕವಾಗಿದೆ ಮತ್ತು ಸ್ತ್ರೀಯರ ಸ್ಥಾನಮಾನ ಕೆಳಗಿನ ಅಂತರವನ್ನು ತಂದಿದೆ ಕಾರಣವಾಗಿದೆ (Hinders Social Mobility and Low Status of Women):

ಅವಿಭಕ್ತ ಕುಟುಂಬವು ವೈಯಕ್ತಿಕ ಬೆಳವಣಿಗೆಗೆ ಮಾರಕವಾಗುತ್ತದೆ. ವ್ಯಕ್ತಿಯ ಸ್ವಂತ ಅಭಿಪ್ರಾಯಗಳು, ಪ್ರತಿಭೆ ಸಾಮರ್ಥ್ಯ, ಪ್ರವೃತ್ತಿ ಅಥವಾ ಉದ್ಯಮಶೀಲತೆಗೆ ಕುಟುಂಬದ ಹಿರಿಯರು ತಿರಸ್ಕಾರವನ್ನು ವ್ಯಕ್ತಪಡಿಸುತ್ತಾರೆ ಅಥವಾ ಅಸಹಕಾರ ನೀಡುತ್ತಾರೆ.

ಅವಿಭಕ್ತ ಕುಟುಂಬಗಳು ಸಾಮಾನ್ಯವಾಗಿ ಪಿತೃಪ್ರಧಾನದಲ್ಲಿ ಪುರುಷ ಪ್ರಧಾನತೆಯನ್ನು ಎತ್ತಿ ಹಿಡಿದು ಮತ್ತು ಸ್ತ್ರೀಯರು ಪುರುಷರಿಗೆ ಅಧೀನರಾಗಿ ಇರಬೇಕು. ವ್ಯಕ್ತಿಗಳ ಅಂತಸ್ತು, ವಯಸ್ಸು ಮತ್ತು ಲಿಂಗ ಆಧಾರಿತವಾಗಿದ್ದು, ಸ್ತ್ರೀಯರ ಸ್ವಾತಂತ್ರ್ಯಕ್ಕೆ ಮತ್ತು ಪ್ರಗತಿಗೆ ಹಿನ್ನಡೆಯಾಗಬಹುದು.

ಅವಿಭಕ್ತ ಕುಟುಂಬದ ಪರಿವರ್ತನೆಗಳು (Changes in Joint Family):

ಅವಿಭಕ್ತ ಕುಟುಂಬಗಳ/Joint Family ಪರಿವರ್ತನೆಗಳನ್ನು ಎರಡು ಪ್ರಕಾರಗಳಾಗಿ ಪಿಂಗಡಿಸಬಹುದು. ಅವುಗಳೆಂದರೆ ರಚನಾತ್ಮಕ ಮತ್ತು ಕಾರ್ಯಾತ್ಮಕ ಪರಿವರ್ತನೆಗಳು.

(A) ಅವಿಭಕ್ತ ಕುಟುಂಬದ ರಚನಾತ್ಮಕ ಪರಿವರ್ತನೆಗಳು (Changes in the Structure of the Joint Family):

1) ಅವಿಭಕ್ತ ಕುಟುಂಬದ ಗಾತ್ರದಲ್ಲಿ ಪರಿವರ್ತನೆ (Changes in the size of the Joint Family):

ಅವಿಭಕ್ತ ಕುಟುಂಬಗಳ/Joint Family ಗಾತ್ರ ಕಡಿಮೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕುಟುಂಬದಲ್ಲಿ ಎರಡು ಅಥವಾ ಮೂರು ತಲೆಮಾರಿನ 8-10 ಸದಸ್ಯರಿರುತ್ತಾರೆ.

2) ಆಸ್ತಿಯ ಒಡೆತನದಲ್ಲಿ ಪರಿವರ್ತನೆಗಳು (Changes in Ownership of Property):

ಹಿಂದೂ ಉತ್ತರಾಧಿಕಾರಿ ಕಾಯ್ದೆ 1956 ಮತ್ತು ಇತರೆ ಶಾಸನಗಳನ್ನು ಜಾರಿಗೊಳಿಸಿದ ನಂತರ ಆಸ್ತಿಯ ಒಡೆತನದಲ್ಲಿ ಪರಿವರ್ತನೆಗಳು ಸಂಬಂಧಿಸಿತ್ತು. ಆಸ್ತಿಯ ಒಡೆತನದಲ್ಲಿ ಸ್ತ್ರೀಯರಿಗೂ ಕಾನೂನಿನ ಪ್ರಕಾರ ಸಮಾನ ಪಾಲು ನೀಡಲಾಗಿದೆ.

