Kannada essays

ಚುನಾವಣಾ ಸುಧಾರಣೆಗಳು ಪ್ರಬಂಧ । Revolutionary Electoral Reforms Essay 2023

ಚುನಾವಣಾ ಸುಧಾರಣೆಗಳು: ಭಾರತದಲ್ಲಿ ವ್ಯವಸ್ಥಿತವಾಗಿ ಚುನಾವಣೆಗಳನ್ನು ನಡೆಸಲು ಸಂವಿಧಾನಾತ್ಮಕ ಸಂಸ್ಥೆಯಾದ ಚುನಾವಣಾ ಆಯೋಗವಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಿಂದ ಹಿಡಿದು ಸಂಸದೀಯ ವ್ಯವಸ್ಥೆಯ ಚುನಾವಣೆಗಳ ತನಕ ಹಂತ ಹಂತವಾಗಿ ಆಯೋಗವು ಚುನಾವಣೆಗಳನ್ನು ನಡೆಸಿಕೊಂಡು ಬರುತ್ತಿದೆ. ಚುನಾವಣೆಗಳನ್ನು ನಿಯಮಿತವಾಗಿ ನಡೆಸುವುದು ಪ್ರಜಾಪ್ರಭುತ್ವದ ಜೀವಂತಿಕೆಯ ಲಕ್ಷಣ. ಚುನಾವಣೆಗಳು ನಿಷ್ಪಕ್ಷಪಾತವಾಗಿ ನಡೆದಾಗ ದೇಶ ಅಭಿವೃದ್ಧಿ ಹೊಂದುತ್ತದೆ. ರಾಜಕೀಯ ಅಪರಾಧೀಕರಣ, ಅತಿಯಾದ ಹಣದ ಪ್ರಭಾವ, ಸರ್ಕಾರಿಯಂತದ ದುರುಪಯೋಗ, ರಾಜಕೀಯ ಪಕ್ಷಗಳ ಮೇಲೆ ನಿಯಂತ್ರಣವಿಲ್ಲದಿರುವುದ, ಪಕ್ಷಾಂತರ ಮತ್ತು ಚುನಾವಣಾ ವಿವಾದಗಳು ಬೇಗ ಇತ್ಯರ್ಥವಾಗದೇ ಇರುವುದು ಸೇರಿದಂತೆ, ಅನೇಕ ಅಂಶಗಳು ಇಂದಿಗೂ ಚುನಾವಣಾ ವ್ಯವಸ್ಥೆಯ ಸಮಸ್ಯೆಗಳಾಗಿವೆ.

Table of Contents

ಚುನಾವಣಾ ಸುಧಾರಣೆಯ ಮಹತ್ವ:

1) ಹಣ ನಮ್ಮ ಚುನಾವಣೆಗಳಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಬಹುಪಾಲು ಅಭ್ಯರ್ಥಿಗಳು ಜನರಿಗೆ ಚುನಾವಣಾ ದಿನದ ಹಿಂದಿನ ರಾತ್ರಿ ಹಣವನ್ನು ಹಂಚಿ ಗೆಲ್ಲುವುದು ಸಾಮಾನ್ಯವಾಗಿದೆ. ಹಾಗಾಗಿ ಇದನ್ನು ತಡೆಯಲು ಚುನಾವಣೆ ಸುಧಾರಣೆ ಬೇಕು.

2) ಕೆಲವು ವ್ಯಕ್ತಿಗಳು ಹಾಗೂ ಪಕ್ಷಗಳು ಚುನಾವಣೆಯಲ್ಲಿ ಜಯಶೀಲರಾಗಿ ತದ ನಂತರ ಬೇರೆ ಯಾವುದೋ ಪಕ್ಷವನ್ನು ಸೇರಿಬಿಡುತ್ತಾರೆ. ಪಕ್ಷಾಂತರ ನಿಷೇಧ ಕಾಯಿದೆ ಇದ್ದಾಗ್ಯೂ ಇದರ ಪರಿಣಾಮ ಸರಿಯಾಗಿ ಬೀರುವುದಿಲ್ಲ. ಆದ್ದರಿಂದ ಚುನಾವಣಾ ಸುಧಾರಣೆ ಬೇಕು.

3) ಚುನಾವಣೆಯಲ್ಲಿ ಭಾಗವಹಿಸುವ ಬಹುಪಾಲು ಜನರು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು ಐಪಿಸಿ, ಸಿಆರ್‌ಪಿಸಿ, ಹಾಗೂ ನ್ಯಾಯಾಂಗದಲ್ಲಿ ಕೇಸುಗಳು ದಾಖಲಾಗಿರುವವರು ಸಹ ಚುನಾವಣೆಯಲ್ಲಿ ಗೆದ್ದು ಮಂತ್ರಿಗಳಾಗುತ್ತಾರೆ. ಹಾಗಾಗಿ ಚುನಾವಣಾ ಸುಧಾರಣೆ ಬೇಕು.

