Kannada essays

Death Penalty Essay | ಮರಣದಂಡನೆ ಪ್ರಬ೦ಧ 2023

Table of Contents

ಮರಣದಂಡನೆ ಪ್ರಬ೦ಧ 

Death penalty: ಸಹಸ್ರಾರು ವರ್ಷಗಳಿಂದ ಇಂದಿನತನಕ ಸಾರ್ವಜನಿಕ ಜೀವನದಲ್ಲಿ ಅತೀ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ವಿಷಯ ಮರಣದಂಡನೆ/Death penalty.

ಇದನ್ನು ಕ್ಯಾಪಿಟಲ್ ಪನಿಷ್ ಮೆಂಟ್ ಡೆತ್ ಪೆನಾಲ್ಟಿ, ಎಕ್ಷುಷನ್ ಮುಂತಾದ ಹೆಸರುಗಳಿಂದ ಕರೆಯುತ್ತಿರುವುದನ್ನು ಕಾಣಬಹುದು. ‘ಯಾರಾದರೂ ಕ್ಷಮಿಸಲರ್ಹವಲ್ಲದ ಕೃತ್ಯಗಳನ್ನು ಎಸಗಿದಾಗ, ಅಂತಹವರನ್ನು ನಿರ್ದಾಕ್ಷಿಣ್ಯವಾಗಿ, ಬಲವಂತವಾಗಿ ಸಾಯಿಸುವ ಕಾನೂನಿನ ಪ್ರಕ್ರಿಯೆಯನ್ನು ಮರಣದಂಡನೆ ಎನ್ನಬಹುದಾಗಿದೆ. Death Penalty

ಪ್ರಸ್ತುತ ವಿಶ್ವದ ಶೇ. 60 ಅಧಿಕ ರಾಷ್ಟ್ರಗಳಲ್ಲಿ ಅಂದರೆ ಸುಮಾರು 139 ರಾಷ್ಟ್ರಗಳು ಮರಣದಂಡನೆಯ ಶಿಕ್ಷೆಯನ್ನು ನಿಷೇಧ ಮಾಡಲಾಗಿದ್ದು ಇನ್ನು 58 ರಾಷ್ಟ್ರಗಳಲ್ಲಿ ಈ ಘೋರವಾದ ಶಿಕ್ಷೆಯು ಜಾರಿಯಲ್ಲಿದೆ. ಪ್ರಸ್ತುತವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೆ ತುಂಬಾ ವಿರೋಧ ವ್ಯಕ್ತವಾಗುತ್ತಿದ್ದು ಶೇ. 90 ಮರಣ ದಂಡನೆಗಳು ಏಷ್ಯಾ ರಾಷ್ಟ್ರಗಳಲ್ಲೇ ಜಾರಿಯಲ್ಲಿದೆ ಎಂಬುದು ಅಚ್ಚರಿಯ ಅಂಶವಾಗಿದೆ. ಮರಣ ದಂಡನೆ ನಿಷೇಧದ ಪರ ಸಮರ್ಥನೆಗಳು

1. ಮರಣದಂಡನೆ/Death penalty ಉಗ್ರವಾದ, ಹೇಯವಾದ, ಅಮಾನವೀಯ ಶಿಕ್ಷೆಯಾಗಿದ್ದು, ಅಪರಾಧ ಮಾಡಿದ ತಪ್ಪಿಗೆ ಮರಣದ೦ಡನೆಯೇ ಸೂಕ್ತವಾದ ಪರಿಹಾರವಾಗಲಾರದು.

2. ಮಾನವ ಹಕ್ಕುಗಳಿಗೆ ಇದು ಅತ್ಯಂತ ವಿರೋಧವಾಗಿದ್ದು ಮರಣದಂಡನೆ ಶಿಕ್ಷೆಯನ್ನು ಮಾನವೀಯತೆಯ ದೃಷ್ಟಿಯಿಂದ ವಿಮರ್ಶಿಸುವುದು ಸೂಕ್ತ ಪರಿಹಾರ

3. ಮರಣದಂಡನೆಯು ನಿಷ್ಪಕ್ಷಪಾತವಾಗಿಲ್ಲ. ಬಡವರು, ದೀನ ದಲಿತರು, ಕೆಳವರ್ಗದವರ ಮೇಲೆಯೇ ಇದು ಹೇರಿಕೆಯಾಗುತ್ತಿರುವುದು ಅಂಕಿ – ಅಂಶಗಳಿಂದ ದೃಢಪಟ್ಟಿದೆ. ಮರಣ ದಂಡನೆಯು ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ಸಂಪೂರ್ಣವಾಗಿ

4. ತಡೆಯುವಲ್ಲಿ ಸಫಲವಾಗಿಲ್ಲ. ಮರಣದಂಡನೆ ಜಾರಿಯಲ್ಲಿರುವ ದೇಶಗಳಲ್ಲಿ ಕೈಂಗಳು ಹೆಚ್ಚುತ್ತಲೇ ಇವೆ.

5. ಮರಣ ದಂಡನೆಯು ಮುಖಾಂತರ ಭಯಪಡಿಸುವುದು, ಹೆದರಿಸುವುದು, ಎಚ್ಚರಿಸುವುದು ಸಮಾಜದ ದುಷ್ಕೃತ್ಯಗಳಿಗೆ ಶಾಶ್ವತ ಪರಿಹಾರವಲ್ಲ.