3) ಅಧಿಕಾರದಲ್ಲಿ ಪರಿವರ್ತನೆಗಳು (Changes in Authority):

ಇತ್ತೀಚಿನ ದಿನಗಳಲ್ಲಿ ಕುಟುಂಬದ ಏಕ ವ್ಯಕ್ತಿಯ ಅಧಿಕಾರದ ಪ್ರಭಾವ ಕ್ಷೀಣಿಸುತ್ತಿದೆ. ಕರ್ತ ಅಥವಾ ಕುಟುಂಬದ ಹಿರಿಯ ಸದಸ್ಯನ ಅಧಿಕಾರ ಸೀಮಿತವಾಗುತ್ತಿದೆ. ಕುಟುಂಬ ಪಿತೃ ಪ್ರಧಾನ ಪ್ರಾಮುಖ್ಯತೆಯು ಕಡಿಮೆಯಾಗುತ್ತಿದೆ.

4) ಸ್ತ್ರೀಯರ ಅಂತಸ್ತು ಮತ್ತು ಸ್ಥಾನಮಾನದಲ್ಲಿ ಪರಿವರ್ತನೆಗಳು (Changes in Status of Women):

ಸ್ವಾತಂತ್ರೋತ್ತರ ಭಾರತದಲ್ಲಿ ಸ್ತ್ರೀಯರಿಗೆ ಗೌರವ-ಘನತೆ ಸ್ಥಾನಮಾನಗಳು ಉತ್ತಮಗೊಂಡಿವೆ. ಆದರೂ ಪುರುಷರಷ್ಟು ಸರಿಸಮಾನವಾದ ಅಂತಸ್ತುಗಳಿಸಿಲ್ಲವಾದರೂ ಅಲ್ಪಮಟ್ಟಿಗೆ ಸುಧಾರಣೆಯಾಗಿದೆ.

5) ಜೀವನಸಂಗಾತಿ ಆಯ್ಕೆಗಳು ಮತ್ತು ಸಂಬಂಧಗಳಲ್ಲಿ ಪರಿವರ್ತನೆಗಳು (Changes in the Selection of Mates and Conjugal Relationship):

ಅವಿಭಕ್ತ ಕುಟುಂಬದಲ್ಲಿ/Joint Family ಹಿರಿಯ ಸದಸ್ಯರು ಕಿರಿಯ ಸದಸ್ಯರ ಸಂಗಾತಿ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಯುವಕ ಯುವತಿಯರಿಗೆ ಆಯ್ಕೆ ್ವಾತಂತ್ರ್ಯ ನಿಯಮಿತವಾಗಿತ್ತು. ಆದರೆ, ಇಂದಿನ ದಿನಗಳಲ್ಲಿ ತಂದೆ-ತಾಯಿಗಳು ಮತ್ತು ಮಕ್ಕಳು ಒಟ್ಟಿಗೆ ಸೇರಿ ಜೀವನ ಸಂಗಾತಿಗಳನ್ನು ಆಯ್ಕೆ ಮಾಡುತ್ತಾರೆ.

6) ಅತ್ತೆ ಸೊಸೆಯ ಸಂಬಂಧಗಳಲ್ಲಿ ಪರಿವರ್ತನೆಗಳು (Changes in the Relations of In-laws)

ಇತ್ತೀಚಿನ ದಿನಗಳಲ್ಲಿ ಅತ್ತೆ-ಸೊಸೆಯ ಸಂಬಂಧಗಳಲ್ಲಿ ಮಾರ್ಪಾಡುಗಳು ಆಗಿವೆ.

7) ದುರ್ಬಲವಾಗುತ್ತಿರುವ ಕೌಟುಂಬಿಕ ನಿಯಮಗಳು (Weakening of Family Norms):

ಸಮಾನತೆ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ, ವ್ಯಕ್ತಿವಾದ, ವೈಚಾರಿಕತೆ, ಮುಂತಾದ ಮೌಲ್ಯಗಳು ಸಾಂಪ್ರದಾಯಿಕ ಅವಿಭಕ್ತ ಕುಟುಂಬಗಳ ನಿಯಮಗಳಲ್ಲಿ ಪರಿವರ್ತನೆ ಉಂಟುಮಾಡಿವೆ.

8) ಅವಲಂಬಿತ ಅಣುಕುಟುಂಬಗಳಿಗೆ ದೊರೆಯುತ್ತಿರುವ ಜನಪ್ರಿಯತೆ

ಆಧುನಿಕ ಶಿಕ್ಷಣ, ಆರ್ಥಿಕ ವ್ಯವಸ್ಥೆ ಮತ್ತು ಉದ್ಯೋಗಾವಕಾಶಗಳು ಯುವಕರು ಕುಟುಂಬದ ಹೊರಗೆ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗಿದೆ. ಅವಿಭಕ್ತ ಕುಟುಂಬದಿಂದ ದೂರವಾಗಿ ನಗರ-ಪಟ್ಟಣಗಳಲ್ಲಿ ನೆಲೆಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಆದರೂ, ಸಂಕಷ್ಟ ಮತ್ತು ಸುಖಸಂತೋಷ ಸಂದರ್ಭಗಳಲ್ಲಿ ಅವಿಭಕ್ತ ಕುಟುಂಬದ ನೆರವು ಮತ್ತು ಬೆಂಬಲವನ್ನು ಪಡೆದುಕೊಳ್ಳುತ್ತಾರೆ.

