Kannada essays

ಭಾರತದಲ್ಲಿ ಕೃಷಿ ಸುಧಾರಣೆ ಪ್ರಬಂಧ 2023 । Agricultural Reform in India: Enhancing Farming Practices

ಒಂದಾನೊಂದು ಕಾಲದಲ್ಲಿ ಭಾರತವು ತನ್ನ ದೇಶದ ಜನರಿಗೆ ಆಹಾರವನ್ನು ಪೂರೈಸಿಕೊಳ್ಳಲಾಗದ ಸ್ಥಿತಿಯಲ್ಲಿತ್ತು. ಆದರೆ ಕಾಲಾನಂತರದಲ್ಲಿ ಹಸಿರುಕ್ರಾಂತಿ, ವೈಜ್ಞಾನಿಕ ಬೆಳವಣಿಗೆಯ ನಂತರ ದೇಶದಲ್ಲಿ ಕೃಷಿಯು ಅಪಾರ ಅಭಿವೃದ್ಧಿ ಸಾಧಿಸಿದೆ. 2018- 19ರಲ್ಲಿ 320 ಮಿಲಿಯನ್ ಟನ್‌ಗಳಷ್ಟು ಆಹಾರ ಧಾನ್ಯಗಳನ್ನು ಬೆಳೆದು ದೇಶವು ತನ್ನ ಮೇಲೆ ಅಭಿವೃದ್ಧಿ ಸಾಧಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಜೀವನ ಮಟ್ಟವನ್ನು ಹೆಚ್ಚಿಸಲು ಅಪಾರವಾಗಿ ಶ್ರಮಿಸುತ್ತಿದೆ. ಸುಮಾರು ವರ್ಷಗಳಿಂದ ದೇಶದ ಕೃಷಿಯು ಅಪಾರ ಅಭಿವೃದ್ಧಿ ಸಾಧಿಸುತ್ತದೆ.

ಕೃಷಿ ಸುಧಾರಣೆಯ ವಿವಿಧ ಆಯಾಮಗಳು

1. ಹೆಚ್ಚುತ್ತಿರುವ ಆಹಾರ ಧಾನ್ಯಗಳ ಉತ್ಪಾದನೆ

2007-08ರಲ್ಲಿ 255 ಮಿಲಿಯನ್ ಟನ್ ಆಹಾರ ಉತ್ಪಾದನೆ ಮಾಡುತ್ತಿದ್ದ ದೇಶವು ಈಗ 320 ಮೀ, ಟನ್‌ಗಿಂತಲೂ ಅಧಿಕ ಆಹಾರಧಾನ್ಯಗಳನ್ನು ಉತ್ಪಾದನೆ ಮಾಡುತ್ತದೆ. ತಂತ್ರಜ್ಞಾನಾಧಾರಿತ ಬಿತ್ತನೆ ಬೀಜ, ಮಣ್ಣಿನ ಫಲವತ್ತತೆ, ನೀರಾವರಿ ಮುಂದಿನ ಎಲ್ಲ ಬೆಳವಣಿಗೆಗಳು ಇಂದು ದೇಶವು ಆಹಾರ ಧಾನ್ಯ ಅಧಿಕ ಉತ್ಪಾದನೆಗೆ ಬುನಾದಿಯಾಗಿವೆ.

2. ಹೆಚ್ಚುತ್ತಿರುವ ತೋಟಗಾರಿಕಾ ಬೆಳೆಗಳು

ಹಣ್ಣು, ತರಕಾರಿ, ಸೊಪ್ಪು, ಹಾಲು ಮುಂತಾದ ತೋಟಗಾರಿಕಾ ಬೆಳೆಗಳನ್ನು ಬೆಳೆಯುವುದರಲ್ಲಿ ದೇಶವು ಇಂದು ಅಪಾರವಾಗಿ ಅಭಿವೃದ್ಧಿ ಸಾಧಿಸಿದೆ. ತೋಟಗಾರಿಕಾ ಬೆಳೆಗಳಿಗೆ ಸರ್ಕಾರದಿಂದ ಅಪಾರ ಪ್ರಮಾಣದ ಬೆಂಬಲ ದೊರೆತು ಇಂದು ತೋಟಗಾರಿಕಾ ಬೆಳವಣಿಗೆ ಅತೀ ಹೆಚ್ಚಾಗಿದೆ.

