Kannada essays

ಕೋವಿಡ್-19 । ಕೊರೋನಾ ಬಗ್ಗೆ ಪ್ರಬಂಧ Empowering Resilience: Crafting a Positive COVID-19 Essay

Table of Contents

ಈ ಸಾಂಕ್ರಾಮಿಕ ರೋಗವನ್ನು[ಕೋವಿಡ್-19 ನ್ನು] ನಿಭಾಯಿಸುವಲ್ಲಿ ಕರ್ನಾಟಕ ಯಶಸ್ವಿಯಾಗಿದೆಯೇ? coronavirus essay in kannada

ಇತ್ತೀಚೆಗೆ, ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19ನ್ನು ಒಂದು ಸಾಂಕ್ರಾಮಿಕ ರೋಗ ಎಂದು ಘೋಷಿಸಿತು.

ಈ ವೈರಸ್ ಹರಡುವುದನ್ನು ಭಾರತವು ಉತ್ತಮವಾಗಿ ಎದುರಿಸಿದ್ದರೂ ಕೂಡ, ವಾಸ್ತವದಲ್ಲಿ ಭಾರತ ಎದುರಿಸುತ್ತಿರುವ ಮೂಲ ಸಮಸ್ಯೆಗಳು ಹಾಗೂ ದುರ್ಬಲತೆಯು ಈ ಸಾಂಕ್ರಾಮಿಕ ರೋಗವು ಇನ್ನು ಹೆಚ್ಚಾಗುವಂತೆ ಮಾಡುತ್ತಿದೆ.

coronavirus essay in kannada

ಈ ಕರೋನಾ ವೈರಸ್ ಸಂಕ್ರಾಮಿಕ ಉತ್ತಮ ನಿರ್ವಹಣೆಗಾಗಿ ಕರ್ನಾಟಕವು ಜಾರಿಗೆ ತಂದ ಅತ್ಯುತ್ತಮ ಕಾರ್ಯಚಟುವಟಿಕೆ, ಯೋಜನೆಗಳನ್ನು, ಕೇಂದ್ರ ಸರ್ಕಾರವು ಆನುಸರಿಸುತ್ತಿರುವುದು ಶ್ಲಾಘನೀಯ, ಅಂದರೆ ಸಂಕ್ರಾಮಿಕ ರೋಗದ ಸಮಗ್ರ ಪತ್ತೆಹಚ್ಚುವಿಕೆ ಭೌತಿಕ ಅಥವಾ ಪೋ ಆಧಾರಿತ ಮನೆ ಮನೆ ಸಮೀಕ್ಷೆಯಂತಹ ಅಂಶಗಳು ಇದರಲ್ಲಿ ಅಡಕವಾಗಿದೆ.

ಇಡೀ ಸರ್ಕಾರವೇ ಒಳಗೊಂಡಂತೆ, ಖಾಸಗೀ ವಲಯದ ಬಹುವಲಯ ಏಜನ್ಸಿಗಳ ಸಹಯೋಗದೊಂದಿಗೆ ಪರಿಹಾರ ಹುಡುಕುವಲ್ಲಿ ಕರ್ನಾಟಕ ಸರ್ಕಾರದ ಕಾರ್ಯಯೋಜನೆಯನ್ನು ಕೇಂದ್ರಸರ್ಕಾರ ಶ್ಲಾಘಿಸಿದ.

ಪ್ರಾದೇಶಿಕವಾಗಿ ಸ್ಥಳೀಯ ಸಂದರ್ಭಗಳಿಗೆ ಹೊಂದಿಕೊಳ್ಳುವ ಮತ್ತು ಕೋವಿಡ್- 19. ಸಾಂಕ್ರಾಮಿಕ ರೋಗದ ಉತ್ತಮ ನಿರ್ವಹಣೆಗಾಗಿ ಈ ಯೋಜನೆಗಳನ್ನು ಮುಂದುವರಿಸಲು, ಪುನರಾವರ್ತಿಸಲು ಕೇಂದ್ರವು ರಾಜ್ಯಗಳಿಗೆ ಸೂಚಿಸಿದೆ.