(B) ಅವಿಭಕ್ತ ಕುಟುಂಬಗಳ ಕಾರ್ಯಾತ್ಮಕ ಪರಿವರ್ತನೆಗಳು (Increasing Popularity of Dependent Nuclear Family):

1) ಸಾಮಾನ್ಯ ವಾಸಸ್ಥಳದ ಪರಿವರ್ತನೆಗಳು (Changes in the Provision of Common Residence):

ಅವಿಭಕ್ತ ಕುಟುಂಬಗಳು ತಮ್ಮ ಸದಸ್ಯರಿಗೆ ಸಾಮಾನ್ಯ ವಾಸಸ್ಥಳ ಮತ್ತು ಮೂಲಭೂತ ಅಗತ್ಯಗಳನ್ನು ಈಡೇರಿಸುತ್ತಿತ್ತು. ಆದರೆ, ಇತ್ತೀಚಿನ ಪರಿವರ್ತನೆಗಳಿಂದ ಕುಟುಂಬದ ಹೊರಗೆ ತಮ್ಮ ಮೂಲಭೂತ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಿದೆ.

2) ಧಾರ್ಮಿಕ ಕಾರ್ಯಗಳಲ್ಲಿ ಪರಿವರ್ತನೆಗಳು (Changes in the Religious Functions):

ಕುಟುಂಬವು ಸದಸ್ಯರೆಲ್ಲಾ ವಿಶೇಷವಾದ ಧಾರ್ಮಿಕ ಸಂದರ್ಭಗಳಾದ ಹಬ್ಬ, ಹರಿದಿನಗಳು, ವಿವಾಹ ಸಮಾರಂಭಗಳು, ಕ್ರಿಯಾ-ವಿಧಿಗಳು, ಪಿತೃಪೂಜೆ ಮುಂತಾದ ಸಂದರ್ಭಗಳಲ್ಲಿ ಒಟ್ಟಿಗೆ ಸೇರುತ್ತಾರೆ.

3) ನವಜಾತ ಶಿಶುವಿನ ಸಂರಕ್ಷಣೆ ಮತ್ತು ಸಾಮಾಜೀಕರಣದ ಪಾತ್ರಗಳಲ್ಲಿ ಪರಿವರ್ತನೆಗಳು (Changes in the Role of Protection and Socialization of Children):

ಇಂದಿನ ದಿನಗಳಲ್ಲಿ ನವಜಾತ ಶಿಶುವಿನ ಸಂರಕ್ಷಣೆ ಮತ್ತು ಸಾಮಾಜೀಕರಣಕ್ಕಾಗಿ ಹಲವಾರು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಅವುಗಳಲ್ಲಿ ಪ್ರಮುಖವಾದದ್ದು-ಶಿಶುವಿಹಾರಗಳು, ಶಾಲೆ, ಕಾಲೇಜುಗಳು, ವಿಮಾ ಕಂಪನಿಗಳು, ಪ್ರಸೂತಿ ಕೇಂದ್ರಗಳು, ಅಬಲಾಶ್ರಮಗಳು ಮುಂತಾದ ಸಂಸ್ಥೆಗಳು ಅವಿಭಕ್ತ ಕುಟುಂಬಗಳ ಸಂರಕ್ಷಣೆ ಮತ್ತು ಸಾಮಾಜೀಕರಣ ಕಾರ್ಯಗಳನ್ನು ನಿರ್ವಹಿಸುತ್ತಿವೆ. ಹಾಗೆಯೇ ಸಾಮಾಜೀಕರಣ ಮತ್ತು ಶಿಕ್ಷಣ ಪ್ರಕ್ರಿಯೆಯಲ್ಲಿ ಹಿರಿಯರ ಪಾತ್ರ ಗಣನೀಯವಾಗಿ ಕ್ಷೀಣಿಸಿದೆ.

