Kannada essays

ವಿಪತ್ತು ನಿರ್ವಹಣೆ ಪ್ರಬಂಧ | Disaster Management Empowering Resilience and Hope 2023

Table of Contents

ವಿಪತ್ತು ನಿರ್ವಹಣೆ | Disaster Management

ವಿಪತ್ತು ನಿರ್ವಹಣೆ: ಅನಿಯಂತ್ರಿತ ಮಳೆ, ಪ್ರವಾಹ, ಭೀಕರ ಚಂಡಮಾರುತ, ಸಿಡಿಲಿನ ಪರಿಣಾಮ, ಸುನಾಮಿ ಮುಂತಾದ ಅನೇಕ ವೈಮಾನಿಕ ವೈಪರಿತ್ಯಗಳು ಮಾನವ ಜನಾಂಗವನ್ನು ಕಾಡುತ್ತಿದೆ. ಯಾರಿಂದಲೂ ಇಂದಿನ ತನಕ ಈ ಪ್ರಕೃತಿ ವಿಕೋಪಗಳನ್ನು ತಡೆಯಲು ಸಾಧ್ಯವಾಗಿಲ್ಲ. ಯಾವ ಅಭಿವೃದ್ಧಿ ಹೊಂದಿದ ದೇಶಗಳು ಇದರಿಂದ ಹೊರತಾಗಿಲ್ಲ.

ವಿಶ್ವದ ಮುಂದುವರಿದ ರಾಷ್ಟ್ರಗಳಾದ ಯುಎಸ್‌ ಎನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಕಾಡಿಚ್ಚು ಸಂಭವಿಸಿ ಸಾವಿರಾರು ಪ್ರಾಣಿ, ಪಕ್ಷಿಗಳು ಹಾನಿಗೊಳಗಾಗುತ್ತಿವೆ. ಜಪಾನ್‌ನಲ್ಲಿ ನೂರಾರು ಭೂಕಂಪ ಜರುಗುತ್ತವೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಸುನಾಮಿ ಸಂಭವಿಸುತ್ತದೆ.

2011ರಲ್ಲಿ ಸಂಭವಿಸಿದ ಸುನಾಮಿಯು ಇಡೀ ರಾಷ್ಟ್ರವನ್ನು ಬೆಚ್ಚಿಬೀಳಿಸಿತ್ತು. ಜಪಾನಿನಲ್ಲಿ 2004 ಮತ್ತು 2011ರಲ್ಲಿ ಸಂಭವಿಸಿದ ಸುನಾಮಿಯು ಭಾರತದ ಮೇಲೆಯೂ ಪರಿಣಾಮ ಉಂಟುಮಾಡಿತ್ತು.

ತಮಿಳುನಾಡಿನ ಕ್ರೀಡಾಂಗಣಗಳು ನಾಶವಾಗಿದ್ದವು. ವಿಜ್ಞಾನ ಲೋಕಕ್ಕೆ ಹೀಗೆ ಸವಾಲಾಗಿರುವುದು ಈ ವಿಪತ್ತು ನಿರ್ವಹಣೆ, ಪ್ರಕೃತಿ ವಿಕೋಪವನ್ನು ತಡೆಗಟ್ಟುವುದು ಎಲ್ಲರಿಗೂ ಒಂದು ಸವಾಲಾಗಿ ಪರಿಣಮಿಸಿದೆ.

ಈ ವಿಪತ್ತು (Disaster)ಗಳಲ್ಲಿ ಎರಡು ಪ್ರಕಾರಗಳಿವೆ. ಒಂದು ಪ್ರಕೃತಿ ವಿಪತ್ತು (Nature Disaster), ಇನ್ನೊಂದು ಮಾನವ ಎಪತ್ತು (Man made Disaster), ಯಾವುದೇ ವಿಪತ್ತು, ವಿಪತ್ತುಗಳ ನಿರ್ವಹಣೆ ಅಂದರೆ ಆ ವಿಪತ್ತಿನಿಂದಾಗುವ ಸಾವು-ನೋವು ಮತ್ತು ಆಸ್ತಿ-ಪಾಸ್ತಿಯ ಹಾನಿಯ ಪ್ರಮಾಣ ಕಡಿಮೆ ಆಗುವಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು.

ವಿಪತ್ತು ನಿರ್ವಹಣೆಯಲ್ಲಿ ಎರಡು ವಿಧಗಳಿವೆ.

1) ವಿಪತ್ತು ಪೂರ್ವ ನಿರ್ವಹಣೆ:

ಇದರಲ್ಲಿ ಮೂರು ಹಂತಗಳಿವೆ. ಅವುಗಳೆಂದರೆ ಮುನ್ನೆಚ್ಚರಿಕೆ ಕ್ರಮ (Prevention), ಉಪಶಮನ (Mitigation) ಮತ್ತು ಪೂರ್ವಸಿದ್ಧತೆ (Preparedness).

2) ವಿಪತ್ತು ನಂತರದ ನಿರ್ವಹಣೆ:

ಇದರಲ್ಲಿಯೂ ಸಹ ಮೂರು ಹಂತಗಳಿದ್ದು, ಅವುಗಳೆಂದರೆ ಪ್ರತಿಕ್ರಿಯೆ (Response), ಮನರ್ವಸತಿ (Rehabilitation) ಮತ್ತು ಪುನರ್ ನಿರ್ಮಾಣ (Reconstruction).

ಹೀಗೆ ಈ ಎಪತ್ತು ನಿರ್ವಹಣೆಯ ಚಕ್ರವನ್ನು ವ್ಯಾಪಕವಾಗಿ ಮೂರು ಹಂತಗಳಲ್ಲಿ ವಿಭಜಿಸಬಹುದು.

1) ಎಪತ್ತು ಪೂರ್ವ 2) ವಿಪತ್ತಿನ ಸಂದರ್ಭ 3) ವಿಪತ್ತು ನಂತರ.

ಪೂರ್ವಸಿದ್ದತಾ ಹಂತ: ವಿಪತ್ತು ನಿರ್ವಹಣೆ

ಇದೊಂದು ಮುಂಜಾಗ್ರತಾ ಕ್ರಮವಾಗಿದ್ದು ಮಹಾಪೂರ ತಡೆಯಲು ಒಡ್ಡು, ಏರಿ, ಅಣೆಕಟ್ಟು ನಿರ್ಮಿಸುವುದು. ಬರಪರಿಹಾರಕ್ಕಾಗಿ ನೀರಾವರಿ ಸೌಲಭ್ಯಗಳನ್ನು ಹೆಚ್ಚಿಸುವುದು ಮತ್ತು ನೀರನ್ನು ಜಲಾಶಯಗಳಲ್ಲಿ ಸಂಗ್ರಹಿಸುವುದು.