4) ವೋಟಿಂಗ್ ಪದ್ಧತಿಯು ತುಂಬಾ ಗಂಭೀರವಾಗಿದ್ದು ಅಭ್ಯರ್ಥಿಯೊಬ್ಬ ಜಯಗಳಿಸಲು ಸ್ಪರ್ದಿಸಿದ ವ್ಯಕ್ತಿಗಳಲ್ಲೇ ಅತ್ಯಂತ ಹೆಚ್ಚು ಪಡೆದರೆ ಸಾಕು. ಅಂದರೆ ಉದಾಹರಣೆಗೆ ಮೂವರಿದ್ದರೆ ಅದರಲ್ಲಿ ಓರ್ವ ಅತಿ ಹೆಚ್ಚು ಪಡೆದರೆ ಸಾಕು. ಮತದಾರರು ಒಟ್ಟು ಪ್ರತಿಶತದಲ್ಲಿ ವಿರೋಧ ಪಕ್ಷಗಳಿಗೆ ಇದ್ದರೂ ಅಭ್ಯರ್ಥಿ ಅಧಿಕಾರ ಹಿಡಿಯುತ್ತಾನೆ.

5) ಜಾತಿ ಮತ್ತು ಧರ್ಮ, ಮತೀಯವಾದ, ಕೋಮುವಾದ ಚುನಾವಣೆಗಳಲ್ಲಿ ಹೆಚ್ಚು ಪಾತ್ರ ವಹಿಸುತ್ತವೆ. ಆದ್ದರಿಂದ ಇವುಗಳನ್ನು ನಿಯಂತ್ರಿಸಲು ಚುನಾವಣೆ ಸುಧಾರಣೆಗಳು ಬೇಕು.

6): ರಾಜಕಾರಣದಲ್ಲಿ ನಿವೃತ್ತ ವಯಸ್ಸು ಇಲ್ಲ. ದೇಶದಲ್ಲಿ ಕಸ ಹೊಡೆಯುವ ‘ಡಿ’ ದರ್ಜೆ ನೌಕರನಿಂದ ಹಿಡಿದು ಉನ್ನತ ಅಧಿಕಾರಿ ಐಎಎಸ್‌ ತನಕ ಎಲ್ಲರಿಗೂ ನಿವೃತ್ತಿ ವಯಸ್ಸಿರುವಾಗ ಈ ರಾಜಕೀಯ ಕ್ಷೇತ್ರದಲ್ಲಿರುವವರಿಗೆ ನಿವೃತ್ತ ವಯಸ್ಸು ಇಲ್ಲದಿರುವುದರಿಂದ ಚುನಾವಣಾ ಸುಧಾರಣೆಗಳು ಬೇಕು.

7) ಕೆಲವು ಪಕ್ಷಗಳಿಗೆ ಸೈದ್ಧಾಂತಿಕತೆಯೇ ಇಲ್ಲ. ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಸೇರಿದಂತೆ ಯಾರಿಗೂ ವಿವಿಧ ಸಿದ್ದಾಂತಗಳು ಇಲ್ಲವಾಗಿವೆ. ರಾಷ್ಟ್ರ ಸಮ್ಮಿಶ್ರತೆಯಲ್ಲಿ ಒಂದು ಪಕ್ಷದ ಜೊತೆ ಇದ್ದರೆ ರಾಜ್ಯದಲ್ಲಿ ಮತ್ತೊಂದು ಪಕ್ಷದ ಜೊತೆ ಇರುತ್ತಾರೆ. ಇದು ದುರ್ಲಭ ಮತ್ತು ತತ್ವರಹಿತ ರಾಜಕೀಯ.

8) ರಾಜಕೀಯ ಶುದ್ದೀಕರಣ ನಮ್ಮ ದೇಶದಲ್ಲಿ ಎಂದಿಗೂ ಜರುಗಿಲ್ಲ. ತಲತಲಾಂತರದಿಂದಲೂ ಅಧಿಕಾರ ಹಿಡಿದ ಕೆಲವೇ ಜನರು ಇಂದಿಗೂ ಅದರ ಪಳೆಯುಳಿಕೆಗಳಂತೆ ಇದ್ದಾರೆ. ಮಗ, ಮೊಮ್ಮಗ, ಅಪ್ಪ, ಅಮ್ಮರಾದಿಯಾಗಿ ರಾಜಕೀಯದಲ್ಲಿದ್ದಾರೆ. ಕೆಲವರಂತೂ ಪಕ್ಷಗಳನ್ನು ತಮ್ಮ ಮನೆಯ ಸ್ವತ್ತುಗಳಂತೆ ಮಾಡಿಕೊಂಡಿದ್ದಾರೆ.

9) ಬೇರೆ ದೇಶಗಳಲ್ಲಿ ರಾಜಕೀಯ ಕ್ಷೇತ್ರ ಪ್ರವೇಶಿಸಿದರೆ ಸಂಪತ್ತು ನಶಿಸಿ ಹೋಗುತ್ತದೆ. ಆದರೆ ನಮ್ಮಲ್ಲಿ ರಾಜಕೀಯ ಪ್ರವೇಶಿಸುವ ಮೂಲ ಉದ್ದೇಶ ಸರ್ಕಾರದ ಹಣವನ್ನು ಲೂಟಿ ಮಾಡುವುದು. ಆದ್ದರಿಂದ ಚುನಾವಣಾ ಸುಧಾರಣೆಗಳು ಬೇಕು.

10) ಎಲ್ಲರಿಗೂ ಮತದಾನದ ಹಕ್ಕು ಕೊಟ್ಟಿರುವುದು. ಹಾಗೆಯೇ ಕೆಲವರು ಮತದಾನ ಮಾಡದೇ ಹೊರಗುಳಿಯುವುದು ಸಾಮಾಜಿಕ ಪಿಡುಗಾಗಿದ್ದು, ಇದರಿಂದ ದುಷ್ಟರು, ಕಳ್ಳರು, ಭ್ರಷ್ಟರು, ಪರೋಡಿಗಳು ಸದನ ಪ್ರವೇಶಿಸುವ ಹಂತಕ್ಕೆ ಹೋಗಿದೆ. ಆದ್ದರಿಂದ ಚುನಾವಣಾ ಸುಧಾರಣೆಗಳು ಬೇಕು.