6. ಮರಣದಂಡನೆಗೆ ಪರ್ಯಾಯವಾದ ಜಾಮೀನುರಹಿತ ಜೀವಾವಧಿ ಶಿಕ್ಷೆಯಂತಹ ಹಲವಾರು ಶಿಕ್ಷೆಗಳು ಜಾರಿಯಲ್ಲಿರುವುದರಿಂದ ‘ಮರಣ ದಂಡನೆ’ಯ ಉದ್ದೇಶವನ್ನು ಇದರ ಮುಖಾಂತರ ಈಡೇರಿಸಬಹುದು.

7. ಮರಣದಂಡನೆ ಪ್ರಕ್ರಿಯೆಯು ತುಂಬಾ ದುಬಾರಿಯಾಗಿದ್ದು, ಬಹಳಷ್ಟು ಕಾಲ ತೆಗೆದುಕೊಳ್ಳುತ್ತದೆ. ಆದ್ದರಿಂದ ನ್ಯಾಯಾಂಗ, ಪೊಲೀಸ್ ಸೇವೆ ಮುಂತಾದವುಗಳಿಗೆ ಜನರ ಹಣ ಸಾಕಷ್ಟು ವ್ಯಯವಾಗುತ್ತದೆ. ಅಮೇರಿಕಾದ ಬ್ಯೂರೋ ಆಫ್ ಜಸ್ಟೀಸ್ ಸಂಸ್ಥೆಯು 2004ರ ವರದಿಯಂತೆ ಸುಮಾರು 67 ಬಿಲಿಯನ್ ಡಾಲರ್ ಮೊತ್ತ ಇದಕ್ಕೆ ವ್ಯಯವಾಗುತ್ತದೆ.

8. ಮರಣದಂಡನೆ ಪ್ರಕ್ರಿಯೆಯಲ್ಲಿ ಅಮಾಯಕರು ಶಿಕ್ಷೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿವೆ. ನ್ಯಾಯಾಲಯದಲ್ಲಿ ತೀರ್ಪು ಸಿಗುತ್ತದೆಯೇ ವಿನಃ ನ್ಯಾಯ ಸಿಗುವುದು ಅನುಮಾನ. ಸೂಕ್ತ ಸಾಕ್ಷಿದಾಖಲೆಗಳನ್ನು ಒದಗಿಸದಿದ್ದರೆ ತೀರ್ಪು ವ್ಯತಿರಿಕ್ತವಾಗುತ್ತದೆ. ಆದ್ದರಿಂದ ಅಮಾಯಕರ ಸಾವಿಗೆ ಕಾರಣವಾಗುತ್ತದೆ.

9. ಸಹಸ್ರಾರು ಅಪರಾಧಿಗಳು ಮರಣ ದಂಡನೆಯನ್ನು ವಿಧಿಸಿದ ನಂತರ ದೋಷಮುಕ್ತವಾದ ದಾಖಲೆಗಳಿರುವುದರಿಂದ ಮರಣದಂಡನೆ ಸೂಕ್ತವಲ್ಲ.

10. ‘ಮಾನವ ಜನಾಂಗದಲ್ಲಿ ತಪ್ಪು ಮಾಡುವುದು ಸಹಜ ಪ್ರಕ್ರಿಯೆಯಾಗಿದ್ದು, ತಿದ್ದಿಕೊಳ್ಳಲು ಅವಕಾಶ ನೀಡುವ ಬದಲು ಜೀವವನ್ನು ತೆಗೆಯುವುದು ಮಹಾ ಅಪರಾಧವಾಗುತ್ತದೆ.

11. ನಿಸರ್ಗಕ್ಕೆ ವಿರುದ್ಧವಾದ, ಮನುಷ್ಯ ಪ್ರೇರಿತ ಕಾನೂನುಗಳನ್ನು, ಜೀವಕೊಡುವ ಶಕ್ತಿಯೇ ಇಲ್ಲದ ಸಮಾಜಕ್ಕೆ ಜೀವವನ್ನು ತೆಗೆಯುವ ಅಧಿಕಾರವಿರುವುದು ದುರದೃಷ್ಟಕರ.

12. ಮರಣದಂಡನೆಯು ಹಿಂಸೆ, ಗಲಭೆ, ರಾಜಕೀಯ ಪ್ರೇರಿತ ಕಿತ್ತಾಟ, ನೋವು ಮುಂತಾದವುಗಳನ್ನು ಪ್ರೇರೇಪಿಸುತ್ತದೆಯೇ ಹೊರತು ಶಾಂತಿ, ಪ್ರೀತಿ, ಸಮಾನ ಸಮಾಜವನ್ನು ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ ಮರಣದಂಡನೆಯ ರದ್ದುಗೊಳಿಸುವುದು ಸೂಕ್ತ,