ಭೂ ಕುಸಿತಗಳನ್ನು ಕಡಿಮೆ ಮಾಡುವುದು. ಪ್ಲಾಂಟೇಷನ್‌ಗಳನ್ನು ಹೆಚ್ಚಿಸುವುದು, ಭೂಕಂಪದ ಪರಿಣಾಮ ಕಡಿಮೆ ಮಾಡಲು ಭೂಕಂಪ ವಿರೋಧ ಕಟ್ಟಡಗಳನ್ನು ನಿರ್ಮಿಸುವುದು ಮತ್ತು ಆರೋಗ್ಯಕರ ಪರಿಸರ ನಿರ್ಮಾಣ ಮಾಡುವುದು.

ವಿಪತ್ತನ್ನು ವಿವಿಧ ಅಲ್ಪಾವದಿಯ ಕ್ರಮಗಳಿ೦ದಲೂ ಉಪಶಮನಗೊಳಿಸಬಹುದು. ಅದರಿಂದ ವಿಪತ್ತಿನ ತೀವ್ರತೆ ಕಡಿಮೆಯಾಗಬಹುದು. ಅಥವಾ ಆಪತ್ತಿನ ಸಾಮರ್ಥ್ಯ ಕಡಿಮೆಯಾಗಬಹುದು.

ಉದಾಹರಣೆಗೆ ಕಟ್ಟಡ ನಿರ್ಮಾಣ ಸಂಹಿತೆಗಳನ್ನು, ವಲಯವಾರು ನಿಯಂತ್ರಣಗಳನ್ನೂ ಕಟ್ಟುನಿಟ್ಟಿನಿಂದ ಜಾರಿಗೊಳಿಸುವುದು. ಕಾಲುವೆ ವ್ಯವಸ್ಥೆಯನ್ನು ಸುಧಾರಿಸುವುದು, ವಿಪತ್ತುಗಳ ಆಪತ್ತಿನ ಪರಿಣಾಮ ಕಡಿಮೆ ಮಾಡಲು ಜನರಲ್ಲಿ ಜಾಗೃತಿ ಮೂಡಿಸುವುದು.

ತುರ್ತು ಸಂದರ್ಭಕ್ಕೆ ಪ್ರತಿಕ್ರಿಯಿಸುವುದು: ವಿಪತ್ತು ನಿರ್ವಹಣೆ

ಒಂದು ವಿಪತ್ತು ಸಂಭವಿಸಿದಾಗ ಅದರ ಪರಿಣಾಮಕ್ಕೆ ಒಳಗಾಗುವ ವ್ಯಕ್ತಿಗಳಿಗೆ, ಜಾನುವಾರುಗಳಿಗೆ, ಕಟ್ಟಡಗಳಿಗೆ ತುರ್ತಾಗಿ ಪರಿಹಾರ ಒದಗಿಸಬೇಕಾಗುತ್ತದೆ. ಈ ಹಂತದಲ್ಲಿ ಕೆಲವು ಪ್ರಾಥಮಿಕ ಚಟುವಟಿಕೆಗಳು ಅನಿವಾದ್ಯವಾಗುತ್ತವೆ.

ಅವುಗಳೆಂದರೆ ಆಹಾರ, ಔಷಧ, ಬಟ್ಟೆ, ಆಶ್ರಯದಂಥ ಮೂಲಭೂತ ಅಗತ್ಯಗಳನ್ನು ಪೂರೈಸುವುದು, ಸಂತ್ರಸ್ತರ ಜೀವನ ಮೊದಲಿನ ಸ್ಥಿತಿಗೆ ಬರಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದು. ಇವುಗಳೆಂದರೆ,

1) ತತ್‌ಕ್ಷಣ ಅನ್ನ, ಔಷಧಿ, ವಸ್ತ್ರ ಒದಗಿಸುವುದು, ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯುವುದು.

2) ತುರ್ತಾಗಿ ರಕ್ಷಣೆ, ಭದ್ರತೆಯನ್ನು ನೀಡುವುದು ಮತ್ತು ವಿಪತ್ತಿನಿಂದ ಪಾರು ಮಾಡುವುದು.

3) ಮಾನಸಿಕ ಸ್ಥೆರ್ಯವನ್ನು ಹೆಚ್ಚಿಸುವುದು. ಎಲ್ಲರಿಗೂ ಚೈತನ್ಯ ಸ್ಫೂರ್ತಿಯನ್ನು ತುಂಬುವುದು.

4) ಆರ್ಥಿಕ ಭದ್ರತೆ, ಆರೋಗ್ಯ ರಕ್ಷಣೆ ಮತ್ತು ತಾತ್ಕಾಲಿಕ ಪರಿಹಾರ ಕಲ್ಪಿಸುವುದು,

ವಿಪತ್ತಿನ ನಂತರದ ಕ್ರಮಗಳು: ವಿಪತ್ತು ನಿರ್ವಹಣೆ

ಇದು ವಿಪತ್ತಿನಿಂದ ಆಗಬಹುದಾಗಿದ್ದ ಸಾವು-ನೋವಿನ ಪ್ರಮಾಣವನ್ನು, ಆಸ್ತಿ-ಪಾಸ್ತಿ ಹಾನಿಯನ್ನು ಕಡಿಮೆ ಮಾಡುವ ಹಂತ. ಮುಂದೆ ಸಂಭವಿಸುವ ವಿಪತ್ತುಗಳಲ್ಲಿ ಹೆಚ್ಚು ಹಾನಿ ಆಗದಂತೆ ಮಾಡಲು ಮುಂಜಾಗ್ರತೆ ವಹಿಸುವುದು ಮತ್ತು ವಿಪತ್ತಿಗೆ ಈಡಾಗುವಿಕೆಯನ್ನು ಕಡಿಮೆ ಮಾಡುವುದು.

