Kannada essays

ಪರಿಸರ ಮಾಲಿನ್ಯ ಪ್ರಬಂಧ | The Unexpected Culprits Behind Environmental Pollution 2023

ಪರಿಸರ ಮಾಲಿನ್ಯ [Environmental Pollution]

ಪರಿಸರವೆಂಬುದು ಸಾಮಾನ್ಯ ಅರ್ಥದಲ್ಲಿ ಗೋಚರ, ಅಗೋಚರ ಮತ್ತು ನಿರ್ಜಿವ, ಸಜೀವ ವಸ್ತುಗಳೆಲ್ಲವು ಸೇರಿದುದು ಎಂಬ ಅರ್ಥ ಬರುತ್ತದೆ. ಇದರಲ್ಲಿ ನೈಸರ್ಗಿಕ ಪರಿಸರವು ನಮ್ಮ ಸುತ್ತಮುತ್ತಲಿರುವ ಗಾಳಿ, ನೀರು, ಮಣ್ಣು ಮುಂತಾದ ಜೀವವಿಲ್ಲದ ಮತ್ತು ಜೀವವಿರುವ ಎಲ್ಲಾವಸ್ತು ಹಾಗೂ ಪ್ರಾಣಿಗಳು ಸೇರಿರುತ್ತವೆ. ವಸ್ತು ಪರಿಸರದಲ್ಲಿ ಮಾನವನಿಗೆ ಸಂಬಂಧಪಟ್ಟ ವಸ್ತುಗಳಿರುತ್ತವೆ.

ಗೃಹ ನೈರ್ಮಲ್ಯತೆ, ಸಾಗಾಣಿಕೆ, ಉತ್ಪಾದನಾ ಸಾಧನಗಳು, ಆರ್ಥಿಕ ಸ್ಥಿತಿ, ಕೆಲಸ ಮಾಡುವ ಸ್ಥಳ ಹಾಗೆಯೇ ಭಾವ ಪರಿಸರದಲ್ಲಿ ಮನೆಯ ಆಲೋಚನೆಗೆ ಸಂಬಂಧಪಟ್ಟ ನಂಬಿಕೆ, ದ್ವೇಷ, ದುರಾಸೆ, ಶಾಂತಿ ಮುಂತಾದವುಗಳಿರುತ್ತವೆ. ನಿರ್ಜೀವ ಮತ್ತು ಸಜೀವ ವಸ್ತುಗಳ ನಡುವೆ ಪರಸ್ಪರ ಸಂಬಂಧವಿದ್ದು ವಸ್ತುಗಳ ವಿನಿಮಯ ಮತ್ತು ಶಕ್ತಿಯ ಸಂಚಯ ನಡೆಯುವ ಯಾವುದೇ ಪರಿಸರದ ಘಟವನ್ನು ಪರಿಸರ ವ್ಯವಸ್ಥೆ ಎಂದು ಕರೆಯಬಹುದಾಗಿದೆ. ಈ ಜೀವ ಪರಿಸರ ವ್ಯವಸ್ಥೆಯು ಇಂದು ತುಂಬಾ ಮಾಲಿನ್ಯಗೊಂಡಿದ್ದು ಅನೇಕ ವಿಧಗಳಲ್ಲಿ ಕಲುಷಿತಗೊಂಡಿವೆ.

ಪರಿಸರ ಮಾಲಿನ್ಯ ಪ್ರಬಂಧ

1. ಪರಿಸರ ಮಾಲಿನ್ಯ: ವಾಯುಮಾಲಿನ್ಯ :

ಕಾರ್ಖಾನೆಗಳ ಮೇವು ಹೆಚ್ಚಳ, ಅರಣ್ಯದ ಅತಿಯಾದ ನಾರ, ಪೆಟ್ರೋಲ್‌, ಡೀಸೆಲ್‌, ಕಲ್ಲಿದ್ದಲು, ಸೌದೆ ಮುಂತಾದವುಗಳ ದಹನ, ತೈಲ ಸಂಸ್ಕರಣ ಚಟುವಟಿಕೆ, ವಾಹನಗಳ ಅಪರಿಮಿತ ಬಳಕೆ, ರಸಾಯನಿಕ ಯುದ್ಧ ಸಾಮಗ್ರಿ ಹಾಗೂ ಪರಮಾಣು ಬಾಂಬುಗಳ ಪ್ರಯೋಗ ಮುಂತಾದವುಗಳಿಂದ ನಮಗೆ ಜೀವನಾಡಿಯಾಗಿರುವ ಆಮ್ಲಜನಕ, ಸಾರಜನಕ, ಕಾರ್ಬನ್ ಡೈ ಆಕ್ಸೆಡ್ ಹಾಗೂ ಓರೋನ್ ಇರುವ ಅಮೂಲ್ಯವಾದ ಗಾಳಿಯು ಮಾಲಿನ್ಯಗೊಂಡಿದೆ. ಇದರಿಂದ ಅನೇಕ ಪರಿಣಾಮಗಳಿವೆ.

ಪರಿಸರ ಮಾಲಿನ್ಯ

ಪರಿಣಾಮಗಳು

1. ವಾಯುಮಂಡಲದಲ್ಲಿರುವ ಓರೋನ್ ಅನಿಲಗೋಳವು ರಂಧ್ರವಾಗುತ್ತದೆ. ಇದರಿಂದ ಅಸಹ್ಯ ಅನುವಂಶೀಯ ಬದಲಾವಣೆಗಳೊಂದಿಗೆ ಇಲ್ಲದ ಕಾಯಿಲೆಗಳು ಬರಬಹುದು.

2. ಕಾರ್ಖಾನೆಗಳಿಂದ ಬಿಡುಗಡೆಯಾಗುವ ಅಪಾರ ಪ್ರಮಾಣದ ಧೂಳಿನಿಂದ ಫಲಪುಷ್ಪ ಬೆಳೆಗಳು ನಾಶ ಹೊಂದಿ ಇಳುವರಿಗೆ ಹಾನಿಯುಂಟಾಗುತ್ತದೆ.

3. ವಾಯುಮಾಲಿನ್ಯ ಕೆಲ ಕಾರ್ಖಾನೆಗಳಲ್ಲಿರುವ ಕಾರ್ಮಿಕರಿಗೆ ಶ್ವಾಸಕೋಶದ ಕಾಯಿಲೆಗಳನ್ನು ತರುತ್ತದೆ. ಶೇ. 10 ರಿಂದ 16 ಮಂದಿ ನಗರ ಭಾಗದಲ್ಲಿ ಕಾರ್ಮಿಕರು ಶ್ವಾಸಕೋಶ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರೆ.