3. ಕೇಂದ್ರ ಮತ್ತು ರಾಜ್ಯ ಬಜೆಟ್‌ನಲ್ಲಿ ಕೃಷಿ ಆದ್ಯತೆ

ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಮಂಡಿಸುವ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಮೀಸಲಾಗಿಡುವ ಹಣದ ಪ್ರಮಾಣವು ಹೆಚ್ಚುತ್ತಿದೆ. ಜಿಡಿಪಿಯ ಶೇ. 3% ಗಿಂತಲೂ
ಅಧಿಕ ಪ್ರಮಾಣದ ಬಜೆಟ್‌ಗಳ ಕೃಷಿ ಕ್ಷೇತ್ರಕ್ಕೆ ಮೀಸಲಿರಿಸಲಾಗಿದೆ. ಪೊಟ್ಯಾಟೊ, ಆನಿಯನ್, ಟಮಾಟೋ ಉಂತಾದ ಬೆಳೆಗಳಿಗೆ ಉತ್ಪಾದನಾ ವೆಚ್ಚದ ಶೇ. ಒಂದೂವರೆ ಶೇ.ವನ್ನು ಮೀಸಲಿರಿಸಲಾಗಿದೆ. ಕೆಲವು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಆರಂಭಿಸಲಾಗಿದೆ.

4. ಕೃಷಿಯಲ್ಲಿ ಹೆಚ್ಚುತ್ತಿರುವ ವಿದೇಶಿ ಹೂಡಿಕೆ

ಟೀ ಪ್ಲಾಂಟೇಷನ್, ಕಾಫಿ ಪ್ಲಾಂಟೇಷನ್, ರಬ್ಬರ್ ಉತ್ಪಾದನೆ ಮತ್ತು ವಾಣಿಜ್ಯ ಬೆಳೆಗಳಲ್ಲಿ ಹೂಡಿಕೆ ಮಾಡುತ್ತಿರುವ ವಿದೇಶಿ ನೇರ ಹೂಡಿಕೆಯು ಹೆಚ್ಚಾಗಿದೆ. ಮಲೇಷಿಯಾ, ಸಿಂಗಪುರ, ಮಾರಿಷಸ್ ಮುಂತಾದ ರಾಷ್ಟ್ರಗಳಿಂದ ವಿದೇಶಿ ನೇರ ಹೂಡಿಕೆ ಕೃಷಿ ಕ್ಷೇತ್ರಕ್ಕೆ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರವು ವಿದೇಶಿ ನೇರ ಹೂಡಿಕೆಯನ್ನು ಕೃಷಿಗೆ ಆಕರ್ಷಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.

5. ಕೃಷಿಕರ ಜೀವನಮಟ್ಟ ಹೆಚ್ಚುತ್ತಿರುವುದು

ತುಂಬಾ ದಿನಗಳ ಹಿಂದೆ ಕೃಷಿಕರ ಜೀವನ ಮಟ್ಟ ಕೆಳಮಟ್ಟದಲ್ಲಿತ್ತು. ಹನಿ ನೀರಾವರಿ, ತುಂತುರು ನೀರಾವರಿ ರೈತರ ಸಾಲಮನ್ನಾ, ಕಿರು ಹಣಕಾಸು ನೀಡಿಕೆ, ಉಚಿತ ಬಿತ್ತನೆ ಬೀಜ ವಿತರಣೆ ಮುಂತಾದವುಗಳಿಂದ ರೈತರ ಜನ ಜೀವನಮಟ್ಟವು ಹೆಚ್ಚಾಗಿದೆ. ಆದುದರಿಂದ ಕೃಷಿ ಇಂದು ಜೀವನಾಧಾರಿತ ಉದ್ಯಮವಾಗಿ ಬದಲಾಗಿದೆ. ಎಲ್ಲ ಕೃಷಿಕರು ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದ್ದಾರೆ.

