Kannada essays

Global Warming 2023 | ಜಾಗತಿಕ ತಾಪಮಾನ ಪ್ರಬಂಧ | The Unexpected Battle Fueling

ಜಾಗತಿಕ ತಾಪಮಾನ [Global Warming]

(Global Warming | ಗ್ಲೋಬಲ್ ವಾರ್ಮಿಂಗ್ / ಪ್ರೈಮೇಟ್ ಚೇಂಜ್ )

Global Warming ಮನುಕುಲ ಇಂದು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಲ್ಲಿ ಜಾಗತಿಕ ಭೂ ತಾಪಮಾನ ಬಹುಮುಖ್ಯವಾಗಿದೆ. ಮಾನವ ತನ್ನ ಐಹಿಕ ಸುಖ ಸಂಪತ್ತುಗಳಿಗಾಗಿ ನಿಸರ್ಗಕ್ಕೆ ಮಾಡಿದ ಹಾನಿಯಿಂದಾಗಿ ಇಂದು ನಿಸರ್ಗ ನೀಡುತ್ತಿರುವ ಪರಿಣಾಮವೇ ಜಾಗತಿಕ ಭೂ ತಾಪಮಾನ/Global Warming, ಭೂ ವಾತಾವರಣದಲ್ಲಿ ಹಸಿರು ಮನೆ ಅನಿಲಗಳು ಕೇಂದ್ರೀಕರಣಗೊಂಡು ಸೂರನ ತಾಪಮಾನವನ್ನು ಭೂಮಿಯ ಮೇಲೆ ಹೆಚ್ಚಾಗಿ ಹೀರಿಕೊಳ್ಳುವುದರಿಂದ ತನ್ನ ಸರಾಸರಿ ತಾಪಮಾನವು ನಿಸರ್ಗದಲ್ಲಿ ಹೆಚ್ಚಾಗುತ್ತದೆ.

ಹೀಗೆ ಭೂಮಿ ಬಿಸಿಯಾಗುವುದನ್ನು ಜಾಗತಿಕ ತಾಪಮಾನ/Global Warming ಎಂದು ಅರ್ಥೈಸಬಹುದಾಗಿದೆ. ಗ್ರೀನ್‌ ಹೌಸ್ ಗ್ಯಾಸಸ್ ನಿಸರ್ಗದತ್ತವಾಗಿ ಭೂಮಿಯ ರಕ್ಷಾ ಪದರದಂತೆ ವರ್ತಿಸುತ್ತವೆ. ಆದರೆ ನಿಸರ್ಗಕ್ಕೆ ವಿರೋಧವಾದ ಮಾನವನ ಚಟುವಟಿಕೆಗಳಿಂದ ಹಸಿರು ಮನೆ ಅನಿಲಗಳು ವಾತಾವರಣದ ಹವಾಮಾನ ಬದಲಾವಣೆಗೆ ಕಾರಣವಾಗುತ್ತವೆ.Global Warming

ಭೂಮಿಯು ಸೂರನಿಂದ ಬರುವ ಸೂಕ್ಷ್ಮ ಅಲೆಗಳಿಂದ ಉಷ್ಣಾಂಶವನ್ನು ಪಡೆಯುವುದು, ನಂತರ ಭೂಮಿಯ ದೀರ್ಘ ಅಲೆಗಳ ರೂಪದಲ್ಲಿ ಈ ಉಷ್ಣಾಂಶವನ್ನು ಬಿಡುಗಡೆ ಮಾಡುವುದು, ವಾಯುಮಂಡಲದಲ್ಲಿ ಹಸಿರು ಮನೆಯ ಅನಿಲಗಳು ಹೆಚ್ಚಾಗಿದ್ದಲ್ಲಿ, ಭೂಮಿಯಿಂದ ಬಿಡುಗಡೆಯಾಗುವ ಅವಗೆಂಪು ಕಿರಣ (ಇನ್‌ಫ್ರಾ ರೆಡ್ ) ಉಷ್ಣಾಂಶವನ್ನು ಹೀರಿಕೊಳ್ಳುತ್ತದೆ.

ಇದರಿಂದ ವಾಯುಮಂಡಲದ ಉಷ್ಣಾಂಶ ಸ್ವಾಭಾವಿಕವಾಗಿ ಹೆಚ್ಚಾಗುವುದು, ವಾಯುಮಂಡಲದಲ್ಲಿ ಭೂಮಿಯಿಂದ ಬಿಡುಗಡೆಯಾಗುವ ಅವಕೆಂಪು ಕಿರಣಗಳನ್ನು ಹೀರಿಕಳುವ ಕಣಗಳನ್ನು ಹೊಂದಿರುವ ಅನಿಲಗಳನ್ನು ಹಸಿರುಮನೆ ಅನಿಲಗಳು ಎಂದು ಕರೆಯುವರು. ಈ ಅನಿಲಗಳ ಪ್ರಮಾಣ ಹೆಚ್ಚಾಗಿದ್ದಷ್ಟು ಉಷ್ಣಾಂಶವು ಸಹ ಹೆಚ್ಚುವುದು.

ಭೂಮಂಡಲದ ಉಷ್ಣಾಂಶದ ಹೆಚ್ಚಳವನ್ನು, ಭೂಮಿಯು ನಿಗದಿತ ತಾಪಮಾನಕ್ಕಿಂತ ಹೆಚ್ಚು ಬಿಸಿಯಾಗುವುದನ್ನು ಗೋಬಲ್ ವಾರ್ಮಿಂಗ್/Global Warming ಎಂದು ಹಸಿರುಮನೆ ಪರಿಣಾಮ ಇದಕ್ಕೆ ಮೂಲ ಕಾರಣವೆಂದು 1824ರಲ್ಲಿ ಮೊದಲಿಗೆ ಜೋಸೆಫ್ ಪ್ಯೂರಿಯ‌ ಪತ್ತೆ ಹಚ್ಚಿದನು, ನೈಸರ್ಗಿಕವಾಗಿ ಉತ್ಪನ್ನವಾಗುವ ಹಸಿರುಮನೆ ಅನಿಲಗಳು ಸುಮಾರು 33ಸೆ. (59 ಥಾ) ಮಧ್ಯಮ ಪ್ರಮಾಣದ ಉಷ್ಣಾಂಶ ಹೆಚ್ಚಳಕ್ಕೆ ಕಾರಣವಾಗುತ್ತವೆ.

