Kannada essays

ಆನ್‌ಲೈನ್‌ ಶಿಕ್ಷಣ ಪ್ರಬಂಧ 2023 । Revolutionize Your Learning Experience with the Empowering Insights of Online Education

Table of Contents

ಆನ್‌ಲೈನ್‌ ಶಿಕ್ಷಣ

ನಾವು ಬದುಕುತ್ತಿರುವ ಕಾಲಮಾನ ಜಗತ್ತಿನಲ್ಲಿ ಯಾರು ಊಹಿಸದಂತ ಕಾಲಮಾನ ತಾಂತ್ರಿಕ ಅಭಿವೃದ್ಧಿಯಲ್ಲಿ ಅತೀ ವೇಗದ ಬೆಳವಣಿಗೆ ಕಂಡ ಮನುಕುಲ ಭೂಗ್ರಹ, ಚಂದ್ರನ ನಂತರ ಮಂಗಳನ ಅಂಗಳಕ್ಕೆ ಮಾನವಸಹಿತ ನೌಕೆಯನ್ನು ಕಳುಹಿಸುವ ಯೋಜನೆಯನ್ನು ಹಾಕಿಕೊಂಡಿದೆ. ಬಾಹ್ಯಾಕಾಶದ ಅಂಗಳದಲ್ಲಿ ವೋಮ ನೌಕೆಯ ನಿಲ್ದಾಣ, ಅಂತರಿಕ್ಷದಲ್ಲಿ ವಾಸಯೋಗ್ಯ ಸ್ಥಳ ಹೀಗೆ ಬಾಹ್ಯಾಕಾಶ, ರಕ್ಷಣೆ, ಸಾಗರೀಕಾ ವಿಜ್ಞಾನ, ಸಸ್ಯ ಮತ್ತು ಪ್ರಾಣಿವಿಜ್ಞಾನ, ಸಂಶೋಧನೆ, ಆರೋಗ್ಯವಿಜ್ಞಾನ, ಕೃಷಿ ವಿಜ್ಞಾನದಲ್ಲಿ ಆಪಾರ ಸಂಶೋಧನೆ ಮಾಡಿ ಮೇಲುಗೈ ಸಾಧಿಸಿದೆ.

ಬದುಕುತ್ತಿರುವ ಇಂತಹ ಕಾಲಘಟ್ಟದಲ್ಲಿ ಇಡೀ ಜಗತ್ತಿಗೆ ಸವಾಲೆನ್ನುವಂತೆ ನೋವೆಲ್ ಕರೋನಾ ವೈರಸ್‌ ನಂತಹ ಕೆಲವು ವೈರಸ್‌ಗಳು ನೂರಾರು ವರ್ಷಗಳಿಂದ ಸಾಧಿಸಿಕೊಂಡು ಬಂದ ಮಾನವನ ಎಲ್ಲಾ ಯೋಜನೆಗಳನ್ನು ತಲೆಕೆಳಗೂ ಮಾಡುತ್ತಿವೆ. ಆದರೂ ಮನುಷ್ಯನ ಬುದ್ಧಿಮತ್ತೆ ಎಲ್ಲ ಸಮಸ್ಯೆಗಳನ್ನು ನಿವಾರಿಸಿಕೊಂಡು ಒಂದು ಹೊಸ ಆಯಾಮ ಪಡೆಯುತ್ತಿದೆ.

ಶಾಲೆ ಎಂಬ ಪರಿಕಲ್ಪನೆ ಎಂತಹ ಅದ್ಭುತ ಮತ್ತು ವೈಜ್ಞಾನಿಕ, ಶಾಲೆ ಎಂಬುದು ಒಂದು ನಿರ್ದಿಷ್ಟ ವಾತಾವರಣದಲ್ಲಿ ಪ್ರದೇಶದಲ್ಲಿ ಸಮ ವಯಸ್ಸಿನ ಸಮಾನ ಮನೋಸ್ಥಿತಿಯ ಮಕ್ಕಳು ಒಂದಾಗಿ ಕಲಿಯುವ ವ್ಯವಸ್ಥೆ ಕಲಿಕೆಯೊಂದಿಗೆ ಸೃಜನಶೀಲತೆ, ಉತ್ತಮ ವ್ಯಕ್ತಿತ್ವ ವಿಕಸನಕ್ಕೆ ಬಹುವೇದಿಕೆ ಈ ಶಾಲೆ.

ಪುರಾತನ ಗ್ರೀಕ್ ಮತ್ತು ರೋಮನ್ ಕಾಲದಿಂದ ಈ ಶಾಲೆ ಪರಿಕಲ್ಪನೆ ಕಾರ್ಯ ನಿರ್ವಹಿಸುತ್ತಿದೆ. ಭಾರತದಲ್ಲಿ ಗುರುಕುಲ ವ್ಯವಸ್ಥೆ ಒಂದು ಮಾದರಿ, ಇಸ್ಲಾಂ ಧರ್ಮದ ಮದರಸಾ, ಒಟ್ಟೋಮಾನ್ ಸ್ಥಾಪಿಸಿದ ಕ್ಯುಲ್ಲಿಗಳು ನಾಗರೀಕತೆ ಕಲಿಸಿ ಬೆಳೆಸಲು ನಮಗೆ ಸಹಾಯ ಮಾಡುವ ಸಂಸ್ಥೆ ಈ ಶಾಲೆ. ಆದರೆ ಇಲ್ಲಿಯವರೆಗೆ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿದ್ದದ್ದು ಒಂದು ನಿರ್ದಿಷ್ಟ ಸ್ಥಳದಲ್ಲಿ, ಪ್ರತಿ ವಿದ್ಯಾರ್ಥಿಯು ನಿಗದಿತ ಸಮಯಕ್ಕೆ ಸೇರಬೇಕು, ಕಲ್ಲು-ಸಿಮೆಂಟಿನ ಕಟ್ಟಡದೊಳಗೆ, ಆಟದ ಮೈದಾನದಲ್ಲಿ ಜರುಗುತ್ತಿದ್ದ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಗೆ ತಾತ್ಕಾಲಿಕ ವಿರಾಮ ಸಿಕ್ಕಿದೆ. ಇಸ್ಕೂಲಿನಿಂದ ಇ- ಸ್ಕೂಲಿನ ಪಯಣ ಆರಂಭಗೊಂಡಿದೆ.