ಕರ್ನಾಟಕ ಎದುರಿಸುತ್ತಿರುವ ಸವಾಲುಗಳು:

ಕೋವಿಡ್ -19 ಗಾಳಿಯಿಂದ ಹರಡಬಲ್ಲ (ಸೀನು ಅಥವಾ ಕೆಮ್ಮು) ಸಾಂಕ್ರಾಮಿಕ ರೋಗವಾಗಿದೆ. ಅಂದರೆ ವಾಯು ಇದರ ಸಂಪರ್ಕ ಮಾಧ್ಯಮವಾಗಿದೆ.

ಕೋವಿಡ್ 19

ಒಬ್ಬ ವ್ಯಕ್ತಿಯು ಈ ವೈರಸ್ ಹೊಂದಿರುವ ವಾಯು, ವಸ್ತು, ಜೀವಿಯನ್ನು ಸ್ಪರ್ಶಿಸಿದರೆ, ತಮ್ಮ ಮೂಗು, ಕಣ್ಣು ಅಥವಾ ಬಾಯಿಯನ್ನು ಸ್ಪರ್ಷಿಸುವ ಮೂಲಕ ಹರಡುವ ಸಾಧ್ಯತೆ ಅತ್ಯಧಿಕ. ರಾಜ್ಯದಲ್ಲಿರುವ ಅತ್ಯಧಿಕ ಜನಸಂಖ್ಯೆ, ನಿರಂತರ ಪ್ರಯಾಣ ಮಾಡುವ ಜನಸಂದಣಿ ಬೃಹತ್ ನಗರಗಳಲ್ಲಿರುವ ಜನದಟ್ಟಣೆ, ಸಾಮೂಹಿಕ ಕೆಲಸ ನಿರ್ವಹಣೆ, ಇದು ಕರ್ನಾಟಕ ರಾಜ್ಯದಲ್ಲಿನ ಕೋವಿಡ್ – 19 ಎದುರಿಸುವಲ್ಲಿ ಸಮಸ್ಯೆಗಳಾಗಿವೆ.

ಕಳಪೆ ಸಾರ್ವಜನಿಕ ನೈರ್ಮಲ್ಯ:

ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಸ್ವಚ್ಛಾರತ್ ಅಭಿಯಾನದಂತಹ ಯೋಜನೆಗಳ ಹೊರತಾಗಿಯು ಭಾರತೀಯರಲ್ಲಿ ಸಾರ್ವಜನಿಕ ನೈರ್ಮಲ್ಯ ಕಳಪೆಯಾಗಿದೆ.

ಕಡಿಮೆ ಬೇಸಿಗೆ ಅವಧಿ:

ಈ ಸಾಂಕ್ರಾಮಿಕ ರೋಗವು ಅತ್ಯಂತ ಅಧಿಕವಾಗಿ ಚಳಿಗಾಲದಲ್ಲಿ ಉಲ್ಬಣಗೊಳ್ಳುವ, ಶೀತಪ್ರದೇಶದಲ್ಲಿ ಅಧಿಕವಾಗುವ ಸಂಭವ ಅಧಿಕ, ಆದ್ದರಿಂದ ಸಾರ್ವಜನಿಕ ವರ್ಗವು ಅತ್ಯಧಿಕವಾಗಿ ಶಾಖೆಯು ಪ್ರದೇಶ, ಅಥವಾ ಶಾಖ ವಾಯು ಪ್ರದೇಶ ಸ್ಥಿರತೆ ಕಾಯ್ದುಕೊಳ್ಳುವುದು ಸೂಕ್ತ, ಹಾಗೂ ಸಾರ್ವಜನಿಕರು ಮುಖಗವಸುಗಳನ್ನು ಬಳಸುವುದು ಸೂಕ್ತವಾಗಿದೆ.

ಈ ವೈರಸ್ ವಿಭಿನ್ನ ರೋಗಲಕ್ಷಣಗಳನ್ನು ಹೊಂದಿದ್ದು ಕೆಲವು ಸಂದರ್ಭದಲ್ಲಿ ರೋಗ ಬಂದು ವಾಸಿಯಾದರೂ ಕೂಡ ಪುನಃ ಬೇರೊಂದು ರೋಗಲಕ್ಷಣದೊಂದಿಗೆ ಮರುಕಳಿಸಬಹುದಾಗಿದೆ.

