Kannada essays

Corruption ಭ್ರಷ್ಟಾಚಾರದಲ್ಲಿ ನಮ್ಮ ಭಾರತ ಪ್ರಬಂಧ | Empowering the Fight Against Corruption: A Beacon of Hope Essay 2023

Table of Contents

Corruption Essay | ಭ್ರಷ್ಟಾಚಾರ ಪ್ರಬಂಧ

ಭ್ರಷ್ಟಾಚಾರಕ್ಕೂ ಮತ್ತು ಭಾರತಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ದೇಶದಲ್ಲಿ ಹುಟ್ಟಿನಿಂದ ಸಾಯುವತನಕ ಎಲ್ಲರಲ್ಲೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಈ ಭ್ರಷ್ಟಾಚಾರ ಆವರಿಸಿಕೊಂಡಿದೆ. ದೇಶದ ಬಹುಪಾಲು ವ್ಯವಸ್ಥೆ ದಿವಾಳಿ ಏಳಲು ಮೂಲಕಾರಣ ಈ ಭ್ರಷ್ಟಾಚಾರ, ಶಾಸಕಾಂಗ, ಕಾರಾಂಗ, ನ್ಯಾಯಾಂಗ, ಪತ್ರಿಕೆ, ಉದ್ಯಮ ಹಾಗೂ ದೇಶದಲ್ಲಿರುವ ಬಹುಪಾಲು ಎಲ್ಲ ಅಂಗಗಳು ಈ ಭ್ರಷ್ಟಾಚಾರದಿಂದ ನಲುಗುತ್ತಿವೆ. ಎಲ್ಲರ ಮೂಲ ಉದ್ದೇಶ ಅಕ್ರಮವಾಗಿ ಹಣಗಳಿಸುವುದು. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಅಂಟಿದ ದೊಡ್ಡ ರೋಗವಾಗಿದೆ. ಬೋಫೋರ್ ಹಗರಣ, ಮೇವು ಹಗರಣ, ಕೋಲ್‌ಗೇಟ್ ಹಗರಣ, 2ಜಿ ಸ್ಪೆಕ್ಷಮ್ ಹಗರಣ, ಆದರ್ಶ ಹೌಸಿಂಗ್ ಸೊಸೈಟಿ, ವ್ಯಾಪಂ ಹಗರಣ, ಭೂಹಗರಣ, ಐಪಿಎಲ್ ಹಗರಣ, ಕಾಮನ್‌ವೆಲ್ತ್ ಹಗರಣ, ಮುಂತಾದವುಗಳಲ್ಲಿ ಇಡೀ ವಿಶ್ವದಲ್ಲಿ ಕಂಡುಕೇಳಲರಿಯದಷ್ಟು ಅಕ್ರಮ ಎಸಗಿದೆ.

ವಿಶಾಲ ಅರ್ಥದಲ್ಲಿ ಹೇಳುವುದಾದರೆ ಸಾರ್ವಜನಿಕ ಸ್ಥಾನದಲ್ಲಿರುವ ವ್ಯಕ್ತಿಗಳು ಹಣದ ರೂಪದಲ್ಲಿ ಲಂಚನವನ್ನು ಸ್ವೀಕರಿಸುವುದು ಭ್ರಷ್ಟಾಚಾರವಾಗುತ್ತದೆ. ಆದರೆ ಭ್ರಷ್ಟಾಚಾರ ಎಂಬ ಪದ ಇಂದು ಖಾಸಗಿಗೂ ಬಳಕೆಯಾಗುತ್ತಿದೆ. ಖಾಸಗಿ ಉದ್ದೇಶಗಳಿಗಾಗಿ ಸಾರ್ವಜನಿಕ ಸ್ಥಾನಗಳನ್ನು ದುರುಪಯೋಗ ಪಡಿಸಿಕೊಂಡು ಅಕ್ರಮ ಎಸಗುವುದನ್ನು ಭ್ರಷ್ಟಾಚಾರ ಎನ್ನುವರು. ಲಂಚ, ಕಾಣಿಕೆ, ಬಹುಮಾನ, ಸ್ವಜನಪಕ್ಷಪಾತ, ಸಾರ್ವಜನಿಕ ಹಣ ಹಾಗೂ ಅಧಿಕಾರ ದುರುಪಯೋಗ, ಆಸ್ತಿಯ ದುರುಪಯೋಗ, ಶಿಫಾರಸ್ಸು ಮಾಡುವುದು, ಸಾರ್ವಜನಿಕ ಸೇವಾ ಸಿಬ್ಬಂದಿಯನ್ನು ಖಾಸಗಿ ಕಾರ್ಯಕ್ಕೆ ಬಳಸಿಕೊಳ್ಳುವುದು ಭ್ರಷ್ಟಾಚಾರವೆನಿಸಿಕೊಳ್ಳುತ್ತದೆ.

ಭಾರತೀಯ ದಂಡ ಸಂಹಿತೆಯ ಪ್ರಕಾರ 161ನೇ ಸೆಕ್ಷನ್ ಹೇಳುವಂತೆ ಓರ್ವ ಸರ್ಕಾರಿ ನೌಕರನು ತನ್ನ ಅಧಿಕೃತ ಕರ್ತವ್ಯ ನಿರ್ವಹಿಸಲು ಕಾನೂನುಬದ್ದ ಪ್ರತಿಫಲವನ್ನು ಹೊರತುಪಡಿಸಿ, ಇತರೆ ಲಾಭ ಪಡೆಯುವುದಕ್ಕೆ ಪ್ರಯತ್ನಿಸುವುದು ಭ್ರಷ್ಟಾಚಾರ’ ಎಂದಾಗುತ್ತದೆ.

ಟ್ರಾನ್ಸ್‌ಪೆರೊ ಇಂಟರ್ ನ್ಯಾಶನಲ್ ಪ್ರಕಾರ ‘ಯಾವುದೇ ಒಬ್ಬ ವ್ಯಕ್ತಿ ಕಾನೂನುಬದ್ಧ ನಿಯಮಗಳನ್ನು ಮೀರಿ ವೈಯಕ್ತಿಕ ಲಾಭಕ್ಕಾಗಿ ಬದ್ಧ ನಿಯಮಗಳನ್ನು ಮುರಿಯುವುದು ಭ್ರಷ್ಟಾಚಾರ’ವಾಗಿದೆ.

ಖ್ಯಾತ ತಜ್ಞ ಆಂಡ್ರಿಸ್ಕಿ ಹೇಳುವಂತೆ ಔಪಚಾರಿಕ ನಿಯಮಗಳನ್ನು ಹಾಗೂ ಕಾನೂನನ್ನು ಉಲ್ಲಂಘಿಸಿ, ಅಕ್ರಮ ಹಣಕ್ಕಾಗಿ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದೇ ಭ್ರಷ್ಟಾಚಾರ.’

ಭ್ರಷ್ಟಾಚಾರದ ಪ್ರಮುಖ ತೊಂದರೆಗಳು/ Major Difficulties of Corruption

ಯಾವ ದೇಶದ ಆಡಳಿತ, ಸರ್ಕಾರಗಳಲ್ಲಿ ಈ ಭ್ರಷ್ಟಾಚಾರ/Corruption ನುಸುಳತದೆಯನ್ನು ಆದೇಶದ ಅಭಿವೃದ್ಧಿ ಎಂದೆಂದಿಗೂ ಸಾಧ್ಯವಿಲ್ಲ. ಸ್ವತಂತ್ರ ಭಾರತದೊಂದಿಗೆ ಸ್ವಾತಂತ್ರ್ಯ ಪಡೆದ ರಾಷ್ಟ್ರಗಳಲ್ಲಿ ಕೆಲವು ಈಗಾಗಲೇ ಶ್ರೀಮಂತ ರಾಷ್ಟ್ರಗಳ ಪಟ್ಟಿ ಸೇರಿವೆ. ಇದಕ್ಕೆ ಕಾರಣ ಆ ರಾಷ್ಟ್ರದ ಜನರಲ್ಲಿ ಇರುವ ರಾಷ್ಟ್ರ ಪ್ರೇಮ. ಆದರೆ ನಮ್ಮಲ್ಲಿ ಕೇವಲ ಆಡಂಬರದ, ಸ್ವಾರ್ಥದ, ಮತದ, ಅವೈಜ್ಞಾನಿಕ ದೇಶ ಪ್ರೇಮ ಈ ಜನರಿಗೆ ಇಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ/Corruption ಬೇರೂರಲು ಅವಕಾಶ ಮಾಡಿಕೊಟ್ಟಿದೆ. ಇದು ಪ್ರಜಾಪ್ರಭುತ್ವದ ಅತೀ ದೊಡ್ಡ ಸವಾಲಾಗಿದ್ದು, ಆಡಳಿತದಲ್ಲಿ ಅದಕ್ಷತೆಯನ್ನು ಮೂಡಿಸುತ್ತದೆ. ದೇಶದ ಅನಭಿವೃದ್ಧಿಗೆ ಇದು ಪೂರಕವಾಗಿದೆ.