ಶಿಕ್ಷಣದಲ್ಲಿ ತಂತ್ರಜ್ಞಾನ ದಿನದಿಂದ ದಿನಕ್ಕೆ ವಿಶೇಷ ಆಯಾಮ ಪಡೆಯುತ್ತದೆ, ವರ್ಚುಯಲ್‌ ತರಗತಿಗಳು, ವೀಡಿಯೋ ಕಲಿಕೆಗಳು, ಲೈವ್ ತರಗತಿಗಳು, ದೂರದರ್ಶನ ತಂತ್ರಜ್ಞಾನ ತರಗತಿಗಳು ಹೀಗೆ ಹಲವಾರು ರೀತಿಯಲ್ಲಿ ತಂತ್ರಜ್ಞಾನದ ನೆರವು ವಿಶೇಷವಾಗಿ ಕಲಿಯುವಿಕೆಗೆ ಹಾಗೂ ಶಿಕ್ಷಣಕ್ಕೆ ಅಪಾರ ಪ್ರಮಾಣದ ಸಹಾಯ ನೀಡುತ್ತಿವೆ. ದೇಶದಲ್ಲಿ ಇತ್ತಿಚೆಗೆ ಕೋವಿಡ್-19 ಮಹಾಬಿಕ್ಕಟ್ಟಿನಿಂದಾಗಿ ಹೆಚ್ಚು ಹೆಚ್ಚು ಮುಂಚೂಣಿಯಲ್ಲಿದೆ. ಸಾಮಾಜಿಕವಾಗಿ ಈ ವಿಷಯ ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದು, ಪಾಲಕರು, ತಂದೆ-ತಾಯಿಗಳು, ಶಿಕ್ಷಕರು ಹಾಗೂ ಕಲಿಯುವ ವಿದ್ಯಾರ್ಥಿಗಳ ನಡುವೆ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ

ಮೊದಲು ಸ್ನಾತಕೋತ್ತರ ಪದವಿಯವರೆಗೆ ಸ್ವಲ್ಪ ಪರಿಚಯವಿದ್ದ ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಪ್ರಸ್ತುತ ಯು.ಕೆ.ಜಿಯಿಂದ ಎಸ್.ಎಸ್.ಎಲ್.ಸಿ. ಪದವಿ ಹಂತದವರಿಗೂ ಆರಂಭಗೊಂಡಿದೆ. ಪ್ರಸ್ತುತ ಸನ್ನಿವೇಶದಲ್ಲಿ ಇದು ಅಗತ್ಯ ಮತ್ತು ಅನಿವಾರ್ಯ ಕಲಿಕಾ ಸಾಧನವಾಗಿದೆ. ಇದರ ಕುರಿತು ಸಾಧಕ-ಭಾದಕಗಳ ಚರ್ಚೆ ಈ ಕೆಳಗಿನಂತಿದೆ.

ಆನ್‌ಲೈನ್‌ ಶಿಕ್ಷಣದ ಉಪಯೋಗಗಳು

1. ಹೊಂದಾಣಿಕೆಯನ್ನು ಹೊಂದಿದೆ:-

ಯಾವುದೇ ಸ್ಥಳದಲ್ಲಿದ್ದರೂ, ಯಾವುದೇ ಸಮಯವಾದರೂ ವಿದ್ಯಾರ್ಥಿಗಳನ್ನು ವೇಗವಾಗಿ ತಲುಪಬಹುದು. ಸ್ಥಳ, ಸಮಯ, ವೇಗ, ತಲುಪುವಿಕೆ ಮುಂತಾದವುಗಳ ಹೊಂದಾಣಿಕೆ

 • ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದನ್ನು ತಪ್ಪಿಸಬಹುದು.
 • ಎಷ್ಟೇ ದೂರವಿದ್ದರೂ ಕಲಿಕಾ ಅಭ್ಯರ್ಥಿಯನ್ನು ತಲುಪಬಹುದು.
 • ಮೌಖಿಕವಾಗಿ ಹಾಗೂ ಬರವಣಿಗೆ ರೂಪದಲ್ಲಿ ಕಲಿಯಬಹುದು.
 • ಕಲಿಕಾ ಗುಣಮಟ್ಟವನ್ನು ತಂತ್ರಜ್ಞಾನದ ಸಹಾಯದಿಂದ ಹೆಚ್ಚಿಸಬಹುದು.
 • ನಿರ್ದಿಷ್ಟತೆಯನ್ನು ಹೊಂದಿರುವುದರಿಂದ ವಿದ್ಯಾರ್ಥಿ ಕೇಂದ್ರಿತವಾಗಿರುತ್ತದೆ.

2. ಕಡಿಮೆ ಖರ್ಚು :-

ಬದಲಾದ ಆರ್ಥಿಕ ಪರಿಸ್ಥಿತಿಯಲ್ಲಿ ಬಹುಪಾಲು ಎಲ್ಲ ಉದ್ಯಮಗಳು ನಷ್ಟದಲ್ಲಿವೆ. ಪರಿಸ್ಥಿತಿ ಹೀಗಿರುವಾಗ ಲಕ್ಷಾಂತರ ರೂಪಾಯಿ ಭರಿಸಿ ನೇರ ಶಿಕ್ಷಣ ಒದಗಿಸುವುದಕ್ಕಿಂತ ಕಡಿಮೆ ಖರ್ಚಿನಲ್ಲಿ ಗುಣಮಟ್ಟ ಶಿಕ್ಷಣ ನೀಡುವುದು ಉತ್ತಮವಾಗಿರುತ್ತದೆ.

 • ತರಗತಿ ಕೊಠಡಿ, ಪ್ರಯಾಣ ಮುಂತಾದ ಖರ್ಚುಗಳು ಇರುವುದಿಲ್ಲ.
 • ಹೆಚ್ಚು ಜನರನ್ನು ತಲುಪಲು ಸಾಧ್ಯವಿರುವುದರಿಂದ ಕಡಿಮೆ ಶುಲ್ಕ ಸಾಕು.
 • ತಂತ್ರಜ್ಞಾನದ ನಿಜವಾದ ಕಾರ್ಯಲಾಭವೇ ಅತಿಯಾದ ವೆಚ್ಚವನ್ನುಕಡಿಮೆ ಮಾಡುವುದು.
 • ಆನ್‌ಲೈನ್ ಶಿಕ್ಷಣಕ್ಕೆ ಮೂಲ ಬಂಡವಾಳವನ್ನು ಒಂದು ಸಾರಿ ಹಾಕುವುದರಿಂದ ಪದೇ ಪದೇ ಬಂಡವಾಳ ಹಾಕುವುದು ತಪ್ಪುತ್ತದೆ.

3. ಕಡಿಮೆ ಅವಶ್ಯಕತೆ ಮತ್ತು ಅನಿವಾರ್ಯತೆಗಳು:~

ತಂತ್ರಜ್ಞಾನಾಧಾರಿತ ಆನ್‌ಲೈನ್‌ ಶಿಕ್ಷಣಕ್ಕೆ ತುಂಬಾ ಕಡಿಮೆ ಅವಶ್ಯಕತೆ ಮತ್ತು ಅನಿವಾರ್ಯತೆಗಳು ಒಂದು ಮೊಬೈಲ್ ಅಥವಾ ಎಲೆಕ್ಟ್ರಾನ್ ಡಿವೈಸ್ ಹಾಗೂ ಇಂಟರ್ನೆಟ್ ಸಾಲಭ್ಯ ಹೊಂದಿದ್ದರೆ ಸಾಕು ಇನ್ನಿತರೆ ಯಾವುದೇ ಅವಶ್ಯಕತೆಗಳೂ ಬೇಡ.

 • ಒಂದು ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್, ಮೊಬೈಲ್ ಇದ್ದರೆ ಸಾಕು.
 • ಇಂಟರ್ನೆಟ್ ಸೌಲಭ್ಯ ಮತ್ತು ಸಂಪರ್ಕ ಸೌಲಭ್ಯ ಹೊಂದಿದ್ದರೆ ಸಾಕು,
 • ಜಗತ್ತಿನ ಯಾವ ಸ್ಥಳದಲ್ಲಿ ಕುಳಿತಿದ್ದರೂ ಸಹ ಸಂಪರ್ಕ ಪಡೆಯಬಹುದು.
 • ಲಿಂಗ, ಸ್ಥಳ, ಜನಾಂಗ ಯಾವುದೇ ಭಿನ್ನಾಭಿಪ್ರಾಯಗಳು ಇದರಲ್ಲಿ ಇರುವುದಿಲ್ಲ.
 • ಇಂಟ್ರಾವರ್ಡ್ ರ್ವಿದ್ಯಾರ್ಥಿಗಳಿಗೆ ಇದು ತುಂಬಾ ಸಹಕಾರಿಯಾಗಿದೆ.