ಸೂಪರ್ ಸ್ಟೆಡ್ ರೋಗ: coronavirus essay in kannada

ಪ್ರಸ್ತುತ ಭಾರತದಲ್ಲಿನ ಈ ರೋಗದ ಪ್ರಕರಣಗಳು ಸರಳ ಹರಡುವಿಕೆಯ ಅಂದರೆ ಸಾಮಾನ್ಯ ಹಂತದಲ್ಲಿವೆ. ಇದಿನ್ನೂ ಸೂಪರ್ ಸ್ಟೆಡ್‌ಹಂತಕ್ಕೆ ತಲುಪಿಲ್ಲ, ಸೂಪರ್ ಸ್ಟೆಡ್ ಸೋಂಕಿತ ವ್ಯಕ್ತಿಯೊರ್ವ ಯಾವುದೇ ಸಂದರ್ಭದಲ್ಲಿ ಒಂದೇ ಸಮಯಕ್ಕೆ ನೂರಾರು ವ್ಯಕ್ತಿಗಳಿಗೆ ಹರಡುವ ಕ್ರಿಯೆ

ಸಾಮಾಜಿಕ ಮಾಧ್ಯಮದ ವದಂತಿಗಳು:

ಸಾಮಾಜಿಕ ಮಾಧ್ಯಮದಲ್ಲಿನ ವದಂತಿಗಳು ಕೋವಿಡ್ – 19ಗಿಂತ ವೇಗವಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಿವೆ. ಇದರಿಂದ ಸಮಾಜವು ಭಯಭೀತ ಸನ್ನಿವೇಶ ಸೃಷ್ಟಿಗೆ ಕಾರಣವಾಗಿದೆ.

ಇದಕ್ಕೆ ಪೂರಕವೆಂಬಂತೆ ಯುನೈಟೆಡ್ ನೇಷನ್ಸ್ ಆಫ್ ಫೆಡರಲ್ ಅಂಡ್ ಡೆವಲಪ್‌ ಮೆಂಟ್ ಈ ವರ್ಷ ವೈರಸ್ನಿಂದಾಗಿ ಜಾಗತಿಕ ಆರ್ಥಿಕತೆಗೆ 2 ಟ್ರಿಲಿಯನ್ ಡಾಲರ್ ವೆಚ್ಚವಾಗಬಹುದೆಂದು ತಿಳಿಸಿದೆ. ಇದರಿಂದಾಗಿ ಜಾಗತಿಕ ಆರ್ಥಿಕ ಹಿಂಜರಿಕೆಗೆ ಕಾರಣವಾಗಿದೆ. ಇದಲ್ಲದೆ ಜಾಗತಿಕ ಆರ್ಥಿಕ ಬೆಳವಣಿಗೆ ದರ, 2.5% ಗಿಂತ ಕಡಿಮೆಯಾಗಬಹುದು.

ಆರ್ಥಿಕತೆಯು ಈಗಾಗಲೇ ಮಂದಗತಿಯಲ್ಲಿರುವಾಗ ಕರ್ನಾಟಕ ಸರ್ಕಾರವು ವೈರಸನ್ನು ಒಂದು ಸವಾಲಾಗಿ ಸ್ವೀಕರಿಸಿದೆ.

ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಕರ್ನಾಟಕ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು: coronavirus essay in kannada