ಅಂದರೆ ವ್ಯಕ್ತಿಯ, ಪ್ರಾಣಿಯ ಜನ ಜೀವನದ ಸಾಮರ್ಥ್ಯವನ್ನು ಹೆಚ್ಚಿಸುವುದು. ಇದರಲ್ಲಿ ಪುನರ್ವಸತಿ, ಪುನ‌ನಿರ್ಮಾಣ ಅತೀ ಮುಖ್ಯವಾಗಿರುತ್ತವೆ. ಇವುಗಳೆಂದರೆ,

1) ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ತೆರೆಯುವುದು

2) ಸಂತ್ರಸ್ತರಿಗೆ ದೀರ್ಘ ಅವಧಿಯಲ್ಲಿ ವಸತಿ ನಿರ್ಮಿಸುವುದು.

.3) ಅನಾಹುತಕ್ಕೀಡಾದ ರಸ್ತೆ, ಆಸ್ತಿ, ಪಾಸ್ತಿಯನ್ನು ಪುನರ್ ನಿರ್ಮಿಸುವುದು,

ಪ್ರಕೃತಿ ವಿಕೋಪದ ಬಗೆಗಳು: ವಿಪತ್ತು ನಿರ್ವಹಣೆ

1) ಭೂಕಂಪ ಮತ್ತು ಸುನಾಮಿ:

2004 ಮತ್ತು 2011ರಲ್ಲಿ ಅತ್ಯಂತ ಪ್ರಬಲವಾಗಿ ಉಂಟಾದ ಭೂಕಂಪದ ಪರಿಣಾಮವಾಗಿ ಜಪಾನ್ ಒಳಗೊಂಡಂತೆ ಅನೇಕ ದೇಶಗಳು ಅತ್ಯಂತ ನಷ್ಟಕ್ಕೀಡಾದವು. ಸಾಗರದ ನೀರಿನಲ್ಲಿ ಉಂಟಾಗುವ ಭೂಕಂಪದ ಈ ಸುನಾಮಿಯು ಸಹಸ್ರಾರು ಕೋಟಿಯಷ್ಟು ಹಾನಿಯುಂಟು ಮಾಡುತ್ತದೆ.

2011ರಲ್ಲಿ ಜರುಗಿದ ಭೂಕಂಪ ಮತ್ತು ಸುನಾಮಿಯ ತೀವ್ರತೆಯು ಅತ್ಯಂತ ಭೀಕರವಾಗಿದ್ದು, ಫುಕುಶಿಮ ಡಯಚಿಯಂತಹ ಅಣು ರಿಯಾಕ್ಟರ್ ಕೇಂದ್ರದ ಮೇಲೆ ಅತ್ಯಂತ ಪ್ರಭಾವ ಬೀರಿದವು. ಈ ಅಣು ರಿಯಾಕ್ಟರ್‌ನ ಮೇಲೆ ಬಿದ್ದ ಸುನಾಮಿಯ ಪ್ರಭಾವದಿಂದ ಬಿಡುಗಡೆಯಾದ ರೇಡಿಯೋ ವಿಕಿರಣದ ಅಲೆಗಳು ಸಹಸ್ರಾರು ಜನರ ಸಾವಿಗೆ ಕಾರಣವಾದವು.

ಇತ್ತೀಚೆಗೆ ಇಟಲಿ ಮತ್ತು ನೇಪಾಳದಲ್ಲಿ ಜರುಗಿದ ಭೂಕಂಪಗಳು ರಿಕ್ಟರ್ ಮಾಪಕದಲ್ಲಿ 7ರಿಂದ 9ರ ತನಕ ತೀವ್ರತೆಯನ್ನು ಹೊಂದಿದ್ದು, ಕಟ್ಟಡ, ಪಾಣಿಗಳು, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿದವು.

ಆದ್ದರಿಂದ ಈ ಭೂಕಂಪ ಮತ್ತು ಸುನಾಮಿಗಳು ಪ್ರಬಲವಾದ ಪ್ರಾಕೃತಿಕ ವಿಕೋಪಗಳಾಗಿರುವುದರಿಂದ ಇವುಗಳನ್ನು ನಿಭಾಯಿಸುವುದು ಸೂಕ್ತವಾಗಿದೆ.

2) ಜಲ ಪ್ರವಾಹ ಮತ್ತು ಸಾಗರ ಪ್ರವಾಹಗಳು:

ಸಾಗರಗಳಲ್ಲಿ ಉಂಟಾಗಲಿರುವ ಶೀತೋದಕ ಮತ್ತು ಉದ್ಧೋದಕ ಪ್ರವಾಹಗಳು ಕೆಲವು ಪ್ರದೇಶಗಳಲ್ಲಿ ಅತೀ ಹೆಚ್ಚು ಉಷ್ಣತೆಯನ್ನು ಅಲ್ಲಿ ಹೆಚ್ಚು ಒತ್ತಡವನ್ನು ಬದಲಿಗೆ ಕೆಲವೊಂದು ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣತೆಯನ್ನು ಅಲ್ಲಿ ಹೆಚ್ಚು ಒತ್ತಡವನ್ನು ಉಂಟುಮಾಡಿ ಕೆಲವೊಮ್ಮೆ ಭೀಕರ ಪ್ರವಾಹ ಉಂಟಾಗುವುದು.

ಇಲ್ಲವೇ ಭೀಕರ ಬರಗಾಲ ಉಂಟಾಗುವ ಹಾಗೆ ಮಾಡುವುದು ನೈಸರ್ಗಿಕ ಕ್ರಿಯೆಯಾಗಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಜಲಪ್ರಳಯ ಉಂಟಾಗಲು ಕಾರಣವಾಗಿದೆ ಎನ್ನಲಾದ ಪ್ರವಾಹ ಎಲ್‌ನಿನಾ. ಈ ಎಲ್‌ನಿನಾ ಮತ್ತು ಲಾ ನಿನಾದಂತಹ ಸಾಗರ ಪ್ರವಾಹಗಳು ಭೀಕರ ಬರಗಾಲ ಮತ್ತು ಭೀಕರ ಪ್ರವಾಹವನ್ನು ಉಂಟುಮಾಡುತ್ತವೆ.

ಪಶ್ಚಿಮ ಬಂಗಾಳ, ಮುಂಬೈ, ಚೆನ್ನೈಗಳು ಜಲಾವೃತಗೊಂಡಿದ್ದು ಉತ್ತರಾಖಂಡದಲ್ಲಿ ಜಲಪ್ರಳಯ ಉಂಟಾಗಿದ್ದು ಭಾರತದ ಪ್ರಮುಖ ಪ್ರಕೃತಿ ವಿಕೋಪಗಳಾಗಿವೆ.