11) ಪ್ರಚೋದನಕಾರಿ ಭಾಷಣ, ಉನ್ಮಾದ ಭರಿಸುವ ಸುಳ್ಳು ಭರವಸೆಗಳು, ಅತಿಯಾದ ತೇಜೋವಧೆ, ಮಾನಹಾನಿ ವಚನ ಭ್ರಷ್ಟತೆ, ಆಡಳಿತ ಯಂತ್ರ ದುರುಪಯೋಗ, ಸಾಮ್ರಾಜ್ಯಶಾಹಿ ಹಾಗೂ ಜಾತಿ, ಧರ್ಮ, ಕೋಮು ಆಧಾರಿತ ಚುನಾವಣೆಗಳು ಉತ್ತಮ ಪ್ರಜಾಪ್ರಭುತ್ವಕ್ಕೆ ಮಾರಕವಾದ್ದರಿಂದ ಭಾರತದಲ್ಲಿ ಚುನಾವಣಾ ಸುಧಾರಣೆಗಳು ಆಗಬೇಕಾಗಿರುವುದು ಅತ್ಯಂತ ತುರ್ತಾಗಿದೆ.

1990ರಲ್ಲಿ ಚುನಾವಣಾ ಸುಧಾರಣೆಗಳು ಮತ್ತು ಸಮಿತಿಗಳು ನೇಮಕಗೊಂಡವು. ಸ್ವಾತಂತ್ರ್ಯದ ನಂತರ ಕೆಲವೊಂದು ಸಂವಿಧಾನ ತಿದ್ದುಪಡಿಗಳು, ವರದಿಗಳು ಮಂಡನೆಯಾದವು. ಚುನಾವಣಾ ಸುಧಾರಣೆಗಳು ಈ ಕೆಳಕಂಡಂತೆ ಇವೆ.

1) ಪ್ರಜಾಪ್ರತಿನಿಧಿ ಕಾಯಿದೆ-1950 ಹಾಗೂ ಪ್ರಜಾ ಪ್ರತಿನಿಧಿ ಕಾಯಿದೆ:

(1) ಅಪರಾಧಗಳಡಿಯಲ್ಲಿ ಶಿಕ್ಷಿಸಲ್ಪಟ್ಟ ವ್ಯಕ್ತಿಯ ಮತದಾನದ ಹಕ್ಕನ್ನು 6 ವರ್ಷಗಳವರೆಗೆ ಕಿತ್ತುಕೊಳ್ಳುವುದು

(2) ರಾಜಕೀಯ ಪಕ್ಷಗಳ ಕಡ್ಡಾಯ ನೋಂದಣಿ, ಬ್ಯಾಂಕ್ ಖಾತೆಗಳ ವಿವರ ಬಹಿರಂಗ, ದಾನ ಸ್ವೀಕಾರ ಘೋಷಣೆ

(3) ಮತಗಟ್ಟೆ ಬಳಿ ಆಮಿಷ ಒಡ್ಡುವವರಿಗೆ 3 ತಿಂಗಳ ಸೆರೆವಾಸ ಮತ್ತು ದಂಡ, ಧಾರ್ಮಿಕ ನಂಬಿಕೆ, ಭಾವನೆಗಳನ್ನು ದುರ್ಬಳಕೆ ಮಾಡಿ ಮತ ಹಾಕದಂತೆ ತಡೆಯುವವರಿಗೆ ಒಂದು ವರ್ಷ ಸಜೆ ಹಾಗೂ ದಂಡ

(4) 2ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಒಬ್ಬನೇ ಅಭ್ಯರ್ಥಿ ಸ್ಪರ್ದಿಸುವಂತಿಲ್ಲ

(5) ಚುನಾವಣಾ ವೆಚ್ಚ ಮಿತಿಯನ್ನು ಎಂಪಿ ಗೆ 25ಲಕ್ಷ, ವಿಧಾನಸಭೆಗೆ 10 ಲಕ್ಷ ನೀಡಲಾಗಿದೆ.

2) ಸಂವಿಧಾನದ 61ನೇ ತಿದ್ದುಪಡಿ:

1988ರ ಮೂಲಕ 326ನೇ ವಿಧಿಯನ್ನು ತಿದ್ದುಪಡಿ ಮಾಡಿ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲಾಗಿದೆ.

3) ಎ.ಎಂ, ಪಾರ್ಕುಂಡೆ ಸಮಿತಿ ವರದಿ 1975:

ಇದು ಜಯಪ್ರಕಾಶ್ ನಾರಾಯಣ್‌ ರಚಿಸಿದ್ದ ಸಮಿತಿ, ಸಂಪೂರ್ಣ ಶಾಂತಿಯ ಸಂದರ್ಭದಲ್ಲಿ ‘ಸಿಟಿಜನ್ಸ್ ಫಾರ್ ಡೆಮಾಕ್ರಸಿ’ ಸಂಘದ ಪರವಾಗಿ 1975ರಲ್ಲಿ ಚುನಾವಣಾ ಸುಧಾರಣೆ ಮುಂದಿರಿಸಿತು. ಚುನಾವಣೆಗಳಿಗೆ ಸರ್ಕಾರವೇ ಹಣ ಖರ್ಚು ಮಾಡುವ ವ್ಯವಸ್ಥೆ ಜಾರಿಗೆಗೆ ಸಮಿತಿ ಶಿಫಾರಸ್ಸು ಮಾಡಿತ್ತು.