  • ಕೋವಿಡ್ – 19 ಮಾರ್ಚ್ ಆರಂಭದಲ್ಲಿ ಕರ್ನಾಟಕಕ್ಕೆ ಅಪ್ಪಳಿಸಿತ್ತು.
  • ಮಾರ್ಚ್ 9 ರಂದು ಬೆಂಗಳೂರಿನಲ್ಲಿ ರಾಜ್ಯದ ಮೊದಲ ಕೋವಿಡ್ – 19 ಪ್ರಕರಣ ವರದಿಯಾಗಿದೆ, ಹಾಗೂ ಒಂದು ಸಾವಿನ ನಂತರ ಮಾರ್ಚ್ 13ರಿಂದ ಸರ್ಕಾರ | ವಾರಗಳ ಕಾಲ ಲಾಕ್‌ಡೌನ್ ಮಾಡಿತು
  • ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಸರ್ಕಾರ ಮಾರ್ಚ್ 31ರವರೆಗೆ ನಿರ್ಬಂಧಗಳನ್ನು ವಿಸ್ತರಿಸಿತು.
  • ಮಾರ್ಚ್ 22ರ ಹೊತ್ತಿಗೆ ರಾಜ್ಯವು ಬೆಂಗಳೂರು (ನಗರ) ಸೇರಿದಂತೆ 9
  • ಈ ಜಿಲ್ಲೆಗಳಲ್ಲಿನ ಎಲ್ಲಾ ಅನಿವಾರ್ಯ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು.
  • ಮಾರ್ಚ್ 23ರಂದು ಪ್ರಧಾನಿ ರಾಷ್ಟ್ರವ್ಯಾಪ್ತಿ ಲಾಕ್ಷನ್‌ ಘೋಷಿಸುವ ಒಂದು ದಿನ ಮೊದಲೇ ಕರ್ನಾಟಕ ಸರ್ಕಾರ ರಾಜ್ಯವನ್ನು ಸಂಪೂರ್ಣವಾಗಿ ಲಾಕ್‌ನ್ ಮಾಡುವುದಾಗಿ ಘೋಷಿಸಿತು.
  • ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ರಾಜ್ಯದ ಗಡಿಗಳನ್ನು ಸಂಪೂರ್ಣ ಮುಚ್ಚಲಾಯಿತು. ಕರ್ಮ್ಯ ತಂದ ನಿರ್ಬಂಧಗಳನ್ನು ವಿಧಿಸಲಾಯಿತು.
  • ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಯಿತು. ಸಾರಿಗೆ ವಲಯದಲ್ಲಿನ ಬಿ.ಎಂ.ಟಿ.ಸಿ. ಮತ್ತು ಕೆ.ಎಸ್.ಆರ್.ಟಿ.ಸಿ, ಮೆಟ್ರೋ, ಕ್ಯಾಬ್ ಸೌಕರ್ಯ, ಉಬಾ, ಓಲಾ, ಹೀಗೆ ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ಹೊರತುಪಡಿಸಿ ಎಲ್ಲವನ್ನು ನಿರ್ಬಂಧಿಸಲಾಯಿತು.
  • ದೇಶೀ ವಾಯುಸೇವೆಗಳನ್ನು ಕೇಂದ್ರವು ಸ್ಥಗಿತಗೊಳಿಸಿತು. ಲಾಕ್‌ಡೌನ್ ಜಆರಿಗೊಳಿಸಲು ಸೆಕ್ಷನ್ 144ನ್ನು ಬೆಂಗಳೂರು, ಮತ್ತು ಮಂಗಳೂರಿನಲ್ಲಿ ಘೋಷಿಸಲಾಯಿತು.
  • ರೋಗದ ಹರಡುವಿಕೆಯಲ್ಲಿ ತೊಡಗಿದ ವ್ಯಕ್ತಿಗಳನ್ನು ಬಂಧಿಸಲು ಐಪಿಸಿಸೆಕ್ಷನ್ 269 ಹಾಗೂ 270ರ ಅಡಿಯಲ್ಲಿ ಬಂಧಿಸಲು ಅವಕಾಶ ನೀಡಲಾಯಿತು.

ಕೋವಿಡ್–19 ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವ್ಯವಹಾರ:

ಪರೀಕ್ಷೆಯನ್ನು ಹೆಚ್ಚಿಸುವಿಕೆ: coronavirus essay in kannada

ಕರ್ನಾಟಕವು ದೇಶದಲ್ಲಿ ಗರಿಷ್ಠ ಸಂಖ್ಯೆಯ ಪ್ರಯೋಗಾಲಯಗಳನ್ನು ಹೊಂದಿದೆ. ಹಾಗೂ ಇದರಲ್ಲಿ 2 ಬೆಂಗಳೂರಿನಲ್ಲಿವೆ. ಕೋವಿಡ್ – 19 ಪರೀಕ್ಷೆಗೆ ಸಮರ್ಥವಾಗಿದೆ.

ಕೋವಿಡ್-19 ಹರಡುವಿಕೆಯನ್ನು ತಡೆಯಲು ಪರಿಹಾರ ಕ್ರಮಗಳಿಗೆ ಸೂಚಿಸುವುದು.