3) ಚಂಡಮಾರುತ ಮತ್ತು ಬರಗಾಲ:

ಒಂದು ನಿರ್ದಿಷ್ಟ ಕಾಲದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬೀಸುವ ಮಾರುತಗಳನ್ನು ಚಂಡಮಾರುತಗಳೆಂದು ಕರೆಯಲಾಗುತ್ತಿದ್ದು, ಇವುಗಳು ಹೆಚ್ಚು ಅತಿವೃಷ್ಟಿ, ಇಲ್ಲವೇ ಅನಾವೃಷ್ಟಿ ಸಂಭವಿಸಲು ಕಾರಣವಾಗುತ್ತವೆ.

ಇತ್ತೀಚೆಗೆ ಬೀಸಿದ ಹುಡ್ ಹುಡ್ ಚಂಡಮಾರುತವು ಆಂಧ್ರಪ್ರದೇಶದಲ್ಲಿ ಹೆಚ್ಚು ಮಳೆ ಸುರಿಸಲು ಕಾರಣವಾಯಿತು.

ಕೆಲವು ಕಡೆಗಳಲ್ಲಿ ಮಾನ್‌ಸೂನ್‌ನ ವೈಫಲ್ಯದಿಂದಾಗಿ ಭೀಕರ ಬರಗಾಲ ಸಂಭವಿಸುತ್ತದೆ. ಕುಡಿಯಲು ನೀರು ಇಲ್ಲದೆ, ಜಾನುವಾರುಗಳಿಗೆ ಮೇವು ಇಲ್ಲದೆ, ಎಲ್ಲರೂ ಪರಿತಪಿಸುವ ಹಾಗೆ ಮಾಡುವ ಈ ಬರಗಾಲವು ಕೃಷಿಯನ್ನು, ಉತ್ಪಾದನಾ ವಲಯವನ್ನು ಹೆಚ್ಚಾಗಿ ಕಾಡುತ್ತದೆ. ಆದ್ದರಿಂದ ಈ ಚಂಡಮಾರುತಗಳು ಹಾಗೂ ಬರಗಾಲಗಳು ದೇಶದ ದೊಡ್ಡ ಪ್ರಕೃತಿ ವಿಕೋಪಗಳು.

4) ಜ್ವಾಲಾಮುಖಿ ಮತ್ತು ಕಾಳಿಚ್ಚು:

ಇಂಡೋನೇಷಿಯಾದ ಕ್ರಕಟೋವ, ಜಪಾನಿನ ಅಸಮಾ, ಸ್ಟಾಂಬೋಲಿ, ಚಿಂಬರಾಸೋ, ಇಟಲಿಯ ವೆಸುವಿಯನ್, ಸಿಸಿರಿಯವಿಟ್ನಾ, ಭಾರತದ ಅಂಡಮಾನ್ ನಿಕೋಬಾರ್‌ನಲ್ಲಿರುವ ಬ್ಯಾರನ್‌ ದ್ವೀಪಗಳಲ್ಲಿ ಜ್ವಾಲಾಮುಖಿಯು ಹೆಚ್ಚು ಹೆಚ್ಚು ಉಂಟಾಗುತ್ತಿರುತ್ತದೆ.

ಇವುಗಳು ಜಾಗೃತ ಜ್ವಾಲಾಮುಖಿಗಳಾಗಿದ್ದು, ಪದೇ ಪದೇ ಸಂಭವಿಸಿ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತವೆ. ಪೆಸಿಫಿಕ್ ಸಾಗರದ ತೀರ ಪ್ರದೇಶವನ್ನು ರಿಂಗ್ ಆಫ್ ಫಯರ್‌ ಎಂದು ಕರೆಯಲಾಗುತ್ತಿದ್ದು, ಅಲ್ಲಿ ಸದಾ ಜ್ವಾಲಾಮುಖಿ ಮತ್ತು ಭೂಕಂಪಗಳು ಸಂಭವಿಸುತ್ತಿರುತ್ತವೆ.

ಇಂಡೋನೇಷಿಯಾ, ಹವಾಯಿ, ಇಟಲಿ ಈ ರಾಷ್ಟ್ರಗಳು ಸದಾ ಗಂಡಾಂತರವನ್ನು ಎದುರಿಸುತ್ತಿರುತ್ತವೆ. ಆದ್ದರಿಂದ ಜ್ವಾಲಾಮುಖಿಯು ಪ್ರಬಲ ಪ್ರಾಕೃತಿಕ ವಿಕೋಪವಾಗಿದೆ.

ಕಾಡಿಚ್ಚು ಇತ್ತೀಚೆಗೆ ಹೆಚ್ಚು ಕಂಡು ಬರುತ್ತಿರುವುದು ಆಫ್ರಿಕಾದ ಕಾಡುಗಳಲ್ಲಿ, ಮತ್ತು ಯುಎಸ್‌ದ ಕ್ಯಾಲಿಫೋರ್ನಿಯಾದಲ್ಲಿ, ಇಲ್ಲಿ ಅತೀ ದಟ್ಟವಾದ ಅರಣ್ಯವಿದ್ದು, ಕಾಡಿಚ್ಚು ಬಹುಬೇಗವಾಗಿ ಹಬ್ಬಿ ಕಾಡಿನ ಪ್ರಮಾಣವನ್ನು ನಾಶಮಾಡುತ್ತಿದೆ. ಭಾರತದಲ್ಲಿಯೂ ಪಶ್ಚಿಮಘಟ್ಟ ಮತ್ತು ಪೂರ್ವಘಟ್ಟಗಳಲ್ಲಿ ಈ ಸಮಸ್ಯೆಯಿದ್ದು ತೀವ್ರತೆ ಅತ್ಯಂತ ಕಡಿಮೆ ಇದೆ.