Global Warming
ಹಸಿರು ಮನೆಯ ಅನಿಲಗಳಲ್ಲಿ ಮುತ್ತು ವಾದವುಗಳೆಂದರೆ ಇಂಗಾಲದ ಡೈ ಆಕ್ಸೆಡ್ , ನೀರಾವಿ, (Co), ಮೀಥೇನ್‌ (CH), ನೈಟ್ರಸ್‌ ಆಕ್ಸೆಡ್ (NO), ಕ್ಲೋರೋಫ್ಲೋರೋ ಕಾರ್ಬನ್‌ (Cfc (x) ಮತ್ತು ಓರೋನ್, ಇವುಗಳಲ್ಲಿ ಕಾರ್ಬನ್ ಡೈ ಆಕ್ಸಡ್ ಪ್ರಮುಖವಾಗಿದ್ದು ಶೇ. 55 ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವುದು, ಜೊತೆಗೆ ಕ್ಲೋರೋಫಾರೊಂ ಕಾರ್ಬನ್‌ಗಳು ಶೇ. 25 ಮೀಥೇನ್ ಅನಿಲವು ಶೇ. 15 ಹಸಿರು ಮನೆ ಪರಿಣಾಮಕ್ಕೆ ಕಾರಣವಾಗುವುದು.

ಹಸಿರು ಮನೆ ಅನಿಲಗಳು

1. ಕಾರ್ಬನ್‌ ಡೈ ಆಕ್ಸೆಡ್‌ CO2 Global Warming

ಮಾನವನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅತೀ ಪ್ರಮುಖವಾದ ಹಸಿರುಮನೆ ಅನಿಲ ಇದಾಗಿದ್ದು ಕೈಗಾರಿಕಾ ಕ್ರಾಂತಿಯ ನಂತರ ಜಾಗತಿಕ ಭೂ ತಾಪಮಾನದ/Global Warming ಶೇ. 55ರಷ್ಟು ಹೆಚ್ಚಳಕ್ಕೆ ನಿರ್ಣಾಯಕ ಪಾತ್ರವನ್ನು ಇದು ವಹಿಸುತ್ತದೆ.

2. ಮೀಥೇನ್ (CH4) Global Warming

ನೈಸರ್ಗಿಕವಾಗಿ ಮತ್ತು ಮಾನವ ಚಟುವಟಿಕೆಗಳಿಂದ ಉತ್ಪನ್ನವಾಗುವ ಶಕ್ತಿಶಾಲಿ ಹಸಿರುಮನೆ ಅನಿಲ, ಇದು ಭತ್ತದ ಗದ್ದೆಗಳಂತಹ ಜವುಗು ಭೂಭಾಗಗಳಲ್ಲಿ ಇಂಗಾಲಾಮ್ಲವನ್ನು ಒಳಗೊಂಡ ಜೈವಿಕ ವಸ್ತುಗಳು ಕೊಳೆಯಲ್ಪಡುವುದರಿಂದ ಬಿಡುಗಡೆಯಾಗುತ್ತದೆ.

3. ನೈಟ್ರಸ್ ಆಕ್ಸೆಡ್ NO /Global Warming

ಅಪರಿಮಿತ ಕೈಗಾರಿಕೆಗಳು ಬಿಡುವ ಈ ಅನಿಲವು ಅಪಾರ ಪ್ರಮಾಣದ ಪ್ರಕೃತಿ ಹಾನಿಗೆ
ಸಾಕ್ಷಿಯಾಗಿದೆ. ಪೆಟ್ರೋಲಿಯಂ ಶುದ್ದೀಕರಣ ಸ್ಥಾವರಗಳು, ಉಷ್ಣ ವಿದ್ಯುತ್ ಸ್ಥಾವರಗಳು ಬಿಡುವ ತ್ಯಾಜ್ಯದಲ್ಲಿ ಇದು ಅಪಾರ ಪ್ರಮಾಣದಲ್ಲಿದ್ದು ಭೂ ತಾಪಮಾನಕ್ಕೆ/Global Warming ಕಾರಣವಾಗಿದೆ.

4. CFC [Cloro floro carban]

ಇವು ಮಾನವ ನಿರ್ಮಿತ ರಸಾಯನಿಕಗಳು, ಸಯಂಚಾಲಿತ ಹವಾನಿಯಂತ್ರಣ ಮತ್ತು ರೆಫ್ರಿಜರೇಷನ್ ವ್ಯವಸ್ಥೆಯಲ್ಲಿ, ರಸಾಯನಿಕ ಗೊಬ್ಬರಗಳ ಹೆಚ್ಚು ಬಳಕೆಯಿಂದ, ಭೂಬಳಕೆಯ ಬದಲಾವಣೆಯಿಂದಾಗಿ ಸಿಎಫ್‌ಸಿಗಳು ಹೆಚ್ಚಾಗುತ್ತಿದ್ದು ತಾಪಮಾನಕ್ಕೆ/Global Warming ಕಾರಣವಾಗಿದೆ.