ಬಿಬಿಎಂಪಿ ಧೃಡಪಡಿಸಿದ ರೋಗಿಯ 8 ಕಿ.ಮೀ. ವ್ಯಾಪ್ತಿಯಲ್ಲಿ ಜನರ ಮೇಲೆ ಕಣ್ಣಾವಲು ನಡೆಸಲು ತಂತ್ರಜ್ಞಾನ ಬಳಸಲು War Room ಸ್ಥಾಪನೆ. ಇದರಿಂದಾಗಿ ವೈರಸ್ ಹರಡುವಿಕೆ ಕಡಿಮೆಯಾಗುತ್ತದೆ.

ಕೋವಿಡ್–19

ದೈನಂದಿನ ಚಟುವಟಿಕೆಗಾಗಿ, ಸುಧಾರಣೆ ತರಲು, ಜನರ ಸಂಪರ್ಕ ಸಹಜ ಸ್ಥಿತಿಗೆ ಮರಳಲು ಪೋಲಿಸ್ ಕಾನ್ಸ್ಟೇಬಲ್‌ಗಳ ನೇಮಕ ಹಾಗೂ ಆರೋಗ್ಯ

ಕಾರ್ಯಕರ್ತರ 500 ತಡಗಳನ್ನು ರಚಿಸಲಾಯಿತು. ಹೆಚ್ಚಿನ ಕ್ವಾರಂಟೈನ ಕೇಂದ್ರಗಳನ್ನು ಸ್ಥಾಪಿಸಲು ಬಿಬಿಎಂಪಿ ಹಲವಾರು ಹವಾನಿಯಂತ್ರಿತ ಹೋಟೆಲ್‌ಗಳನ್ನು ಸಹ ಗುರುತಿಸಿದೆ.

ರೋಗಿಗಳಿಗೆ ಕ್ವಾರಂಟೈನ್ನಲ್ಲಿ ಕೊಠಡಿಯ ಬಾಡಿಗೆ ಹಾಗೂ ವ್ಯವಹಾರ, ಆಹಾರ ಸೌಲಭ್ಯ ಒದಗಿಸಿತು.

ರಾಜ್ಯವ್ಯಾಪಿ ವಸತಿ ಶಾಲೆ, ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳನ್ನು ಸಹ ಸಂಪರ್ಕಕ್ಕೆ ಪಡೆದು ಸೌಲಭ್ಯಗಳನ್ನು ಒದಗಿಸಲು ನೀಡಲಾಯಿತು.

܀ ಮೈಸೂರು ಮೂಲದ ಸಂಸ್ಥೆಯಿಂದ ಸುಮಾರು 1,000 ವೆಂಟಿಲೇಟರ್‌ಗಳನ್ನು ಸಂಗ್ರಹಿಸಿತು. 10 ಲಕ್ಷ ಮಾಸ್ತಗಳನ್ನು, 5 ಲಕ್ಷ ಪಿಪಿಇ ಕಿಟ್ಗಳನ್ನು ಖರೀದಿಸುವ ಯೋಜನೆಯನ್ನು ಸರ್ಕಾರ ಪ್ರಕಟಿಸಿತು.

  • ವೈದ್ಯರು ಹಾಗೂ ಅರೆಕಾಲಿಕ ವೈದ್ಯರ, ಆರೋಗ್ಯ ಸಿಬಂದಿಗಳನ್ನು ಮನೆ ಖಾಲಿ ಮಾಡುವಂತೆ ಕೇಳುವ ಭೂಮಾಲಿಕರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಆದೇಶವನ್ನು ಸರ್ಕಾರ ಜಾರಿಗೆ ತಂದಿತು.

ಬಡ ಆದಾಯದ ವರ್ಗದವರಿಗೆ ಉಚಿತ ಆಹಾರ:

ಇಂದಿರಾ ಕ್ಯಾಂಟೀನ್ ಮೂಲಕ ಬಡ ವರ್ಗದವರಿಗೆ ಮತ್ತು ಮನೆ ಇಲ್ಲದವರಿಗೆ ಉಚಿತ ಆಹಾರವನ್ನು ಒದಗಿಸಲು ಸರ್ಕಾರ ಕ್ರಮ ಕೈಗೊಂಡಿತು.