1) ದೇಶದ ಸರ್ವತೋಮಕ ಅಭಿವೃದ್ಧಿಗೆ ಅಡ್ಡಗಾಲು: Corruption

ಭಾರತ ದೇಶದ ಸಂಪೂರ್ಣ ಅವನತಿಗೆ ಈ ಭ್ರಷ್ಟಾಚಾರವೇ ಅಡ್ಡಗಾಲು ಶಾಸಕಾಂಗ, ಕಾರಾಂಗ, ನ್ಯಾಯಾಂಗಗಳು ಭ್ರಷ್ಟಗೊಂಡಿದ್ದು ರಸ್ತೆ, ಹಾಕಿದೆ. ನೀರು, ಸಾರಿಗೆ, ಶಿಕ್ಷಣ, ವಿದ್ಯುತ್, ಆಡಳಿತ, ಕ್ರೀಡೆ, ಪ್ರವಾಸೋದ್ಯಮ ಮುಂತಾದ ಎಲ್ಲದರಲ್ಲಿಯೂ ಈ ದೇಶದಲ್ಲಿ ಅಕ್ರಮವಿದೆ. ಆದ್ದರಿಂದ 1947ರಿಂದ ನೆಹರೂರವರ ಕಾಲದಿಂದಲೂ ಇಲ್ಲಿಯ ತನಕ ಈ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿಲ್ಲ. ಎಲ್ಲಾ ಆಯಾಮಗಳು ಭಾರತ ಸೋಲಲು ಪ್ರಮುಖ ಕಾರಣ ಈ ಭ್ರಷ್ಟಾಚಾರ/Corruption. ಅದರಲ್ಲೂ ಈ ರಾಜಕೀಯ ರಂಗವಂತೂ ಉತ್ತಮರು, ಗಾಂದೀವಾದಿಗಳು ಅವರ ಬಳಿ ನಿಲ್ಲುವುದೋ ಸಾಹಸ ಕಾರವಾಗಿದೆ. ಲಾಲ್ ಬಹದ್ದೂರ್ ಶಾಸ್ತ್ರೀಯವರ ತರದ ಮೌಲ್ಯಯುತ ರಾಜಕಾರಣಿಗಳು ಇಂದು ಇಲ್ಲ.

2) ಸರ್ಕಾರದ ಆಡಳಿತ ಯಂತ್ರ ಕುಸಿತ: Corruption

ರಾಜಕಾರಣಿಗಳು ಕೆಲವು ಅಧಿಕಾರಿಗಳೊಂದಿಗೆ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು ಅಧಿಕಾರಶಾಹಿಯನ್ನು ನಿಯಂತ್ರಿಸುವ ಹಾಗೂ ನಿರ್ದೇಶಿಸುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆ, ಡಿನೋಟಿಫಿಕೇಶನ್ ಮಾಡಿದ ನೂರಾರು ಜನರು ಇಂದು ಸಚಿವರಾಗಿದ್ದಾರೆ. ಸರ್ಕಾರವೇ ಭ್ರಷ್ಟಗೊಂಡಿದೆ. ಕೆಪಿಎಸ್‌ಸಿ ಸೇರಿದಂತೆ ನೂರಾರು ವಿದ್ಯಾರ್ಥಿಗಳ ಬಾಳು ರೂಪಿಸಬೇಕಾದ ಸಾರ್ವಜನಿಕ ಸೌಧಗಳೇ ಭ್ರಷ್ಟಗೊಂಡಿರುವುದರಿಂದ ಆಡಳಿತದಲ್ಲಿ ನೈತಿಕತೆ ಹುಡುಕುವುದು. ಮೂರ್ಖತನವಾಗುತ್ತದೆ. ಸರ್ಕಾರದ ಮುಖ್ಯ ಕಾವ್ಯದರ್ಶಿ ಸೇರಿದಂತೆ ಹಲವಾರು ಸಚಿವರು ಕ್ರಿಮಿನಲ್‌ ಆರೋಪ ಎದುರಿಸುತ್ತಿದ್ದಾರೆ.

3) ಸಾರ್ವಜನಿಕ ಹಣದ ಅಪವ್ಯಯ:

ಭಾರತೀಯ ಸಂವಿಧಾನದ ಸಂಸ್ಥೆ ಸಿಎಜಿ ವರದಿ ಮಾಡಿರುವಂತೆ ಮೊದಲು ಬಂದವರಿಗೆ ಮೊದಲ ಆದ್ಯತೆ ಅನ್ವಯ ಸರ್ಕಾರಕ್ಕೆ ಬರಬೇಕಾದ ಲಕ್ಷಾಂತರ ಕೋಟಿ ರೂ.ವನ್ನು ವಂಚಿಸಿರುವ ಆರೋಪದ ದಾಖಲೆಗಳು ಸಹ ಇವೆ. ಹೀಗೆ ಸಾರ್ವಜನಿಕರ ಹಣವನ್ನು ‘ಅನಾವಶ್ಯಕವಾಗಿ ಖರ್ಚು ಮಾಡುವುದು ಕೂಡ ಭ್ರಷ್ಟಾಚಾರದ ಒಂದು ರೂಪವಾಗಿದೆ. ಸಾರ್ವಜನಿಕ ವಲಯದಲ್ಲಿ ಬರುವ ತೆರಿಗೆಗಳಲ್ಲೂ ಕಳ್ಳತನ ನಡೆದಿರುವುದು ದುರ್ದೈವ. ತೆರಿಗೆಯ ಹಣದ ಲೋಪಗಳು

4) ಕೌಶಲ್ಯ, ಸೃಜನಶೀಲತೆ, ಗುಣಮಟ್ಟ ನಾಶ:

ಒಂದು ದೇಶದ ಮಾನವ ಸಂಪತ್ತು ಕೇವಲ ಅಕ್ರಮ ಹಣದ ಆಧಾರದ ಮೇಲೆ ಅಳೆಯುವುದಾದರೆ ಆ ದೇಶದಲ್ಲಿ ಕೌಶಲ್ಯ, ಸೃಜನಶೀಲತೆ, ಗುಣಮಟ್ಟ ನಾಶವಾಗುತ್ತಿದೆ. ಎಲ್ಲೆಲ್ಲೂ ಸ್ವಜನಪಕ್ಷಪಾತ, ಸ್ವಾರ್ಥ, ಕೌಶಲ್ಯಯುತನಾದವನಿಗೆ ಅವಕಾಶವೇ ನಮ್ಮಲ್ಲಿ ಇಲ್ಲದಂತಾಗುತ್ತಿದೆ. ಸಾರ್ವಜನಿಕ ವಲಯದ ಎಷ್ಟು ಹುದ್ದೆಗಳು ಇಂದು ಮಾರಾಟವಾಗುತ್ತಿವೆ.