5. ಪರ್ ಫೋರೋ ಕಾರ್ಬನ್

ವಾತಾವರಣದಲ್ಲಿ ಇವು ಸುಮಾರು 50 ಸಾವಿರ ವರ್ಷ ಜೀವಿಸುತ್ತವೆ. ಪಳೆಯುಳಿಕೆ ಇಂಧನಗಳ ದಹನ ಅರಣ್ಯನಾಶ ಮುಂತಾದ ಚಟುವಟಿಕೆಗಳಿಂದ ಈ ಹಸಿರುಮನೆ ಅನಿಲ ಬಿಡುಗಡೆಗೊಂಡು ಅಪಾರ ಪ್ರಮಾಣದ ಹಾನಿ ಉಂಟು ಮಾಡುತ್ತದೆ.

6. SULPHUR ಹೆಕ್ಸಾ ಫ್ಲೋರೈಡ್

ಇದು ಕಾರ್ಬನ್ ಡೈ ಆಕ್ಸೆಡ್‌ ಗಳಿಗಿಂತ 222000 ಪಟ್ಟು ಶಕ್ತಿಶಾಲಿಯಾಗಿದೆ. ವಾತಾವರಣದಲ್ಲಿ ಇದರ ಅನುಪಾತ ಕಾರ್ಬನ್ ಡೈ ಆಕ್ಸಡ್‌ ಗಿಂತ ಕಡಿಮೆ. ಪ್ರತಿ ಟೆಲಿಯನ್‌ಗೆ ಸುಮಾರು 6.5 ಭಾಗಗಳು,

ಜಾಗತಿಕ ಭೂ ತಾಪಮಾನದ/Global Warming ಪ್ರಮುಖ ಕಾರಣಗಳು

1. ಕಲ್ಲಿದ್ದಲು, ತೈಲ, ನೈಸರ್ಗಿಕ ಅನಿಲಗಳ ಅತಿಯಾದ ಬಳಕೆಯಿಂದ ಬಿಡುಗಡೆಯಾಗುವ ಅನಿಲಗಳು/Global Warming

2. ಕೈಗಾರಿಕಾ ಕ್ರಾಂತಿಯ ನಂತರ ಅಪಾರ ಪ್ರಮಾಣದ ಕೈಗಾರಿಕೆಗಳು ಬಿಡುಗಡೆ ಮಾಡುವ

3. ಅಪರಿಮಿತ ಬಯಕೆಗಳು ಹಾಗೂ ಅವುಗಳ ಪರಿಣಾಮಗಳ ವಿಪರೀತ ಜನಸಂಖ್ಯೆ.

4. ಸುಸ್ಥಿರ ಅಭಿವೃದ್ಧಿ ಮತ್ತು ಒಳಗೊಳ್ಳುವಿಕೆ ಅಭಿವೃದ್ಧಿಯ ಕಲ್ಪನೆಯನ್ನು Canada (Sustainable development, inclusive growth)

5. ವಿಶ್ವದಾದ್ಯಂತ ಹೆಚ್ಚಳವಾದ ಭಾರೀ ಗಾತ್ರದ ವಾಹನಗಳು ಮತ್ತು ಭೀಕರವಾದ ನಗರೀಕರಣ

6.ಕೃಷಿ ತ್ಯಾಜ್ಯದ ದಹನದಿಂದಾಗಿ ತಾಪಮಾನ ಏರಿಕೆಯಾಗುವುದು

7. ಭೂಬಳಕೆಯ ಬದಲಾವಣೆ, ರಸಾಯನಿಕ ಗೊಬ್ಬರಗಳ ಹೆಚ್ಚು ಬಳಕೆ ಅತೀ ಪ್ರಮುಖ ಕಾರಣವಾಗಿದೆ

8. ರೆಫ್ರಿಜರೇಟರ್, ಹವಾನಿಯಂತ್ರಕ ಉಪಕರಣ ಹಾಗೂ ಸುಗಂಧ ದ್ರವ್ಯಗಳಿಂದಲೂ ಇದು ಬಿಡುಗಡೆಯಾಗುತ್ತದೆ

9. ಗ್ರಾಮೀಣ ಭಾಗದಲ್ಲಿ ಅಡುಗೆಗಾಗಿ ಬಳಸುವ ಕಟ್ಟಿಗೆಗಳಿಂದಲೂ ಹಸಿರುಮನೆ

ಅನಿಲಗಳು ಹೊರಹೊಮ್ಮುತ್ತವೆ. 10. ಅರಣ್ಯನಾಶ ಹಾಗೂ ಮಾನವನ ಪ್ರಕೃತಿ ವಿರೋಧ ಕೃತ್ಯಗಳು ಜಾಗತಿಕ ಭೂ ತಾಪಮಾನದ/Global Warming ಪ್ರಮುಖ ಕಾರಣಗಳಾಗಿವೆ.

Global Warming

‘ಹವಾಯಿಯ ಮೌನಲೋವ ಪ್ರಯೋಗಾಲಯದಲ್ಲಿ ಅಳತೆ ಮಾಡಿರುವಂತೆ ವಾಯುಮಂಡಲದಲ್ಲಿ ಇಂಗಾಲದ ಪ್ರಮಾಣವು 1990ರಲ್ಲಿ 313 PPM (Parts per million) ಗಳಷ್ಟಿದ್ದು 2010ರಲ್ಲಿ ಇದರ ಪ್ರಮಾಣವು 389 ppm ಗಳಷ್ಟು ಹೆಚ್ಚಾಗಿದ್ದು ಸದ್ಯ 400 PPM ಗಳಾಷ್ಟಾಗಿವೆ. ಪ್ರಸ್ತುತ ವಾಯುಮಂಡಲದಲ್ಲಿರುವ ಇಂಗಾಲಾಮ್ಲದ ಪ್ರಮಾಣ ಭೂಮಿಯ ಮೇಲೆ ಮಾನವನ ಇತಿಹಾಸದಲ್ಲೇ ಅತಿ ಹೆಚ್ಚು. ಇದನ್ನು ‘ಸ್ವಾಂತ ಅರೆನಿಯಸ್ ಹೆಚ್ಚುತ್ತಿರುವ ಹಸಿರು ಮನೆ ಅನಿಲಗಳು ಎಂದು ವಿವರಿಸಿದ್ದಾರೆ./Global Warming