4. ವಾಯುವಿನಲ್ಲಿ ಗಂಧಕದ ಡೈ ಆಕ್ಸಡ್ ಹೆಚ್ಚಿದ್ದರೆ ಜೀವಿಗಳಿಗೆ ಹಾನಿಯಾಗುವುದು ಅಲ್ಲದೆ ಕಬ್ಬಿಣ ಮತ್ತು ಕಲ್ಲನ್ನು ಸಹ ಕರಗಿಸುತ್ತದೆ. ತಾಜ್‌ ಮಹಲ್ ಹಾಳಾಗಲು ಆಗ್ರಾದ ಸಮೀಪವಿರುವ ತೈಲ ಸಂಸ್ಕರಣದ ಗಂಧಕದ ಡೈ ಆಕ್ಸೆಡ್ ಕಾರಣವಾಗುತ್ತದೆ.

5. 1984ರ ಡಿಸೆಂಬರ್ 2ರ ರಾತ್ರಿ ಭೂಪಾಲಿನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ಮೀಥೈಲ್ ಐಸೋಸಯನೇಟ್ ವಿಷಾನಿಲ ಗಾಳಿಯಲ್ಲಿ ಸೇರಿ ಲಕ್ಷಾಂತರ ಜನರು ಸಾವಿಗೀಡಾಗಿದ್ದು ಉಳಿದವರು ವಿಚಿತ್ರ ರೀತಿಯ ಕಾಯಿಲೆಗೆ ತುತ್ತಾಗಿರುವುದು ವಾಯುಮಾಲಿನ್ಯದ ಪರಿಣಾಮವಾಗಿದೆ.

6. ವಾಯುಮಾಲಿನ್ಯದಿಂದಾಗಿ ಧ್ರುವ ಪ್ರದೇಶಗಳ ಹಿಮರಾಶಿಯು ಕರಗಿ ಸಾಗರಗಳ ನೀರಿನ ಮಟ್ಟ ಏರಿಕೆಯಾಗಿ ಕೆಲವು ಪ್ರದೇಶಗಳು ಮುಳುಗುತ್ತವೆ.

7. ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನಕ್ಕೆ ವಾಯುಮಾಲಿನ್ಯದ ಕೊಡುಗೆ ಅಪಾರವಾಗಿದೆ.

ವಾಯುಮಾಲಿನ್ಯ ತಡೆಯುವ ವಿಧಾನಗಳು

1. ಕಾರ್ಖಾನೆಗಳ ಕಾರ್ಬನ್ ಎಮಿಷನ್‌ಗೆ ಕಾನೂನು ರೀತಿ ತಡೆಯೊಡ್ಡುವುದು.

2. ಅರಣ್ಯ ಶೇ. 31ರಷ್ಟಾದರೂ ಖಡ್ಡಾಯವಾಗಿ ಮರು ನಿರ್ಮಾಣ ಮಾಡುವುದು

3, ನವೀಕರಿಸಬಹುದಾದ ಇಂಧನಗಳನ್ನು ಹೆಚ್ಚು ಹೆಚ್ಚು ಬಳಸುವುದು

4. ಸುಸ್ಥಿರ ಅಭಿವೃದ್ಧಿ ಮತ್ತು ಒಳಗೊಳ್ಳುವಿಗೆ ಅಭಿವೃದ್ಧಿಯನ್ನು ಅಳವಡಿಸಿಕೊಳ್ಳುವುದು

5. ಸಾರಿಗೆ ಸುಧಾರಣೆ, ವಾಹನಗಳಿಗೆ ಕಡಿವಾಣ, ಸೈಕಲ್‌ಗಳಿಗೆ ಪ್ರೋತ್ಸಾಹ, ಜೈವಿಕ ಇಂಧನ ಬಳಕೆ ಮಾಡುವುದು.

6. ಪರಿಸರ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಜನಸಂಖ್ಯಾ ಸ್ಫೋಟ ಮುಂತಾದವುಗಳನ್ನು ತಡೆಯುವುದು.

ಭಾರತ ಸರ್ಕಾರವು 1981ರಲ್ಲಿ ವಾಯುಮಾಲಿನ್ಯ ನಿಯಂತ್ರಣ ಶಾಸನ ಜಾರಿಗೆ ತಂದಿದೆ. ಇದನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡರೆ ಮಾತ್ರ ವಾಯುಮಾಲಿನ್ಯ ನಿಯಂತ್ರಣವಾಗುತ್ತದೆ.

2. ಪರಿಸರ ಮಾಲಿನ್ಯ: ಜಲ ಮಾಲಿನ್ಯ

ಮನುಷ್ಯರ ಚಟುವಟಿಕೆಯಿಂದ ನೀರಿನ ಭೌತಗುಣ, ರಸಾಯನಿಕ ಗುಣ ಬದಲಾವಣೆಯಾಗಿ ನೀರು ಜಲಚರ ಜೀವಿಗಳಿಗೆ ವಾಸಿಸಲು ಹಾಗೂ ಕುಡಿಯಲು ಅನರ್ಹವಾಗುವ ವಿಧಾನವೇ ಜಲಮಾಲಿನ್ಯ.

ಜಲಮಾಲಿನ್ಯ

ಕಾರಣಗಳು

1. ವ್ಯವಸಾಯದಲ್ಲಿ ಕೀಟನಾಶಕ ಹಾಗೂ ರಸಗೊಬ್ಬರಗಳನ್ನು ಬಳಸುವುದು

2. ಕೈಗಾರಿಕೆಗಳಿಂದ ತ್ಯಾಜ್ಯ ವಸ್ತುಗಳನ್ನು ಮತ್ತು ನಗರಗಳ ಕೊಳಚೆ ನೀರನ್ನು ನದಿ, ಸಮುದ್ರಗಳಿಗೆ ವಿಸರ್ಜಿಸುವುದು

3. ಗಣಿ ಕೆಲಸ ಮತ್ತು ಮಣ್ಣಿನ ಸವಕಳಿ, ವಿಕಿರಣ ವಸ್ತುಗಳು ಮತ್ತು ತೀವ್ರ ಉಷ್ಣತೆಯಿಂದಲೂ ಜಲಮಾಲಿನ್ಯ ಉಂಟಾಗತ್ತದೆ.