6. ಹೆಚ್ಚುತ್ತಿರುವ ಕೃಷಿ ರಫ್ತು

ಅಕ್ಕಿ, ಗೋಧಿ, ಗೋಡಂಬಿ, ಹತ್ತಿ, ತಂಬಾಕು, ಸಕ್ಕರೆ, ಹಣ್ಣು, ಮಸಾಲಾ ಪದಾರ್ಥಗಳನ್ನು ಭಾರತವು ಇಂದು ಹೆಚ್ಚಾಗಿ ರಫ್ತು ಮಾಡುತ್ತಿದೆ. ಕೃಷಿ ರಫ್ತುವಿನಲ್ಲಿ ಭಾರತವು ಸಾಧನೆ ಮಾಡಿದೆ. ಆದುದರಿಂದ ಕೃಷಿ ಸುಧಾರಣೆಯಾಗುತ್ತಿದೆ ಎಂದು ಹೇಳಬಹುದು.

ಕೃಷಿ ಕ್ಷೇತ್ರದ ಪ್ರಮುಖ ಯೋಜನೆಗಳು

1. ಕೃಷಿ ಸಿಂಚಾಯಿ ಯೋಜನೆ

ದೇಶದಾದ್ಯಂತ ನೀರಾವರಿ ಮೂಲಸೌಕರ್ಯ ಹೆಚ್ಚಿಸುವ ಮತ್ತು ಜಲಸಂರಕ್ಷಣೆಯನ್ನು ಉತ್ತೇಜಿಸುವ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ದೇಶದಾದ್ಯಂತ ಜಾರಿಗೊಳಿಸಲು 50 ಸಾವಿರ ಕೋಟಿ ರೂಪಾಯಿಯನ್ನು ವ್ಯಯಿಸಲು ಸರ್ಕಾರ ನಿರ್ಧಾರ ಮಾಡಿದೆ. ಪ್ರಸ್ತುತ ದೇಶದಾದ್ಯಂತ 142 ದಶಲಕ್ಷ ಹೆಕ್ಟೇರ್ ಭೂಮಿಯನ್ನು ಕೃಷಿಗೆ ಬಳಸಲಾಗುತ್ತಿದ್ದು ಇದರಲ್ಲಿ ಕೇವಲ ಶೇ. 45% ಪ್ರದೇಶ ಮಾತ್ರ ನೀರಾವರಿ ಸೌಲಭ್ಯ ಹೊಂದಿದೆ. ಈ ಯೋಜನೆ ಅನುಷ್ಠಾನದಿಂದ 6 ಲಕ್ಷ ಹೆಕ್ಟೇರ್ ಕೃಷಿ ಭೂಮಿ ನೀರಾವರಿ ವ್ಯಾಪ್ತಿಗೆ ಬರಲಿದೆ.

2. ಪ್ರಧಾನ ಮಂತ್ರಿ ಫಸಲ್‌ ಭೀಮಾ ಯೋಜನೆ

ಮಾನ್‌ಸೂನ್ ಮಳೆಯ ಅನಿಶ್ಚಿತತೆಯಿಂದ ರೈತರಿಗೆ ಅಪಾರವಾಗಿ ನಷ್ಟವಾಗುತ್ತಿತು. ಅತಿವೃಷ್ಟಿಯಿಂದ ಒಮ್ಮೊಮ್ಮೆ ಮಳೆಯಾದರೆ ಅನವೃಷ್ಟಿಯಿಂದ ಮತ್ತೊಮ್ಮೆ ಅನ್ಯಾಯವಾಗುತ್ತಿತ್ತು, ಹಾಗಾಗಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಯಿತು. ತಾವು ವೆಚ್ಚ ಮಾಡಿರುವ ಕೃತಿಷಿ ಬೆಳೆದ ಮೊತ್ತಕ್ಕೆ ಅನುಗುಣವಾಗಿ ರೈತರಿಗೆ ಪ್ರಕೃತಿ ವಿಕಾಸದಿಂದ ನಷ್ಟವಾದರೆ ನಿಗಧಿತ ಬೆಲೆ ದೊರೆಯುತ್ತದೆ, ವಿಮಾ ಯೋಜನೆ ರೈತರ ಆತ್ಮಹತ್ಯೆ ತಡೆಗೆ ವರವಾಗಿ ಪರಿಣಮಿಸಿದೆ.

3. ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ

ರಸಗೊಬ್ಬರ ಮತ್ತು ಕೀಟನಾಶಕದ ಬಳಕೆಯಿಂದಾಗಿ ಮಣ್ಣಿನ ಆರೋಗ್ಯ ತೀವ್ರ ಹದಗೆಡುತ್ತಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ರೈತನಿಗೂ ಮಣ್ಣಿನ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಇದಕ್ಕಾಗಿ 100 ಕೋಟಿ ರೂ. ಅನುದಾನ. ರಾಷ್ಟ್ರದಾದ್ಯಂತ ಸಂಚಾರಿ ಮಣ್ಣಿನ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಗಾಗಿ 56 ಕೋಟಿ ಹಣ ಮೀಸಲಿಡಲಾಗಿದೆ. ಮಣ್ಣಿನ ಗುಣಮಟ್ಟ ನಿಯಂತ್ರಣ ಮತ್ತು ಮಣ್ಣಿನ ಸಂರಕ್ಷಣೆ ಇದರ ಮೂಲ ಉದ್ದೇಶವಾಗಿದೆ.

4. ರೈತರ ಸಾಲಮನ್ನಾ ಕಾರ್ಯಕ್ರಮ

ಕರ್ನಾಟಕ ರಾಜ್ಯ ಸರ್ಕಾರವು ಇತ್ತೀಚಿಗೆ ಮಹತ್ವದ ಕಾಯಿದೆಯೊಂದನ್ನು ಜಾರಿಗೊಳಿಸಿದೆ. ಯಾವುದೋ ಬಡರೈತ ತಾನು ಪಡೆದ ಬೆಳೆ ಸಾಲವನ್ನು ಕರ್ನಾಟಕ ಸರ್ಕಾರವು ಮನ್ನಾ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲ ಪಡೆದ ರೈತರು ಬಡ್ಡಿ ಮತ್ತು ಸಾಲವನ್ನು ತೀರಿಸಲಾಗದೆ ತುಂಬಾ ಕಷ್ಟದಲ್ಲಿದ್ದಾಗ ಬ್ಯಾಂಕಿನ ಅಧಿಕಾರಿಗಳ ಕಿರುಕುಳದಿಂದ ಮನನೊಂದು ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನು ತಪ್ಪಿಸಲು ರೈತರ ಸಾಲವನ್ನು ಕಾರ್ಯಕ್ರಮ ಅತ್ಯಂತ ಯಶಸ್ವಿ ಯೋಜನೆಯಾಗಿದೆ.

5. ಕೃಷಿ ಭಾಗ್ಯ

ಕರ್ನಾಟಕ ರಾಜ್ಯ ಸರ್ಕಾರವು 2013-14ರ ಸಾಲಿನಲ್ಲಿ ಕೃಷಿ ಭಾಗ್ಯ ಎನ್ನುವ ಯೋಜನೆಯನ್ನು ಜಾರಿಗೊಳಿಸಿತು ರಾಜ್ಯದ ಒಟ್ಟಾರೆ ಕೃಷಿ ಉತ್ಪನ್ನವನ್ನು ಹೆಚ್ಚಿಸುವುದು ಈ ಯೋಜನೆಯ ಆಶಯವಾಗಿತ್ತು. ಭೂಚೇತನ, ಸುವರ್ಣಭೂಮಿ, ಭೂಮಿಯ ಫಲವತ್ತತೆ, ನೀರಾವರಿ, ಮಾರುಕಟ್ಟೆ ಸಬಲೀಕರಣ, ಸಣ್ಣ ನೀರಾವರಿ ಹಿಡುವಳಿ ಅಭಿವೃದ್ಧಿ ಮುಂತಾದ ಎಲ್ಲ ಸೌಲಭ್ಯಗಳನ್ನು ಕೃಷಿ ಭಾಗ್ಯ ಎಂಬುದು ಒಳಗೊಂಡಿತ್ತು.