ಹಾಗಾಗಿಯೇ ಇಲ್ಲಿ ಜ್ಞಾನಕ್ಕೆ, ಕ್ರೀಡೆಗೆ ಯಾವುದಕ್ಕೂ ಬೆಲೆಯಿಲ್ಲ.
ನೂರಾಇಪ್ಪತ್ತೈದು ಕೋಟಿ ಜನರಿರುವ ಭಾರತದಲ್ಲಿ ಕೇವಲ ಒಲಂಪಿಕ್‌ನಲ್ಲಿ ಎರಡು ಪದಕವೆಂದರೆ ಗೊತ್ತಾಗುತ್ತದೆ. ಇಲ್ಲಿಯ ಜನರ ಸ್ವಾರ್ಥ, ಅಸೂಯೆ, ರಾಜಕೀಯ,

5) ರಾಜಕೀಯ ಅರಾಜಕತೆ:

ಒಂದು ಪಕ್ಷದ ರಾಜಕಾರಣಿಗಳು ಅಧಿಕಾರವನ್ನು ಪಡೆಯಲು ಶಾಸಕಾಂಗದಲ್ಲಿ ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲಿ ಎಂಎಲ್‌ಎ, ಎಂಪಿಗಳಿಗೆ ಹಣ ನೀಡಿ ತಮ್ಮ ಪಕ್ಷದ ಪರ ಮತ ನೀಡುವಂತೆ ಕೇಳಿಕೊಳ್ಳುವುದು ಅತ್ಯಂತ ಕಳಪೆ ಮಟ್ಟದ ರಾಜಕಾರಣವಾಗಿದ್ದು ಇದನ್ನು ಕುದುರೆ ವ್ಯಾಪಾರ ಎಂದು ಕರೆಯಲಾಗುತ್ತದೆ. ಯಾವ ರಾಜ್ಯದ ರಾಜ್ಯಕಾರಣವು ಇದರಿಂದ ಹೊರತಾಗಿಲ್ಲ. ಭಾರತದಲ್ಲಿ ಈ ರೀತಿಯ ರಾಜಕಾರಣವು ಭ್ರಷ್ಟಾಚಾರದ ಇನ್ನೊಂದು ಮುಖವನ್ನು ತೋರಿಸುತ್ತದೆ. ಕರ್ನಾಟಕದಲ್ಲಿ ಆಪರೇಷನ್‌ ಕಮಲ ಇದು ಬಹು ಮುಖ್ಯ ಉದಾಹರಣೆಯಾಗಿದೆ.

6) ಜನಸಾಮಾನ್ಯನ ಶೋಷಣೆ:

ಈ ಭ್ರಷ್ಟಾಚಾರ/Corruption ಬಿಸಿ ಹೆಚ್ಚಾಗಿ ಸಾಗುತ್ತಿರುವುದು ಕೆಳವರ್ಗದ ಜನಸಾಮಾನ್ಯರನ್ನು ಹುಟ್ಟಿನಿಂದ ಸಾಯುವ ತನಕ ಭ್ರಷ್ಟಾಚಾರವಿದೆ/Corruption. ಆಸ್ಪತ್ರೆ, ಶಾಲೆ ದಾಖಲಾತಿ, ಗ್ರಾಮ ಪಂಚಾಯಿತಿ ಸೌಲಭ್ಯ ಪಡೆಯಲು, ಪಿಂಚಣಿ ಪಡೆಯಲು, ಸಿಲಿಂಡರ್ ಪಡೆಯಲು, ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು ಹಾಗೂ ಸರ್ಕಾರದ ಯಾವುದೇ ಸೇವೆಯನ್ನು ಪಡೆಯಲು ಇಂದು ಭ್ರಷ್ಟಾಚಾರ/Corruption ಅತೀ ಮುಖ್ಯವಾಗುತ್ತದೆ. ಭಾರತದಲ್ಲಿ ಬಡವರ ಶೋಷಣೆ ಹೆಚ್ಚಾಗುತ್ತಿದೆ. ಮಾನವೀಯತೆ ಇಲ್ಲದೆ ಇಲ್ಲದವರನ್ನು ಶೋಷಿಸಲಾಗುತ್ತಿದೆ.

7) ಶ್ರೀಮಂತರು ಶ್ರೀಮಂತರಾಗುತ್ತಾರೆ, ಬಡವರು ಬಡವರೆ:

ನಮ್ಮ ದೇಶದಲ್ಲಿ ಹಣವಿದ್ದವನಿಗೆ ಅಧಿಕಾರ ಬರುತ್ತದೆ. ಅಧಿಕಾರವಿದ್ದವನಿಗೆ ಹಣ ಬರುತ್ತದೆ. ಇಲ್ಲಿ ಕಸ ಹೊಡೆಯುವವನಿಂದ ಹಿಡಿದು ದೇಶದ ಅತ್ಯುನ್ನತ ಸ್ಥಾನದವರೆಗೆ ಏರಲು ಬೇಕಾಗಿರುವುದು ಹಣ ಮಾತ್ರ. ಆರೋಗ್ಯ, ಶಿಕ್ಷಣ, ಉತ್ತಮ ಜೀವನ ಮಟ್ಟ, ಕೌಶಲ್ಯ, ಪ್ರಕರ ಪಾಂಡಿತ್ಯ ಮುಂತಾದವುಗಳೆಲ್ಲವು ನಗಣ್ಯವಾಗಿ ಕೇವಲ ಕುರುಡು ಕಾಂಚಣಕ್ಕೆ ಇಲ್ಲಿ ಬೆಲೆ ಹೆಚ್ಚಿರುತ್ತದೆ.


8) ವಿಶ್ವ ಆರ್ಥಿಕತೆಯಲ್ಲಿ ದೇಶಕ್ಕೆ ಕಪ್ಪು ಚುಕ್ಕೆ:

1991ರ ನೂತನ ಆರ್ಥಿಕತೆಯ ನಂತರ ವಿಶ್ವದ ಪ್ರಮುಖ ರಾಷ್ಟ್ರಗಳ ವ್ಯಾಪಾರ ವಹಿವಾಟು ಭಾರತದೊಂದಿಗೆ ಇದೆ. ಯುಎಸ್‌ಎ, ಯುಕೆ, ಯೂರೋಪಿಯನ್ ಯೂನಿಯನ್ ಮುಂತಾದ ದೇಶಗಳೊಂದಿಗೆ ಭಾರತದ ಆರ್ಥಿಕ ಸಂಬಂಧವಿದ್ದು ಈ ಭ್ರಷ್ಟಾಚಾರ/Corruption ಅವರೊಂದಿಗೂ ಇದೆ. ಇತ್ತೀಚೆಗೆ ಬಹಿರಂಗಗೊಂಡಿರುವ ಆಗಸ್ಪವೆಸ್ಟ್‌ಲ್ಯಾಂಡ್ ಡೀಲ್‌ನಲ್ಲಿ ದೇಶದ ರಕ್ಷಣಾ ಇಲಾಖೆ ಇಟಲಿಯ ಡಬ್ಲ್ಯೂವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಭಾಗವಹಿಸಿದೆ. ಒಟ್ಟಾವಿಯೋಕ್ವಟ್ರೋಚಿ ಹೇಳಿದಂತೆ ಬೋಫೋರ್ ಹಗರಣದಲ್ಲಿ ದೇಶದ ಮಾನ ವಿಶ್ವದಾದ್ಯಂತ ಹರಾಜಾಯಿತು. ಇನ್ನು ಐಪಿಎಲ್ ಹಗರಣಗಳದೂ ಇದೇ ಕಥೆ.