ಮರಣದಂಡನೆಯ ಹಿನ್ನೆಲೆ/Background to the Death penalty

ಮರಣ ದಂಡನೆಯು ಒಂದು ಕಾನೂನಿನ ಪ್ರಕ್ರಿಯೆಯಾಗಿದ್ದು ಇತಿಹಾಸದಲ್ಲಿ ಬ್ಯಾಬಿಲೋನಿಯಾದ ಪ್ರಸಿದ್ಧ ಅರಸ ಹಮ್ಮುರಬಿಯ ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಎಂಬ ತತ್ವವನ್ನು ಅನುಸರಿಸುತ್ತದೆ. ನೇಣಿಗೇರಿಸುವುದು, ವಿದ್ಯುತ್‌ ಶಾಕ್ ನೀಡುವುದು, ಬೆಂಕಿ ಹಚ್ಚುವುದು, ವಿಷಕಾರಿ ಗ್ಯಾಸ್ ಚೇಂಬರ್ ಶಿಕ್ಷೆ, ಕಲ್ಲು ಹೊಡೆದು ಸಾಯಿಸುವುದು, ವಿಷಕಾರಿ ಇಂಜೆಕ್ಷನ್ ನೀಡುವುದು ಮರಣ ದಂಡನೆಯ ವಿವಿಧ ರೂಪಗಳಾಗಿದ್ದು 18ನೆಯ ಶತಮಾನದಲ್ಲಿ ಕಾನೂನನ್ನು ಉಲ್ಲಂಘಿಸಿದವರಿಗೆ ನೀಡಲಾಗುತ್ತಿದ್ದ ಪ್ರಮುಖ ಶಿಕ್ಷೆ ಇದಾಗಿತ್ತು.

Death Penalty

ಜಾನ್ ಲಾಕ್ ರೂಸೋ ಥಾಮಸ್ ಹಾಬ್‌ರವರು ಮಂಡಿಸಿರುವ ಸಾಮಾಜಿಕ ಒಪ್ಪಂದದ ಸಿದ್ಧಾಂತದಲ್ಲಿ ನೈಸರ್ಗಿಕ ರಾಜ್ಯದ ಪರಿಕಲ್ಪನೆಯಿದೆ. ಈ ಪರಿಕಲ್ಪನೆಯಲ್ಲಿ ಸಮಾಜದ ಪಿಡುಗುಗಳನ್ನು ನಿವಾರಿಸಲು ಮರಣ ದಂಡನೆಯಂತಹ ಶಿಕ್ಷೆಯನ್ನು ನೀಡಲು ಪ್ರಾರಂಭಿಸಿದರು. ಎಲ್ಲಾ ಶಿಕ್ಷೆಗಳಿಗಿಂತ ಮರಣದಂಡನೆ ಶಿಕ್ಷೆ ದೊಡ್ಡದಾದ ಅಂತಿಮ ಶಿಕ್ಷೆಯಾಗಿತ್ತು. ಈ ಶಿಕ್ಷೆಯ ಪ್ರಮುಖವಾದ ಉದ್ದೇಶವು ಅಪರಾಧವೆಸಗುವವರಲ್ಲಿ ಭಯವನ್ನು ಹುಟ್ಟಿಸಿ ಸಮಾಜವನ್ನು ನಿಯಂತ್ರಿಸುವುದು ಆಗಿದ್ದಾಗ ಮರಣದಂಡನೆಯು ಸಹಜವಾಯಿತು.

ಮರಣದಂಡನೆಯನ್ನು ರದ್ದುಪಡಿಸಿರುವ ರಾಷ್ಟ್ರಗಳು/ Countries that have abolished the Death penalty
ಮಾನವ ಹಕ್ಕುಗಳನ್ನು ಅರಿತುಕೊಂಡು ಸುಮಾರು 150 ರಾಷ್ಟ್ರಗಳು ಮರಣ ದಂಡನೆಯನ್ನು ರದ್ದುಪಡಿಸಿವೆ. ಅಂತಹುದರಲ್ಲಿ ಪ್ರಮುಖವಾದ ರಾಷ್ಟ್ರಗಳೆಂದರೆ ಬ್ರಿಟನ್ ಫ್ರಾನ್ಸ್, ಸ್ಪಿಟ್ಟರ್‌ ಲ್ಯಾಂಡ್, ಡೆನ್ಮಾರ್ಕ್, ಪೋರ್ಚುಗಲ್, ನ್ಯೂಜಿಲ್ಯಾಂಡ್, ಜರ್ಮನಿ, ನಾರ್ವೆ, ಈಕ್ವೆಡಾರ್, ಪೋಲ್ಯಾಂಡ್ ಮುಂತಾದ ರಾಷ್ಟ್ರಗಳು ಅತೀ ಪ್ರಮುಖವಾಗಿವೆ.

ಅಮೈಸ್ಟಿ ಇಂಟರ್ ನ್ಯಾಷನಲ್ ಹೋರಾಟ

ವಿಶ್ವಸಂಸ್ಥೆಯು 1948ಲ್ಲಿ ವಿಶ್ವ ಮಾನವ ಹಕ್ಕುಗಳ ಜಾಗತಿಕ ಘೋಷಣೆಯನ್ನು ಮಾಡಿತು. ಇದು ವಿಶ್ವದ ಮಾನವರಿಗೆ ಜೀವಿಸುವ ಹಕ್ಕನ್ನು ನೀಡುವುದಲ್ಲದೆ ಸ್ವಾತಂತ್ರ್ಯವನ್ನು ನೀಡುತ್ತದೆ. ಇದು ಯಾವುದೇ ನಾಗರಿಕನಿಗೆ ಕೂರ ಶಿಕ್ಷೆ ವಿಧಿಸುವುದನ್ನು ನಿಷೇಧಿಸುತ್ತದೆ. ಮರಣ ದಂಡನೆಯು ಮಾನವನ ಮೂಲಭೂತ ಹಕ್ಕಿನ ಉಲ್ಲಂಘನೆಯಾದಂತಾಗುತ್ತದೆ.