ಮೂಲ ಸ್ಥಳಗಳಿಗೆ ಹಿಂದಿರುಗುತ್ತಿರುವ ವಲಸಿಗರು:

ದೇಶದ ಇತರ ಭಾಗದಲ್ಲಿರುವಂತೆ, ಕರ್ನಾಟಕದ ವಲಸೆ ಕಾರ್ಮಿಕರು ಕೂಡ ಹೆಚ್ಚುತ್ತಿರುವ ಬೆಲೆಗಳು ಮತ್ತು ಜೀವನೋಪಾಯದ ನಷ್ಟದಿಂದ ತಮ್ಮ ಗ್ರಾಮಗಳಿಗೆ ಪಲಾಯನ ಮಾಡುತ್ತಿದ್ದಾರೆ.

ಕಾರ್ಮಿಕ ಜೀವನೋಪಾಯ:

ಗಾರ್ಮೆಂಟ್ಸ್ ಕಾರ್ಮಿಕರು, ಗೃಹ ಕಾರ್ಮಿಕರು, ಬೀದಿಬದಿ – ವ್ಯಾಪಾರಿಗಳು, ಪೌರ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ಹೀಗೆ ದುರ್ಬಲ ಕಾರ್ಮಿಕ ವರ್ಗದವರೆಗೆ ಸಾಂಕ್ರಾಮಿಕ ರೋಗದ ಪರಿಣಾಮ ಭಾರಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾದರು.

ಕಾರ್ಮಿಕರ ಆದಾಯವು 50-70% ರಷ್ಟು ಕುಸಿದಿದೆ ಆಹಾರವನ್ನು ಪಡೆಯಲಾಗದ ಸ್ಥಿತಿಗೆ ಅವರು ತಲುಪಿದ್ದಾರೆಂಬುದು ವರದಿಗಳ ಅಭಿಪ್ರಾಯವಾಗಿದೆ.

ಕೈದಿಗಳನ್ನು ಸೋಂಕಿನಿಂದ ರಕ್ಷಿಸುವ ಬಗ್ಗೆ ಕುರಿತಾದ ಪಿಐಎಲ್:

ಜೈಲುಗಳಲ್ಲಿ ವೈರಸ್ ತಡೆಗಟ್ಟುವ ಕ್ರಮಗಳೂ ಸೇರಿದಂತೆ ಹಲವಾರು ತುರ್ತು ಕ್ರಮಗಳನ್ನು ಕರ್ನಾಟಕ ಹೈಕೋರ್ಟ್‌ ಗೆ ಪಿಐಎಲ್: ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ. ಖೈದಿಗಳು ಹೆಚ್ಚಾಗಿ ನೈರ್ಮಲ್ಯದ ಪರಿಸ್ಥಿತಿಗಳಲ್ಲಿದ್ದು, ಪರಸ್ಪರ ಸಾಮೀಪ್ಯದಲ್ಲಿ ವಾಸಿಸುತ್ತಿದ್ದಾರೆ.

ತಪ್ಪು ಮಾಹಿತಿಗಳು ಹರಡುವಿಕೆ:

ಮಾರ್ಚ್ 11ರಂದು ರಾಜ್ಯಸರ್ಕಾರವು ಅಧಿಸೂಚಿಸಿರುವ ಕರ್ನಾಟಕ ಸಾಂಕ್ರಾಮಿಕ ರೋಗಗಳು ಕೋವಿಡ್-19 ರೆಗ್ಯುಲೇಶನ್” ಕೋವಿಡ್-19 ಬಗ್ಗೆ ತಪ್ಪು ಮಾಹಿತಿಗಾಗಿ ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಸಂಘಟನೆ, ಯಾವುದೇ ಮುದ್ರಣ ಹಾಗೂ ಎಲೆಕ್ಟ್ರಾನಿಕ್‌ ಮಾಧ್ಯಮ ಬಳಕೆಯನ್ನು ನಿಷೇಧಿಸುತ್ತದೆ” ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ.