4. ದೂರದ ವಿದ್ಯಾರ್ಥಿ ಸುಲಭವಾಗಿ ಶಿಕ್ಷಣ ಪಡೆಯಬಹುದು:-

ಕಲಿಕಾ ಸ್ಥಳ ಮತ್ತು ಸ್ವಸ್ಥಳಗಳ ಅಂತರ ಹೆಚ್ಚಾದಲ್ಲಿ, ಆನ್‌ಲೈನ್‌ ಶಿಕ್ಷಣವನ್ನು ಇದ್ದ ಸ್ಥಳದಿಂದಲೇ ಪಡೆಯಬಹುದು. ದೈನಂದಿನ ಪ್ರಯಾಣ ಅಥವಾ ಪ್ರತ್ಯೇಕ ಕೊಠಡಿ ಮಾಡುವ ಇಲ್ಲವೇ, ಹಾಸ್ಟೆಲ್‌ ಸೌಲಭ್ಯ ಪಡೆಯುವ ವ್ಯವಸ್ಥೆಯ ಅವಶ್ಯಕತೆ ಇರುವುದಿಲ್ಲ. ಸ್ವಸ್ಥಳದಿಂದಲೇ ಶಿಕ್ಷಣ ಪಡೆಯಬಹುದು.

ಆನ್‌ಲೈನ್‌ ಶಿಕ್ಷಣ

5. ಕಲಿಕಾ ಆಸಕ್ತರಿಗೆ ಯಾವುದೇ ವಯಸ್ಸಿನ ಮಿತಿಯಿರುವುದಿಲ್ಲ:-

ಅರ್ಧದಲ್ಲಿ ಶಾಲೆ ಬಿಟ್ಟವರಿಗೆ, ಮೊದಲ ಯತ್ನದಲ್ಲಿ ಉತ್ತೀರ್ಣರಾಗದೇ ಶಿಕ್ಷಣ ಮೊಟಕುಗೊಳಿಸಿದವರಿಗೆ, ವಯಸ್ಸಿನ ಮುಜುಗರದಿಂದ ಶಾಲೆ-ಕಾಲೇಜು ತರಗತಿಗೆ ಹಾಜರಾಗದವರಿಗೆ ಆನ್‌ ಲೈನ್‌ ಶಿಕ್ಷಣ ವ್ಯವಸ್ಥೆ ವರದಾನವಾಗಿದೆ. ಶಾಲಾ-ಕಾಲೇಜು ಬಿಟ್ಟ ವಯಸ್ಕರು-ಹಿರಿಯರು ತನಗಿಂತ ಕಿರಿಯರೊಂದಿಗೆ ಶಿಕ್ಷಣ ಮುಂದುವರಿಸುವ ಮುಜುಗರವನ್ನು ಆನ್‌ಲೈನ್ ಶಿಕ್ಷಣ ದೂರಮಾಡುತ್ತದೆ. ಇದರಿಂದ ಕಲಿಕಾ ಆಸಕ್ತರಿಗೆ ಬಹುಮುಖ್ಯ ವರದಾನವಾಗಿದೆ.

6. ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಕಡಿಮೆ ವೆಚ್ಚದಾಯಕ ಮತ್ತು ಸಮಯದ ಉಳಿತಾಯ:-

ಪ್ರಯಾಣದ ವೆಚ್ಚ ಮತ್ತು ಸಮಯದ ಉಳಿತಾಯ ಆಗುತ್ತದೆ, ಇಂಧನ, ಪಾರ್ಕಿಂಗ್, ಮೂಲಸೌಕರ್ಯಗಳಾದ ಕಟ್ಟಡ, ಮೈದಾನ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಂತಹ ವರ್ಗೀಕೃತ ವೆಚ್ಚಗಳು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ.

7. ಹೊಸ ಸಂಪರ್ಕಗಳು ಕಲಿಕಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ:-

ಆನ್‌ಲೈನ್ ಶಿಕ್ಷಣವು ರಾಷ್ಟ್ರಗಳು ಮತ್ತು ವಿವಿಧ ಖಂಡಗಳನ್ನು ಜೋಡಿಸುತ್ತದೆ, ಇತರ ವ್ಯಕ್ತಿಗಳೊಂದಿಗಿನ ಸಹಯೋಗದೊಂದಿಗೆ ಕಲಿಕಾ ಸಾಮರ್ಥ್ಯ ವೃದ್ಧಿಯಾಗುತ್ತದೆ. ವಿವಿಧ ದೇಶಗಳ ಸಂಸ್ಕೃತಿ, ಶಿಕ್ಷಣ, ಆರ್ಥಿಕವ್ಯವಸ್ಥೆ, ಸಾರಿಗೆ ಇತರ ವ್ಯವಸ್ಥೆಗಳ ಕುರಿತು ಆನ್‌ಲೈನ್‌ ಶಿಕ್ಷಣ ಅವಕಾಶ ಕಲ್ಪಿಸುತ್ತದೆ. ಜಗತ್ತಿನ ವಿಶ್ವವಿಖ್ಯಾತ ತಂತ್ರಜ್ಞರು, ಕಾಲೇಜುಗಳು, ವಿಜ್ಞಾನಿಗಳೊಂದಿಗೆ ಸಂವಾದ ನಡೆಸಲು ಆನ್‌ಲೈನ್ ವ್ಯವಸ್ಥೆ ಕಲ್ಪಿಸುತ್ತದೆ.

8. ಬಲವಂತದ ಕಲಿಕೆಗೆ ಅವಕಾಶವಿರುವುದಿಲ್ಲ:-

ಕೆಲವೊಮ್ಮೆ ಸಾಂಪ್ರದಾಯಿಕ ಕಲಿಕಾ ವ್ಯವಸ್ಥೆಯಲ್ಲಿ ಒತ್ತಡ ಮತ್ತು ಬಲವಂತದ ಕಲಿಕೆ ಇರುತ್ತದೆ, ಮಧ್ಯಾಹ್ನದ ಊಟದ ನಂತರ ಅಥವಾ ತರಗತಿಗಳನ್ನು ಅರ್ಧದಲ್ಲಿ ಬಿಡುವ ಸ್ವಾತಂತ್ರ್ಯವಿರುವುದಿಲ್ಲ. ಆದರೆ ಆನ್‌ಲೈನ್‌ ವ್ಯವಸ್ಥೆ ಇದರಿಂದ ಮುಕ್ತಾವಾಗಿಸುತ್ತದೆ. ತರಗತಿಗಳನ್ನು ಸಂಗ್ರಹಿಸಿ ಇಡಬಹುದು (DATA SAVE) ಇದರಿಂದ ತರಗತಿಯನ್ನು ಮುಂದುಡಿ, ಬೇಕಾದ ಸಮಯದಲ್ಲಿ ಕೆಳಬಹುದು, ಪದವಿ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ (Documentation of ‘Data) ತುಂಬ ಉಪಯುಕ್ತ. ಇದು ಸಮಯದ ಉಳಿತಾಯದ ಜೊತೆಗೆ ಬೇಕಾದಾಗ ಕಲಿಕೆಗೆ ಅವಕಾಶ ಕಲ್ಪಿಸುತ್ತದೆ.