5) ಮಾನವ ನಿರ್ಮಿತ ದುರಂತಗಳು: ವಿಪತ್ತು ನಿರ್ವಹಣೆ

ಮಾನವನು ತನ್ನ ಸ್ವಾರ್ಥಪರ ದುರಾಸೆಯಿಂದ ನಿರ್ಮಿಸಿಕೊಂಡ ಕೆಲವು ದುರಂತಗಳು ಅವನನ್ನು ಅತ್ಯಂತ ಹೆಚ್ಚು ವಿನಾಶಕ್ಕೀಡು ಮಾಡಿವೆ. ಚರ್ನೋಬಿಲ್ ಪರಮಾಣು ದುರಂತ, ಆಲ್ ಖೈದಾ ವಿಶ್ವವ್ಯಾಪರ ಸಂಸ್ಥೆ ಅಮೇರಿಕಾದ ಮೇಲಿನ ದಾಳಿ, ಫುಕುಶಿಮಾ ಡಯಚಿಯ ಅಣುದುರಂತ, ಭೂಪಾಲ್‌ ಕಾರ್ಖಾನೆಯೊಂದರ ಈಥೈಲ್ ಐಸೋಸೈನೆಟ್ ಸೋರಿಕೆ, ಮಾನವ ಪ್ರೇರಿತ ಕೃತ್ಯಗಳಿಂದ ಕೆಲವು ಗಣಿಗಳು ಕುಸಿತಗೊಂಡಿರುವುದು,

ಆಲಮಟ್ಟಿ ಜಲಾಶಯದಿಂದಾಗಿ ಭೂ ಪ್ರದೇಶಗಳು ಮುಳುಗಿದುದು, ಕೆಲವು ಡ್ಯಾಂಗಳು ಒಡೆದು ಭೂಪ್ರದೇಶ ಜಲಮಯವಾಗಿರುವುದು ಮಾನವ ನಿರ್ಮಿತ ದುರಂತಗಳಲ್ಲಿ ಒಂದಾಗಿದೆ.

ಹೀಗೆ ಮಾನವನು ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಸಾಧಿಸಿದಷ್ಟು ಅವನಿಂದ ಇನ್ನೂ ಎತ್ತರಕ್ಕೆ ಸಾಗುವ ಈ ಪ್ರಕೃತಿ ವಿಕೋಪಗಳನ್ನು ಇಂದಿಗೂ ಸಂಪೂರ್ಣ ತಡೆಯಲು ಸಾಧ್ಯವಾಗಿಲ್ಲ.

ಅದರಲ್ಲೂ ಹವಾಮಾನ ಇಲಾಖೆ ಕೆಳಮಟ್ಟದಲ್ಲಿರುವ ಭಾರತದಂತಹ ದೇಶಗಳಲ್ಲಿಯೂ ಒಂದು ವೇಳೆ ಯಾವುದಾದರೂ ಈ ಪ್ರಾಕೃತಿಕ ವಿಕೋಪ ಸಂಭವಿಸಿದರೆ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸುತ್ತವೆ.

ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇವುಗಳನ್ನು ನಿಯಂತ್ರಿಸುವುದು ಮಾನವನನ್ನು ಸಂಕಷ್ಟದಿಂದ ಪಾರುಮಾಡಿದಂತಾಗುತ್ತದೆ. ಆದ್ದರಿಂದ ಈ ಪ್ರಾಕೃತಿಕ ವಿಕೋಪಗಳು ಉಂಟಾಗಲು ಕಾರಣಗಳನ್ನು ತಿಳಿಯುವುದು ಅನಿವಾರವಾಗುತ್ತದೆ.

ಪ್ರಾಕೃತಿಕ ವಿಕೋಪಗಳು ಸಂಭವಿಸಲು ಕಾರಣಗಳು: ವಿಪತ್ತು ನಿರ್ವಹಣೆ

ಪ್ರಾಕೃತಿಕ ವಿಕೋಪ ಸಂಭವಿಸಲು ವೈಜ್ಞಾನಿಕವಾಗಿ ಈ ಕೆಳಗಿನಂತೆ ಕಾರಣಗಳನ್ನು ಪಟ್ಟಿಮಾಡಬಹುದು.

1) ಹಿಮಚ್ಚಾದಿತ ಪರ್ವತಗಳಲ್ಲಿ ಹಿಮಪಾತಗಳು ಭೂಕಂಪನವನ್ನು ಉಂಟುಮಾಡುತ್ತವೆ.

2) ಬೃಹತ್‌ ಪ್ರಮಾಣದ ಸಮುದ್ರದ ಅಲೆಗಳು ಭೂಕಂಪನ ಉಂಟು ಮಾಡಿರುವುದು ಕಲ್ಕತ್ತಾದ ಅಲಿಪುರದ ಬಳಿ ದಾಖಲಾಗಿದೆ. ಭೂಕುಸಿತ, ಅಗಾದ ಶಿಲೆಗಳು ಉರುಳುವುದು ಭೂಕಂಪನ ಉಂಟುಮಾಡುತ್ತದೆ.

3), ಗುಹೆಗಳ ಮೇಲ್ಬಾವಣಿ ಕುಸಿಯುವುದು, ಆಳವಾದ ಗಣಿಗಳಲ್ಲಿ ಸಿಡಿಮದ್ದಿನ ಸ್ಫೋಟಕಗಳು ಸ್ಫೋಟಿಸುವುದರಿಂದ, ಜಲಾಶಯಗಳಲ್ಲಿ ಅಗಾಧ ನೀರಿನ ಶೇಖರಣೆಯೂ ಭೂಕಂಪನವನ್ನು ಉಂಟುಮಾಡುತ್ತದೆ.

4), ಭೂಕವಚ, ಶಿಲಾಸ್ತರಭಂಗ, ಭೂಸ್ತಾನಪಲ್ಲಟ, ಮಡಿಕೆಗಳಿಂದ ಸರಭಂಗ ಇವುಗಳಿಂದಾಗಿ ಭೂಕಂಪವು ಉಂಟಾಗುತ್ತದೆ.

ವಿಪತ್ತು ನಿರ್ವಹಣೆ

5) ಭೂಮಿಯ ಅಂತರಾಳದ ಅತಿಯಾದ ಉಷ್ಣತೆ, ಥೋರಿಯಂ ಮತ್ತು ಯುರೇನಿಯಂ ಕಣಗಳ ಅಣುವಿಕರಣತೆ ಮತ್ತು ನೀರಾವಿಯ ಒತ್ತಡವು ಜ್ವಾಲಾಮುಖಿಯನ್ನು ಉಂಟು ಮಾಡುತ್ತದೆ.