ಜಲಮಾಲಿನ್ಯದ ಪರಿಣಾಮಗಳು

1. ದೃಷ್ಟಿಮಾಂದ್ಯತೆ, ಚರ್ಮರೋಗ, ಕೈಕಾಲು ಸ್ವಾಧೀನ ತಪ್ಪುವುದು ಬುದ್ಧಿಭ್ರಮಣೆ ಹಾಗೂ ಕಾಮಾಲೆಯಂತಹ ಯಕೃತ್ತಿನ ರೋಗಗಳು ಬರುತ್ತವೆ.

2. ಜಲಚರ ಪ್ರಾಣಿಗಳು ವಿನಾಶವಾಗುತ್ತವೆ. ಮೊಸಳೆ, ಆಮೆ, ಮೀನುಗಳು ಸಾವನ್ನಪ್ಪುತ್ತವೆ.

3. ಕಾರ್ಖಾನೆಯಿಂದ ಬರುವ ತ್ಯಾಜ್ಯ ವಸ್ತುಗಳಲ್ಲಿ ತಾಮ್ರ, ಸೀಸದಂತ ಲೋಹಗಳಿದ್ದರೆ ಅಂತಹ ಕಲುಷಿತ ನೀರನ್ನು ಉಪಯೋಗಿಸಿದರೆ ‘ಮಿನಮಾಟ’ ರಕ್ತಹೀನತೆಯಂಥ ಕಾಯಿಲೆಗಳು ಬರುತ್ತವೆ.

4. ಸಮುದ್ರಕ್ಕೆ ಸೇರುವ ತೈಲದಿಂದ ಪೆಂಗ್ವಿನ್ ಪಕ್ಷಿಗಳು ನಾಶ ಹೊಂದುತ್ತವೆ. ಗಂಗಾ ಯಮುನಾ ನದಿಗಳು ಬೆಂಗಳೂರಿನ ವೃಷಭಾವತಿ ನದಿಗಳು ಕಲುಷಿತಗೊಂಡು ತೆರೆದಿಟ್ಟ ಮಹಾಚರಂಡಿಗಳಾಗಿವೆ.

ಜಲಮಾಲಿನ್ಯ ತಡೆಯುವ ವಿಧಾನಗಳು

1. ಚರಂಡಿ ನೀರನ್ನು ಶುದ್ದೀಕರಿಸಿ ಪುನಃ ಬಳಸುವುದು

2. ಸಾವಯವ ಕೃಷಿಗೆ ಆದ್ಯತೆ ನೀಡುವುದು

3. ನೀರನ್ನು ಮಿತವಾಗಿ ಬಳಸುವುದು, ಕೆರೆ, ಬಾವಿ ಸ್ವಚ್ಛವಾಗಿಟ್ಟುಕೊಳ್ಳುವುದು

4. ಕಾರ್ಖಾನೆಗಳ ವಿಷಯುಕ್ತ ನೀರನ್ನು ನದಿಗೆ, ಸರೋವರಗಳಿಗೆ ಸೇರಿಸದೆ ‘ತಂತ್ರಜ್ಞಾನದ ಮುಖಾಂತರ’ ಪುನರ್ ಸಂಸ್ಕರಣೆಯನ್ನು ಮಾಡುವುದು.

5. ತಂತ್ರಜ್ಞಾನಾಧಾರಿತ ಪರಿಸರ ಸ್ನೇಹಿ ಯಂತ್ರ ಕಾರ್ಖಾನೆಗಳನ್ನು ಸ್ಥಾಪನೆ ಮಾಡುವುದು

3. ಪರಿಸರ ಮಾಲಿನ್ಯ: ಮಣ್ಣಿನ ಮಾಲಿನ್ಯ

ಭೂಮಿಯ ಹೊರ ಮೇಲ್ಪೆಯು ಫಲವತ್ತಾದ ಮೇಲ್ಮಣ್ಣಿನಿಂದ ಕೂಡಿದ್ದು ಎಲ್ಲ ಜೀವಿಗಳಿಗೆ ಬದುಕಲು ಆಹಾರ ವಸತಿ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷಜೀವಿಗಳಿಗೆ ಪ್ರಮುಖ ಆಧಾರವಾಗಿದೆ. ಭೂಮಿಯ ಮೇಲಿನ ಮಣ್ಣು ಕೊಚ್ಚಿ ಹೋಗಿ ನಾಶವಾಗುವುದನ್ನು ಮಣ್ಣಿನ ಸವಕಳಿ ಎಂದು ಕರೆಯುವರು. ರಭಸವಾದ ಗಾಳಿ, ಮಳೆ, ದನ ಕರುಗಳ ಓಡಾಟ, ರಸಾಯನಿಕ ಗೊಬ್ಬರಗಳ ಅವೈಜ್ಞಾನಿಕ ಬಳಕೆ, ತೀವ್ರ ಬೇಸಾಯ ಹಾಗೂ ಅರಣ್ಯ ನ ನಾಶದಿಂದ ಮೇಲಿನ ಮಣ್ಣು ನಾಶವಾಗಿ ಸವಕಳಿ ಉಂಟಾಗುತ್ತದೆ. ಗಣಿ ಕೆಲಸದಿಂದ ನಗರಗಳ ಹೆಚ್ಚಳದಿಂದಲೂ ಮಣ್ಣು ನಾಶವಾಗುತ್ತದೆ.

ಮಣ್ಣಿನ ಮಾಲಿನ್ಯ

ಪರಿಣಾಮಗಳು

1. ಮಳೆಯಿಂದ ಕೊಚ್ಚಿಹೋಗುವ ಮಣ್ಣು, ಕೆರೆ, ನದಿ, ಸಮುದ್ರಗಳಿಗೆ ಸೇರಿ ನೆರೆಹಾವಳಿ ಉಂಟಾಗುತ್ತದೆ.

2. ಗಂಗಾ ಮತ್ತು ಬಹ್ಮಪುತ್ರ ನದಿಗಳು ಹೊತ್ತು ತಂದ ಹೂಳು ಈಗ ಬಂಗಾಳ ಕೊಲ್ಲಿಯಲ್ಲಿ ಬಂದು ಹೊಸ ದ್ವೀಪವಾಗಿ ಬೆಳೆದು ನಿಂತಿದೆ. 44 ಕಿ.ಮೀ. ಉದ್ದ 11 ಕಿ.ಮೀ. ಅಗಲದ ಈ ದ್ವೀಪ ಮನುಷ್ಯನ ಅವಿವೇಕ ಮತ್ತು ಭೂಸವಕಳಿಯ ಪ್ರಮಾಣಕ್ಕೆ ಸಾಕ್ಷಿಯಾಗಿದೆ.