9. ಭೌಗೋಳಿಕ ಅಡೆತಡೆಗಳಿಲ್ಲ:-

ಕೆಲವು ಹಳ್ಳಿಗಳಲ್ಲಿ ಶಾಲೆಗಳಿರುವುದಿಲ್ಲ. ಕೆಲವರಿಗೆ ಸಂಪರ್ಕವಿರುವುದಿಲ್ಲ, ಇನ್ನು ಕೆಲವರಿಗೆ ನಗರಪ್ರದೇಶದಿಂದ ದೂರವಿರುವುದರಿಂದ ಪದವಿ ಪೂರೈಕೆ ಆಸಾಧ್ಯ. ಕೆಲವು ಹಳ್ಳಿಗಳು ನೈಸರ್ಗಿಕವಾದ ಅಡೆತಡೆಗಳಿಂದ ಕೂಡಿರುತ್ತವೆ. ಶಾಲೆಗೆ ಹೋಗಬೇಕಾದರೆ ನದಿ-ಹಳ್ಳ ದಾಟಬೇಕಿರುವುದು ಅಥವಾ ಬೆಟ್ಟ-ಗುಡ್ಡಗಳಿಂದ ಅವರಿಸಲ್ಪಟ್ಟಿರುವುದು, ಹಾಗಾಗಿ ಆನ್‌ಲೈನ್, ಶಿಕ್ಷಣ, ಈ ಎಲ್ಲ ವ್ಯವಸ್ಥೆಗಳಿಂದ ಕಲಿಕಾಕಾರರನ್ನು ಬಚಾವು ಮಾಡುತ್ತದೆ. ಅದಕ್ಕೆ ಬೇಕಿರುವುದು ಉತ್ತಮ ಇಂಟರ್ನೆಟ್ ವ್ಯವಸ್ಥೆ ಜೊತೆಗೆ, ಲ್ಯಾಪಟಾಪ್, ಡೆಸ್ಕ್ ಟಾಪ್ ಉಪಕರಣಗಳ ಸಹಾಯ

10. ಪರಿಣಿತ ಕಲಿಕಾ ವ್ಯವಸ್ಥೆಗೆ ಸಹಾಯವಾಗುತ್ತದೆ (Access to expertise learning): –

ಕೆಲವು ಪ್ರದೇಶಗಳಲ್ಲಿ ಅಥವಾ ಕಾಲೇಜುಗಳಲ್ಲಿ ವಿಶೇಷ ಪದವಿ ಕೋರ್ಸ್‌ ಗಳ ಕಲಿಕೆ ಲಭ್ಯವಿರುವುದಿಲ್ಲ (Example-Management, Fashion Design, painting, Architecture etc), ಆನ್‌ಲೈನ್‌ ವ್ಯವಸ್ಥೆಯಿಂದ ಇಂತಹ ಕೋರ್ಸ್ ಆಸಕ್ತರಿಗೆ ಸಹಾಯವಾಗುತ್ತದೆ. ಕಲಿಕೆಯ ಜೊತೆಗೆ ಕಂಪನಿಗಳೊಂದಿಗೆ ಆನ್‌ಲೈನ್‌ ಸಂವಹನ ಸಾಧ್ಯವಾಗುತ್ತದೆ. ಹಾರ್ಡ್‌ವೇ‌ ಕೋರ್ಸ್‌ಗಳ ವಿದ್ಯಾರ್ಥಿಗಳು ಕುಳಿತಲ್ಲಿಯೇ ಮಹಿನ್ ಲರ್ನಿಂಗ್‌ ಅವುಗಳ ಕಾರ್ಯದಕ್ಷತೆ ಕುರಿತು ತಿಳಿದುಕೊಳ್ಳಬಹುದು.

ಇಷ್ಟೆ ಅಲ್ಲದೆ ಅಪಾರ ಪ್ರಮಾಣದ ಒಳಿತುಗಳನ್ನು ಆನ್‌ಲೈನ್‌ ಶಿಕ್ಷಣದಿಂದ ಪಡೆಯಬಹುದು. ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯದ ತರಗತಿಗಲನ್ನು ನಾವು ಕುಳಿತಲ್ಲೆ ಪಡೆಯಬಹುದು. ಉದಾಹರಣೆಗೆ ಒಂದು ಎನ್‌ಜಿಓ ಸಂಸ್ಥೆಯು ಅಮೇರಿಕಾದಿಂದ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣವನ್ನು ನೀಡುತ್ತದೆ.

ಪ್ರತಿಷ್ಠಿತ ಅಮೇರಿಕಾದ ಖಾನ್, ಅಕಾಡೆಮಿಯು ಜಗತ್ತಿನ ವಿವಿಧ ಭಾಗಗಳ ಜನರಿಗೆ ಉಚಿತವಾಗಿ ಆನ್‌ಲೈನ್‌ ‘ಜ್ಞಾನಾಧಾರಿತ ಶಿಕ್ಷಣ ನೀಡುವ ಮಹತ್ವದ ಗುರಿಯನ್ನು ಹೊಂದಿದೆ. ಯಾವುದೇ ಆರ್ಥಿಕ ಬೇಧ-ಭಾವವಿಲ್ಲದೆ ಎಲ್ಲರಿಗೂ ಸಮಾನ ಶಿಕ್ಷಣವನ್ನು ಆನ್‌ಲೈನ್ ತಂತ್ರಜ್ಞಾನದಿಂದ ನಾವು ಒದಗಿಸಬಹುದು. ಇದು ನಿಜಕ್ಕೂ ಎರಡು ಆಯಾಮಗಳನ್ನು ಹೊಂದಿದೆ. ಒಂದು ಜಗತ್ತಿನ ಎಲ್ಲರನ್ನೂ ವೇಗವಾಗಿ, ನಿಖರವಾಗಿ, ಸುಲಭವಾಗಿ ತಲುಪುವ ಮಾಧ್ಯಮವಾಗಿ, ಮತ್ತೊಂದು ಅಷ್ಟೆ ವೇಗವಾಗಿ ಕೆಟ್ಟದ್ದನ್ನು ಹರಡುವ, ಎಲ್ಲೆಲ್ಲಿ ಮನುಷ್ಯನ ಅನಿವಾರ್ಯತೆ ಇರುತ್ತದೋ ಅಲ್ಲಲ್ಲಿ ಅದನ್ನು ತಡೆದು ಸೃಷ್ಟಿಸಿರುವ ಅವಾಂತರ ಹೀಗೆ ಹತ್ತು ಹಲವಾರು ಒಳಿತುಗಳನ್ನು ಸೃಷ್ಟಿಸಿರುವ ತಂತ್ರಜ್ಞಾನ ಜೊತೆಜೊತೆಗೆ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ಒಂದಂತು ನಿಜ ಆಂಗ್ಲ ಭಾಷೆಯಲ್ಲಿ Bob &. “Technology never ever replace the human being” ಎಂದು. ಅದರಂತೆ ತಂತ್ರಜ್ಞಾನ ಎಷ್ಟೇ ಪ್ರಯತ್ನಿಸಿದರೂ ಮುಂದಿನ ದಿನಗಳಲ್ಲಿ ಮನುಷ್ಯನ ಅನಿವಾರ್ಯತೆ ಮತ್ತು ಸಾಂಧರ್ಬಿಕ ಅವಶ್ಯಕತೆ ಬಂದೇ ಬರುತ್ತದೆ.