ಉಪಸಂಹಾರ

ಭಾರತವು ಇಂದು ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ. ಇಲ್ಲಿ ಶೇ. 56% ಪ್ರತಿಶತ ಜನರು ಕೃಷಿ ಮಾಡುತ್ತಿದ್ದಾರೆ. ಅದರಲ್ಲೂ ಇಂದು ಭಾರತದ ಬಹುಪಾಲು ರಫ್ತು ಕೃಷಿ ವಲಯಕ್ಕೆ ಸೇರಿದೆ. ಸೇವಾವಲಯದ ನಂತರ ಕೃಷಿ ವಲಯವು ಅತ್ಯಂತ ಪರಿಣಾತ್ಮಕವಾಗಿ ಬದಲಾಗುತ್ತಿದೆ. ಕೃಷಿ ಉತ್ಪಾದನೆ ಹೆಚ್ಚಿಸುವ ಸಲುವಾಗಿ ದೇಶವು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ಕಡಿಮೆ ಭೂ ಪ್ರದೇಶ, ಮಾನ್‌ಸೂನ್ ಆಧಾರಿತ ಕೃಷಿ ಪದ್ಧತಿ ಇರುವುದರಿಂದ ಸ್ವಲ್ಪ ಸಮಸ್ಯೆಗಳಿರುವುದು ಕಂಡು ಬರುತ್ತದೆ. ವಿವಿಧ ದೇಶಗಳಿಗೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಎಲ್ಲ ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರವು ಸೇರಿದಂತೆ ರೈತರ ಶ್ರೇಯಾಭಿವೃದ್ಧಿಗೆ, ಕೃಷಿ ಸುಧಾರಣೆಗೆ ಪ್ರಯತ್ನಿಸುತ್ತಿವೆ.

ಕೃಷಿ ಭಾರತೀಯರ ಆರ್ಥಿಕ ಹಾಗೂ ಸಾಮಾಜಿಕ ಜೀವನದ ಮುಖ್ಯ ಆಧಾರವಾಗಿದೆ. ಭಾರತ ಒಂದು ಕೃಷಿ ಪ್ರಧಾನ ದೇಶವೆಂದು ಹೇಳಬಹುದು, ಏಕೆಂದರೆ ಅತ್ಯಂತ ಜನಸಂಖ್ಯೆಯ ಕಾರಣದಿಂದ ಬಹುಸಂಖ್ಯೆಯ ಜನರು ಕೃಷಿಯಿಂದ ಜೀವನ ನಡೆಸುತ್ತಿದ್ದಾರೆ. ಕೃಷಿ ಸುಧಾರಣೆಯು ಈ ದೇಶದ ಆರ್ಥಿಕ ಮತ್ತು ಸಾಮಾಜಿಕ ವಿಕಾಸದ ಮುಖ್ಯ ಕೀಲಿಕೆಯೇ ಆಗಿದೆ.