ತಡೆಗಟ್ಟುವ ವಿಧಾನ

1. ಅರಣ್ಯಗಳನ್ನು ಸಂರಕ್ಷಿಸುವುದರಿಂದ

2. ಗಣಿ ಕೆಲಸಗಳನ್ನು ಪೂರ್ವಯೋಜಿತವಾಗಿ ಮಾಡುವುದು

3. ವೈಜ್ಞಾನಿಕ ಯೋಜಿತ ವ್ಯವಸಾಯವನ್ನು ಮಾಡುವುದು

4. ನೀರಾವರಿ ಮತ್ತು ತುಂತುರು ನೀರಾವರಿ ಬಳಸುವುದು

5. ಹೊಲ ಗದ್ದೆಗಳಲ್ಲಿ ಸರಿಯಾದ ಬದು ಮತ್ತು ಕಂದಕಗಳನ್ನು ನಿರ್ಮಿಸುವುದು

4. ಪರಿಸರ ಮಾಲಿನ್ಯ: ವಿಕಿರಣ ಮಾಲಿನ್ಯ

ಮಾನವನು ತನ್ನ ವಿದ್ಯುತ್‌ ಶಕ್ತಿ ಹಾಗೂ ಇನ್ನಿತರ ಕೆಲಸಗಳಿಗೆ, ಅಣುಶಕ್ತಿಯನ್ನು ಬಳಸಲಾರಂಭಿಸಿದ್ದಾನೆ. ಆದರೆ ಎಷ್ಟು ಈ ಅಣುಶಕ್ತಿ ಉತ್ತಮವೋ ಹಾಗೆಯೇ ಪರಿಸರಕ್ಕೆ ವಿನಾಶವನ್ನು ತಂದೊಡ್ಡುತ್ತದೆ. ಈ ಅಣು ಉತ್ಪಾದನೆಯ ಕ್ರಮ ಮಾರಣಾಂತಿಕವಾಗಿದ್ದು ವಿಜ್ಞಾನಿಗಳ ಎಲ್ಲಾ ಮುನ್ನೆಚ್ಚರಿಕೆಗಳನ್ನು ಧಿಕ್ಕರಿಸಿ ಲಕ್ಷಾಂತರ ಜನರ ಬದುಕನ್ನು ಸರ್ವನಾಶ ಮಾಡುವ ಶಕ್ತಿ ಈ ಅಣುವಿನ ಮತ್ತು ಅದರ ಪಳೆಯುಳಿಕೆಯಿಂದ ಸೂಸುವ ವಿಕಿರಣದಲ್ಲಿದೆ.

ಅಣು ವಿಕಿರಣಕ್ಕೆ ಈಡಾದ ಯಾವುದೇ ಜೀವಿ ರಕ್ತದ ಕ್ಯಾನ್ಸರ್ ಗಿಂತಲೂ ಭೀಕರವಾಗಿ ರೋಗಕ್ಕೆ ತುತ್ತಾಗಿ ಸಾವನ್ನಪ್ಪುತ್ತಾನೆ. ಯುರೇನಿಯಂ ಮತ್ತು ರೇಡಿಯಮ್ ಸಂಶೋಧಿಸಿದ ಮೇಡಂ ಕ್ಯೂರಿ ಸ್ವತಃ ವಿಕಿರಣದ ಪ್ರಭಾವದಿಂದ ಯಾತನಾಮಯವಾದ ಮರಣವನ್ನಪ್ಪಿದರು. ಅಮೇರಿಕಾದ ಥೀಮೈಲ್ ಐಲ್ಯಾಂಡ್ ಮತ್ತು ಸೋವಿಯತ್ ರಷ್ಯಾದ ಚರ್ನೊಬಿಲ್ ದುರಂತಗಳು ಎಶದ ಅಣು ಚರಿತ್ರೆಯ ಅತ್ಯಂತ ಗೋರದುರಂತಗಳಾಗಿವೆ.

ಇತ್ತೀಚೆಗೆ ಜಪಾನ್‌ನಲ್ಲಿ ಸಂಭವಿಸಿದ ಭೀಕರ ಸುನಾಮಿಯ ಸಂದರ್ಭದಲ್ಲಿ ಫುಕುಶಿಮಾ – ಡಯಚಿ ಅಣುರಿಯಾಕ್ಟರ್‌ನಲ್ಲಿ ಸಂಭವಿಸಿದ ರೇಡಿಯೋ ಆಕ್ಟಿವಿಟಿ ವೇವ್‌ಗಳು ದುರಂತಕ್ಕೆ ಸಹಸ್ರಾರು ಜನರು ಬಲಿಯಾದುದನ್ನು ನಾವು ಇಲ್ಲಿ ಗಮನಿಸಬಹುದಾಗಿದೆ. ಆದ್ದರಿಂದಾಗಿ ತಮಿಳುನಾಡಿನ ಕೂದನಕುಲಂ ಅಣು ರಿಯಾಕ್ಟ‌ ಸ್ಥಾಪನೆಯನ್ನು ವಿರೋಧಿಸಿ ಪ್ರತಿಭಟನೆಗಳನ್ನು ಮಾಡಿದ್ದನ್ನು ಗಮನಿಸಬಹುದಾಗಿದೆ.

ಪರಿಣಾಮಗಳು

1. ಕ್ಯಾನ್ಸರ್, ಅನಿಶ್ಚಿತ ಜನನ ಮತ್ತು ಜೈವಿಕ ವಿಕೃತಿ ಮ್ಯುಟೇಶನ್ ಉಂಟಾಗುತ್ತದೆ

2. ಅಣು ವಿಕಿರಣ ದುಷ್ಪರಿಣಾಮಗಳಲ್ಲಿ ರಕ್ತದ ಕ್ಯಾನ್ಸರ್, ಲ್ಯುಕೆಮಿಯಾ ಹೆಚ್ಚುತ್ತದೆ.

