Kannada essays
Trending

ಸಾಮಾಜಿಕ ಜಾಲತಾಣಗಳು ಸಾಧಕ – ಭಾದಕಗಳು ಪ್ರಬಂಧ | The Bright Pros and Thoughtful Cons of Social-Media Essay 2023

ಸಾಮಾಜಿಕ ಜಾಲತಾಣಗಳು: ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಮಾಧ್ಯಮ ಲೋಕ ಸಾಮಾಜಿಕ ಜಾಲತಾಣ. ಕ್ಷಣಾರ್ಧದಲ್ಲಿ ಕೋಟ್ಯಾನುಕೋಟಿ ಜನರನ್ನು ತಲುಪಬಲ್ಲ ಅತಿ ವೇಗದ ಮಾದ್ಯಮ ಸಾಮಾಜಿಕ ಜಾಲತಾಣ Re Connecting the World ಎಂಬ ನುಡಿಗಟ್ಟು ಸಾಮಾಜಿಕ Facebook, WhatsApp, twitter, YouTube. Instagram, TikTok, skype ಮುಂತಾದ ಎಲೆಕ್ಟ್ರಾನಿಕ್ ಸಾಫ್ಟ್‌ವೇರ್ ತಂತ್ರಜ್ಞಾನದ ಕ್ರಾಂತಿಯನ್ನು ಸಾಮಾಜಿಕ ಜಾಲತಾಣ ಎಂದು ಅರ್ಥೈಸಬಹುದು. 2003-04ರ ನಂತರ ಇಡೀ ವಿಶ್ವವನ್ನು ತನ್ನ ನಿಯಂತ್ರಣದಲ್ಲಿರಿಸಿಕೊಂಡಿರುವ ಸಾಫ್ಟ್‌ವೇರ್ ಉದ್ಯಮ ಸಾಮಾಜಿಕ ಜಾಲತಾಣದ ಬಹು ಮುಖ್ಯ ಅಂಗವಾಗಿದೆ. ಮನುಕುಲಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಎಷ್ಟು ಉಪಯೋಗವಾಗಿದೆಯೋ ಅಷ್ಟೇ ಅದರಿಂದ ದುರಂತವು ಸಂಭವಿಸಿದೆ. ಅದರಂತೆ ಸಾಮಾಜಿಕ ಜಾಲತಾಣಗಳು ಸಮಾಜಕ್ಕೂ ಎಷ್ಟು ಉಪಕಾರಿಯಾಗಿದೆಯೋ ಅಷ್ಟೇ ಆಪಾಯಕಾರಿಯಾಗಿವೆ.

ಸಾಮಾಜಿಕ ಜಾಲತಾಣಗಳು/ಜಾಲತಾಣದ ಒಳಿತುಗಳು

1.ಜಗತ್ತಿನೊಂದಿಗೆ ಸಂಪರ್ಕ ಸಾಧಿಸುವ ಸಾಧನ ಸಾಮಾಜಿಕ ಜಾಲತಾಣಗಳು ಇಲ್ಲದಿರುವ ಸಮಯದಲ್ಲಿ ಒಬ್ಬರನೊಬ್ಬರು ಸಂಪರ್ಕಿಸುವುದು ತುಂಬಾ ಕಷ್ಟವಾಗುತ್ತಿತ್ತು. ಆದರೆ ಸದ್ಯ ಆ ಪರಿಸ್ಥಿತಿ ಸಾಮಾಜಿಕ ಜಾಲತಾಣಗಳ ಕ್ರಾಂತಿಯಿಂದ ಇಲ್ಲವಾಗಿದೆ. ಕ್ಷಣಾರ್ಧದಲ್ಲಿ ಯಾರನ್ನು ಬೇಕಾದರೂ ತಲುಪಬಹುದು. ಗಡಿ, ಭಾಷೆ, ಪಾಂತ್ರ್ಯ ಎಲ್ಲವನ್ನು ಮೀರಿ ಜನರನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಇದು ಮಾಡುತ್ತದೆ. ಹಾಗಾಗಿ ಸಾಮಾಜಿಕ ಜಾಲತಾಣದ ಪ್ರಮುಖ ಶಕ್ತಿಯೆಂದರೆ ಪ್ರಪಂಚದೊಂದಿಗೆ ನಮ್ಮನ್ನು ಬೆಸೆಯುವುದು, ದೇಶದಲ್ಲಿರುವ ಸೈನಿಕರಿಂದ ಹಿಡಿದು ಪ್ರಧಾನಿಯ ತನಕ ಯಾರನ್ನು ಬೇಕಾದರೂ ಕ್ಷಣ ಮಾತ್ರದಲ್ಲಿ ತಲುಪಬಹುದಾದ ಒಂದೇ ಒಂದು ಮಾಧ್ಯಮವೆಂದರೆ ಅದು ಸಾಮಾಜಿಕ ಜಾಲತಾಣ.