ನೇರ ಶಿಕ್ಷಣವೆಂದರೆ ಕೇವಲ ತರಗತಿ ಪಾಠಗಳಲ್ಲ, ಪ್ರತಿಯೊಂದು ಶಿಕ್ಷಣ ಸಂಸ್ಥೆಯು ಒಂದು ಪುಟ್ಟ ಸಮಾಜವೇ ಆಗಿದೆ. ಅಲ್ಲಿ ನಡೆಯುವ ಮಾನವೀಯ

ಸಂಪರ್ಕ, ಸಂಬಂಧಗಳಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಅದು ವಿಮರ್ಶಾತ್ಮಕ ಕಲಿಕೆಗೆ ಸಹಾಯವಾಗುತ್ತದೆ. ಆ ನಿಟ್ಟಿನಲ್ಲಿ ನೋಡುವುದಾದರೆ ಈ ಎಲ್ಲ ಅನುಭವಗಳು ಆನ್‌ ಲೈನ್ ಶಿಕ್ಷಣದಲ್ಲಿ ಸಿಗುವುದಿಲ್ಲ.

ಆನ್‌ಲೈನ್ ಶಿಕ್ಷಣದ ಬಗ್ಗೆ ಇರುವ ನಕಾರಾತ್ಮಕ ಅಂಶಗಳು:-

ಮೊದಲೇ ವಿವರಿಸಿದಂತೆ ಆನ್‌ಲೈನ್ ಶಿಕ್ಷಣವು ಹೀಗೆ ಒಳಿತುಗಳನ್ನು ಹೊಂದಿದೆಯೋ ಹಾಗೆಯೇ ತನ್ನದೇ ಆದ ಸಮಸ್ಯೆ-ಸವಾಲುಗಳನ್ನು ಹೊಂದಿದೆ.

1. ತಾಂತ್ರಿಕ ದೋಷ:-

ಕೆಲವು ಮುಂದುವರಿದ ದೇಶಗಳಲ್ಲಿ ಯಾವ ಕೊರತೆಯೂ ಇಲ್ಲದೆ ಆನ್‌ಲೈನ್ ಶಿಕ್ಷಣ ಜರುಗಬಹುದು, ಆದರೆ ಭಾರತದಂತಹ ದೇಶಗಳಲ್ಲಿ ಇದಕ್ಕೆ ಅನೇಕ ಸಮಸ್ಯೆ ಸವಾಲುಗಳು ಎದುರಾಗುತ್ತವೆ. ಸದಾ ವಿದ್ಯುಶಕ್ತಿ ಲಭ್ಯತೆ ಮತ್ತು ಅನಿವಾರ್ಯತೆ ಇದಕ್ಕೆ ಇರುತ್ತದೆ.

ಕೆಲವು ಕಡೆಗಳಲ್ಲಿ ವಿದ್ಯುತ್‌ ಸಂಪರ್ಕ ಸದಾ ಇಲ್ಲದೆ ಇರಬಹುದು. ಮುಂದೆ ಬಂದಂತೆ ಹೈಸ್ಪೀಡ್ ಟೆಕ್ನಾಲಜಿಯ 3ಜಿ, 4ಜಿ, 5ಜಿಯ ಸಂಪರ್ಕಗಳು ಇಲ್ಲದೆ ಇರಬಹುದು. ಇದ್ದರೂ ದುಬಾರಿಯಾಗಿರಬಹುದು. ಅಲ್ಲದೆ ಇವುಗಳ ಸಂಪರ್ಕ ಆಗಾಗ ತೊಂದರೆ ಕೊಡಲುಬಹುದು. ಹಾಗಾಗಿ ತಾಂತ್ರಿಕ ಶಿಕ್ಷಣಕ್ಕೆ ಇದು ಅತೀ ದೊಡ್ಡ ತೊಂದರೆ.

2. ಆಸಕ್ತಿಯ ಕೊರತೆ:-

ಶಿಕ್ಷಕರ ಕಣ್ಣಾವಲಿಲ್ಲದೆ ಆಸಕ್ತಿಯಿಂದ ವಿದ್ಯಾರ್ಥಿಗಳು ಇನ್ನು ಹೇಗೆ ತಾಂತ್ರಿಕವಾಗಿ ಕಲಿಯಬಹುದು? ಎಂಬುದೊಂದು ಯಕ್ಷ ಪ್ರಶ್ನೆ, ಕೇವಲ ಒಂದು ತರಗತಿಯ ಅವಧಿ ನಲವತ್ತು ನಿಮಿಷ, ಆದರೂ ಆಸಕ್ತಿ ಇಲ್ಲದೆ ದಿನತಳ್ಳುವ ವಿದ್ಯಾರ್ಥಿ ಮತ್ತು ಶಿಕ್ಷಕರಿರುವಾಗ ಇನ್ನೂ ತಾಂತ್ರಿಕವಾಗಿ ಗಂಟೆಗಟ್ಟಲೆ ಕಲಿಯುವುದು ತುಂಬಾ ಕಠಿಣ ಕೆಲಸವಾಗಿರುತ್ತದೆ. ಆಸಕ್ತಿದಾಯಕ ಬೋಧನೆ- ಆಸಕ್ತಿದಾಯಕ ಕಲಿಕೆ ಅಲ್ಲದೆ ಆಸಕ್ತಿದಾಯಕ ಮೌಲ್ಯಮಾಪನ ಆನ್‌ಲೈನ್‌ ಶಿಕ್ಷಣದಿಂದ ಸಾಧ್ಯವಾಗುವುದಿಲ್ಲ. ಶಿಕ್ಷಣದಲ್ಲಿ ಶಿಕ್ಷಣದ ಮೂಲ ಪ್ರವರ್ತಕರಾದ ಶಿಕ್ಷಕರ ನೇರ ಅನುಸಂದಾನ ಬಹಳಪ್ರ ಮುಖವಾಗುತ್ತದೆ.

3. ಗುಣಮಟ್ಟದ ಕಲಿಕೆ ಅಲಭ್ಯ-

ಕಲಿಕೆ ಎಂಬುದು ಕೇವಲ ವಿಷಯದ ವರ್ಗಾವಣೆಯಲ್ಲ. ಹಾಗೆ ನೋಡಿ ಕಲಿಯುವುದಾದರೆ, ತಿಳಿಯುವುದಾದರೆ ಕಂಪ್ಯೂಟರ್, ಲ್ಯಾಪ್‌ಟಾಪ್‌ನಂತಹ ಎಲೆಕ್ಟ್ರಾನಿಕ್ ಗೆಜೆಟ್‌ಗಳಲ್ಲಿ ಬೇಕಾದಷ್ಟು ದೊರೆಯುತ್ತದೆ. ಇಲ್ಲಿ ಶಿಕ್ಷಕರ ಹತ್ತಿರ ಕುಳಿತು ಕಲಿಯುವ ಪ್ರಕ್ರಿಯೆ ಬರೀ ವಿಷಯ ವರ್ಗಾವಣೆಯಲ್ಲ. ಅನುಭವ ವೇದ್ಯವಾದ ಜೀವನ ಕ್ರಮದ ವರ್ಗಾವಣೆ, ಹಾಗಾಗಿ ಕಲಿಕೆಯ ಗುಣಮಟ್ಟ ಬರೀ ಪಠ್ಯಕೇಂದ್ರಿತವಾಗುತ್ತದೆ, ನಿಖರತೆ, ಸ್ಪಷ್ಟತೆ, ಇವರಿಗೆ ಇಲ್ಲವಾಗಬಹುದು. ಹಾರ್ವಡ್್ರ ವಿಶ್ವವಿದ್ಯಾಲಯದ ತರಗತಿಗಳನ್ನು ವಿಡೀಯೋದಲ್ಲಿ ನೋಡಿ ಕಲಿಯುವುದಕ್ಕೂ, ವಿಶ್ವವಿದ್ಯಾಲಯದಲ್ಲಿ ಕುಳಿತು ಕಲಿಯುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.