ಅಮೈಸ್ಟಿ ಇಂಟರ್‌ನ್ಯಾಷನಲ್ ಎಂಬ ಅಂತರರಾಷ್ಟ್ರೀಯ ಸಂಸ್ಥೆಯು ಮಾನವ ಹಕ್ಕುಗಳ ಉಲ್ಲಂಘನೆಯನ್ನು ವಿರೋಧಿಸಿ ವಿಶ್ವದಾದ್ಯಂತ ಪ್ರತಿಭಟನೆಯನ್ನು ಮಾಡುತ್ತದೆ. ಅಂತಹುದರಲ್ಲಿ ಇದು ಮರಣದಂಡನೆಯನ್ನು ಕುಟುಂಬಗಳ ವಿರುದ್ಧ ರಾಷ್ಟ್ರದ ಕ್ರೂರತೆ ಎಂದು ಬಣ್ಣಿಸಿದೆ. ಈ ಸಂಸ್ಥೆಯ ವರದಿಯಂತೆ ಪ್ರತಿ ದಿನವು ಜಾಗತಿಕವಾಗಿ ಮರಣದಂಡನೆ ಶಿಕ್ಷೆಯನ್ನು ವಿಧಿಸುತ್ತಿದ್ದಾರೆ.

ಮರಣದಂಡನೆ ಅಸ್ತಿತ್ವದಲ್ಲಿರುವ ರಾಷ್ಟ್ರಗಳು/ countries where the Death penalty exists
ಮಾನವ ಹಕ್ಕುಗಳ ಆಧಾರದ ಮೇಲೆ ಮರಣದಂಡನೆಯನ್ನು ರದ್ದುಪಡಿಸುವ ಆಲೋಚನೆಗಳು ಬಂದ ನಂತರವು ಸುಮಾರು 58 ರಾಷ್ಟ್ರಗಳಲ್ಲಿ ಮರಣದಂಡನೆ ಶಿಕ್ಷೆಯು ಜಾರಿಯಲ್ಲಿದೆ. ಇಂತಹ ಪ್ರಮುಖ ರಾಷ್ಟ್ರಗಳೆಂದರೆ ಬೋರಾನ್, ಬೋನ್ಸ್‌ ವಾಟಾ, ಚೀನಾ, ಕ್ಯೂಬಾ, ಈಜಿಪ್ಟ್, ಭಾರತ, ಪಾಕಿಸ್ತಾನ, ಇರಾನ್, ಇರಾಕ್, ಜಪಾನ್, ಮಂಗೋಲಿಯಾ, ಮಲೇಷಿಯ, ಸಿಂಗಾಪುರ, ತೈವಾನ್ ಹಾಗೂ ಅಮೇರಿಕಾ ಮುಂತಾದ ರಾಷ್ಟ್ರಗಳಲ್ಲಿ ಪ್ರಸ್ತುತ ಈಗಲೂ ಮರಣದಂಡನೆ ಶಿಕ್ಷೆ ಜಾರಿಯಲ್ಲಿದೆ.

ಮರಣ ದಂಡನೆಯ ಪರವಾದ ಸಮರ್ಥನೆಗಳು/Justifications in favour of the Death penalty

1. ಮರಣ ದಂಡನೆಯಂತಹ ಶಿಕ್ಷೆಗಳು ಜಾರಿಯಲ್ಲಿ ಇಲ್ಲದಿದ್ದರೆ ಸಮಾಜದಲ್ಲಿ ಯಾವುದೇ ತರಹದ ಭಯವಿರುವುದಿಲ್ಲ ಮರಣದಂಡನೆಯಂತಹ/Death penalty ಕಾನೂನು ಇದ್ದರೂ ಕೃತ್ಯಗಳು ನಿಂತಿಲ್ಲ ಅಂದಮೇಲೆ ಇನ್ನು ಇಲ್ಲದೆ ಇದ್ದರೆ ಊಹಿಸಲು ಸಾಧ್ಯವಿಲ್ಲ.

2. ಸಮಾಜದ ಮೌಲ್ಯಗಳನ್ನು ಬರ್ಭರವಾಗಿ ನಾಶಪಡಿಸುವ ಅಪರಾಧಗಳಿಗೆ ಮರಣದಂಡನೆಯಂತಹ ಶಿಕ್ಷೆಗಳ ಅನಿವಾದ್ಯತೆ ಇದೆ.

3. 1983ರ ಸುಪ್ರಿಂಕೋರ್ಟ್ ಆಫ್ ಇಂಡಿಯಾದ ತೀರ್ಪಿನಂತೆ ಕೊಲೆ, ಸಾಮೂಹಿಕ ನರಹತ್ಯೆ, ಮಹಿಳೆಯರು ಮಕ್ಕಳು ಮತ್ತು ಹುಚ್ಚರ ಕೊಲೆ, ರಾಷ್ಟ್ರದ ವಿರುದ್ಧ ಯುದ್ಧ ಸೈನ್ಯದೊಳಗೆ ಬಂಡಾಯದಂತಹ ಸಂದರ್ಭಗಳಲ್ಲಿ ಮರಣದಂಡನೆ ನೀಡಬಹುದು.