4) ಆರ್ಥಿಕ ಕಾರ್ಯಗಳಲ್ಲಿ ಪರಿವರ್ತನೆಗಳು (Changes in Economic Functions):

ಯುವಜನತೆ ನಗರ-ಪಟ್ಟಣಗಳಲ್ಲಿ ತಮ್ಮ ಜೀವನವನ್ನು ರೂಢಿಸಿಕೊಳ್ಳುತ್ತಿದ್ದಾರೆ. ಕೈಗಾರೀಕರಣ, ಪ್ರಭಾವದಿಂದ ಹೊಸಪೀಳಿಗೆಗಳು ಉತ್ತಮವಾದ ಉದ್ಯೋಗಗಳು ಮತ್ತು ಸ್ವತಂತ್ರವಾದ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಿದೆ. ಆದ್ದರಿಂದ ಅವಿಭಕ್ತ ಕುಟುಂಬದ ಆರ್ಥಿಕ ಕಾರ್ಯವಾಗಿ ಗಣನೀಯವಾಗಿ ಕ್ಷೀಣಿಸಿದೆ.

5) ಮನರಂಜನೆಯ ಕಾರ್ಯದಲ್ಲಿ ಪರಿವರ್ತನೆಗಳು (Changes in Recreational Functions):

ಅವಿಭಕ್ತ ಕುಟುಂಬದ ಮನರಂಜನೆಯು ಬಾಹ್ಯ ವ್ಯವಸ್ಥೆಗಳಾದ ಟಿ.ವಿ. (ದೂರದರ್ಶನ), ರೇಡಿಯೋ, ಚಲನಚಿತ್ರಗಳು, ಕ್ರೀಡೆ, ದಿನಪತ್ರಿಕೆಗಳು, ವಾರಪತ್ರಿಕೆಗಳು ಮನರಂಜನೆಗಾಗಿ ಅವಲಂಬಿಸುತ್ತಿದ್ದಾರೆ.

ಅವಿಭಕ್ತ ಕುಟುಂಬಗಳ ಪರಿವರ್ತನೆಗಳಲ್ಲಿ ಕಾರಣಗಳು (Causes for Changes in Joint Family):

ಸಮಾಜಶಾಸ್ತ್ರಜ್ಞರು ಭಾರತದಲ್ಲಿ ಅವಿಭಕ್ತ ಕುಟುಂಬಗಳ ಪರಿವರ್ತನೆಗೆ ಕಾರಣಗಳನ್ನು ಈ ಕೆಳಕಂಡ ಅಂಶಗಳನ್ನು ಗುರುತಿಸಿದ್ದಾರೆ.

1) ಔದ್ಯೋಗೀಕರಣ

2) ನಗರೀಕರಣ

3) ಜನಸಂಖ್ಯಾ ಬೆಳವಣಿಗೆ

4) ಶಿಕ್ಷಣ

5) ಬದಲಾಗುತ್ತಿರುವ ಸ್ತ್ರೀಯರ ಅಂತಸ್ಸು

6) ಸಾಮಾಜಿಕ ಶಾಸನಗಳ ಪ್ರಭಾವ.

1) ಔದ್ಯೋಗೀಕರಣ (Industrialization):

ದೇಶದ ಎಲ್ಲಾ ಕಡೆಗಳಲ್ಲಿ ಹೊಸ ಮಾದರಿಯ ಕಾರ್ಖಾನೆಗಳು ಸ್ಥಾಪನೆಗೊಂಡಿವೆ. ಈ ಬೆಳವಣಿಗೆಯಿಂದಾಗಿ ಕೃಷಿ ಮತ್ತು ಸಾಂಪ್ರದಾಯಿಕ ಗೃಹಕೈಗಾರಿಕೆ ಸಂಕಷ್ಟಕ್ಕೆ ಒಳಗಾಗಿ ಸಮಾಜದ ಮೇಲೆ ಗಣನೀಯವಾದ ಪರಿಣಾಮ ಬೀರಿದೆ. ಹೊಸ ಕಾರ್ಖಾನೆಗಳಿಗೆ ಕುಶಲಕರ್ಮಿಗಳು ಮತ್ತು ಕೃಷಿ ಕಾರ್ಮಿಕರ ಗ್ರಾಮಗಳಿಂದ ಕೈಗಾರಿಕಾ ಕೇಂದ್ರಗಳಿಗೆ ವಲಸೆ ಹೋಗುತ್ತಿದ್ದಾರೆ.

ಇವೆಲ್ಲಾ ಪರಿವರ್ತನೆಗಳ ಪ್ರಕ್ರಿಯೆ ವ್ಯಾಪಕವಾದ್ದಂತೆ ಅವಿಭಕ್ತ ಕುಟುಂಬವು ಪರಿವರ್ತನೆಗೆ ಒಳಗಾಯಿತು. ಇದರೊಂದಿಗೆ ಸಾರಿಗೆ ಮತ್ತು ಸಂಪರ್ಕದ ಪ್ರಸರಣ ಅವಿಭಕ್ತ ಕುಟುಂಬದ ಪರಿವರ್ತನೆ ವೇಗ ಹೆಚ್ಚಾಯಿತು.