ಕೋವಿಡ್ 19 ಹರಡುವಿಕೆಯಲ್ಲಿ ಸಾರ್ವಜನಿಕ ಸೇವೆ ಮತ್ತು ಕರ್ನಾಟಕ ರಾಜ್ಯ:

ಮೊಬೈಲ್‌ ಅಪ್ಲಿಕೇಶನ್ ಮೂಲಕ ರೋಗಿಯ ಸಂಪರ್ಕದ ಜಾಡು ಹಿಡಿಯುವಿಕೆ ಕೊಳೆಗೇರಿ ಪ್ರದೇಶಗಳಲ್ಲಿ ಸೋಂಕಿತ ಹರಡುವಿಕೆಯನ್ನು ಕಡಿಮೆ ಮಾಡುವಿಕೆಗಾಗಿ

ರೋಗಿಗಳು ಕಂಡುಬಂದರೆ ಸಂಪರ್ಕಿತರನ್ನು ಕಡ್ಡಾಯ ಕ್ವಾರಂಟೈನ್ನಲ್ಲಿ ಇಡುವಿಕೆ.

  • ಕರ್ನಾಟಕಕ್ಕೆ ಬರುವ ಎಲ್ಲಾ ಪ್ರಯಾಣಿಕರಿಗೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
  • ವೈರಸ್‌ ಸೋಂಕಿತರ ಸಂಪರ್ಕವನ್ನು ತಡೆಯಲು, ಕ್ಷೇತ್ರ ಕಾರ್ಯಕರ್ತರಿಗೆ ಸಹಾಯ ಮಾಡಲು ಕ್ವಾರಂಟೈನ್ ವಾಚ್ ಆಪ್ ನ್ನು ಬಳಸಲಾಗುತ್ತದೆ.
  • ಸಮುದಾಯದ ಸಹಭಾಗಿತ್ವದ ಮೂಲಕ ಮನೆಮನೆ ಸಂಪರ್ಕ ತಡೆಯನ್ನು ಜಾರಿಗೊಳಿಸಲು ರಾಜ್ಯವು ಮೊಬೈಲ್ ತಂಡಗಳನ್ನುರಚಿಸಿದೆ.
  • ವಯಸ್ಸಾದವರು, ಅಸ್ವಸ್ಥ ವ್ಯಕ್ತಿಗಳನ್ನು, ಗರ್ಭಿಣಿಯರು ಮತ್ತು ಅನಾರೋಗ್ಯದವರನ್ನು ರಕ್ಷಿಸುವ ದೃಷ್ಟಿಯಿಂದ ವಿಶೇಷ ಚಿಕಿತ್ಸೆ ನೀಡುವಿಕೆ.
  • ಮನೆ ಮನೆ ಸಮೀಕ್ಷೆ ನಡೆಸುವ ಮೂಲಕ ಉಸಿರಾಟದ ಕಾಯಿಲೆ, ಇರುವವರನ್ನು ಗುರುತಿಸುವಿಕೆ.
  • NAASCOM ಬೆಂಬಲದೊಂದಿಗೆ ರಾಜ್ಯಸರ್ಕಾರ ಸ್ಥಾಪಿಸಿದ ಆಪ್ತಮಿತ್ರ ಟೆಲಿಕನ್ಸಲ್ವೇಶನ್ ಲೈನ್ (14410) ಮೂಲಕ ಅಭಿಯಾನ ಆರಂಭಿಸಿತು.
  • ಕೋವಿಡ್-19 ಲಕ್ಷಣ ಇರುವವರ ಹಾರೈಕೆ ಮಾಡಲು ಟೆಲಿಮೆಡಿಸಿನ್‌ ಮೂಲಕ ಮನೆಮನೆಗೆ ಆರೋಗ್ಯದ ಹಾರೈಕೆಯ ವರದಿ ನೀಡುತ್ತಾರೆ.
  • ಮನೆಮನೆಗೆ ASHA ಕಾರ್ಯಕರ್ತೆಯರು ಭೇಟಿ ನೀಡಿ ಅಗತ್ಯ ಆರೋಗ್ಯ ಸೇವೆ ಒದಗಿಸುತ್ತಾರೆ.
  • ಅಸಂಘಟಿತ ವಲಯದ ಕಾರ್ಮಿಕರಿಗೆ ರಾಜ್ಯಸರ್ಕಾರ, 2,272 ಕೋಟಿ ರೂ. ಒದಗಿಸಿದೆ.
  • PM ಕಿಸಾನ್ ಮನ್ ಯೋಜನೆ ಅಡಿಯಲ್ಲಿ 50 ಲಕ್ಷ ರೈತರಿಗೆ ತಲಾ, 4,000 ಹೆಚ್ಚುವರಿ ಹಣ ಒದಗಿಸಿದೆ. (ಕೇಂದ್ರ 6000, ರಾಜ್ಯ 4000) ಸಣ್ಣ ಉದ್ಯಮಿಗಳಿಗೆ ವಿದ್ಯುತ್‌ಬಿಲ್. ಸ್ಥಿರ ಶುಲ್ಕವನ್ನು ಮನ್ನಾ ಮಾಡಿದೆ.
  • ರಾಜ್ಯದ 23.507 ಮೀನುಗಾರರ, 50,000ದವರೆಗಿನ ಸಾಲ (60 ಕೋಟಿ) ರೂಗಳನ್ನು ಸಾಲ ಮನ್ನಾ ಮಾಡಿದೆ.
  • 29 ಸಹಕಾರಿ ಬ್ಯಾಂಕುಗಳಿಂದ 98 ಕೋಟಿ ಮೌಲ್ಯದ ಸಾಲ ಪಡೆದ 29,631 ರೈತರ ಸಾಲಮನ್ನಾ ಮಾಡಿದೆ.
  • ಕೈಮಗ್ಗ ನೇಕಾಕರಿಗೆ, ತಲಾ 2000 ಆರ್ಥಿಕ ನೆರವು ನೀಡಲಾಗಿದೆ. ವಲಸೆಗಾರರಿಗೆ ಆಹಾರ ಪೂರೈಕೆಗೆ ಇರುವ ಸ್ಥಳದಲ್ಲಿಯೇ ಪಡಿತರ ಅಂಗಡಿಗಳ ಮೂಲಕ ಉಚಿತ ಆಹಾರ ಸರಬರಾಜು. (ಬಿಪಿಎಲ್ ಕುಟುಂಬ ದವರ್ಗದವರಿಗೆ)
  • ಏಪ್ರಿಲ್ 2020 ಮೊದಲ ವಾರದಿಂದ ಬಿಪಿಎಲ್ ವರ್ಗಕ್ಕೆ ಸೇರಿದ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಮಾಸಿಕ 10 ಕೆ.ಜಿ. ಅಕ್ಕಿ ಮತ್ತು 2 ಕೆ.ಜಿ ಗೋಧಿ ಉಚಿತವಾಗಿ ನೀಡಲಾಗುತ್ತಿದೆ. ಎಪಿಎಲ್ ಕುಟುಂಬದವರಿಗೆ 15 ರೂ.ನಂತೆ ಅಕ್ಕಿ ಮತ್ತು ಗೋಧಿ ನೀಡಲಾಗುತ್ತದೆ.
  • ಲಾಕ್‌ಡೌನ್ ಅವಧಿಯನ್ನು ಕಡಿಮೆಗೊಳಿಸುವ ಅಥವಾ ಹೆಚ್ಚಿಸುವ ಅಗತ್ಯವಿಲ್ಲ.