4. ಮರಾದಾಹಕ್ಕೆ, ಸಾಮೂಹಿಕ ಅತ್ಯಾಚಾರ, ದುರುದ್ದೇಶದ ಎನ್ ಕೌಂಟರ್ ಮಾಡಿದ ಪೊಲೀಸರಿಗೆ ಮರಣದಂಡನೆಯನ್ನು/Death penalty ವಿಧಿಸಲು ಸುಪ್ರೀಂಕೋರ್ಟ್ ಸಲಹೆ ಮಾಡಿದೆ.

5. ವಿಪರೀತ ಜನಸಂಖ್ಯೆಯನ್ನು ಹೊಂದಿರುವ ಏಷ್ಯಾದ ದೇಶಗಳಲ್ಲಿ ಈ ಮರಣದಂಡನೆ/Death penalty ಶಿಕ್ಷಾಪದ್ಧತಿ ಇರುವುದು ಅಪರಾಧ ತಡೆಗಟ್ಟುವಲ್ಲಿ ಸ್ವಲ್ಪ ಮಟ್ಟಿಗೆ ಸಹಕರಿಸಿದೆ.

6. ಪದ ಪದೇ ದುಷ್ಕೃತ್ಯ ಎಸಗುವ, ಅತ್ಯಾಚಾರ ಎಸಗುವ ಮನೋವೈಜ್ಞಾನಿಕ ಕಾರಣಗಳಿಗಾಗಿ ವಿದ್ರೋಹ ಕೃತ್ಯ ಎಸಗುವವರನ್ನು ಹಾಗೆಯೇ ಬಿಟ್ಟರೆ ಅಪರಾಧಗಳು ಹೆಚ್ಚಾಗುತ್ತವೆ.

7. ಕಾನೂನಿನಡಿಯಲ್ಲಿ ಮರಣದಂಡನೆಯು/Death penalty ಓರ್ವ ನಿರಪರಾಧಿಯ ಸಲುವಾಗಿ ಸಾವಿರ ಅಪರಾಧಿಗಳನ್ನು ಶಿಕ್ಷಿಸಲು ಸಿದ್ಧವಿದೆ ಎಂಬುದನ್ನು ಸೂಚಿಸುತ್ತದೆ.

8. ಮಾನವೀಯ ಮೌಲ್ಯಗಳು ಹಾಗೂ ಪ್ರೀತಿಯ ನೆಲೆಗಟ್ಟಿಲ್ಲದ ಅಮಾನವೀಯ ಸಮಾಜದಲ್ಲಿ ಅಪರಾಧಗಳನ್ನು ತಡೆಗಟ್ಟಲು ಮರಣದಂಡನೆಯ.

ವಿಶ್ವದಾದ್ಯಂತ ಮರಣದಂಡನೆಯ/Death penalty ವಿಧಾನಗಳು

‘ಮೊದಲಿಗೆ ಮರಣದಂಡನೆಯನ್ನು ಬಹಳ ವಿಚಿತ್ರವಾಗಿ ಕ್ರೂರವಾಗಿ ನೀಡುತ್ತಿದ್ದರು. ಶಿಕ್ಷೆಗೆ ಗುರಿಯಾದ ವ್ಯಕ್ತಿಯ ದೇಹದ ಚರ್ಮವನ್ನು ಸುಲಿದು ಸಾಯಿಸುತ್ತಿದ್ದರು. ಸಿಂಹ ಅಥವಾ ಹುಲಿಯ ಬೋನಿಗೆ ಹಾಕಲಾಗುತ್ತಿತ್ತು. ಸಜೀವವಾಗಿ ದಹಿಸಲಾಗುತ್ತಿತ್ತು, ಕೆಲ ಪ್ರಾಣಿಗಳಿಂದ ತುಳಿಸಿ ಕೊಲ್ಲಲಾಗುತ್ತಿತ್ತು. ಸಜೀವವಾಗಿ ಅಂಗಾಂಗ ಬೇರ್ಪಡಿಸಿ ಜೀವ ತೆಗೆಯಲಾಗುತ್ತಿತ್ತು.

ಪ್ರಸ್ತುತವಾಗಿ ಕೆಲ ದೇಶಗಳು ಈ ರೀತಿಯ ಚಿತ್ರಹಿಂಸೆಯನ್ನು ಬಿಟ್ಟು ಕೇವಲ ಗಲ್ಲಿಗೇರಿಸುವ ಮುಖಾಂತರ ಕೊಲ್ಲುವ ಪದ್ಧತಿ ಜಾರಿಯಲ್ಲಿದೆ. ಭಾರತದ ಸರ್ವೋಚ್ಚ ನ್ಯಾಯಾಲಯದ ಪ್ರಕಾರ ಚಿತ್ರಹಿಂಸೆ ಮತ್ತು ಕ್ರೌರ್ಯಗಳು ಇದರಲ್ಲಿ ಇರುವುದಿಲ್ಲ.Death Penalty

ಇತ್ತೀಚಿನ ಕೆಲ ದಿನಗಳಲ್ಲಿ ಮರಣದಂಡನೆ/Death penalty ರದ್ದುಗೊಳಿಸಬೇಕೆಂದು ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಇದಕ್ಕೆ ಪುಷ್ಟಿಕೊಡುವ ಕೆಲ ಪ್ರಕರಣಗಳು ನಡೆದುಹೋಗಿವೆ.

