Kannada essays

Sowing Sorrow | ರೈತರ ಆತ್ಮಹತ್ಯೆ ಪ್ರಬಂಧ | Revealing the Silent Crisis of Farmer Suicides 2023

Table of Contents

ರೈತರ ಆತ್ಮಹತ್ಯೆ [Farmer’s Suicide]

ಪ್ರಸ್ತುತ ದೇಶದಲ್ಲಿ 2013 ರಿಂದ ಕ್ರಮವಾಗಿ ಪ್ರತಿವರ್ಷ 13000 ಕ್ಕಿಂತಲೂ ಹೆಚ್ಚಿನ ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಸರ್ಕಾರ ವರದಿ ಮಾಡಿದೆ. ಮಹಾರಾಷ್ಟ್ರದಲ್ಲಿ 4,291 ಆತ್ಮಹತ್ಯೆ ಪ್ರಕರಣಗಳು, ಕರ್ನಾಟಕದಲ್ಲಿ 3,291 ಪ್ರಕರಣಗಳು, ತೆಲಂಗಾಣದಲ್ಲಿ 1,400, ಮಧ್ಯಪ್ರದೇಶದಲ್ಲಿ 1,290, ಛತ್ತೀಸಗಢದಲ್ಲಿ 954, ಆಂಧ್ರಪ್ರದೇಶದಲ್ಲಿ 916 ಮತ್ತು ತಮಿಳುನಾಡಿನಲ್ಲಿ 606 ರೈತರ ಆತ್ಮಹತ್ಯೆಯ ಪ್ರಕರಣಗಳು ದಾಖಲಾಗಿವೆ. ಈ ಮೇಲಿನ ಏಳು ರಾಜ್ಯಗಳು ಒಟ್ಟು ದೇಶದ ರೈತರ ಆತ್ಮಹತ್ಯೆಯಲ್ಲಿ ಶೇ. 87.5%ರನ್ನು ಒಳಗೊಂಡಿದೆ.

ಮಹಾರಾಷ್ಟ್ರ ಒಂದರಲ್ಲೇ ಪ್ರತಿ 3 ಗಂಟೆಗೊಬ್ಬರೈತರ ಪ್ರಾಣ ಕಳೆದುಕೊಳ್ಳುತ್ತಿದ್ದು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಪ್ರತಿ 53 ನಿಮಿಷಕ್ಕೊಬ್ಬ ರೈತ ಜೀವ ಕಳೆದುಕೊಳ್ಳುತ್ತಿದ್ದಾನೆ. 1997ರಿಂದ ರಾಷ್ಟ್ರಮಟ್ಟದಲ್ಲಿ ಈ ಅಂಕಿ ಅಂಶಗಳು ಲಭ್ಯವಿರುವ ಕಡೆಯ ವರ್ಷವೆಂದರೆ 2005. ರೈತರ ಆತ್ಮಹತ್ಯೆಗಳ ದರವನ್ನು (ಎಫ್ ಎಸ್ ಆರ್ ) ಅಳೆಯಲು 2001ರ ಜನಗಣತಿಯನ್ನು ಬಳಸಿಕೊಳ್ಳಲಾಗಿದೆ.

ಎಫ್ ಎಸ್ ಆರ್ ಎಂದರೆ ಪ್ರತಿ 100,000 ರೈತರಲ್ಲಿ ಎಷ್ಟು ಆತ್ಮಹತ್ಯೆಗಳ ಸಂಖ್ಯೆ

ವರ್ಷ        ಒಟ್ಟು ಆತ್ಮಹತ್ಯೆಗಳು     ರೈತರ ಆತ್ಮಹತ್ಯೆಗಳು     Se.

2017-18   |         135,445           |        13,775         |              Se. 11.2%

1997-2005ರ ನಡುವೆ 1.5 ಲಕ್ಷರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ ಎನ್‌ಸಿಆರ್‌ಬಿ ದೃಢಪಡಿಸುತ್ತಿದೆ. ರೈತರ ಆತ್ಮಹತ್ಯೆ ದರ ಎಫ್ ಎಸ್ ಆರ್ ಅಂತು 2001 ರ ಜನಗಣತಿ ಹೇಳುವ 12.9ಕ್ಕಿಂತಲೂ ಹೆಚ್ಚು ಆತಂಕಕಾರಿಯಾಗಿದೆ. ಇದೇ ಅವಧಿಯಲ್ಲಿ ಸಾಮಾನ್ಯ ಆತ್ಮಹತ್ಯೆಗಳಲ್ಲಿ (ರೈತರಲ್ಲದವರ) ಪ್ರಮಾಣ ಶೇ. 18 ಹೆಚ್ಚಳ ಕಂಡುಬಂದಿದೆ. ಆದರೆ ರೈತರ ಆತ್ಮಹತ್ಯೆಗಳಲ್ಲಿ ಶೇ. 27 ಪ್ರಮಾಣ ಕಂಡುಬಂದಿದೆ.

2015-16ರಲ್ಲಿ ನ್ಯಾಷನಲ್ ಕೈಂ ರೆಕಾರ್ಡ್ ಬ್ಯೂರೊ ಪ್ರಕಟಿಸಿರುವ ವರದಿಯಂತೆ ಪ್ರತಿ ದಿನ 348 ಆತ್ಮಹತ್ಯೆಗಳು ದಾಖಲಾಗುತ್ತಿದ್ದು ಅವುಗಲ್ಲಿ 48 ಮಾತ್ರ ರೈತರ ಆತ್ಮಹತ್ಯೆಗಳಾಗಿವೆ. 1997ರಿಂದ ಇಲ್ಲಿಯ ತನಕ ಸರಿಸುಮಾರು 2.70 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈತರ ಆತ್ಮಹತ್ಯೆಯ ಪ್ರಥಮ ದಾಖಲಾತಿ

ಕರ್ನಾಟಕ ರಾಜ್ಯದಲ್ಲಿ ಬೀದರ್ ಜಿಲ್ಲೆಯ ಸಿದ್ದೇಶ್ವರ ಗ್ರಾಮದ ಶಿವರಾಜ್ ಮೈನಾಳೆ, ನಮ್ಮಲ್ಲಿ ದಾಖಲಾದ ಪ್ರಥಮ ರೈತರ ಆತ್ಮಹತ್ಯೆ ಆದರೆ 1990ರಿಂದಲೂ ತೆಲಂಗಾಣ ಮತ್ತು ಮಹಾರಾಷ್ಟ್ರದ ವಿದರ್ಭಗಳಲ್ಲಿ ರೈತರ ಆತ್ಮಹತ್ಯೆಗಳು ದಾಖಲಾಗಿವೆ. 2014ರಲ್ಲಿ ದಾಖಲಾಗಿರುವಂತೆ 5650 ರೈತರು ಆತ್ಮಹತ್ಯೆಗೀಡಾಗಿದ್ದಾರೆ. 2004ರಲ್ಲಿ 18,241 ರೈತರು ಆತ್ಮಹತ್ಯೆಗೀಡಾಗಿದ್ದು ದಾಖಲೆಯಾಗಿದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಶೇ. 60 ಪ್ರತಿಶತ ಜನರಿಗೆ ಜನಜೀವನ ನೀಡಿರುವ ಕೃಷಿ ವಲಯ ಇಂದು ಸರಿಸುಮಾರು ಒಟ್ಟು ಆತ್ಮಹತ್ಯೆಗಳಲ್ಲಿ ಶೇ. 11.2 ಪ್ರಮಾಣವನ್ನು ರೈತರ ಆತ್ಮಹತ್ಯೆಗಳೇ ತೆಗೆದುಕೊಂಡಿವೆ.

1966ರಲ್ಲಿ ತಮಿಳುನಾಡಿನಲ್ಲಿ ಆತ್ಮಹತ್ಯೆ ವರದಿ ನೀಡಿದ ಗಣಪತಿ ಮತ್ತು ವೆಂಕೋಬರಾವ್ ಸಮಿತಿ ವರದಿಯಂತೆ :-

1. ರೈತರ ಆತ್ಮಹತ್ಯೆಗೆ ತತ್‌ಕ್ಷಣದ ಕಾರಣಗಳು

1. ಪ್ರಕೃತಿ ವಿಕೋಪದಿಂದ ಬೆಳೆಯ ನಾಶ

ದೇಶದ ಬಹುಪಾಲು ಕೃಷಿ ವಲಯ ಮಳೆಯಾಶ್ರಿತವಾಗಿರುವುದರಿಂದ, ಒಮ್ಮೊಮ್ಮೆ ಅತಿವೃಷ್ಟಿ, ಒಮ್ಮೊಮ್ಮೆ ಅನಾವೃಷ್ಟಿ ಉಂಟಾಗಿ ಸಂಪೂರ್ಣ ಬೆಳೆಯೇ ನಾಶವಾಗುವ ಸಂಭವ ಹೆಚ್ಚಾಗಿರುತ್ತದೆ. ಆಲಿಕಲ್ಲು, ಪ್ರವಾಹ, ಭೀಕರ ಮಳೆ, ಗುಡುಗು – ಸಿಡಿಲು, ಅನಿಯಂತ್ರಿತ ಬರ ಮುಂತಾದ ಪ್ರಕೃತಿ ವಿಕೋಪಗಳಿಂದ ರೈತರ ಕೋಟ್ಯಾಂತರ ರೂ ಬೆಲೆ ಬಾಳುವ ಬೆಳೆ ಕ್ಷಣಾರ್ಧದಲ್ಲಿ ನಾಶ ಹೊಂದುವುದರಿಂದ ಬಹುತೇಕ ರೈತರು ಸಾವಿಗೀಡಾಗುತ್ತಿದ್ದಾರೆ.

2. ಮಾರಕಟ್ಟೆಯ ದರ ಕುಸಿತದ ಪರಿಣಾಮ

ದೇಶದ ಅನೇಕ ರೈತರಿಗೆ ಬೇಡಿಕೆ ಮತ್ತು ಪೂರೈಕೆ, ಮಾರುಕಟ್ಟೆಯ ನಿಯಮಗಳು, ಬೆಲೆ ಏರಿಕೆ, ಹಣದುಬ್ಬರ ಮುಂತಾದ ಕಲ್ಪನೆಗಳೇ ಇರುವುದಿಲ್ಲ. ಇಂತಹದುದರಿಂದಾಗಿ ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ಇರುವುದರಿಂದ ಮಾನಸಿಕವಾಗಿ ಜರ್ಜರಿತವಾಗುವ ಸಂಭವ ಹೆಚ್ಚಾಗಿರುತ್ತದೆ. ಮಾರುಕಟ್ಟೆಗೆ ಅನಿಯಮಿತ ಸರಕುಗಳು ಪೂರೈಕೆಯಾದರೆ ಬೆಲೆ ಪಾತಾಳಕ್ಕಿಳಿಯುತ್ತದೆ. ರೈತರ ತತ್‌ಕ್ಷಣ ಸಾವಿಗೆ ಇದು ಪ್ರಮುಖ ಕಾರಣವಾಗಿದೆ.