9) ಆರ್ಥಿಕ ಅಭಿವೃದ್ಧಿಗೆ ತಡೆಗೋಲು:

ದೇಶದ ಆರ್ಥಿಕ ಅಭಿವೃದ್ಧಿಗೆ ಸ್ವಚ್ಛ ಆಡಳಿತ ಅತೀ ಮುಖ್ಯವಾಗಿರುತ್ತದೆ. ಖಾಸಗಿ ಕಂಪನಿಗಳು ಸೇರಿದಂತೆ ಉತ್ಪಾದನೆಯನ್ನು ಹೆಚ್ಚಿಸಿ ದೇಶವನ್ನು ಆರ್ಥಿಕವಾಗಿ ಮುನ್ನಡೆಸಲು ದೇಶದ ಆಡಳಿತ ಪಾರದರ್ಶಕವಾಗಿರಬೇಕಾಗುತ್ತದೆ. ರಸ್ತೆ ರಿಪೇರಿ, ನೀರಾವರಿ ಅಭಿವೃದ್ಧಿ, ಅಣೆಕಟ್ಟುಗಳ ನಿರ್ಮಾಣ, ಕೃಷಿ ಅಭಿವೃದ್ಧಿ, ಕೈಗಾರಿಕೆಗಳ ಸ್ಥಾಪನೆ ಮುಂತಾದವುಗಳಿಗೆ ಸರ್ಕಾರ ಬಿಡುಗಡೆ ಮಾಡುವ ಹಣದ ಬಹುಭಾಗವನ್ನು ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ಕೊಳ್ಳೆ ಹೊಡೆಯುತ್ತಾರೆ. ಇದರ ಪರಿಣಾಮವಾಗಿ ರಾಷ್ಟ್ರದ ಆರ್ಥಿಕ ಅಭಿವೃದದಿಗೆ ಹಿನ್ನಡೆ ಉಂಟಾಗುತ್ತದೆ.

10) ಕಪ್ಪುಹಣ ಹೆಚ್ಚಾಗಲು ಸಹಕಾರಿ:

ವಿಶ್ವದಲ್ಲಿ ಹೆಚ್ಚು ಕಪ್ಪು ಹಣ ಹೊಂದಿರುವ ದೇಶದಲ್ಲಿ ಭಾರತವು ಒಂದಾಗಿದ್ದು, ಇದಕ್ಕೆ ಮುಖ್ಯ ಕಾರಣ ಈ ಭ್ರಷ್ಟಾಚಾರ/Corruption, ಒಂದೇ ಬಾರಿ ಬಂದ ಅಪಾರ ಪ್ರಮಾಣದ ಹಣವನ್ನು ಯಾರಿಗೂ ಗೊತ್ತಾಗದಂತೆ ಪಡೆದು ಸರ್ಕಾರವನ್ನು ವಂಚಿಸಿ ಕಪ್ಪು ಹಣ ಶೇಖರಿಸಲಾಗುತ್ತಿದೆ. ಇಂದು ಅತಿಯಾದ ಹಣದುಬ್ಬರವಾಗಲು ಪ್ರಮುಖ ಕಾರಣವೇ ಈ ಕಪ್ಪು ಹಣ. ರಿಯಲ್ ಎಸ್ಟೇಟ್ ದಂದೇಕೋರರು, ಭ್ರಷ್ಟ ರಾಜಕಾರಣಿಗಳು ಸರ್ಕಾರವನ್ನು ವಂಚಿಸಿ ಪನಾಮ ಭ್ರಷ್ಟಾಚಾರದಂತಹ ಹೂಡಿಕೆಗಳಲ್ಲಿ ತೊಡಗಿಸುತ್ತಾರೆ. . ಈ ಭ್ರಷ್ಟಾಚಾರ/Corruption ಅತ್ಯಂತ ಕೆಟ್ಟ ಪರಿಣಾಮ

11) ದೇಶದ ಎಲ್ಲಾ ಸಮಸ್ಯೆಗಳಿಗೂ ಮೂಲ:

ಪ್ರಸ್ತುತ ಭಾರತವು ಎದುರಿಸುತ್ತಿರುವ ಸಮಸ್ಯೆಗಳಾದ ಬಡತನ, ಹಸಿವು, ದಾರಿದ್ರ, ನಿರುದ್ಯೋಗ, ಜನಸಂಖ್ಯಾಸ್ಫೋಟ ಮುಂತಾದ ಎಲ್ಲ ಸಮಸ್ಯೆಗಳಿಗೂ ಮೂಲ ಈ ಭ್ರಷ್ಟಾಚಾರ/Corruption, ಕೆಲವು ಕಡೆ ನಕ್ಸಲಿಸಂ ಬೆಳೆಯಲು ಈ ಆಡಳಿತದಲ್ಲಿರುವ ಭ್ರಷ್ಟಾಚಾರದ ವೈಫಲ್ಯಗಳು ಹಾಗೂ ಭ್ರಷ್ಟಾಚಾರಗಳೇ ಕಾರಣವಾಗಿದ್ದವು.

12) ಸರ್ಕಾರಗಳ ತೀವ್ರ ಮುಖಭಂಗ:

ಪಿ.ವಿ. ನರಸಿಂಹರಾವ್‌, ರಾಜೀವ್‌ಗಾಂಧಿ, ಜಯಲಲಿತ, ಲಾಲುಪ್ರಸಾದ್ ಯಾದವ್ ಮುಂತಾದವರು ಕ್ರಮವಾಗಿ ಜೆಎಂಎಂ ಹಗರಣ, ಬೋರ್ಫೋಸ್ ಹಗರಣ, ತಾಜ್ಯ ಹಗರಣ, ಮೇವು ಹಗರಣ, ಟೆಲಿಕಾಂ ಹಗರಣಗಳಲ್ಲಿ ಭಾಗಿಯಾಗಿ ಸರ್ಕಾರಗಳಿಗೆ ತೀವ್ರ ಮುಖಭಂಗ ಉಂಟು ಮಾಡಿದ್ದಾರೆ. ಇತ್ತೀಚೆಗೆ ಮನಮೋಹನ್‌ಸಿಂಗ್‌ರವರು ಬಹುಕೋಟಿ ಕಲ್ಲಿದ್ದಲು ಹಗರಣದಲ್ಲಿ ಪಾಲುಗೊಂಡು ಸರ್ಕಾರಕ್ಕೆ ಇಂಚುಮುರಿಸು ತಂದೊಡ್ಡಿದ್ದಾರೆ.

13) ಮೌಲ್ಯ ಆದರ್ಶಗಳ ಹಿನ್ನಡೆ:

ಒಂದಾನೊಂದು ಕಾಲದಲ್ಲಿ ಕೇವಲ ಒಂದು ರೈಲು ದುರಂತ ಸಂಭವಿಸಿತೆಂದು ಓರ್ವ ರೈಲ್ವೆ ಮಂತ್ರಿ ರಾಜೀನಾಮೆ ನೀಡುವ ಕಾಲವಿತ್ತು. ಅಷ್ಟು ಪರಿಶುದ್ಧ ರಾಜಕಾರಣ ಮಾಡುವ ಜನರು ಅಂದಿನಿಂದ ಇದ್ದಾಗ್ಯೂ ಇಂದು ಬಹುಪಾಲು ಭ್ರಷ್ಟರು ತಮ್ಮನ್ನು ಆಳುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಇತ್ತೀಚೆಗಂತೂ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು, ಕೆಲವು ಬಿಲ್‌ಗಳಿಗೆ ಸಹಿ ಹಾಕಲು, ನಿಧಿ ಬಳಸಿಕೊಳ್ಳು ಭ್ರಷ್ಟಾಚಾರವಿರುವಾಗ ಸಂಸದೀಯ ಮೌಲ್ಯಗಳನ್ನು ಯಾರು ಕೇಳುವ ಹಾಗಿಲ್ಲ. ಆದ್ದರಿಂದ ಮೌಲ್ಯ ಆದರ್ಶಗಳು ಸತತ ಹಿನ್ನಡೆಯುಂಟಾಗಿದೆ.