2) ನಗರೀಕರಣ (Urbanization):

ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಿವಿಧ ಉದ್ಯೋಗಾವಕಾಶಗಳಿಗಾಗಿ ವಲಸೆ ಹೋಗುವುದರಿಂದ ಕೃಷಿಯ ಮೇಲಿನ ಅವಲಂಬನೆ ಕಡಿಮೆಯಾಗುತ್ತಿದೆ.

ನಗರಗಳಲ್ಲಿ ಕಾರ್ಖಾನೆ ಸ್ಥಾಪನೆಗೊಂಡಂತೆ ತೃತೀಯ ವಲಯಗಳಾದ ಸಾರಿಗೆ ಸಂಪರ್ಕ, ಆಸ್ಪತ್ರೆ (ಆರೋಗ್ಯ), ಬ್ಯಾಂಕ್, ಶಿಕ್ಷಣ, ಮನರಂಜನೆ ಕೇಂದ್ರಗಳು, ಸೇವಾ ಕೇಂದ್ರಗಳು, ನ್ಯಾಯಾಲಯ, ಪೋಲೀಸ್ ವ್ಯವಸ್ಥೆಗಳು ಸ್ಥಾಪನೆಗೊಂಡವು.

ನಗರದಲ್ಲಿ ಉದ್ಯೋಗಾವಕಾಶಗಳು ಮತ್ತು ಸೌಲಭ್ಯಗಳು ಅಸಂಖ್ಯಾತ ಗ್ರಾಮೀಣ ಜನರು ನಗರ ಜೀವನಕ್ಕೆ ಆಕರ್ಷಿತರಾದರು. ಹುಡುಕಾಟಕ್ಕೆ ಸಮಯಕ್ಕೆ ತಕ್ಕಂತೆ, ಅವಿಭಜನೀಯ ಕುಟುಂಬಗಳು ವಿಭಜನೀಯ ಕುಟುಂಬಗಳಾಗಿ ಮಾರ್ಪಾಡಾಗುತ್ತಿವೆ.

3) ಜನಸಂಖ್ಯಾ ಬೆಳವಣಿಗೆ (Growth of Rapid Population):

ಜನಸಂಖ್ಯೆಯು ಹೆಚ್ಚಾದಂತೆ “ಭೂಮಿಯ ಮೇಲಿನ ಒತ್ತಡವು” ಹೆಚ್ಚಾಯಿತು. ಗ್ರಾಮೀಣ ಯುವಕರು ಭೂಮಿಯನ್ನು ಅವಲಂಬಿಸಿದ್ದರಿಂದ ನಿರುದ್ಯೋಗ ಸಮಸ್ಯೆಗಳನ್ನು ಎದುರಿಸಬೇಕಾಯಿತು.

ಈ ರೀತಿಯ ನಿರುದ್ಯೋಗ ಸಮಸ್ಯೆಗೆ ಪರಿಹಾರ ಹುಡುಕಲು ನಗರ ಪ್ರದೇಶಗಳಲ್ಲಿನ ಜನರು ವಲಸೆ ಹೊಂದಿದರು. ಈ ರೀತಿಯ ಬಹುತೇಕ ಜನರು ತಮ್ಮ ಅವಿಭಕ್ತ ಕುಟುಂಬವನ್ನು ಬಿಟ್ಟುಬಿಟ್ಟರು, ಹಾಗೆಯೇ ಕುಟುಂಬಗಳ ವಿಘಟನೆಯಾಗಿತ್ತು.

4) ಶಿಕ್ಷಣ (Education):

ಶಿಕ್ಷಣ ಜನರ ಸಾಂಪ್ರದಾಯಿಕ ದೃಷ್ಟಿಕೋನವನ್ನು ಬದಲಾಯಿಸಿದೆ. ಇಂದಿನ ಶಿಕ್ಷಣವು ವೃತ್ತಿ ಚಲನೆಗೆ (Occupational Mobility) ಅವಕಾಶ ನೀಡಿದೆ. ಶಿಕ್ಷಣ ಮತ್ತು ವೃತ್ತಿ-ಚಲನೆಯಿಂದಾಗಿ ಜನರ ದೃಷ್ಟಿಕೋನ, ನಂಬಿಕೆ, ಸಾಮಾಜಿಕ ಮೌಲ್ಯ ಮತ್ತು ತತ್ವಾದರ್ಶನಗಳಲ್ಲಿ ಬದಲಾವಣೆಯಾಗಿ, ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಿದೆ.