ಇಂತಹ ಕರೋನಾ ಮಧ್ಯೆ ನಾವು ಬದುಕು ಗಟ್ಟಿಗೊಳಿಸುವುದು ಅನಿವಾರ್ಯ, ಸರ್ಕಾರಗಳ ಸಹಾಯ ಹಸ್ತದ ಜೊತೆಜೊತೆಗೆ, ಸಾರ್ವಜನಿಕರು ಕೂಡ ತಮ್ಮ ಸಹಜ, ಸ್ವಚ್ಛ ಹಾಗೂ ಎಚ್ಚರಿಕೆಯ ಬದುಕಿನ ಹೆಜ್ಜೆ ಇಡುವುದು ಅನಿವಾರ್ಯ. ವಾಸ್ತವದ ಸ್ಥಿತಿಗಳನ್ನು ಅವಲೋಕಿಸಿದಾಗ ಕರ್ನಾಟಕದಲ್ಲಿ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಣೆ ಅವಶ್ಯಕ. ಮೂಲಭೂತ ಸರ್ಕಾರಗಳ ರಚನೆಗೆ ಹೆಚ್ಚು ಒತ್ತುಕೊಡಬೇಕಿದೆ. ಆದರೂ ಈ ಸಾಂಕ್ರಾಮಿಕ ರೋಗದ ನಿರ್ವಹಣೆಯನ್ನು ಶ್ಲಾಘಿಸಬಹುದಾಗಿದೆ.

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....