3. ಅವೈಜ್ಞಾನಿಕ ಸಾಲದ ಅತಿಯಾದ ಬಡ್ಡಿಯ ಹೊರೆ

ಪ್ರಮುಖ ರೈತರ ಆತ್ಮಹತ್ಯೆ ತನಿಖಾ ಸಮಿತಿಗಳ ವರದಿಯನ್ನಾದರಿಸಿ ಹೇಳುವುದಾದರೆ, ಬಹುತೇಕ ರೈತರ ಸಾವಿಗೆ ಪ್ರಮುಖ ಕಾರಣ ಸಾಂಸ್ಥಿಕೇತರ ಸಾಲಗಳು. ಬಹುತೇಕ ರೈತರು ತಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಬ್ಯಾಂಕುಗಳನ್ನು, ಸಹಕಾರಿ ಸಂಸ್ಥೆಗಳನ್ನು ಆಧರಿಸದೇ ಸ್ವತಂತ್ರವಾಗಿ ಅವೈಜ್ಞಾನಿಕ ಸಾಲ ಮಾಡಿಕೊಂಡು ಬಡ್ಡಿಯ ಕೂಪಕ್ಕೆ ಸಿಲುಕಿರುತ್ತಾರೆ.

2. ಸಾಮಾಜಿಕ ಕಾರಣಗಳು

1. ಹಬ್ಬ – ಆಡಂಬರ – ಮದುವೆ ಸಾಲ

ವಿಪರೀತ ಹಬ್ಬಗಳು, ಅತಿಯಾದ ಖರ್ಚಿನ ದುಬಾರಿ ಮದುವೆಗಳು, ವರದಕ್ಷಿಣೆ, ಸಹಸ್ರಾರು ಆಚರಣೆಗಳು ನಂಬಿಕೆಗಳಿಂದ ರೈತರು ಸಾಲದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಮಾಡಿಯಾದರೂ ಹಬ್ಬಗಳನ್ನು ಆಚರಿಸುವುದು ವಿಶೇಷವಾಗಿದೆ. ಅದರಲ್ಲೂ ವಿಶೇಷ ಸಮಿತಿಗಳು ನೀಡಿದ ಶಿಫಾರಸ್ಸಿನಲ್ಲಿ ರೈತರ ಸಾಲದ ಮೂಲ ಉದ್ದೇಶ ಈ ಸಾಮಾಜಿಕ ಖರ್ಚುಗಳಾಗಿರುತ್ತವೆ.

2. ಮೂಢನಂಬಿಕೆ, ಅವೈಜ್ಞಾನಿಕತೆಯಿಂದ ಸಾಲ

ಬಹುತೇಕ ರೈತರು ಶಿಕ್ಷಣದಿಂದ ವಂಚಿತರಾಗಿದ್ದು ಮೂಢನಂಬಿಕೆಗಳಲ್ಲಿ, ಅತೀಂದ್ರಿಯ ಶಕ್ತಿಗಳಲ್ಲಿ ನಂಬಿಕೆ ಇಟ್ಟಿರುತ್ತಾರೆ. ಅಲ್ಲದೆ ವಿಜ್ಞಾನದ ತಿಳುವಳಿಕೆ ಇವರಿಗೆ ಸಂಪೂರ್ಣ ಕಡಿಮೆ ಇರುತ್ತದೆ. ಆದ್ದರಿಂದ ವಿಪರೀತ ಸಾಲದ ಹೊರೆಯಾಗಲು ಸಾಧ್ಯವಾಗುತ್ತದೆ.

3. ರೋಗಪೀಡಿತರು, ಶಿಸ್ತುರಹಿತ ಜೀವನದಿಂದ ಸಾಲ

ದೇಶದಲ್ಲಿ ಅಪೌಷ್ಟಿಕತೆ ಹೆಚ್ಚಿದ್ದು ಬಹುಪಾಲು ಈ ಗ್ರಾಮೀಣ ಪ್ರದೇಶದ ರೈತರು, ಕಾರ್ಮಿಕರು ಹಾಗೂ ನಗರ ಪ್ರದೇಶದ ಕೊಳಚೆ ಪ್ರದೇಶಗಳಲ್ಲಿ ಇದೆ. ಬಹುಪಾಲು ರೈತರಿಗೆ ಪೌಷ್ಟಿಕ ಆಹಾರ, ಶಿಸ್ತುಬದ್ಧ ಜೀವನ, ತಿನ್ನುವ ಆಹಾರ, ಸಚ್ಛತೆ, ರೋಗಗಳು ಮುಂತಾದವುಗಳ ಕಲ್ಪನೆಯೇ ಇರುವುದಿಲ್ಲ. ಆದುದರಿಂದ ಅಪಾರ ಪ್ರಮಾಣವಾಗಿ ಸಾಲದಿ೦ದ ಕೂಡಿರುತ್ತಾರೆ.

3. ಮನೋ ವೈಜ್ಞಾನಿಕ ಕಾರಣಗಳು

1. ಸದೃಢ ಮನಸ್ಸು ಮತ್ತು ಸದೃಢ ದೇಹದ ಕೊರತೆ

ಮನಸ್ಸು ದೇಹದ ನಿಯಂತ್ರಕ ಹಾಗೆಯೇ ದೇಹದ ಜೈವಿಕ ಕ್ರಿಯೆಗಳು ಮನಸ್ಸನ್ನು ನಿಯಂತ್ರಿಸುತ್ತವೆ ಹಾಗಾಗಿ ಇವೆರಡು ಉತ್ತಮವಾಗಿದ್ದರೆ ಎಂತಹ ಸಮಸ್ಯೆನ್ನಾದರೂ ಧೈರ್ಯದಿಂದ ಎದುರಿಸಬಹುದು. ಅಂತಹುದರಲ್ಲಿ ಬಹುಪಾಲು ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ ಈ ಸದೃಢ ದೇಹ ಮತ್ತು ಸದೃಢ ಮನಸ್ಸಿನ ಕೊರತೆ ಇಲ್ಲದಿರುವುದು ಕ೦ಡುಬರುತ್ತದೆ.

2. ಚಟಗಳು, ಚಂಚಲತೆ ಮತ್ತು ಭಾವೋದ್ವೇಗ

ಬಹುತೇಕ ಆಲೋಹಾಲ್, ಮಾದಕ ದ್ರವ್ಯಗಳು, ವ್ಯಸನಗಳು, ತಂಬಾಕು ಮುಂತಾದ ಚಟಗಳು ಮನುಷ್ಯನ ಮನಸ್ಸಿನ ಮೇಲೆ ಗಾಢ ಪರಿಣಾಮ ಉಂಟುಮಾಡಿ ನಿಯಂತ್ರಿತ ಮನಸ್ಸನ್ನು ಒಡೆದು ಹಾಕುತ್ತವೆ. ಹೀಗಾಗಿ ಸದಾ ಚಂಚಲ ಸ್ವಭಾವ ಮತ್ತು ಭಾವೋದ್ವೇಗಕ್ಕೆ ಒಳಗಾಗುವ ಮನಸ್ಸು ರೈತರ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿರುವುದು ಖಚಿತವಾಗುತ್ತದೆ.

3. ಶಾಂತಿಯುತ, ಸಮಸ್ಯೆ ಪರಿಹಾರಾತ್ಮಕ ಮನಸ್ಸಿನ ಕೊರತೆ

ಆತ್ಮಹತ್ಯೆ ಮಾಡಿಕೊಳ್ಳುವ ಬಹುಪಾಲು ರೈತರಲ್ಲಿ ತತ್ ಕ್ಷಣ ಬಂದೆರಗುವ ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನು ಎದುರಿಸುವ, ಪರಿಹಾರ ಕಂಡುಕೊಳ್ಳುವ ಸುಪ್ತ ಚೇತನ ಮನಸ್ಸಿನ ಪ್ರಬಂಧಗಳು ದೃಢತೆಯ ಕೊರತೆ ಎಂದು ತೋರುತ್ತದೆ. ಅಲ್ಲದೆ ಸದಾ ಅಶಾಂತಿಯುತವಾದ ವಾತಾವರಣ ಅವರನ್ನು ಕಾಡುವುದರಿಂದ ಆತ್ಮಹತ್ಯೆಗೆ ಇದು ಪ್ರಚೋದನೆಯಾಗುತ್ತದೆ.

4. ಆರ್ಥಿಕ ಕಾರಣಗಳು

1. ಅಸಂಘಟಿತ ವಲಯದ ಸಾಲ ಅತಿಯಾಗಿದೆ

ದೇಶದ ಬಹುತೇಕ ರೈತರು ತಮ್ಮ ಸಾಲಕ್ಕಾಗಿ ಸಾಂಸ್ಥಿಕೇತರ ವಲಯವನ್ನು ಆಧರಿಸಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಪಡೆಯದೇ ಸಾಮಾನ್ಯವಾಗಿ ದೇಶೀಯ ಬ್ಯಾಂಕರರು, ಲೇವಾದೇವಿಗಾರರು ಮುಂತಾದವರಿಂದ ಸಾಲ ಪಡೆದವರಾಗಿದ್ದು ಚಕ್ರಬಡ್ಡಿಯ ಕೂಪಕ್ಕೆ ಸಿಲುಕಿ ಸಾಲ ತೀರಿಸಲಾಗದೆ ನೇಣಿಗೆ ಶರಣಾಗುತ್ತಿದ್ದಾರೆ.

2. ಅನಕ್ಷರತೆ ಮತ್ತು ಲೆಕ್ಕ ಪತ್ರಗಳ ದಾಖಲೆ ಇಲ್ಲದಿರುವುದು

ಬಹುಪಾಲು ರೈತರು ತಕ್ಷಣದಿಂದ ವಂಚಿತರಾಗುತ್ತಿದ್ದು, ಅವರಿಗೆ ಮಾರುಕಟ್ಟೆಯ ಬೆಲೆ, ದರ, ಬಡ್ತಿ, ಲೆಕ್ಕಪತ್ರಗಳು ಮುಂತಾದವುಗಳ ಕಲ್ಪನೆಯೇ ಇರುವುದಿಲ್ಲ. ಹೀಗಿರುವುದರಿಂದ ಸಾಮಾನ್ಯವಾಗಿ ಸಾಲದ ದಳ್ಳುರಿಗೆ ಸಿಲುಕಿ ನರಸಿಹೋಗುತ್ತಾರೆ. ಬೀಜ, ಗೊಬ್ಬರಗಳಿಂದ ಹಿಡಿದು ಮಾರುಕಟ್ಟೆಯವರೆಗೂ ಎಲ್ಲರೂ ರೈತರನ್ನು ಶೋಷಿಸುತ್ತಾರೆ.