4. ಎಲ್ಲ ವಿದ್ಯಾರ್ಥಿಗಳಿಗೆ ಇದು ಒಪ್ಪುವುದಿಲ್ಲ:-

ಕೆಲವು ವಿದ್ಯಾರ್ಥಿಗಳು ಈ ತೆರವಾದ ಕಲಿಕೆಗೆ ಒಗ್ಗದೆ ಹೋಗಬಹುದು, ಇಲ್ಲಿ ಪ್ರಶ್ನೆ ಬರುವುದು ಆನ್‌ಲೈನ್ ಶಿಕ್ಷಣಕ್ಕೆ ಒಳಪಡುವ ವಿದ್ಯಾರ್ಥಿಯ ವಯಸ್ಸು, ಉನ್ನತ ಶಿಕ್ಷಣದ ಅಭ್ಯರ್ಥಿಗಳಿಗೆ ತುಸು ಸರಿ ಹೊಂದಬಹುದು. ಆದರೆ ಚಿಕ್ಕ ಮಕ್ಕಳಿಗೆ ಅದರಲ್ಲೂ ಹತ್ತನೆಯ ತರಗತಿಯ ಒಳಗಿನವರಿಗೆ ಆನ್‌ಲೈನ್‌ ತುಸು ಕಷ್ಟವೆಂದೇ ಹೇಳಬಹುದು. ಬಹಳ ತುಂಟತನದಿಂದ ವರ್ತಿಸುವ ವಿದ್ಯಾರ್ಥಿಗಳು ಗಂಭೀರವಾಗಿ ಕಲಿಯದೇ ಹೋಗಬಹುದು.

5. ಸೌಲಭ್ಯಗಳ ಕೊರತೆ:-

ಲ್ಯಾಪ್ಟಾಪ್, ಸೂಕ್ತಸ್ಥಳ, ವಿದ್ಯುತ್ಕ್ತಿ, ಕಂಪ್ಯೂಟರ್, 2ಜಿ 3ಜಿ 4ಜಿ ತಂತ್ರಜ್ಞಾನದ ನೆರವು ಎಲ್ಲರಲ್ಲೂ ಎಲ್ಲ ಕಡೆಗಳಲ್ಲಿ ಸಮರ್ಪಕವಾಗಿ ದೊರಕದೇ ಹೋಗಬಹುದು. ಹಾಗಾಗಿ ಆನ್‌ಲೈನ್ ಶಿಕ್ಷಣವು ಒಮ್ಮೊಮ್ಮೆ ಅಡಚಣೆಯನ್ನೂ ಎದುರಿಸಬೇಕಾಗುತ್ತದೆ.

6. ವಿದ್ಯಾರ್ಥಿ-ಶಿಕ್ಷಕರ ನಡುವಿನ ಭಾವನಾತ್ಮಕ ಸಂಬಂಧ ಕಡಿಮೆಯಾಗುವುದು:-

ಶಾಲೆ-ಕಾಲೇಜು ಅಂದರೆ ವ್ಯಕ್ತಿತ್ವ ರೂಪಿಸುವ ವ್ಯವಸ್ಥೆ, ಮಕ್ಕಳ ಗಲಾಟೆ, ಶಿಕ್ಷಕರ ಕೂಗಾಟ, ಬೆದರಿಕೆ, ಸಮಯ ಬಂದರೆ ಹೊಡೆಯುವುದು, ಸಂಗೀತ, ಆಟ-ಪಾಠ ಹೀಗೆ ಹಲವು ಸನ್ನಿವೇಶಗಳು ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಭಾವನಾತ್ಮಕವಾಗಿ ಒಂದುಗೂಡಿಸುತ್ತವೆ; ಇದರಿಂದ ಕಲಿಕಾ ವ್ಯವಸ್ಥೆ ಗಟ್ಟಿಯಾಗುತ್ತದೆ. ಆದರೆ ಅನ್ನ ಲಿಕೆಯಿಂದ ವಿದ್ಯಾರ್ಥಿಗಳಿಗೆ ಈ ಸೌಲಭ್ಯವಿರುವುದಿಲ್ಲ. ಸಂಬಂಧಗಳು ಅವುಗಳ ಮೌಲ್ಯಗಳ ನಡುವೆ ಅಂತರ ಹೆಚ್ಚುವುದು. ಇದು ಋಣಾತ್ಮಕವಾದುದು.

7. ಆನ್‌ ಲೈನ್ ಶಿಕ್ಷಣ ವ್ಯವಸ್ಥೆಯಿಂದ ಕಲಿಕೆ ಮತ್ತು ಅರ್ಥಮಾಡಿಸುವಿಕೆ ಕಷ್ಟ:-

ಆನ್‌ಲೈನ್ ಶಿಕ್ಷಣದಿಂದ ಸಾಂಪ್ರದಾಯಿಕ ವ್ಯವಸ್ಥೆಯಂತೆ ಕಲಿಕೆ ಸರಳವಲ್ಲ. ಪ್ರತಿಯೊಬ್ಬರಿಗೂ ಅರ್ಥ ಮಾಡಿಸುವಿಕೆ ಸಾಧ್ಯವಿಲ್ಲ. ಇಂಟರ್ನೆಟ್ ಸೌಲಭ್ಯದ ಕೊರತೆಯಿಂದ ಅರ್ಧದಲ್ಲಿ ಸಮಸ್ಯೆ ಉಂಟಾಗಬಹುದು, ಪರಿಕಲ್ಪನೆಗಳ ಸ್ಪಷ್ಟತೆ, ಪ್ರಯೋಗ ಮಾಡುವುದು, ಸ್ಥಳದಲ್ಲಿಯೇ ಯಂತ್ರ ಕಾರ್ಯಚರಣೆ, ಅದರ ಕಾರ್ಯಕ್ಷೇತ್ರ ಹೀಗೆ ಹಲವಾರು ವಿಷಯಗಳು ಆಫ್‌ಲೈನ್ ಕಲಿಕೆಯೇ ಸೂಕ್ತ

8. ಮೂಲಸೌಕರ್ಯಗಳ ಕೊರತೆ:-

ಇಲ್ಲಿಯವರೆಗೆ ಸಾಂಪ್ರದಾಯಿಕ ಕಲಿಕಾ ವ್ಯವಸ್ಥೆ ಅಳವಡಿಕೆಯಿತ್ತು, ಆದರೆ ಪ್ರಸ್ತುತ ಕೊರೋನಾ ಸಂದರ್ಭದಿಂದ ಇ-ಕಲಿಕೆಯ ಅವಶ್ಯಕತೆ ಮತ್ತು ಅನಿವಾರ್ಯತೆ ಎದುರಾಗಿದೆ. ಆದರೆ ಅದಕ್ಕೆ ಬೇಕಾದ ಮೂಲಸೌಕರ್ಯಗಳ ಕೊರತೆಯಿದೆ, ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್‌ಗಳ ಅವಶ್ಯಕತೆ ಇರುವುದರಿಂದ ಎಷ್ಟೋ ಜನರಿಗೆ ಇವುಗಳ ಸೌಲಭ್ಯವಿರುವುದಿಲ್ಲ. ಕೆಲವೊಂದು ಕುಟುಂಬದಲ್ಲಿ 2-3 ಮಕ್ಕಳಿರುವುದರಿಂದ ಪ್ರತಿಯೊಬ್ಬರಿಗೂ ಮೂಲಸೌಕರ್ಯ ಒದಗಿಸುವುದು ಕಷ್ಟವೆನಿಸಿದೆ.