4) ದಿನೇಶ್ ಗೋಸ್ವಾಮಿ ಸಮಿತಿ ವರದಿ 1990:

ನ್ಯಾಷನಲ್ ಫ್ರೆಂಟ್ ಸರ್ಕಾರ ರಚಿಸಿದ್ದ ಸರ್ವಪಕ್ಷ ಸಮಿತಿ ಇದು. ಮೇ 1990ರಲ್ಲಿ ಇದು ಶಿಫಾರಸ್ಸು ಮಾಡಿತು. ಕೆಲವು ಚುನಾವಣಾ ಅಭ್ಯರ್ಥಿಗಳ ವೆಚ್ಚವನ್ನು ನಗದಲ್ಲಿದ ರೂಪದಲ್ಲಿ ಭರಿಸಬೇಕೆಂಬುದು ಸಮಿತಿಯ ಪ್ರಮುಖ ಸಲಹೆಯಾಗಿತ್ತು.

5) ಎನ್.ಎನ್. ವೋದ್ಯಾ ಸಮಿತಿ 1980:

86ರ ದಶಕದಲ್ಲಿ ‘ಹೆಚ್ಚುತ್ತಿರುವ ರಾಜಕೀಯ ಅಪರಾಧೀಕರಣ ಹಾಗೂ ಕೆಲವು ಕ್ರಿಮಿನಲ್ ಮೊಕದ್ದಮೆ ಸಿಎಲ್ ಆರೋಪ ಎದುರಿಸುತ್ತಿರುವವರಿಗೆ ಶಿಫಾರಸ್ಸು ಮಾಡಲಾಯಿತು.

6) ಟಿ.ಎನ್.ಶೇಷನ್ 1993:

ಚುನಾವಣಾ ಮುಖ್ಯ ಕಮೀಷನರ್ ಆಗಿದ್ದ ಟಿ.ಎನ್.ಶೇಷನ್ 1993ರಲ್ಲಿ ಎಲ್ಲರಿಗೂ ಮತದಾರರ ಚೀಟಿಯನ್ನು ವಿತರಿಸಿದ್ದುದು ಅಕ್ರಮ ಮತದಾನ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದ್ದರೂ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ.

7) ಏಕ ಸದಸ್ಯ, ದ್ವಿಸದಸ್ಯ, ತ್ರಿಸದಸ್ಯ ಚುನಾವಣಾ ಆಯೋಗ:

1989ರ ತನಕ ಏಕಸದಸ್ಯ ಅಂಗವಾಗಿದ್ದ ಆಯೋಗಕ್ಕೆ ಸಾರ್ವತ್ರಿಕ ಚುನಾವಣೆಯ ಸ್ವಲ್ಪ ಪೂರ್ವದಲ್ಲಿಯೇ ಇಬ್ಬರು ಸದಸ್ಯರನ್ನು ನೇಮಕ ಮಾಡಲಾಯಿತು. 1993ರಿಂದ ತ್ರಿಸದಸ್ಯ ಚುನಾವಣಾ ಆಯೋಗ ಜಾರಿಗೆ ಬಂತು.

8) ಇಂದ್ರಜಿತ್ ಗುಪ್ತಾ ಸಮಿತಿ 1988:

1) ಸರ್ಕಾರವು ಚುನಾವಣಾ ವೆಚ್ಚವನ್ನು ಹಣಕಾಸು ರೂಪದಲ್ಲಿ ಭರಿಸಬಾರದು.

2) ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ನೆರವಿನಿಂದ ‘ಚುನಾವಣಾ ನಿಧಿ’ ಸ್ಥಾಪನೆ ಮಾಡುವುದು

3) ಮಾನ್ಯತೆ ಪಡೆದ ಪಕ್ಷಗಳಿಗೆ ಮಾತ್ರ ನೆರವು ನೀಡುವುದು

4) ರಾಜಕೀಯ ಪಕ್ಷಗಳು ತಮ್ಮ ವಾರ್ಷಿಕ ಹಣಕಾಸು ವಿವರಗಳನ್ನು ಆಯೋಗಕ್ಕೆ ನೀಡುವುದು.

ಚುನಾವಣಾ ಸುಧಾರಣೆಗಳು:

ಸ್ವತಂತ್ರ ಭಾರತದಲ್ಲಿ ಈ ಕೆಳಗಿನಂತೆ ಇಲ್ಲಿಯ ತನಕ ಕೆಲವು ಚುನಾವಣಾ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಅವುಗಳಲ್ಲಿ ಈ ಕೆಳಗಿನವುಗಳು ಅತ್ಯಂತ ಪ್ರಮುಖವಾಗಿವೆ.

1) 1989ರಲ್ಲಿ ಚುನಾವಣೆಯಲ್ಲಿ ಮತ ಹಾಕುವ ವಯೋಮಾನವನ್ನು 21ರಿಂದ 18ಕ್ಕೆ ಇಳಿಸಲಾಯಿತು. ಇದರಿಂದ 35,7 ಮಿಲಿಯನ್ ಮತದಾರರು ಮತದಾನದಲ್ಲಿ ಭಾಗವಹಿಸಿದರು.