ಜಾಗತಿಕ ತಾಪಮಾನದ/Global Warming ಪರಿಣಾಮಗಳು

1. ಹಿಮಕವಚ, ನೀರ್ಗಲ್ಲುಗಳು ಕರಗಿ, ಸಾಗರದಲ್ಲಿನ ನೀರಿನ ಪ್ರಮಾಣ ಜಾಸ್ತಿಯಾಗಿ ಅನೇಕ ದೀಪಗಳು, ಪರಾಯ ದ್ವೀಪಗಳು ಮುಳುಗುತ್ತವೆ

2. ಮನುಕುಲಕ್ಕೆ ದೊರೆತ ಭೂಭಾಗದ ಪ್ರಮಾಣ ಅತ್ಯಂತ ಕಡಿಮೆಯಾಗಿ ವಾಸಕ್ಕೆ, ವ್ಯವಸಾಯಕ್ಕೆ ತುಂಬಾ ತೊಂದರೆಯಾಗುತ್ತದೆ

3. ಜಗತ್ತಿನ ಮಳೆಯ ಪ್ರಮಾಣ, ಹಂಚಿಕೆ, ಪರಿಕ್ರಮ Rhythm ಏರುಪೇರಾಗುತ್ತದೆ. ಅಲ್ಲದೆ ಹಿಮವೃಷ್ಟಿ ಹಾಗೂ ಮಳೆಯ ರೌದ್ರಾವತಾರಗಳು Rainstorms ಹೆಚ್ಚಾಗಲಿವೆ.

4. ಅನಿಶ್ಚಿತ, ಅನಿಯಮಿತ ಕ್ಷಿಪ್ರ ಪ್ರವಾಹಗಳುಂಟಾಗುತ್ತವೆ. ಕೆಲವು ಭಾಗಗಳಲ್ಲಿ ತೇವಾಂಶದ ಹೆಚ್ಚಳದಿಂದ ಬಿರುಗಾಳಿ, ಚಂಡಮಾರುತಗಳು ಹೆಚ್ಚಾಗಲಿವೆ.

5.ಪ್ರಪಂಚದ ವಾಯುಗುಣ ಬದಲಾವಣೆ ಪ್ರಾಣಿ ಹಾಗೂ ಸಸ್ಯ ಸಂಕುಲಗಳ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ.

6 ಆಹಾರ ಮತ್ತು ನೀರಿನ ಕೊರತೆಯನ್ನು ಎದುರಿಸುವ ಪ್ರಾಣಿಗಳು ವಲಸೆ ಹೋಗುವುದು ಅನಿವಾರ್ಯವಾಗುತ್ತದೆ

7. ವಾಯುಗುಣದ ಬದಲಾವಣೆಯು ಮನುಷ್ಯನ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ

8. ಹವಳದ ದಿಬ್ಬಗಳಲ್ಲಿನ ಹವಳ ಜೀವಿಗಳು ಅವಸಾನ ಹೊಂದುತ್ತಿದ್ದು ಇದನ್ನು ‘ಕೋರಲ್ ಬೀಚಿಂಗ್’ ಎಂದು ಕರೆಯುವರು

9. ವಾತಾವರಣದಲ್ಲಿ ಹೆಚ್ಚುವರಿಯಾಗಿರುವ ಇಂಗಾಲದ ಡೈ ಆಕ್ಟ್ಡನ್ನು ಸಾಗರಗಳು ಹೀರಿಕೊಳ್ಳುವುದರಿಂದ ನೀರು ಆತ್ಮೀಯವಾಗಿ ಜಲಚರಗಳ ಸಂತತಿ ನಾಶವಾಗುತ್ತದೆ.

10. ಆಹಾರ ಸರಪಳಿ, ಆಹಾರ ಭದ್ರತೆ ನಾಶವಾಗಿ ಪರಿಣಾಮ ಉಂಟಾಗುತ್ತದೆ

11. ಕಳೆದ 50 ವರ್ಷಗಳಲ್ಲಿ ಬಹುತೇಕ ನಗರಗಳು ಅಶುದ್ಧ ಗಾಳಿ, ಹೃದಯ ರೋಗ ಮುಂತಾದ ಅನೇಕ ಕಾಯಿಲೆಗಳಿಗೆ ಇದು ಕಾರಣವಾಗಿದೆ

12. ಹವಾಮಾನ ವೈಪರೀತ್ಯ, ವಾಯುಭಾರ ಕುಸಿತ, ಚಂಡಮಾರುತ, ಪ್ರವಾಹಗಳು ಉಂಟಾಗಲು ಇದು ಪ್ರಮುಖ ಕಾರಣವಾಗುತ್ತದೆ

13. ಜೈವಿಕ ಸರಪಳಿ, ಜೈವಿಕ ವೈವಿಧ್ಯತೆ ಹಾಳಾಗುವುದು ಹಲವು ಬಗೆಯ ವನ್ಯಜೀವಿಗಳು ನಶಿಸಲು ಪ್ರಮುಖ ಕಾರಣವಾಗುತ್ತದೆ.

Global Warming

ಅಂತರ ಸರ್ಕಾರಿ ಹವಾಮಾನ ಬದಲಾವಣೆ ಮಂಡಳಿ (IPCC)
ಇದನ್ನು ವಿಶ್ವಸಂಸ್ಥೆಯ ಎರಡು ಅಂಗಗಳಾದ ವಿಶ್ವ ಹವಾಮಾನ ಸಂಸ್ಥೆ World Meteorological Organization (WMo) ಮತ್ತು ವಿಶ್ವಸಂಸ್ಥೆಯ ಪರಿಸರ ಕಾರಕ್ರಮ (United Nations Environment Program (UNEP) 198800 ಸ್ಥಾಪಿಸಲಾಗಿದೆ. ಮನುಕುಲದಿಂದ ಆಗುತ್ತಿರುವ ಹವಾಮಾನ ಬದಲಾವಣೆಯ
ಅಪಾಯವನ್ನು ಮೌಲ್ಯಮಾಪನ ಮಾಡಲು ಈ ಸಂಸ್ಥೆ ಪ್ರಾರಂಭವಾಯಿತು. ಇದು 1990, 1995, 2001, 2007 ಹಾಗೂ 2012ರಲ್ಲಿ ಪರಿಶೀಲನಾ ನಿಯಮವನ್ನು ಸಲ್ಲಿಸಿದೆ.