ಭಾರತದ ಪ್ರಮುಖ ಭ್ರಷ್ಟಾಚಾರ ಪ್ರಕರಣಗಳು/ The major corruption cases in India are:

1) ಬಹುಕೋಟಿ ಕಲ್ಲಿದ್ದಲು ಹಗರಣ:

ಸ್ವತಂತ್ರ ಭಾರತದ ಅತೀ ದೊಡ್ಡ ಹಗರಣವೆಂದು ಇದನ್ನು ಕರೆಯಲಾಗುತ್ತಿದ್ದು ಸುಮಾರು 1.86 ಲಕ್ಷ ಕೋಟಿ ಮೌಲ್ಯದ ಹಗರಣ ಇದಾಗಿದೆ. ‘ಮೊದಲು ಬಂದವರಿಗೆ ಮೊದಲ ಆದ್ಯತೆ’ಯಂತೆ ಕಲ್ಲಿದ್ದಲು ಗಣಿಗಳನ್ನು ಹರಾಜು ಪ್ರಕ್ರಿಯೆ ಮಾಡದೇ ಹಂಚಿಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಅಂದು ಕಲ್ಲಿದ್ದಲು ಗಣಿ ಖಾತೆಯನ್ನು ಹೊಂದಿದ್ದ ಇಂದಿನ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ರವರೇ ಈ ಹಗರಣಕ್ಕೆ ಕಾರಣವೆಂದು ಕಂಟ್ರೋಲರ್ ಅಂಡ್‌ ಆಡಿಟರ್ ಜನರಲ್‌ರವರ ಕಛೇರಿ ಕರೆದಿತ್ತು. ಆದರೆ ಸುಪ್ರೀಂಕೋರ್ಟ್ ಈ ಹಗರಣದಲ್ಲಿ ಸರ್ಕಾರದ ಬೇಜವಾಬ್ದಾರಿತನ ಕಾರಣವೆಂದು ಮತ್ತು ಮನಮೋಹನ್‌ ಸಿಂಗ್‌ರವರನ್ನು ನಿರ್ದೋಷಿಗಳೆಂದು ಕರೆಯಿತು. ಆದರೆ ಒಮ್ಮೊಮ್ಮೆ ಸಿಬಿಐ ಇಂದಿಗೂ ಬಿರ್ಲಾ, ಟಾಟಾ ಮುಂತಾದ ಉದ್ಯಮಿಗಳ ಕಂಪನಿಯ ಮೇಲೆ ತನಿಖೆ ನಡೆಸುತ್ತಿರುವುದು ಈ ಕೋಲ್‌ಗೇಟ್ ಹಗರಣದ ಭಾಗವಾಗಿ

2) 2ಜಿ ಸ್ಪೆಕ್ಟಮ್ ಹಗರಣ:

ಕಳೆದ ಯುಪಿಎ2 ಸರ್ಕಾರದ ಬಹುದೊಡ್ಡ ಹಗರಣಗಳಲ್ಲಿ ಇದು ಒಂದಾಗಿದ್ದು ಸುಮಾರು 1.76 ಲಕ್ಷ ಕೋಟಿ ಹಗರಣವಿದ್ದು, ಇದು ಸಹ ಕೋಲ್‌ಗೇಟ್‌ ಹಗರಣದಂತೆ ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬಂತೆ 2ಜಿ ತರಂಗಗುಚ್ಛಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸದೇ ಮಾಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 1.76 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಿನ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ವಿನೋದ್‌ ರಾಯ್ ತಿಳಿಸಿದ್ದರು. ಇದರ ಪ್ರಮುಖ ಆರೋಪಿಗಳಾದ ಎ.ರಾಜಾ, ಕನಿಮೊಳಿ ಮತ್ತು ದಯಾನಿಧಿ ಮಾರನ್ ಕೆಲವು ದಿನಗಳ ಕಾಲ ಜೈಲಿನಲ್ಲಿದ್ದದ್ದು ದೊಡ್ಡ ಅಪರಾಧವಾಗಿದೆ.

3) ಐಪಿಎಲ್ ಹಗರಣ:

ವಿಶ್ವವೇ ವಿನೂತನವಾಗಿ ಆರಂಭಿಸಿದ ಚುಟುಕು ಸಮ್ಮಿಶ್ರ ದೇಶಗಳ ಕ್ರಿಕೆಟ್ ಕ್ರೀಡೆಯನ್ನು ಐಪಿಎಲ್ ಎಂದು ಕರೆಯಲಾಗುತ್ತಿದ್ದು ಇದರ ರುವಾರಿ ಲಲಿತ್ ಮೋದಿ, ಹರಾಜು ಪ್ರಕ್ರಿಯೆಯಲ್ಲಿ ಹಗರಣ, ಕ್ರೀಡೆಯಲ್ಲಿ ಹಗರಣ, ಜಾಹೀರಾತು ಮಾಧ್ಯಮ ಪ್ರಸರಣದಲ್ಲಿ ಹಗರಣ, ತಂಡ ಖರೀದಿಗೆ ಭ್ರಷ್ಟಾಚಾರ/Corruption, ಬೆಟ್ಟಿಂಗ್ ದಂದೆ, ಮುಂತಾದವುಗಳಿಗೆ ಸಂಬಂಧಿಸಿದಂತೆ ಕೇರಳದ ಶ್ರೀಕಾಂತ್, ಗುರುನಾಥನ್ ಮೇಯಪ್ಪನ್, ರಾಜ್‌ಕುಂದ್ರಾ, ಶ್ರೀನಿವಾಸನ್ ಸೇರಿದಂತೆ ಅನೇಕರ ಮೇಲೆ ಹಗರಣಗಳಿದ್ದು ಈ ಐಪಿಎಲ್ ರುವಾರಿ ಲಲಿತ್‌ ಮೋದಿ ದೇಶದಿಂದ ಪಲಾಯನಗೊಂಡು ಇಂಗ್ಲೆಂಡಿನಲ್ಲಿ ವಾಸವಾಗಿದ್ದಾರೆ.


Corruption Essay

4) ಕಾಮನ್‌ವೆಲ್ತ್ ಹಗರಣ:

ಭಾರತದಲ್ಲಿ ನಡೆಸಲಾದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಡೆದಿರುವ ಅತ್ಯಂತ ಗಂಭೀರ ಭ್ರಷ್ಟಾಚಾರ /Corruptionಪ್ರಕರಣಗಳಲ್ಲಿ ಒಂದಾಗಿರುವ ಕಾಮನ್‌ವೆಲ್ತ್ ಹಗರಣ ಸುಮಾರು 26,000 ಕೋಟಿಗೂ ಅಧಿಕದ ಹಗರಣ, ಇದರ ರುವಾರಿ ಸುರೇಶ್‌ ಕಲ್ಮಾಡಿ. ಇವರು ಭಾರತದಲ್ಲಿ ಅಥ್ಲೆಟಿಕ್ ಅಸೋಸಿಯೇಷನ್‌ ಅಧ್ಯಕ್ಷರಾಗಿದ್ದು ಶೀಲಾ ದೀಕ್ಷಿತ್ ಹಾಗೂ ಕಾಂಗ್ರೆಸ್ ಯುಪಿಎ2 ಸರ್ಕಾರದ ಕೆಲವರು ಪಾಲುಗೊಂಡು ಈ ಹಗರಣ ಮಾಡಿರುವುದು ಬಹಿರಂಗವಾಗಿದೆ. ಸದ್ಯ ಸುರೇಶ್ ಕಲ್ಮಾಡಿ ಇಂಗ್ಲೆಂಡಿನಲ್ಲಿದ್ದು ದೇಶಾಂತರಗೊಂಡಿದ್ದಾರೆ. ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳು ಇಂದಿನ ತನಕವು ಈ ಕಾಮನ್‌ವೆಲ್ತ್ ಹಗರಣದ ಬಗ್ಗೆ ಸೂಕ್ತ ತನಿಖೆ ಕೈಗೊಂಡು ವರದಿ ತಯಾರಿಸುತ್ತಿವೆ.