3. ಹಣಕಾಸಿನ ಯೋಜನೆ ಮಾಹಿತಿ ಕೊರತೆ ಮತ್ತು ಭ್ರಷ್ಟಾಚಾರ

ಸರ್ಕಾರದ ರೈತ ಪರ ಹಣಕಾಸಿನ ಯೋಜನೆಗಳ ಮಾಹಿತಿಯ ಕೊರತೆ ಅತಿಯಾಗಿದೆ. ಬಹುಪಾಲು ರೈತರಿಗೆ ರಾಜ್ಯಸರ್ಕಾರ ಮತ್ತು ಕೇಂದ್ರಸರ್ಕಾರ ಜಾರಿಗೆ ತರುವ ರೈತಪರ ಯಾವ ಯೋಜನೆಗಳ ಅರಿವು ಸಹ ಇರುವುದಿಲ್ಲ. ಅಲ್ಲದೆ ಹುಟ್ಟಿನಿಂದ ಸಾವಿನ ತನಕ ಭ್ರಷ್ಟಾಚಾರ ಎಗ್ಗಿಲ್ಲದೆ ಸಾಗಿದೆ, ಅದರಲ್ಲೂ ಭಾರತದಲ್ಲಿ ಈ ಸಾರ್ವಜನಿಕ ಇಲಾಖೆಗಳಂತೂ ಭ್ರಷ್ಟಾಚಾರದ ಕೂಪಗಳಾಗಿವೆ. ಇದರಿಂದಾಗಿ ರೈತರಿಗೆ ಯಾವುದೇ ಹಣಕಾಸಿನ ಸೌಲಭ್ಯ ಮತ್ತು ಮಾಹಿತಿ ಎರಡೂ ಸಿಗುತ್ತಿಲ್ಲ.

5. ಅಂತರರಾಷ್ಟ್ರೀಯ ಕಾರಣಗಳು

1. ಡಬ್ಲ್ಯುಟಿಓ ಮತ್ತು ಭಾರತದ ಮಾರುಕಟ್ಟೆ (ವಿಶ್ವ ವ್ಯಾಪಾರ ಸಂಘಟನೆ)

1995ರ ನಂತರ ಗ್ಯಾಟ್ ಸಂಘಟನೆಯು (ಡಬ್ಲ್ಯುಟಿಓ) ವಿಶ್ವ ವ್ಯಾಪಾರ ಸಂಘಟನೆಯಾಗಿ ಬದಲಾದ ನಂತರ ತನ್ನ ಬಹುಪಕ್ಷೀಯ ಒಪ್ಪಂದಗಳಾಗಿ ಗ್ಯಾಟ್, ಗ್ರಾಟ್ಸ್,
ಬಿಕ್ಸ್‌ ಮತ್ತು ಟ್ರಿಮ್ಸ್‌ನ್ನು ಜಾರಿಗೆ ತಂದಿತು. ಇವುಗಳು ಕಾಲಕಾಲಕ್ಕೆ ತರುವ ನೀತಿಗಳಿಂದಾಗಿ ವಿದೇಶದ ಮಾರಾಟ ಸರಕುಗಳು ದೇಶದ ಗಡಿಯನ್ನು ಸುಲಭವಾಗಿ ದಾಟುತ್ತವೆ. ಇದರಿಂದಾಗಿ ದೇಶದ ಕೃಷಿ ಸರಕುಗಳ ಬೆಲೆ ಅತ್ಯಂತ ಕಡಿಮೆಯಾಗಿ ರೈತರು ನಷ್ಟ ಅನುಭವಿಸುವಂತಾಗಿದೆ.

2. ಉದಾರೀಕರಣ, ಖಾಸಗೀಕರಣ, ಜಾಗತೀಕರಣ

1991ರಲ್ಲಿ ಭಾರತ ದೇಶ ಜಾರಿ ಮಾಡಿದ ಈ ವಿನೂತನ ಆರ್ಥಿಕ ನೀತಿಯು ಕೃಷಿಕರಿಗೆ ಒಂದು ಕಡೆ ವರದಾನವಾಗಿದ್ದು ಮತ್ತೊಂದು ಕಡೆ ಶಾಪವಾಗಿದೆ. ಆದ್ದರಿಂದ ವಿದೇಶಿ ಮೂಲದ ಬೀಜ ಉತ್ಪಾದನಾ, ಕೀಟನಾಶಕ ಉತ್ಪಾದನಾ ಹಾಗೂ ಕೃಷಿ ಉಪಕರಣಗಳನ್ನು ತಯಾರಿಸಿ ಕಂಪನಿಗಳ ಜೇಬು ತುಂಬಿಸಿಕೊಂಡಿದ್ದು ರೈತರ ಜೇಬು ಖಾಲಿಯಾಗಿದೆ. ಇವೆಲ್ಲ ಪಾಶ್ಚಿಮಾತ್ರ ರಾಷ್ಟ್ರಗಳ ತಂತ್ರಗಳಾಗಿವೆ.

ವಿದೇಶಿ ನೇರಹೂಡಿಕೆ (ಎಫ್ ಡಿಐ) ಮತ್ತು ದೇಶದ ಕೃಷಿ
ಸ್ವಾತಂತ್ರ್ಯದ ನಂತರ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದ ಭಾರತೀಯರಿಗೆ ಹೊಸ ಆರ್ಥಿಕ ನೀತಿಯಿಂದ ವಿವಿಧ ಹೂಡಿಕೆಗಳ ಪರಿಚಯವಾಗುತ್ತದೆ. ವಿದೇಶಿ ನೇರ ಹೂಡಿಕೆಗೆ ಕೆಲವೊ೦ದು ಕೃಷಿ ಕ್ಷೇತ್ರದ ವಲಯಗಳಿಗೆ ಅನುಮತಿ ನೀಡಲಾಗಿದ್ದು, ಆ ವಲಯ ಆಧುನಿಕತೆಯಿಂದ ಜಾಗತಿಕವಾಗಿ, ಆರ್ಥಿಕವಾಗಿ ಮುಂದುವರಿದಿದ್ದು ಸಂಪ್ರದಾಯಿಕ ಬೆಳೆ ಬೆಳೆಯುವ ಕೃಷಿಕರ ಗೋಳು ಕೇಳದಾಗಿದೆ.

6. ಕೃಷಿ ಸಂಬಂಧಿತ ಕಾರಣಗಳು

1. ದುಬಾರಿಯಾದ ಬಿತ್ತನೆ ಬೀಜ, ಕೃಷಿ ಸಲಕರಣೆಗಳು : ಬಹುರಾಷ್ಟ್ರೀಯ ಕಂಪನಿಗಳು ಕೃಷಿಗೆ ಸಂಬಂಧಿಸಿದ ಎಲ್ಲ ಬೀಜ, ಗೊಬ್ಬರ, ಸಲಕರಣೆ, ಯಾಂತ್ರಿಕ ಸೌಲಭ್ಯ ಮುಂತಾದವುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವುದರಿಂದ ದೇಶದ ಕೃಷಿ ತುಂಬಾ ದುಬಾರಿಯಾಗಿದೆ. ಅಲ್ಲದೆ ಬಡತನದ ವಿಷ ವೃತ್ತದಲ್ಲಿ ಸಿಲುಕಲು ಇದು ಪ್ರಮುಖ ಕಾರಣವಾಗಿದೆ.

2. ವಿದ್ಯುತ್, ನೀರು, ಫಲವತ್ತತೆ, ಸಾರಿಗೆ ಕೊರತೆ : ಕೃಷಿಗೆ ಅತ್ಯಮೂಲ್ಯವಾಗಿ ಬೇಕಾಗಿರುವುದು ಮೂಲಭೂತ ಸೌಲಭ್ಯಗಳು, ಅದರಲ್ಲೂ ವಿದ್ಯುತ್‌ ಶಕ್ತಿ, ನೀರು ಫಲವತ್ತಾದ ಮಣ್ಣು, ಉತ್ತಮವಾದ ಸಾರಿಗೆ, 1947ರಲ್ಲಿ ಸ್ವಾತಂತ್ರ್ಯ ಪಡೆದ ದೇಶವು ಇಂದಿಗೂ ಈ ಮೂಲ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಆದುದರಿಂದ ದೇಶದ ಕೃಷಿ ವ್ಯವಸ್ಥೆಯು ತುಂಬಾ ದುಬಾರಿಯಾಗಿದೆ. ಅಲ್ಲದೆ ಮೂಲಭೂತ ಸಮಸ್ಯೆಗಳು ಕೃಷಿಯಲ್ಲಿ ಉತ್ಪಾದನೆಗೆ ಸಹಕರಿಸುತ್ತಿಲ್ಲ.

3. ವಿಮೆ, ಮಾರುಕಟ್ಟೆನಿಯಮಗಳಲ್ಲಿ ಅತಿಯಾದ ಗೊಂದಲ: ಬೇಡಿಕೆ, ಪೂರೈಕೆಯ ಆಧಾರದ ಮೇಲೆ ಬೆಲೆ ನಿಗದಿಯಾಗುವುದು ಬಿಟ್ಟರೆ ರೈತರಿಗೆ ವಿಮೆಯ ಸೌಲಭ್ಯಗಳಾಗಲಿ, ಸರ್ಕಾರದಿಂದ ಖಾಸಗಿ ಲೇವಾ ದೇವಿಗಾರರ ಕಡಿವಾಣವಾಗಲಿ, ಪ್ರವಾಹ ನಿಯಂತ್ರಣ, ಬರ ಪರಿಹಾರ ಯೋಜನೆಗಳಾಗಲಿ, ಸಹಾಯ ಧನವಾಗಲಿ, ಅಂತರರಾಷ್ಟ್ರೀಯ ಕೃಷಿಯ ಪರಿಕಲ್ಪನೆಯಾಗಲಿ ಯಾವುದು ಉತ್ತಮವಾಗಿರುವುದಿಲ್ಲ. ಆದುದರಿಂದ ರೈತರು ಆರ್ಥಿಕವಾಗಿ ತುಂಬಾ ನಷ್ಟಕ್ಕೆ ಈಡಾಗಿ ಸಾವಿಗೀಡಾಗುತ್ತಿದ್ದಾರೆ.

7. ಇತರೆ ಕಾರಣಗಳು

1. ರೈತರ, ರೈತಪರವಾದ ಹೋರಾಟಗಳು ನಶಿಸಿವೆ :ಪ್ರೊ. ಎಂ.ಪಿ. ನಂಜುಂಡಸ್ವಾಮಿ ಮತ್ತು ಪೂರ್ಣಚಂದ್ರ ತೇಜಸ್ವಿಯಂತವರು ಬಹುಚಾತುರ ಪತ್ರಕರ್ತರಾದ ಪಿ. ಲಂಕೇಶ್, ರಾಮ್ ದಾಸ್ ರಂತವರು ರೈತ ಚಳುವಳಿಯನ್ನು ಮುನ್ನಡೆಸುತ್ತಿದ್ದಾಗ, ಸರ್ಕಾರಗಳು ರೈತರ ಮನವಿಗೆ, ರೈತರ ಸಾವಿಗೆ ಬಹುಬೇಗ ಸ್ಪಂದಿಸುತ್ತಿದ್ದವು. ಪ್ರಸ್ತುತದಲ್ಲಿ ಈ ತರಹದ ಯಾವುದೇ ಸಂಘಟನೆಗಳು ಯಶಸ್ವಿಯಾಗಿ ರೈತರನ್ನು ಮುನ್ನಡೆಸದೇ ಇರುವುದು ರೈತರ ಸಾವಿಗೆ, ವ್ಯತಿರಿಕ್ತ ಪರಿಣಾಮಕ್ಕೆ ಪ್ರಮುಖ ಕಾರಣವಾಗಿದೆ.