3. ಜೀವಿಪರಿಸರ, ಅಂತರ್ಜಲ, ವಾಯುಮಂಡಲ ಸಹ ಮಲಿನ ಹೊಂದುತ್ತದೆ

5. ಪರಿಸರ ಮಾಲಿನ್ಯ: ಶಬ್ದ ಮಾಲಿನ್ಯ

ಅಹಿತಕರವಾದ ಪ್ರಮಾಣವಾದ ಶಬ್ದವನ್ನು ಸಹ ಮಾಲಿನ್ಯವೆಂದು ಪರಿಗಣಿಸಲಾಗಿದೆ. ಇದಕ್ಕೆ ಕಾರಣ ಶಬ್ದದ ತೀವ್ರತೆ ಅಥವಾ ಕರ್ಕಷತೆಯ ಭೌತಿಕ, ದೈಹಿಕ ಹಾಗೂ ಮಾನಸಿಕ ಒತ್ತಡ ಹಾಗೂ ಕಿರಿಕಿರಿಯನ್ನುಂಟು ಮಾಡುವುದು. ಶಬ್ದಮಾಲಿನ್ಯವು ಸಹ ಮಾನವ ಕ್ರಿಯೆಗಳಿಂದಲೇ ಉಂಟಾಗುವುದು, ವಿವಿಧ ಬಗೆಯ ವಾಹನ, ವಾಹನದ ದಟ್ಟಣೆ, ಕೈಗಾರಿಕೆ, ಜನರೇಟರ್‌ಗಳ ಬಳಕೆ, ಮನೆಯಲ್ಲಿ ಯಂತ್ರೋಪಕರಣಗಳ ಬಳಕೆ, ಪಟಾಕಿ ಸಿಡಿತ ಮುಂತಾದವುಗಳು ಶಬ್ದಮಾಲಿನ್ಯದ ಮೂಲಗಳಾಗಿವೆ. ಇದರ ಪರಿಣಾಮಗಳು ಅತ್ಯಂತ ಪರಿಣಾಮಕಾರಿಯಾಗಿದ್ದು ಉಸಿರಾಟ, ದೈಹಿಕ ನಿಯಂತ್ರಣ ತಪ್ಪುವುದು, ಅಶಾಂತಿ, ಕಿವುಡುತನಗಳಿಗೆ ಕಾರಣವಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯು ನಗರಗಳಲ್ಲಿ 45 ಡೆಸಿಬಲ್ ಶಬ್ದದ ಮಟ್ಟವನ್ನು ಆರೋಗ್ಯಕರ ಮಟ್ಟವೆಂದು ತಿಳಿಯಪಡಿಸಿದೆ. ಆದರೆ ಜಗತ್ತಿನ ಬಹುತೇಕ ನಗರಗಳಲ್ಲಿ ಶಬ್ದದ ತೀವ್ರತೆ 100 ಡೆಸಿಬಲ್‌ ಗಿಂತಲೂ ಹೆಚ್ಚು. ಮುಂಬೈ ವಿಶ್ವದ ಮೂರು ಅತಿ ಹೆಚ್ಚು ಶಬ್ದಮಾಲಿನ್ಯದ ನಗರವಾಗಿದೆ. ಇದರ ಶಬ್ದದ ತೀವ್ರತೆ 105 ಡೆಸಿಬಲ್‌ಗಳಷ್ಟು ಅಧಿಕ.

ಮಾಲಿನ್ಯದಿಂದಾಗಿ ಪರಿಸರವು ವಿನಾಶದೆಗೆಡೆ ಹೋಗುವುದಕನ್ನು ಯಾರು ಊಹಿಸುವಂತಿಲ್ಲ. ಯೋಜನಾ ಆಯೋಗದ ಪರಿಸರ ರಕ್ಷಣಾ ಸಮಿತಿ, ಹಾಗೂ ಕೇಂದ್ರ ಸರ್ಕಾರಗಳು ಪರಿಸರ ರಕ್ಷಣೆಗಾಗಿ ಸಾಕಷ್ಟು ಕಾಯಿದೆ ಜಾರಿ ಮಾಡಿದೆ. ಪರಿಸರ ರಕ್ಷಣೆಗೆ ಮೊಟ್ಟ ಮೊದಲ ಚಿಂತನೆ ನಡೆದದ್ದು 1972ರಲ್ಲಿ ಸಂಯುಕ್ತರಾಷ್ಟ್ರ ಸಂಸ್ಥೆಯವರು ಸ್ವೀಡನ್ನಿನ ಸ್ಟಾಕ್‌ ಹೋಮ್‌ ನಗರದಲ್ಲಿ ‘ಮಾನವೀಯ’ ಪರಿಸರದ ವಿಷಯದಲ್ಲಿ ಸಮ್ಮೇಳನ ನಡೆಸಿದ ನಂತರದ ಅವಧಿಯಲ್ಲಿ.

ಪರಿಸರ ಸಂರಕ್ಷಣೆ ಸಂಬಂಧಿಸಿದ ಕಾನೂನುಗಳು

1. ಭಾರತ ಸಂವಿಧಾನದ ನಿರ್ದೇಶಕ ತತ್ವಗಳಂತೆ ನೈಸರ್ಗಿಕ ಪರಿಸರದ ರಕ್ಷಣೆ ಮತ್ತು ಸುಧಾರಣೆಯ ಕೆಲಸಗಳು ರಾಜ್ಯಸರ್ಕಾರ ಮತ್ತು ಪ್ರಜೆಗಳಿಗೆ ಸೇರಿರುತ್ತದೆ 51ಎ ಮತ್ತು 4.

2. 1968ರ ಕೀಟನಾಶಕ ಕಾಯಿದೆ, 1974ರ ಕೀಟನಾಶಕ ಕಾಯಿದೆ.

3. 1974ರ ವನ್ಯಜೀವಿ ಸಂರಕ್ಷಕ ಕಾಯಿದೆ, 1977ರ ಜಲಮಾಲಿನ್ಯ ತೆರಿಗೆ ಕಾಯಿದೆ.

4.1980ರ ಅರಣ್ಯ ಕಾಯಿದೆ, 1981ರ ವಾತಾವರಣ ಮಾಲಿನ್ಯ ನಿರೋಧ ಕಾಯಿದೆ.

5. 1974ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಯಾಯಿತು.

6. 1997ರಲ್ಲಿ ಜಲ ಕಾಯ್ದೆ, 1981ರಲ್ಲಿ ವಾಯು ಕಾಯಿದೆಗಳು ಜಾರಿಗೆ ಬಂದವು.

7. 2015 – 16ರಲ್ಲಿ ಜಾರಿಗೆ ತಂದಿರುವ ಸ್ವಚ್ಛಭಾರತ ಅಭಿಯಾನಕ್ಕೂ ಶೇ. 0.50 ಸೆಸ್ ವಿಧಿಸಿರುವುದು.