ಹಸಿರುಮನೆ ಅನಿಲಗಳನ್ನು ಕಡಿತಗೊಳಿಸಲು ಕೈಗೊಂಡ ಕ್ರಮಗಳು

ಅಂತರರಾಷ್ಟ್ರೀಯ ಒಪ್ಪಂದಗಳು

1. 1992 ರಿಡೋ ಡಿ ಜನೈರೊ :

ವಿಶ್ವಸಂಸ್ಥೆಯ ನಿಯಮಾವಳಿ ಚೌಕಟ್ಟು ಸಮಾವೇಶ UNFCC ಅಳವಡಿಕೆಯಿಂದ ಬ್ರೆಜಿಲ್ ದೇಶದ ರಿಯೋ ಡಿ ಜನೈರೊದಲ್ಲಿ ಹವಾಮಾನ ಬದಲಾವಣೆಯ ಸಮಸ್ಯೆಗೆ ಪರಿಹಾರ ನೀಡುವತ್ತ ಚಿತ್ತ ಹರಿಸಲಾಯಿತು. ಇದರ ಪ್ರಕಾರ ಕೈಗಾರಿಕಾ ಮತ್ತು ಮುಂದುವರಿದ ರಾಷ್ಟ್ರಗಳು ಅನಿಲಗಳ ಅದೇ ಪ್ರಮಾಣ ಕಾಯ್ದುಕೊಳ್ಳುವುದು. ಇದರಂತೆ ಜರ್ಮನಿಯ ಬರ್ಲಿನ್ ಹಾಗೂ 2ನೇ ಸಮಾವೇಶ ಜನೇವಾ ಹಾಗೂ ಮೂರನೇಯದು ಜಪಾನಿನ ಕ್ಯೂಟೋದಲ್ಲಿ ನಡೆಯಿತು.

2. ಕ್ಯೂಟೋ ಪ್ರೋಟೋಕಾಲ್ 1997:

1997ರಲ್ಲಿ ಸಂಧಾನದ ಮೂಲಕ UNFCC (United Nation Frame Work Convention on Climate Change) ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರ ತೀರ್ಮಾನಕ್ಕೆ ಬದ್ಧರಾಗಿ 2012ರ ವೇಳೆಗೆ ಸಂಪೂರ್ಣ ಕಡಿತ ಮಾಡುವ ನಿಯಮದೊಂದಿಗೆ 141 ರಾಷ್ಟ್ರಗಳು ಸಹಿ ಹಾಕಿದವು.

ಈ ಒಪ್ಪಂದದ ಪ್ರಕಾರ ಅಮೇರಿಕಾವು 2012ರ ವೇಳೆಗೆ 1990ರಲ್ಲಿದ್ದ ಗ್ರೀನ್ ಹೌಸ್ ಗ್ಯಾಸ್ ಪ್ರಮಾಣವನ್ನು ಶೇ. 5.2ರಷ್ಟು ಕಡಿಮೆ ಮಾಡಬೇಕಾಗಿದ್ದು ಪಾಲಿಸದೆ ತಿರಸ್ಕರಿಸಿದೆ. ಭಾರತ ಸೇರಿದಂತೆ ಮುಂದುವರಿಯುತ್ತಿರುವ, ಅಭಿವೃದ್ಧಿಶೀಲ ರಾಷ್ಟ್ರಗಳು ಈ ಒಪ್ಪಂದಕ್ಕೆ ಸರ್ವಸಮ್ಮತ ಒಪ್ಪಿಗೆ ನೀಡಿಲ್ಲ ಆದರೆ ಕೂಟೊ ಒಪ್ಪಂದ ‘ಕ್ಯೂಟೊ ಪ್ರೋಟೋಕಾಲ್’ ಎಂದು ಪ್ರಸಿದ್ಧಿಯಾಗಿದೆ.

3, ಮಾರಾಕೋ ಒಪ್ಪಂದ 2001 :

1997ರ ಕ್ಯೂಟೊ ಒಪ್ಪಂದದ ನಿಯಮಗಳನ್ನು ಅನುಷ್ಠಾನಗೊಳಿಸಲು 2001 ರಲ್ಲಿ ಮೊರಾಕೋದಲ್ಲಿ COP – VII (Conference of Parties – Vll) ನಡೆಯಿತು. ಕ್ಯೂಟೊ ಒಪ್ಪಂದಕ್ಕೆ ಭಾರತ ಸಹಿ ಹಾಕಿಲ್ಲವಾದ್ದರಿಂದ ಈ ಒಪ್ಪಂದದಲ್ಲಿ ಭಾರತದ ಪಾತ್ರ ಕಡಿಮೆ. ಅಲ್ಲದೆ ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಭಾರತವಾದರು ತಲಾವಾರು ೧೧ ಬಿಡುಗಡೆಯಲ್ಲಿ ಭಾರತದ ಪಾಲು ಶೇ. 4ರಷ್ಟಿರುವುದು ವಿಶೇಷವಾಗಿದೆ.