6), ಸಾಗರದ ಮೇಲೆ ವಿಸ್ತಾರಗೊಳ್ಳುವಿಕೆ, ಸ್ವರಭಂಗಗಳು ಪ್ರಬಲವಾಗಿ ಜ್ವಾಲಾಮುಖಿ ಉಂಟಾಗಲು ಪ್ರಮುಖ ಕಾರಣಗಳಾಗಿವೆ.

7) ಪರಮಾಣು, ಅಣುವಿಕಿರಣ ದುರಂತಗಳು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳದೆ ಇರುವುದರಿಂದ ಸಂಭವಿಸುತ್ತವೆ. ಉದಾ: ರಷ್ಯಾದ ಚರ್ನೋಬಿಲ್, ಭೂಪಾಲ್‌ ಗ್ಯಾಸ್‌ ಟ್ರ್ಯಾಜಿಡಿ, ಫುಕುಶಿಮಾಡಯಚಿ ಅಣುದುರಂತ.

8) ಕೆಲವು ಅವಘಡಗಳು ನಿಸರ್ಗದ ವೈಚಿತ್ರ್ಯಗಳಿಂದ ಹಾಗೆಯೇ ಉಂಟಾಗುತ್ತವೆ. ಅದರಲ್ಲೂ ಕಾಡಿನಲ್ಲಿ ಸಂಭವಿಸುವ ಕಾಡಿಚ್ಚು ಅತ್ಯಂತ ಪ್ರಮುಖವಾದದ್ದು.

9) ಜಾಗತಿಕ ತಾಪಮಾನದ ಹವಾಮಾನ ವೈಪರಿತ್ಯಗಳಿಂದ ಕೆಲವು ವಿಪತ್ತುಗಳು ಸಂಭವಿಸುತ್ತವೆ. ಅದರಲ್ಲೂ ಆಮ್ಲ ಮಳೆ (Acid Rain) ಭೀಕರ ಪ್ರವಾಹಗಳು ಉಂಟಾಗಲು ಕೆಲವು ಮಾನವ ನಿರ್ಮಿತ ಚಟುವಟಿಕೆಗಳು ಕಾರಣವಾಗುತ್ತವೆ.

10) .ಕೈಗಾರಿಕಾ ಕ್ರಾಂತಿಯ ಹೆಚ್ಚಳ, ಪಾಶ್ಚಿಮಾತ್ರೀಕರಣದ ಅನುಕರಣೆ, ಭೂಮಿಯ ಉಷ್ಣತೆಯ ಏರಿಕೆ, ಹವಾಮಾನದಲ್ಲಿ ಹಸಿರು ಮನೆ ಅನಿಲಗಳು ಏರಿಕೆಯಾಗುವುದರಿಂದ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ.

ವಿಪತ್ತು ನಿರ್ವಹಣಾ ಕಾಯಿದೆ 2005: ವಿಪತ್ತು ನಿರ್ವಹಣೆ

2005ರ ವಿಪತ್ತು ನಿರ್ವಹಣಾ ಕಾಯಿದೆ ಈ ಕೆಳಗಿನ ಅಂಶಗಳಿಗೆ ಅನುಗುಣವಾಗಿ ತಿದ್ದುಪಡಿ ಆಗಬೇಕಾಗಿದೆ.

1) ವಿಪತ್ತು ನಿರ್ವಹಣೆ ರಾಜ್ಯ ಸರ್ಕಾರಗಳ ಮತ್ತು ಕೇಂದ್ರ ಸರ್ಕಾರದ ಪ್ರಾಥಮಿಕ ಹೊಣೆಯಾಗಬೇಕು. ಕೇಂದ್ರ ಸರ್ಕಾರದ ಬೆಂಬಲ ಪ್ರಮುಖವಾಗಿರಬೇಕು.

2) ಕಾಯ್ದೆಯು ವಿಪತ್ತುಗಳನ್ನು ಸ್ಥಳೀಯ, ಜಿಲ್ಲಾ, ರಾಜ್ಯ ಅಥವಾ ರಾಷ್ಟ್ರೀಯ ಎಂದು ವರ್ಗೀಕರಿಸಬೇಕು. ಈ ವರ್ಗೀಕರಣವು ಆಯಾ ಮಟ್ಟದ ಅಧಿಕಾರಿಗಳು ಮುನ್ನೆಚ್ಚರಿಕೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಅನುವು ಮಾಡಿಕೊಡಬೇಕು.

3) ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA)-National Disaster Management Authorityಯು ವಿವಿಧ ವಿಪತ್ತು ನಿರ್ವಹಣಾ ಯೋಜನೆಗಳು ಮತ್ತು ಕಾರಾಚರಣೆ ಸಿದ್ದತೆಯ ನೀತಿಗಳನ್ನು ಶಿಫಾರಸ್ಸು ಮಾಡಬೇಕು.

4) ರಾಜ್ಯ ಸರ್ಕಾರಗಳಿಗೆ ವಹಿಸಲಾದ ಸ್ಥಳೀಯ ಮತ್ತು ಜಿಲ್ಲಾ ಕೇಂದ್ರಗಳು ಮುನ್ನೆಚ್ಚರಿಕೆ ಮತ್ತು ಪರಿಹಾರ ಕಾರಕ್ರಮಗಳ ಅನುಷ್ಠಾನ ಬಗ್ಗೆ ಸರ್ಕಾರಗಳಿಗೆ ಎಚ್ಚರಿಕೆ ನೀಡಬೇಕು.

5) ವಿಪತ್ತು ನಿರ್ವಹಣಾ ಕಾಯಿದೆ ಎಲ್ಲಾ ಕಡೆ ಒಂದೇ ಆಗಿರಬೇಕು. ಪರಿಹಾರ ಪರಿಶೀಲನಾ ಸಮಿತಿಗಳು ರಾಷ್ಟ್ರಮಟ್ಟದಲ್ಲಿ ಪ್ರಧಾನಿಯವರ ಮತ್ತು ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಇರಬೇಕು.

ಸಂಪುಟ ಕಾವ್ಯದರ್ಶಿ ಮತ್ತು ಮುಖ್ಯ ಕಾವ್ಯದರ್ಶಿಗಳು ಸಮಿತಿಯಲ್ಲಿ ಇರಬೇಕು.

6) ಪರಿಹಾರ ನಿಧಿಯ ದುರ್ಬಳಕೆಗೆ ಕಡ್ಡಾಯವಾಗಿ ಕಠಿಣ ಶಿಕ್ಷೆಯನ್ನು ನೀಡಬೇಕು.