ಪರಿಸರ ಮಾಲಿನ್ಯ ತಡೆಗಟ್ಟಲು ಸಹಸ್ರಾರು ಕಾರಕ್ರಮಗಳು ಜಾರಿಗೆ ತಂದರೂ ಸಹ ಭಾರತದಂತಹ ಹಾಗೂ ವಿಪರೀತ ಜನಸಂಖ್ಯೆ ಉಳ್ಳ ಹಾಗೂ ಮುಂದುವರೆದ ರಾಷ್ಟ್ರಗಳ ಮಾದರಿಯ ಅಭಿವೃದ್ಧಿಯಿಂದಾಗಿ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ.

ಪರಿಸರ ಸಂರಕ್ಷಣೆಗೆ ಜಾಗತಿಕವಾಗಿ ಮಾಡಬಹುದಾದ ಕ್ರಮಗಳು: ಪರಿಸರ ಮಾಲಿನ್ಯ

1. ಮುಂದುವರಿದ ರಾಷ್ಟ್ರಗಳ ‘ಅಭಿವೃದ್ಧಿ’ಯ ಮಾದರಿಯನ್ನು ಅನುಸರಿಸದೇ ಸರ್ವವನ್ನು ಒಳಗೊಳ್ಳುವ ಸುಸ್ಥಿರ ಅಭಿವೃದ್ಧಿಯನ್ನು ಪಾಲಿಸುವುದು.

2. ಜಾಗತಿಕ ಹವಾಮಾನ ಸಂಬಂಧಿತ ಸಮಾವೇಶಗಳ ನಿರ್ಣಯಗಳನ್ನು ಜಾರಿಗೆ ತರುವುದು, ಮುಂದುವರೆದ ದೇಶಗಳಾದ ಯು.ಎಸ್‌.ಎ., ಯು.ಕೆ. ಹಾಗೂ ಕೆನಡಾಗಳು ಕಾರ್ಬನ್ ಎಮಿಷನ್ನನ್ನು ಕಡಿಮೆ ಮಾಡುವುದು.

3. ಸ್ವಾಭಾವಿಕ ಸಂಪನ್ಮೂಲಗಳಲ್ಲಿ ಹವಾಮಾನ ವಿರೋಧಿ ಸಂಪನ್ಮೂಲಗಳನ್ನು ಬಳಸಿಕೊಳ್ಳದ ಹಾಗೆ ನಿಸರ್ಗ ಸ್ನೇಹಿ ಸಂಪನ್ಮೂಲಗಳನ್ನು ಮಾತ್ರ ಬಳಸಿಕೊಳ್ಳುವುದು.

4. ಅಣ್ವಸ್ತ್ರ ಪ್ರಸರಣ ನಿಷೇಧ, ರಸಾಯನಿಕ ಬಳಕೆಗೆ ವಿರೋಧ, ಸಿಡಿಮದ್ದು ಬಾಂಬ್‌ಗಳ ತಯಾರಿಕೆ ಮುಂತಾದ ಅಂಶಗಳನ್ನು ಖಡ್ಡಾಯವಾಗಿ ಕಡಿಮೆ ಮಾಡುವುದು.

5. ಭೂತಾನ್ ಮಾದರಿಯ ‘ಜಾಗತಿಕ ಸಂತೃಪ್ತಿಯ ಮಟ್ಟ’ ವರ್ಲ್ಡ್ ಹ್ಯಾಪಿನೆಸ್ ಇಂಡೆಕ್ಸ್ ಅಂಶಗಳನ್ನು ಪರಿಗಣಿಸಿ ಪಾಲಿಸುವುದು, ಭೂತಾನ್ ದೇಶವು ಶೇ. 61 ಕಾಡನ್ನು ಖಡ್ಡಾಯವಾಗಿ ಬೆಳೆಸಬೇಕು ಎಂದು ಸಂವಿಧಾನದಲ್ಲಿ ತೀರ್ಮಾನಿಸಲಾಗಿದೆ.

6. ಯುಎನ್‌ ಇಪಿ, ಐಎಇಎ, ಐಯುಸಿಎನ್‌, ಡಬ್ಲ್ಯುಡಬ್ಲ್ಯುಎಫ್, ಐಓಸಿ, ಯುಎನ್‌ ಸಿಹೆಚ್‌ ಇ, ಐಸಿಓಎಲ್‌ ಡಿ ಮುಂತಾದ ಅನೇಕ ಅಂತರರಾಷ್ಟ್ರೀಯ ಸಂಘಟನೆಗಳು ಪರಿಸರ ಸಂರಕ್ಷಣೆಯ ಬಗ್ಗೆ ಕಾರ ನಿರ್ವಹಿಸುತ್ತಿವೆ. ಇವುಗಳನ್ನು ಇನ್ನೂ ಹೆಚ್ಚು ಕಾವ್ಯಪ್ರವೃತ್ತಿಗೊಳಿಸುವುದು.

7. ‘ಸಾಮಾಜಿಕ ಅರಣ್ಯ ಕೃಷಿಯಂತಹ’ ಯೋಜನೆಗಳನ್ನು ಎಲ್ಲ ದೇಶಗಳಲ್ಲೂ ಜಾರಿಗೆ ತರುವುದು.

ಪರಿಸರ ಸಂರಕ್ಷಣಾ ಚಳುವಳಿಗಳು: ಪರಿಸರ ಮಾಲಿನ್ಯ

ಗ್ರೀನ್ ಪೀಸ್ ಇಂಟರ್‌ನ್ಯಾಷನಲ್ : ಗ್ರೀನ್‌ ಪೀಸ್ ಇಂಟರ್‌ ನ್ಯಾಷನಲ್ ಸಂಸ್ಥೆಯ ಪ್ರಧಾನ ಕಛೇರಿ ಇಂಗ್ಲೆಂಡಿನ ಸೆಸಕ್ಸ್‌ನಲ್ಲಿದೆ. ಇದು ಪರಿಸರ ಮಾಲಿನ್ಯದ ವಿರುದ್ಧ ಹೋರಾಡುವ ಹೆಸರಾಂತ ಸಂಸ್ಥೆಯಾಗಿದೆ. ಈ ಸಂಸ್ಥೆಯು ಅಣುಸ್ಥಾವರದ ಏಕಿರಣಯುಕ್ತ ಕೊಳಚೆ ನೀರನ್ನು ಸಮುದ್ರಕ್ಕೆ ಬಿಡುವುದರ ವಿರುದ್ಧ, ಪ್ರಾಣಿ, ಪಕ್ಷಿ, ಜಲರಗಳ ನೀಲಿ ಹಸಿರುಗಳನ್ನೊಳಗೊಂಡ ಪರಿಸರವನ್ನು ರಕ್ಷಿಸಲು ಹಾಗೂ ಇನ್ನೂ ಅನೇಕ ಪರಿಸರ ರಕ್ಷಣಾತ್ಮಕ ಕರ್ತವ್ಯಗಳನ್ನು ಈ ಸಂಸ್ಥೆಯು ಮಾಡುತ್ತದೆ. ಪ್ರತಿಭಟನೆ ಮಾಡುವುದು, ಗಮನ ಸೆಳೆಯುವುದು, ಪರಿಸರ ಉಳಿಸುವುದು, ಮಾನವ ದೌರ್ಜನ್ಯವನ್ನು ಪರಿಸರದ ಮೇಲೆ ತಡೆಯುವುದು ಇದರ ದೈನಂದಿನ ಕೆಲಸವಾಗಿದೆ.