4. COP-13 ಬಾಲಿ ಹವಾಮಾನ ಬದಲಾವಣೆ ಸಮ್ಮೇಳನ :

ವಿಶ್ವಸಂಸ್ಥೆಯ ನಿಯಮಾವಳಿ, ಚೌಕಟ್ಟು ಸಮಾವೇಶ UNFCC ಯ 13ನೇ ವಾರ್ಷಿಕ ಸಮ್ಮೇಳನ ಇಂಡೋನೇಷಿಯಾದ ಬಾಲಿಯಲ್ಲಿ 2007ರಲ್ಲಿ ಜರುಗಿತು. 190 ದೇಶಗಳು ಪಾಲ್ಗೊಂಡ ಈ ಸಮಾವೇಶದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜೊತೆಗೆ ಭಾರತ, ಚೈನಾದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಸಹ ಇಂಗಾಲದ ಡೈ ಆಕ್ಸೆಡ್ ಪ್ರಮಾಣವನ್ನು ಕ್ಷೀಣಿಸಬೇಕು Sotto Lagood. REDD (Reduce of Emission from Deforestation and Land Degradation ನಂತ ಭಾರತವು ಅರಣ್ಯಗಳನ್ನು ಬೆಳೆಸುವುದರಲ್ಲಿ ಸಮ್ಮತಿ ಸೂಚಿಸಿದೆ.

5. ಕೋಪನ್ ಹೇಗನ್ ಒಪ್ಪಂದ 2009:

UNFCC ಯ 15ನೇ ಶೃಂಗಸಭೆಯು 2009ರಲ್ಲಿ ಡೆನ್ಮಾರ್ಕ್‌ ಕೂಪನ್ ಹೇಗನ್‌ ನಲ್ಲಿ ನಡೆಯಿತು. ಇದರಲ್ಲಿ 192 ರಾಷ್ಟ್ರಗಳು ಭಾಗವಹಿಸಿದ್ದು 2020ರ ವೇಳೆಗೆ ಕಾರ್ಬನ್ ಹೊರಸೂರುವಿಕೆಯಲ್ಲಿ 1990ರ ಮಟ್ಟಕ್ಕಿಂತ ಶೇ. 25 ರಿಂದ ಶೇ. 40ರಷ್ಟು ಕಡಿತ ಮಾಡಬೇಕಿದೆ ಹಾಗೂ ಇದರ ಪ್ರಮಾಣವು 2050ರ ವೇಳೆಗೆ ಶೇ. 50 ಆಗಬೇಕೆಂದು ತೀರ್ಮಾನಿಸಲಾಯಿತು. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ 2030ರ ವರೆಗೆ ಪ್ರತಿವರ್ಷ 100 ಶತಕೋಟಿ ಡಾಲರ್ ಸಂದಾಯ ಮಾಡಿ ತಂತ್ರಜ್ಞಾನದ ನೆರವು ನೀಡಬೇಕೆಂದು ಒತ್ತಾಯಿಸಲಾಯಿತು.

ಪ್ಯಾರಿಸ್ ಒಪ್ಪಂದ 2015 – 16 : ಇತ್ತೀಚೆಗೆ ಪ್ಯಾರೀಸ್‌ನಲ್ಲಿ ನಡೆದ 190 ರಾಷ್ಟ್ರಗಳ sories Hinded Intend Nationally Determined Contributions – INDC 3 ಜಾರಿಗೆ ತರಲು ಒಪ್ಪಂದ ಮಾಡಿಕೊಳ್ಳಲಾಗಿದೆ. 2030ರ ವೇಳೆಗೆ ಮುಂದುವರಿದ ರಾಷ್ಟ್ರಗಳು ಕಾರ್ಬನ್ ಎಮಿಷನ್ ಸೇರಿದಂತೆ ಹವಾಮಾನ ವೈಪರೀತ್ಯ ಅನಿಲಗಳಿಗೆ ತಡೆ ಹಾಕುವ ಮುಖಾಂತರ, ಅಭಿವೃದ್ಧಿಶೀಲ ರಾಷ್ಟ್ರಗಳು ಯಶಸ್ವಿಯಾಗಿ ಸುಸ್ತಿರ, ಪರಿಸರ ಸ್ನೇಹಿ ಕ್ರಮಗಳಿಗೆ ಅನುಕೂಲವಾಗುವಂತೆ 2030ರ ವೇಳೆಗೆ ಕಾರ್ಬನ್ ಬಜೆಟ್ ನೀಡಬೇಕೆಂದು ಒಪ್ಪಂದ ಮಾಡಿಕೊಳ್ಳಲಾಯಿತು.

ಇದರನ್ವಯ ಭಾರತಕ್ಕೆ ವಿಶ್ವಬ್ಯಾಂಕ್‌ ಸೌರಶಕ್ತಿ ಸಂವರ್ಧನೆಗಾಗಿ ಲಕ್ಷ ಕೋಟಿ ರೂ. ನೀಡಿರುವುದನ್ನು ಸೈರಿಸಬಹುದಾಗಿದೆ. ಹವಾಮಾನ ವೈಪರೀತ್ಯ ತಡೆಗೆ ಭಾರತದ ಕಾಠ್ಯಕ್ರಮಗಳು

1. ಭಾರತವು ಹವಾಮಾನ ವೈಪರೀತ್ಯ ತಡೆಗೆ ಕಾರಕ್ರಮ ರೂಪಿಸಲು ಜಿಪಿಡಿಯ ಶೇ. 2.6 ವೆಚ್ಚ ಮಾಡುತ್ತಿದೆ.

2, 2008ರಲ್ಲಿ ರಾಷ್ಟ್ರೀಯ ಹವಾಮಾನ ವೈಪರಿತ್ಯ ಕ್ರಿಯಾ ಯೋಜನೆ ಪ್ರಕಟಿಸಿದೆ.