ಕೃಷಿ ಸುಧಾರಣೆಯ ಪ್ರಮುಖ ಉದ್ದೇಶವೆಂದರೆ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಕೃಷಿ ಕ್ಷೇತ್ರದಲ್ಲಿ ತರಬೇತಿ ನೀಡುವುದು. ಮೊದಲನೆಯದಾಗಿ, ಉತ್ಪಾದನೆಯನ್ನು ಹೆಚ್ಚಿಸಲು ಉಚಿತ ಜಾಗಳಗಳನ್ನು ಹೊಂದಿದ ಮತ್ತು ನೈತಿಕ ಕೃಷಿ ಪದ್ಧತಿಗಳನ್ನು ಅನುಸರಿಸಬೇಕಾಗಿದೆ. ನಿಯಮಿತ ಉತ್ತಮ ಸೈತಾನು ಸಸ್ಯಗಳ ಬೆಳೆಗೆ ಆವಶ್ಯಕ ನೀರಿಗೆ ಸರಿಯಾದ ನೀರು ಹೇಗೆ ಸರಬರಾಜಾಗಿ ಹೋಗುತ್ತದೆಯೋ ಹಾಗೆಯೇ ಉಪಯುಕ್ತ ಸಸ್ಯ ಸಾಮಗ್ರಿಗಳ ಉಪಯೋಗವೂ ಆವಶ್ಯಕ. ಸಸ್ಯಗಳ ಬೆಳೆಯನ್ನು ಹೆಚ್ಚಿಸಲು ಹೆಚ್ಚಿನ ಉದ್ದೇಶಿತ ಸಸ್ಯ ಸಾಮಗ್ರಿಗಳ ಬಳಕೆ, ಉದ್ದೇಶಿತ ಸೈತಾನು ನಾಶಕ ಸಸ್ಯಗಳ ನಿಯಂತ್ರಣ ಹಾಗೂ ಅನುಸರಣೆಗೆ ಸಹಕಾರಿ. ಸಸ್ಯಗಳಿಗೆ ಆವಶ್ಯಕವಾದ ಸರಿಯಾದ ಉದ್ದೇಶಿತ ಸೈತಾನು ನಾಶಕ ಸಸ್ಯಗಳು, ಪ್ರಾಣಿಗಳ ಆರೋಗ್ಯದ ಕಡೆಗೂ ಗಮನ ಹರಿಸಬೇಕಾದ ಅವಶ್ಯಕತೆಯಿದೆ.

ದ್ವಿತೀಯವಾಗಿ, ಕೃಷಿ ಕ್ಷೇತ್ರದಲ್ಲಿ ತರಬೇತಿ ನೀಡುವುದು ಅತ್ಯಂತ ಮುಖ್ಯ. ನವಚೇತನ ತರಬೇತಿ ಪ್ರಣಾಲಿಗಳನ್ನು ಅನುಸರಿಸಿ, ಸಸ್ಯ ರೋಗಗಳ ನಿಯಂತ್ರಣ, ಉಗಮ ಹಾಗೂ ಫಲಸುಖಗಳ ಉತ್ತಮ ಪ್ರಯೋಗಗಳನ್ನು ಬೆಳೆಸುವ ವಿವಿಧ ವಿಜ್ಞಾನಿಗಳ ಅನುಶ್ರವಣೆ ಮಾಡಬೇಕಾಗಿದೆ. ಹೀಗೆ ಉತ್ತಮ ತರಬೇತಿ ಪಡೆದ ಕೃಷಿಕರು ಹೆಚ್ಚು ಉತ್ಪಾದನೆಗೆ ಸಾಧ್ಯವಾಗುತ್ತದೆ ಹಾಗೂ ಸಸ್ತದಲ್ಲಿ ಉತ್ಪನ್ನ ಹಾಕಬಹುದು.

ಕೃಷಿ ಸುಧಾರಣೆಯ ಮೂಲಕ ಹೆಚ್ಚಿನ ಉತ್ಪಾದನೆ, ಸಸ್ತ ಉತ್ಪನ್ನ, ಆರ್ಥಿಕ ಸ್ಥಿರತೆ ಹಾಗೂ ಕೃಷಿ ಕ್ಷೇತ್ರದ ಸಾಮಾಜಿಕ ಮತ್ತು ಆರ್ಥಿಕ ವಿಕಾಸಗಳನ್ನು ಹೆಚ್ಚು ಮೇಲೆತ್ತಲು ಸಾಧ್ಯವಾಗುತ್ತದೆ. ಸರಳವಾಗಿ ಹೇರಳವಾದ ಉತ್ಪನ್ನ ಕೃಷಿಯ ಮೂಲಕ, ಹೆಚ್ಚಿನ ಜನರಿಗೆ ಆಹಾರ ಒದಗಿಸುವುದು ಸಾಧ್ಯವಾಗುತ್ತದೆ. ಹೀಗೆ ಕೃಷಿ ಸುಧಾರಣೆ ನಮ್ಮ ದೇಶದ ಬೆಳವಣಿಗೆಗೆ ಹಾಗೂ ವೃದ್ಧಿಗೆ ಹೊಸ ದಾರಿಯನ್ನು ತೆರೆಯುತ್ತದೆ.

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....