ಶಿಕ್ಷಣದ ಪ್ರಮಾಣ ಏರಿಕೆಯಾದಂತೆ ಕೇವಲ ಜೀವನ ಶೈಲಿಯಲ್ಲಿ ಮಾತ್ರ ಬದಲಾವಣೆ ತರುವುದಿಲ್ಲ. ಆದ್ದರಿಂದ ಹೊಸ ವಿಧಾನ, ಚಿಂತನೆ, ಅಭಿಪ್ರಾಯ, ದೃಷ್ಟಿಕೋನಗಳು ಉದ್ಭವಿಸುತ್ತವೆ. ಹೀಗೆ ಶಿಕ್ಷಣವು ಕುಟುಂಬದ ರಚನೆ ಮತ್ತು ಕಾರ್ಯಗಳಲ್ಲಿ ಪರಿವರ್ತನೆಗಳಾಗಿವೆ.

5) ಬದಲಾಗುತ್ತಿರುವ ಸ್ತ್ರೀಯರ ಅಂತಸ್ತುಗಳು (Changing Status of Women):

ಸಾಮಾಜಿಕ ಸುಧಾರಣೆಯು ಸ್ತ್ರೀಯರಿಗೆ ತಮ್ಮ ಅಂತಸ್ತು ಮತ್ತು ಸ್ಥಾನಮಾನದ ಬಗ್ಗೆ ಅರಿವು ಮೂಡಿದೆ. ಇವೆಲ್ಲಾ ಪ್ರಭಾವದಿಂದ ಪಿತೃಪಧಾನ ಕುಟುಂಬದ ಪ್ರಭಾವ ಕಡಿಮೆಯಾಗುತ್ತಿದೆ. ಆಧುನಿಕ ಶಿಕ್ಷಣವು ಸ್ತ್ರೀಯರಿಗೆ ವಿಮೋಚನೆಯ ಮಾರ್ಗವನ್ನು ನೀಡಿದೆ ಹಾಗೂ ಸಮಾಜದಲ್ಲಿ ತಮ್ಮ ಅಂತಸ್ತು ಸ್ಥಾನಮಾನಗಳ ಬಗ್ಗೆ ಜಾಗೃತಿ ಮೂಡಿಸಿದೆ.

ಸಾಮಾಜಿಕ ಸುಧಾರಕರಾದ ರಾಜರಾಮ್ ಮೋಹನ್ ರಾಯ್, ಈಶ್ವರಚಂದ್ರ ವಿದ್ಯಾಸಾಗರ್, ಕೇಶವ ಚಂದ್ರ ಸೇನ್, ಜ್ಯೋತಿರಾವ್ ಪುಲೆ, ಮಹರ್ಷಿ ಕಾರ್ವೆ, ಪಂಡಿತ ರಮಾಬಾಯಿ ಮುಂತಾದ ಮಹನೀಯರ ಪರಿಶ್ರಮ ಮತ್ತು ಹೋರಾಟದಿಂದ ಸ್ತ್ರೀಯರು ಮಹತ್ವದ ಸ್ಥಾನಮಾನ ಪಡೆದುಕೊಂಡಿದ್ದಾರೆ.

ಇವೆಲ್ಲಾ ಅಂಶಗಳು ಅವಿಭಕ್ತ ಕುಟುಂಬಗಳ ಪಿತೃಪ್ರಧಾನ ಅಧಿಕಾರಕ್ಕೆ ಕಡಿವಾಣ ಹಾಕಿತ್ತು. ವಿಘಟನೆಗೊಳ್ಳತೊಡಗಿದವು. ಕಾಲಕ್ರಮೇಣ ಅವಿಭಕ್ತ ಕುಟುಂಬಗಳು

6) ಸಾಮಾಜಿಕ ಶಾಸನಗಳ ಪ್ರಭಾವ (Social Legislation):

ಬ್ರಿಟೀಷ್ ಆಳ್ವಿಕೆಯ ಅವಧಿಗಳಲ್ಲಿ ಅನುಷ್ಠಾನಗೊಂಡ ಹಲವಾರು ಸಾಮಾಜಿಕ ಶಾಸನಗಳು ಅವಿಭಕ್ತ ಕುಟುಂಬಗಳಿಗೆ ಪ್ರತಿಕೂಲವಾಗಿತ್ತು. ಕಲಿಯುವಿಕೆಯಿಂದ ಸಂಪಾದನೆ ಕಾಯ್ದೆ – 1930 (Gains of learning act 1930), ಸತಿ ನಿಷೇಧ ಕಾಯ್ದೆ 1829, ಹಿಂದೂ ಸ್ತ್ರೀಯರ ಆಸ್ತಿ ಹಕ್ಕು 1939, ಹಿಂದೂ ವಿಧವೆಯರ ಮನ‌ ವಿವಾಹ ಕಾಯ್ದೆ 1856, ಬಾಲ್ಯವಿವಾಹ ನಿಷೇಧ ಕಾಯ್ದೆ 1929 – ಇವೆಲ್ಲಾ ಶಾಸನಗಳು ಕುಟುಂಬದ ಪರಿವರ್ತನೆಗೆ ಕಾರಣವಾದವು.