2. ಕ್ಷಿಪ್ರ ಮತ್ತು ಸುಲಲಿತ ಸಂಘಷನ ಸಾಮಾಜಿಕ ಜಾಲತಾಣಗಳ ಬಹುಮುಖ್ಯ ಒಳಿತುಗಳಲ್ಲಿ ಕ್ಷಿಪ್ರವಾಗಿ ತಲುಪುವ ಮತ್ತು ಸುಲಲಿತವಾಗಿ ಸಂವಹನ ಮಾಡು ವಿಧಾನವು ಪ್ರಮುಖವಾಗಿದೆ. ಉದಾಹರಣೆ ಇಂದಿನ ಮಾಧ್ಯಮಗಳು ತಲುಪಲಾಗದ ಸ್ಥಳವನ್ನು ನಿಖರವಾಗಿ, ವಿಶಿಷ್ಟವಾಗಿ ತಲುಪುವ ಏಕಮಾತ್ರ ಜಾಲತಾಣ ಸಾಮಾನ್ಯ ಜಾಲತಾಣ, ಒಳ್ಳೆಯ ಅಂಶವಾಗಿ ಅಥವಾ ಕೆಟ್ಟ ಅಂಶವಾಗಲಿ ಬಹುಬೇಗ ಹರಡುತ್ತದೆ. ಹಾಗಾಗಿ ಇದೊಂದು ಮುಕ್ತ, ನಿರ್ಭೀತ ಸಾಮಾಜಿಕ ಮಾಧ್ಯಮವಾಗಿದೆ.

3. ವಿನೂತನ ಸುದ್ದಿಗಳ ಪ್ರವಾಹ ಜಗತ್ತಿನ ಬೇರೆ ಬೇರೆ ಭಾಷೆಗಳ, ಬೇರೆ ಬೇರೆ ದೇಶಗಳ, ಹಲವು ವಿಶೇಷ ಸುದ್ದಿಗಳು ಪ್ರವಾಹದ ರೀತಿಯಲ್ಲಿ ಹಬ್ಬುತ್ತವೆ. ಹಳ್ಳಿಯಿಂದ ಹಿಡಿದು ಅಮೆರಿಕದ ತನಕ ಕ್ಷಣಕ್ಕೊಮ್ಮೆ ಸುದ್ದಿಗಳ ಪ್ರವಾಹ ಹರಡುತ್ತದೆ. ವಿಜ್ಞಾನ, ಸಾಹಿತ್ಯ, ರಾಜಕೀಯ, ಕ್ರೀಡೆ, ಸಂಗೀತ, ಸಿನಿಮಾ, ಭಾಷೆ, ಕಲೆ, ಇತಿಹಾಸ, ಮನರಂಜನೆ, ಹಾಸ್ಯ ಮುಂತಾದ ಎಲ್ಲ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಶರವೇಗದ ಗತಿಯಲ್ಲಿ ದೊರಕುತ್ತದೆ. ಹಾಗಾಗಿ ವಿನೂತನ ಸುದ್ದಿಗಳ ಆಗರವಾಗಿ ಸಾಮಾಜಿಕ ಜಾಲತಾಣಗಳು ಮಾರ್ಪಟ್ಟಿವೆ.