5) ನ್ಯಾಷನಲ್ ಹೆರಾಲ್ಡ್ ಪತ್ರಿಕಾ ಹಗರಣ:

ಭಾರತದ ಪ್ರಥಮ ಪ್ರಧಾನಿ ಜವಹರಲಾಲ್‌ ನೆಹರೂರವರ ಕಾಲದಿಂದಲೂ ನಡೆಸಿಕೊಂಡು ಬಂದ ದಿನಪತ್ರಿಕೆ ನ್ಯಾಷನಲ್ ಹೆರಾಲ್ಡ್ ಆಗಿದ್ದು ಪತ್ರಿಕೆಯ ಗುಣಮಟ್ಟ, ಪ್ರಸರಣ, ಜಾಹಿರಾತು ಹಾಗೂ ಇಂದಿನ ಮಾರುಕಟ್ಟೆ ಪ್ರಚಾರದಲ್ಲಿ ಆ ಪತ್ರಿಕೆ ನಿಂತೇ ಹೋಯಿತು. ಈ ಸಂದರ್ಭದಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸರ್ಕಾರದಿಂದ ಸೋನಿಯಾಗಾಂಧಿ, ಗುಲಾಂನಬಿ ಆಚಾರ್, ರಾಹುಲ್‌ಗಾಂಧಿ ಮುಂತಾದವರು ಸೇರಿದಂತೆ ಸಬ್ಸಿಡಿಯನ್ನು ಪಡೆಯುತ್ತಾ ಬಂದಿರುವುದು ವಿವಾದಕ್ಕೆ ಕಾರಣವಾಯಿತು. ಬಿಜೆಪಿಯ ಸುಬ್ರಹ್ಮಣ್ಯಂ ಸ್ವಾಮಿ ಸೇರಿದಂತೆ ಹಲವರು ಈ ಕೇಸಿನ ವಿಚಾರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ಇದು ಪ್ರಧಾನಿಯವರ ಕಾವ್ಯಾಲಯದ ಸೂಚನೆ ಎಂದು ವಾಗ್ವಾದಕ್ಕೆ ಕಾರಣವಾಯಿತು.

6) ಅಗಸ್ಟ-ವೆಸ್ಟ್‌ ಲ್ಯಾಂಡ್ ಹಗರಣ:

ಇಟಲಿ ಮೂಲದ ಆಗಸ್ಟವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕ್ಯಾಪ್ಟರ್ ಕಂಪನಿಯು ಭಾರತೀಯ ಮೂಲದ ಪ್ರಭಾವಿಗಳಿಗೆ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಲಂಚ ನೀಡಿದೆ ಎನ್ನುವುದು ಆರೋಪ. ಕೆ.ಸಿ.ತ್ಯಾಗಿ ರಕ್ಷಣಾ ವ್ಯವಸ್ಥೆಯ ಮುಖ್ಯಸ್ಥರಾಗಿದ್ದಾಗ ಜರುಗಿದ ಘಟನೆ ಇದಾಗಿದ್ದು ಬೋಫೋರ್ ಹಗರಣವನ್ನು ಇದು ನೆನಪಿಸುತ್ತದೆ.
ದೇಶವೊಂದರ ರಕ್ಷಣಾ ವ್ಯವಸ್ಥೆಯ ಸಾಮಗ್ರಿ ಖರೀದಿಯಲ್ಲೂ ಈ ರೀತಿ ಹಗರಣ ಮಾಡಿದ್ದು ಮಾದರಿಗೆ ಒಟ್ಟಾವಿಯೋಕ್ವಟ್ರೋಚಿ ಹಾಗೂ ರಾಜೀವ್‌ಗಾಂಧಿ, ಆದರೆ ಅಂತಿಮವಾಗಿ ಈ ಕೇಸಿನಲ್ಲಿ ಸುಪ್ರೀಂಕೋರ್ಟ್ ಇವರೀರ್ವರಿಗೂ ಕ್ಲೀನ್‌ ಚಿಟ್ ನೀಡಿದ್ದನ್ನು ಸ್ಮರಿಸಬಹುದು. ಅಗಸ್ಟ ವೆಸ್ಟ್ಲ್ಯಾಂಡ್ ಇಂದಿಗೂ ಸುಪ್ರೀಂಕೋರ್ಟ್ ಅಂಗದಲ್ಲಿದೆ.

7) ಮಧ್ಯಪ್ರದೇಶದ ವ್ಯಾಪಂ ಹಗರಣ:

ಮಧ್ಯಪ್ರದೇಶದ ಲೋಕಸೇವಾ ಆಯೋಗದಲ್ಲಿ ಸರ್ಕಾರಿ ಹುದ್ದೆಗಳನ್ನು ಲಂಚಕ್ಕಾಗಿ ಮಾರಾಟ ಮಾಡಿದ ಪ್ರಕರಣ ಇದಾಗಿದ್ದು ವಾರ್ಷಿಕವಾಗಿ 3600ಕ್ಕೂ ಅಧಿಕ ಹುದ್ದೆಗಳು ಸೇರಿದಂತೆ ಕೆಲವುಗಳನ್ನು ಮಾರಾಟ ಮಾಡಲಾಗಿದೆ. ಕರ್ನಾಟಕದಲ್ಲಿಯೂ ಈ ಕೆಪಿಎಸ್‌ಸಿ ಹಗರಣಗಳು ಕಂಡುಬರುತ್ತಿದ್ದು, 1998, 2004 ಸೇರಿದಂತೆ ವ್ಯಕ್ತಿತ್ವ ಪರೀಕ್ಷೆಗಳಿಗೆ ಲಂಚ ನೀಡಿರುವುದರ ಆರೋಪವನ್ನು ಅನೇಕರು ಎದುರಿಸುತ್ತಿದ್ದಾರೆ. ಹಾಗಾಗಿ ಮಧ್ಯಪ್ರದೇಶದಲ್ಲಿ ಸರ್ಕಾರದ ಗ್ರೇಡ್ 1, ಗ್ರೇಡ್ 2 ಹುದ್ದೆಗಳನ್ನು ಈ ರೀತಿ ಮಾರಿಕೊಂಡಿರುವುದರಿಂದ ಇಂದಿನ ಬಿಜೆಪಿ ಸರ್ಕಾರದ ಮೇಲೆಯೇ ಕೇಸು ದಾಖಲಾಗಿದೆ.

8) ಆದರ್ಶ ಹೌಸಿಂಗ್ ಸೊಸೈಟಿ ಮತ್ತು ಮೇವು ಹಗರಣ:

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್‌ ಚವ್ಹಾಣ್ ಇದರ ಆರೋಪಿಯಾಗಿದ್ದು, ರಕ್ಷಣಾ ವ್ಯವಸ್ಥೆಯ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ವಿಧವೆಯರಿಗೆ ಜಮೀನು ಖರೀದಿ ನಿವೇಶನ ನಿರ್ಮಿಸಿ ನೀಡುವುದು ಸರ್ಕಾರದ ಕರ್ತವ್ಯವಾಗಿದ್ದು ಈ ಜಮೀನನ್ನು ರಿಯಲ್ ಎಸ್ಟೇಟ್‌ನಲ್ಲಿ ತೊಡಗಿಸಿರುವುದು ಪ್ರಕರಣವಾಗಿದೆ. ನಿಯಮ ಉಲ್ಲಂಘನೆ ಮತ್ತು ಸಾರ್ವಜನಿಕ ಹಿತಾಸಕ್ತಿ ಕಡೆಗಣನೆ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿವೆ. ಮೇವು ಹಗರಣವು ಪಶು, ಪ್ರಾಣಿ ಸೇರಿದಂತೆ ಜಾನುವಾರುಗಳಿಗೆ ಮೇವು ಖರೀದಿಸುವಲ್ಲಿ ಹಗರಣವಾಗಿದೆ. ಲಾಲುಪ್ರಸಾದ್‌ಯಾದವ್ ಇದರ ಆರೋಪಿಯಾಗಿದ್ದಾರೆ.