ವಿವಾದಾಸ್ಪದವಾಗಿ ಪ್ರಾಣ ತೆತ್ತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಿಗೆ ಮತ್ತು ವೀರಪ್ಪನ್‌ ಸಹಚರರಿಗೆ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿ ಸುಪ್ರೀಂಕೋರ್ಟ್‌ ಜನವರಿ 01, 2014ರಂದು ತೀರ್ಪು ನೀಡಿರುವುದು ಅವಿಸ್ಮರಣೀಯ ವಿಷಯವಾಗಿದೆ.

1. ರಾಷ್ಟ್ರಪತಿಗೆ ಸಲ್ಲಿಸಿದ ಕ್ಷಮಾದಾನದ ಅರ್ಜಿಯನ್ನು ವಿಲೇವಾರಿ ಮಾಡಲು 7 ವರ್ಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡಿದ್ದು.

2. ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಯನ್ನು 11 ವರ್ಷಗಳಿಗಿಂತ ಹೆಚ್ಚು ಒಂದೇ ಜೈಲಿನಲ್ಲಿ ಇಡುವುದರಿಂದ ಸಾಕಷ್ಟು ಮಾನಸಿಕ ಹಿಂಸೆಯನ್ನು ಅನುಭವಿಸುತ್ತಾನೆ.

3. ಸಂವಿಧಾನದ 21ನೇ ವಿಧಿಯ ಪ್ರಕಾರ ಜೀವಿಸುವ ಹಕ್ಕು ಒಂದು ಮೂಲಭೂತ ಹಕ್ಕಾಗಿದೆ. ಭಾಗಶಃ ಈ ಕಾರಣಗಳನ್ನು ನೀಡಿ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಗಿದೆ.

ನಮ್ಮ ದೇಶದಲ್ಲಿ ಮರಣದಂಡನೆ/Death penalty in our country

1. ಭಾರತದಲ್ಲಿ ಕೊಲೆ, ಭಯೋತ್ಪಾದಕ ಕೃತ್ಯಗಳು, ಅತ್ಯಾಚಾರ ಮತ್ತು ಸಂಘಟಿತ ಅಪರಾಧಿಗಳಿಗೆ ಶಿಕ್ಷೆ ನೀಡುವುದಕ್ಕಾಗಿ 1950ರ ಸೇನಾ ಕಾಯಿದೆಯ ಪ್ರಕಾರ ಮರಣದಂಡನೆ ಜಾರಿಗೊಳಿಸಲಾಗುತ್ತದೆ.

2. 26-11-2008ರಂದು ಭಯೋತ್ಪಾದನಾ ಕೃತ್ಯ ನಡೆಸಿ ನೂರಾರು ಜನರ ಪ್ರಾಣಹರಣ ಮಾಡಿದ ಪಾಕಿಸ್ತಾನದ ಭಯೋತ್ಪಾದಕ ಅಜ್ಜಲ್ ಕಸಬ್‌ನಿಗೆ ಸುಪ್ರೀಂಕೋರ್ಟ್‌ ಗಲ್ಲುಶಿಕ್ಷೆಯನ್ನು ವಿಧಿಸಿದೆ.

3. ನವದೆಹಲಿಯ ಸಂಸತ್ ಭವನದ ಮೇಲೆ ದಾಳಿಗೈದ ಅಪ್ಪಲ್ ಗುರುವಿಗೆ ಸುಪ್ರೀಂಕೋರ್ಟ್ ಮರಣದಂಡನೆ ಶಿಕ್ಷೆಯನ್ನು ನೀಡಿತು.

4. 16-12-2012ರಂದು ದೆಹಲಿಯ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ‘ನಿರ್ಭಯ’ಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪೂರ್ವಯೋಜಿತ ಕೃತ್ಯವೆಂದು ಪರಿಗಣಿಸಿ ಕೋರ್ಟು ಅತ್ಯಾಚಾರಿಗಳಿಗೆ ಮರಣದಂಡನೆಯನ್ನು/Death penalty ಖಾಯಂಗೊಳಿಸಿದೆ.

5. ಡಿಸೆಂಬರ್ 13, 2012ರ ಪ್ರಕಾರ ಭಾರತದಲ್ಲಿ ಸುಮಾರು 477 ಅಪರಾಧಿಗಳು ಮರಣದಂಡನೆ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ.

6. ರಾಷ್ಟ್ರೀಯ ಅಪರಾಧ ಬ್ಯೂರೋದ ಪ್ರಕಾರ 2001-11ರ ಅವಧಿಯಲ್ಲಿ ಸರಾಸರಿ 132 ಪ್ರಕರಣಗಳು ದಾಖಲಿಸಲ್ಪಟ್ಟು ಸುಪ್ರೀಂಕೋರ್ಟ್‌ನಿಂದ ಕೇವಲ 3 ರಿಂದ 4 ಪ್ರಕರಣಗಳು ಮಾತ್ರ ಪ್ರತಿ ವರ್ಷ ಇತ್ಯರ್ಥವಾಗಿವೆ.