4. ಉದ್ಯಮ ಮತ್ತು ಜಾಹೀರಾತು ಮಾರುಕಟ್ಟೆ ಜಾಹೀರಾತು ಮತ್ತು ಉದ್ಯಮವಲಯದ ಮಾರುಕಟ್ಟೆಗೆ ತುಂಬಾ ಸಮಸ್ಯೆ ಮತ್ತು ಸವಾಲುಗಳಿರುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳು ವರವಾಗಿ ಪರಿಣಮಿಸಿವೆ. ಒಂದು ದಿನಪತ್ರಿಕೆಯಲ್ಲಿ ಜಾಹೀರಾತಿಗೆ ಕೋಟ್ಯಾನು ರೂಪಾಯಿ ಖರ್ಚು ಮಾಡಬೇಕಾದ ಸಂದರ್ಭವಿರುವಾಗ ಮುಕ್ಕಟೆಯಾಗಿ ಎಲ್ಲರನ್ನು ತಲುಪಬಲ್ಲ ಮಾಧ್ಯಮವಾಗಿದೆ. ಗುಣಮಟ್ಟದ ಪ್ರೊಡಕ್ಟ್ ಆಗಿದ್ದರೆ ಖಂಡಿತ ಸಾಮಾಜಿಕ ಜಾಲತಾಣಗಳೇ ಸಾಕು ಒಂದು ವ್ಯಾಪಾರವನ್ನು ಸಂಪೂರ್ಣವಾಗಿ ಗೆಲ್ಲಿಸಲು ಹಾಗಾಗಿ ಉದ್ಯಮಕ್ಕೆ, ಜಾಹಿರಾತಿಗೆ ಇದೊಂದು ಮಾರುಕಟ್ಟೆಯಾಗಿದೆ.

5. ಸಾಮಾಜಿಕ ಜಾಲತಾಣಗಳ ವ್ಯಾಪ್ತಿ ಬಹು ವಿಸ್ತಾರವಾದುದು ಯಾವುದೇ ಒಂದು ಭಾಷೆ ಒಂದು ರಾಜ್ಯ ಒಂದು ದೇಶಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳು ಎರಡು ಬಿಲಿಯನ್‌ಗೂ ಅಧಿಕ ಜನರನ್ನು ತಮ್ಮ ಸೇವಾ ಕ್ಷೇತ್ರಕ್ಕೆ ಅವಲಂಬಿಸಿಕೊಂಡಿವೆ. ಹಾಗಾಗಿ ಒಂದು ದಿನಪತ್ರಿಕೆ, ಒಂದು ನ್ಯೂಸ್ ಮಾಧ್ಯಮ ತಲುಪುವ ನೂರರಷ್ಟು ಗ್ರಾಹಕರನ್ನು ಸಾಮಾಜಿಕ ಜಾಲತಾಣ ತಲುಪುತ್ತದೆ. ಹಾಗಾಗಿ ಸಾಮಾಜಿಕ ಜಾಲತಾಣಗಳ ವ್ಯಾಪ್ತಿ ಬಹು ವಿಸ್ತಾರವಾದುದು, ಕೋಟ್ಯಾನು ಕೋಟಿ ಜನರನ್ನು ಒಳಗೊಂಡು ತಲುಪುವ ಶಕ್ತಿ ಸಾಮಾಜಿಕ ಜಾಲತಾಣಕ್ಕಿದೆ.