9) ಕರ್ನಾಟಕದ ಭೂಹಗರಣ ಮತ್ತು ಅಕ್ರಮ ಗಣಿಗಾರಿಕೆ:

ಕರ್ನಾಟಕವು ಇತ್ತೀಚೆಗೆ ಬಿಬಿಎಂಪಿ ಹಗರಣ, ಅಕ್ರಮ ಗಣಿಗಾರಿಕೆ, ಭೂ ಹಗರಣ, ಡಿನೋಟಿಫಿಕೇಷನ್‌, ನೈಸ್ ಕಾರಿಡಾರ್‌ಗೆ ಸಂಬಂಧಿಸಿದಂತೆ ಸುದ್ದಿಯಲ್ಲಿದೆ. ಅದರಲ್ಲೂ ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಒಬಾಳಪುರಂ ಮೈನ್ಸ್ ಮತ್ತು ಬ್ರಾಹ್ಮಣಿ ಸ್ಟೀಲ್ಸ್ ಕಂಪನಿಗಳು ಅಕ್ರಮವಾಗಿ ಕಬ್ಬಿಣದ ಅದಿರು ಮತ್ತು ಮ್ಯಾಂಗನಿಸ್‌ನ್ನು ರವಾನಿಸಿದೆ ಎಂಬುದು ಒಂದು ದೊಡ್ಡ ಪ್ರಕರಣವಾಯ್ತು.
ಇದಲ್ಲದೆ ಬೇಲಿ ಕೇರಿ ಅದಿರು ಸಾಗಣೆಯು ಇದಕ್ಕೆ ಒಂದು ಮುಖ್ಯ ಉದಾಹರಣೆಯಾಗಿದೆ.

10) ಪನಾಮ ಪ್ರಕರಣ:

ಆಸ್ಟ್ರೇಲಿಯಾ, ಬ್ರೆಜಿಲ್, ಯುಎಸ್ಎ, ಯುಕೆ, ಹಾಗೂ ದಕ್ಷಿಣ ಅಮೇರಿಕಾ ಖಂಡದಲ್ಲಿ ಭಾರತದ ಪ್ರಭಾವಿ ವ್ಯಕ್ತಿಗಳು ಸರ್ಕಾರವನ್ನು ವಂಚಿಸಿ ಅದರಲ್ಲಿ ಹೂಡಿಕೆ ಮಾಡಿರುವುದು ಪನಾಮಪತ್ರ ಪ್ರಕರಣವಾಗಿದೆ. ವಿಶ್ವದಾದ್ಯಂತ ಪ್ರಭಾವಿಗಳು ತಮ್ಮ ಸರ್ಕಾರಗಳನ್ನು ವಂಚಿಸಿ ಮಾಡಿರುವ ಅಕ್ರಮ ಭ್ರಷ್ಟಾಚಾರದ ಪ್ರಕರಣ ಇದಾಗಿದೆ. ಭಾರತದಲ್ಲಿ ಸಿನಿಮಾ ತಾರೆಯರು, ಕ್ರೀಡಾಳುಗಳು, ಉದ್ಯಮಿಗಳು, ರಾಜಕಾರಣಿಗಳು ಈ ಪಟ್ಟಿಯಲ್ಲಿರುವುದು ವಿಶೇಷ.

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್/ Transparency International:

1993ರಲ್ಲಿ ಒಂದು ಸರ್ಕಾರೇತರ ಸೇವಾ ಸಂಸ್ಥೆಯಾಗಿ ಜರ್ಮನಿಯಲ್ಲಿ ಸ್ಥಾಪನೆಯಾದ ಟ್ರಾನ್ಸ್ಪರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆಯು ವಿಶ್ವದಾದ್ಯಂತ ಭ್ರಷ್ಟಾಚಾರ/Corruption, ಲಂಚ, ಮುಂತಾದವುಗಳನ್ನು ಪಡೆಯಲು ತನ್ನದೇ ಆದ ನೂರಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದು ವಿಶ್ವದಾದ್ಯಂತ ಎಲ್ಲ ರಾಷ್ಟ್ರಗಳನ್ನು ಸಮೀಕ್ಷೆ ಮಾಡಿ ಕರೆಪ್ಪನ್ ಪರ್‌ಸೆಕ್ಷನ್‌ ಇಂಡೆಕ್ಸ್ ಮತ್ತು ಜಾಗತಿಕ ಭ್ರಷ್ಟಾಚಾರ/Corruption ಸೂಚ್ಯಾಂಕವನ್ನು ಪ್ರಕಟಿಸುತ್ತದೆ. ಅಯ್ಕೆಸ್ಟಿ ಇಂಟರ್ ನ್ಯಾಷನಲ್ ಹೇಗೆ ಇಡೀ ವಿಶ್ವಕ್ಕೆ ಮಾನವ ಹಕ್ಕು ಮತ್ತು ಮಕ್ಕಳ ಹಕ್ಕುಗಳ ವಾಬ್‌ಾಗ್ ಆಗಿ ಕೆಲಸ ಮಾಡುತ್ತದೆಯೋ ಅದೇ ರೀತಿ ಈ ಸಂಸ್ಥೆಯು ಕರಪ್ಪನ್ ಮತ್ತು ಲಂಚ, ಭ್ರಷ್ಟಾಚಾರದ/Corruption ಅಂತರರಾಷ್ಟ್ರೀಯ ಕಾವಲುನಾಯಿಯಾಗಿದೆ.

ಭ್ರಷ್ಟಾಚಾರ ತಡೆಯುವಲ್ಲಿ ಸಿಎಜಿ ಪಾತ್ರ/ Role of CAG in curbing corruption:

ಭಾರತ ಸಂವಿಧಾನದ 148ನೇ ವಿಧಿಯು ಭಾರತದ ಮಹಾನಿಯಂತ್ರಕ ಮಹಾಲೆಕ್ಕ ಪರಿಶೋಧರ ಹುದ್ದೆಗೆ ಅವಕಾಶ ಮಾಡಿಕೊಡುತ್ತದೆ. 149ನೇ ವಿಧಿಯ ಪ್ರಕಾರ ಕೇಂದ್ರ ರಾಜ್ಯ ಹಾಗೂ ಇತರೆ ಯಾವುದೇ ಪ್ರಾಧಿಕಾರ ಅಥವಾ ಸಂಸ್ಥೆಯ ಲೆಕ್ಕಗಳಿಗೆ ಸಂಬಂಧಿಸಿದಂತೆ ಸಿಎಜಿಯ ಕರ್ತವ್ಯ ಮತ್ತು ಅಧಿಕಾರಗಳನ್ನು ಗೊತ್ತುಪಡಿಸುವ ಅಧಿಕಾರ ಸಂಸತ್ತಿಗಿದೆ.
1) ಮಹಾನಿಯಂತ್ರಕ ಮತ್ತು ಲೆಕ್ಕ ಪರಿಶೋಧಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿದ ಎಲ್ಲ ವೆಚ್ಚಗಳಿಗೆ ಸಂಬಂಧಿಸಿದ ಲೆಕ್ಕವನ್ನು ಪರಿಶೀಲಿಸುವುದು

2) ಕೇಂದ್ರ ಅಥವಾ ರಾಜ್ಯದ ಆದಾಯದಿಂದ ಧನಸಹಾಯ ಪಡೆದ ಸಂಸ್ಥೆಗಳು ಮತ್ತು ಪ್ರಾಧಿಕಾರಗಳ ಲೆಕ್ಕವನ್ನು ಪರಿಶೀಲಿಸುತ್ತಾರೆ

4) ಮಹಾನಿಯಂತ್ರಕ ಮತ್ತು ಲೆಕ್ಕ ಪಾಲಕರು ಆದ ಇವರು ಕೇಂದ್ರ ಅಥವಾ ರಾಜ್ಯಗಳ ಆದಾಯದಿಂದ ಭಾರತದ ಹೊರಗಡೆ ಅಥವಾ ಒಳಗಡೆ ಮಾಡಿದ ಎಲ್ಲ ವೆಚ್ಚಗಳ ಪರಿಶೀಲನೆ ಮಾಡುತ್ತಾರೆ. ಲೆಕ್ಕದಲ್ಲಿ ತೋರಿಸಲಾದ ವಿನಿಯೋಗದ ಹಣ ಕಾನೂನುಬದ್ದವಾಗಿ ನೀಡಲ್ಪಟ್ಟದ್ದೋ ಅಥವಾ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಯಾವ ಉದ್ದೇಶಕ್ಕಾಗಿ ಹಣ ನೀಡಲಾಗಿದೆಯೋ, ಅದೇ ಉದ್ದೇಶಕ್ಕಾಗಿ ಹಣ ವೆಚ್ಚವಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಇವರು ಹಣದ ಅಪವ್ಯಯ ಅಥವಾ ದುರುಪಯೋಗವನ್ನು ತಡೆಯುತ್ತಾರೆ.

ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಕೇಂದ್ರ ಜಾಗೃತದಳದ ಪಾತ್ರ/ Role of Central Vigilance Bureau in controlling corruption

ಭ್ರಷ್ಟಾಚಾರ/Corruption ತಡೆಗೆ ಸಂಬಂಧಿಸಿದಂತೆ ಸಂತಾನಮ್ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ಆಯೋಗವನ್ನು ಸ್ಥಾಪಿಸಲಾಯಿತು. ಸಂಸತ್ತು 2003ರಲ್ಲಿ ಒಂದು ಕಾಯಿದೆಯನ್ನು ರೂಪಿಸುವುದರ ಮೂಲಕ ಕೇಂದ್ರ ಜಾಗೃತ ಆಯೋಗಕ್ಕೆ ಶಾಸನಾತ್ಮಕ ಸ್ಥಾನ ನೀಡಿತು. ಕೇಂದ್ರ ಜಾಗೃತ ಆಯೋಗವು ಕೇಂದ್ರ ಸರ್ಕಾರದಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟುವ ಪ್ರಧಾನ ನಿಯೋಗಿಯಾಗಿದೆ.

1) ಕೇಂದ್ರ ಸರ್ಕಾರದ ನೌಕರನು ಭ್ರಷ್ಟಾಚಾರ /Corruption ತಡೆಕಾಯ್ದೆ, 1998ರ ಅಡಿಯಲ್ಲಿ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿದ್ದರೆ, ಆಯೋಗವು ಅದರ ವಿಚಾರಣೆ ನಡೆಸುತ್ತದೆ.

2) ಆಡಳಿತದಲ್ಲಿ ಪ್ರಾಮಾಣಿಕತೆ ತರಲು, ವಿವಿಧ ಮಂತ್ರಾಲಯಗಳಲ್ಲಿ ಮೇಲ್ವಿಚಾರಣೆ ನಡೆಸುತ್ತದೆ.

3) ಡೆಲ್ಲಿ ಸ್ಪೆಷಲ್ ಪೋಲೀಸ್ ಎಸ್ಟಾಬ್ಲಿಷ್‌ ಮೆಂಟ್ ಕಾಯ್ದೆ 1946ರ ಅಡಿಯಲ್ಲಿ ವಹಿಸಲಾದ ಜವಾಬ್ದಾರಿಯನ್ನು ನಿರ್ವಹಿಸುವಂತೆ ಡೆಲ್ಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್‌ಗೆ ನಿರ್ದೇಶನ ನೀಡುತ್ತದೆ

4) ಕೇಂದ್ರ ಜಾಗೃತಿ ಆಯೋಗವು ಭ್ರಷ್ಟಾಚಾರ/Corruption ನಿಗ್ರಹ ಮಾಡಲು ಹಾಗೂ ವರದಿಯನ್ನು ಗೃಹ ಇಲಾಖೆಗೆ ಸಲ್ಲಿಸುತ್ತದೆ. 1988ರ ಭ್ರಷ್ಟಾಚಾರ/Corruption ನಿಯಂತ್ರಣ ಕಾಯಿದೆ:

ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯನ್ನು 1988ರಲ್ಲಿ ಸಂಸತ್ತು ಪಾಸು ಮಾಡಿತು. ಈ ಕಾಯಿದೆಯು 1989ರಲ್ಲಿ ಜಾರಿಗೆ ಬಂದಿತು. ಆಡಳಿತಾತ್ಮಕ ಭ್ರಷ್ಟಾಚಾರವನ್ನು ನಿಯಂತ್ರಿಸುವುದೇ ಈ ಕಾಯಿದೆಯ ಉದ್ದೇಶವಾಗಿತ್ತು. ಈ ಕಾಯಿದೆಯು ಕೆಳಗಿನ ಚಟುವಟಿಕೆಗಳನ್ನು ಭ್ರಷ್ಟಾಚಾರ/Corruption ಎಂದು ಪರಿಗಣಿಸುತ್ತದೆ.

1) ಸಾರ್ವಜನಿಕ ಅಧಿಕಾರಿಗಳು ಇತರರಿಂದ ಕಾಣಿಕೆ ಸ್ವೀಕರಿಸುವುದು

2) ಸಾರ್ವಜನಿಕ ಅಧಿಕಾರಿಗಳು, ಒಡವೆ, ಆಸ್ತಿ ಮುಂತಾದವುಗಳನ್ನು ಸ್ವೀಕರಿಸುವುದು

3) ಸ್ವಾರ್ಥಕ್ಕಾಗಿ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದು

4) ಸ್ವಜನ ಪಕ್ಷಪಾತದಲ್ಲಿ ತೊಡಗುವುದು

5) ಕಛೇರಿಯ ಸಂಪನ್ಮೂಲಗಳನ್ನು ದುರುಪಯೋಗ ಪಡಿಸಿಕೊಳ್ಳುವುದು.

ಭ್ರಷ್ಟಾಚಾರ ನಿಯಂತ್ರಣ ಕಾನೂನಿನ ಕ್ರಮಗಳು/ Measures of the Prevention of Corruption Act:

1) ಭಾರತೀಯ ದಂಡ ಸಂಹಿತೆ 1860

2) ಪ್ರಾಸಿಕ್ಯೂಷನ್‌ ಸೆಕ್ಷನ್ ಆದಾಯ ತೆರಿಗೆ ಕಾಯಿದೆ 1961

3) ಭ್ರಷ್ಟಾಚಾರ/Corruption ನಿಗ್ರಹತಡೆ ಕಾಯಿದೆ 1988

4) ದಿ ಬೇನಾಮಿ ಟ್ರಾನ್ಸಾಕ್ಷನ್ ಕಾಯಿದೆ 1988 5) ಪ್ರಿವೆನ್‌ಷನ್ ಆಫ್ ಮನಿ ಲೆಂಡರಿಂಗ್ ಆಕ್ಟ್ 2002

6), ದಿ ಯುನೈಟೆಡ್ ನೇಷನ್ಸ್ ಕರಪ್ಪನ್ ಕಂಟ್ರೋಲ್ ಆಕ್ಟ್ 2005

7) ದಿ ಲೋಕಪಾಲ ಮತ್ತು ಲೋಕಾಯುಕ್ತ ಕಾಯಿದೆ 2013
8) ಕಂಪನಿಗಳ ಕಾಯಿದೆ 2013

9) ಕಪ್ಪು ಹಣ ಮತ್ತು ತೆರಿಗೆ ನಿಯಂತ್ರಣ ಕಾಯಿದೆ 2015

10) ಮಾಹಿತಿ ಹಕ್ಕು ಕಾಯಿದೆ 2005

ಭಾರತದಲ್ಲಿ ಇಂದಿನ ತನಕ ಎಷ್ಟೇ ಕಾನೂನುಗಳನ್ನು ತಂದರೂ ಭ್ರಷ್ಟಾಚಾರವನ್ನು ಸ್ವಲ್ಪವೂ ನಿಯಂತ್ರಿಸುವುದು ಸಾಧ್ಯವಾಗಿಲ್ಲ. ಸಾರ್ವಜನಿಕ ವಲಯದಲ್ಲಿ ಬಹುಪಾಲು ಭ್ರಷ್ಟಾಚಾರ/Corruption ತುಂಬಿ ತುಳುಕಿಬಿಟ್ಟಿದೆ. ಮೌಲ್ಯಯುತ ಮಾರ್ಗ, ಜ್ಞಾನಯುತ ಮಾರ್ಗ ಹಾಗೂ ತಂತ್ರಜ್ಞಾನಗಳು ಭ್ರಷ್ಟಾಚಾರವನ್ನು ಸಂಪೂರ್ಣ ಅಳಿಸಿ ಹಾಕುವುದು ಸಾಧ್ಯವಿದೆ.

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....