ಚಿಮ್ಮೊ ಚಳುವಳಿ : ಮುಂಬಯಿ ಪ್ರಕೃತಿ ವಿಜ್ಞಾನ ಸಮಾಜ, ದೆಹಲಿಯಲ್ಲಿರುವ ವಿಜ್ಞಾನ ಮತ್ತು ಪರಿಸರ ಕೇಂದ್ರ ಹಿಮಾಲಯದ ತಪ್ಪು ಅರಣ್ಯವನ್ನು ರಕ್ಷಿಸುತ್ತಿರುವ ಚಳುವಳಿಯೇ ಚಿಮ್ಮೊಚಳುವಳಿ, ಕೇರಳದಲ್ಲಿನ ನಿತ್ಯ ಹಸಿರು ಅರಣ್ಯವನ್ನು ರಕ್ಷಿಸಲು ಹೋರಾಡಿದ ಕೇರಳದ ಶಾಸ್ತ್ರ ಸಾಹಿತ್ಯ ಪರಿಷತ್ತು, ಕರ್ನಾಟಕದ ಅಪ್ಪಿಕೋ ಚಳುವಳಿಗಳು ಪರಿಸರದ ರಕ್ಷಣೆಗಾಗಿ ನಡೆದ ಮಾದರಿ ಹೋರಾಟಗಳಾಗಿವೆ.

1973ರಲ್ಲಿ ಉತ್ತರ ಪ್ರದೇಶದ ಚಮೋಲಿ ಜಿಲ್ಲೆಯ ಮಂಡಲ್ ಹಳ್ಳಿಯಲ್ಲಿ. ಈ ಹಳ್ಳಿಯ ಸುತ್ತ ಸರ್ಕಾರದಿಂದ ರಕ್ಷಿಸಲ್ಪಟ್ಟ ಅರಣ್ಯವಿದೆ. ಈ ಅರಣ್ಯದಿಂದ ಮರ ಕಡಿಯಲು ಬಂದವರ ವಿರುದ್ಧ ಸುಂದರಲಾಲ್‌ ಬಹುಗುಣ ನೇತೃತ್ವದಲ್ಲಿ ನಡೆದ ಚಳುವಳಿ,

ಇದರಿಂದ ಸೂರ್ತಿಗೊಂಡು ಕರ್ನಾಟಕದ ಶಿರಸಿ, ಸಿದ್ದಾಪುರ, ಸಾಗರ ತಾಲ್ಲುಕುಗಳಲ್ಲಿ ಜನರು ಮರ ಕಡಿಯುವುದರ ವಿರುದ್ಧ ಮರ ಏರಿ ಅಪ್ಪಿಕೊಂಡದ್ದು ಅಪ್ಪಿಕೊ ಚಳುವಳಿಯಾಯಿತು. ಇದರ ನೇತೃತ್ವವನ್ನು ವಹಿಸಿದವರು ಪಾಂಡುರಂಗ ಹೆಗಡೆ.

ಹೀಗೆಯೇ ಮುಂದೆ ಮಿಟ್ಟಿ ಬಜಾಬ್ ಆಂದೋಲನ 1977, ಟೈಗರ್ ಪ್ರಾಜೆಕ್ಟ್ 1973, ಅರಣ್ಯ ಸಂಶೋಧನಾ ಸಂಸ್ಥೆಯನ್ನು ಡೆಹರಾಡೂನ್‌ನಲ್ಲಿ ಸ್ಥಾಪಿಸುವ ಮೂಲಕ ಹಾಗೂ ನರ್ಮದಾ ಚಳುವಳಿಯನ್ನು ಮೇಧಾಪಾಟ್ಕರ್ ರವರ ನೇತೃತ್ವದಲ್ಲಿ ನಡೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿದ್ದಾರೆ.

ಪ್ರಸಕ್ತ ಸನ್ನಿವೇಶದಲ್ಲಿ ಭಾರತದಂತಹ ದೇಶಕ್ಕೆ ವೈಜ್ಞಾನಿಕವಾಗಿ ಶೇ. 33ರಷ್ಟು ಅರಣ್ಯ ಮತ್ತು ಪರಿಸರ… ಉತ್ತಮವಾಗಿರುತ್ತದೆ. ಆದರೆ ಈಗ ಇರುವುದು ಕೇವಲ ಶೇ. 21 ಪ್ರತಿಶತ ಅಲ್ಲದೆ ಈ ಅರಣ್ಯವು ಸಹ ಶೇ. 19ಕ್ಕೆ ಇಳಿಮುಖವಾಗುತ್ತಿರುವುದು ಅಚ್ಚರಿಯನ್ನುಂಟು ಮಾಡುತ್ತಿದೆ. ಅದಕ್ಕಾಗಿ ಭಾರತ ಸರ್ಕಾರವು ಅನೇಕ ಕಾಠ್ಯಕ್ರಮಗಳನ್ನು ಜಾರಿಗೆ ತಂದಿದೆ.ಪರಿಸರ ಮಾಲಿನ್ಯ

1. ಅರಣ್ಯಗಳ ಅಭಿವೃದ್ಧಿಗಾಗಿ ಸಂಶೋಧನೆ ಕೈಗೊಳ್ಳಲು ಡೆಹರಾಡೂನ್‌ನಲ್ಲಿ ಅರಣ್ಯ ಸಂಶೋಧನಾ ಸಂಸ್ಥೆ ಸ್ಥಾಪಿಸಲಾಗಿದೆ.