2. ತನಿಖಾ ವರದಿಗಳು ಕ್ರಮಬದ್ಧವಾಗಿ ಜಾರಿಯಾಗಲ್ಲ : 1966ರಲ್ಲಿ ತಮಿಳುನಾಡಿನ ಗಣಪತಿ ಮತ್ತು ವೆಂಕೋಬರಾವ್ ಸಮಿತಿ, ನಂದಿಯವರು ನೀಡಿದ ಪಶ್ಚಿಮ ಬಂಗಾಳದ ವರದಿ, ಉತ್ತರ ಕರ್ನಾಟಕದಲ್ಲಿ ಹೆಗಡೆಯ ಸರ್ಕಾರದ ವರದಿ, ಆಂಧ್ರಪ್ರದೇಶದಲ್ಲಿ ರೆಡ್ಡಿಯವರ ಸರ್ಕಾರದ ವರದಿ, ಪಿ. ಸಾಯಿನಾಥ್‌ರವರ ವರದಿ, ಗೊಯೆಂಕಾ ವರದಿ, ವೀರೇಶ್‌ ವರದಿ, ಪ್ರೊ. ನಾಗರಾಜ್ ವರದಿಗಳೆಲ್ಲವೂ ಕೇವಲ ರೈತರ ಕಣ್ಮರೆಸುವ ತಂತ್ರವಾಗಿದ್ದು, ಇವರು ನೀಡಿದ ಯಾವುದೇ ವರದಿಗಳು ಅನುಷ್ಠಾನವಾಗಿಲ್ಲ ಆದ್ದರಿಂದ ಇಂದಿಗೂ ರೈತರ ಆತ್ಮಹತ್ಯೆಗಳು ನಿಂತಿಲ್ಲ.

3. ಸಾಲ ಮನ್ನಾ ಹಂತದ ಅವೈಜ್ಞಾನಿಕ ಯೋಜನೆಗಳ ಜಾರಿ : ಅನೇಕ ರಾಜ್ಯಗಳ ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಮಾಡುವಂತಹ ಯೋಜನೆಯನ್ನು ರೈತರ ಆತ್ಮಹತ್ಯೆಗೆ ಪರಿಹಾರವಾಗಿ ಕೊಡ ಹೊರಟಿರುವುದು ಮೂರ್ಖತನದ ಪರಮಾವಧಿಯೇ ಸರಿ. ಚಿಕ್ಕ ಹಿಡುವಳಿ ಹೊಂದಿದವರಿಗೆ ಸಾಲ ದೊರೆಯುವುದು, ಸಾಲ ಮನ್ನಾ ಮಾಡಿದರೆ ಲಾಭವಾಗುವುದು ಮಾತ್ರ ದೊಡ್ಡ ಭೂ ಹಿಡುವಳಿ ರೈತರಿಗೆ. ಆದ್ದರಿಂದ ಈ ಸಾಲ ಮನ್ನಾದಂತಹ, ಅಪಾರದರ್ಶಕ, ಅನಿರೀಕ್ಷಿತ ಯೋಜನೆಗಳು ರೈತರ ಸಾವಿಗೆ ಪರಿಹಾರವಲ್ಲ.

ಈ ಮುಂತಾದ ಕಾರಣಗಳಿಂದಾಗಿ ಪ್ರತಿ ವರ್ಷ ದೇಶದ ಬೆನ್ನೆಲುಬಾದ ರೈತರು ನಿರಂತರವಾಗಿ ಸಾಯುತ್ತಾ ಬಂದಿರುವುದು ಎಲ್ಲಾ ಸರ್ಕಾರಗಳಿಗೆ ತಲೆನೋವಾಗಿ ಪರಿಣಮಿಸಿದೆ. ಆದ್ದರಿಂದ ಕೆಲವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಸರ್ಕಾರ ಇವುಗಳಿಗೆ ಪರಿಹಾರ ಸೂಚಿಸಲು ಅನೇಕ ಸಮಿತಿಗಳೂ ರಚಿಸಿವೆ, ಅಂತಹುದರಲ್ಲಿ 1990ರಲ್ಲಿ ನೇಮಕಗೊಂಡ ಜಿ.ಬಿ. ಶಿವಕುಮಾರ್ ಸಮಿತಿ ಮತ್ತು 2002ರಲ್ಲಿ ನೇಮಕಗೊಂಡ ವೀರೇಶ್ ಸಮಿತಿಗಳ ವರದಿಗಳು ರಾಜ್ಯದಲ್ಲಿ ಬಹುಪ್ರಮುಖವಾಗಿವೆ.

ಜಿ.ಬಿ. ಶಿವಕುಮಾರ್ ಸಮಿತಿ, 1990

ಕರ್ನಾಟಕ ರಾಜ್ಯಸರ್ಕಾರ 1990ರಲ್ಲಿ ನೇಮಿಸಿದ ಜಿ.ಬಿ. ಶಿವಕುಮಾರ್ ಸಮಿತಿ, ರಾಜ್ಯದ ರೈತರ ಆತ್ಮಹತ್ಯೆಗೆ ಪ್ರಮುಖ ಕಾರಣಗಳನ್ನು ಸೂಚಿಸುತ್ತಾ, ಮದುವೆಯ ಸಾಲ, ಹಬ್ಬ ಹರಿದಿನ, ವೈಯಕ್ತಿಕ ಕುಡಿತ, ದುಶ್ಚಟಗಳು, ಅನಾರೋಗ್ಯ ಮುಂತಾದವುಗಳು ರೈತರ ಆತ್ಮಹತ್ಯೆಗೆ ಪ್ರಮುಖ ಕಾರಣಗಳಾಗಿದ್ದು ಸರ್ಕಾರದಿಂದ ಈ ಕುಟುಂಬಗಳಿಗೆ ಯಾವುದೇ ನೆರವು ಬೇಡ ಎಂದು ಸೂಚಿಸಿತು. ತಾನು ಅಧ್ಯಯನ ಮಾಡಿದ 60 ಕೇಸುಗಳಲ್ಲಿ ಕೇವಲ 1 ಮಾತ್ರ ಬೆಳೆ ವೈಫಲ್ಯದಿಂದ ಆತ್ಮಹತ್ಯೆ ಸಂಭವಿಸಿದ್ದು, ಮತ್ತೊಂದು ಬೆಳೆ ಸಾಲ ತೀರಿಸಲಾಗದೆ ಮರಣ ಹೊಂದಿದ ವರದಿ ಬಂದಿದೆ. ಆದ್ದರಿಂದ ಈ ಕುಟುಂಬಗಳಿಗೆ ಯಾವುದೇ ಆರ್ಥಿಕ ನೆರವು ನೀಡುವುದು ಬೇಡ ಹಾಗೂ ಸಾಲ ಮನ್ನಾ ಮಾಡುವುದು ಈ ಸಮಸ್ಯೆಗೆ ಪರಿಹಾರವಲ್ಲ ಎಂದು ಸೂಚಿಸಿತು. ಹಾಗಾಗಿ ಇದು ಜಾರಿಗೆ ಯಶಸ್ಸು ಪಡೆಯಲಿಲ್ಲ. ಈ ವರದಿಯ ನೈಜತೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.

ವೀರೇಶ್‌ ಸಮಿತಿ ವರದಿ – 2002

ಕರ್ನಾಟಕ ರಾಜ್ಯ ಸರ್ಕಾರ 2002ರಲ್ಲಿ ಮತ್ತೊಮ್ಮೆ ರೈತರ ಆತ್ಮಹತ್ಯಾ ತನಿಖಾ ವರದಿ ಹಾಗೂ ಸುಧಾರಣಾ ಸಲಹೆಗಳನ್ನು ನೀಡಲು ವೀರೇಶ್‌ ರವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಇದು ನೀಡಿದ ವರದಿಯು ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಸಿದ್ದು, ತುಂಬಾ ವಿವಾದಕ್ಕೆಡೆ ಮಾಡಿಕೊಟ್ಟಿತ್ತು. ಆದ್ದರಿಂದ ಬಹು ಸರ್ಕಾರಗಳು ಈ ಸಮಿತಿಯ ವರದಿಯನ್ನು ಯಶಸ್ವಿಯಾಗಿ ಅನುಷ್ಟಾನ ಮಾಡಲಾಗಿಲ್ಲ. ಇದರಲ್ಲಿ ತಿಳಿಸಿದಂತೆ ರಾಜ್ಯದ ರೈತರ ಸಾವಿಗೆ ಮೂಲಕಾರಣ ಅವರ ವೈಯಕ್ತಿಕ ಸಾಲ. ಹೀಗಾಗಿ ಮದುವೆ, ಹಬ್ಬ, ಆಡಂಬರ, ಸಾಮಾಜಿಕ ಖರ್ಚು ಮುಂತಾದವುಗಳಾಗಿದ್ದು, ಪರಿಹಾರ ನೀಡುವುದು ರೈತರ ಆತ್ಮಹತ್ಯೆಗೆ ತಡೆಯೊಡ್ಡುವ ಪರಿಹಾರವಾಗಲಾರದು. ಆದ್ದರಿಂದ ಬಹುಪಾಲು ಸಲಹೆಗಳು ಯಶಸ್ವಿಯಾಗಿ ಜಾರಿಯಾಗಿರುವುದಿಲ್ಲ.

ಪರಿಹಾರ ಕ್ರಮಗಳು

1. ಅಸಂಘಟಿದ ವಲಯದ ಸಾಲ ಸಂಸ್ಥೆಗಳಿಗೆ ಕಡಿವಾಣ ಹಾಕುವುದು.

2. ರೈತರ ಮೂಲ ಸಮಸ್ಯೆಗಳಾದ ವಿದ್ಯುತ್, ರಸ್ತೆ, ಸಾರಿಗೆ, ಬೀಜಗೊಬ್ಬರ ಮುಂತಾದ ಸೌಲಭ್ಯಗಳನ್ನು ಒದಗಿಸುವುದು.

3. ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಓ) ನಿಯಮಗಳನ್ನು ಸರಳೀಕರಣಗೊಳಿಸುವುದು.