2) 1951ರ ಪ್ರಜಾ ಪ್ರತಿನಿಧಿ ಕಾಯಿದೆಗೆ 1988ರಲ್ಲಿ ತಿದ್ದುಪಡಿ ತರುವುದರ ಮೂಲಕ ಒಂದು ವೇಳೆ ಮತಗಟ್ಟೆಗಳನ್ನು ಆಕ್ರಮಣ ಮಾಡಿದರೆ ಚುನಾವಣೆಗಳನ್ನು ಮುಂದೂಡಲು ಮತ್ತು ರದ್ದುಪಡಿಸಲು ಅವಕಾಶ ನೀಡಲಾಯಿತು.

3) ಚುನಾವಣಾ ಕ್ಷೇತ್ರಗಳ ಮೇಲೆ ಮಿತಿ ಹೇರಲಾಯಿತು. ಓರ್ವ ಅಭ್ಯರ್ಥಿಯು ಎರಡಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ.

4) 1971ರ ರಾಷ್ಟ್ರ ಗೌರವ ಕಾಯಿದೆಯ ಉಲ್ಲಂಘನೆಗಾಗಿ ಶಿಕ್ಷೆಗೆ ಒಳಗಾದ ವ್ಯಕ್ತಿಯನ್ನು 6 ವರ್ಷಗಳ ಕಾಲ ಸಂಸತ್ತು ಅಥವಾ ವಿಧಾನ ಸಭೆಗಳ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಬಹುದಾಗಿದೆ.

5) ಮತಗಟ್ಟೆಗಳ ಅಕ್ಕಪಕ್ಕದಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರಗಳೊಂದಿಗೆ ಸುಳಿದಾಡುವುದು ಗಂಭೀರ ಅಪರಾಧವಾಗಿದೆ. ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ಅಪರಾಧಕ್ಕಾಗಿ 2

6) ಅಸ್ಪೃಶ್ಯತೆ, ಕಳ್ಳ ಸಾಗಾಣಿಕೆ, ಭಯೋತ್ಪಾದನೆ ಮತ್ತು ವಿದ್ವಂಸಕ ಚಟುವಟಿಕೆಗಳ ನಿಷೇಧ ಕಾಯಿದೆಯನ್ನು ಉಲ್ಲಂಘಿಸಿ ಶಿಕ್ಷೆಗೆ ಒಳಗಾದವರನ್ನು 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ದಿಸದಂತೆ ನಿರ್ಬಂಧಿಸಲಾಗಿದೆ.

7) ಮತದಾನ ಮುಕ್ತಾಯವಾಗುವ 48 ಗಂಟೆಗಳ ಒಳಗೆ ಮಧ್ಯ ಅಥವಾ ಯಾವುದೇ ಅಮಲು ತರಿಸುವ ಪದಾರ್ಥಗಳನ್ನು ಮತದಾನ ನಡೆಯುವ ಪ್ರದೇಶದ ವ್ಯಾಪ್ತಿಯಲ್ಲಿ ಮಾರಾಟ ಮಾಡದಂತೆ ನಿಷೇಧಿಸಲಾಗಿದೆ.

8) ಚುನಾವಣಾ ಪ್ರಚಾರದ ಅವಧಿಯನ್ನು ಕೇವಲ 14 ದಿನಗಳಿಗೆ ಇಳಿಸಲಾಗಿದೆ. ಮೊದಲು 20 ದಿನಗಳ ಅಂತರವಿತ್ತು.

9) 1099ರ ನಂತರ, ಅಂಚೆಯ ಮೂಲಕ ಮತ ನೀಡುವ ಅವಕಾಶವನ್ನು ನೀಡಲಾಯಿತು. 1998ರಲ್ಲಿ ರಾಷ್ಟ್ರೀಯ ಬ್ಯಾಂಕುಗಳು, ವಿಶ್ವವಿದ್ಯಾಲಯಗಳು, ವಿಮಾ ನಿಗಮಗಳು, ಮುಂತಾದ ಸೇವೆಯನ್ನು ಚುನಾವಣಾ ಕಾವ್ಯಗಳಿಗೆ ಎರವಲು ಪಡೆಯುವ ಅವಕಾಶವನ್ನು 1998ರಲ್ಲಿ ಕಲ್ಪಿಸಲಾಯಿತು.

10) 1951ರ ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 29ರ ಪ್ರಕಾರ, ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ಮುಂದೆ ಕಡ್ಡಾಯವಾಗಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಬೇಕು.

11) ನಕಲಿ ಮತದಾನ, ಮತ ಪೆಟ್ಟಿಗೆಗಳ ಅಪಹರಣ, ಅಭ್ಯರ್ಥಿಗಳ ಅಪರಹರಣ, ಅಭ್ಯರ್ಥಿಗಳ ಹತ್ಯೆ ಮುಂತಾದ ಚುನಾವಣಾ ಅಪರಾಧಗಳನ್ನು ಎಸಗಿದವರಿಗೆ 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ದಿಸದಂತೆ ನಿಷೇಧಿಸಬಹುದು. ಹಣ, ಜಾತಿ, ಧರ್ಮ, ಮುಂತಾದವುಗಳ ಹೆಸರಿನಲ್ಲಿ ಮತದಾರರ ಮೇಲೆ ಪ್ರಭಾವ ಬೀರಿದ ಅಪರಾಧಿಗಳಿಗೆ ಇದೇ ಶಿಕ್ಷೆಯನ್ನು ನೀಡಲಾಗುತ್ತದೆ.