3. ರಾಷ್ಟ್ರೀಯ ಸೌರ ಹಾಗೂ ಇಂಧನ ಸಾಮರ್ಥ್ಯ ವೃದ್ಧಿ ಕಾಠ್ಯಕ್ರಮ ಜಾರಿಗೆ 4. ರಾಷ್ಟ್ರೀಯ ಹಸಿರು ಭಾರತ ಕಾಠ್ಯಕ್ರಮ ಜಾರಿಯಾಗಿದೆ

5, ರಾಷ್ಟ್ರೀಯ ಹವಾಮಾನ ವೈಪರೀತ್ಯ ಕಾರತಂತ್ರ ಜಾಗೃತಿ ಕಾರಕ್ರಮ

6. ರಾಷ್ಟ್ರೀಯ ಜಲ ಕಾಠ್ಯಕ್ರಮ ಜಾರಿಗೆ ತರಲಾಗಿದೆ

7. ರಾಷ್ಟ್ರೀಯ ಹಿಮಾಲಯ ಸಮತೋಲನ ಕಾಯ್ದುಕೊಳ್ಳುವ ಕಾರಕ್ರಮ

8. ರಾಷ್ಟ್ರೀಯ ವಸಾಹತು ಆಧಾರಿತ ಕಾರಕ್ರಮ ಮಹತ್ವದ ಪರಿಸರ ಸಂರಕ್ಷಣಾ ಘೋಷಣೆಗಳು

1. ಮಾಂಟ್ರಿಯಲ್ ಘೋಷಣೆ 1987: ಕ್ಲೋರೋ ಫೋರೋ ಕಾರ್ಬನ್ ಸಿಎಫ್‌ಸಿ ಉತ್ಪಾದನೆ ಮತ್ತು ಬಳಕೆಯನ್ನು 1990ರಷ್ಟೊತ್ತಿಗೆ 1986ರ ಮಟ್ಟಕ್ಕೆ ಕಡಿತಗೊಳಿಸಬೇಕು.

2. ಹೆಲ್ಸಿಂಕಿ ಘೋಷಣೆ 1989: ಓರೋನ್ ಪದರು ರಕ್ಷಣೆಗಾಗಿ ಸಿಎಫ್‌ಸಿ ಉತ್ಪಾದನೆಯನ್ನು 2000ದೊತ್ತಿಗೆ ಪೂರ್ತಿಯಾಗಿ ಕಡಿಮೆ ಮಾಡಬೇಕು.

3. ಲಂಡನ್ ಸಮಾವೇಶ 1990: ಅಭಿವೃದ್ಧಿ ಹೊಂದಿದ ರಾಷ್ಟ್ರಗಳು 2000 ದ ಹೊತ್ತಿಗೆ ಮತ್ತು ಅಭಿವೃದ್ಧಿ ಪರ ರಾಷ್ಟ್ರಗಳು 2010ರ ಸುಮಾರಿಗೆ ಸಿಎಫ್‌ಸಿ ಉತ್ಪಾದನೆ ಕಡಿಮೆ ಮಾಡುವುದು.

ವಸುದೈವ ಕುಟುಂಬಕಂ ಎಂಬುದು ನಮ್ಮಲ್ಲಿ ಪರಂಪರಾಗತವಾಗಿ ಬಂದ ಧೈಯ ಇಲ್ಲಿ ವಿಶ್ವಒಂದು ಕುಟುಂಬದಂತೆ, ಆದರೆ ಪ್ರಸ್ತುತ ಮನುಕುಲ ವಿಜ್ಞಾನದ ಅವಿಷ್ಕಾರಗಳನ್ನು ಬರೀ ಮಾನವನ ವಿನಾಶಕ್ಕೆ ಬಳಸಿದ್ದೇ ಹೆಚ್ಚು. ಅಂತಹುದರಲ್ಲಿ ಸುಸ್ಥಿರತೆ, ಒಳಗೊಳ್ಳುವಿಕೆ, ಹಸಿರು ಜಿಡಿಪಿ, ಸಾಮಾಜಿಕ ನೈತಿಕತೆಗಳಯ ಮರೀಚಿಕೆಯಾಗಿವೆ, ಉತ್ತರ ಅಮೇರಿಕಾದಲ್ಲಿ ಫ್ಯಾಕ್ಟರಿಗಳು ತಲೆ ಎತ್ತುವುದಕ್ಕೂ, ಅಂಟಾರ್ಟಿಕದ ಮಂಜುಗಡ್ಡೆ ಕರಗುವುದಕ್ಕೂ ಆರ್ಟಿಕ್‌ನಲ್ಲಿ ಜಲಚರಗಳು ಪ್ರಾಣ ಬಿಡುವುದಕ್ಕೂ, ಮಾಲೀವ್ ಮುಳುಗುವುದಕ್ಕೂ ನಂಟಿದೆ.

ಹಾಗಾಗಿಯೇ ಈ ಪ್ರಸ್ತುತ ಸಂದರ್ಭದಲ್ಲಿ ಓರೋನ್ ರಕ್ಷಣೆ, ವನ್ಯಜೀವಿ, ಅರಣ್ಯ ಸಂರಕ್ಷಣೆ, ಹವಾಮಾನ ವೈಪರೀತ್ಯ ತಡೆಗಟ್ಟುವುದು ಅತ್ಯಂತ ಪ್ರಮುಖವಾಗಿ ಕಂಡುಬರುತ್ತದೆ. ಹಾಗಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗಿಂತಲೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು, ತಮ್ಮ ದೇಶದ ಅಭಿವೃದ್ಧಿಗೆ ಪಥ ಬದಲಿಸುವುದು ತುಂಬ ಉತ್ತಮವಾದ ಆಯ್ಕೆಯಾಗುತ್ತದೆ. ಅದರಲ್ಲೂ ಯುಎಸ್, ಯುಕೆ, ಫ್ರಾನ್ಸ್, ರಷ್ಯಾ ಹಾಗೂ ಯೂರೋಪಿನ ಬಹುಪಾಲು ರಾಷ್ಟ್ರಗಳು ತಮ್ಮ ಅಭಿವೃದ್ಧಿ ಮಾದರಿಯನ್ನು ಬದಲಿಸಿಕೊಳ್ಳುವುದು ಅನಿವಾರವಾಗಿರುತ್ತದೆ. ಎಲ್ಲರಲೂ, ವಿಶ್ವ ಮಾನವೀಯತೆ, ವಿಶ್ವ ಮಾನವ ಪ್ರೇಮಬೆಳೆಯಬೇಕಾಗಿರುವುದು ತುರ್ತು ವಿಷಯವಾಗಿದೆ.