4. ದೇಶದ ರೈತರಿಗೆ ಹೆಚ್ಚು ಸಬ್ಸಿಡಿ (ಸಹಾಯ ಧನ) ನೀಡುವುದು

5. ಕೃಷಿ ವಿಮಾ ಯೋಜನೆಗಳನ್ನು ಹೆಚ್ಚು ಹೆಚ್ಚು ಜಾರಿಗೊಳಿಸುವುದು

6. ವೀರೇಶ್‌ ಸಮಿತಿ, ದ್ವಾರಕನಾಥ್, ಪಿ. ಸಾಯಿನಾಥ್, ಜಿ.ಬಿ. ಶಿವಕುಮಾರ್ ಸಮಿತಿ ವರದಿ ಅನುಷ್ಠಾನ ಮಾಡುವುದು.

7. ಮುಂಜಾಗ್ರತೆ, ಪ್ರವಾಹ ನಿಯಂತ್ರಣ, ಹವಾಮಾನ ಇಲಾಖೆ ಮುನ್ಸೂಚನೆ ಬಗ್ಗೆ ಗಮನ ಹರಿಸುವುದು

8. ಬಹುತೇಕ ರೈತರ ದೈಹಿಕ ಮತ್ತು ಮಾನಸಿಕ ಸ್ಥೆರ್ಯವನ್ನು ಹೆಚ್ಚಿಸುವುದು

9. ಸೂಕ್ತವಾದ ಮಾರುಕಟ್ಟೆ ನೀತಿ ನಿಯಮಗಳನ್ನು ರೂಪಿಸುವುದು

10. ಬಹುರಾಷ್ಟ್ರೀಯ ಕಂಪನಿಗಳ ಜಾಹೀರಾತು ಮಾರುಕಟ್ಟೆಗೆ ಕಡಿವಾಣ ಹಾಕುವುದು

11. ಬೆಳೆ ಸಾಲ ಮನ್ನಾ ಮಾಡುವ ಅವೈಜ್ಞಾನಿಕ ಯೋಜನೆಗಳನ್ನು ಜಾರಿ ಮಾಡುವ ಬದಲು ಎಮೆ, ಸಬ್ಸಿಡಿ, ಪರಿಹಾರದಂತಹ ಕಾಠ್ಯಕ್ರಮಗಳ ಅನುಷ್ಠಾನ ಮಾಡುವುದು

12. ಸಾರ್ವಜನಿಕ ವಲಯದ, ಕೃಷಿ ವಲಯದ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರವನ್ನು ಹೋಗಲಾಡಿಸಿ, ಕಾವ್ಯದಕ್ಷತೆ ಹೆಚ್ಚಿಸುವುದು

13. ಸಾರ್ವಜನಿಕ ಸಾಲ, ಸಂಘಟಿತ ಸಾಲ ಸಂಸ್ಥೆಗಳ, ಶೂನ್ಯ ಬಡ್ಡಿಯ ಸಾಲದ ಬಗ್ಗೆ ೈತರಲ್ಲಿ ಜಾಗೃತಿ ಮೂಡಿಸುವುದು.

14, ದಾಖಲೆ, ಲೆಕ್ಕಪತ್ರ, ಸಾಲ ಬಡ್ಡಿಗಳ ಬಗ್ಗೆ ಅರಿವು ಮೂಡಿಸುವುದು.

15. ರೈತರ ಸಂಪರ್ಕ ಕೇಂದ್ರ, ರೈತ ಸಂಜೀವಿನಿ, ರೈತ್ರ ನಿಧಿಗಳನ್ನು ಸ್ಥಾಪಿಸುವುದು

16. ಕನಿಷ್ಟ ಬೆಂಬಲ ಬೆಲೆ ಎಂಎಸ್‌ಪಿ, ಸಾಮಾಜಿಕ ಭದ್ರತಾ ಕಾಠ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವುದು

17. ರೈತರ ಆರೋಗ್ಯ ಸುಧಾರಣೆಗೆ ವಿನೂತನ ಯೋಜನೆ ಜಾರಿಗೊಳಿಸುವುದು

18. ಕೃಷಿಯ ಮೇಲಿನ ಮಿತಿ ಮೀರಿದ ಅವಲಂಬನೆಯನ್ನು ತಗ್ಗಿಸುವುದು

19. ಸಾಮಾಜಿಕ ಮೌಡ್ಯಗಳು, ಅವೈಜ್ಞಾನಿಕ ಕ್ರಮಗಳಿಗೆ ಕಡಿವಾಣ ಹಾಕುವುದು 20. ಸರ್ಕಾರ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ರೈತರಿಗೆ ನೆರವು ನೀಡುವುದು

ಆತ್ಮಹತ್ಯೆಗಳು ಮತ್ತು ರೈತರ ಸಾವುಗಳು ದೇಶದ ನೈತಿಕ, ಆರ್ಥಿಕ, ರಾಜಕೀಯ ಅಧಃಪತನದ ಸಂಕೇತವಾಗಿದ್ದು, ಇವುಗಳನ್ನು ಸಂಪೂರ್ಣ ಕಡಿಮೆ ಮಾಡುವುದು, ತೊಡೆದು ಹಾಕುವುದು ಎಲ್ಲ ಸರ್ಕಾರಗಳ ಆದ್ಯ ಕರ್ತವ್ಯವಾಗಬೇಕು. ಇಸ್ರೇಲ್‌ನಂತಹ ದೇಶದಲ್ಲಿ ಕೃಷಿ ವಿಶ್ವದೆಲ್ಲೆಡೆ ಅತ್ಯಂತ ಮುಂದುವರಿದಾಗಿದ್ದು ಪ್ರತಿಶತ ದೇಶದ ಅರ್ಧಕ್ಕೂ ಅಧಿಕ ಜನರಿರುವ ಕೃಷಿ ವಲಯ ದೇಶದಲ್ಲಿ ರೋಗಗ್ರಸ್ಥವಾಗಿರುವುದು ದೇಶದ ಅನಭಿವೃದ್ಧಿಯ ಸಂಕೇತ, ಲಿಯೋಟಾಲ್‌ ಸ್ಟಾಯ್‌ ನಿಂದ ಹಿಡಿದು ವಿಶ್ವಮಾನವ ಕುವೆಂಪುರವರ ತನಕ, ನೇಗಿಲ ಯೋಗಿಯನ್ನು ದೇಶದ ಒಂದು ಪರಿಸರ ಪೂರ್ವಕ, ಪ್ರಜ್ಞಾಪೂರ್ವಕ, ನೈಜ ಅಭಿವೃದ್ಧಿಯ ಸಂಕೇತಗಳೆಂದೇ ಬಿಂಬಿಸಿದ್ದಾರೆಯೇ ಹೊರತು ಬೇರೇನೂ ಅಲ್ಲ. ಎಮಿಲಿ ಡರ್ಬಿಮ್ ಹೇಳುವಂತೆ ‘The Sucide is deviant behaviour’. ಆದ್ದರಿಂದಾಗಿ ದೇಶದ ಪ್ರಗತಿ ಬರೀ ಹಣಗಳಿಕೆಯಲ್ಲಿಲ್ಲ ಬದಲಿಗೆ ಸದೃಢ ಮನಸ್ಸುಗಳ ನಿರ್ಮಾಣದಲ್ಲಿದೆ. ಭವ್ಯ ಭಾರತ ಸದೃಢ ಮನಸ್ಸುಗಳ ನಿರ್ಮಾಣದ ಕಡೆ ಸಾಗಿದರೆ ರೈತರ ಆತ್ಮಹತ್ಯೆಗೆ ಪರಿಹಾರವಿದೆ.

“ಕರ್ನಾಟಕ ರೈತರ ಆತ್ಮಹತ್ಯೆ
(Formers Suicide in Karnataka)”:

ಆರ್.ಎಸ್. ದೇಶಪಾಂಡೆ ಮತ್ತು ಸರೋಜ ಅರೋರ ಅವರ ಕೃತಿಯಾದ “ಕೃಷಿಯ ಬಿಕ್ಕಟ್ಟು ಮತ್ತು ರೈತರ ಆತ್ಮಹತ್ಯೆಗಳು” (Agranan Crisis and Farmer Suicides) ಕ್ಷೇತ್ರಕಾರ ಆಧಾರಿತ ಅಧ್ಯಯನವಾಗಿದೆ. 2007ರಲ್ಲಿ ಮೂಸೂರಿಯ ಲಾಲ್‌ ಬಹುದ್ದೂರ್ ಶಾಸ್ತ್ರೀ ಆಡಳಿತಾತ್ಮಕ ರಾಷ್ಟ್ರೀಯ ಅಕಾಡೆಮಿಯು ಈ ಅಧ್ಯಯನವನ್ನು ಕೈಗೊಂಡಿದ್ದರೆ, ರೈತರ ಆತ್ಮಹತ್ಯೆಯನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ.

ಭಾರತದಲ್ಲಿ 1993-2003 ರವರೆಗೆ 1,00,248 ಆತ್ಮಹತ್ಯೆಗಳು [ರೈತರ ] ಉತ್ತರ ಪ್ರದೇಶದ[UP] ಕಬ್ಬು ಬೆಳೆಗಾರರು. ಆಂಧ್ರಪ್ರದೇಶದ ಹತ್ತಿ ನಡೆದಿದೆ. ಬೆಳೆಗಾರರು, ಕೇರಳದ ಸಾಂಬಾರು ಪದಾರ್ಥ ಬೆಳೆಗಾರರು, ಕರ್ನಾಟಕದ ಕಾಫಿ ಬೆಳೆಗಾರರಲ್ಲಿಯೂ ಸಹ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಅಲ್ಲದೆ ಓರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲೂ ಈ ಪ್ರಕರಣಗಳು ಕಂಡು ಬಂದಿವೆ. ಕೃಷಿ ಬಿಕ್ಕಟ್ಟಿನ ಗಾತ್ರ ಹೆಚ್ಚಿನ ಸಂದರ್ಭದಲ್ಲಿ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಗಳು ವರದಿಯಾಗಿರಲಿಲ್ಲ. ಅಸಂಘಟಿತ ಕೃಷಿಕರು ತಮಗೆ ಆದ ಕೃಷಿ ನಷ್ಟಕ್ಕಾಗಿ ತಾವು ಬೆಳೆದ ವಸ್ತುಗಳನ್ನು ರಸ್ತೆಗಳ ಮೇಲೆ ಚೆಲ್ಲಿ ಅಥವಾ ತಾವು ಬೆಳೆದ ಬೆಳೆಯನ್ನು ಬೆಂಕಿಗೆ ಹಾಕಿ, ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು. ಆದಾಗ್ಯೂ ರೈತರ ಆತ್ಮಹತ್ಯೆಗಳು ಇಡೀ ಅರ್ಥವ್ಯವಸ್ಥೆಯಲ್ಲಿ ರೈತರು ತಮ್ಮ ಗುರುತನ್ನು (ಅನನ್ಯತೆ) ಸ್ಥಾಪಿಸುವ ಸೂಚನೆಯಾಗಿದೆ.

ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ವರದಿಯ ಪ್ರಕಾರ 2003 ಮತ್ತು 2007ರವರೆಗೆ ಒಟ್ಟು 1193 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕೇಂದ್ರ ಸರ್ಕಾರ 2000-2001 ರಿಂದ 2005-06ರ ತನಕ ಸುಮಾರು 8600 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವ್ಯತಿರಿಕ್ತ ವರದಿ ನೀಡಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇದು ಅತ್ಯಂತ ಹೆಚ್ಚಿನ ಪ್ರಮಾಣದ್ದಾಗಿದೆ. ಆತ್ಮಹತ್ಯೆಯ ಪ್ರಮಾಣದಲ್ಲಿ ಮಹಾರಾಷ್ಟ್ರವು ಮೂರನೆಯ ಸ್ಥಾನದಲ್ಲಿದೆ. ಆದಾಗ್ಯೂ ವೀರೇಶ್‌ ವರದಿಯಲ್ಲಿ ನೀಡಲಾಗಿರುವ ಅಂಕಿ ಅಂಶಗಳ ಮತ್ತು ಇತರೆ ಪತ್ರಿಕಾ ವರದಿಗಳ ಆಧಾರದ ಮೇಲೆ 5000ಕ್ಕೂ ಹೆಚ್ಚಿನ ಆತ್ಮಹತ್ಯೆಗಳಾಗಿರುವುದು ತಿಳಿಯುತ್ತದೆ.

ರಾಷ್ಟ್ರೀಯ ಸಾಮಾಜಿಕ ಕಾವಲು ಒಕ್ಕೂಟ (The National Social Watch Coalitation -NCWC):
11,387 ರೈತರು 2001 ಮತ್ತು 2006ರ ಮಧ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿ ಮಾಡಿದೆ. ಪ್ರಾಂತ್ಯಮಟ್ಟದಲ್ಲಿ ಗಮನಿಸುವುದಾದರೆ ರೈತರ ಆತ್ಮಹತ್ಯೆಯ ಪ್ರಮಾಣ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಿನದಾಗಿದ್ದರೆ, ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಪ್ರಾಂತ್ಯ, ನಂತರದ ಸ್ಥಾನದಲ್ಲಿದೆ. ಹಳೆಯ ಮದ್ರಾಸ್ ಪ್ರಾಂತ್ಯ ಮತ್ತು ಕೊಡಗಿನಲ್ಲಿ ಕಡಿಮೆ ಪ್ರಮಾಣದಲ್ಲಿದೆ. ಹಳೆಯ ಮೈಸೂರು ಮತ್ತು ಮುಂಬೈ ಪ್ರಾಂತಗಳು ನೀರಾವರಿಗೆ ಹೆಸರಾಗಿದ್ದರೂ, ಅಲ್ಲಿನ ಆತ್ಮಹತ್ಯೆಯ ಪ್ರಕರಣಗಳು ರಾಜ್ಯವು ನೀರನ್ನು ನ್ಯಾಯಯುತವಾಗಿ ಹಂಚಿಕೆ ಮಾಡಿಲ್ಲವೆಂಬುದನ್ನು ಪ್ರತಿಫಲಿಸುತ್ತದೆ. ಪ್ರದೇಶಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತನು ನಾಲೆಯ ಕೊನೆಭಾಗದಲ್ಲಿ ವಾಸವಾಗಿದ್ದರು ಹೆಚ್ಚಿನವರು.

ಎರಡು ವರ್ಷಗಳಲ್ಲಿ ಆತ್ಮಹತ್ಯೆಯ ಪ್ರಕರಣಗಳು ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶಗಳಾದ ಗುಲ್ಬರ್ಗಾ, ಬೀದರ್ ಪ್ರದೇಶಗಳಲ್ಲಿ ಹೆಚ್ಚಾಗಿತ್ತು. 2000ದ ನಂತರ ಮಂಡ್ಯ, ಹಾಸನ, ಶಿವಮೊಗ್ಗ, ದಾವಣಗೆರೆ, ಕೊಪ್ಪಳ, ಚಿಕ್ಕಮಗಳೂರು ಮತ್ತು ಕೊಡಗೂ ಜಿಲ್ಲೆಗಳಿಗೂ ವಿಸ್ತರಿಸಿತು.

ರೈತರ ಆತ್ಮಹತ್ಯೆಗಳ ಕಾರಣಗಳು (Of Farmer’s Suicide):

ಆರ್.ಎಸ್. ದೇಶಪಾಂಡೆ ಮತ್ತು ಸರೋಜ ಅರೋರ ಪ್ರಕಾರ ರೈತರ ಆತ್ಮಹತ್ಯೆಗಳನ್ನು ತಿಳಿಯಲು ಅವರು ನೀಡಿದ ಕಾರಣಗಳು ಈ ರೀತಿಯಾಗಿವೆ.

1) ಘಟನೆಗಳು

2) ಒತ್ತಡಕಾರಕಗಳು

3) ಕಾರಣಕರ್ತರು

4) ಪ್ರಚೋದಕಗಳು

1) ಘಟನೆಗಳು (Events):

ಬೆಳೆಯ ನಷ್ಟ, ಕೊಳವೆಬಾವಿಯ ವೈಫಲ್ಯ, ಬೆಲೆ ಕುಸಿತ, ಮಗಳ ವಿವಾಹ, ಕೌಟುಂಬಿಕ ಸಮಸ್ಯೆಗಳು ಮತ್ತು ಆಸ್ತಿ ವಿವಾದಗಳನ್ನು ‘ಘಟನೆ’ಗಳ ಪಟ್ಟಿಗೆ ಸೇರಿಸಿದ್ದಾರೆ.

2) ಒತ್ತಡಕಾರಕಗಳು (Stressors):

ಎರಡು ಅಥವಾ ಮುರು ‘ಘಟನೆಗಳು’ ಸೇರಿದಾಗ ಒತ್ತಡಗಳುಂಟಾಗುತ್ತದೆ. ನಿರ್ದಿಷ್ಟವಾಗಿ ಹೇಳುವುದಾದಲ್ಲಿ, ಸ್ವತ: ವ್ಯಕ್ತಿಯ ಅಥವಾ ಆತನ ಕುಟುಂಬ ಸದಸ್ಯರ ಅನಾರೋಗ್ಯ, ಭಾರಿ ಪ್ರಮಾಣದ ಸಾಲ, ಕೌಟುಂಬಿಕ ಕಲಹಗಳು ಅಥವಾ ಭೂಸಂಬಂಧಿತ ಸಮಸ್ಯೆಗಳು ಸಾಮಾನ್ಯವಾಗಿ ‘ಒತ್ತಡವನ್ನುಂಟು ಮಾಡುತ್ತವೆ. ಒತ್ತಡಗಳು ‘ಘಟನೆಗಳೊಂದಿಗೆ ಸೇರಿಕೊಂಡಾಗ ಜೀವನ ಮತ್ತಷ್ಟು ಮಾರಣಾಂತಿಕವಾಗುತ್ತವೆ. ಆದರೆ, ಕಾರಣಕರ್ತರಿಂದ ಪ್ರಕರಣಕ್ಕೆ ಪ್ರಚೋದನೆ ದೊರೆಯುತ್ತದೆ.

3) ಕಾರಣಕರ್ತರು (Actors):

ಕಾರಣಕರ್ತರು ಸಂಭವನೀಯ ಬಲಿಪಶುವಿನಲ್ಲಿ ‘ಅಸುರಕ್ಷತೆ’ ಅಥವಾ ‘ಅಪಮಾನದ’ ಭಾವನೆಗಳನ್ನು ಮೂಡಿಸುತ್ತಾರೆ. ಲೇವಾದೇವಿಗಾರರು, ಬ್ಯಾಂಕರ್‌ಗಳು, ಜೀವನಸಂಗಾತಿ, ಸಂಬಂಧಿಕರು ಮತ್ತು ಆಪ್ತಮಿತ್ರರು ರೈತರಲ್ಲಿ ಅಭದ್ರತೆ ಅಪಮಾನಕರ ಸಂಭಾವನೆಯನ್ನು ಮೂಡಿಸುವುದರ ಮೂಲಕ ಆತ್ಮಹತ್ಯೆಗೆ ಕಾರಣಕರ್ತರಾಗುತ್ತಾರೆ.

4) ಪ್ರಚೋದಕಗಳು (Triggers);

‘ಘಟನೆಗಳು’ ಮತ್ತು ‘ಒತ್ತಡಕಾರಕಗಳ’ ಹಿನ್ನೆಲೆಯಲ್ಲಿ, ‘ಕಾರಣಕರ್ತರು’ ಅನಪೇಕ್ಷಿತವಾದ ಘಟನೆಗೆ ‘ಪ್ರಚೋದಕ’ ಸಂದರ್ಭವನ್ನು ಸೃಷ್ಟಿಸಬಹುದಾಗಿದೆ. ಆತ್ಮಹತ್ಯೆಯು ಸಂಕೀರ್ಣ ಸ್ವರೂಪದ್ದಾಗಿರುವುದರಿಂದ ಅದಕ್ಕೆ ಏಕೈಕ ಕಾರಣವನ್ನು ನೀಡುವುದು ಕಠಿಣವಾಗಿದೆ.

ಎಮಿಲಿ ಡರ್ಬೈಂರವರ ಆತ್ಮಹತ್ಯೆ ಕುರಿತ ಕೃತಿಯಲ್ಲಿ ವಿಶ್ಲೇಷಿಸಲಾಗಿರುವಂತೆ, ವ್ಯಕ್ತಿಯು ತನ್ನ ಕುಟುಂಬ, ಸಮಾಜ ಮತ್ತು ಧರ್ಮದಿಂದ ವಿಮುಖನಾಗುವಿಕೆಯ ಪ್ರಮಾಣದ ಹೆಚ್ಚಳವು ಆತ್ಮಹತ್ಯೆಗೆ ಕಾರಣವಾಗುತ್ತದೆ. ಡರ್ಬೈಂರ ಪ್ರಕಾರ ಆತ್ಮಹತ್ಯೆಯು ಸಾಮಾಜಿಕ ವಿಘಟನೆಯ ಸೂಚಕವಾಗಿದೆ.