ಸ್ವಾತಂತ್ರ್ಯ ನಂತರ, ಭಾರತ ಸರ್ಕಾರ ಹಲವಾರು ಸಾಮಾಜಿಕ ಶಾಸನಗಳನ್ನು ಅನುಷ್ಠಾನಗೊಳಿಸಿತು. ಉದಾ: ಹಿಂದೂ ವಿವಾಹ ಕಾಯ್ದೆ (1955), ಹಿಂದೂ ಉತ್ತರಾಧಿಕಾರಿ ಕಾಯ್ದೆ (1956), ನಾಗರಿಕ ವಿವಾಹ ಕಾಯ್ದೆ (1957) ಇವೆಲ್ಲಾ ಸಾಮಾಜಿಕ ಶಾಸನಗಳು ಸ್ತ್ರೀ ಮತ್ತು ಪುರುಷರಿಗೆ ಸಂಗಾತಿಯ ಆಯ್ಕೆ, ವಿವಾಹ ವಿಚ್ಛೇದನೆ, ಮುಂತಾದ ವಿಷಯಗಳ ಬಗ್ಗೆ ಸ್ಪಷ್ಟವಾದ ನೀತಿ ನಿಯಮಗಳನ್ನು ರೂಪಿಸಿದವು.

ಇದರಿಂದ ಸ್ತ್ರೀ ಮತ್ತು ಪುರುಷರಿಗೆ ಸಮಾನವಾದ ಹಕ್ಕು ದೊರೆತವು. ತಂದೆ ಮರಣ ನಂತರ ಅವಿಭಕ್ತ ಕುಟುಂಬದಿಂದ ಆಸ್ತಿಯಲ್ಲಿ ಭಾಗವನ್ನು ಪಡೆದುಕೊಳ್ಳಲು ಹಕ್ಕನ್ನು ನೀಡಿದೆ. ಸರ್ಕಾರದ ಹಲವಾರು ಸೌಕರ್ಯಗಳು ಅವಿಭಕ್ತ ಕುಟುಂಬದ ಸಂಘಟಿತ ಜೀವನ ಮತ್ತು ಸ್ವಾವಲಂಬನೆ ದುರ್ಬಲಗೊಳ್ಳಲು ಕಾರಣವಾಗಿದೆ. ಅವುಗಳಲ್ಲಿ ವೃದ್ಧಾಪ್ಯವೇತನ, ವಿಧವೆಯರ ವೇತನ ಮುಂತಾದವುಗಳು.

ಐ.ಪಿ.ದೇಸಾಯಿ (I.P. Desai) ಗುಜರಾತ್‌ನ ಪಟ್ಟಣ “ಮಹುವಾ” (Mahuva) ಕೌಟುಂಬಿಕ ವ್ಯವಸ್ಥೆ ಬಗ್ಗೆ 1960ರ ಆರಂಭದಲ್ಲಿ ಅಧ್ಯಯನ ಮಾಡಿದ್ದಾರೆ. ಈ ಮಾಹಿತಿಯಿಂದ ಸದಸ್ಯರ ನಡುವೆಯಿರುವ “ಜಂಟಿತನ”ದ ಅಂಶಗಳನ್ನು ಗುರುತಿಸಿದ್ದಾರೆ. ಈ ರೀತಿಯ ಜಂಟಿತನ (Jointness) ಕೌಟುಂಬಿಕ ಐಕ್ಯತೆ ಅಂಶಗಳು, ಧರ್ಮ, ವೃತ್ತಿಯ ಸಂಬಂಧಗಳು, ಆಸ್ತಿ, ಶಿಕ್ಷಣ, ನಗರೀಕರಣ, ರಕ್ತಸಂಬಂಧಗಳು, ಕರ್ತವ್ಯಗಳು ಮತ್ತು ಮನೆತನ ಸಂಯೋಜನೆ (Household Composition) ಮುಂತಾದವುಗಳ ಹಿನ್ನೆಲೆ ಅವಿಭಕ್ತ ಸಂಬಂಧಗಳನ್ನು ಗುರುತಿಸಿದ್ದಾರೆ.