ಮರಣದಂಡನೆ ನಿಷೇಧ/Prohibition of the Death penalty

ಮಾನವ ಹಕ್ಕು ಹೋರಾಟ ಸಂಘಟನೆಗಳು, ಅಭಿವೃದ್ಧಿ ಚಿಂತಕರು, ಪ್ರಗತಿಪರರು ಸದ್ಯ ಮರಣ ದಂಡನೆಯನ್ನು ನಿಷೇಧ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಯುರೋಪಿನ ರಾಜ 8ನೇ ಹೆನ್ರಿಯು ಒಬ್ಬನೆ 72000 ಜನರನ್ನು ಮರಣದಂಡನೆಗೆ ಗುರಿಪಡಿಸಿದನು. ಇದರ ಪರಿಣಾಮದಿಂದ ಯುರೋಪಿನ ಬಹುತೇಕ ರಾಷ್ಟ್ರಗಳು ಮರಣ ದಂಡನೆಯನ್ನು/Death penalty ನಿಷೇಧಿಸಿವೆ. ಎಲ್ಲಿ ನಿಷೇಧಿಸುವುದು ಕಷ್ಟಸಾಧ್ಯ ಎನಿಸುತ್ತದೆಯೋ ಅಲ್ಲಿ ಮರಣ ದಂಡನೆಯ ಪ್ರಮಾಣ ಕಡಿಮೆಗೊಳಿಸುವ ಕಾರ ನಡೆಯುತ್ತಿದೆ. ಪೀಪಲ್ಸ್‌ ಯೂನಿಯನ್ ಆಫ್ ಸಿವಿಲ್ ಲಿಬರ್ಟಿಸ್ ವದಿಯ ಪ್ರಕಾರ ಭಾರತದಲ್ಲಿ 1967 ರಿಂದ 16 ರಾಜ್ಯಗಳಲ್ಲಿ 1022 ಮರಣ ದ೦ಡನೆಗಳಾಗಿವೆ.

“To kill a killer for killing is the deumbest thing ever” ಎನ್ನುವನ್ತೆ ಅಪರಾಧಿಗೆ ಮರಣದಂಡನೆಯೊಂದೇ ಪರಿಹಾರವಲ್ಲ. ದುಷ್ಕೃತ್ಯಗಳಿಗೆ ಮೂಲ ಕಾರಣವನ್ನು ಹುಡುಕಿ, ಆ ಕಾರಣವನ್ನು ನಿರ್ಮೂಲನ ಮಾಡಲು ಎಲ್ಲಿಯವರೆಗೆ ಸಾಧ್ಯವಿಲ್ಲವೋ ಅಲ್ಲಿಯವರೆಗೆ ಸಮಾಜ ವಿರೋಧಿ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ.

ಒಂದು ವೇಳೆ ನಾವು ಹಮ್ಮುರಬಿಯ ತತ್ವವನ್ನು ಅನುಸರಿಸಿದ್ದಾದರೆ ಇಡೀ ವಿಶ್ವವೇ ಕುರುಡರಿಂದ ತುಂಬಿ ಹೋಗುತ್ತದೆ. ಅತೀ ಉಗ್ರವಾದ ಅಪರಾಧಕ್ಕೆ ಮರಣದಂಡನೆಯೊಂದೇ ಪರಿಹಾರವಲ್ಲ. ತಪ್ಪು ಮಾಡುವುದು ಮಾನವನ ಸಹಜಗುಣ ಆದರೆ ಅದನ್ನು ತಿದ್ದುವುದು, ಕಾರಣ ಹುಡುಕುವುದು, ಸಂಶೋಧಿಸುವುದು ಸೇರಿದಂತೆ ಇಡೀ ವಿಶ್ವವನ್ನು ಪ್ರೀತಿ, ಸಹೋದರತೆ, ಭ್ರಾತೃತ್ವದ ಮುಖಾಂತರ ತೆಗೆದುಕೊಂಡು ಹೋಗುವ ಅವಶ್ಯಕತೆ ಇಂದು ತುರ್ತಾಗಿದೆ. ಇಡೀ ವಿಶ್ವವನ್ನು ಪ್ರೀತಿ, ಅಹಿಂಸೆಯಂದ ಗೆಲ್ಲಬಹುದೇ ಎನಃ ಹೆದರಿಕೆ, ಭಯ, ಮರಣದಂಡನೆಗಳಿಂದಲ್ಲ.