ಚುನಾವಣೆಯ ಸದ್ಯದ ಸುಧಾರಣೆಗಳು:

1) 1998ರಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಯಿತು. 19518 ಜನಪ್ರತಿನಿಧಿ ಕಾಯಿದೆಗೆ ತಿದ್ದುಪಡಿ ತರುವುದರ ಮುಖಾಂತರ ಬದಲಾವಣೆ ಮಾಡಲಾಯಿತು

2) 1993ರಲ್ಲಿ ಟಿ.ಎನ್.ಶೇಷನ್‌ ರವರು ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದಾಗ ಮತದಾರರ ಗುರುತಿನ ಚೀಟಿಗಳನ್ನು ಜಾರಿಗೆ ತರಲಾಯಿತು.

3) ಸರ್ಕಾರವೇ ಚುನಾವಣಾ ವೆಚ್ಚವನ್ನು ಭರಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಬಹುದಿನಗಳಿಂದಲೂ ಹಲವು ಸಮಿತಿಗಳಿಂದ ಶಿಫಾರಸ್ಸು ಇದ್ದುದರಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.

4) ಅಭ್ಯರ್ಥಿಗಳ ಪೂರ್ವ ಚರಿತ್ರೆಯನ್ನು ಬಹಿರಂಗಗೊಳಿಸಲು ಕಡ್ಡಾಯವಾಗಿ ಆದೇಶ ಮಾಡಲಾಗಿದೆ. ಅಪರಾಧ, ಶಿಕ್ಷಣ, ಆಸ್ತಿ ಮುಂತಾದವುಗಳನ್ನು ಕಡ್ಡಾಯವಾಗಿ ಬಹಿರಂಗ ಮಾಡಬೇಕು.

5) ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಎಲ್ಲರೂ ಒಂದು ಅಫಿಡವಿಟ್ಟನ್ನು ಸಲ್ಲಿಸಬೇಕಾಗಿದೆ. ಅಪರಾಧದ ಹಿನ್ನೆಲೆ, ಚರ ಮತ್ತು ಸ್ಥಿರ ಆಸ್ತಿಯ ವಿವರಗಳು, ಅವಲಂಬಿತರ ವಿವರಗಳು, ಸಾಲಗಳ ಬಗ್ಗೆ ನಮುದಿಸಿ ಎಲ್ಲರೂ ಒಂದು ದಾಖಲೆ ನೀಡಬೇಕಾಗಿದೆ.

6) ರಾಜಕೀಯ ಪಕ್ಷಗಳು ಯಾವುದೇ ವ್ಯಕ್ತಿಯಿಂದ ಅಥವಾ ಯಾವುದೇ ಕಂಪನಿಯಿಂದ ಎಷ್ಟು ಮೊತ್ತದ ದೇಣಿಗೆಯನ್ನಾದರೂ ಸ್ವೀಕರಿಸಬಹುದು. ಕಂಪನಿಗಳು ಕೂಡ ತಾವು ದೇಣಿಗೆ ನೀಡಿದ ಮಾತ್ರಕ್ಕೆ ಆದಾಯ ತೆರಿಗೆಯಲ್ಲಿ ವಿನಾಯಿತಿ ಪಡೆಯುತ್ತವೆ.

7) ಸ್ವಾತಂತ್ರ್ಯ ಭಾರತದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕು ಮತದಾರರಿಗೆ ದೊರೆತಿದೆ. ಇದನ್ನು NOTA ಎಂದು ಕರೆಯುತ್ತಾರೆ.

8) ಕ್ರಿಮಿನಲ್ ಪ್ರಕರಣಗಳಲ್ಲಿ ಜನಪ್ರತಿನಿಧಿಗಳ ವಿರುದ್ಧದ ಆರೋಪವು ಸಾಬೀತಾದ ದಿನದಿಂದಲೇ ಅವ ಶಾಸನ ಸಭೆಯ ಸದಸ್ಯತ್ವ ರದ್ದಾಗಲಿದೆ ಎಂಬ ಕಾನೂನನ್ನು ಸುಪ್ರೀಂ ಕೋರ್ಟ್ ಜಾರಿಗೆ ತಂದಿದೆ.

9) ಲೋಕಸಭೆ ಚುನಾವಣೆಯ ವೆಚ್ಚದ ಗರಿಷ್ಠ ಹಾಗೂ ಕನಿಷ್ಠ ಮಿತಿಯನ್ನು 70 ಲಕ್ಷ ಹಾಗೂ 54 ಲಕ್ಷ ರೂ.ಗಳಿಗೆ ಏರಿಸುವ ಚುನಾವಣಾ ಆಯೋಗದ ಪ್ರಸ್ತಾವನೆಗೆ ಸರ್ಕಾರ ಒಪ್ಪಿದೆ.