7) ವಿಪತ್ತು ಪರಿಹಾರ ನಿರ್ವಹಣೆಯಲ್ಲಿ ಸ್ಥಳೀಯ ಸರ್ಕಾರಗಳ ಪಾತ್ರ ಮುಖ್ಯವಾಗಿರಬೇಕು.

8) ರಾಜ್ಯಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮನ್ವಯ ಸಮಿತಿಗಳಿರಬೇಕು.

9) ರಾಷ್ಟ್ರೀಯ ವಿಕೋಪ ಪ್ರತಿಕ್ರಿಯೆ ಪಡೆಯನ್ನು NDRF-National Disaster Respose Force ಇದ್ದು ಪ್ರಕೃತಿ ಮತ್ತು ಮಾನವ ಪ್ರಚೋದಿತ ವಿಕೋಪಗಳ ನಿರ್ವಹಣೆಯ ವಿಶೇಷ ಪಡೆಯಾಗಿ ಕೆಲಸ ಮಾಡುತ್ತದೆ.

10) ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರದ ಅಡಿಯಲ್ಲಿ ಬರುವ ಇದು ವಿಕೋಪ ನಿಯಂತ್ರಣ, ನಿರ್ದೇಶನ ಮತ್ತು ಮೇಲ್ವಿಚಾರಣೆಯ ಹೊಣೆಗಾರಿಕೆಯನ್ನು ಹೊಂದಿದೆ.

ರಾಷ್ಟ್ರೀಯ ವಿಕೋಪ ನಿರ್ವಹಣಾ ನೀತಿ 2009: ವಿಪತ್ತು ನಿರ್ವಹಣೆ

ಇದು ಒಂದು ಸಮಗ್ರ ಕ್ರಿಯಾಶೀಲಪರ, ಬಹು ವಿಕೋಪ ಗ್ರಹಿಕೆಯ ಮತ್ತು ತಂತ್ರಜ್ಞಾನ ಪ್ರೇರಿತ ಮುನ್ನೆಚ್ಚರಿಕೆಯ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವ ಮೂಲಕ ಒಂದು ಸುರಕ್ಷಿತ, ಸ್ಥಿತಿಸ್ಥಾಪಕತ್ವದ ದೇಶವನ್ನು ಕಟ್ಟುವ ದೃಷ್ಟಿಕೋನ ಹೊಂದಿದೆ. ಈ ನೀತಿಯ ತತ್ವಗಳು,

1) ಸಮಗ್ರತೆ ಮತ್ತು ಅನುಷ್ಟಾನ ಒಳಗೊಂಡು ಸಮುದಾಯಿಕ ಆಧಾರದ ಮೇಲೆ ವಿಕೋಪ ನಿರ್ವಹಣೆ,

2) ಎಲ್ಲಾ ಹಂತಗಳಲ್ಲಿ ಸಾಮರ್ಥ್ಯ ನಿರ್ಮಾಣ ಮತ್ತು ಅಭಿವೃದ್ಧಿ,

3) ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಗಳಲ್ಲಿ ವಿವಿಧ ಏಜೆನ್ಸಿಗಳೊಂದಿಗೆ ಸಹಕಾರ.

4) ಬಹುವಲಯದ ಹೆಚ್ಚುವರಿ ಸಾಮರ್ಥ್ಯ ನಿರ್ಮಾಣ.

ಈ ನೀತಿಯ ಧೈಯೋದ್ದೇಶಗಳು: ವಿಪತ್ತು ನಿರ್ವಹಣೆ

1) ಮುನ್ನೆಚ್ಚರಿಕೆಯ, ಪೂರ್ವಸಿದ್ಧತೆಯ ಜ್ಞಾನ, ನವನವೀನತೆ ಮತ್ತು ಶಿಕ್ಷಣದ ಮೂಲಕ ಎಲ್ಲ ಹಂತಗಳಲ್ಲಿ ಅಭಿವೃದ್ಧಿಪಡಿಸುವುದು.

2) ತಂತ್ರಜ್ಞಾನ, ಸಂಪ್ರದಾಯಿಕ ತಿಳುವಳಿಕೆ ಮತ್ತು ಪರಿಸರಾತ್ಮಕ ಆಧಾರ ಶಕ್ತಿಯೊಂದಿಗೆ, ಅಪಾಯ ತಪ್ಪಿಸುವ ಕ್ರಮಗಳಿಗೆ ಉತ್ತೇಜನ.

3) ವಿಕೋಪ ನಿರ್ವಹಣೆಯನ್ನು ಅಭಿವೃದ್ಧಿ ಯೋಚನೆ ಪ್ರಕ್ರಿಯೆಯ ಮುಖ್ಯ ಹರಿವಿನಲ್ಲಿ ತರುವುದು.

4) ವಿಕೋಪದ ಅಪಾಯ ಮತ್ತು ಅಪಾಯದ ತೀವ್ರತೆಯನ್ನು ಅಳೆಯಲು ಅಂದಾಜಿಸಲು ವಿಶ್ವಾಸಾತ್ಮಕ, ದಕ್ಷ ವ್ಯವಸ್ಥೆಯನ್ನು ಹೊಂದುವುದು.

5) ಸಂತ್ರಸ್ತರಿಗಾಗಿ ಸುರಕ್ಷಿತ, ಬೇಗನೆ ಗ್ರಹಿಸುವ ಕಟ್ಟಡ ಮತ್ತು ಮನೆಗಳನ್ನು ನಿರ್ಮಿಸುವುದು. 6) ವಿಕೋಪ ನಿರ್ವಹಣೆಗಾಗಿ ಮಾಧ್ಯಮಗಳೊಂದಿಗೆ ಪೂರ್ವಕ್ರಿಯಾಶೀಲ ಪಾಲುದಾರಿಕೆ ಅಭಿವೃದ್ಧಿಪಡಿಸುವುದು.

ರಾಜ್ಯಮಟ್ಟದ ವಿಕೋಪ ನಿರ್ವಹಣಾ ಪ್ರಾಧಿಕಾರಗಳು: ವಿಪತ್ತು ನಿರ್ವಹಣೆ

ವಿಕೋಪ ನಿರ್ವಹಣಾ ಕಾಯಿದೆಯು ಪ್ರತಿಯೊಂದು ರಾಜ್ಯ ಸರ್ಕಾರ ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರವನ್ನು ಸ್ಥಾಪಿಸಿವೆ. ಈ ಪ್ರಾಧಿಕಾರಗಳಲ್ಲಿ ಒಬ್ಬರು ಚೇರ್ಮನ್ ಮತ್ತು 9 ಸದಸ್ಯರಿರುತ್ತಾರೆ. ರಾಜ್ಯದ ಮುಖ್ಯಮಂತ್ರಿ ಪದನಿಮಿತ್ತ ಚೇರ್ಮನ್‌ರಾಗಿರುತ್ತಾರೆ.