ಮಾನವ ಸಮಾಜವು ಪರಿವರ್ತನೆಗೆ ಅವಕಾಶ ಕೊಡಬೇಕು. ಅಪರಾಧಕ್ಕೆ ಪ್ರೇರಣೆಯಾದ ಕಾರಣವನ್ನು ನಾಶ ಮಾಡಬೇಕೇ ಹೊರತು ಅಪರಾಧಿಯನ್ನಲ್ಲ. ಮಾನವೀಯ ವಿಚಾರಗಳು, ಪ್ರಬುದ್ಧತೆಯ ಕೊರತೆಗಳು ಮರಣದಂಡನೆಗೆ ಅರ್ಹವಾದ ಅಪರಾಧಗಳನ್ನು ಮಾಡಲು ಪ್ರೇರಣೆ ನೀಡುತ್ತವೆಯೇ ಹೊರತು ಬೇರಾವುದೋ ಕಾರಣಗಳಲ್ಲ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಇದು ಮುಖ್ಯವಾಗಿ ಮರಣದಂಡನೆ ಜಾರಿಯಲ್ಲಿರುವ ರಾಷ್ಟ್ರಗಳಲ್ಲಿ ರಾಜಕೀಯ ಪಕ್ವತೆ ಇಲ್ಲದಿರುವುದರಿಂದ ಕಾರಣವಾಗಿದೆ.ನಮ್ಮ ದೇಶದಲ್ಲಿ ಮರಣ ದಂಡನೆಗೆ ಗುರಿಯಾದವರಿಗೆ ಅದರಿಂದ ಪಾರಾಗಲು, ಅವರು ಸುಪ್ರಿಂಕೋರ್ಟಿಗೆ ಮೇಲ್ಮನವಿ ಸಲ್ಲಿಸಬಹುದು.

ಅದು ತಿರಸ್ಕರಿಸಿದೆ ರಾಪತಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಬಹುದು. ಈ ಪ್ರಯತ್ನಗಳು ಮಾತ್ರವೇ ಮರಣದಂಡನೆ ನಿಷೇಧದ ಕಡೆಗೆ ಫಲ ನೀಡಲಾರವು. ಮರಣ ದಂಡನೆಯ ಕುರಿತಾಗಿ ಎಷ್ಟು ಚರ್ಚೆಗಳು ನಡೆದರೂ ಕೆಲವೊಂದು ಘೋರ ಪ್ರಕರಣಗಳಲ್ಲಿ ಮರಣ ದಂಡನೆಯನ್ನು ವಿಧಿಸುವುದು. ಸೂಕ್ತವಾಗಿದೆ. ಆದರೆ ಬದಲಾದ ಸಾಮಾಜಿಕ ಸನ್ನಿವೇಶದಲ್ಲಿ ಗಾಂಧಿ, ಬುದ್ಧ, ಬಸವ, ಅಂಬೇಡ್ಕರ್‌ರನ್ನು ಆದರ್ಶವಾದಿಗಳಾಗಿ ತೆಗೆದುಕೊಂಡ ನಾವುಗಳು ಶಾಂತಿಪ್ರಿಯರಾಗಿದ್ದು ಅಮಾನವೀಯ ಮರಣದಂಡನೆಯನ್ನು ರದ್ದುಗೊಳಿಸುವುದು ಸಮಯೋಚಿತವಾಗಿದೆ.

ಆದರೆ ಮಾನಸಿಕ ಅಸ್ವಸ್ಥರು, ಸಮಾಜದ ನಿರುಪಯೋಗಿ ವ್ಯಕ್ತಿತ್ವ ಉಳ್ಳವರು, ಪದೇ ಪದೇ ದುಷ್ಕೃತ್ಯ ಎಸಗುವ ಮನೋಭಾವ ಉಳ್ಳವರನ್ನು ಗಲ್ಲಿಗೇರಿಸುವುದರಲ್ಲಿ ತಪ್ಪಿಲ್ಲ. ಆದರೆ ಅಮಾಯಕರನ್ನು ಗಲ್ಲಿಗೇರಿಸುವುದು ತಪ್ಪಾಗುತ್ತದೆ. ಇಂದು ಸಮಾಜ ಕಲುಷಿತಗೊಂಡಿದೆ. ಗಾಂಧೀಜಿ ಹೇಳಿದ ಹಾಗೆ ‘ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ಕೊಡುವ ಪರಿಸ್ಥಿತಿ ಇಂದಿಲ್ಲ’ ಅಸೂಯೆ, ಸ್ವಾರ್ಥ, ಮೂಢನಂಬಿಕೆ, ಕೋಮು ದಳ್ಳುರಿ, ಮತಾಂಧತೆ ತುಂಬಿದ ಸಮಾಜವನ್ನು ಶಾಂತಿ ಮತ್ತು ಪ್ರೀತಿಯಿಂದ ತಿದ್ದುವ ಅವಶ್ಯಕತೆ ಇದೆ. ಜಗತ್ತಿನ ಯಾವ ದೇಶಗಳು ಘೋರ ಶಿಕ್ಷೆಗೆ ಒಳಪಡಿಸಿ ಸಂಪೂರ್ಣ ಕೈಂ ಮುಕ್ತ ದೇಶಗಳಾಗಿಲ್ಲ.

ಆದರೆ ಅಲ್ಪಸ್ವಲ್ಪ ಬದಲಾವಣೆಗಳಾಗಿರುವುದನ್ನು ತಳ್ಳಿಹಾಕುವಂತಿಲ್ಲ. ಮಾನವ ಸಮಾಜವನ್ನು ಶೋಷಣೆ ಮುಕ್ತ ಮಾಡಿ ಸಮ ಸಮಾಜ ನಿರ್ಮಾಣ ಮಾಡುವ ತನಕ ಅಪರಾಧಗಳು ನಿಲ್ಲುವುದಿಲ್ಲ. ಒಂದು ವೇಳೆ ನಿಂತರೆ ಅದು ಶಾಂತಿ ಮತ್ತು ಪ್ರೀತಿಯ ಪ್ರತೀಕದಿಂದಾಗಿ ಮಾತ್ರ.

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....