6. ಜಾಲತಾಣಗಳ ಬಳಕೆ ಎಲ್ಲರಿಗೂ ಸರಳ – ಸುಲಭ ಅಕ್ಷರಸ್ಥರಿಂದ – ಅನಕ್ಷರಸ್ಥರ ತನಕ ಎಲ್ಲರು ಸಾಮಾಜಿಕ ಜಾಲತಾಣವನ್ನು ಬಹಳ ಸುಲಭವಾಗಿ ಬಳಸುತ್ತಾರೆ. ಹಳ್ಳಿಯಿಂದ ನಗರದತನಕ, ಮಕ್ಕಳಿಂದ ಮಹಿಳೆಯರ ತನಕ ಎಲ್ಲರೂ ಸಾಮಾಜಿಕ ಜಾಲತಾಣವನ್ನು ಯಶಸ್ವಿಯಾಗಿ ಬಳಸುತ್ತಾರೆ. ಆದ್ದರಿಂದ ಇದು ಬಹುಬೇಗ ಪ್ರಚಾರಕ್ಕೆ ಬಂದಿತು. ಜಗತ್ತಿನಾದ್ಯಂತ ತುಂಬಾ ಯಶಸ್ವಿ ಜಾಲತಾಣ ಮನರಂಜನಾ ತಾಣವಾಗಿದೆ

7. ಕಾರ್ಮೋರೇಟ್ ಭರಾಟೆಯಲ್ಲಿ ಮನರಂಜನೆಯೆ ಇಲ್ಲವಾಗಿದೆ. ಎಲ್ಲಿ ನೋಡಿದರು. ಜನಜಂಗುಳಿ, ಸಮಸ್ಯೆಗಳು, ಹಸಿವು, ಬಡತನ ಮುಂತಾದ ಸಮಸ್ಯೆಗಳ ನಡುವೆ ಕಾಲಾತೀತ, ದೇಶಾತೀತ, ಭಾಷ್ಯಾತೀತ ಮನರಂಜನೆಯ ತುಣುಕುಗಳು ಸಾಮಾಜಿಕ ಜಾಲತಾಣ ಕಂಡುಬಂದು ಅಪಾರವಾದ ಮನರಂಜನೆ ನೀಡುತ್ತಿವೆ. ಎಲ್ಲರಿಗೂ ಎಲ್ಲ ಕಾಲಕ್ಕೂ ಇವು ಮನರಂಜನೆ ಒದಗಿಸುತ್ತಿವೆ.

ಸಾಮಾಜಿಕ ಜಾಲತಾಣದ ಅನಾನುಕೂಲತೆಗಳು:

1. ಜಾಲದ ಹುಬ್ಬುವಿಕೆಯ ಮೇಲೆ ನಿಯಂತ್ರಣವಿಲ್ಲ. ಅದು ಒಳ್ಳೆಯ ವಿಷಯವಿರಲಿ ಅಥವಾ ಕೆಟ್ಟ ವಿಷಯವಿರಲಿ ಬಹುಬೇಗ ಹಬ್ಬುವ ಸಾಮಾಜಿಕ ಜಾಲತಾಣ ನೆರವಾಗುತ್ತದೆಯೇ ವಿನಹ ಅದನ್ನು ತಡೆಯಲು ಯಾವ ಕಾರ್ಯತಂತ್ರವೂ ಇರುವುದಿಲ್ಲ. ಹೀಗಾಗಿ ಸಾಮಾಜಿಕ ಅನೈತಿಕ ಚಟುವಟಿಕೆಗಳು, ಆಶ್ಲೀಲತೆ, ಮಾನಸಿಕ ತೋಟೋವಧೆ ಮುಂತಾದ ಅಪಾಯಕಾರಿ ಸಂಗತಿಗಳು ಇದರಲ್ಲಿ ಬಹುಬೇಗ ಪ್ರಸಾರವಾಗುತ್ತವೆ.