2. ರಾಜ್ಯಸರ್ಕಾರಗಳು ಅರಣ್ಯ ನೀತಿಯನ್ನು ಜಾರಿಗೊಳಿಸಿ ಅವುಗಳಿಗೆ ಸಹಾಯ ನೀಡಲು ‘ಕೇಂದ್ರ ಆರಣ್ಯ ಆಯೋಗ’ ಸ್ಥಾಪಿಸಲಾಗಿದೆ.

3. ಪಾಳು ಭೂಮಿಗಳಲ್ಲಿ ಅರಣ್ಯ ಬೆಳೆಸಲು ‘ಕಾಡು ಬೆಳೆಸುವ ಕಾಠ್ಯಕ್ರಮ’ ಹಮ್ಮಿಕೊಳ್ಳಲಾಗಿದೆ.

4. ಅರಣ್ಯ ಅಭಿವೃದ್ಧಿ ಕಾಠ್ಯಕ್ರಮ ಕೈಗೊಳ್ಳಲು ಅರಣ್ಯ ಅಭಿವೃದ್ಧಿನಿಗಮ ಸ್ಥಾಪಿಸಲಾಗಿದೆ.

5. ವಿಶ್ವಬ್ಯಾಂಕಿನ ನೆರವಿನಿಂದ ಸಾಮಾಜಿಕ ಅರಣ್ಯ ಯೋಜನೆಯನ್ನು ಪ್ರಾರಂಭಿಸಲಾಗಿದೆ.

6. ಭಾರತದಲ್ಲಿನ ಅರಣ್ಯ ಸಂಪನ್ಮೂಲದ ಸಮೀಕ್ಷೆಗಾಗಿ ‘ಅರಣ್ಯ ಸಂಪನ್ಮೂಲ ಸಮೀಕ್ಷಾ ಸಂಸ್ಥೆ’ಯನ್ನು 1991ರಲ್ಲಿ ಸ್ಥಾಪಿಸಲಾಗಿದೆ.

ಪಾಶ್ಚಿಮಾತ್ಯ ದೇಶಗಳಲ್ಲಿ ವಾತಾವರಣದ ಮಾಲಿನ್ಯ ಕಡಿಮೆಯಾಗುತ್ತಿದ್ದರೆ, ಭಾರತದಲ್ಲಿ ಮಾತ್ರ ಇದು ಹೆಚ್ಚುತ್ತಲೇ ಇದೆ. ಭಾರತದ ಮಾಲಿನ್ಯ ಸಂಶೋಧನಾ ಅಭಿಪ್ರಾಯದಂತೆ ಕಲ್ಕತ್ತಾದ ಶೇ. 60 ನಿವಾಸಿಗಳು ವಾತಾವರಣ ಮಾಲಿನ್ಯದಿಂದಾಗಿ ಶ್ವಾಸಕೋಶದ ರೋಗಗಳಿಂದ ಬಾಧಿತರಾಗಿದ್ದಾರೆ. ಮುಂಬಯಿ ನಗರದ ಪಾಲಿಗೆ ಚೆಂಬೂರು ಬಡಾವಣೆಯು ‘ಗ್ಯಾಸ್ ಛೇಂಬರು’ ವಿಷಾನಿಲದ ಕೋಡಿಯೇ ಆಗಿದೆ.

ಇಲ್ಲಿ ಭಾರತದ ರಸಾಯನಿಕ ಉದ್ಯಮಗಳ ಅತಿ ಹೆಚ್ಚಿನ ಸಾಂದ್ರತೆ ಇದೆ. ಜಗತ್ತಿನ ಉಷ್ಣತೆಯಲ್ಲಿ 1-2 ಸೆ. ನಷ್ಟು ಉಷ್ಣತೆಯು ಹೆಚ್ಚಾದರೆ ಬೇಸಿಗೆಯಲ್ಲಿ ಮತ್ತಷ್ಟು ಸೆಖೆಯೂ, ಮಳೆಗಾಲದಲ್ಲಿ ವಿಪರೀತ ಮಳೆಯು ಕಾಣಿಸಿಕೊಂಡು ಕೃಷಿಗೆ ಮೃತ್ಯುವಾದರೂ ಅಚ್ಚರಿಯೇನಲ್ಲ. ಹಾಗಾಗಿ ವಸುದೈವ ಕುಟುಂಬಕಂ ಅತ್ಯಂತ ಪ್ರಮುಖ ಪರಿಸರ ರಕ್ಷಣೆ ಆಗಬೇಕಿದೆ.

ಭಾರತದ ಪ್ರಮುಖ ಕಲುಷಿತ ನಗರಗಳು: ಪರಿಸರ ಮಾಲಿನ್ಯ

1. ನವದೆಹಲಿ

2. ಪಾಟ್ನಾ

3 ಗ್ವಾಲಿಯರ್

4. ರಾಯ್‌ ಪುರ

5. ಕರಾಚಿ

6. ಪೇಶಾವರ

7. ರಾವಲ್‌ಪಿಂಡಿ

8. ಅಹಮದಾಬಾದ್

9. ಲಕ್ಟೋ

10. ಫಿರೋಜಾಬಾದ್

ಭಾರತದ ಸ್ವಚ್ಛನಗರಗಳು
1. ಕರ್ನಾಟಕ – ಮೈಸೂರು

2. ಚಂಡಿಗಡ – ಚಂಡಿಗಡ

3. ತಮಿಳುನಾಡು – ತಿರುಚನಾಪಳ್ಳಿ

4. ಸೂರತ್ – ಗುಜರಾತ್

5. ಎನ್‌ ಡಿಎಂಸಿ – ನವದೆಹಲ

ವಿಶ್ವದ ಸಚ್ಛ ದೇಶಗಳು

ಐಸ್‌ಲ್ಯಾಂಡ್, ಸ್ವೀಡನ್, ಸಿಟ್ಟರ್ಲೆಂಡ್, . ನಾರ್ವೆ, ಮಾರಿಷಸ್, ಕೊಸ್ಟರೀಕ್, ಫ್ರಾನ್ಸ್, ಆಸ್ಟ್ರಿಯಾ, ಕ್ಯೂಬಾ, ಸಿಂಗಾಪುರ,

ವಿಶ್ವದ ಕಲುಷಿತ ದೇಶಗಳು: ಪರಿಸರ ಮಾಲಿನ್ಯ

ಭಾರತ, ಪಾಕಿಸ್ತಾನ, ಇರಾನ್, ಕತಾರ್, ಟರ್ಕಿ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಮಂಗೋಲಿಯಾ, ಈಜಿಪ್ಟ್, ಚೀನಾ

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....