9. ಗುಣಮಟ್ಟದ ಇಂಟರ್ನೆಟ್ ಸೌಲಭ್ಯದ ಕೊರತೆ:-

ಒಂದು ಕಡೆ ಮೂಲಸೌಕರ್ಯದ ಕೊರತೆಯಾದರೆ, ಒಂದೊಂದು ಪ್ರದೇಶದಲ್ಲಿ ಗುಣಮಟ್ಟದ ಇಂಟರ್ನೆಟ್ ವ್ಯವಸ್ಥೆಯ ಕೊರತೆ, ಪಾಠದ ಮಧ್ಯದಲ್ಲಿ ವಿಡಿಯೋ ಗುಣಮಟ್ಟ ಕಡಿಮೆಯಾಗುವುದು. ಇದು ನಿರಂತರ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗೇ ಇಂಟರ್ನೆಟ್ ವ್ಯವಸ್ಥೆಯು ತುಟ್ಟಿಯಾಗಿದೆ. ಇದು ಮಧ್ಯಮ ಮತ್ತು ಬಡವರಿಗೆ ಆರ್ಥಿಕ ಹೊರೆಯಾಗಿದೆ.

10.ಆರೋಗ್ಯದ ಸಮಸ್ಯೆ:-

ಕಲಿಕೆಯ ನಂತರದಲ್ಲಿ ಮೊಬೈಲ್‌ಗೆ ಅಂಟಿಕೊಂಡ ಮಕ್ಕಳು ದೈಹಿಕ ಚಟುವಟಿಕೆ ಮಾಡುವುದಿಲ್ಲ. ಹೊರಗಿನ ಶುಭ್ರ ಗಾಳಿ ಪಡೆಯುವುದಿಲ್ಲ. ಸರಿಯಾದ ಸಮಯದಲ್ಲಿ ಆಹಾರ ಸೇವನೆ ಮಾಡುವುದಿಲ್ಲ. ಬೊಜ್ಜು, ಮಧುಮೇಹ, ರಕ್ತದೊತ್ತಡದ ಕಾಯಿಲೆಗಳು ನಿರಂತರವಾಗಿ ವಿಡಿಯೋ ನೋಡುವುದರಿಂದ ತಲೆನೋವು, ಕಣ್ಣಿನ ಕಾಯಿಲೆಗಳಿಗೆ ಕಾರಣವಾಗುತ್ತವೆ. WHO ವರದಿಯ ಪ್ರಕಾರ 10 ವರ್ಷದೊಳಗಿನ ಮಕ್ಕಳಿಗೆ 1 ಗಂಟೆಗಿಂತ ಹೆಚ್ಚಿನ ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಅಪಾಯಕಾರಿ ಎಂದು ತಿಳಿಸಿದೆ.

II. ಶೈಕ್ಷಣಿಕ ಸಾಧನೆಗೆ ತೊಂದರೆ;

ಮಕ್ಕಳು ತರಗತಿಯ ಸಮಯ ಅಥವಾ ವಿರಾಮದ ಸಮಯದಲ್ಲಿ ಮೊಬೈಲ್ನಲ್ಲಿ ಆಟಆಡುವುದು, ಚಾಟ್ ಮಾಡುವುದು, ಮನರಂಜನೆ ವಿಕ್ಷೀಸುವುದರಿಂದ ಪಾಠದ ಕಡೆ ಗಮನಹರಿಸಲು ವಿಫಲವಾಗುತ್ತಾರೆ. ಇದರಿಂದ ಅಧ್ಯಯನ ಹಾಗೂ ಪರೀಕ್ಷೆಗಳಲ್ಲಿ ತೊಂದರೆ ಉಂಟಾಗುತ್ತದೆ.

12 ಸೂಕ್ತವಲ್ಲದ ಮಾಧ್ಯಮ:

ಲ್ಯಾಪ್‌ಟಾಪ್, ಮೊಬೈಲ್‌ಗಳನ್ನು ತಮ್ಮ ಉದ್ದೇಶಕ್ಕಾಗಿ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಪಲ್ಲೀ, ಬ್ಲೂವೇಲ್‌ ನಂತಹ ಆಟಗಳು, ಅವುಗಳಿಂದಾಗುವ ಅನಾಹುತಗಳು ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಅನುಚಿತ ಸಂದೇಶ, ಚಿತ್ರ ನೋಡುವುದು, ಸಣ್ಣ ವಯಸ್ಸಿನಲ್ಲಿಯೇ ಆಶ್ಲೀಲತೆ, ಆಲೋಚನೆ, ಬೇಜವಾಬ್ದಾರಿತನದಿಂದ ಜೀವನ ದುರಂತದ ಕಡೆ ಸಾಗುತ್ತದೆ.

13.ನಿದ್ರಾಹೀನತೆ:-

ಮಧ್ಯರಾತ್ರಿಯವರೆಗೆ ಇಂಟರ್ನೆಟ್ ಬಳಸುವುದು, ಸಾಮಾಜಿಕ ಜಾಲತಾಣಗಳ ವೀಕ್ಷಣೆ, ಭಾವನಾತ್ಮಕ ಸಂಬಂಧಗಳಿಂದ ದೂರ ಉಳಿಯುವುದು.

ಇವು ಆಯಾಸ ಮತ್ತು ಚಟಪಡಿಕೆಗೆ ಕಾರಣವಾಗುತ್ತದೆ. ಇದು ನಿದ್ದಾರಂಗಕ್ಕೆ ಕಾರಣವಾಗುತ್ತದೆ.

14. ಮಾನಸಿಕ ಖಿನ್ನತೆ:-

ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಸಣ್ಣ ತಪ್ಪಿನಿಂದ ಸೈಬ‌ ಬೆದರಿಕೆ ಕಿರುಕುಳ ಉಂಟುಮಾಡುತ್ತದೆ. ಇದರಿಂದ ನೊಂದ ಮಕ್ಕಳಲ್ಲಿ ಸಾಮಾಜಿಕ ಖಿನ್ನತೆ ಉಂಟಾಗಿ ಮಾನಸಿಕವಾಗಿ ಕುಗ್ಗುತ್ತಾರೆ.