ಆರ್ಥಿಕ ಸುಧಾರಣೆಗಳು, ಬೆಳವಣಿಗೆಯ ಅಸಮತೆ ಮತ್ತು ಕೃಷಿ ಸಂಕಷ್ಟದ ನಡುವಿನ ಸಂಬಂಧಗಳು ಆತ್ಮಹತ್ಯೆಯ ಕಾರಣಗಳನ್ನು ಅನ್ವೇಷಿಸಿದ ವಿವಿಧ ಅಧ್ಯಯನಗಳು ಸಾಲಬಾಧೆಯು ಆತ್ಮಹತ್ಯೆಯ ಕಾರಣಗಳಲ್ಲಿ ಒಂದು, ಕೇವಲ ಅದೊಂದೇ ಅಪಾಯಕಾರಿ ಕಾರಣವಲ್ಲ ಎಂದು ವಿಶ್ಲೇಷಿಸಿವೆ.ವಿವಿಧ ಅಪಾಯಕಾರಿ ಕಾರಣಗಳು ಪರಸ್ಪರ ಪೂರಕವಾಗಿ ಅಪಾಯಗಳಾಗಿವೆ. ಹವಾಮಾನದ ಅನಿಶ್ಚಿತತೆ, ಮಾರುಕಟ್ಟೆ (ಹೆಚ್ಚುತ್ತಿರುವ ವೆಚ್ಚಗಳು ಮತ್ತು ಉತ್ಪನ್ನಗಳ ಬೆಲೆ ಸಂಬಂಧಿತ ಆಘಾತಗಳು), ತಂತ್ರಜ್ಞಾನ, ಕಲಬೆರಕೆ ಕಚ್ಚಾವಸ್ತುಗಳು ಮತ್ತು ಸಾಲ ಸಂಬಂಧಿತ ಅನಿಶ್ಚಿತತೆಗಳೂ ಕೂಡ ರೈತನನ್ನು ಬಾಧಿಸುತ್ತವೆ. ರೈತನ ಅಪಾಯಗಳನ್ನು ದುರ್ಬಲಗೊಳಿಸುವ ತಂತ್ರಗಳ ಅಲಭ್ಯತೆಯಿಂದಾಗಿ ರೈತನು ಅಪಾಯಗಳಿಂದ ಬಾಧಿತನಾಗಿ, ಒತ್ತಡಕ್ಕೊಳಗಾದ ಕೆಲ ರೈತರು ಆತ್ಮಹತ್ಯೆ ಮಾಡಿಕೊಳ್ಳತೊಡಗಿದರು.

ರೈತರ ಆತ್ಮಹತ್ಯೆಯ ಪ್ರಕರಣಗಳು ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಹೆಚ್ಚಾಗಿದ್ದು ಹಿಂದುಳಿದ ರಾಜ್ಯಗಳಲ್ಲಿ (ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ), ಕಡಿಮೆ ಪ್ರಮಾಣದಲ್ಲಿದೆ ಎಂದು ಅಧ್ಯಯನಗಳು ಸ್ಪಷ್ಟಪಡಿಸಿವೆ, ಬೆಂಬಲರಹಿತ, ಸಾರ್ವಜನಿಕ ನೀತಿಯ ಸ್ಥಿತಿ ಮತ್ತು ‘ಉನ್ನತ ಅಪೇಕ್ಷೆಗಳು’ ಆತ್ಮಹತ್ಯೆಯ ಪ್ರಮುಖ ಕಾರಣವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಕೃಷಿ ವಿಷಯಗಳನ್ನು ಅಭ್ಯಸಿಸಲು ಕರ್ನಾಟಕದಲ್ಲಿ ರಚಿತವಾದ ಸಮಿತಿಗಳು (Committees to study the Agrarian issues in Karnataka):

ಎ) ದ್ವಾರಕಾನಾಥ ಸಮಿತಿ:

ಕೃಷಿ ಸಂಬಂಧಿತ ವಿಷಯಗಳನ್ನು ಅಭ್ಯಸಿಸಲು ರಾಜ್ಯ ಸರ್ಕಾರವು ಹಲವಾರು ಆಯೋಗಗಳು ಅಥವಾ ಸಮಿತಿಗಳನ್ನು ರಚಿಸಿತು. ಕೃಷಿ ವಿಜ್ಞಾನಿ ದ್ವಾರಕಾನಾಥರ ಅಧ್ಯಕ್ಷತೆಯಲ್ಲಿ 2000ನೇ ಇಸವಿಯಲ್ಲಿ ದ್ವಾರಕಾನಾಥ ಸಮಿತಿಯನ್ನು ರಚಿಸಲಾಯಿತು. ‘ಕರ್ನಾಟಕದಲ್ಲಿ ಬಿಟಿ ತಳಿ ಹತ್ತಿಯ ಪರೀಕ್ಷೆ’, ‘ಕೃಷಿಯಲ್ಲಿ ಜೈವಿಕ ತಂತ್ರಜ್ಞಾನ’, ‘ಹೈಬ್ರಿಡ್ ಭತ್ತದ ಪಾತ್ರ’ ಮುಂತಾದ ಅಧ್ಯಯನಗಳನ್ನು ಸಮಿತಿಯು ಕೈಗೊಂಡಿದೆ. ಬಿಟಿ ಹತ್ತಿಯ ಕ್ಷೇತ್ರ ಪ್ರಯೋಗಗಳನ್ನು ಬೆಂಬಲಿಸುವುದರ ಮೂಲಕ ಈ ಸಮಿತಿಯು ಕರ್ನಾಟಕದಲ್ಲಿ ಜೈವಿಕ ತಂತ್ರಜ್ಞಾನವನ್ನು ಬೆಂಬಲಿಸಿದೆ.

ಬಿ) ಜಿ.ಕೆ. ವೀರೇಶ ಸಮಿತಿ:

2002ರಲ್ಲಿ ರಚಿತವಾದ ಜಿ.ಕೆ. ವೀರೇಶ ಸಮಿತಿಯು ಆತ್ಮಹತ್ಯೆಗಳನ್ನು ಮನಃಶ್ಯಾಸ್ತ್ರೀಯ ಮತ್ತು ವೈಯಕ್ತಿಕ ಕಾರಣಗಳ ನೆಲೆಯಲ್ಲಿ ನೋಡಲು ಈ ಸಮಿತಿಯು ಯತ್ನಿಸಿತು. ಅವುಗಳೆಂದರೆ,

1)ಕುಡಿತ, ಜೂಜು, ಮಿತಿಮೀರಿ ಖರ್ಚು ಮಾಡುವಿಕೆ (20.35%)

2) ಬೆಳೆಯ ವೈಫಲ್ಯ (16.81)

3) 233 po (15.04%)

4) ಕೌಟುಂಬಿಕ ಸಮಸ್ಯೆಗಳು (13.27%) 5) ದೀರ್ಘಾವಧಿಯ ಅನಾರೋಗ್ಯ (9.73)

6) ಹೆಣ್ಣುಮಕ್ಕಳ ವಿವಾಹ (5.31%)

7) 230-30387150 (4.42%)

8) ಆಸ್ತಿ ವಿವಾದಗಳು (2.65%)

9) ಸಾಲಬಾಧೆ (2.65%)

10) 2013 (2.65%)

11) .ಸಾಲ ವಾಪಸಾತಿಯ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಸಾಲ ಮಾಡುವುದು ಮತ್ತು ಗೃಹ ನಿರ್ಮಾಣ (2.5%)

12) .ಕೃಷಿಯೇತರ ಚಟುವಟಿಕೆಗಳಿಂದಾದ ನಷ್ಟ (1.77%) 13) .ಕೊನೆಯದಾಗಿ ಕೊಳವೆ ಬಾವಿಗಳ ವೈಫಲ್ಯ (0,88)

ರೈತರ ಆತ್ಮಹತ್ಯೆ ತಡೆಗಟ್ಟಲು ಸರ್ಕಾರ ಕೈಗೊಂಡ ಕ್ರಮಗಳು (Recent Policy Initiatives to Mitigate Farmers Suicide):

1) ಸಾಲ ಮನ್ನಾ ಮತ್ತು ವಿನಾಯಿತಿ (Loan Waiver and Relief):

2007-08ರಲ್ಲಿ ಕರ್ನಾಟಕ ಸರ್ಕಾರವು ರೈತರು ಮಾಡಿದ ರೂ.25,000 ಸಾಲದ ಅಸಲನ್ನು ಮನ್ನಾ ಮಾಡಿತು. ರೂ.25,000ಕ್ಕೆ ಮೇಲ್ಪಟ್ಟು ಸಾಲ ಮಾಡಿದ ರೈತರಿಗೆ ಅವರು 2008ರ ಮಾರ್ಚ್ 31ಕ್ಕೆ ಮುನ್ನ ಅಸಲನ್ನು ಪಾವತಿಸಿದಲ್ಲಿ ಬಡ್ಡಿಯನ್ನು ಮನ್ನಾ ಮಾಡಿತು.

2) ಅತ್ಯಧಿಕ ಬಡ್ಡಿ ದರ ಕಾಯಿದೆ 2004 (Exrobitant Intrest Rate Act 2004):

ಖಾಸಗಿ ಲೇವಾದೇವಿದಾರರು ಅಧಿಕ ಬಡ್ಡಿ ವಿಧಿಸುವುದನ್ನು ನಿರ್ಬಂಧಿಸಲು ಕರ್ನಾಟಕ ಸರ್ಕಾರವು ಅತ್ಯಧಿಕ ಬಡ್ಡಿ ನಿಷೇಧ ಕಾಯಿದೆಯನ್ನು 2004ರಲ್ಲಿ ಜಾರಿಗೆ ತಂದಿತು. ಈ ಕಾಯಿದೆಯನ್ನು ಉಲ್ಲಂಘಿಸಿ, ಅಧಿಕ ಬಡ್ಡಿ ವಿಧಿಸುವ ಖಾಸಗಿ ಲೇವಾದೇವಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಈ ಕಾನೂನಿನಲ್ಲಿ ಅವಕಾಶವಿದೆ. ಕಾನೂನಿನ ಉಲ್ಲಂಘನೆಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ.30,000ವರೆಗಿನ ದಂಡ ಅಥವಾ ಈ ಎರಡನ್ನೂ ವಿಧಿಸಬಹುದಾಗಿದೆ.

3) ರೈತರ ಸಂಕಷ್ಟಗಳಿಗೆ ಪ್ರತಿಕ್ರಿಯೆ (Response to Farmers Distress):

ಕರ್ನಾಟಕದ ರೈತರು ಅನುಭವಿಸುತ್ತಿದ್ದ ಸಂಕಷ್ಟಗಳಿಗೆ ಜಿ.ಕೆ.ವೀರೇಶ್‌ ಸಮಿತಿಯ ಕೆಲ ಪ್ರಮುಖ ಶಿಫಾರಸ್ಸುಗಳೆಂದರೆ,

1) ರೈತ ಕಲ್ಯಾಣ ನಿಧಿಯ ಸ್ಥಾಪನೆ,

2) ರೈತರ ಕಲ್ಯಾಣಕ್ಕಾಗಿ ನೋಡಲ್ ವಿಭಾಗಗಳ ಸ್ಥಾಪನೆ,

3) ಸಾಮಾಜಿಕ ಸುರಕ್ಷಾ ಕ್ರಮಗಳು ಇತ್ಯಾದಿ. ಸಮಿತಿಯ ಶಿಫಾರಸ್ಸುಗಳನ್ವಯ ಕರ್ನಾಟಕ ಸರ್ಕಾರವು ರೈತರ ಸಂಕಷ್ಟ ಪರಿಹಾರದ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿತು. ಅವುಗಳೆಂದರೆ,

ಎ) ಆರೋಗ್ಯ ವಿಮಾ ಯೋಜನೆ:

ಯಶಸ್ವಿನಿ ಯೋಜನೆಯಡಿಯಲ್ಲಿ ರೈತರಿಗೆ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾದ ಅವಕಾಶ ದೊರೆಯಿತು. ಇದರಿಂದ ರೈತರು ತಮ್ಮ ಆರೋಗ್ಯಕ್ಕಾಗಿ ಮಾಡಬೇಕಾಗಿದ್ದ ಖರ್ಚು ಕಡಿಮೆಯಾಯಿತು. ಕುಟುಂಬವೊಂದಕ್ಕೆ ರೂ.120ರಷ್ಟು ಪ್ರೀಮಿಯಂ ಮೊತ್ತ ನೀಡಿ ಆರೋಗ್ಯ ಸೌಲಭ್ಯ ಪಡೆಯುವ ಈ ಯೋಜನೆಯು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ 2000ನೇ ಇಸವಿಯಲ್ಲಿ ಜಾರಿಗೊಂಡಿತು. ಯೋಜನೆಯ ಫಲಾನುಭವಿಗಳು ಶಸ್ತ್ರಚಿಕಿತ್ಸೆ ಮತ್ತು ಹೊರರೋಗಿ ಸೇವೆಗಳನ್ನು ಯಾವುದೇ ಸೂಚಿತ ಆಸ್ಪತ್ರೆಯಲ್ಲಿ ಪಡೆಯಬಹುದಾಗಿದೆ.