ಕುಟುಂಬದ ಸಂರಚನೆ ಅಂಶಗಳನ್ನು ವಿಶ್ಲೇಷಿಸುತ್ತಾ-ಐ.ಪಿ.ದೇಸಾಯಿ ಸದಸ್ಯರುಗಳು ನಿರ್ವಹಿಸುವ ಕಾರ್ಯಗಳು ಮತ್ತು ಹಕ್ಕು-ಬಾದ್ಯತೆಗಳನ್ನು ಆಧರಿಸಿ ಅವಿಭಕ್ತತೆ ಪ್ರಮಾಣ, ತೀವ್ರತೆ ಮತ್ತು ಉದ್ದೇಶಿತ ಗುರಿಗಳನ್ನು ವಿಶ್ಲೇಷಿಸಲು ಪ್ರಯತ್ನಿಸಿದ್ದಾರೆ. ಐ.ಪಿ.ದೇಸಾಯಿ ಐದು ಪ್ರಕಾರಗಳ ಅವಿಭಕ್ತ ಕುಟುಂಬಗಳನ್ನು ವರ್ಗೀಕರಿಸಿದ್ದಾರೆ.

ಎ) ಶೂನ್ಯ ಅವಿಭಕ್ತ ಕುಟುಂಬ (Household with zero degree of jointness)

ಬಿ) ಕಡಿಮೆ ಪ್ರಮಾಣದ ಅವಿಭಕ್ತ ಕುಟುಂಬ( ಅವಿಭಾಜ್ಯವಾದ ಕೆಲಸದ ಅಭಿನ್ನ ಕುಟುಂಬದ ಪ್ರಮಾಣ ಕಡಿಮೆಯಾಗಿದೆ.) (Household with low degree jointness) (ಪರಸ್ಪರ ಹಕ್ಕು-ಬಾದ್ಯತೆ ಪೂರೈಸುವ ಅವಿಭಕ್ತ ಸಂಬಂಧಗಳು)

ಸಿ) ಉನ್ನತ ಮಟ್ಟದ ಜಂತಟಿತನದ ಅವಿಭಕ್ತ ಕುಟುಂಬಗಳು (Household of wiht high degree of jointness) (ಆಸ್ತಿಯ ಮೇಲೆ ಸಾಮೂಹಿಕವಾದ ಹಕ್ಕು-ಬಾದ್ಯತೆಗಳು)

ಡಿ) ಅತಿ ಉನ್ನತ ಜಂಟಿತನದ ಅವಿಭಕ್ತತಾ ಕುಟುಂಬ (Household with higher degree of jointness) ಸಾಧಾರಣ ಅವಿಭಕ್ತ ಕುಟುಂಬಗಳು

ಇ) ಅತ್ಯುನ್ನತವಾದ ಜಂಟಿತನದ ಅವಿಭಕ್ತತೆ ಹೊಂದಿರುವ ಕುಟುಂಬಗಳು (Household with highest degree of jointness) (ಸಾಂಪ್ರದಾಯಿಕ ಅವಿಭಕ್ತ ಕುಟುಂಬಗಳು)

ದೇಸಾಯಿ ಪ್ರಕಾರ ಇಂದಿನ ಕುಟುಂಬಗಳು ಸಂರಚನಾತ್ಮಕವಾಗಿ ಅಣು ಕುಟುಂಬವಾದರೂ ಕಾರ್ಯಾತ್ಮಕವಾಗಿ ಅವಿಭಕ್ತ ಸ್ವರೂಪ ಹೊಂದಿದೆ. ವಾಸ್ತವದಲ್ಲಿ ಸದಸ್ಯರು ಅವಿಭಕ್ತ ಕುಟುಂಬಗಳನ್ನು ಅವಲಂಬಿಸಿದ್ದಾರೆ. ತಂದೆ-ತಾಯಿಗಳು ಮತ್ತು ಸೋದರರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ,

ಸಂರಚನಾತ್ಮಕ ಪ್ರತ್ಯೇಕತೆಯನ್ನು ಸೂಚಿಸುವುದಿಲ್ಲ. ಈಗಿನ ಪ್ರಚಲಿತ ಸಾಮಾಜಿಕ ವ್ಯವಸ್ಥೆಯಲ್ಲಿ ಅವಿಭಕ್ತ ಕುಟುಂಬಗಳಿಂದ ಹಲವಾರು ವಿಭಕ್ತ ಕುಟುಂಬಗಳು ಸೃಷ್ಟಿಯಾಗುತ್ತಿದ್ದು, ಅನಂತರದ ದಿನಗಳಲ್ಲಿ ಅವು ಅವಿಭಕ್ತ ಕುಟುಂಬಗಳಾಗಿ ರೂಪಾಂತರವಾಗುತ್ತವೆ.

ಭಾರತದಲ್ಲಿ ಕುಟುಂಬಗಳು ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬಗಳು ಮತ್ತು ವಿಭಕ್ತ ಕುಟುಂಬದಿಂದ ಅವಿಭಕ್ತ ಕುಟುಂಬಗಳಾಗಿ ರೂಪಾಂತರಗೊಳ್ಳುವ ಚಕ್ರಿಯ ಘಟನೆ ನಡೆಯುತ್ತಿರುತ್ತದೆ.

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....