2. ಸೈಬರ್ ಕ್ರೈಂ ವ್ಯಾಪ್ತಿಗೆ ಜಾಲತಾಣಗಳು ಪೂರ್ಣವಾಗಿ ಒಳಪಡುವುದಿಲ್ಲ ಯಾವುದೇ ಒಬ್ಬ ಕ್ಷುಲ್ಲಕ ವ್ಯಕ್ತಿ ಇಡೀ ಸಮಾಜವನ್ನು ಪ್ರಚೋದಿಸುವ ರೀತಿಯ ಅಂಶವನ್ನು ಬಿತ್ತರಿಸಿದಾಗಲೂ ಸಹ ಆತನನ್ನು ಕಂಡು ಹಿಡಿಯಲು ಮತ್ತು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಸಂವಿಧಾನ ಅಡಿಯಲ್ಲಿ ಕಂಡು ಬರುವ ಘನವೆತ್ತ ಹುದ್ದೆಗಳ ವ್ಯಕ್ತಿಗಳನ್ನು ಸಹಿ ಸಾಮಾಜಿಕವಾಗಿ ನಿಂದಿಸುವ ಒಂದು ಕೆಟ್ಟ ಪದ್ಧತಿ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತದೆ ಆದ್ದರಿಂದ ಸೈಬರ್ ಕ್ರೈಂಗೂ ಇದು ಒಂದು ಸಮಸ್ಯೆ ಮತ್ತು ಸವಾಲಾಗಿ ಪರಿಣಮಿಸಿದೆ.

3. ಖಾಸಗಿ ವಿಷಯಗಳು ಬಹಿರಂಗೊಳ್ಳುತ್ತವೆ ಸಾಮಾಜಿಕ ಜಾಲತಾಣಗಳು ಇಲ್ಲದಿರುವ ಹೊತ್ತಿನಲ್ಲಿ ಖಾಸಗಿ ವಿಷಯಗಲು ಸಾಮಾಜಿಕವಾಗಿ ಚರ್ಚಿಸಲ್ಪಡುತ್ತಿರಲಿಲ್ಲ. ಆದರೆ ಇಂದು ಖಾಸಗಿ ವಿಷಯಗಳು ಎಲ್ಲೆಲ್ಲೂ ರಾರಾಜಿಸಲು ಕಾರಣ ಸಾಮಾಜಿಕ ಜಾಲತಾಣಗಳು ನೀಡಿರುವ ಮುಕ್ತತೆಯ ಮತ್ತು ನಿರ್ಭೀತ ಆನಿರ್ಭಂದಿತ ಸ್ವಾತಂತ್ರ್ಯ ಖಾಸಗಿ ವಿಷಯಗಳು ವೈಯಕ್ತಿಕವಾಗಿದ್ದರೆ ಮಾತ್ರ ಉತ್ತಮವಾಗಿರುತ್ತದೆ. ಇಲ್ಲವಾದರೆ ಅಭಿವೃದ್ಧಿ ಬೆಳವಣಿಗೆ ಕುಂಠಿತವಾಗಿ ಕೇವಲ ಖಾಸಗಿ ಚರ್ಚೆಯಾಗುತ್ತವೆ,

4. ಸಾಮಾಜಿಕ ಜಾಲತಾಣಗಳ ಬಳಕೆ ಆರ್ಥಿಕ ನಷ್ಟ ಭಾರತದ ಯಾವ ಕಂಪನಿಯು ಗಳಿಸಲಾಗದಷ್ಟು ಆಸ್ತಿಯನ್ನು ಫೇಸ್‌ಬುಕ್‌ ಸಂಸ್ಥೆ ಗಳಿಸಿದೆ. ತಲಾತಲಾಂತರದಿಂದ ಟಾಟಾ, ಅಂಬಾನಿ, ಅದಾನಿ, ಬಿರ್ಲಾರು ಗಳಿಸಿದ ಒಟ್ಟು ಆಸ್ತಿಗೆ ಕೇವಲ ಹತ್ತು ವರ್ಷದಲ್ಲಿ ವಾಟ್‌ಸ್ ಗಳಿಸಿದ ಆಸ್ತಿಯು ಸಮವಾಗುತ್ತದೆ. ಇದನ್ನು ಬಳಸುವ ಎಲ್ಲ ದೇಶಗಳು ಇಂದು ಬಹು ಆರ್ಥಿಕ ದಿವಾಳಿಯತ್ತ ಸಾಗುತ್ತವೆ.