ಬಿ) ಬಡ್ಡಿದರದ ಇಳಿಕೆ:

ಸಹಕಾರಿ ಬ್ಯಾಂಕುಗಳ ಮೂಲಕ ಪಡೆದ ಸಾಲದ ಬಡ್ಡಿಯನ್ನು 2007- 08ರಲ್ಲಿ ವಾರ್ಷಿಕ ಶೇ.6ರಿಂದ ಶೇ.4ಕ್ಕೆ ಇಳಿಸಲಾಯಿತು. ಇದರಿಂದ ರೈತ ಸಮುದಾಯಕ್ಕೆ ಅನುಕೂಲವಾಯಿತು.

ಇ) ಬೆಳೆ ವಿಮೆ:

ಬೆಳೆ ವಿಮೆಯನ್ನು ಹೋಬಳಿ ಮಟ್ಟದ ದತ್ತಾಂಶದ ಆಧಾರದ ಮೇಲೆ ನಿರ್ಧರಿಸಿ ರೈತರಿಗೆ ಪರಿಹಾರ ನೀಡಲಾಯಿತು.

ಎಫ್) ಬಿತ್ತನೆ ಬೀಜದ ಮೇಲೆ ಸಬ್ಸಿಡಿ:

ಬೀಜದ ಮೇಲೆ ಸಬ್ಸಿಡಿ ನೀಡುವ ನೂತನ ನೀತಿಯನ್ನು ಘೋಷಿಸಲಾಯಿತು. ಶೇ.50ರವರೆಗಿನ ಸಬ್ಸಿಡಿಯೊಂದಿಗೆ ರೈತರಿಗೆ ಬೀಜಗಳನ್ನು ನೀಡಲಾಯಿತು.

ಜಿ) ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳು:

ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳ ಮೇಲಿನ ಹೂಡುವಿಕೆಯನ್ನು ಹತ್ತುಪಟ್ಟು ಹೆಚ್ಚಿಸಲಾಯಿತು. ಇದರಿಂದ ಮಳೆ ಆಧಾರಿತ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿದವು.

ಹೆಚ್) ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯ ಪುನರ್ವಿಮರ್ಶೆ:

ಈ ಯೋಜನೆಯ ಮೀಸಲು ಹಣವನ್ನು ಮೂರು ಬಿಲಿಯನ್ ರೂಪಾಯಿಗಳಿಗೆ ಹೆಚ್ಚಿಸಲಾಯಿತು. ನಿಯಂತ್ರಿತ ಮಾರುಕಟ್ಟೆಗಳಲ್ಲಿ ಸರ್ಕಾರದ ಮಧ್ಯಪ್ರವೇಶ ಯೋಜನೆಯನ್ನು ಜಾರಿಗೊಳಿಸಲಾಯಿತು.

ಐ) ಕೃಷಿ ಸಂಶೋಧನೆಗೆ ಆದ್ಯತೆ:

ಕೃಷಿ ವಿಶ್ವವಿದ್ಯಾಲಯಗಳು ‘ಪೂರೈಕೆ ಆಧಾರಿತ’ ಸಂಶೋಧನಾ ಆದ್ಯತೆಗಳಿಗೆ ಬದಲಾಗಿ, ಅಗತ್ಯಕ್ಕನುಗುಣವಾದ ಸಂಶೋಧನೆ ಮತ್ತು ಅಭಿವೃದ್ದಿ ಕೇಂದ್ರೀತವಾಗುವಂತೆ ನಿರ್ದೇಶನ ನೀಡಲಾಯಿತು.

ಕೃಷಿ ನೀತಿ Des (Agricultural Policy):

ಕರ್ನಾಟಕ ರಾಜ್ಯ ಸರ್ಕಾರವು 2006-07ರ ಆಯವ್ಯಯದಲ್ಲಿ ಹೊಸ ಕೃಷಿ ನೀತಿಯನ್ನು ಪ್ರಕಟಿಸಿದೆ. ಈ ನೀತಿಯನ್ನು “ಕೃಷಿ ಪಂಚಸೂತ್ರವಾಗಿ ಕೃಷಿಯ ಬೆಳವಣಿಗೆಗೆ ಸಹಾಯಕವಾಗಿದೆ. ಪಂಚಸೂತ್ರದ ಪ್ರಮುಖಾಂಶಗಳೆಂದರೆ,

1) ಮಣ್ಣಿನ ಆರೋಗ್ಯವನ್ನು ಸಂರಕ್ಷಿಸುವುದು

2) ಸ್ವಾಭಾವಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು, ಜೊತೆಗೆ ನೀರು ಮತ್ತು ಸಣ್ಣ ನೀರಾವರಿಯನ್ನು ಆದ್ಯತೆಯ ಮೇಲೆ ಸಂರಕ್ಷಿಸುವುದು

3) ಸಕಾಲದಲ್ಲಿ ಸಾಲ ಮತ್ತು ಇತರ ಪರಿಕರಗಳು ದೊರೆಯುವಂತೆ ಮಾಡುವುದು

4) ಕೊಲ್ಲೋತ್ತರ (Post-Harvert) ಪ್ರಕ್ರಿಯೆಯನ್ನು ಉತ್ಪಾದನೆಯ ಜೊತೆಗೆ ಸಂಯೋಜಿಸುವುದು

5) ಪ್ರಯೋಗಾಲಯ ಮತ್ತು ವ್ಯವಸಾಯದ ಮಧ್ಯದ ಅಂತರ ಕಡಿಮೆ ಮಾಡಲು ತಂತ್ರಜ್ಞಾನವನ್ನು ವರ್ಗಾವಣೆ ಮಾಡುವುದು

ಕೇಂದ್ರ ಕೃಷಿ ಮತ್ತು ಸಹಕಾರ ಇಲಾಖೆಯ ಮಾರ್ಗದರ್ಶನದ ಮೇಲೆ ಪ್ರತಿ ಐದು ವರ್ಷಕ್ಕೊಮ್ಮೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೃಷಿ ಗಣತಿಯನ್ನು ನಡೆಸುತ್ತಾರೆ. 1970-71ರ ಮೊದಲ ಕೃಷಿ ಗಣತಿ ಪ್ರಾರಂಭವಾಯಿತು. ಇದುವರೆಗೂ ಒಂಬತ್ತು ಬಾರಿ ಕೃಷಿ ಗಣತಿ ನಡೆಸಲಾಗಿದೆ. 2010-11ರಲ್ಲಿ ನಡೆದ ಕೃಷಿ ಗಣತಿಯು ಇತ್ತೀಚಿನ ಕೃಷಿ ಗಣತಿಯಾಗಿದೆ.

ರೈತರ ಸಂಕಷ್ಟ ಸನ್ನಿವೇಶಗಳನ್ನು ಸುಧಾರಿಸಲು ಇತರ ಸಲಹೆಗಳು (How to Retrieve the Situation):

ಸಂಕಷ್ಟ ಪರಿಸ್ಥಿತಿಯನ್ನು ಸುಧಾರಿಸಲು ಈ ಕೆಳಕಂಡ ಸಲಹೆಗಳನ್ನು ನೀಡಬಹುದು.

1) ಕೃಷಿ ಆದಾಯವನ್ನು ಮನತನಗೊಳಿಸುವುದು:
ಸಾರ್ವಜನಿಕ ಹೂಡುವಿಕೆಗಳ (ಮೂಲ ಸೌಲಭ್ಯ, ಸಂಸ್ಥೆಗಳು, ಮತ್ತು ನವೀನ ತಂತ್ರಜ್ಞಾನದ ಅಭಿವೃದ್ಧಿ) ಮೊತ್ತವನ್ನು ಹುಡುಕುವುದರ ಮೂಲಕ ರೈತರ ಆದಾಯವನ್ನು ಹೆಚ್ಚಿಸುವುದು,

2) ಗ್ರಾಮಗಳಲ್ಲಿ ಸಾಮಾಜಿಕ ಸುಧಾರಣೆಗಳು:
ಮಾದಕವಸ್ತು ಸೇವನೆ ಮತ್ತು ಹಬ್ಬಗಳು, ವಿವಾಹಗಳು, ಭೋಜನಕೂಟಗಳು ಮುಂತಾದ ಅನುತ್ಪಾದಕ ಚಟುವಟಿಕೆಗಳ ಮೇಲೆ ಅನಗತ್ಯ ವೆಚ್ಚ ಮಾಡುವುದನ್ನು ನಿಲ್ಲಿಸಲು ಗ್ರಾಮೀಣ ಪ್ರದೇಶಗಳಲ್ಲಿ ಸಮಾಜ ಸುಧಾರಣಾ ಚಳುವಳಿ ನಡೆಯಬೇಕಾಗಿದೆ.

3) ಸಾಮುದಾಯ ಆಧಾರಿತ ಅಭಿವೃದ್ಧಿ:
ಅಭಿವೃದ್ಧಿ ಯೋಜನೆ, ಯೋಜನೆಯ ಜಾರಿ, ಕಾರ್ಯನಿರ್ವಹಣೆ, ಮುಂತಾದವು ಕೇಂದ್ರದ ಹಿಡಿತದಿಂದ ಸಾಮುದಾಯಿಕ ಸಂಘಟನೆಗಳ ಹಿಡಿತಕ್ಕೆ ಬರುವುದು ಅಗತ್ಯ. ಸ್ಥಳೀಯ ವಸ್ತುಗಳನ್ನು ಒದಗಿಸುವಿಕೆ, ಮೂಲ ಸೇವೆಗಳನ್ನು ಒದಗಿಸುವಿಕೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯು ಸಾಮುದಾಯಿಕ ಪಾಲುದಾರಿಕೆಯನ್ನು ಹೆಚ್ಚಿಸಬೇಕು.

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....