ಜಿಲ್ಲಾಮಟ್ಟದ ವಿಕೋಪ ನಿರ್ವಹಣಾ ಪ್ರಾಧಿಕಾರಗಳು:

ಪ್ರತಿಯೊಂದು ರಾಜ್ಯ ಪ್ರತಿಯೊಂದು ಜಿಲ್ಲಾಮಟ್ಟದಲ್ಲಿ ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರಗಳನ್ನು ಸ್ಥಾಪಿಸುತ್ತವೆ. ಜಿಲ್ಲಾ ಪ್ರಾಧಿಕಾರಗಳಲ್ಲಿ ಒಬ್ಬ ಚೇರ್ಮನ್ ಮತ್ತು 9 ಸದಸ್ಯರಿರುತ್ತಾರೆ.

ಜಿಲ್ಲಾಧಿಕಾರಿ ಪದನಿಮಿತ್ತ ಚೇರ್ಮನ್‌ರಾಗಿರುತ್ತಾರೆ. ಪದನಿಮಿತ್ತ ಸದಸ್ಯರಾಗಿ ಚೀಫ್ ಆಫೀಸರ್‌ ಇರುತ್ತಾರೆ. ಜಿಲ್ಲಾ ಪೋಲಿಸ್ ಅಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಸದಸ್ಯರಾಗಿರುತ್ತಾರೆ.

ರಾಷ್ಟ್ರೀಯ ವಿಕೋಪ ನಿರ್ವಹಣಾ ಸಂಸ್ಥೆ:

ಇದು ಭಾರತದಲ್ಲಿ ವಿಕೋಪ ನಿರ್ವಹಣಾ ತರಬೇತಿ ನೀಡುವ ಸಂಸ್ಥೆ ಇದನ್ನು ಭಾರತ ಸರ್ಕಾರ ಸ್ಥಾಪಿಸಿದೆ. ಇದರ ಕಾರ ಚಟುವಟಿಕೆಗಳು ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರದ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ.

ಇದರಲ್ಲಿ ಬಿ.ಎಸ್.ಎಫ್., ಸಿ.ಆರ್.ಪಿ.ಎಫ್., ಸಿ.ಪಿ.ಎನ್.ಎಸ್, ಐಟಿಬಿಪಿಯ 8 ಬೆಟಾಲಿಯನ್‌ಗಳಿವೆ.

ರಾಷ್ಟ್ರೀಯ ವಿಕೋಪ ಪರಿಹಾರ ನಿಧಿ:

ಈ ನಿಧಿಯನ್ನು ಸ್ಥಾಪಿಸಲು ವಿಕೋಪ ನಿರ್ವಹಣಾ /ವಿಪತ್ತು ನಿರ್ವಹಣೆ ಕಾಯಿದೆ 2005 ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಿದೆ. ಈ ನಿಧಿಗೆ ಕೇಂದ್ರ ಸರ್ಕಾರ ಸಂಸತ್ತಿನ ಒಂದು ಕಾಯಿದೆಯ ಮೂಲಕ ಹಣವನ್ನು ಒದಗಿಸುತ್ತದೆ.

ಅಲ್ಲದೇ ಯಾವುದೇ ಸಂಘ, ಸಂಸ್ಥೆ, ವ್ಯಕ್ತಿಗಳು ನಿಧಿಗೆ ತಮ್ಮ ಕೊಡುಗೆಯನ್ನು ನೀಡಬಹುದು. ನಿಧಿಯ ಹಣ ತುರ್ತು ಪ್ರತಿಕ್ರಿಯೆಗೆ ಪರಿಹಾರ ಮತ್ತು ಪುನರ್ವಸತಿಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರದ ಸಮಾಲೋಚನೆಯೊಂದಿಗೆ ಮಾಡಿದ ಮಾರ್ಗದರ್ಶನಗಳ ಪ್ರಕಾರ ವಿನಿಯೋಗವಾಗುತ್ತದೆ.

ವಿಪತ್ತು ನಿರ್ವಹಣೆ

ಇದು ಭಾರತ ದೇಶದ ವಿಕೋಪ ನಿರ್ವಹಣೆಗಾಗಿ ಇರುವ ಉನ್ನತ ಸಂಸ್ಥೆಯಾಗಿದ್ದು ಪ್ರಧಾನಮಂತ್ರಿಯವರು ಇದರ ಮುಖ್ಯಸ್ಥರಾಗಿರುತ್ತಾರೆ. 2005ರ ವಿಕೋಪ ನಿರ್ವಹಣಾ ಕಾಯಿದೆಯ ಪ್ರಕಾರ ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಸಾಂಸ್ಥಿಕ ವಾತಾವರಣ ರೂಪಿಸಲು ಎನ್‌ಡಿಎಂಎಗೆ ಅಧಿಕಾರ ನೀಡಲಾಗಿದೆ.

ಪ್ರಕೃತಿ ವಿಕೋಪ ಸಂಭವಿಸಿದಾಗ ಪರಿಣಾಮಕಾರಿ ಪರಿಹಾರ ಅನುಷ್ಠಾನಕ್ಕಾಗಿ ಭಾರತ ಸರ್ಕಾರ ಕ್ಯಾಬಿನೆಟ್‌ ಸೆಕ್ರೆಟರಿ ನೇತೃತ್ವದಲ್ಲಿ ಒಂದು ರಾಷ್ಟ್ರೀಯ ಸ್ಥಾಯಿ ಸಮಿತಿಯನ್ನು ರಚಿಸಿದೆ. ಅದರ ಅಡಿಯಲ್ಲಿ ಪ್ರಕೃತಿ ವಿಕೋಪ ನಿರ್ವಹಣಾ Dowogn the National Disaster Management Control ನವದೆಹಲಿಯ ಕೃಷಿ ಭವನದಲ್ಲಿ ತೆರೆಯಲಾಗಿದೆ.

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....