ಆದ್ದರಿಂದ ವಿಶ್ವದ ಎಲ್ಲಾರಾಷ್ಟ್ರಗಳು ತಮ್ಮ ಶಾಲಾ ಪಠ್ಯ ಪುಸ್ತಕದಲ್ಲಿ ಈ ಸಂದೇಶ ನೀಡುವುದರಿಂದ ಹಿಡಿದು ದೇಶದ ಪ್ರತಿಯೋರ್ವರಿಗೂ ಇದರ ಪರಿಣಾಮಗಳು ತಿಳಿಸಬೇಕಾಗಿರುವುದು ಅದ ಕರ್ತವ್ಯವಾಗಿದೆ. ಪರಿಸರವಿರುವುದು ಮನುಷ್ಯನ ಆಸೆಗಳನ್ನು ಈಡೇರಿಸುವುದಕ್ಕೆ ಹೊರತು ಮನುಷ್ಯನ ದುರಾಸೆಗಳನ್ನು ಅದ್ದರಿಂದ ಪ್ರಕೃತಿ ಶೋಷಣೆಗಿಂತ ಪ್ರಕೃತಿ ರಕ್ಷಣೆ ನಮ್ಮೆದ ಆಯ್ಕೆ ಕರ್ತವ್ಯವಾಗಬೇಕಿದೆ. ಮನುಕುಲದ ಜವಾಬ್ದಾರಿಯಾಗಬೇಕಾಗಿದೆ.

ವಿಶ್ವದ ಜನಸಂಖ್ಯೆಯ ಶೇಕಡಾ 17ರಷ್ಟನ್ನು ಭಾರತ ಹೊಂದಿದ್ದು ವಿಶ್ವದಲ್ಲಿ ಹೆಚ್ಚು ಕಲ್ಲಿದ್ದಲು ಹಾಗೂ ಹಸಿರುಮನೆ ಗ್ಯಾಸ್‌ ಉತ್ಪಾದಿಸುವ ರಾಷ್ಟ್ರವೂ ಆಗಿದೆ. ಭಾರತ ಹೊರಸೂಸುವ ಈ ಗ್ಯಾಸ್‌ನ ಒಟ್ಟು ಪ್ರಮಾಣ ಜಾಗತಿಕವಾಗಿ ಶೇ. 5ರಷ್ಟಿದ್ದು ಯಾವ ವಲಯದಿಂದ ಅದು ಬರುತ್ತದೆ ಎಂಬುದನ್ನು ತಿಳಿಯಬಹುದಾಗಿದೆ.

ಪ್ಯಾರಿಸ್ ಒಪ್ಪಂದದ ಭಾರತದ ಕ್ರಮಗಳು

1. ತಲಾದಾಯದ ತೀವ್ರತೆಯ ಮೇಲೆ 20,30ರ ವೇಳೆಗೆ 2005ರಲ್ಲಿದ್ದ ಹಸಿರು ಮನೆ ಗ್ಯಾಸ್‌ ಪ್ರಮಾಣವನ್ನು ಶೇ. 30 ರಿಂದ ಶೇ. 35ರಷ್ಟು ಕಡಿಮೆ ಮಾಡುವುದು.

2. 2030ರ ವೇಳೆಗೆ ಪಳೆಯುಳಿಕೇತರ ಇಂಧನ ಆಧಾರಿತ ವಿದ್ಯುತ್ ಉತ್ಪಾದನೆಯನ್ನು ಶೇ. 40ಕ್ಕೆ ಇಳಿಸುವುದು.

3. 2030ರ ವೇಳೆಗೆ ಇಂಗಾಲಾಮ್ಲದ ಪ್ರಮಾಣವನ್ನು 25 – 3 ಬಿಲಿಯನ್ ಟನ್‌ಗೆ ಇಳಿಸುವುದು.

4. 2020ರ ವೇಳೆಗೆ : 2050ರಲ್ಲಿ ಹೊರಸೂಸುತ್ತಿದ್ದ GHP ಗ್ಯಾಸ್‌ ಗಳನ್ನು ಶೇ. 20 ರಿಂದ 25 ಕಡಿಮೆ ಮಾಡುವುದಕ್ಕೆ ಭಾರತ ಬದ್ಧವಾಗಿದೆ.

5. 2030ರ ಹೊತ್ತಿಗೆ ಶೇ. 40 ಕಲ್ಲಿದ್ದಲಿನ ಸ್ಥಾವರಗಳು ಕಲ್ಲಿದ್ದಲು ರಹಿತವಾಗಿರುತ್ತವೆ.

6. ಎಲ್‌.ಇ.ಡಿ. ಬಲ್ಸ್‌ಗಳನ್ನು ಬಳಸುವ ಮೂಲಕ ಹಾಗೂ ಸಾವಿರಾರು ಮೊಬೈಲ್ ಸ್ಥಾವರಗಳಲ್ಲಿ ಡೀಸೆಲ್ ಬದಲು ಇಂಧನ ಕಲಶ ಅಳವಡಿಸಲು ಯೋಜನೆ ಮಾಡಲಾಗಿದೆ.

7. 2022ರ ಹೊತ್ತಿಗೆ 175 ಗಿಗಾ ವ್ಯಾಟ್ ಪನರ್ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಗುರಿ ಹೊಂದಲಾಗಿದೆ. ಕಲ್ಲಿದ್ದಲಿನ ಮೇಲೆ ತೆರಿಗೆ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿ ಕಡಿತ ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....