15.ಪ್ರಜಾಪ್ರಭುತ್ವದ ವಿರೋಧಿ:-

ಅರಿವಿನ ವಿಸ್ತರಣೆಯಾಗಬೇಕಿರುವುದು ಪರಸ್ಪರ ಮುಖಾಮುಖಿಯಾಗುವುದರಿಂದ ಆದರೆ ಆನ್‌ಲೈನ್‌ ವ್ಯವಸ್ಥೆಯಿಂದ ಇದು ಸಾಧ್ಯವಿಲ್ಲ, ಮುಖಾಮುಖಿಯಿಲ್ಲದ ಕಲಿಕೆಯಿಂದ ಅನಿಸಿಕೆಗಳನ್ನು ಸ್ವತಂತ್ರವಾಗಿ ಮತ್ತು ಪೂರ್ಣ ಪ್ರಮಾಣದಲ್ಲಿ ವ್ಯಕ್ತಪಡಿಸಲು ಆಗುವುದಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕ,

16.ತಾರತಮ್ಯ ಮತ್ತು ಸಾಮಾಜಿಕ ಅಂತರ ಹೆಚ್ಚಾಗುವುದು:-

ದೇಶದಲ್ಲಿ ಈಗಲೂ ಸಾವಿರಾರು ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕವಿಲ್ಲ, ರಸ್ತೆ ಚರಂಡಿ, ಶಾಲಾ ಕಟ್ಟಡಗಳ ಕೊರತೆಯಿದೆ. ಇಂತಹ ವಾಸ್ತವ ಸತ್ಯದಲ್ಲಿ ಇಂಟರ್ನೆಟ್ ಶಿಕ್ಷಣಕ್ಕೆ ಒತ್ತು ನೀಡಿದರೆ, ಈ ವರ್ಗ ಮತ್ತೊಂದು ಸಾಮಾಜಿಕ ನ್ಯಾಯದಿಂದ ವಂಚಿತವಾಗಿ ತಾರತಮ್ಯ ಹೆಚ್ಚುತ್ತದೆ. ಇದು ಸಂವಿಧಾನದ ಮೂಲ ಆಶಯಕ್ಕೆ ವಿರೋಧವಾದ ನಡೆ.

17:ಖಾಸಗೀಕರಣದ ಹುನ್ನಾರದ ಆರೋಪ:

ಈಗಾಗಲೇ ದೇಶದ ಆರ್ಥಿಕತೆಯನ್ನು ಕಾರ್ಪೊರೇಟ್ ಉದ್ಯಮಿಗಳಿಗೆ ಒಪ್ಪಿಸಿರುವ ಭಾರತದ ಆಳುವ ವರ್ಗಗಳು, ಈಗ ಶಿಕ್ಷಣ ಕ್ಷೇತ್ರವನ್ನು ವಿನಾಶದತ್ತ ಕೊಂಡೊಯ್ಯುವ ಸಾಧ್ಯತೆಗಳಿವೆ. ಬಂಡವಾಳ ಹೂಡಿಕೆ, ನೆಪವೊಡ್ಡಿ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ಹುನ್ನಾರದ ಆರೋಪ ಕೇಳಿಬರುತ್ತಿದೆ.

18.ವಾಸ್ತವ ಚಿತ್ರಣ(ಕರ್ನಾಟಕ):-

19596 ಸರ್ಕಾರಿ ಶಾಲಾ-ಕಾಲೇಜುಗಳಿವೆ.

6800 ಅನುದಾನಿತ ಶಾಲೆಗಳಿವೆ.

1229 ಸರಕಾರಿ ಪದವಿ ಪೂರ್ವ ಕಾಲೇಜುಗಳಿವೆ.

5240 ಸರ್ಕಾರಿ ಪ್ರೌಢಶಾಲೆಗಳಿವೆ.

44615 ಸರ್ಕಾರಿ ಪಾಥಮಿಕ ಶಾಲೆಗಳಿವೆ.

796 ಅನುದಾನಿತ ಕಾಲೇಜುಗಳಿವೆ.


ಈ ವಾಸ್ತವ ಚಿತ್ರಣ ಗಮನಿಸಿದರೆ, ಸರ್ಕಾರಿ ಮತ್ತು ಖಾಸಗಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸವಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಆನ್‌ಲೈನ್‌ ಶಿಕ್ಷಣಕ್ಕೆ ಬೇಕಾದ ಮೂಲಸೌಕರ್ಯಗಳ ಕೊರತೆ ಇದೆ. ಹಾಗಾಗಿ ಆನ್‌ ಲೈನ್ ಶಿಕ್ಷಣದಿಂದ ಒಂದು ದೊಡ್ಡ ಮಟ್ಟದ ವಿದ್ಯಾರ್ಥಿ ವಲಯಕ್ಕೆ ಅನ್ಯಾಯವಾಗುತ್ತದೆ.

ಶಿಕ್ಷಣದಲ್ಲಿ ತಂತ್ರಜ್ಞಾನ ವ್ಯವಸ್ಥೆಯಿಂದ ಸಂಬಂಧಗಳು ಮೊಟಕುಗೊಳ್ಳುವುದು ಎಂಬುದು ಒಂದು ವಾದವಾದರೆ, ಶಿಕ್ಷಣದಲ್ಲಿ ತಂತ್ರಜ್ಞಾನದ ಅಳವಡಿಕೆ ಇಂದಿನ ಸಮಾಜದ ಅತ್ಯಗತ್ಯ ಎನ್ನುವುದು ಇನ್ನೊಂದು ವಾದ, ಕೊರೋನಾದಂತಹ ವಿಷಮ ಪರಿಸ್ಥಿತಿಯಲ್ಲಿ ಶಾಲೆಯ ಸಂಪರ್ಕವೇ ಕಡಿತಗೊಂಡಿತ್ತು. ಆದರೆ ಇಂತಹ ಸಮಯದಲ್ಲಿ ಮಕ್ಕಳ ಓದು, ಬರವಣಿಗೆಯ ಅಭ್ಯಾಸಗಳಿಗೆ ಸಹಾಯ ಮಾಡಿದ್ದು ಆನ್‌ಲೈನ್ ಶಿಕ್ಷಣ. ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು, ಇದು ವರದಿಗಳಿಂದ ಸಾಬೀತಾಗಿದೆ. ಆದರೆ ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಬೇಕು. ಪದವಿಹಂತದ ಶಿಕ್ಷಣಕ್ಕೆ ಇದರ ಉಪಯೋಗ ಬಹುಮುಖ್ಯವೆನಿಸಿದೆ. ಸಂಶೋಧನಾ ನಿರತ ವಿದ್ಯಾರ್ಥಿಗಳು, ವೈದ್ಯಕೀಯ ಹಾಗೂ ತಾಂತ್ರಿಕ ವಿದ್ಯಾರ್ಥಿಗಳಿಗೆ ಬಹುಮುಖ್ಯ ಸಾಧನವೆನಿಸಿದೆ. ಇತರ ಮುಂದುವರೆದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಕಡಿಮೆಯೇ ಇದೆ. ಬದಲಾಗುತ್ತಿರುವ ಪರಿಸ್ಥಿತಿಗೆ ತಕ್ಕಂತೆ ಡಿಜಿಟಲ್ ವ್ಯವಸ್ಥೆಯ ಜೊತೆಗೆ ಹೆಜ್ಜೆ ಹಾಕಬೇಕಿರುವುದು ಅನಿವಾರ್ಯವೆನಿಸಿದೆ. ಹಾಗಾಗಿ ಇದಕ್ಕೆ ಒಗ್ಗಿಕೊಳ್ಳಬೇಕು. ಆದರೆ ಇದು ಮಿತಿಯಲ್ಲಿ ಇರಬೇಕು. ಸಾಂಪ್ರದಾಯಿಕ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆ ಆಗದ ರೀತಿ ನೋಡಿಕೊಳ್ಳಬೇಕು.

Related Articles

Leave a Reply

Your email address will not be published. Required fields are marked *

Back to top button

Adblock Detected

Please Disable Ad blocker.....