5. ಕಾಲಹರಣ, ಸಮಯ ವ್ಯರ್ಥ ಮತ್ತು ಕಾರ್ಯ ಆದಕ್ಷತೆ ತಾವು ಮಾಡುವ ಕೆಲಸವನ್ನು ತುಂಬಾ ದಕ್ಷತೆಯಿಂದ ನಿರ್ವಹಿಸಲು ಸಾಮಾಜಿಕ ಜಾಲತಾಣಗಳು ಮಾರಕವಾಗಿ ಪರಿಣಮಿಸಿದೆ. ಒಂದು ಅಂದಾಜಿನ ಪ್ರಕಾರ ದಿನವೊಂದರಲ್ಲಿ ಭಾರತದ ಮೆಟ್ರೋಪಾಲಿಟಿನ್‌ ನಗರಗಳಲ್ಲಿ ಜಾಲತಾಣ ಬಳಸುವುದು ಸುಮಾರು 5 ಗಂಟೆಗಳ ಕಾಲ ಚಾದಿಂಗ್ ಮಾಡಿ ಸುಮಾರು ಹಗರಣ ಮಾಡುತ್ತಾರೆ. ದಿನಕ್ಕೆ 5 ಗಂಟೆ ವ್ಯರ್ಥವಾದರೆ ಉಳಿದ ಭಾಗಗಳು ಅನಭಿವೃದ್ಧಿ ಹಾಗಾಗಿ ಕಾಲಹರಣಕ್ಕೆ ಜಾಲತಾಣಗಳು ವೇದಿಕೆಯಾಗಿವೆ.

6. ಮಾಹಿತಿ ಹಂಚಿಕೆ ಎಂಬ ಮಹಾಮಾರಿ ಫೇಸ್‌ಬುಕ್ ಕೆಲವೇ ವರ್ಷಗಳಲ್ಲಿ ಆಪಾರವಾಗಿ ಹಣ ಗಳಿಸಿದುದರ ಹಿಂದೆ ಮಾಹಿತಿ ಹಂಚಿಕೆ ಎಂಬ ಕಿಟಕಿಯಿದೆ, ನಾವು ಬಳಸಲು ಇಬ್ಬಿಸುವ ವಸ್ತು, ನಷ್ಟ ಸ್ಥಳ, ನಮ್ಮ ಅನಿಸಿಕೆ. ನಮ್ಮ ಅಭಿಪ್ರಾಯ. ನಮ್ಮ ಭಾವನೆ, ಗಟ್ಟಿ ಸ್ಥಳ, ನಮ್ಮ ದಿನಾಂಕ, ನಮ್ಮ ಅಭಿರುಚಿ, ನಮ್ಮ ಸಾಮಾಜಿಕ ಸಂಬಂಧಗಳು ಮುಂತಾದ ಎಲ್ಲ ಅಂಶಗಳನ್ನು ಪಡೆದ ಪೇಸ್‌ಬುಕ್ ಜಗತ್ತಿನ ವಿವಿಧ ಕಂಪನಿಗಳಿಗೆ ಮಾರಾಟ ಮಾಡಿ ಅಪಾರಲಾಭ ಗಳಿಸುತ್ತಿದೆ.

ಅಂತಿಮವಾಗಿ ಹೇಳುವುದಾದರೆ, ತಂತ್ರಜ್ಞಾನ ಎಷ್ಟು ಪೂರಕವೋ ಅಷ್ಟೇ ಮಾರಕವಾಗಿರುತ್ತದೆ. ಹಾಗಾಗಿ ಇದನ್ನು ನಿಯಮಿತವಾಗಿ ಬಳಸುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಕಾಲಹರಟೆ ಸಮಯ ಹಾನಿ ಆಗದಂತೆ ವೈಯಕ್ತಿಕ ಅಭಿವೃದ್ಧಿಗೆ ಜಾಲತಾಣಗಳನ್ನು ಬಳಸಿದರೆ ಉತ್ತಮವಾಗಿರುತ್ತದೆ. ಇಲ್ಲವಾದರೆ ವ್ಯಕ್ತಿಯ ವಿನಾಶವಾಗುತ್ತದೆ. ಯಾವುದಕ್ಕೂ ಯೋಚಿಸಿ, ಯೋಚಿಸಿ ಬಳಸಬೇಕು.

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....