ಚುನಾವಣಾ ಸುಧಾರಣೆ ಕಾನೂನು ಆಯೋಗದ ವರದಿ:

ಭಾರತದ ಕಾನೂನು ಆಯೋಗವು ಚುನಾವಣಾ ಸುಧಾರಣೆಗಳ ಮೇಲಿನ 255ನೇ ವರದಿಯನ್ನು 2015ರ ಮಾರ್ಚ್ 12ರಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಸಲ್ಲಿಸಿದೆ. ‘ಚುನಾವಣಾ ಸುಧಾರಣೆಗಳ ಮೇಲೆ ಸಮಗ್ರ ಪರಿಶೀಲನೆ ನಡೆಸಿ ಸಲಹೆ ನೀಡಲು ಕಾನೂನು ಮತ್ತು ನ್ಯಾಯ ಸಚಿವಾಲಯ 20ನೇ ಕಾನೂನು ಆಯೋಗಕ್ಕೆ 2013 ಜನವರಿಯಲ್ಲಿ ಕೇಳಿಕೊಂಡಿತ್ತು’ ಎಂದು ಆಯೋಗದ ಚೇರ್ಮನ್ ನ್ಯಾಯಮೂರ್ತಿ ಎ.ಪಿ.ಶಾಹ್ ಅವರು ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಿದ ಸಂದರ್ಭದಲ್ಲಿ ಹೇಳಿದರು.

ಮುಖ್ಯ ಶಿಫಾರಸ್ಸುಗಳು:

ಚುನಾವಣಾ ಸುಧಾರಣೆಯ ಕುರಿತು ಆಯೋಗದ ವರದಿಯಲ್ಲಿರುವ

ಮುಖ್ಯ ಶಿಫಾರಸ್ಸುಗಳು ಈ ಕೆಳಗಿನಂತಿವೆ.

1) ಕಡ್ಡಾಯ ಮತದಾನ ಬೇಡ:

ಕಾನೂನು ಆಯೋಗವು ಮತದಾನವನ್ನು ಕಡ್ಡಾಯಗೊಳಿಸುವುದರ ಪರವಾಗಿ ಇಲ್ಲ. ಮತದಾನವನ್ನು ಕಡ್ಡಾಯಗೊಳಿಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧ ಎಂದು ಹೇಳಿದೆ. ಕಡ್ಡಾಯ ಮತದಾನದಿಂದ ರಾಜಕೀಯ ಜಾಗೃತಿಯಾಗಲಿ, ಪಾಲ್ಗೊಳ್ಳುವಿಕೆಯಾಗಲಿ ಸುಧಾರಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

2) ಹಿಂದಕ್ಕೆ ಕರೆಸುವ ಹಕ್ಕು ಇಲ್ಲ:

ಯಾವ ಅಭ್ಯರ್ಥಿಗೆ ನೋಟಾ ಮತಗಳಿಗಿಂತ ಕಡಿಮೆ ಮತಗಳು ಬಂದಿರುತ್ತವೆಯೋ ಆ ಅಭ್ಯರ್ಥಿಯು ಆಯ್ಕೆಯಾಗಿದ್ದಲ್ಲಿ ಅಭ್ಯರ್ಥಿ ಬಗ್ಗೆ ಮತದಾರರಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲದಿದ್ದರೆ ಅಭ್ಯರ್ಥಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಹಕ್ಕು ಮತದಾರರಿಗೆ ಇರಬೇಕು ಎಂಬ ಬೇಡಿಕೆ ಸಾರ್ವಜನಿಕವಾಗಿ ಕೇಳಿ ಬರುತ್ತಿತ್ತು. ಅದಕ್ಕೂ ಆಯೋಗದ ನಕಾರ,

3) ಚುನಾವಣಾ ಆಯುಕ್ತರ ನೇಮಕ:

ಮುಖ್ಯ ಚುನಾವಣಾ ಆಯುಕ್ತರ ಮತ್ತು ಚುನಾವಣಾ ಆಯುಕ್ತರ ನೇಮಕಾತಿ ಸಂದರ್ಭದಲ್ಲಿ ರಾಷ್ಟ್ರಪತಿಯವರು ಮೂವರು ಸದಸ್ಯರಿರುವ ಆಯ್ಕೆ ಸಮಿತಿಯೊಂದಿಗೆ ಸಮಾಲೋಚನೆ ನಡೆಸಬೇಕು. ಆಯ್ಕೆ ಸಮಿತಿಯಲ್ಲಿ ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರು ಇರಬೇಕು. ಚುನಾವಣಾಧಿಕಾರಿಗಳ ಪದೋನ್ನತಿಯು ಅವರ ಸೇವಾ ಹಿರಿತನದ ಆಧಾರದ ಮೇಲಿರಬೇಕು. ಒಂದು ವೇಳೆ ಹಿರಿಯ ಚುನಾವಣಾ ಆಯುಕ್ತರು ಪದೋನ್ನತಿಗೆ ಅನರ್ಹರಾಗಿದ್ದರೆ ಆಯ್ಕೆ ಸಮಿತಿಯು ಕಾರಣಗಳನ್ನು ನೀಡಬೇಕು.

4) ಅಮಾನತು:

ಚುನಾವಣಾ ಆಯೋಗದ ಸದಸ್ಯರನ್ನು ಸದಸ್ಯತ್ವದಿಂದ ಅಮಾನತುಗೊಳಿಸುವಾಗ ಎಲ್ಲ ಸದಸ್ಯರಿಗೂ ಸಮನಾಗಿ ಸಂವಿಧಾನಿಕ ರಕ್ಷಣೆ ಒದಗಿಸಬೇಕು. ಇದಕ್ಕಾಗಿ ಕಲಂ 324 (5) ತಿದ್ದುಪಡಿ ಆಗಬೇಕು.

5) ಕಳಂಕಿತ ಅಭ್ಯರ್ಥಿಗಳ ಅನರ್ಹತೆ:

ಕಳಂಕಿತ ಅಭ್ಯರ್ಥಿಗಳ ಅನರ್ಹತೆಯ ಅವಧಿಯನ್ನು ಈಗಿನ 3 ವರ್ಷಗಳಿಂದ 5 ವರ್ಷಗಳಿಗೆ ಹೆಚ್ಚಿಸಲು ಆಯೋಗ ಶಿಫಾರಸ್ಸು ಮಾಡಿದೆ. ಅದರಿಂದ ಚುನಾವಣಾ ವೆಚ್ಚದ ವರದಿ ಸಲ್ಲಿಸದ ಕಳಂಕಿತ ಅಭ್ಯರ್ಥಿಗಳೂ ಇದರ ವ್ಯಾಪ್ತಿಗೆ ಒಳಪಡುತ್ತಾರೆ. ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಬರುವುದಿಲ್ಲ.

6) ಸುದ್ದಿಗಾಗಿ ಹಣ:

ಚುನಾವಣಾ ಸಂದರ್ಭದಲ್ಲಿ ಸುದ್ದಿಗಾಗಿ ಹಣ ನೀಡುವುದ ಮತ್ತು ಸುದ್ದಿಗಾಗಿ ಹಣ ಪಡೆಯುವುದು ಎರಡನ್ನೂ ಅಪರಾಧ ಎಂದು ಪರಿಗಣಿಸಲು ಆಯೋಗ ಶಿಫಾರಸ್ಸು ಮಾಡಿದೆ. ಇದನ್ನು ಚುನಾವಣಾ ಕಾಯ್ದೆಯ ಸೆಕ್ಷನ್ 127ಬಿ ಯಲ್ಲಿ ಸೇರಿಸಲು ಸಲಹೆ ಮಾಡಿದೆ.

7) ಸಂಸದರ / ಶಾಸಕರ ಅನರ್ಹತೆ:

ಪಕ್ಷಾಂತರ ಮಾಡುವ ಸಂಸದರು ಮತ್ತು ಶಾಸಕರನ್ನು ಅನರ್ಹಗೊಳಿಸುವ ಅಧಿಕಾರವನ್ನು ಕೇಂದ್ರದಲ್ಲಿ ರಾಷ್ಟ್ರಪತಿಯವರಿಗೆ ಮತ್ತು ರಾಜ್ಯಗಳಲ್ಲಿ ರಾಜ್ಯಪಾಲರಿಗೆ ನೀಡಲು ಆಯೋಗ ಶಿಫಾರಸ್ಸು ಮಾಡಿದೆ. ಈಗ ಈ ಅಧಿಕಾರ ಸಭಾಧ್ಯಕ್ಷರಿಗೆ / ಚೇರ್ಮನ್‌ರಿಗೆ ಇದೆ.

8) ಪಕ್ಷೇತರ ಅಭ್ಯರ್ಥಿಗಳು:

ಪಕ್ಷೇತರ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸಲು ಆಯೋಗ ಶಿಫಾರಸ್ಸು ಮಾಡಿದೆ. ಏಕೆಂದರೆ ಈಗಿನ ಸರ್ಕಾರ ಡಮ್ಮಿ ಅಥವಾ ಗಂಭೀರ ಅಲ್ಲದ ಅಥವಾ ಮತದಾರರಲ್ಲಿ ಗೊಂದಲ ಉಂಟುಮಾಡಲು ಸ್ಪರ್ಧಿಸುವ ಪಕ್ಷೇತರ ಅಭ್ಯರ್ಥಿಗಳ ಶುದ್ದೀಕರಣದ ಉದ್ದೇಶ ಹೊಂದಿದೆ.

9) ಜಾಹಿರಾತು ನಿಷೇಧ:

ಚುನಾವಣೆಗಳ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳಲು ಸರ್ಕಾರದ ಪ್ರಾಯೋಜಿಕ ಜಾಹೀರಾತುಗಳನ್ನು ಸದನ ವಿಸರ್ಜನೆಗೊಂಡ ಆರು ತಿಂಗಳವರೆಗೆ ನಿಷೇಧಿಸಲು ಆಯೋಗ ಶಿಫಾರಸ್ಸು ಮಾಡಿದೆ.

10) ಒಬ್ಬ ಅಭ್ಯರ್ಥಿ, ಒಂದೇ ಕ್ಷೇತ್ರ:

ಒಬ್ಬ ಅಭ್ಯರ್ಥಿ ಒಂದೇ ಮತಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಸೀಮಿತಗೊಳಿಸಲು ಆಯೋಗ ಶಿಫಾರಸ್ಸು ಮಾಡಿದೆ. ಈಗ ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಮತ ಕ್ಷೇತ್ರಗಳಿಂದ ಸ್ಪರ್ಧಿಸಲು ಅವಕಾಶವಿದೆ. ಚುನಾವಣಾ ವೆಚ್ಚ, ಪ್ರಯತ್ನ ಮತ್ತು ಮತದಾರರನ್ನು ಹೆದರಿಸುವುದು, ಹಣದ ಆಮಿಶ ತೋರಿಸುವುದು ಇತ್ಯಾದಿ ಕಾರಣಗಳ ಹಿನ್ನೆಲೆಯಲ್ಲಿ ಒಬ್ಬ ಅಭ್ಯರ್ಥಿ ಒಂದೇ ಮತಕ್ಷೇತ್ರದಿಂದ ಸ್ಪರ್ಧಿಸಬೇಕು. ಇದಕ್ಕಾಗಿ ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ಮಾಡಬೇಕು.

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....